ಪ್ರಧಾನ ಮಂತ್ರಿಯವರ ಕಛೇರಿ
ಪ್ರತಿಭೆ ಅಭಿವೃದ್ಧಿ ಹೊಂದಲು ಸರಿಯಾದ ಸಕಾರಾತ್ಮಕ ಪರಿಸರ, ಮಾರ್ಗದರ್ಶನ ಮತ್ತು ಪೋಷಣೆಯ ಅಗತ್ಯವಿದೆ ಎಂಬ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
03 SEP 2026 9:07AM by PIB Bengaluru
ಪ್ರತಿಭೆ ಅಭಿವೃದ್ಧಿ ಹೊಂದಲು ಸರಿಯಾದ ಪರಿಸರ, ಮಾರ್ಗದರ್ಶನ ಮತ್ತು ಪೋಷಣೆಯ ಅಗತ್ಯವಿದೆ ಎಂಬ ಮಹತ್ವವನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ತಾಣದಲ್ಲಿ ಈ ರೀತಿ ಬರೆದಿದ್ದಾರೆ;
"सच्ची प्रतिभा को जब सकारात्मक परिवेश मिलता है तो उससे अद्भुत ऊर्जा का संचार होता है। इससे जहां प्रयासों में सफलता मिलती है, वहीं जीवन भी सार्थक बनता है।
पात्रविशेषे न्यस्तं गुणान्तरं व्रजति शिल्पमाधातुः।
जलमिव समुद्रशुक्तौ मुक्ताफलतां पयोदयस्य॥"
ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಮೌಲ್ಯ ಮತ್ತು ಶ್ರೇಷ್ಠತೆಯು ಅವರು ಪಡೆಯುವ ಪರಿಸರ ಮತ್ತು ಮಾರ್ಗದರ್ಶನದ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ಒಂದು ಸಾಮಾನ್ಯ ಹನಿ ನೀರು ಸಿಂಪಿ ( ಓಯಿಸ್ಟರ್ ) ಚಿಪ್ಪಿನೊಳಗೆ ಪ್ರವೇಶಿಸಿದಾಗ ಅದು ಅಮೂಲ್ಯವಾದ ಮುತ್ತಾಗಿ ಮಾರ್ಪಾಡು ಆಗುವಂತೆ, ಸಾಮಾನ್ಯ ಗುಣಗಳು ಸರಿಯಾದ ಸ್ಥಳ, ಬೆಂಬಲ ಮತ್ತು ಪೋಷಣೆಯನ್ನು ಕಂಡುಕೊಂಡಾಗ ಅಸಾಧಾರಣವಾಗಬಹುದು.
*****
(ಪ್ರಕಟಣೆ ಐ.ಡಿ.: 2306237)
ವಿಸಿಟರ್ ಕೌಂಟರ್ : 8