ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆಯ (PLFS) ಮಾಸಿಕ ಬುಲೆಟಿನ್ ಆಗಸ್ಟ್ 2026 ರ ಕುರಿತು ಪತ್ರಿಕಾ ಪ್ರಕಟಣೆ


ಒಟ್ಟಾರೆ ಎಲ್‌ಎಫ್‌ಪಿಆರ್ (LFPR) ಮತ್ತಷ್ಟು ಹೆಚ್ಚಳ

ಗ್ರಾಮೀಣ ಪ್ರದೇಶಗಳಲ್ಲಿ ಡಬ್ಲ್ಯೂಪಿಆರ್ (WPR) ಬಲವರ್ಧನೆ ಮತ್ತು ನಗರ ಪ್ರದೇಶಗಳಲ್ಲಿ ಸ್ಥಿರತೆ

ಗ್ರಾಮೀಣ ಯುಆರ್ (UR) ದಾಖಲೆಇಲ್ಲಿ ಇಳಿಕೆ

ಪ್ರಕಟಣಾ ದಿನಾಂಕ: 15 SEP 2026 4:00PM by PIB Bengaluru

 

ಸಂಕ್ಷಿಪ್ತ ನೋಟ:

  • ಒಟ್ಟಾರೆ ಎಲ್‌ಎಫ್‌ಪಿಆರ್ (15+ ವರ್ಷಗಳು) 2026 ಜುಲೈನಲ್ಲಿ ಶೇಕಡಾ 55.4 ಇತ್ತು, ಇದು 2026 ಆಗಸ್ಟ್‌ನಲ್ಲಿ ಶೇಕಡಾ 55.6 ಕ್ಕೆ ಏರಿಕೆಯಾಗಿದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಎಫ್‌ಪಿಆರ್ (15+ ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನವರು) 2026 ಆಗಸ್ಟ್‌ನಲ್ಲಿ ಶೇಕಡಾ 58.2 ರಷ್ಟಿದ್ದು, 2025 ಆಗಸ್ಟ್‌ಗೆ ಹೋಲಿಸಿದರೆ 1.2 ಶೇಕಡಾವಾರು ಅಂಶಗಳ ಹೆಚ್ಚಳವನ್ನು ದಾಖಲಿಸಿದೆ.
  • ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ (15+ ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನವರು) 2026 ಆಗಸ್ಟ್‌ನಲ್ಲಿ ಶೇಕಡಾ 34.8 ರಷ್ಟಿದ್ದು, 2025 ಆಗಸ್ಟ್‌ನಲ್ಲಿ ದಾಖಲಾದ ಮಟ್ಟಕ್ಕಿಂತ 1.1 ಶೇಕಡಾವಾರು ಅಂಶಗಳಷ್ಟು ಹೆಚ್ಚಾಗಿದೆ.
  • ಒಟ್ಟಾರೆ ಡಬ್ಲ್ಯೂಪಿಆರ್ (15+ ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನವರು) 2026 ಆಗಸ್ಟ್‌ನಲ್ಲಿ ಶೇಕಡಾ 52.8 ಕ್ಕೆ ಏರಿದ್ದು, ಇದು 2026 ಮಾರ್ಚ್‌ನ ನಂತರ ದಾಖಲಾದ ಗರಿಷ್ಠ ಮಟ್ಟವಾಗಿದೆ.
  • ಗ್ರಾಮೀಣ ಡಬ್ಲ್ಯೂಪಿಆರ್ (15+ ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನವರು) 2026 ಆಗಸ್ಟ್‌ನಲ್ಲಿ ವರ್ಷದಿಂದ ವರ್ಷಕ್ಕೆ 1.3 ಶೇಕಡಾವಾರು ಅಂಶಗಳಷ್ಟು ಹೆಚ್ಚಾಗಿ ಶೇಕಡಾ 55.8 ಕ್ಕೆ ತಲುಪಿದೆ.
  • ಒಟ್ಟಾರೆ ಯುಆರ್ (15+ ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನವರು) 2026 ಆಗಸ್ಟ್‌ನಲ್ಲಿ ಶೇಕಡಾ 5.0 ರಷ್ಟಿದ್ದು ಸ್ಥಿರವಾಗಿ ಉಳಿದಿದೆ.
  • ಗ್ರಾಮೀಣ ಯುಆರ್ 2026 ಆಗಸ್ಟ್‌ನಲ್ಲಿ ಶೇಕಡಾ 4.1 ಕ್ಕೆ ಇಳಿಕೆಯಾಗಿದ್ದು, ಇದು 2026 ಜನವರಿಯ ನಂತರ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ.

A. ಪೀಠಿಕೆ

ಎನ್‌ಎಸ್‌ಒ (NSO), ಎಂಒಎಸ್‌ಪಿಐ (MoSPI) ನಡೆಸುವ ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆಯು (PLFS) ಜನಸಂಖ್ಯೆಯ ಚಟುವಟಿಕೆಯ ಭಾಗಿತ್ವ ಹಾಗೂ ಉದ್ಯೋಗ ಮತ್ತು ನಿರುದ್ಯೋಗ ಪರಿಸ್ಥಿತಿಗಳ ಮೇಲಿನ ದತ್ತಾಂಶದ ಪ್ರಾಥಮಿಕ ಮೂಲವಾಗಿದೆ. ದೇಶದ ಕಾರ್ಮಿಕ ಬಲದ ಸೂಚಕಗಳ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು ಪಿಎಲ್‌ಎಫ್‌ಎಸ್ ಸಮೀಕ್ಷಾ ಕಾರ್ಯವಿಧಾನವನ್ನು 2025 ರ ಜನವರಿಯಿಂದ ಮಾರ್ಪಡಿಸಲಾಗಿದೆ.

ಪಿಎಲ್‌ಎಫ್‌ಎಸ್‌ನ ಮಾಸಿಕ ಫಲಿತಾಂಶಗಳನ್ನು ಮಾಸಿಕ ಬುಲೆಟಿನ್‌ಗಳ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದು ಪ್ರಸ್ತುತ ವಾರದ ಸ್ಥಿತಿ (CWS) ವಿಧಾನವನ್ನು ಅನುಸರಿಸಿ ಅಖಿಲ ಭಾರತ ಮಟ್ಟದಲ್ಲಿ ಕಾರ್ಮಿಕ ಬಲ ಭಾಗಿತ್ವ ದರ (LFPR), ಕಾರ್ಮಿಕ ಜನಸಂಖ್ಯೆ ಅನುಪಾತ (WPR) ಮತ್ತು ನಿರುದ್ಯೋಗ ದರ (UR) ಎಂಬ ಪ್ರಮುಖ ಕಾರ್ಮಿಕ ಮಾರುಕಟ್ಟೆ ಸೂಚಕಗಳ ಅಂದಾಜುಗಳನ್ನು ಪ್ರಸ್ತುತಪಡಿಸುತ್ತದೆ.

2025 ರ ಏಪ್ರಿಲ್‌ನಿಂದ 2026 ರ ಜುಲೈವರೆಗಿನ ಮಾಸಿಕ ಬುಲೆಟಿನ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 2026 ರ ಆಗಸ್ಟ್‌ನ ಈ ಮಾಸಿಕ ಬುಲೆಟಿನ್ ಸರಣಿಯ ಹದಿನೇಳನೇ ಬುಲೆಟಿನ್ ಆಗಿದೆ.

ಸಿಡಬ್ಲ್ಯೂಎಸ್ (CWS) ಅನುಸರಿಸಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಪ್ರಮುಖ ಸಂಶೋಧನೆಗಳು:

· ಕಾರ್ಮಿಕ ಬಲ ಭಾಗಿತ್ವ ದರ (LFPR) ಬಲವರ್ಧನೆ:

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಕಾರ್ಮಿಕ ಬಲ ಭಾಗಿತ್ವ ದರವು (LFPR) 2026 ರ ಜುಲೈನಲ್ಲಿ ಶೇಕಡಾ 55.4 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 55.6 ಕ್ಕೆ ಏರಿಕೆಯಾಗಿದೆ. ಇದೇ ರೀತಿಯ ಪ್ರವೃತ್ತಿಯು ಗ್ರಾಮೀಣ ಪ್ರದೇಶಗಳಲ್ಲೂ ಕಂಡುಬಂದಿದ್ದು, ಅಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಎಲ್‌ಎಫ್‌ಪಿಆರ್ 2026 ರ ಜುಲೈನಲ್ಲಿ ಶೇಕಡಾ 58.0 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 58.2 ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶಗಳಲ್ಲಿ, ಹಿಂದಿನ ತಿಂಗಳಿಗೆ ಹೋಲಿಸಿದರೆ ಎಲ್‌ಎಫ್‌ಪಿಆರ್ 2026 ರ ಆಗಸ್ಟ್‌ನಲ್ಲಿ ಶೇಕಡಾ 50.4 ರಷ್ಟಿದ್ದು ಸ್ಥಿರವಾಗಿ ಉಳಿದಿದೆ.

ಹಿಂದಿನ ವರ್ಷದ ಅನುರೂಪ ತಿಂಗಳಿಗೆ ಹೋಲಿಸಿದರೆ, ಒಟ್ಟಾರೆ ಎಲ್‌ಎಫ್‌ಪಿಆರ್ 2025 ರ ಆಗಸ್ಟ್‌ನ ಶೇಕಡಾ 55.0 ರಿಂದ 2026 ರ ಆಗಸ್ಟ್‌ನಲ್ಲಿ ಶೇಕಡಾ 55.6 ಕ್ಕೆ 0.6 ಶೇಕಡಾವಾರು ಅಂಶದಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ, ಗ್ರಾಮೀಣ ಎಲ್‌ಎಫ್‌ಪಿಆರ್ ಸಹ ಶೇಕಡಾ 57.0 ರಿಂದ ಶೇಕಡಾ 58.2 ಕ್ಕೆ 1.2 ಶೇಕಡಾವಾರು ಅಂಶಗಳಷ್ಟು ಹೆಚ್ಚಾಗಿದೆ, ಆದರೆ ನಗರ ಎಲ್‌ಎಫ್‌ಪಿಆರ್ ಶೇಕಡಾ 50.9 ರಿಂದ ಶೇಕಡಾ 50.4 ಕ್ಕೆ 0.5 ಶೇಕಡಾವಾರು ಅಂಶದಷ್ಟು ಅಲ್ಪ ಪ್ರಮಾಣದ ಇಳಿಕೆಯನ್ನು ಕಂಡಿದೆ.

.

ಗ್ರಾಮೀಣ ಎಲ್‌ಎಫ್‌ಪಿಆರ್ ಕಳೆದ ವರ್ಷದ ಅನುರೂಪ ತಿಂಗಳಿಗೆ ಹೋಲಿಸಿದರೆ 1.2 ಶೇಕಡಾವಾರು ಅಂಶಗಳ ಹೆಚ್ಚಳವನ್ನು ದಾಖಲಿಸಿದ್ದು, 2026 ರ ಆಗಸ್ಟ್‌ನಲ್ಲಿ ಶೇಕಡಾ 58.2 ಅನ್ನು ತಲುಪಿದೆ.

· ಮಹಿಳಾ ಕಾರ್ಮಿಕ ಬಲ ಭಾಗಿತ್ವವು ಏರಿಕೆಯ ವೇಗವನ್ನು ಪ್ರದರ್ಶಿಸುತ್ತಿದೆ:

ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ 2026 ರ ಜುಲೈನಲ್ಲಿ ಶೇಕಡಾ 34.4 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 34.8 ಕ್ಕೆ ಸಾಧಾರಣ ಏರಿಕೆಯನ್ನು ಕಂಡಿದೆ. ಪ್ರಮುಖವಾಗಿ ಗ್ರಾಮೀಣ ಮಹಿಳಾ ಎಲ್‌ಎಫ್‌ಪಿಆರ್ ಇದಕ್ಕೆ ಕೊಡುಗೆ ನೀಡಿದ್ದು, ಇದು ಪ್ರಸ್ತುತ ತಿಂಗಳಿನಲ್ಲಿ ಶೇಕಡಾ 39.4 ಕ್ಕೆ ಏರಿದೆ (ಹಿಂದಿನ ತಿಂಗಳಲ್ಲಿ ಶೇಕಡಾ 38.8 ದಾಖಲಾಗಿತ್ತು). ಇದೇ ಅವಧಿಯಲ್ಲಿ, ನಗರ ಪ್ರದೇಶಗಳಲ್ಲಿನ ಮಹಿಳಾ ಎಲ್‌ಎಫ್‌ಪಿಆರ್ 2026 ರ ಜುಲೈನಲ್ಲಿ ಕಂಡುಬಂದ ಶೇಕಡಾ 25.3 ಕ್ಕೆ ಹೋಲಿಸಿದರೆ ಶೇಕಡಾ 25.4 ರಷ್ಟಿದ್ದು ವ್ಯಾಪಕವಾಗಿ ಸ್ಥಿರವಾಗಿದೆ.

ವರ್ಷದ ಅವಧಿಯಲ್ಲಿ, ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ 2025 ರ ಆಗಸ್ಟ್‌ನ ಶೇಕಡಾ 33.7 ರಿಂದ 2026 ರ ಆಗಸ್ಟ್‌ನಲ್ಲಿ ಶೇಕಡಾ 34.8 ಕ್ಕೆ ಅಂದರೆ, ಶೇಕಡಾವಾರು 1.1 ಅಂಶಗಳಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಎಲ್‌ಎಫ್‌ಪಿಆರ್ ಶೇಕಡಾ 37.4 ರಿಂದ ಶೇಕಡಾ 39.4 ಕ್ಕೆ, 2.0 ಶೇಕಡಾವಾರು ಅಂಶಗಳಷ್ಟು ಹೆಚ್ಚಾಗಿದ್ದರೆ, ನಗರ ಮಹಿಳಾ ಎಲ್‌ಎಫ್‌ಪಿಆರ್ ಶೇಕಡಾ 26.1 ರಿಂದ ಶೇಕಡಾ 25.4 ಕ್ಕೆ 0.7 ಶೇಕಡಾವಾರು ಅಂಶದಷ್ಟು ಇಳಿಕೆಯಾಗಿದೆ.

.

ಒಟ್ಟಾರೆ ಮಹಿಳಾ ಎಲ್‌ಎಫ್‌ಪಿಆರ್ ಸತತ ಎರಡನೇ ತಿಂಗಳಿನಲ್ಲಿ ಹೆಚ್ಚಾಗಿದ್ದು, 2026 ರ ಆಗಸ್ಟ್‌ನಲ್ಲಿ ಶೇಕಡಾ 34.8 ಅನ್ನು ತಲುಪಿದೆ.

· ಲಿಂಗಾಧಾರಿತವಾಗಿ ಗ್ರಾಮೀಣ ಉದ್ಯೋಗಪಡೆಯ ಭಾಗಿತ್ವದಲ್ಲಿ ಏರಿಕೆ:

ಒಟ್ಟಾರೆ ಡಬ್ಲ್ಯೂಪಿಆರ್ (WPR) 2026 ರ ಜುಲೈನಲ್ಲಿ ಶೇಕಡಾ 52.5 ಇತ್ತು, ಇದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಪಡೆ ಭಾಗಿತ್ವದ ಹೆಚ್ಚಳದಿಂದಾಗಿ 2026 ರ ಆಗಸ್ಟ್‌ನಲ್ಲಿ ಶೇಕಡಾ 52.8 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಡಬ್ಲ್ಯೂಪಿಆರ್ 2026 ರ ಆಗಸ್ಟ್‌ನಲ್ಲಿ ಶೇಕಡಾ 55.8ಕ್ಕೆ ಏರಿದೆ (ಹಿಂದಿನ ತಿಂಗಳಲ್ಲಿ ಶೇಕಡಾ 55.4 ದಾಖಲಾಗಿತ್ತು), ಆದರೆ ನಗರ ಡಬ್ಲ್ಯೂಪಿಆರ್ 2026 ರ ಜುಲೈನಲ್ಲಿ ಕಂಡುಬಂದಂತೆಯೇ 2026 ರ ಆಗಸ್ಟ್‌ನಲ್ಲೂ ಶೇಕಡಾ 47.0 ರಷ್ಟಿದ್ದು ಅದೇ ಮಟ್ಟವನ್ನು ಕಾಯ್ದುಕೊಂಡಿದೆ.

ಒಟ್ಟಾರೆ ಡಬ್ಲ್ಯೂಪಿಆರ್ ಕಳೆದ ವರ್ಷದ ಅನುರೂಪ ತಿಂಗಳಿಗೆ ಹೋಲಿಸಿದರೆ (2025 ರ ಆಗಸ್ಟ್‌ನ ಶೇಕಡಾ 52.2 ರಿಂದ 2026 ರ ಆಗಸ್ಟ್‌ನಲ್ಲಿ ಶೇಕಡಾ 52.8 ಕ್ಕೆ) 0.6 ಶೇಕಡಾವಾರು ಅಂಶದಷ್ಟು ಹೆಚ್ಚಳವನ್ನು ತೋರಿಸುತ್ತಿದೆ. ಇದೇ ಅವಧಿಯಲ್ಲಿ, ಗ್ರಾಮೀಣ ಡಬ್ಲ್ಯೂಪಿಆರ್ ಶೇಕಡಾ 54.5 ರಿಂದ ಶೇಕಡಾ 55.8 ಕ್ಕೆ 1.3 ಶೇಕಡಾವಾರು ಅಂಶಗಳಷ್ಟು ಹೆಚ್ಚಾಗಿದೆ, ಆದರೆ 2025 ರ ಆಗಸ್ಟ್‌ನ ಶೇಕಡಾ 47.5 ಕ್ಕೆ ಹೋಲಿಸಿದರೆ 2026 ರ ಆಗಸ್ಟ್‌ನಲ್ಲಿ ನಗರ ಡಬ್ಲ್ಯೂಪಿಆರ್ ಶೇಕಡಾ 47.0 ರಷ್ಟಿದ್ದು 0.5 ಶೇಕಡಾವಾರು ಅಂಶದಷ್ಟು ಇಳಿಕೆಯನ್ನು ಕಂಡಿದೆ.

.
 

ವರ್ಷದಿಂದ ವರ್ಷದ ಹೋಲಿಕೆಯು, ಒಟ್ಟಾರೆ ಮಹಿಳಾ ಡಬ್ಲ್ಯೂಪಿಆರ್‌ನಲ್ಲಿ ಹೆಚ್ಚಳವನ್ನು ಸೂಚಿಸುತ್ತದೆ, ಇದು 2025 ರ ಆಗಸ್ಟ್‌ನಲ್ಲಿ ದಾಖಲಾದ ಶೇಕಡಾ 32.0 ರಿಂದ 2026 ರ ಆಗಸ್ಟ್‌ನಲ್ಲಿ ಶೇಕಡಾ 33.0 ಕ್ಕೆ ಏರಿದೆ.

· ಗ್ರಾಮೀಣ ನಿರುದ್ಯೋಗ ದರ (UR) ಇಳಿಕೆ:

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಒಟ್ಟಾರೆ ಯುಆರ್ 2026 ರ ಜುಲೈನಲ್ಲಿ ಶೇಕಡಾ 5.1 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 5.0 ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ, ಗ್ರಾಮೀಣ ಯುಆರ್ ಶೇಕಡಾ 4.5 ರಿಂದ ಶೇಕಡಾ 4.1 ಕ್ಕೆ ಕಡಿಮೆಯಾಗಿದೆ, ಆದರೆ ನಗರ ಯುಆರ್ 2026 ರ ಜುಲೈನಲ್ಲಿ ಶೇಕಡಾ 6.7 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 6.8 ಕ್ಕೆ ತಲುಪಿ ಸರಿಸುಮಾರು ಸ್ಥಿರವಾಗಿದೆ.

2025 ರ ಆಗಸ್ಟ್‌ಗೆ ಹೋಲಿಸಿದರೆ, 2026 ರ ಆಗಸ್ಟ್‌ನಲ್ಲಿ ಒಟ್ಟಾರೆ ಯುಆರ್ ಮತ್ತು ನಗರ ಯುಆರ್ ವ್ಯಾಪಕವಾಗಿ ಸ್ಥಿರವಾಗಿದ್ದವು, ಆದರೆ ಗ್ರಾಮೀಣ ಯುಆರ್ 2025 ರ ಆಗಸ್ಟ್‌ನ ಶೇಕಡಾ 4.3 ರಿಂದ 2026 ರ ಆಗಸ್ಟ್‌ನಲ್ಲಿ ಶೇಕಡಾ 4.1 ಕ್ಕೆ 0.2 ಶೇಕಡಾವಾರು ಅಂಶದಷ್ಟು ಇಳಿಕೆಯಾಗಿದೆ.

.

2026 ರ ಜನವರಿಯ ನಂತರ, ಗ್ರಾಮೀಣ ಯುಆರ್ 2026 ರ ಆಗಸ್ಟ್‌ನಲ್ಲಿ ತನ್ನ ಅತ್ಯಂತ ಕನಿಷ್ಠ ಮಟ್ಟವಾದ ಶೇಕಡಾ 4.1 ಅನ್ನು ದಾಖಲಿಸಿದೆ.

· ಲಿಂಗಾಧಾರಿತವಾಗಿ ಗ್ರಾಮೀಣ ಯುಆರ್ ಇಳಿಕೆ

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ, ಒಟ್ಟಾರೆ ಯುಆರ್,  ಸತತ ಮೂರು ತಿಂಗಳುಗಳಿಂದ ಇಳಿಕೆಯಾಗುತ್ತಿದ್ದು, 2026 ರ ಮೇ ತಿಂಗಳಲ್ಲಿ ಶೇಕಡಾ 5.4 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 4.9 ಕ್ಕೆ ತಲುಪಿದೆ. ಗ್ರಾಮೀಣ ಪುರುಷರ ಯುಆರ್ 2026 ರ ಜುಲೈ ತಿಂಗಳಲ್ಲಿ ಶೇಕಡಾ 4.6 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 4.3 ಕ್ಕೆ ಇಳಿಕೆಯಾಗಿದೆ, ಆದರೆ ಇದೇ ಅವಧಿಯಲ್ಲಿ ನಗರ ಪುರುಷರ ಯುಆರ್ ಶೇಕಡಾ 5.9 ರಿಂದ ಶೇಕಡಾ 6.1 ಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ, ಒಟ್ಟಾರೆ ಯುಆರ್ ಸತತ ಎರಡು ತಿಂಗಳುಗಳಲ್ಲಿ ಇಳಿಕೆಯಾಗಿದ್ದು, 2026 ರ ಜೂನ್‌ನ ಶೇಕಡಾ 5.9 ರಿಂದ 2026 ರ ಆಗಸ್ಟ್‌ನಲ್ಲಿ ಶೇಕಡಾ 5.1 ಕ್ಕೆ ತಲುಪಿದೆ. ಗ್ರಾಮೀಣ ಮಹಿಳಾ ಯುಆರ್ 2026 ರ ಜುಲೈನಲ್ಲಿ ಶೇಕಡಾ 4.3 ಇತ್ತು, ಇದು 2026 ರ ಆಗಸ್ಟ್‌ನಲ್ಲಿ ಶೇಕಡಾ 3.9 ಕ್ಕೆ ಕಡಿಮೆಯಾಗಿದೆ, ಆದರೆ ನಗರ ಮಹಿಳಾ ಯುಆರ್ ಹಿಂದಿನ ತಿಂಗಳಿಗೆ ಹೋಲಿಸಿದರೆ ವ್ಯಾಪಕವಾಗಿ ಸ್ಥಿರವಾಗಿದೆ.

ವರ್ಷದಿಂದ ವರ್ಷದ ಹೋಲಿಕೆಯು 2026 ರ ಆಗಸ್ಟ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಬ್ಬರ ಒಟ್ಟಾರೆ ಯುಆರ್ ವ್ಯಾಪಕವಾಗಿ ಬದಲಾಗದೆ ಉಳಿದಿದೆ ಎಂಬುದನ್ನು ತೋರಿಸುತ್ತದೆ.

.

.

2026 ರ ಜುಲೈಗೆ ಹೋಲಿಸಿದರೆ 2026ರ ಆಗಸ್ಟ್‌ನಲ್ಲಿ ಒಟ್ಟಾರೆ ಪುರುಷ ಮತ್ತು ಮಹಿಳಾ ಯುಆರ್ ಇಳಿಕೆಯಾಗಿದೆ.

ಅಖಿಲ ಭಾರತ ಮಟ್ಟದಲ್ಲಿ, ಮಾಸಿಕ ಅಂದಾಜುಗಳನ್ನು ಒಟ್ಟು 3,70,160 ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳು: 2,11,353

ನಗರ ಪ್ರದೇಶಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವ್ಯಕ್ತಿಗಳು:
1,58,807

2026 ರ ಆಗಸ್ಟ್‌ನ ಮಾಸಿಕ ಬುಲೆಟಿನ್, ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://www.mospi.gov.in) ಲಭ್ಯವಿದೆ.

ಎಂಒಎಸ್‌ಪಿಐ (MoSPI) ಪ್ರಕಟಣೆಗಳು/ವರದಿಗಳನ್ನು ಪಡೆಯಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.

.

 

 

***** 


(ಪ್ರಕಟಣೆ ಐ.ಡಿ.: 2310522) ವಿಸಿಟರ್ ಕೌಂಟರ್ : 28
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी