ಪ್ರಧಾನ ಮಂತ್ರಿಯವರ ಕಛೇರಿ
ಮಾನವೀಯತೆಯನ್ನು ರೂಪಿಸುವ ಪವಿತ್ರ ಕಾರ್ಯವೆಂದರೆ ಬೋಧನೆ ಎಂಬುದನ್ನು ಎತ್ತಿಹಿಡಿಯುವ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 SEP 2026 3:25PM by PIB Bengaluru
ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಶಿಕ್ಷಕರು ಜ್ಞಾನ, ಕೌಶಲ್ಯ, ಮೌಲ್ಯಗಳು ಮತ್ತು ಪ್ರೇರಣೆಯನ್ನು ತುಂಬುವ ಮೂಲಕ ಭವಿಷ್ಯವನ್ನು ರೂಪಿಸುತ್ತಾರೆ ಎಂದು ಗೌರವಾನ್ವಿತ ರಾಷ್ಟ್ರಪತಿಯವರು ಬರೆದಿರುವುದಾಗಿ ಪ್ರಧಾನಮಂತ್ರಿಯವರು ಉಲ್ಲೇಖಿಸಿದ್ದಾರೆ. ಬೋಧನೆಯು ಮಾನವೀಯತೆಯನ್ನು ರೂಪಿಸುವ, ಸ್ವತಂತ್ರ ಆಲೋಚನೆ ಮತ್ತು ಕುತೂಹಲವನ್ನು ಪ್ರೋತ್ಸಾಹಿಸುವ ಪವಿತ್ರ ಕಾರ್ಯವಾಗಿದೆ ಎಂದು ಈ ಲೇಖನವು ಎತ್ತಿಹಿಡಿಯುತ್ತದೆ, ಜೊತೆಗೆ ಸಾಂಸ್ಕೃತಿಕ ಪರಂಪರೆ, ವೈಜ್ಞಾನಿಕ ಮನೋಭಾವ, ಅಂತ್ಯೋದಯದ ಆದರ್ಶ, ಪರಿಸರ ಸಂರಕ್ಷಣೆ ಮತ್ತು "ದೇಶ ಮೊದಲು" ಎನ್ನುವ ತತ್ವವನ್ನು ಎತ್ತಿಹಿಡಿಯುವ ಉತ್ತಮ ಮಾನವರಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಶಿಕ್ಷಕರಿಗೆ ಕರೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಶಿಕ್ಷಕರು ಜ್ಞಾನ, ಕೌಶಲ್ಯ, ಮೌಲ್ಯಗಳು ಮತ್ತು ಪ್ರೇರಣೆಯನ್ನು ತುಂಬುವ ಮೂಲಕ ಭವಿಷ್ಯವನ್ನು ರೂಪಿಸುತ್ತಾರೆ ಎಂದು ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಬರೆದಿದ್ದಾರೆ.
ಅವರು ಬೋಧನೆಯನ್ನು ಮಾನವೀಯತೆಯನ್ನು ರೂಪಿಸುವ, ಸ್ವತಂತ್ರ ಆಲೋಚನೆ ಮತ್ತು ಕುತೂಹಲವನ್ನು ಪ್ರೋತ್ಸಾಹಿಸುವ ಪವಿತ್ರ ಕಾರ್ಯ ಎಂದು ಉಲ್ಲೇಖಿಸಿದ್ದಾರೆ.
ಸಾಂಸ್ಕೃತಿಕ ಪರಂಪರೆ, ವೈಜ್ಞಾನಿಕ ದೃಷ್ಟಿಕೋನ, ಅಂತ್ಯೋದಯದ ಆದರ್ಶ, ಪರಿಸರ ಸಂರಕ್ಷಣೆ ಮತ್ತು "ದೇಶ ಮೊದಲು" ಎನ್ನುವ ತತ್ವವನ್ನು ಎತ್ತಿಹಿಡಿಯುವ ಉತ್ತಮ ಮಾನವರಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಅವರು ಶಿಕ್ಷಕರಿಗೆ ಕರೆ ನೀಡಿದ್ದಾರೆ."
*****
(ಪ್ರಕಟಣೆ ಐ.ಡಿ.: 2306968)
ವಿಸಿಟರ್ ಕೌಂಟರ್ : 4