ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಆಶೋತ್ತರ ಜಿಲ್ಲೆಯಿಂದ ಶೈಕ್ಷಣಿಕ ಶ್ರೇಷ್ಠತೆಯತ್ತ: ಹೇಗೆ ಎನ್ ಎಫ್ ಎಸ್ ಸಿ ನೆರವು ಡಾ. ಅಬಿನಾಶ್ ಮಂಡಲ್ ಅವರನ್ನು ಸಬಲೀಕರಣಗೊಳಿಸಿತು
ಪ್ರಕಟಣಾ ದಿನಾಂಕ:
07 SEP 2026 1:08PM by PIB Bengaluru
ಆರ್ಥಿಕ ಮಿತಿಗಳು ಮತ್ತು ಭೌಗೋಳಿಕ ಅನಾನುಕೂಲತೆಗಳು ಶೈಕ್ಷಣಿಕ ಅವಕಾಶಗಳಿಗೆ ಪ್ರವೇಶವನ್ನು ನಿರ್ಬಂಧಿಸಿದಾಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಂಶೋಧಕರಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸುವುದು ಕಷ್ಟಕರವಾಗಿರುತ್ತದೆ. ಸಮಯೋಚಿತ ಫೆಲೋಶಿಪ್ ಬೆಂಬಲವು ಸಂಶೋಧನೆಯನ್ನು ಮುಂದುವರಿಸಲು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅರ್ಥಪೂರ್ಣ ವೃತ್ತಿಜೀವನ ರೂಪಿಸಿಕೊಳ್ಳಲು ಅಗತ್ಯವಾದ ಸ್ಥಿರತೆಯನ್ನು ಒದಗಿಸುತ್ತದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ (ಎನ್ ಎಫ್ ಎಸ್ ಸಿ) ಯೋಜನೆಯ ಪರಿಣಾಮವನ್ನು ವಿವರಿಸಿದ ಅಸ್ಸಾಂನ ಉದಲ್ಗುರಿಯ 33 ವರ್ಷದ ವಿದ್ವಾಂಸ ಡಾ. ಅಬಿನಾಶ್ ಮಂಡಲ್, ಪಾಂಡಿಚೇರಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಗಳಿಸಲು ಸಾಮಾಜಿಕ-ಆರ್ಥಿಕ ಮತ್ತು ಭೌಗೋಳಿಕ ಅಡೆತಡೆಗಳನ್ನು ನಿವಾರಿಸಿಕೊಂಡರು.
ಆಶೋತ್ತರ ಜಿಲ್ಲೆಯಿಂದ ಬಂದ ಡಾ. ಮಂಡಲ್ ಗಣನೀಯ ಆರ್ಥಿಕ ಅಡೆತಡೆಗಳನ್ನು ಮತ್ತು ಶೈಕ್ಷಣಿಕ ಅವಕಾಶಗಳನ್ನು ಮುಂದುವರಿಸಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ದೂರದ ಮತ್ತು ಅಭಿವೃದ್ಧಿಯಾಗದ ಜಿಲ್ಲೆಯಲ್ಲಿ ವಾಸಿಸುವುದರೊಂದಿಗೆ ಸಂಬಂಧಿಸಿದ ಭೌಗೋಳಿಕ ಅನಾನುಕೂಲಗಳು ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳು, ಸಂಶೋಧನಾ ಮಾನ್ಯತೆ ಮತ್ತು ಉನ್ನತ ಅಧ್ಯಯನಗಳಿಗೆ ಅವಕಾಶಗಳಿಗೆ ಅವರ ಪ್ರವೇಶವನ್ನು ಮತ್ತಷ್ಟು ನಿರ್ಬಂಧಿಸಿದವು.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿದ ಅವರು ತಮ್ಮಸಮಾಜದ ಅಂಚಿನಲ್ಲಿರುವ ಹಿನ್ನೆಲೆಗೆ ಸಂಬಂಧಿಸಿದ ಸಾಮಾಜಿಕ ಅಡೆತಡೆಗಳನ್ನು ಸಹ ಎದುರಿಸಿದರು. ಒಟ್ಟಾರೆ ಈ ಸವಾಲುಗಳು ಡಾಕ್ಟರೇಟ್ ಸಂಶೋಧನೆಯನ್ನು ವಿಶೇಷವಾಗಿ ಕಠಿಣವಾಗಿಸಿತು. ಆದರೂ ಅವರ ದೃಢನಿಶ್ಚಯ, ಪರಿಶ್ರಮ ಮತ್ತು ಶಿಕ್ಷಣದ ಬಗೆಗಿನ ಬದ್ಧತೆಯು ಶೈಕ್ಷಣಿಕ ಶ್ರೇಷ್ಠತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ಅವರಿಗೆ ಅನುವು ಮಾಡಿಕೊಟ್ಟಿತು.
ಡಾ. ಮಂಡಲ್ ಅವರು ಉನ್ನತ ಮಟ್ಟದ ಶೈಕ್ಷಣಿಕ ಅರ್ಹತೆಯನ್ನು ಪಡೆಯಲು ಮತ್ತು ವಾಣಿಜ್ಯ ಮತ್ತು ವಿಧಿವಿಜ್ಞಾನ ಲೆಕ್ಕಪತ್ರ ಕ್ಷೇತ್ರಗಳಿಗೆ ಅರ್ಥಪೂರ್ಣ ಕೊಡುಗೆ ನೀಡಲು ಆಶಿಸಿದರು. ಅವರ ದೀರ್ಘಕಾಲೀನ ಗುರಿ ಬೋಧನೆ, ಸಂಶೋಧನೆ ಮತ್ತು ಜ್ಞಾನ ಸೃಷ್ಟಿಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ವಂಚಿತ ಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ವೃತ್ತಿಜೀವನವನ್ನು ಮುಂದುವರಿಸಲು ಉತ್ತೇಜನ ನೀಡುವುದಾಗಿದೆ.
ಶಿಕ್ಷಣ ಸಂಸ್ಥೆಗಳು ಒದಗಿಸಿದ ಅವಕಾಶಗಳೊಂದಿಗೆ ಅವರ ಕುಟುಂಬದ ಪ್ರೋತ್ಸಾಹವು ಅವರಿಗೆ ಪರಿಶ್ರಮದ ಆತ್ಮವಿಶ್ವಾಸವನ್ನು ನೀಡಿತು. 2020 ರಿಂದ 2024 ರವರೆಗಿನ ಅವಧಿಗೆ ಎನ್ ಎಫ್ ಎಸ್ ಸಿ ಯೋಜನೆಯಡಿಯಲ್ಲಿ ಅವರು ನೆರವನ್ನು ಪಡೆದಿದ್ದ ಅವರ ಜೀವನದಲ್ಲಿ ನಿರ್ಣಾಯಕ ತಿರುವು ಪಡೆಯಲು ಕಾರಣವಾಯಿತು.
ಈ ಯೋಜನೆಯು ಅವರಿಗೆ ಜೂನಿಯರ್ ರಿಸರ್ಚ್ ಫೆಲೋ (ಜೆಆರ್ ಎಫ್) ಆಗಿ ಮಾಸಿಕ 37,000 ರೂ. ಫೆಲೋಶಿಪ್ ಅನ್ನು ಒದಗಿಸಿತು, ನಂತರ ಅವರು ಹಿರಿಯ ರಿಸರ್ಚ್ ಫೆಲೋ (ಎಸ್ ಆರ್ ಎಫ್) ಗೆ ಬಡ್ತಿ ಪಡೆದ ನಂತರ ಅದನ್ನು ತಿಂಗಳಿಗೆ 42,000 ರೂ.ಗೆ ಹೆಚ್ಚಿಸಲಾಯಿತು. ಈ ನಿರಂತರ ಸಹಾಯವು ಆರ್ಥಿಕ ಸಂಕಷ್ಟದ ಹೊರೆಯಿಲ್ಲದೆ ಪೂರ್ಣ ಪ್ರಮಾಣದಲ್ಲಿ ಡಾಕ್ಟರೇಟ್ ಸಂಶೋಧನೆಯನ್ನು ಕೈಗೊಳ್ಳಲು ಅವರಿಗೆ ಅವಕಾಶ ಮಾಡಿಕೊಟ್ಟಿತು.

ಈ ಫೆಲೋಶಿಪ್ ಅವರ ಕುಟುಂಬದ ಸಂಪನ್ಮೂಲಗಳ ಮೇಲಿನ ಅವಲಂಬನೆ ತಗ್ಗಿಸಿತು ಮತ್ತು ಗುಣಮಟ್ಟದ ಸಂಶೋಧನಾ ಸಾಮಗ್ರಿಗಳನ್ನು ಪಡೆಯಲು, ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸಲು ಮತ್ತು ವಿದ್ವತ್ಪೂರ್ಣ ಪ್ರಕಟಣೆಯ ಅವಕಾಶಗಳನ್ನು ಪಡೆಯಲು ಅವರಿಗೆ ಅವಕಾಶ ಮಾಡಿಕೊಟ್ಟಿತು. ಪರಿಣಾಮವಾಗಿ ಉಂಟಾದ ಆರ್ಥಿಕ ಸ್ಥಿರತೆಯು ಅವರ ಸಂಶೋಧನೆ ಮತ್ತು ಶೈಕ್ಷಣಿಕ ಅವಶ್ಯಕತೆಗಳ ಮೇಲೆ ಗಮನಹರಿಸಲು ಹೆಚ್ಚಿನ ಅವಕಾಶ ಮಾಡಿಕೊಟ್ಟಿತು.
ಈ ಯೋಜನೆಯಡಿಯಲ್ಲಿ ಬೆಂಬಲದೊಂದಿಗೆ, ಡಾ. ಮಂಡಲ್ ಜೆಆರ್ ಎಫ್ ನಿಂದ ಎಸ್ ಆರ್ ಎಫ್ ಗೆ ಯಶಸ್ವಿಯಾಗಿ ಪ್ರಗತಿ ಸಾಧಿಸಿದರು ಮತ್ತು ಅವರ ಪಿಎಚ್‌ಡಿ ಪೂರ್ಣಗೊಳಿಸಿದರು. ಈ ಅವಧಿಯಲ್ಲಿ ಅವರ ಸಂಶೋಧನಾ ಸಾಮರ್ಥ್ಯಗಳು ಬಲಗೊಂಡವು, ಇದರ ಪರಿಣಾಮವಾಗಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಣೆಗಳು ಮತ್ತು ಐಐಎಂ ಬೋಧ್ ಗಯಾ, ಐಐಎಂ ಇಂದೋರ್ ಮತ್ತು ಐಐಟಿ ದೆಹಲಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಮಂಡಿಸಲು ಅವಕಾಶ ದೊರೆತವು.
ಈ ಫೆಲೋಶಿಪ್ ಅವರ ಡಾಕ್ಟರೇಟ್ ಅಧ್ಯಯನದ ಸಮಯದಲ್ಲಿ ಅವರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಿತು ಮತ್ತು ಅವರ ಪಿಎಚ್‌ಡಿ ಪೂರ್ಣಗೊಂಡ ನಂತರ ಉತ್ತಮ ವೃತ್ತಿ ಅವಕಾಶಗಳನ್ನು ತೆರೆದುಕೊಂಡವು. ಆರ್ಥಿಕವಾಗಿ ನಿರ್ಬಂಧಿತ ಶೈಕ್ಷಣಿಕ ಪ್ರಯಾಣದಿಂದ ಉನ್ನತ ಶಿಕ್ಷಣದಲ್ಲಿ ವೃತ್ತಿಪರ ಪಾತ್ರಕ್ಕೆ ಹೋಗಲು ಇದು ಅವರಿಗೆ ಅಗತ್ಯ ಭದ್ರ ಬುನಾದಿ ಹಾಕಿಕೊಟ್ಟಿತು.
ಡಾ. ಮಂಡಲ್ ಅವರು ಇಂದು ಪಾಂಡಿಚೇರಿ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಅತಿಥಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅಲ್ಲಿ ಅವರು ಬೋಧನೆ, ಸಂಶೋಧನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಾರೆ. ಅನುಕೂಲವಿಲ್ಲದ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಉನ್ನತ ಗುರಿಯನ್ನು ಹೊಂದಲು ಪ್ರೋತ್ಸಾಹಿಸುವಾಗ ವಾಣಿಜ್ಯ ಮತ್ತು ವಿಧಿವಿಜ್ಞಾನ ಲೆಕ್ಕಪತ್ರ ನಿರ್ವಹಣೆಯಲ್ಲಿ ಜ್ಞಾನವನ್ನು ಹೆಚ್ಚಿಸುವ ಗುರಿಯನ್ನು ಅವರು ಮುಂದುವರಿಸಿದ್ದಾರೆ.
ಡಾ. ಅಬಿನಾಶ್ ಮಂಡಲ್ ಅವರ ಪಯಣವು ಪರಿಶಿಷ್ಟ ಜಾತಿ ಸಮುದಾಯಗಳ ಸಂಶೋಧಕರು ಸಾಮಾಜಿಕ-ಆರ್ಥಿಕ ಅಡೆತಡೆಗಳನ್ನು ನಿವಾರಿಸಲು, ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ಮತ್ತು ಶೈಕ್ಷಣಿಕ ಮತ್ತು ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಎನ್ ಎಫ್ ಎಸ್ ಸಿ ಯೋಜನೆಯ ಪರಿವರ್ತನಾತ್ಮಕ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
*****
(ಪ್ರಕಟಣೆ ಐ.ಡಿ.: 2307400)
ವಿಸಿಟರ್ ಕೌಂಟರ್ : 5