ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ಮೈಸೂರಿನಲ್ಲಿ ನಡೆದ ಬುಡಕಟ್ಟು ಭಾಷೆಗಳು ಮತ್ತು ವಸ್ತು ಸಂಗ್ರಹಾಲಯಗಳ ಕುರಿತಾದ ರಾಷ್ಟ್ರೀಯ ಸಮಾವೇಶದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯಗಳ ಕುರಿತು ಚರ್ಚೆ


ಗೋಷ್ಠಿಗಳಲ್ಲಿ ನಿಖರ ಕಥೆ ಹೇಳುವಿಕೆ ಮತ್ತು ಸಮುದಾಯ ಪಾಲ್ಗೊಳ್ಳುವಿಕೆಯ ಮೂಲಕ ಬುಡಕಟ್ಟು ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವತ್ತ ಹೆಚ್ಚಿನ ಗಮನ

ಪ್ರಕಟಣಾ ದಿನಾಂಕ: 27 AUG 2026 4:12PM by PIB Bengaluru

ಮೈಸೂರಿನಲ್ಲಿ ನಡೆದ ಬುಡಕಟ್ಟು ಭಾಷೆಗಳು ಮತ್ತು ವಸ್ತುಸಂಗ್ರಹಾಲಯಗಳ ಕುರಿತಾದ ರಾಷ್ಟ್ರೀಯ ಸಮಾವೇಶದಲ್ಲಿ ತಜ್ಞರು, ಅಧಿಕಾರಿಗಳು ಮತ್ತು ಸಮುದಾಯ ಪ್ರತಿನಿಧಿಗಳು ಒಗ್ಗೂಡಿ ಬುಡಕಟ್ಟು ಭಾಷೆಗಳು ಮತ್ತು ಪರಂಪರೆಯ ಸಂರಕ್ಷಣೆ ಮತ್ತು ಉತ್ತೇಜನದ ಕುರಿತು ಚರ್ಚೆ ನಡೆಸಿದರು. ಬುಡಕಟ್ಟು ವಸ್ತುಸಂಗ್ರಹಾಲಯಗಳು ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳ (ಟಿ ಎಫ್ ಎಫ್ ಎಂ) ಕುರಿತಾದ ಚರ್ಚೆಗಳು, ಅವರು ಇತಿಹಾಸ, ಅಸ್ಮಿತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ನಿಖರ ಕಥೆ ಹೇಳುವುದು, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸಮಕಾಲೀನ ವಸ್ತುಸಂಗ್ರಹಾಲಯ(ಮ್ಯೂಸಿಯಂ) ಪದ್ದತಿಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳ (ಟಿ ಎಫ್ ಎಫ್ ಎಂ) ಕುರಿತ ಗೋಷ್ಠಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಟಿ ಎಫ್ ಎಫ್ ಎಮ  ಜಂಟಿ ಕಾರ್ಯದರ್ಶಿ ಶ್ರೀ ಟಿ. ರೌಮುವಾನ್ ಪೈಟೆ ಅವರ ಆರಂಭಿಕ ಹೇಳಿಕೆಗಳೊಂದಿಗೆ ಆರಂಭವಾಯಿತು. ಅವರು ಇತಿಹಾಸದ ಭಂಡಾರಗಳಾಗಿರುವ ವಸ್ತುಸಂಗ್ರಹಾಲಯಗಳ ಪಾತ್ರವನ್ನು ಅವರು ಉಲ್ಲೇಖಿಸಿದರು; ಅವು ದಾಖಲೆಗಳು, ವಸ್ತುಗಳು, ಛಾಯಾಚಿತ್ರಗಳು ಮತ್ತು ಇತರ ಐತಿಹಾಸಿಕ ಸಾಕ್ಷ್ಯಗಳನ್ನು ತಮ್ಮಲ್ಲಿ ಒಳಗೊಂಡಿರುತ್ತವೆ. ಕೇವಲ ವಸ್ತುಗಳನ್ನಷ್ಟೇ ಅಲ್ಲದೆ, ಅವುಗಳಿಗೆ ಸಂಬಂಧಿಸಿದ ಕಥೆಗಳು, ಹಿನ್ನೆಲೆ ಮತ್ತು ಅರ್ಥವನ್ನೂ ಸಂರಕ್ಷಿಸುವ ಮಹತ್ವವನ್ನು  ಒತ್ತಿ ಹೇಳಲಾಯಿತು.

ಬುಡಕಟ್ಟು ವಸ್ತುಸಂಗ್ರಹಾಲಯಗಳು ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳನ್ನು ಪರಿಚಯಿಸಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಿರ್ದೇಶಕಿ ಶ್ರೀಮತಿ ದೀಪಾಲಿ ಮಸಿರ್ಕರ್ ಅವರು ಬುಡಕಟ್ಟು ಪರಂಪರೆಯ ಶ್ರೀಮಂತಿಕೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ಮತ್ತು ಬುಡಕಟ್ಟು ಸಮುದಾಯಗಳ ಅನನ್ಯತೆಯನ್ನು ಸಮಕಾಲೀನ ಮತ್ತು ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸುತ್ತಾ, ಬುಡಕಟ್ಟು ವಸ್ತುಸಂಗ್ರಹಾಲಯಗಳ ಮಹತ್ವವನ್ನು ಉಲ್ಲೇಖಿಸಿದರು. ಭೋಪಾಲ್‌ನಲ್ಲಿರುವ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಉಲ್ಲೇಖಿಸಿದ ಅವರು, ಸಮಾವೇಶದಲ್ಲಿ ಭಾಗವಹಿಸುವವರು ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಭೌತಿಕ ಪ್ರದರ್ಶನಗಳು ಮತ್ತು ಡಿಜಿಟಲ್ ಘಟಕಗಳ ನಡುವಿನ ಖುದ್ದು ಅನುಭವ ಪಡೆಯಬೇಕೆಂದು ಕರೆ ನೀಡಿದರು.

ನವದೆಹಲಿಯ ಮಾನವ ಅಭಿವೃದ್ಧಿ ಸಂಸ್ಥೆಯ (ಐ ಎಚ್ ಡಿ) ಅತಿಥಿ ಪ್ರಾಧ್ಯಾಪಕ ಪ್ರೊ. ವರ್ಜಿನಿಯಸ್ ಕ್ಸಾಕ್ಸಾ ಅವರು "ವಸ್ತುಸಂಗ್ರಹಾಲಯಗಳಲ್ಲಿ ಬುಡಕಟ್ಟು ಸ್ವಾತಂತ್ರ್ಯದ ಕಥೆಗಳನ್ನು ಪ್ರತಿನಿಧಿಸುವುದು: ದೃಢೀಕರಣ, ಗುರುತು ಮತ್ತು ಸಮುದಾಯ ದೂರದೃಷ್ಟಿಗಳು" ಎಂಬ ವಿಷಯದ ಕುರಿತು ಮಾತನಾಡುವುದರೊಂದಿಗೆ ವಿಷಯಾಧಾರಿತ ಗೋಷ್ಠಿಗಳು ಆರಂಭವಾದವು, ಬುಡಕಟ್ಟು ಇತಿಹಾಸಗಳ ಅಧಿಕೃತ ಪ್ರಾತಿನಿಧ್ಯ ಮತ್ತು ಸ್ಥಳೀಯ ಬುಡಕಟ್ಟು ನಿರೂಪಣೆಗಳನ್ನು ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯೊಂದಿಗೆ ಬೆಸಯುವ ಬಗ್ಗೆ ಮಾತನಾಡಿದರು.  ಇಂಡಿಯಾ ವಿಷನ್ ಇನ್‌ಸ್ಟಿಟ್ಯೂಟ್‌ಸಿಇಒ ಮತ್ತು ವ್ಯವಸ್ಥಾಪಕ ಟ್ರಸ್ಟಿ ಶ್ರೀ ವಿನೋದ್ ಡೇನಿಯಲ್ ಅವರು "ವಸ್ತುಸಂಗ್ರಹಾಲಯಗಳು ಜೀವಂತ ಸಂಸ್ಥೆಗಳಾಗಿ: ಸ್ಮರಣೆ, ​​ಗುರುತು ಮತ್ತು ಸಮುದಾಯ ಪರಂಪರೆ ಸಂರಕ್ಷಣೆ" ಕುರಿತು ಮಾತನಾಡಿದರು. ಐಜಿಆರ್‌ಎಂಎಸ್‌ಶ್ರೀ ಅಮಿತಾಭ್ ಪಾಂಡೆ ಅವರು "ಕಟ್ಟಡದಿಂದ ವಸ್ತುಸಂಗ್ರಹಾಲಯಕ್ಕೆ: ವಸ್ತುಸಂಗ್ರಹಾಲಯ ಯೋಜನಾ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು" ಎಂಬ ವಿಷಯದ ಕುರಿತು ಮಾತನಾಡಿದರು, ಇದು ವಸ್ತುಸಂಗ್ರಹಾಲಯ ಯೋಜನೆ, ಕಥಾಹಂದರ ಅಭಿವೃದ್ಧಿ, ಪ್ರಾದೇಶಿಕ ಯೋಜನೆ ಮತ್ತು ಭವಿಷ್ಯದ ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.  ಸಿಆರ್‌ಟಿಎಲ್ (ಎನ್‌ಸಿಎಸ್‌ಎಂ) ಮಾಜಿ ನಿರ್ದೇಶಕ ಮತ್ತು ಸೃಜನಾತ್ಮಕ ವಸ್ತುಸಂಗ್ರಹಾಲಯ ವಿನ್ಯಾಸಕರ ಸಲಹೆಗಾರ ಶ್ರೀ ನಟರಾಜ್ ದಾಸ್‌ಗುಪ್ತಾ ಅವರು "ವಸ್ತುಸಂಗ್ರಹಾಲಯಗಳಲ್ಲಿ ಸಮಕಾಲೀನ ಪ್ರದರ್ಶನ ತಂತ್ರಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಚಿಂತನಶೀಲ ಏಕೀಕರಣ"ವನ್ನು ಉದ್ದೇಶಿಸಿ ಮಾತನಾಡಿದರು, ಇದು ಮೈಮರೆಸುವ ಪರಿಸರಗಳು, ಮಲ್ಟಿಮೀಡಿಯಾ ಕಥೆ ಹೇಳುವಿಕೆ, ಸಂವಾದಾತ್ಮಕ ಪ್ರದರ್ಶನಗಳು, AR/VR ಮತ್ತು QR-ಆಧಾರಿತ ಕಥೆ ಹೇಳುವಿಕೆಯನ್ನು ಒಳಗೊಂಡಿದೆ. ಭೋಪಾಲ್‌ಕ್ಯುರೇಟರ್ ವೀರ್ ಭಾರತ್ ನ್ಯಾಸ್‌ನಿರ್ದೇಶಕ ಶ್ರೀ ಶ್ರೀರಾಮ್ ತಿವಾರಿ, "ಮ್ಯೂಸಿಯಂ ನಿರ್ಮಾಣದಲ್ಲಿ ಸಮುದಾಯದ ಭಾಗವಹಿಸುವಿಕೆ: ಬುಡಕಟ್ಟು ವಸ್ತುಸಂಗ್ರಹಾಲಯ ಭೋಪಾಲ್ ಅನುಭವ" ಕುರಿತು ಮಾತನಾಡಿದರು, ಇದು ಸಮುದಾಯದ ಭಾಗವಹಿಸುವಿಕೆ, ಸಂದರ್ಶಕರ ತೊಡಗಿಸಿಕೊಳ್ಳುವಿಕೆ, ಸಾಂಸ್ಥಿಕ ಪಾಲುದಾರಿಕೆಗಳು, ಆದಾಯವೃದ್ಧಿ ಮತ್ತು ಸುಸ್ಥಿರ ವಸ್ತುಸಂಗ್ರಹಾಲಯ ನಿರ್ವಹಣೆಗಾಗಿ ಸಂಪನ್ಮೂಲ ಕ್ರೋಢೀಕರಣದ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು.

ಸಮಾರೋಪದ ಚರ್ಚೆಯ ಸಂದರ್ಭದಲ್ಲಿ, ಶ್ರೀಮತಿ ದೀಪಾಲಿ ಮಸಿರ್ಕರ್, ವಸ್ತುಸಂಗ್ರಹಾಲಯಗಳ ಅಭಿವೃದ್ಧಿ, ಆದಾಯ-ಸೃಷ್ಟಿ ಮಾರ್ಗಗಳಾದ ಬೆಳಕಿನ ಪ್ರದರ್ಶನಗಳು, ಅತಿಥಿ ಗೃಹ ಸೌಲಭ್ಯಗಳು ಮತ್ತು ವಾರಾಂತ್ಯದ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಬುಡಕಟ್ಟು ಕಾಫಿ ಸೇರಿದಂತೆ ಬುಡಕಟ್ಟು-ಪಾಕಪದ್ಧತಿಯ ಕೆಫೆಗಳನ್ನು ಸ್ಥಾಪಿಸುವುದು, ಸಂದರ್ಶಕರ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ವಸ್ತುಸಂಗ್ರಹಾಲಯದ ಸುಸ್ಥಿರತೆಯನ್ನು ಬೆಂಬಲಿಸಲು ಸಮುದಾಯಗಳನ್ನು ತೊಡಗಿಸಿಕೊಳ್ಳುವಂತೆ ಸೂಚಿಸಿದರು. ಇತಿಹಾಸಕಾರರು, ವಿನ್ಯಾಸಕರು ಮತ್ತು ಕಾರ್ಯನಿರ್ವಾಹಕ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಮತ್ತು ವಸ್ತುಸಂಗ್ರಹಾಲಯಗಳು ತಂತ್ರಜ್ಞಾನ ಆಧರಿಸಿದ್ದಕ್ಕಿಂತ ಹೆಚ್ಚಾಗಿ ಕಥೆ-ಆಧಾರದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯನ್ನು ಚರ್ಚೆಯಲ್ಲಿ ಒತ್ತಿ ಹೇಳಲಾಯಿತು.

 

*****


(ಪ್ರಕಟಣೆ ಐ.ಡಿ.: 2303788) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Tamil