ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ಮೈಸೂರಿನಲ್ಲಿ ಬುಡಕಟ್ಟು ಭಾಷೆಗಳು ಮತ್ತು ಸಂಗ್ರಹಾಲಯಗಳ ಕುರಿತು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಿರುವ ಬುಡಕಟ್ಟು ವ್ಯವಹಾರಗಳ ಸಚಿವಾಲಯ


"ಆದಿ ವಾಣಿ" ವೇದಿಕೆಗೆ 5 ಹೊಸ ಭಾಷೆಗಳೊಂದಿಗೆ ಪ್ರಮುಖ ನವೀಕರಣ, ಆದಿ ವಾಣಿ ಐಒಎಸ್ ಆ್ಯಪ್ ಗೆ ಚಾಲನೆ; 'ಟ್ರೈಬಾಟ್' (Tribot) ವೇದಿಕೆ ಆರಂಭ; ಬುಡಕಟ್ಟು ಸಂಗ್ರಹಾಲಯಗಳು ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯಗಳ ಕುರಿತು ರಾಷ್ಟ್ರೀಯ ದೂರದೃಷ್ಟಿಯ ಬಗ್ಗೆ ಚರ್ಚೆ

प्रविष्टि तिथि: 23 AUG 2026 5:22PM by PIB Bengaluru

ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಆಗಸ್ಟ್ 24 ರಿಂದ 26 2026ರವರೆಗೆ ಕರ್ನಾಟಕದ ಮೈಸೂರಿನಲ್ಲಿ ಬುಡಕಟ್ಟು ಭಾಷೆಗಳು ಮತ್ತು ಸಂಗ್ರಹಾಲಯಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಿದೆ. ಈ ಸಮಾವೇಶವು ಬುಡಕಟ್ಟು ಭಾಷೆಗಳ ದಾಖಲೀಕರಣ, ಸಂರಕ್ಷಣೆ ಮತ್ತು ಪುನರುಜ್ಜೀವನದ ಕುರಿತ ರಾಷ್ಟ್ರೀಯ ಸಂವಾದದೊಂದಿಗೆ, ದೇಶಾದ್ಯಂತ ಬುಡಕಟ್ಟು ಸಂಗ್ರಹಾಲಯಗಳು ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯಗಳನ್ನು (ಟಿ ಎಫ್ ಎಫ್ ಎಂಗಳು) ಬಲಪಡಿಸುವ ಸಮಾನಾಂತರ ವೇದಿಕೆಯನ್ನು ಮೊದಲ ಬಾರಿಗೆ ಒಂದೇ ವೇದಿಕೆಯಡಿ ತರುತ್ತಿದೆ. ಈ ರಾಷ್ಟ್ರೀಯ ಸಮಾವೇಶವು ಗೌರವಾನ್ವಿತ ಪ್ರಧಾನಮಂತ್ರಿಯವರ ‘ವಿಕಸಿತ ಭಾರತ @2047’ ಮಾರ್ಗಸೂಚಿಯನ್ನು ಮುನ್ನಡೆಸುತ್ತದೆ. ಇದರಡಿಯಲ್ಲಿ ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಯಾವುದೇ ಸಮುದಾಯವೂ ಹಿಂದೆ ಉಳಿಯದಂತೆ ನೋಡಿಕೊಳ್ಳುವುದು, ಒಳಗೊಳ್ಳುವಿಕೆಯ ರಾಷ್ಟ್ರೀಯ ಅಭಿವೃದ್ಧಿಯ ಪ್ರಮುಖ ಸ್ತಂಭಗಳಾಗಿವೆ.

ಭಾರತದ ಬುಡಕಟ್ಟು ಸಮುದಾಯಗಳು ನೂರಾರು ಭಾಷೆಗಳು ಮತ್ತು ಉಪಭಾಷೆಗಳ ರಕ್ಷಕರಾಗಿವೆ. ಇವುಗಳಲ್ಲಿ ಹೆಚ್ಚಿನವು ಲಿಪಿ ರಹಿತವಾಗಿದ್ದು, ತರಗತಿಯ ಶಿಕ್ಷಣದಿಂದ ದೂರವಾಗಿವೆ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಗೊಳ್ಳುತ್ತಿಲ್ಲ. ಬುಡಕಟ್ಟು ಭಾಷೆಯ ನಾಶವು ಅದರೊಂದಿಗಿನ ಸಂಪೂರ್ಣ ಪರಿಸರ, ವೈದ್ಯಕೀಯ, ಕೃಷಿ ಮತ್ತು ಸಾಂಸ್ಕೃತಿಕ ಜ್ಞಾನವನ್ನೂ ನಾಶಪಡಿಸುತ್ತದೆ ಎಂಬುದನ್ನು ಮನಗಂಡು, ಸಚಿವಾಲಯವು,  ಬುಡಕಟ್ಟು ಸಂಶೋಧನಾ ಸಂಸ್ಥೆಗಳು (ಟಿ ಆರ್ ಗಳು) ಮತ್ತು ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಗಳ ಜಾಲದ ಮೂಲಕ, ಸಮುದಾಯದ ಆದ್ಯತೆಗಳನ್ನು ಕೇಂದ್ರವಾಗಿರಿಸಲು ಮತ್ತು ಬುಡಕಟ್ಟು ಭಾಷಾ ದಾಖಲೀಕರಣ, ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ರಾಷ್ಟ್ರೀಯ ರಸ್ತೆ ನಕ್ಷೆಯನ್ನು ರೂಪಿಸಲು ಈ ರಾಷ್ಟ್ರೀಯ ಸಮಾವೇಶವನ್ನು ನಡೆಸಲಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುಡಕಟ್ಟು ಸಮುದಾಯಗಳ ಕೊಡುಗೆಯನ್ನು ಗುರುತಿಸಿ ಗೌರವಾನ್ವಿತ ಪ್ರಧಾನಮಂತ್ರಿಯವರು ತಮ್ಮ 2016 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಿಸಿದ ದೂರದೃಷ್ಟಿಯನ್ನು ಈ ಸಮಾವೇಶವು ಮುಂದುವರಿಸಲಿದೆ. ಈ ನಿಟ್ಟಿನಲ್ಲಿ, ಸಚಿವಾಲಯವು 10 ರಾಜ್ಯಗಳಲ್ಲಿ 11 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಹಾಲಯಗಳನ್ನು ಮಂಜೂರು ಮಾಡಿದ್ದು, ಅವುಗಳಲ್ಲಿ ನಾಲ್ಕನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಈ ಸಮಾವೇಶವು ಬುಡಕಟ್ಟು ಸಂಗ್ರಹಾಲಯಗಳು ಮತ್ತು ಟಿ ಎಫ್ ಎಫ್ ಎಂಗಳನ್ನು ಸಮಕಾಲೀನ ರೀತಿಯಲ್ಲಿ ಪ್ರಸ್ತುತಪಡಿಸುವಿಕೆ,  ಆಯ್ಕೆ, ಕಥೆ ಹೇಳುವಿಕೆ ಮತ್ತು ಸಮುದಾಯ ಆಧಾರಿತ ಪಾರಂಪರಿಕ ಪ್ರಾತಿನಿಧ್ಯದ ಜೀವಂತ ಸಂಸ್ಥೆಗಳಾಗಿ ರೂಪಿಸುವ ಜಂಟಿ ದೂರದೃಷ್ಟಿಯನ್ನು ಚರ್ಚಿಸಲಿದೆ. ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಬದಲಿಗೆ ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ಸಾಂಪ್ರದಾಯಿಕ ಜ್ಞಾನದ ಜೀವಂತ ಕೋಶವಾಗಿದೆ ಎಂಬ ಪ್ರಧಾನಮಂತ್ರಿಯವರ ವ್ಯಾಪಕ ನಂಬಿಕೆಯನ್ನು ಇದು ಪ್ರತಿಬಿಂಬಿಸುತ್ತದೆ.  ಈ ದೃಷ್ಟಿಕೋನದಲ್ಲಿ ಬುಡಕಟ್ಟು ಭಾಷೆಗಳು ಕೇಂದ್ರ ಸ್ಥಾನವನ್ನು ಪಡೆದಿವೆ.

ಈ ಸಮಾವೇಶವನ್ನು *ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ದುರ್ಗಾದಾಸ್ ಉಯ್ಕೆ ಅವರು, ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ಗೌರವಾನ್ವಿತ ಸಚಿವರಾದ ಶ್ರೀ ರಘುಮೂರ್ತಿ; ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅನಂತ್ ಪ್ರಕಾಶ್ ಪಾಂಡೆ; ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಕನಕವಲ್ಲಿ, ಐಎಎಸ್; ಮತ್ತು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ (ಸಿಐಐಎಲ್) ನಿರ್ದೇಶಕರಾದ ಪ್ರೊ. ಬಸವರಾಜ ಕೊಡಗುಂಟಿ* ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಬುಡಕಟ್ಟು ಭಾಷೆಗಳಲ್ಲಿನ 'ಕರ್ನಾಟಕ ಪ್ರೈಮರ್ಗಳ' ಬಿಡುಗಡೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಸಿಐಐಎಲ್ ನಡುವೆ ತಿಳುವಳಿಕಾ ಒಡಂಬಡಿಕೆಗೆ  ಸಹಿ, ಚಾಟ್ ಬಾಟ್ ಗೆ ಚಾಲನೆ, ಹಾಗೂ ಆದಿ ವಾಣಿ ವೇದಿಕೆಗೆ ಹೊಸ ಐಒಎಸ್ ಆ್ಯಪ್, ಐದು ಹೊಸ ಭಾಷೆಗಳ ಸೇರ್ಪಡೆ ಮತ್ತು ಹಲವು ಹೊಸ ವೈಶಿಷ್ಟ್ಯಗಳನ್ನೊಳಗೊಂಡ ಪ್ರಮುಖ ನವೀಕರಣವನ್ನು ಲೋಕಾರ್ಪಣೆ ಮಾಡಲಾಗುವುದು.

ದಿನದ ಕಾರ್ಯಕಲಾಪಗಳಲ್ಲಿ ಬುಡಕಟ್ಟು ಭಾಷಾ ದಾಖಲೀಕರಣದ ಪ್ರಸ್ತುತ ಸ್ಥಿತಿ ಮತ್ತು ಸಮುದಾಯ ನೇತೃತ್ವದ ಪುನರುಜ್ಜೀವನ ಮಾದರಿಗಳು; ಭಾಷಾ ತಂತ್ರಜ್ಞಾನ — ಎಸಿಆರ್, ಟೆಕ್ಸ್ಟ್-ಟು-ಸ್ಪೀಚ್, ಯಂತ್ರ ಅನುವಾದ, ಕಾರ್ಪಸ್ ನಿರ್ಮಾಣ ಮತ್ತು ಸಂಬಂಧಿತ ದತ್ತಾಂಶ ರಕ್ಷಣೆ ಹಾಗೂ ವಾಣಿಜ್ಯೀಕರಣದ ಕಾಳಜಿಗಳು; ಮತ್ತು ಬಹುಭಾಷಾ ಶಿಕ್ಷಣ (ಎಂ ಎಲ್ ಇ) ಕುರಿತು ಗೋಷ್ಠಿ ಚರ್ಚೆಗಳು ನಡೆಯಲಿವೆ. ದೇಶಾದ್ಯಂತದ ಟಿಆರ್ ಐಗಳು ತಮ್ಮ ಭಾಷಾ ಸಂರಕ್ಷಣಾ ಉಪಕ್ರಮಗಳನ್ನು ಪ್ರಸ್ತುತಪಡಿಸಲಿವೆ.

ಎರಡನೇ ದಿನದ ಕಾರ್ಯಕ್ರಮಗಳು ಭಾಷಾ ಪುನರುಜ್ಜೀವನ ಪ್ರಯತ್ನಗಳಿಂದ ಬುಡಕಟ್ಟು ಸಮುದಾಯಗಳು ಸ್ವತಃ ಏನನ್ನು ಬಯಸುತ್ತವೆ ಎಂಬುದರ ಕುರಿತು ತಳಮಟ್ಟದ ಮತ್ತು ಸಮುದಾಯ-ಭಾಷಾವಿಜ್ಞಾನಿಗಳ  ಗೋಷ್ಠಿಯೊಂದಿಗೆ ಪ್ರಾರಂಭವಾಗಲಿವೆ. ನಂತರ 'ಬುಡಕಟ್ಟು ಭಾಷೆಗಳ ಕುರಿತಾದ ಘೋಷಣೆ'ಯ ಕರಡು ರಚನೆ, ಅಳವಡಿಕೆ ಮತ್ತು ಸಹಿ ಮಾಡುವಿಕೆ ನಡೆಯಲಿದೆ. ನಂತರ ಈ ದಿನವು ಸಂಗ್ರಹಾಲಯಗಳ ವಿಭಾಗಕ್ಕೆ ಬದಲಾಗಲಿದ್ದು, ಬುಡಕಟ್ಟು ಸ್ವಾತಂತ್ರ್ಯದ ಕಥನಗಳನ್ನು ನೈಜವಾಗಿ ಬಿಂಬಿಸುವುದು; ಸ್ಮೃತಿ ಮತ್ತು ಗುರುತಿನ ಜೀವಂತ ಸಂಸ್ಥೆಗಳಾಗಿ ಸಂಗ್ರಹಾಲಯಗಳು; ಕಟ್ಟಡದಿಂದ ಪ್ರದರ್ಶನದವರೆಗಿನ ಸಂಗ್ರಹಾಲಯ ಯೋಜನೆ ಪ್ರಕ್ರಿಯೆ; ಎಆರ್ / ವಿ ಆರ್  ಮತ್ತು ಸಂವಾದಾತ್ಮಕ  ಕಿಯಾಸ್ಕ್ ಗಳು ಸೇರಿದಂತೆ ಸಮಕಾಲೀನ ಪ್ರದರ್ಶನ ತಂತ್ರಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳು; ಹಾಗೂ ಭೋಪಾಲ್ ನ ಬುಡಕಟ್ಟು ಸಂಗ್ರಹಾಲಯದಂತಹ ಅನುಭವಗಳನ್ನು ಆಧರಿಸಿ ಸಂಗ್ರಹಾಲಯ ನಿರ್ಮಾಣದಲ್ಲಿ ಸಮುದಾಯದ ಭಾಗವಹಿಸುವಿಕೆಯ ಕುರಿತು ಗೋಷ್ಠಿಗಳು ನಡೆಯಲಿವೆ.

ಈ ಸಮಾವೇಶವು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳು, ಟಿ ಆರ್ ಐ ಗಳು ಮತ್ತು ಅನುಷ್ಠಾನ ಸಂಸ್ಥೆಗಳು, ಬುಡಕಟ್ಟು ಭಾಷಾ ತಜ್ಞರು, ಸಂಗ್ರಹಾಲಯ ತಜ್ಞರು, ಕ್ಯುರೇಟರ್ ಗಳು, ಸಂರಕ್ಷಣೆ ಮತ್ತು ತಂತ್ರಜ್ಞಾನ ತಜ್ಞರು, ಇತಿಹಾಸಕಾರರು, ಮಾನವಶಾಸ್ತ್ರಜ್ಞರು, ಬುಡಕಟ್ಟು ಸಮುದಾಯದ ಪ್ರತಿನಿಧಿಗಳು ಮತ್ತು ದೇಶಾದ್ಯಂತದ ಸಾಂಪ್ರದಾಯಿಕ ಜ್ಞಾನ ಹೊಂದಿರುವವರನ್ನು ಒಂದೆಡೆ ತರಲಿದೆ.

ಸಮಾವೇಶದ ನಿರೀಕ್ಷಿತ ಫಲಿತಾಂಶಗಳಲ್ಲಿ: ಬುಡಕಟ್ಟು ಭಾಷಾ ದಾಖಲೀಕರಣದ ಏಕೀಕೃತ ರಾಷ್ಟ್ರೀಯ ಚಿತ್ರಣ; ವಿಸ್ತರಿಸಲು ಗುರುತಿಸಲಾದ ಸಮುದಾಯ ನೇತೃತ್ವದ ಪುನರುಜ್ಜೀವನ ಮಾದರಿಗಳ ಸಂಕ್ಷಿಪ್ತ ಪಟ್ಟಿ; ಬುಡಕಟ್ಟು ಶಾಲೆಗಳಲ್ಲಿ ಬಹುಭಾಷಾ ಶಿಕ್ಷಣದ ಕಾರ್ಯಾಚರಣೆಯ ವಿಧಾನ; ಬುಡಕಟ್ಟು ಭಾಷೆಗಳ ಘೋಷಣೆಯ ಅಳವಡಿಕೆ; ಮತ್ತು ಸಂಶೋಧನೆ, ಕ್ಯುರೇಶನ್, ಸಂರಕ್ಷಣೆ ಹಾಗೂ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುವ ಬುಡಕಟ್ಟು ಸಂಗ್ರಹಾಲಯಗಳು ಮತ್ತು ಟಿ ಎಫ್ ಎಫ್ ಎಂಗಳ ಜಂಟಿ ರಾಷ್ಟ್ರೀಯ ದೃಷ್ಟಿಕೋನ ಸೇರಿವೆ.

 

*****


(रिलीज़ आईडी: 2302562) आगंतुक पटल : 30
इस विज्ञप्ति को इन भाषाओं में पढ़ें: English , Urdu , हिन्दी , Tamil