ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಶಿಕ್ಷಣವು ಜವಾಬ್ದಾರಿಯನ್ನು ಪೂರೈಸುವ ಐದನೇ ಅವಕಾಶವಾಗಿದೆ


ಶಿಕ್ಷಣ, ಡಿಜಿಟಲ್ ಜವಾಬ್ದಾರಿ ಮತ್ತು ಮಾನವ ಘನತೆಯ ಕುರಿತು ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು

प्रविष्टि तिथि: 24 AUG 2026 6:17PM by PIB Bengaluru

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಇಂದು ಯುವ ಪೀಳಿಗೆಯನ್ನು ಆಲಿಸುವುದು, ಅವರ ಕಾಳಜಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರು ತಮ್ಮ ಆಲೋಚನೆಗಳು ಮತ್ತು ಸವಾಲುಗಳನ್ನು ಹಂಚಿಕೊಳ್ಳಲು ಉತ್ತಮ ವಾತಾವರಣವನ್ನು ಸೃಷ್ಟಿಸುವ ಮಹತ್ವವನ್ನು ಒತ್ತಿ ಹೇಳಿದರು.

ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ "ಐದನೇ ಅವಕಾಶ - ಶಿಕ್ಷಣವು ಜವಾಬ್ದಾರಿಯನ್ನು ಪೂರೈಸುವ ಅವಕಾಶ " ಕಾರ್ಯಕ್ರಮದ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಡಿಎಐಸಿ) ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಕುಮಾರ್ ಅವರು, ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಪರಿಸರವು ಪೋಷಕರು, ಶಿಕ್ಷಕರು ಮತ್ತು ಸಂಸ್ಥೆಗಳು ತಂತ್ರಜ್ಞಾನದ ಬಳಕೆಯನ್ನು ಟೀಕಿಸುವ ಬದಲು ಯುವಜನರೊಂದಿಗೆ ತಿಳುವಳಿಕೆಯೊಂದಿಗೆ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅದರ ಮಹತ್ವವನ್ನು ಒತ್ತಿ ಹೇಳಿದರು.

ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಮಹಿಳಾ ಆಯೋಗವು (ಎನ್.ಸಿ.ಡಬ್ಲ್ಯೂ) , ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರ (ಡಿಎಐಸಿ), ಯುನೆಸ್ಕೊ ನವದೆಹಲಿ ಮತ್ತು ಮೌಂಟ್ ಅಬು ಪಬ್ಲಿಕ್ ಸ್ಕೂಲ್ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿತ್ತು.

ಯುವಜನರು ತೊಂದರೆಗಳನ್ನು ಎದುರಿಸುವಾಗ ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆಯಲು ಅನುವು ಮಾಡಿಕೊಡುತ್ತದೆ,ಈ ನಿಟಿನಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ನಡುವೆ ಬಲವಾದ ಭಾವನಾತ್ಮಕ ಸಂಪರ್ಕಗಳನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಡಾ. ವೀರೇಂದ್ರ ಕುಮಾರ್ ಅವರು ಒತ್ತಿ ಹೇಳಿದರು.

ಕೇವಲ ವಿಷಯಗಳನ್ನು ನೋಡುವುದರಿಂದ ಹಿಡಿದು ಅವುಗಳನ್ನು ಆಳವಾಗಿ ಮತ್ತು ಅರ್ಥಪೂರ್ಣವಾಗಿ ಅರ್ಥಮಾಡಿಕೊಳ್ಳುವವರೆಗೆ. - ಪ್ರತಿಯೊಂದು ಮಗುವಿನ ವೈಯಕ್ತಿಕ ಸಾಮರ್ಥ್ಯಗಳು, ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಗುರುತಿಸುವ ಮಹತ್ವವನ್ನು ಸಚಿವರು ವಿವರಿಸಿ ಹೇಳಿದರು. ಅವರು ದೃಷ್ಟಿಯಿಂದ ಒಳನೋಟಕ್ಕೆ (ದೃಷ್ಟಿ ಸೆ ಅಂತರದೃಷ್ಟಿ ಕಿ ಔರ್) ಚಲಿಸುವ ಅಗತ್ಯವನ್ನು ಒತ್ತಿ ಹೇಳಿದರು  

"ಐದನೇ ಅವಕಾಶ"ದ ಪರಿಕಲ್ಪನೆಯ ಬಗ್ಗೆ ಡಾ. ವೀರೇಂದ್ರ ಕುಮಾರ್ ಅವರು ಮಾತನಾಡಿದರು, ತಂತ್ರಜ್ಞಾನವು ನೈತಿಕತೆ, ಜವಾಬ್ದಾರಿ ಮತ್ತು ಉತ್ತಮ ನಿರ್ಣಯದೊಂದಿಗೆ ಇರಬೇಕು, ವಿಶೇಷವಾಗಿ ಹೆಚ್ಚುತ್ತಿರುವ ಡಿಜಿಟಲ್ ಪರಿಸರದಲ್ಲಿ ಬೆಳೆಯುತ್ತಿರುವ ಯುವಜನರಲ್ಲಿ ವಿಶೇಷವಾಗಿ - ಇದು ಮನೆ, ಶಾಲೆ, ಸಂಸ್ಕೃತಿ, ಸಮಾಜ, ಪೌರತ್ವ, ಜ್ಞಾನ ಮತ್ತು ಡಿಜಿಟಲ್ ಪ್ರಪಂಚದ ಒಮ್ಮುಖವನ್ನು ಪ್ರತಿನಿಧಿಸುತ್ತದೆ ಎಂದು ಅವರು ಉಲ್ಲೇಖಿಸಿ ಹೇಳಿದರು.

ಈ ಸಂವಾದವು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ಕೇಂದ್ರ ಸಚಿವರೊಂದಿಗೆ ನೇರವಾಗಿ ತಮ್ಮ ದೃಷ್ಟಿಕೋನ-ಚಿಂತನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿತು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಕುತೂಹಲ, ಜವಾಬ್ದಾರಿ ಮತ್ತು ಜಾಗೃತರಾಗಿರಲು ಸಚಿವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಮಕ್ಕಳ ಹಕ್ಕುಗಳು, ಸುರಕ್ಷತೆ, ಲಿಂಗ ಸಮಾನತೆ, ಮಾನವ ಘನತೆ, ಡಿಜಿಟಲ್ ಜವಾಬ್ದಾರಿ ಮತ್ತು ಜವಾಬ್ದಾರಿಯುತ ಪೌರತ್ವದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಸದಸ್ಯ ಕಾರ್ಯದರ್ಶಿ ಡಾ. ಸಂಜೀವ್ ಶರ್ಮಾ , ಮೌಂಟ್ ಅಬು ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಡಾ. ಜ್ಯೋತಿ ಅರೋರಾ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ವಿಜಯ ಕಿಶೋರ್ ರಾಹತ್ ಅವರು ಸೇರಿದಂತೆ ಗಣ್ಯ ಭಾಷಣಕಾರರು ಈ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಿದರು.

ಕೇಂದ್ರ ಸಚಿವರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದವು ಸಂವಾದ, ಸಹಾನುಭೂತಿ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಪೀಳಿಗೆಯ ಅಂತರವನ್ನು ಕಡಿಮೆ ಮಾಡುವ ಮಹತ್ವವನ್ನು ಉಲ್ಲೇಖಿಸಿತು, ಜೊತೆಗೆ ಶಿಕ್ಷಣವು ಯುವಜನರನ್ನು ಶೈಕ್ಷಣಿಕ ಯಶಸ್ಸಿಗೆ ಮಾತ್ರವಲ್ಲದೆ ಜವಾಬ್ದಾರಿಯುತ ಮತ್ತು ಗೌರವಾನ್ವಿತ ಪೌರತ್ವಕ್ಕೂ ಸಿದ್ಧಪಡಿಸುತ್ತದೆ ಎಂಬ ಆಶಯವನ್ನು ಕೂಡಡಾ ಇದು ಖಚಿತಪಡಿಸುತ್ತದೆ.

 

*****


(रिलीज़ आईडी: 2302917) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी