ಪ್ರಧಾನ ಮಂತ್ರಿಯವರ ಕಛೇರಿ
ಬ್ರಿಕ್ಸ್ ಶೃಂಗಸಭೆಗೂ ಮುನ್ನ ಸಕಾರಾತ್ಮಕ ಮತ್ತು ಅರ್ಥಪೂರ್ಣ ಸಂವಾದದ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
11 SEP 2026 9:00AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ದಿನಗಳಲ್ಲಿ ಬ್ರಿಕ್ಸ್ ಶೃಂಗಸಭೆಗೆ ವಿಶ್ವದಾದ್ಯಂತದ ನಾಯಕರು ಸೇರಲಿದ್ದಾರೆ ಎಂದು ಹೇಳಿದರು. ಜಗತ್ತಿನ ಕಲ್ಯಾಣದ ಆಕಾಂಕ್ಷೆಯಿಂದ ಮಾರ್ಗದರ್ಶಿಸಲ್ಪಟ್ಟ ವಿವಿಧ ವಿಷಯಗಳ ಕುರಿತು ಶೃಂಗಸಭೆಯು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ಸಾಕ್ಷಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಈ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು-
“सद्भिरेव सहासीत सद्भिः कुर्वीत सङ्गतिम्।
सद्भिर्विवादं मैत्रीं च नासद्भिः किंचिदाचरेत्॥”
ಒಬ್ಬ ವ್ಯಕ್ತಿಯು ಸದಾ ಸಜ್ಜನರ ನಡುವೆ ವಾಸಿಸಬೇಕು ಮತ್ತು ಅವರ ಸಹವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಈ ಸುಭಾಷಿತವು ತಿಳಿಸುತ್ತದೆ. ಸಜ್ಜನರೊಂದಿಗೆ ಸಮಾಲೋಚನೆ ನಡೆಸಿ ಸ್ನೇಹಪರ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು; ಏಕೆಂದರೆ ಪರಸ್ಪರ ಸದ್ಭಾವನೆ, ಸಂವಾದ ಮತ್ತು ಸ್ನೇಹಪರ ಸಂಬಂಧಗಳು ಶಾಂತಿ ಹಾಗೂ ಸಹಕಾರವನ್ನು ಬಲವರ್ಧನೆಗೊಳಿಸುತ್ತವೆ.
ಪ್ರಧಾನಮಂತ್ರಿ ಅವರು ತಮ್ಮ 'ಎಕ್ಸ್' ನಲ್ಲಿ ಹೀಗೆ ಬರೆದಿದ್ದಾರೆ:
"ಮುಂದಿನ ಕೆಲವು ದಿನಗಳಲ್ಲಿ ಜಗತ್ತಿನಾದ್ಯಂತದ ನಾಯಕರು ಬ್ರಿಕ್ಸ್ ಶೃಂಗಸಭೆಗೆ ಸೇರುತ್ತಾರೆ. ಲೋಕ ಕಲ್ಯಾಣದ ಆಶಯದೊಂದಿಗೆ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಕುರಿತು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆಯಲಿವೆ ಎಂಬ ಸಂಪೂರ್ಣ ವಿಶ್ವಾಸವಿದೆ.
सद्भिरेव सहासीत सद्भिः कुर्वीत सङ्गतिम्।
सद्भिर्विवादं मैत्रीं च नासद्भिः किंचिदाचरेत्॥”
*****
(ಪ್ರಕಟಣೆ ಐ.ಡಿ.: 2309059)
ವಿಸಿಟರ್ ಕೌಂಟರ್ : 8