ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಸಾಗರದಾಳದಲ್ಲಿ ಮೀನುಗಾರಿಕೆ ಉತ್ತೇಜನ ಮತ್ತು ಪ್ರವೇಶ ಪಾಸ್ ಮತ್ತು ದೃಢೀಕರಣ ಪತ್ರ ಹೊಂದಿರುವ ಫಲಾನುಭವಿಗಳೊಂದಿಗೆ ಸಂವಹನ (ಸಂವಾದ) ಕುರಿತು ಮೀನುಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕಾರ್ಯಾಗಾರ
ಹೆಚ್ಚಿನ ಮೌಲ್ಯದ ಸಮುದ್ರ ಸಂಪನ್ಮೂಲಗಳು ಮತ್ತು ಸಮುದ್ರಾಹಾರ ರಫ್ತಿನ ಬಳಕೆ ಉತ್ತೇಜಿಸುವ ತಂತ್ರಜ್ಞಾನ, ಹಣಕಾಸು, ಕೌಶಲ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಸಂಪರ್ಕಗಳ ಮೇಲೆ ಪ್ರಮುಖ ಗಮನ
ಪ್ರಕಟಣಾ ದಿನಾಂಕ:
17 SEP 2026 5:52PM by PIB Bengaluru
ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು 2026 ಸೆಪ್ಟೆಂಬರ್ 17ರಂದು ಗುಜರಾತ್‌ನ ಗಾಂಧಿನಗರದಲ್ಲಿ ಸಾಗರದಾಳದಲ್ಲಿ ಮೀನುಗಾರಿಕೆ ಉತ್ತೇಜನ ಮತ್ತು ಪ್ರವೇಶ ಪಾಸ್ ಹೊಂದಿರುವ ಫಲಾನುಭವಿಗಳೊಂದಿಗೆ ಸಂವಹನ(ಸಂವಾದ) ನಡೆಸುವ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ರಾಷ್ಟ್ರೀಯ ಕಾರ್ಯಾಗಾರವು ಮೀನುಗಾರರು ಹೆಚ್ಚಿನ ಮೌಲ್ಯದ ಮೀನುಗಾರಿಕೆ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುವ ಮೂಲಕ ಸಮುದ್ರದಾಳದ ಮೀನುಗಾರಿಕೆ ಉತ್ತೇಜಿಸುವ ಗುರಿ ಹೊಂದಿದೆ, ಜತೆಗೆ ನೆಲಗಟ್ಟಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಮೀನುಗಾರಿಕೆ ವಲಯವನ್ನು ಮತ್ತಷ್ಟು ಬಲಪಡಿಸಲು ಪಾಲುದಾರರ ಸಲಹೆಗಳನ್ನು ಸಂಗ್ರಹಿಸಲು ಸೂಕ್ತ ವೇದಿಕೆ ಒದಗಿಸುತ್ತದೆ. ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ಮೀನುಗಾರಿಕೆ ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಎಫ್‌ಪಿಒ) ಮತ್ತು ಮೀನುಗಾರಿಕೆ ಸಹಕಾರಿ ಸಂಘಗಳನ್ನು ಬಲಪಡಿಸಲು ವಿಶೇಷ ಒತ್ತು ನೀಡುವ ಜತೆಗೆ ವಿವಿಧ ಉಪಕ್ರಮಗಳ ಮೂಲಕ ಮೀನುಗಾರಿಕೆ ವಲಯದ ಡಿಜಿಟಲೀಕರಣದತ್ತ ಆದ್ಯತೆಯ ಗಮನ ಹರಿಸಿದೆ.

ಈ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ರಾಜ್ಯ ಖಾತೆ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಾಘೇಲ್ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಮೀನುಗಾರರು, ಮಹಿಳಾ ಮೀನುಗಾರರು ಸೇರಿದಂತೆ ಸರ್ಕಾರ, ಮೀನುಗಾರಿಕೆ ಇಲಾಖೆ, ಗುಜರಾತ್ ಸರ್ಕಾರ, ಐಸಿಎಆರ್, ಇನ್‌ಕಾಯ್ಸ್, ಸಿಫ್‌ನೆಟ್, ಎಎಸ್‌ಸಿಐ, ನಬಾರ್ಡ್, ಎನ್‌ಸಿಇಎಲ್, ಎನ್‌ಸಿಡಿಸಿ, ಎಸ್‌ಇಎಐ, ಎಂಪಿಇಡಿಎ, ಇಐಸಿ ಮತ್ತು ಇತರೆ ಮೀನುಗಾರಿಕೆ ಪಾಲುದಾರರು ಭಾಗವಹಿಸಿದ್ದರು.

ಗುಜರಾತ್‌ನ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರು, ದೇಶದ ಅತಿ ಉದ್ದದ ಕರಾವಳಿ ಹೊಂದಿರುವ ಗುಜರಾತ್‌ನ ವಿಶಿಷ್ಟ ಪ್ರಯೋಜನಗಳನ್ನು ಪ್ರಸ್ತಾಪಿಸಿದರು. ಭಾರತ ಸರ್ಕಾರದ ಸಮುದ್ರದಾಳದ ಮೀನುಗಾರಿಕೆ ಉಪಕ್ರಮಗಳ ಮೂಲಕ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮೀನುಗಾರರಿಗೆ ಸಲಹೆ ನೀಡಿದರು. ಸಮುದ್ರದಾಲದ ಮೀನುಗಾರಿಕೆ, ತರಬೇತಿ, ಮೂಲಸೌಕರ್ಯ ಮತ್ತು ಮಾರುಕಟ್ಟೆ ಪ್ರವೇಶದಲ್ಲಿನ ಹೂಡಿಕೆಗಳಿಂದ ಗುಜರಾತ್ ಗಮನಾರ್ಹವಾಗಿ ಪ್ರಯೋಜನ ಪಡೆಯಲಿದೆ. ತರಬೇತಿ ಮತ್ತು ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ಸುಗಮಗೊಳಿಸುವಲ್ಲಿ ರಾಜ್ಯ ಸರ್ಕಾರ ಮೀನುಗಾರ ಸಮುದಾಯಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ, ಶೀತಲ-ಸರಪಳಿ ಮೂಲಸೌಕರ್ಯ ಮತ್ತು ಸಹಕಾರಿ ನೇತೃತ್ವದ ಉಪಕ್ರಮಗಳಂತಹ ಕ್ಷೇತ್ರಗಳಲ್ಲಿ ನೀಡುತ್ತಿರುವ ಪ್ರಯೋಜನಗಳನ್ನು ಮುಂಚಿತವಾಗಿ ಪಡೆದುಕೊಳ್ಳುವಂತೆ ಮುಖ್ಯಮಂತ್ರಿ, ಮೀನುಗಾರರನ್ನು ಪ್ರೋತ್ಸಾಹಿಸಿದರು. ಶೀತಲಾಗಾರ ಸೌಲಭ್ಯಗಳ ಸ್ಥಾಪನೆ ಬೆಂಬಲಿಸಲು ಮತ್ತು ಮೀನುಗಾರರು ಸಮುದ್ರ ಸಂಪನ್ಮೂಲಗಳಿಂದ ಮೌಲ್ಯ ಸಾಕ್ಷಾತ್ಕಾರ ಹೆಚ್ಚಿಸಲು ಸಹಾಯ ಮಾಡಲು ತರಬೇತಿ ಅವಕಾಶಗಳನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದರು. ಸಾಮೂಹಿಕ ಪ್ರಯತ್ನಗಳ ಮಹತ್ವಕ್ಕೆ ಒತ್ತು ನೀಡಿದ ಅವರು, ಗುಜರಾತ್‌ನ ವಿಶಾಲ ಸಮುದ್ರ ಸಾಮರ್ಥ್ಯವನ್ನು ಬಳಸಿಕೊಳ್ಳಲು, ಮೀನುಗಾರಿಕೆ ವಲಯವನ್ನು ಬಲಪಡಿಸಲು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಗುಜರಾತ್ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡುವಂತೆ ಅವರು ಕರೆ ನೀಡಿದರು.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಮಾತನಾಡಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಭಾರತದ ಮೀನುಗಾರಿಕೆ ಕ್ಷೇತ್ರ ಪರಿವರ್ತನಾತ್ಮಕ ಬೆಳವಣಿಗೆ ಕಾಣುತ್ತಿದೆ. 2024-25ರಲ್ಲಿ ಮೀನು ಉತ್ಪಾದನೆಯು ದಾಖಲೆಯ 197.75 ಲಕ್ಷ ಟನ್‌ಗಳಿಗೆ ಏರಿದೆ, ಸಮುದ್ರಾಹಾರ ರಫ್ತು ದ್ವಿಗುಣಗೊಂಡಿದೆ. ಜಾಗತಿಕ ವ್ಯಾಪಾರ ಅಡೆತಡೆಗಳು ಮತ್ತು ಪ್ರಮುಖ ಮಾರುಕಟ್ಟೆಗಳಲ್ಲಿ ಹೆಚ್ಚಿದ ಸುಂಕಗಳ ಹೊರತಾಗಿಯೂ, ಭಾರತದ ಸಮುದ್ರಾಹಾರ ರಫ್ತು 11,400 ಕೋಟಿ ರೂ.ಗಳಷ್ಟು ಏರಿಕೆಯಾಗಿ ದಾಖಲೆಯ 73,890 ಕೋಟಿ ರೂ.ಗಳಿಗೆ ತಲುಪಿದೆ, ಇದು ವಲಯದ ತ್ವರಿತ ಚೇತರಿಕೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ವಿಶೇಷ ಆರ್ಥಿಕ ವಲಯ(ಇಇಝಡ್)ನಲ್ಲಿ ಮೀನುಗಾರಿಕೆಗಾಗಿ ಪ್ರವೇಶ ಪಾಸ್‌ಗಳನ್ನು ಮತ್ತು ಎತ್ತರದ ಸಮುದ್ರ ಮೀನುಗಾರಿಕೆಗಾಗಿ ದೃಢೀಕರಣ ಪತ್ರಗಳನ್ನು ನೀಡುವ ಉದ್ದೇಶವು ಮೀನುಗಾರರು ಟ್ಯೂನ ಮತ್ತು ಇತರೆ ಸಾಗರ ಪ್ರಭೇದಗಳಂತಹ ಹೆಚ್ಚಿನ ಮೌಲ್ಯದ ಸಂಪನ್ಮೂಲಗಳ ವ್ಯಾಪಕ ಬಳಕೆಯ ಸಾಮರ್ಥ್ಯವನ್ನು ಬಳಸಿಕೊಳ್ಳಲು, ರಫ್ತು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ಅನುವು ಮಾಡಿಕೊಡುವುದಾಗಿದೆ ಎಂದು ಸಚಿವರು ಹೇಳಿದರು. ಸಾಂಪ್ರದಾಯಿಕ ಮೀನುಗಾರಿಕೆ ನೆಲೆಗಳನ್ನು ಮೀರಿ ಚಲಿಸಲು, ಇಇಝಡ್ ಮತ್ತು ಎತ್ತರದ ಸಮುದ್ರಗಳಲ್ಲಿ ಹೆಚ್ಚಿನ ಮೌಲ್ಯದ ಪ್ರಭೇದಗಳನ್ನು ಗುರಿಯಾಗಿಸಲು ಮತ್ತು ಆನ್‌ಬೋರ್ಡ್ ಸಂಸ್ಕರಣೆ, ಶೀತಲ-ಸರಪಳಿ ಮೂಲಸೌಕರ್ಯ, ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಮತ್ತು ರಫ್ತು-ಆಧಾರಿತ ಮಾರುಕಟ್ಟೆ ಸಂಪರ್ಕಗಳಿಂದ ಬೆಂಬಲಿತವಾದ ಆಧುನಿಕ ಮೀನುಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಮೀನುಗಾರರನ್ನು ಒತ್ತಾಯಿಸಿದರು. ಕೌಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಯ ಮಹತ್ವಕ್ಕೆ ಒತ್ತು ನೀಡಿದ ಅವರು, ರಾಜ್ಯಗಳು ಮೀನುಗಾರರಿಗೆ ರಚನಾತ್ಮಕ ತರಬೇತಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಕರೆ ನೀಡಿದರು. ಎಫ್‌ಐಡಿಎಫ್ ಅಡಿ ಲಭ್ಯವಿರುವ ರಿಯಾಯಿತಿ ಹಣಕಾಸು ಬಳಸಿಕೊಳ್ಳಲು ಪಾಲುದಾರರನ್ನು ಪ್ರೋತ್ಸಾಹಿಸಿದರು. ಸಹಕಾರಿ ಸಂಘಗಳಿಗೆ ಎತ್ತರದ ಸಮುದ್ರ ಮೀನುಗಾರಿಕೆಗಾಗಿ ದೃಢೀಕರಣ ಪತ್ರ ಪಡೆಯುವ ಶುಲ್ಕವನ್ನು 25,000 ರೂ.ನಿಂದ 5,000 ರೂ.ಗೆ ಇಳಿಸಲಾಗಿದೆ. ಇದು ಮೀನುಗಾರರ ಸಾಮೂಹಿಕ ಸಮುದ್ರದಾಳದ ಮೀನುಗಾರಿಕೆಯಲ್ಲಿ ಭಾಗವಹಿಸಲು ಮತ್ತು ಭಾರತದ ನೀಲಿ ಆರ್ಥಿಕತೆಯ ಬೆಳವಣಿಗೆಗೆ ಕೊಡುಗೆ ನೀಡಲು ಸುಲಭವಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಾಘೇಲ್, ಈ ಕಾರ್ಯಾಗಾರವು ಸಮುದ್ರದಾಳದ ಮೀನುಗಾರಿಕೆ ಕುರಿತ ಚರ್ಚೆಗಳಿಗೆ ಅಮೂಲ್ಯವಾದ ವೇದಿಕೆ ಒದಗಿಸಿದೆ. ತಂತ್ರಜ್ಞಾನ ಅಳವಡಿಕೆ, ಶೀತಲ ಸರಪಳಿ ಮೂಲಸೌಕರ್ಯ, ಮೌಲ್ಯವರ್ಧನೆ, ಸಂಸ್ಕರಣೆ, ಮಾರುಕಟ್ಟೆ ಪ್ರವೇಶ ಮತ್ತು ರಫ್ತು ಅವಕಾಶಗಳಂತಹ ವಿಷಯಗಳನ್ನು ಒಳಗೊಂಡಿದೆ. ಮೀನುಗಾರಿಕೆ ವಲಯದಲ್ಲಿ ಸರ್ಕಾರದ ಉಪಕ್ರಮಗಳ ಪರಿವರ್ತನಾತ್ಮಕ ಪರಿಣಾಮದ ಬಗ್ಗೆ, ವಿಶೇಷವಾಗಿ ಮೀನುಗಾರಿಕಾ ಇಲಾಖೆಯ ರಚನೆ, ಪಿಎಂಎಂಎಸ್‌ವೈ ಆರಂಭ ಮತ್ತು ನೀಲಿ ಕ್ರಾಂತಿ ಮತ್ತು ನೀಲಿ ಆರ್ಥಿಕತೆಯ ಉತ್ತೇಜನದ ಬಗ್ಗೆ ಅವರು ಬೆಳಕು ಚೆಲ್ಲಿದರು, ಇದು ಮೀನು ಉತ್ಪಾದನೆ, ಉತ್ಪಾದಕತೆ, ರಫ್ತು ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸಲು ಕಾರಣವಾಗಿದೆ. ಪ್ರವೇಶ ಪಾಸ್‌ಗಳನ್ನು ನೀಡುವುದರಿಂದ ಮೀನುಗಾರರು ನೀರಿನಾಳದಲ್ಲಿ ಸಾಹಸ ಮಾಡಲು ಮತ್ತು ಹೆಚ್ಚಿನ ಮೌಲ್ಯದ ಸಂಪನ್ಮೂಲಗಳನ್ನು, ವಿಶೇಷವಾಗಿ ಟ್ಯೂನ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಆದಾಯ ಹೆಚ್ಚಳ ಮತ್ತು ರಫ್ತು ಬೆಳವಣಿಗೆಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದರು. ಮೂಲಸೌಕರ್ಯ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕಗಳು ಸೇರಿದಂತೆ ಸಂಪೂರ್ಣ ಮೀನುಗಾರಿಕೆ ಮೌಲ್ಯ ಸರಪಳಿ ಬಲಪಡಿಸುವುದು ಭಾರತದ ಸಮುದ್ರ ಮೀನುಗಾರಿಕೆ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಮತ್ತು ರೋಮಾಂಚಕ ನೀಲಿ ಆರ್ಥಿಕತೆಯ ದೃಷ್ಟಿಕೋನ ಮುನ್ನಡೆಸಲು ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಮಾತನಾಡಿ, ಮೀನುಗಾರರು, ಸಹಕಾರಿಗಳು, ಎಫ್‌ಪಿಒಗಳು, ಸ್ವಸಹಾಯ ಗುಂಪುಗಳು ಮತ್ತು ಮಹಿಳಾ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಮಾತ್ರ ಭಾರತದ ಸಮುದ್ರದಾಳದ ಮೀನುಗಾರಿಕೆ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು. ಟ್ಯೂನ ಮೀನುಗಳಂತಹ ಹೆಚ್ಚಿನ ಮೌಲ್ಯದ ಸಾಗರ ಸಂಪನ್ಮೂಲಗಳಲ್ಲಿ ಅಪಾರ ಅವಕಾಶಗಳಿವೆ. ಮೀನುಗಾರರ ಆದಾಯ ಹೆಚ್ಚಿಸಲು ಮತ್ತು ಸಮುದ್ರ ಮೀನುಗಾರಿಕೆ ಕ್ಷೇತ್ರದ ಸ್ಪರ್ಧಾತ್ಮಕತೆ ಬಲಪಡಿಸಲು ಆಧುನಿಕ ಮೀನುಗಾರಿಕೆ ಹಡಗುಗಳು, ಸುಧಾರಿತ ತಂತ್ರಜ್ಞಾನಗಳು, ಸುಸ್ಥಿರ ಮೀನುಗಾರಿಕೆ ಅಭ್ಯಾಸಗಳು, ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿಯ ಅಗತ್ಯವಿದೆ. ಕಾರ್ಯಾಗಾರದ ಸಮಯದಲ್ಲಿ ನಡೆದ ಚರ್ಚೆಗಳನ್ನು ಪ್ರಸ್ತಾಪಿಸಿದ ಅವರು, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಹಣಕಾಸಿನ ಸುಧಾರಿತ ಪ್ರವೇಶ ಮತ್ತು ಸಹಕಾರಿ ಸಂಸ್ಥೆಗಳ ಬಲವರ್ಧನೆಯು ಆಳ ಸಮುದ್ರ ಮೀನುಗಾರಿಕೆ ಉತ್ತೇಜಿಸುವ 3 ಪ್ರಮುಖ ಆದ್ಯತೆಗಳಾಗಿವೆ. ಭಾರತದ ಸಮುದ್ರದಾಳದ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಬೆಳವಣಿಗೆ ವೇಗಗೊಳಿಸಲು ಮತ್ತು ಮೀನುಗಾರಿಕಾ ಸಮುದಾಯಗಳಲ್ಲಿ ಜೀವನೋಪಾಯ ಸುಧಾರಿಸಲು ಮೀನುಗಾರರು ಮತ್ತು ಪಾಲುದಾರರಿಂದ ಪಡೆದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ನೀತಿ ಮತ್ತು ಕಾರ್ಯಕ್ರಮದ ಅನುಷ್ಠಾನದಲ್ಲಿ ಸೇರಿಸಲಾಗುವುದು ಎಂದು ಅವರು ಭಾಗವಹಿಸಿದ್ದ ಎಲ್ಲಾ ಫಲಾನುಭವಿಗಳಿಗೆ ಭರವಸೆ ನೀಡಿದರು.
ಅಧಿಕಾರ ಅಥವಾ ದೃಢೀಕರಣ ಪತ್ರ(ಎಲ್ಒಎ) ಮತ್ತು ಪ್ರವೇಶ ಪಾಸ್ ಹೊಂದಿರುವ ಫಲಾನುಭವಿಗಳೊಂದಿಗಿನ ಸಂವಾದ ವೇಳೆ ಪ್ರವೇಶ ಪಾಸ್‌ಗಳನ್ನು ನೀಡುವ ಸರ್ಕಾರದ ನಿರ್ಧಾರವನ್ನು ಮೀನುಗಾರರು ವ್ಯಾಪಕವಾಗಿ ಶ್ಲಾಘಿಸಿದರು. ಇದು ಸಾಂಪ್ರದಾಯಿಕ ಸಮೀಪದ ತೀರದ ಮೀನುಗಾರಿಕೆ ಪ್ರದೇಶಗಳನ್ನು ಮೀರಿ ಇಇಝಡ್ ಗೆ ಹೋಗಲು ಅನುವು ಮಾಡಿಕೊಟ್ಟಿದೆ, ಟ್ಯೂನ ಮತ್ತು ಇತೆರ ಸಾಗರ ಸಂಪನ್ಮೂಲಗಳಂತಹ ಹೆಚ್ಚಿನ ಮೌಲ್ಯದ ಮೀನುಗಳನ್ನು ಗುರಿಯಾಗಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ. ಸಾಗರದಾಳದ ಮೀನುಗಾರಿಕೆ ಪ್ರದೇಶಗಳಿಗೆ ಪ್ರವೇಶವು ಜೀವನೋಪಾಯದ ನಿರೀಕ್ಷೆಗಳನ್ನು ಸುಧಾರಿಸಲಿದೆ, ರಫ್ತು-ಆಧಾರಿತ ಮೀನುಗಾರಿಕೆಯ ಮೂಲಕ ಹೆಚ್ಚಿನ ಆದಾಯಕ್ಕೆ ಅವಕಾಶಗಳನ್ನು ಸೃಷ್ಟಿಸಲಿದೆ. ಗುಣಮಟ್ಟದ ನಿರ್ವಹಣೆ ಮತ್ತು ಮೌಲ್ಯವರ್ಧನೆ, ಮೀನುಗಾರಿಕಾ ಬಂದರುಗಳಲ್ಲಿ ಶೀತಲ ಸರಪಳಿ ಮತ್ತು ಶೀತಲ ಶೇಖರಣಾ ಮೂಲಸೌಕರ್ಯ, ಸಮುದ್ರದಾಳದ ಮೀನುಗಾರಿಕೆ ಹಡಗುಗಳ ಆಧುನೀಕರಣ, ಸುಧಾರಿತ ಸಂವಹನ ವ್ಯವಸ್ಥೆಗಳು ಮತ್ತು ಸಮುದ್ರದಾಳದ ಮೀನುಗಾರಿಕೆ ಕಾರ್ಯಾಚರಣೆಗಳಿಗೆ ಹೆಚ್ಚಿನ ಆರ್ಥಿಕ ಸಹಾಯ ಕುರಿತು ತರಬೇತಿಯ ರೂಪದಲ್ಲಿ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದು ಮೀನುಗಾರರು ತಿಳಿಸಿದರು. ಈ ಸಕ್ರಿಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಪ್ರವೇಶ ಪಾಸ್‌ಗಳ ಪ್ರಯೋಜನಗಳನ್ನು ಹೆಚ್ಚಿಸಲು, ಬೆಲೆ ಸಾಕ್ಷಾತ್ಕಾರ ಸುಧಾರಿಸಲು ಮತ್ತು ಭಾರತದ ಸಮುದ್ರದಾಳದ ಮೀನುಗಾರಿಕೆ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯ ಹೊರತೆಗೆಯಲು ಸಹಾಯ ಮಾಡುತ್ತದೆ ಎಂದು ಮೀನುಗಾರರು ತಿಳಿಸಿದರು.
ಈ ಕಾರ್ಯಾಗಾರವು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆ, ಮೀನುಗಾರಿಕೆ ಹಡಗುಗಳ ಆಧುನೀಕರಣ, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ, ಸಾಮರ್ಥ್ಯ ವೃದ್ಧಿ, ಹಣಕಾಸು ಕಾರ್ಯವಿಧಾನಗಳು, ಮೌಲ್ಯವರ್ಧನೆ, ಪತ್ತೆ ಹಚ್ಚುವಿಕೆ ವ್ಯವಸ್ಥೆಗಳು ಮತ್ತು ರಫ್ತು ಮಾರುಕಟ್ಟೆ ಪ್ರವೇಶ ಸೇರಿದಂತೆ ಸಂಪೂರ್ಣ ಸಮುದ್ರದಾಳದ ಮೀನುಗಾರಿಕೆ ಮೌಲ್ಯ ಸರಪಳಿ ಒಳಗೊಂಡ 5 ತಾಂತ್ರಿಕ ಕಲಾಪಗಳು ಜರುಗಿದವು. ಭಾರತದ ನೀಲಿ ಆರ್ಥಿಕತೆಯನ್ನು ಹೊರತೆಗೆಯುವುದು, ಹೆಚ್ಚಿನ ಸಮುದ್ರಾಹಾರ ರಫ್ತಿಗಾಗಿ ಇಇಝಡ್ ಮತ್ತು ಎತ್ತರದ ಸಮುದ್ರಗಳಲ್ಲಿ ಸಮುದ್ರದಾಳದಲ್ಲಿ ಮೀನುಗಾರಿಕೆ ಅವಕಾಶಗಳು, ಭಾರತದ ಸಮುದ್ರದಾಳದ ಮೀನುಗಾರಿಕೆಯನ್ನು ಪರಿವರ್ತಿಸುವುದು - ಆಧುನಿಕ ಹಡಗು ತಂತ್ರಜ್ಞಾನಗಳು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳು, ಭವಿಷ್ಯಕ್ಕೆ ಸಿದ್ಧವಾಗಿರುವ ಸಮುದ್ರದಾಳದ ಮೀನುಗಾರಿಕೆ ಕಾರ್ಯಪಡೆ ನಿರ್ಮಿಸುವುದು - ವಿಶೇಷ ತರಬೇತಿ, ಕೌಶಲ್ಯ ಮತ್ತು ಸಾಮರ್ಥ್ಯ ಅಭಿವೃದ್ಧಿ, ಸಮುದ್ರದಾಳದ ಮೀನುಗಾರಿಕೆಗಾಗಿ ಹಣಕಾಸು ಕಾರ್ಯವಿಧಾನಗಳು ಮತ್ತು ಸಮುದ್ರದಾಳದ ಮೀನುಗಾರಿಕೆಯಿಂದ ಜಾಗತಿಕ ಮಾರುಕಟ್ಟೆಗಳಿಗೆ - ಸಂಸ್ಕರಣೆ, ಮೌಲ್ಯವರ್ಧನೆ, ಪತ್ತೆ ಹಚ್ಚುವಿಕೆ ಮತ್ತು ರಫ್ತು ಅನುಸರಣೆ ಇವು ವಿಷಯಗಳಾಗಿವೆ. 5 ತಾಂತ್ರಿಕ ಕಲಾಪಗಳಲ್ಲಿ ಸರ್ಕಾರ, ಸಂಶೋಧನಾ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಉದ್ಯಮ, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಮೀನುಗಾರ ಪ್ರತಿನಿಧಿಗಳ ತಜ್ಞರನ್ನು ಒಳಗೊಂಡ 19 ಭಾಷಣಕಾರರು ಚರ್ಚೆ ಅಥವಾ ಸಂವಾದದಲ್ಲಿ ಭಾಗವಹಿಸಿದ್ದರು.

ಸಮುದ್ರದಾಳದ ಮೀನುಗಾರಿಕೆಯಲ್ಲಿ ವಿಶೇಷವಾಗಿ ಟ್ಯೂನ, ಸ್ಕ್ವಿಡ್ ಮತ್ತು ಇತರೆ ಸಾಗರ ಸಂಪನ್ಮೂಲಗಳಂತಹ ಹೆಚ್ಚಿನ ಮೌಲ್ಯದ ಪ್ರಭೇದಗಳಿಗೆ ಸಂಬಂಧಿಸಿದಂತೆ, ಭಾರತವು ಇನ್ನೂ ಬಳಸದ ಗಮನಾರ್ಹ ಸಾಮರ್ಥ್ಯ ಹೊಂದಿದೆ ಎಂದು ಸಂವಾದಕರು ಒಕ್ಕೊರಲಿನಿಂದ ಹೇಳಿದರು. ಆಧುನಿಕ ಹಡಗುಗಳು, ಸುಧಾರಿತ ಮೀನುಗಾರಿಕೆ ತಂತ್ರಜ್ಞಾನಗಳು, ಶೀತಲ-ಸರಪಳಿ ಮೂಲಸೌಕರ್ಯ, ವೈಜ್ಞಾನಿಕ ಮೀನು ನಿರ್ವಹಣೆ, ಪತ್ತೆ ಹಚ್ಚುವಿಕೆ ವ್ಯವಸ್ಥೆಗಳು ಮತ್ತು ಮೀನುಗಾರರ ಆದಾಯ ಸುಧಾರಿಸಲು ಅಂತಾರಾಷ್ಟ್ರೀಯ ಪ್ರಮಾಣೀಕರಣ, ಸಮುದ್ರಾಹಾರ ರಫ್ತು ಮತ್ತು ಒಟ್ಟಾರೆ ಮೌಲ್ಯ ಸಾಕ್ಷಾತ್ಕಾರದ ಮೂಲಕ ಮೀನುಗಾರಿಕೆ ಚಟುವಟಿಕೆಗಳನ್ನು ಹತ್ತಿರದ ತೀರದ ನೀರಿನಿಂದ ಹೊರಗೆ ಬದಲಾಯಿಸುವ ಅಗತ್ಯವಿದೆ ಎಂದರು.
ಐಸ್ಲ್ಯಾಂಡ್‌ನಲ್ಲಿರುವ ಭಾರತದ ರಾಯಭಾರಿ ಶ್ರೀ ಆರ್. ರವೀಂದ್ರ ಮಾತನಾಡಿ, ಮೌಲ್ಯ ಹೆಚ್ಚಿಸಲು "ಸಂಪೂರ್ಣ ಅಥವಾ ಪರಿಪೂರ್ಣ ಮೀನು" ಕಾರ್ಯವಿಧಾನ ಪ್ರತಿಪಾದಿಸುತ್ತಾ, ಸುಧಾರಿತ ಮೀನುಗಾರಿಕೆ ಹಡಗುಗಳು, ಸ್ವಯಂಚಾಲಿತ ಆನ್‌ಬೋರ್ಡ್ ಸಂಸ್ಕರಣೆ, ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ಸುಸ್ಥಿರ ಮೀನುಗಾರಿಕೆ ನಿರ್ವಹಣೆಯಲ್ಲಿ ಐಸ್ಲ್ಯಾಂಡ್‌ನ ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಂಡರು.
ಕೌಶಲ್ಯ ಅಭಿವೃದ್ಧಿ, ಪ್ರಾಯೋಗಿಕ ತರಬೇತಿ, ಕೈಗೆಟುಕುವ ಹಣಕಾಸು, ಸಹಕಾರಿ ನೇತೃತ್ವದ ಹೂಡಿಕೆಗಳು, ಆಧುನಿಕ ಬಂದರು ಮೂಲಸೌಕರ್ಯ, ಸಂವಹನ ಮತ್ತು ಸುರಕ್ಷತಾ ವ್ಯವಸ್ಥೆಗಳು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಡಿಜಿಟಲ್ ಕ್ಯಾಚ್ ದಸ್ತಾವೇಜು, ರಫ್ತು ಅನುಸರಣೆ ಮತ್ತು ಮಾರುಕಟ್ಟೆ ಪ್ರವೇಶದ ಮಹತ್ವಕ್ಕೆ ಚರ್ಚೆಯಲ್ಲಿ ಒತ್ತು ನೀಡಲಾಯಿತು. ಮೀನುಗಾರರು ಸಮುದ್ರದಾಳದ ಮೀನುಗಾರಿಕೆಗೆ ಯಶಸ್ವಿಯಾಗಿ ಪರಿವರ್ತನೆಗೊಳ್ಳಲು ಮತ್ತು ಭಾರತದ ನೀಲಿ ಆರ್ಥಿಕತೆಯ ಸಂಪೂರ್ಣ ಸಾಮರ್ಥ್ಯ ಹೊರತೆಗೆಯಲು ಸಾಮರ್ಥ್ಯ ವೃದ್ಧಿಯನ್ನು ಬಲಪಡಿಸುವುದು, ಸಾಲದ ಪ್ರವೇಶ ಸುಧಾರಿಸುವುದು, ಮೂಲಸೌಕರ್ಯ ಹೆಚ್ಚಿಸುವುದು ಮತ್ತು ಮೀನುಗಾರ ಸ್ನೇಹಿ ಡಿಜಿಟಲ್ ಪತ್ತೆ ಹಚ್ಚುವಿಕೆ ವೇದಿಕೆಗಳನ್ನು ಅಳವಡಿಸಿಕೊಳ್ಳುವುದು ನಿರ್ಣಾಯಕವಾಗಿದೆ ಎಂದು ಪಾಲುದಾರರು ಮತ್ತು ಮೀನುಗಾರ ಪ್ರತಿನಿಧಿಗಳು ಹೇಳಿದರು.
ನೀತಿ ನಿರೂಪಕರು, ತಾಂತ್ರಿಕ ತಜ್ಞರು, ಹಣಕಾಸು ಸಂಸ್ಥೆಗಳು, ಕೈಗಾರಿಕಾ ಪಾಲುದಾರರು, ಸಹಕಾರಿಗಳು ಮತ್ತು ಮೀನುಗಾರರನ್ನು ಕೇಂದ್ರೀಕೃತ ಚರ್ಚೆಗಳಿಗಾಗಿ ಒಟ್ಟುಗೂಡಿಸುವ ಮೂಲಕ ಭಾರತದ ಸಮುದ್ರದಾಳದ ಮೀನುಗಾರಿಕೆ ಪರಿಸರ ವ್ಯವಸ್ಥೆ ಬಲಪಡಿಸಲು ಈ ಚರ್ಚೆಗಳು ಮಹತ್ವದ ವೇದಿಕೆಯಾಗಿ ಕಾರ್ಯ ನಿರ್ವಹಿಸಿದವು. ಕಾರ್ಯಾಗಾರದಿಂದ ಹೊರಹೊಮ್ಮಿದ ಚರ್ಚೆಗಳು ಮತ್ತು ಶಿಫಾರಸುಗಳು ನೆಲಗಟ್ಟಿನ ನೈಜ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಗುರುತಿಸಲು, ತಂತ್ರಜ್ಞಾನ, ಕೌಶಲ್ಯಗಳು, ಹಣಕಾಸು ಮತ್ತು ಮಾರುಕಟ್ಟೆಗಳಿಗೆ ಪ್ರವೇಶ ಸುಧಾರಿಸಲು ಮತ್ತು ಸಮುದ್ರದಾಳದ ಮೀನುಗಾರಿಕೆಯಲ್ಲಿ ಮೀನುಗಾರರ ಹೆಚ್ಚಿನ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.
*****
(ಪ್ರಕಟಣೆ ಐ.ಡಿ.: 2311655)
ವಿಸಿಟರ್ ಕೌಂಟರ್ : 6