ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಹಮದಾಬಾದ್‌ನಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಹೆಣ್ಣುಮಕ್ಕಳೊಂದಿಗೆ ಪವಿತ್ರ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು


ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಜೀವನಪರ್ಯಂತ ಇನ್ಸುಲಿನ್ ಚುಚ್ಚುಮದ್ದು ಅಗತ್ಯವಿದ್ದು, ಇದರಿಂದ ಅವರ ಕುಟುಂಬಗಳ ಮೇಲೆ ಗಣನೀಯ ಆರ್ಥಿಕ ಹೊರೆ ಬೀಳುತ್ತದೆ

ಮೋದ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಇಂತಹ ಎಲ್ಲ ಮಕ್ಕಳಿಗೆ ಜೀವನಪರ್ಯಂತ ಉಚಿತ ಇನ್ಸುಲಿನ್ ಒದಗಿಸುತ್ತಿದೆ

ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಪ್ರಸ್ತುತ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಈ ದೂರದೃಷ್ಟಿಯ ಉಪಕ್ರಮವು ‘ಸೇವೆ, ಕರುಣೆ ಮತ್ತು ಭದ್ರತೆ’ಯ ತತ್ವಗಳಿಗೆ ಮೋದಿ ಸರ್ಕಾರ ಬದ್ಧವಾಗಿರುವುದಕ್ಕೆ ಸಾಕ್ಷಿಯಾಗಿದೆ

ಪ್ರಕಟಣಾ ದಿನಾಂಕ: 28 AUG 2026 4:53PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅಹಮದಾಬಾದ್‌ನಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಹೆಣ್ಣುಮಕ್ಕಳೊಂದಿಗೆ ಪವಿತ್ರ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ. “ಇಂದು ಅಹಮದಾಬಾದ್‌ನಲ್ಲಿ ನನ್ನ ಲೋಕಸಭಾ ಕ್ಷೇತ್ರದ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಹೆಣ್ಣುಮಕ್ಕಳೊಂದಿಗೆ ಪವಿತ್ರ ರಕ್ಷಾ ಬಂಧನ ಹಬ್ಬವನ್ನು ನಾನು ಆಚರಿಸಿದೆ. ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಜೀವನಪರ್ಯಂತ ಇನ್ಸುಲಿನ್ ಚುಚ್ಚುಮದ್ದು ಅಗತ್ಯವಿದ್ದು, ಇದರಿಂದ ಅವರ ಕುಟುಂಬಗಳ ಮೇಲೆ ಗಣನೀಯ ಆರ್ಥಿಕ ಹೊರೆ ಬೀಳುತ್ತದೆ. ಮೋದ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಇಂತಹ ಎಲ್ಲ ಮಕ್ಕಳಿಗೆ ಜೀವನಪರ್ಯಂತ ಉಚಿತ ಇನ್ಸುಲಿನ್ ಒದಗಿಸುತ್ತಿದೆ. ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಪ್ರಸ್ತುತ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಈ ದೂರದೃಷ್ಟಿಯ ಉಪಕ್ರಮವು ‘ಸೇವೆ, ಕರುಣೆ ಮತ್ತು ಭದ್ರತೆ’ಯ ತತ್ವಗಳಿಗೆ ಮೋದಿ ಸರ್ಕಾರ ಬದ್ಧವಾಗಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಅವರು ಹೇಳಿದ್ದಾರೆ.

आज अहमदाबाद में अपने संसदीय क्षेत्र की टाइप-1 डायबिटीज से पीड़ित बेटियों के साथ रक्षाबंधन का पावन पर्व मनाया।

टाइप-1 डायबिटीज से पीड़ित बच्चों को जीवनभर इंसुलिन के इंजेक्शन की आवश्यकता होती है, जो उनके परिवारों पर बड़ा आर्थिक बोझ डालता है। मोदी जी के नेतृत्व में हमारी सरकार… pic.twitter.com/JQCGwPZUD7

— Amit Shah (@AmitShah) August 28, 2026

ಈ ಸಂದರ್ಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಲ್ಲ ಹೆಣ್ಣುಮಕ್ಕಳಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳನ್ನು ಕೋರಿದರು ಹಾಗೂ ಅವರಿಗೆ ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ಹಾರೈಸಿದರು.

ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ, ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಟೈಪ್-1 ಬಾಲ್ಯದ ಮಧುಮೇಹದಿಂದ ಬಳಲುತ್ತಿರುವ 0 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮೋದಿ ಸರ್ಕಾರದ ದೂರದೃಷ್ಟಿಯ ಉಪಕ್ರಮದ ಪ್ರಯೋಜನಗಳು ದೊರೆಯುವಂತೆ ಖಾತರಿಪಡಿಸಲಾಗಿದೆ. ಈ ನಿಟ್ಟಿನಲ್ಲಿ, ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಜೀವನಪರ್ಯಂತ ಅಗತ್ಯವಿರುವ ಇನ್ಸುಲಿನ್ ಒದಗಿಸಲು “ತಪಾಸಣೆ – ರೋಗನಿರ್ಣಯ – ಇನ್ಸುಲಿನ್/ಚಿಕಿತ್ಸೆ – ಮೇಲ್ವಿಚಾರಣೆ – ಫಾಲೋ-ಅಪ್ (ಮುಂದಿನ ತಪಾಸಣೆ)" ಒಳಗೊಂಡ ಸಮಗ್ರ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, “ಮೋದಿ ಸರ್ಕಾರಕ್ಕೆ ಸಾರ್ವಜನಿಕ ಸೇವೆ ಕೇವಲ ಜವಾಬ್ದಾರಿಯಲ್ಲ; ಬದಲಾಗಿ, ಸಹಾನುಭೂತಿ ಆಡಳಿತದ ಮಾರ್ಗದರ್ಶಕ ತತ್ವವಾಗಿದೆ” ಎಂದು ಹೇಳಿದರು. ಹೆಣ್ಣುಮಕ್ಕಳ ಆರೋಗ್ಯ ಸುರಕ್ಷಿತವಾಗಿದ್ದಾಗ ಮಾತ್ರ ಕುಟುಂಬ ಮತ್ತು ಸಮಾಜದ ಭವಿಷ್ಯವೂ ಸುರಕ್ಷಿತವಾಗಿರುತ್ತದೆ. ರಕ್ಷಾ ಬಂಧನದ ಪವಿತ್ರ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಇನ್ಸುಲಿನ್ ಒದಗಿಸುವ ಈ ಉಪಕ್ರಮವು ಹೆಣ್ಣುಮಕ್ಕಳ ರಕ್ಷಣೆ ಮತ್ತು ಆರೋಗ್ಯದ ಬಗೆಗಿನ ನಮ್ಮ ಬದ್ಧತೆಯ ಸಂಕೇತವೂ ಆಗಿದೆ ಎಂದು ಅವರು ಹೇಳಿದರು.

 

******

 


(ಪ್ರಕಟಣೆ ಐ.ಡಿ.: 2304363) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Malayalam