ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸಂಕಷ್ಟದಿಂದ ಉದ್ಯಮಶೀಲತೆಯ ಯಶಸ್ಸಿನತ್ತ
ಸ್ವಾವಲಂಬನೆಯೆಡೆಗೆ ಹೇಮಲತಾ ಖರಾತ್ಮಲ್ ಅವರ ಪಯಣ
ಪ್ರಕಟಣಾ ದಿನಾಂಕ:
19 SEP 2026 5:35PM by PIB Bengaluru
ಸಮಯೋಚಿತ ಸಾಂಸ್ಥಿಕ ಸಾಲ ಸೌಲಭ್ಯ, ಧೈರ್ಯ ಮತ್ತು ನಿರಂತರ ಶ್ರಮದೊಂದಿಗೆ ಸೇರಿ ಸಂತ್ರಸ್ತ ಕುಟುಂಬಗಳು ತಮ್ಮ ಜೀವನೋಪಾಯವನ್ನು ಮರುನಿರ್ಮಾಣ ಮಾಡಿಕೊಳ್ಳಲು ಮತ್ತು ಆರ್ಥಿಕ ಸ್ವಾತಂತ್ರ್ಯದತ್ತ ಸಾಗಲು ಸಹಾಯ ಮಾಡುತ್ತದೆ.
ಮಹಾರಾಷ್ಟ್ರದ ಥಾಣೆಯ ಕಳ್ವಾ ನಿವಾಸಿಯಾದ ಶ್ರೀಮತಿ ಹೇಮಲತಾ ದಿಲೀಪ್ ಖರಾತ್ಮಲ್ ಅವರು ತಮ್ಮ ಪತಿಯ ನಿಧನದ ನಂತರ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು.
ಎನ್ ಎಸ್ ಎಫ್ ಡಿ ಸಿ ಅವಧಿ ಸಾಲ ಯೋಜನೆಯಡಿ 3.75 ಲಕ್ಷ ರೂ.ಗಳ ಹಣಕಾಸಿನ ನೆರವಿನೊಂದಿಗೆ, ಅವರು ಮೀನು ಮಾರಾಟದ ವ್ಯಾಪಾರವನ್ನು ಪ್ರಾರಂಭಿಸಿದರು ಮತ್ತು ಈಗ ತಿಂಗಳಿಗೆ ಸುಮಾರು 40,000 ರಿಂದ 50,000 ರೂ.ಗಳ ನಿವ್ವಳ ಆದಾಯವನ್ನು ಗಳಿಸುತ್ತಿದ್ದಾರೆ.
ತಮ್ಮ ಪತಿಯ ನಿಧನದ ನಂತರ, ಶ್ರೀಮತಿ ಖರಾತ್ಮಲ್ ಅವರು ತಮ್ಮ ಇಬ್ಬರು ಮಕ್ಕಳನ್ನು ಬೆಳೆಸುವ ಮತ್ತು ಅವರ ಭವಿಷ್ಯವನ್ನು ಭದ್ರಪಡಿಸುವ ಜವಾಬ್ದಾರಿಯನ್ನು ಹೊತ್ತರು. ಕಷ್ಟದ ಪರಿಸ್ಥಿತಿಯ ಹೊರತಾಗಿಯೂ, ಅವರು ತಮ್ಮ ಸ್ವಂತ ಶ್ರಮದಿಂದ ಕುಟುಂಬವನ್ನು ನೋಡಿಕೊಳ್ಳಲು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ದೃಢನಿರ್ಧಾರ ಮಾಡಿದರು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರ ಮೂಲಕ, ಅವರು ಎನ್ ಎಸ್ ಎಫ್ ಡಿಸಿ ಅವಧಿ ಸಾಲ ಯೋಜನೆಯ ಬಗ್ಗೆ ತಿಳಿದುಕೊಂಡರು ಮತ್ತು ಲಿಡ್ ಕಾಮ್ (ಎಲ್ ಐ ಡಿ ಸಿ ಒ ಎಂ ) ಕಚೇರಿಯ ಮೂಲಕ ಹಣಕಾಸಿನ ನೆರವಿಗಾಗಿ ಅರ್ಜಿ ಸಲ್ಲಿಸಿದರು. 25 ನವೆಂಬರ್ 2024 ರಂದು, ಅವರಿಗೆ 3.75 ಲಕ್ಷ ರೂ.ಗಳ ಸಾಲ ಮಂಜೂರಾಯಿತು, ಇದು ಥಾಣೆಯ ಪೋಖರಣ್ ರಸ್ತೆಯಲ್ಲಿ ಮೀನು ಮಾರಾಟ ವ್ಯಾಪಾರವನ್ನು ಪ್ರಾರಂಭಿಸಲು ಅವರಿಗೆ ನೆರವಾಯಿತು.

ನಿರಂತರ ಶ್ರಮ, ಸಮರ್ಪಣೆ ಮತ್ತು ದೃಢಸಂಕಲ್ಪದಿಂದ, ಶ್ರೀಮತಿ ಖರಾತ್ಮಲ್ ಅವರು ವ್ಯವಹಾರವನ್ನು ವಿಶ್ವಾಸಾರ್ಹ ಜೀವನೋಪಾಯದ ಮೂಲವಾಗಿಸಿಕೊಂಡರು. ಅವರ ನಿವ್ವಳ ಮಾಸಿಕ ಆದಾಯವು ಸುಮಾರು 40,000 ರಿಂದ 50,000 ರೂ.ಗಳಿಗೆ ಹೆಚ್ಚಾಗಿದ್ದು, ಇದು ಅವರ ಕುಟುಂಬದ ಅಗತ್ಯಗಳನ್ನು ಪೂರೈಸಲು, ಮಕ್ಕಳ ಶಿಕ್ಷಣಕ್ಕೆ ಸಹಾಯಕ ನೀಡಲು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ.
ಎನ್ ಎಸ್ ಎಫ್ ಡಿಸಿ ನೀಡಿದ ಹಣಕಾಸಿನ ನೆರವಿನ ಬಗ್ಗೆ ಶ್ರೀಮತಿ ಹೇಮಲತಾ ಖರಾತ್ಮಲ್ ಸಂತಸ ವ್ಯಕ್ತಪಡಿಸುತ್ತಾ, "ಹಣಕಾಸಿನ ನೆರವು ನನಗೆ ಸ್ವಂತ ಕಾಲಿನ ಮೇಲೆ ನಿಲ್ಲಲು ಮತ್ತು ನನ್ನ ಮಕ್ಕಳಿಗೆ ಆಸರೆಯಾಗಲು ಅವಕಾಶವನ್ನು ನೀಡಿತು. ಕಠಿಣ ಪರಿಶ್ರಮದ ಮೂಲಕ, ನಾನು ಸ್ಥಿರವಾದ ಜೀವನೋಪಾಯವನ್ನು ನಿರ್ಮಿಸಲು ಮತ್ತು ಆತ್ಮವಿಶ್ವಾಸದಿಂದ ಅವರ ಭವಿಷ್ಯವನ್ನು ನೋಡಲು ಸಾಧ್ಯವಾಗಿದೆ" ಎಂದು ಹೇಳಿದರು.
ಶ್ರೀಮತಿ ಹೇಮಲತಾ ಖರಾತ್ಮಲ್ ಅವರು ಸ್ವಾವಲಂಬಿ ಉದ್ಯಮಿಯಾಗಿದ್ದಾರೆ ಮತ್ತು ತಮ್ಮ ಕುಟುಂಬಕ್ಕೆ ಬಲವಾದ ಆಧಾರವಾಗಿದ್ದಾರೆ. ಧೈರ್ಯ, ದೃಢಸಂಕಲ್ಪ ಮತ್ತು ಸಮಯೋಚಿತ ಹಣಕಾಸಿನ ಬೆಂಬಲವು ಕಷ್ಟಗಳನ್ನು ಸುಸ್ಥಿರ ಜೀವನೋಪಾಯ, ಘನತೆ ಮತ್ತು ಸಬಲೀಕರಣವಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಅವರ ಈ ಪಯಣ ತೋರಿಸುತ್ತದೆ.
*****
(ಪ್ರಕಟಣೆ ಐ.ಡಿ.: 2312561)
ವಿಸಿಟರ್ ಕೌಂಟರ್ : 23