ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೆಪ್ಟೆಂಬರ್ 7, 2026ರ ಸೋಮವಾರದಂದು ಗೋವಾದ ರಾಜಧಾನಿ ಪಣಜಿಯಲ್ಲಿ ಪಶ್ಚಿಮ ವಲಯ ಮಂಡಳಿಯ 28ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಒಕ್ಕೂಟ ವ್ಯವಸ್ಥೆಯ ಆಧಾರದ ಮೇಲೆ ದೇಶಕ್ಕಾಗಿ 'ಟೀಮ್ ಭಾರತ್' ಅನ್ನು ರೂಪಿಸಿದ್ದಾರೆ ಮತ್ತು ವಲಯ ಮಂಡಳಿಗಳು ಈ ನಿಟ್ಟಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಿವೆ
ಎರಡು ಅಥವಾ ಹೆಚ್ಚಿನ ರಾಜ್ಯಗಳು, ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ ಮತ್ತು ಚರ್ಚೆಗೆ ವಲಯ ಮಂಡಳಿಗಳು ಒಂದು ರಚನಾತ್ಮಕ ವೇದಿಕೆಯನ್ನು ಒದಗಿಸುತ್ತವೆ ಮತ್ತು ಈ ಪ್ರಕ್ರಿಯೆಯ ಮೂಲಕ ಪರಸ್ಪರ ಸಹಕಾರವನ್ನು ಹೆಚ್ಚಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ
ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದೊಂದಿಗೆ, ಜೂನ್ 2014 ರಿಂದ ವಿವಿಧ ವಲಯ ಮಂಡಳಿಗಳು ಮತ್ತು ಅವುಗಳ ಸ್ಥಾಯಿ ಸಮಿತಿಗಳ ಒಟ್ಟು 70 ಸಭೆಗಳು ನಡೆದಿವೆ
ಕೇಂದ್ರ ಮತ್ತು ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ, ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸಮಸ್ಯೆಗಳು ಮತ್ತು ವಿವಾದಗಳನ್ನು ಪರಿಹರಿಸಲು ಹಾಗೂ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿ ಸಾಧಿಸಲು ವಲಯ ಮಂಡಳಿಗಳು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತವೆ
ಈ ಮಂಡಳಿಗಳು ದೇಶದ ಮಹತ್ವದ ವ್ಯಾಪಕ ವಿಷಯಗಳ ಮೇಲೆಯೂ ಚರ್ಚಿಸುತ್ತವೆ, ಉದಾಹರಣೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸುವುದು, ಅವುಗಳ ಶೀಘ್ರ ವಿಲೇವಾರಿಗಾಗಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ (ಎಫ್ ಟಿ ಎಸ್ ಸಿ) ಅನುಷ್ಠಾನ, ತುರ್ತು ಸ್ಪಂದನೆ ಬೆಂಬಲ ವ್ಯವಸ್ಥೆಯ ಅನುಷ್ಠಾನ ಇತ್ಯಾದಿ
ಪ್ರಕಟಣಾ ದಿನಾಂಕ:
05 SEP 2026 3:27PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೆಪ್ಟೆಂಬರ್ 7, 2026ರ ಸೋಮವಾರದಂದು ಗೋವಾದ ರಾಜಧಾನಿ ಪಣಜಿಯಲ್ಲಿ ಪಶ್ಚಿಮ ವಲಯ ಮಂಡಳಿಯ 28ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪಶ್ಚಿಮ ವಲಯ ಮಂಡಳಿಯು ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಹಾಗೂ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಪಶ್ಚಿಮ ವಲಯ ಮಂಡಳಿ ಸೇರಿದಂತೆ ಐದು ವಲಯ ಮಂಡಳಿಗಳನ್ನು ರಾಜ್ಯಗಳ ಮರುಸಂಘಟನೆ ಕಾಯ್ದೆ, 1956 ರ ಸೆಕ್ಷನ್ 15 ರಿಂದ 22 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಶ್ಚಿಮ ವಲಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ, ಗೋವಾದ ಮುಖ್ಯಮಂತ್ರಿಗಳು ಇದರ ಉಪಾಧ್ಯಕ್ಷರಾಗಿದ್ದಾರೆ. ಸದಸ್ಯ ರಾಜ್ಯಗಳಿಂದ, ಒಬ್ಬ ರಾಜ್ಯದ ಮುಖ್ಯಮಂತ್ರಿಯು ಪ್ರತಿ ವರ್ಷ ಸರದಿ ಆಧಾರದ ಮೇಲೆ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾರೆ. ಈ ಸಭೆಯನ್ನು ಭಾರತ ಸರ್ಕಾರದ ಗೃಹ ಸಚಿವಾಲಯದ ಅಂತರ-ರಾಜ್ಯ ಮಂಡಳಿ ಸಚಿವಾಲಯವು ಸಂಘಟಿಸುತ್ತಿದ್ದು, ಗೋವಾ ಸರ್ಕಾರವು ಇದರ ಆತಿಥ್ಯ ವಹಿಸುತ್ತಿದೆ. ವಲಯ ಮಂಡಳಿಯು ಪಶ್ಚಿಮ ಪ್ರದೇಶದ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಪ್ರತಿಯೊಂದು ರಾಜ್ಯದ ಇಬ್ಬರು ಹಿರಿಯ ಸಚಿವರನ್ನು ಸದಸ್ಯರನ್ನಾಗಿ ಒಳಗೊಂಡಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಹಿರಿಯ ಅಧಿಕಾರಿಗಳು ಸಹ ಮಂಡಳಿಯ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಲಯ ಮಂಡಳಿಯು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಸ್ಥಾಯಿ ಸಮಿತಿಯನ್ನೂ ರಚಿಸಿದೆ. ರಾಜ್ಯಗಳು ಪ್ರಸ್ತಾಪಿಸಿದ ವಿಷಯಗಳನ್ನು ಮೊದಲು ಚರ್ಚೆಗಾಗಿ ವಲಯ ಮಂಡಳಿಯ ಸ್ಥಾಯಿ ಸಮಿತಿಯ ಮುಂದೆ ಇಡಲಾಗುತ್ತದೆ. ಪರಿಶೀಲನೆಯ ನಂತರವೂ ಬಗೆಹರಿಯದ ವಿಷಯಗಳನ್ನು ಮಂಡಳಿಯ ಪರಿಶೀಲನೆಗಾಗಿ ವಲಯ ಮಂಡಳಿಯ ಸಭೆಯ ಮುಂದೆ ಇಡಲಾಗುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಒಕ್ಕೂಟ ವ್ಯವಸ್ಥೆಯ ತತ್ವದ ಆಧಾರದ ಮೇಲೆ ದೇಶಕ್ಕಾಗಿ 'ಟೀಮ್ ಭಾರತ್' ಅನ್ನು ರೂಪಿಸಿದ್ದಾರೆ ಮತ್ತು ವಲಯ ಮಂಡಳಿಗಳು ಈ ದಿಸೆಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿವೆ. ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಒತ್ತು ನೀಡಿದ್ದಾರೆ.
ಬಲಿಷ್ಠ ರಾಜ್ಯಗಳು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುತ್ತವೆ ಎಂಬ ಭಾವನೆಯೊಂದಿಗೆ, ವಲಯ ಮಂಡಳಿಗಳು ಎರಡು ಅಥವಾ ಹೆಚ್ಚಿನ ರಾಜ್ಯಗಳು, ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂವಾದ ಮತ್ತು ಚರ್ಚೆಗೆ ರಚನಾತ್ಮಕ ವೇದಿಕೆಯನ್ನು ಒದಗಿಸುತ್ತವೆ ಮತ್ತು ಈ ಪ್ರಕ್ರಿಯೆಯ ಮೂಲಕ ಪರಸ್ಪರ ಸಹಕಾರವನ್ನು ಹೆಚ್ಚಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ.
ವಲಯ ಮಂಡಳಿಗಳ ಪಾತ್ರವು ಸಲಹಾತ್ಮಕವಾಗಿದೆ; ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ, ಈ ಮಂಡಳಿಗಳು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಹಕಾರದ ಉತ್ತಮ ಬಾಂಧವ್ಯವನ್ನು ಬೆಳೆಸುವಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮಿವೆ.
ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದೊಂದಿಗೆ, ಕಳೆದ 12 ವರ್ಷಗಳಲ್ಲಿ (ಜೂನ್ 2014 ರಿಂದ ಇಲ್ಲಿಯವರೆಗೆ) ವಿವಿಧ ವಲಯ ಮಂಡಳಿಗಳು ಮತ್ತು ಅವುಗಳ ಸ್ಥಾಯಿ ಸಮಿತಿಗಳ ಒಟ್ಟು 70 ಸಭೆಗಳು ನಡೆದಿವೆ.
ಕೇಂದ್ರ ಮತ್ತು ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ, ಸದಸ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸಮಸ್ಯೆಗಳು ಮತ್ತು ವಿವಾದಗಳನ್ನು ಪರಿಹರಿಸಲು ಹಾಗೂ ಸಂಬಂಧಪಟ್ಟ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಗತಿ ಸಾಧಿಸಲು ವಲಯ ಮಂಡಳಿಗಳು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತವೆ.
ಈ ಮಂಡಳಿಗಳು ದೇಶದ ಮಹತ್ವದ ವ್ಯಾಪಕ ವಿಷಯಗಳ ಮೇಲೆಯೂ ಚರ್ಚಿಸುತ್ತವೆ, ಉದಾಹರಣೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ ಮತ್ತು ಅವುಗಳ ಶೀಘ್ರ ವಿಲೇವಾರಿಗಾಗಿ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ (ಎಫ್ ಟಿ ಎಸ್ ಸಿ) ಅನುಷ್ಠಾನ; ತುರ್ತು ಸ್ಪಂದನೆ ಬೆಂಬಲ ವ್ಯವಸ್ಥೆಯ (ಇಆರ್ ಎಸ್ ಎಸ್ -112) ಅನುಷ್ಠಾನ; ಆಹಾರ ಸುರಕ್ಷತಾ ಮಾನದಂಡಗಳಿಗೆ ಸಂಬಂಧಿಸಿದ ವಿಷಯಗಳು; ಪ್ರತಿಯೊಂದು ಹಳ್ಳಿಯ ನಿಗದಿತ ವ್ಯಾಪ್ತಿಯೊಳಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವುದು; ಮತ್ತು ಪೋಷಣೆ, ಶಿಕ್ಷಣ, ಆರೋಗ್ಯ, ಇಂಧನ ವಲಯದ ಸುಧಾರಣೆಗಳು, ನಗರ ಯೋಜನೆ, ಸಹಕಾರ ವ್ಯವಸ್ಥೆಯನ್ನು ಬಲಪಡಿಸುವುದು, ಸೈಬರ್ ಅಪರಾಧ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತವೆ.
*****
(ಪ್ರಕಟಣೆ ಐ.ಡಿ.: 2306945)
ವಿಸಿಟರ್ ಕೌಂಟರ್ : 7