ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ ಸಮುದಾಯ: 100 ವಾರಗಳ ನಶೆ ಮುಕ್ತ ಯುವ ಸಮುದಾಯ ಅಭಿಯಾನವು ದೇಶವ್ಯಾಪಿ ರಾಷ್ಟ್ರೀಯ ಸಂಕಲ್ಪ ಸಮಾರೋಪದೊಂದಿಗೆ ಆರಂಭ
ಎನ್ಎಸ್ಎಸ್ ಸೆಪ್ಟೆಂಬರ್ 18ರಿಂದ 300 ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸಂಕಲ್ಪ ಸಮಾರೋಪ ಮತ್ತು ಸೆಪ್ಟೆಂಬರ್ 20ರಂದು 485 ಮೈ ಭಾರತ್ ಘಟಕಗಳಲ್ಲಿ ಆಯೋಜಿಸಲಿದೆ
ಪ್ರಕಟಣಾ ದಿನಾಂಕ:
17 SEP 2026 5:44PM by PIB Bengaluru
ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆಯು ಮೇರಾ ಯುವ ಭಾರತ್ (ಮೈ ಭಾರತ್) ಮತ್ತು ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್.) ಮೂಲಕ 100 ವಾರಗಳ ನಶೆ ಮುಕ್ತ ಯುವ ಸಮುದಾಯ ಅಭಿಯಾನವನ್ನು ರಾಷ್ಟ್ರೀಯ ಸಂಕಲ್ಪ ಸಮಾರೋಪ ಎಂಬ ರಾಷ್ಟ್ರವ್ಯಾಪಿ ಯುವ ಸಮುದಾಯದ ಸಂಕಲ್ಪ ಮತ್ತು ಸಹಿ ಅಭಿಯಾನದೊಂದಿಗೆ 2026 ಸೆಪ್ಟೆಂಬರ್ 18ರಿಂದ ಆರಂಭಿಸಲು ಸಜ್ಜಾಗಿದೆ. ಈ ಉಪಕ್ರಮವು ದೇಶಾದ್ಯಂತ ಯುವ ಜನರ ನಿರಂತರ ಭಾಗವಹಿಸುವಿಕೆ, ಜಾಗೃತಿ ಮತ್ತು ಸಮುದಾಯ ನೇತೃತ್ವದ ಚಟುವಟಿಕೆಗಳ ಮೂಲಕ ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ ಸಮುದಾಯಕ್ಕಾಗಿ ಸಾಮೂಹಿಕ ಬದ್ಧತೆಯ ಕಡೆಗೆ ಸಜ್ಜುಗೊಳಿಸಲು ಪ್ರಯತ್ನಿಸುತ್ತದೆ.

“ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶೆ ಮುಕ್ತ ಯುವ ಸಮುದಾಯ”ವನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ಆಗಸ್ಟ್ 2ರಂದು ಆಧ್ಯಾತ್ಮಿಕ ಸಂಸ್ಥೆಗಳು, ಕೈಗಾರಿಕಾ ಸಂಘಗಳು, ಎನ್‌ಜಿಒಗಳು ಮತ್ತು ವಿಶ್ವವಿದ್ಯಾಲಯ ಸಂಘ ಸಂಸ್ಥೆಗಳನ್ನು ಉದ್ದೇಶಿಸಿ ವರ್ಚುವಲ್ ಭಾಷಣದ ಮೂಲಕ ಆರಂಭಿಸಿದರು. ಈ ಅಭಿಯಾನವು 4 ಆಧಾರಸ್ತಂಭಗಳ ಸುತ್ತ ರಚನೆಯಾಗಿದೆ - ತಡೆಗಟ್ಟುವಿಕೆ, ರಕ್ಷಣೆ, ಚೇತರಿಕೆ ಮತ್ತು ಮುನ್ನಡೆಸುವುದು ಎಂಬುದು ವಸ್ತು ವಿಷಯವಾಗಿದೆ. ಆರಂಭವಾದಾಗಿನಿಂದ ಈ ಉಪಕ್ರಮವು 30,200ಕ್ಕೂ ಹೆಚ್ಚು ಸ್ಥಳಗಳಿಂದ ಯುವ ಜನರ ಭಾಗವಹಿಸುವಿಕೆಯನ್ನು ದಾಖಲಿಸಿದೆ, 2.5 ಕೋಟಿಗೂ ಹೆಚ್ಚು ವೀಕ್ಷಕರು ಮತ್ತು 1 ಕೋಟಿಗೂ ಹೆಚ್ಚು ಸಂಕಲ್ಪಗಳನ್ನು ಮಾಡಿದೆ.
ಉದ್ಘಾಟನಾ ಹಂತದ ಭಾಗವಾಗಿ, ರಾಷ್ಟ್ರೀಯ ಸಂಕಲ್ಪ ಸಮಾರೋಪವನ್ನು ಎನ್‌ಎಸ್‌ಎಸ್ 2026 ಸೆಪ್ಟೆಂಬರ್ 18ರಿಂದ ಗುರುತಿಸಲಾದ 300 ಸ್ಥಳಗಳಲ್ಲಿ ಆಯೋಜಿಸಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಈ ಉಪಕ್ರಮದಲ್ಲಿ ಭಾಗವಹಿಸಲಿವೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯಗಳ ಮೂಲಕ ಗುರುತಿಸಲಾದ ಇತರೆ ಸಂಸ್ಥೆಗಳು ಸಹ ಪಾಲ್ಗೊಳ್ಳಲಿವೆ. ಗುರುತಿಸಲಾದ ಸಂಸ್ಥೆಗಳಲ್ಲಿ ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಮಹಾರಾಷ್ಟ್ರ ಮತ್ತು ಕೇರಳದ ಸಂಸ್ಥೆಗಳು ಸೇರಿವೆ.
100 ವಾರಗಳ ನಶೆ ಮುಕ್ತ ಯುವ ಅಭಿಯಾನ ಸೆಪ್ಟೆಂಬರ್ 20, 2026ರ ಮೊದಲ ಭಾನುವಾರ ಆಚರಿಸಲಾಗುವುದು, ಮೈ ಭಾರತ್ ಜಿಲ್ಲಾ ಕಚೇರಿಗಳು ಮತ್ತು ಯುವ ಹಾಸ್ಟೆಲ್‌ಗಳು ಸೇರಿದಂತೆ 485 ಮೈ ಭಾರತ್ ಘಟಕಗಳಲ್ಲಿ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಸಂಕಲ್ಪ ಸಮಾರೋಪ ಸಾಮೂಹಿಕ ಯುವ ಸಂಕಲ್ಪ ಮತ್ತು ಸಹಿ ಅಭಿಯಾನದ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಇದು ವಿಷಯಾಧಾರಿತ ಬೀದಿ ನಾಟಕಗಳು, ಘೋಷಣೆ ಬರವಣಿಗೆ ಮತ್ತು ಯುವ ಸಮುದಾಯ ನೇತೃತ್ವದ ಚರ್ಚೆಗಳಿಂದ ಪೂರಕವಾಗಿದೆ. ಈ ಚಟುವಟಿಕೆಗಳು ಯುವಜನರಿಗೆ ಜಾಗೃತಿ ಮೂಡಿಸುವಲ್ಲಿ ಭಾಗವಹಿಸಲು ಮತ್ತು ನಶೆ ಮುಕ್ತ ಭಾರತ್ ಕಡೆಗೆ ಅವರ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸಲು ವೇದಿಕೆಗಳನ್ನು ಒದಗಿಸುತ್ತದೆ.
100 ವಾರಗಳ ನಶೆ ಮುಕ್ತ ಯುವ ಸಮುದಾಯ ಅಭಿಯಾನದ ಉದ್ಘಾಟನೆಯ ನಂತರ 2026ರ ಸೆಪ್ಟೆಂಬರ್ ನಿಂದ ಡಿಸೆಂಬರ್ ತನಕ 12 ವಾರಗಳ ರಚನಾತ್ಮಕ ಚಟುವಟಿಕೆ ಕ್ಯಾಲೆಂಡರ್ ನಡೆಯಲಿದೆ, ಇದರಲ್ಲಿ 3 ವಿಷಯಾಧಾರಿತ ಹಂತಗಳಿವೆ - 'ನನ್ನ ಆರೋಗ್ಯ, ನನ್ನ ಹೆಮ್ಮೆ', 'ಫಿಟ್ ಯೂತ್, ವ್ಯಸನ ಮುಕ್ತ ಯುವ ಸಮುದಾಯ' ಮತ್ತು 'ಜೀವನ ಕೌಶಲ್ಯ ಮಾಸ'. ಈ ಕಾರ್ಯಕ್ರಮವು ಆರೋಗ್ಯ ತಪಾಸಣೆ ಮತ್ತು ಬಿಎಂಐ ಶಿಬಿರಗಳು, ಧ್ಯಾನ ಮತ್ತು ಯೋಗಕ್ಷೇಮ ಅವಧಿಗಳು, ಆರೋಗ್ಯ ನಡಿಗೆಗಳು ಮತ್ತು ಓಟಗಳು, ಯುವ ಮೇಳಗಳು, ಯೋಗ ಕಲಾಪಗಳು, ಸಾಂಪ್ರದಾಯಿಕ ಕ್ರೀಡೆಗಳು, ಮಿನಿ ಮ್ಯಾರಥಾನ್‌ಗಳು, ಸೈಕ್ಲೋಥಾನ್‌ಗಳು, ಕ್ರೀಡಾ ಲೀಗ್‌ಗಳು, ನಿರ್ಧಾರ ತೆಗೆದುಕೊಳ್ಳುವ ಕಾರ್ಯಾಗಾರಗಳು, ಗೆಳೆಯರ ಒತ್ತಡ ಕುರಿತು ಚರ್ಚೆಗಳು, ಸಮಸ್ಯೆ ಪರಿಹರಿಸುವ ಚಟುವಟಿಕೆಗಳು ಮತ್ತು ಯುವಕರ ನೇತೃತ್ವದ ಪಾತ್ರಾಭಿನಯಗಳು ಮತ್ತು ಬೀದಿ ನಾಟಕಗಳನ್ನು ಒಳಗೊಂಡಿರುತ್ತದೆ.
ಎನ್ಎಸ್ಎಸ್ ಘಟಕದ ಅಡಿ ಶುಕ್ರವಾರ ಮತ್ತು ಶನಿವಾರದಂದು ಚಟುವಟಿಕೆಗಳನ್ನು ನಡೆಸಲಾಗುವುದು, ಮುಂದಿನ 11 ವಾರಗಳಲ್ಲಿ ಪ್ರತಿಯೊಂದಕ್ಕೂ 200 ಸ್ಥಳಗಳನ್ನು ಯೋಜಿಸಲಾಗುವುದು, ಇದು 12 ವಾರಗಳ ಅವಧಿಯಲ್ಲಿ ಯೋಜಿತ ಎನ್ಎಸ್ಎಸ್ ವ್ಯಾಪ್ತಿಯನ್ನು 2,500 ಕಾರ್ಯಕ್ರಮಗಳಿಗೆ ಕೊಂಡೊಯ್ಯುತ್ತದೆ. ಮೈ ಭಾರತ್ ತನ್ನ ಗೊತ್ತುಪಡಿಸಿದ ಘಟಕಗಳಲ್ಲಿ ಸಾಪ್ತಾಹಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ, ಅನುಷ್ಠಾನ ಯೋಜನೆಯು ಈ ಅವಧಿಯಲ್ಲಿ 3,235 ಮೈ ಭಾರತ್ ಘಟಕ ಮಟ್ಟದ ಚಟುವಟಿಕೆಗಳನ್ನು ಒದಗಿಸುತ್ತದೆ.
ಈ ಅಭಿಯಾನವು ಮೈ ಭಾರತ್ ಯುವಕರು, ಎನ್ಎಸ್ಎಸ್ ಸ್ವಯಂಸೇವಕರು, ಶಿಕ್ಷಣ ಸಂಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತದೆ, ಇದರಲ್ಲಿ ಆಧ್ಯಾತ್ಮಿಕ, ಉದ್ಯಮ, ವಿಶ್ವವಿದ್ಯಾಲಯ ಮತ್ತು ಎನ್ ಜಿಒ ಸಂಸ್ಥೆಗಳು ಸೇರಿವೆ. ಚಟುವಟಿಕೆಗಳನ್ನು ಅನುಮೋದಿತ ಅಭಿಯಾನ ಬ್ರ್ಯಾಂಡಿಂಗ್ ಮತ್ತು ಐಇಸಿ ಸಾಮಗ್ರಿಗಳ ಮೂಲಕ ಬೆಂಬಲಿಸಲಾಗುತ್ತದೆ. ರಾಜ್ಯಗಳು, ಜಿಲ್ಲೆಗಳು ಮತ್ತು ಭಾಗವಹಿಸುವ ಸಂಸ್ಥೆಗಳಲ್ಲಿ ಅಭಿಯಾನದ ವ್ಯಾಪ್ತಿ ಮತ್ತು ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಛಾಯಾಚಿತ್ರಗಳು, ವೀಡಿಯೊಗಳು, ಭಾಗವಹಿಸುವಿಕೆಯ ಅಂಕಿಅಂಶಗಳು ಮತ್ತು ಪ್ರಮುಖ ಮುಖ್ಯಾಂಶಗಳ ಮೂಲಕ ದಾಖಲಿಸಲಾಗುತ್ತದೆ.
100 ವಾರಗಳ ನಶೆ ಮುಕ್ತ ಯುವ ಸಮುದಾಯ ಅಭಿಯಾನವು ಆರೋಗ್ಯ, ಫಿಟ್ನೆಸ್, ಜೀವನ ಕೌಶಲ್ಯಗಳು, ಜಾಗೃತಿ ಮತ್ತು ಸಮುದಾಯ ಭಾಗವಹಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದ ನಿಯಮಿತ ಚಟುವಟಿಕೆಗಳ ಮೂಲಕ ಯುವ ಜನರ ನೇತೃತ್ವದ ತೊಡಗಿಸಿಕೊಳ್ಳುವಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ, ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ ಸಮುದಾಯದ ಕಡೆಗೆ ಯುವಜನರ ಸಾಮೂಹಿಕ ಸಂಕಲ್ಪವನ್ನು ಬಲಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2311696)
ವಿಸಿಟರ್ ಕೌಂಟರ್ : 13