ರೈಲ್ವೇ ಸಚಿವಾಲಯ
azadi ka amrit mahotsav

ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಂಟು ಜಿಲ್ಲೆಗಳನ್ನು ಒಳಗೊಂಡ ನಾಲ್ಕು ಮಲ್ಟಿಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ; ಇದು ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 410 ಕಿ.ಮೀ ಹೆಚ್ಚಿಸಲಿದೆ


ಯೋಜನೆಗಳ ಒಟ್ಟು ಅಂದಾಜು ವೆಚ್ಚ 9,450 ಕೋಟಿ ರೂ. ಆಗಿದ್ದು, 2030-31ರ ವೇಳೆಗೆ ಪೂರ್ಣಗೊಳ್ಳಲಿವೆ

प्रविष्टि तिथि: 19 AUG 2026 3:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಒಟ್ಟು ಸುಮಾರು 9,450 ಕೋಟಿ ರೂ. ವೆಚ್ಚದ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು  ಹೀಗಿವೆ:

  1. ಖರಗ್ ಪುರ್ - ಭದ್ರಕ್ (ರಾಣಿ ತಾಲ್) 4 ನೇ ಮಾರ್ಗ – 173 ಕಿ.ಮೀ (ಪಶ್ಚಿಮ ಬಂಗಾಳ ಮತ್ತು ಒಡಿಶಾ)
  2. ಭದ್ರಕ್ - ಹರಿದಾಸ್ ಪುರ್  4 ನೇ ಮಾರ್ಗ – 75 ಕಿ.ಮೀ (ಒಡಿಶಾ)
  3. ಗುಮ್ಮಿಡಿಪೂಂಡಿ - ಗೂಡೂರು 3 ನೇ ಮತ್ತು 4 ನೇ ಮಾರ್ಗ – 90 ಕಿ.ಮೀ (ಆಂಧ್ರಪ್ರದೇಶ ಮತ್ತು ತಮಿಳುನಾಡು)
  4. ಕಟಕ್ - ಪಾರಾದೀಪ್ (ಬಡಾಬಂಧ) 3 ನೇ ಮತ್ತು 4 ನೇ ಮಾರ್ಗ - 72 ಕಿ.ಮೀ (ಒಡಿಶಾ)

ಮಾರ್ಗದ ಹೆಚ್ಚಿದ ಸಾಮರ್ಥ್ಯವು ಚಲಿಸಿವುದನ್ನು  ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಭಾರತೀಯ ರೈಲ್ವೆಗೆ ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ದೊರೆಯಲಿದೆ. ಈ ಮಲ್ಟಿ-ಟ್ರ್ಯಾಕಿಂಗ್ ಪ್ರಸ್ತಾಪಗಳು ಕಾರ್ಯಾಚರಣೆಯನ್ನು ಸರಳಗೊಳಿಸಲು ಮತ್ತು ದಟ್ಟಣೆಯನ್ನು ಶಮನಗೊಳಿಸಲು ಸಜ್ಜಾಗಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ನವ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿದ್ದು, ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಜನರ ಉದ್ಯೋಗ/ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಅವರನ್ನು "ಆತ್ಮನಿರ್ಭರ"ರನ್ನಾಗಿ ಮಾಡುತ್ತದೆ.

ಸಂಯೋಜಿತ ಯೋಜನೆ ಮತ್ತು ಪಾಲುದಾರರ ಸಮಾಲೋಚನೆಗಳ ಮೂಲಕ ಮಲ್ಟಿ-ಮೊಡಲ್ ಸಂಪರ್ಕ ಮತ್ತು ಸಾರಿಗೆ ದಕ್ಷತೆಯನ್ನು ಹೆಚ್ಚಿಸುವ ಗಮನದೊಂದಿಗೆ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನಿನಲ್ಲಿ ಯೋಜನೆಗಳನ್ನು ಯೋಜಿಸಲಾಗಿದೆ. ಈ ಯೋಜನೆಗಳು ಪ್ರಯಾಣಿಕರು, ಸರಕುಗಳು ಮತ್ತು ಸೇವೆಗಳ ಸಂಚಾರಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.

ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಾದ್ಯಂತ 8 ಜಿಲ್ಲೆಗಳನ್ನು ಒಳಗೊಂಡಿರುವ ಈ 4 ಯೋಜನೆಗಳು ಭಾರತೀಯ ರೈಲ್ವೆಯ ಪ್ರಸ್ತುತ ಜಾಲವನ್ನು ಸುಮಾರು 410 ಕಿ.ಮೀ.ಗಳಷ್ಟು ಹೆಚ್ಚಿಸಲಿವೆ. ಪ್ರಸ್ತಾವಿತ ಮಲ್ಟಿ-ಟ್ರ್ಯಾಕಿಂಗ್ ಯೋಜನೆಗಳು ಸುಮಾರು 60 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸುಮಾರು 6,448 ಹಳ್ಳಿಗಳಿಗೆ ಸಂಪರ್ಕವನ್ನು ಹೆಚ್ಚಿಸಲಿವೆ.

ಪ್ರಸ್ತಾವಿತ ಸಾಮರ್ಥ್ಯ ವರ್ಧನೆಯು ಕುಲ್ಡಿಹಾ ವನ್ಯಜೀವಿ ಅಭಯಾರಣ್ಯ, ಭಿತರ್ಕನಿಕಾ ರಾಷ್ಟ್ರೀಯ ಉದ್ಯಾನವನ, ಮಾ ಭದ್ರಕಾಳಿ ದೇವಾಲಯ, ಮಾ ಧಮರಾಯ್ ದೇವಾಲಯ, ಪಂಚಲಿಂಗೇಶ್ವರ ದೇವಾಲಯ, ತಾಲ್ಸಾರಿ-ಉದಯಪುರ ಮತ್ತು ಚಂಡೀಪುರ ಬೀಚ್, ಪುಲಿಕಾಟ್ ಸರೋವರ, ನೆಲಪಟ್ಟು ಪಕ್ಷಿ ಅಭಯಾರಣ್ಯ, ಶ್ರೀ ವೀರಾಘವ ಪೆರುಮಾಳ್ ದೇವಾಲಯ, ಗಡ ಕುಜಂಗ ಜಗನ್ನಾಥ ದೇವಾಲಯ, ಶಾರಳಾ ದೇವಾಲಯ, ಧಬಲೇಶ್ವರ ದೇವಾಲಯ, ಲಲಿತಗಿರಿ (ಬೌದ್ಧ ತಾಣ) ಇತ್ಯಾದಿ ಸೇರಿದಂತೆ ದೇಶದ ಹಲವಾರು ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.

ಪ್ರಸ್ತಾವಿತ ಯೋಜನೆಗಳು ಕಲ್ಲಿದ್ದಲು, ಕಬ್ಬಿಣದ ಅದಿರು, ಸಿಮೆಂಟ್, ಕಬ್ಬಿಣ ಮತ್ತು ಉಕ್ಕು, ಕಂಟೇನರ್, ಆಟೋಮೊಬೈಲ್, ಆಹಾರ ಧಾನ್ಯಗಳು ಮುಂತಾದ ಸರಕುಗಳ ಸಾಗಣೆಗೆ ಅತ್ಯಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವಿಸ್ತರಣೆ ಕಾಮಗಾರಿಗಳಿಂದ ವಾರ್ಷಿಕ 76 ಎಮ್ ಟಿಪಿಎ (ವರ್ಷಕ್ಕೆ ದಶಲಕ್ಷ ಟನ್ ಗಳು) ಹೆಚ್ಚುವರಿ ಸರಕು ಸಂಚಾರ ಉಂಟಾಗಲಿದೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷತೆಯ ಸಾರಿಗೆಯಾಗಿದ್ದು, ಇದು ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದನ್ನು (~13 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು ಇಂಗಾಲದ ಡೈಆಕ್ಷೈಡ್ ಹೊರಸೂಸುವಿಕೆಯನ್ನು (~65 ಕೋಟಿ ಕೆಜಿ) ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು 2.60 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ.

 

*****


(रिलीज़ आईडी: 2301168) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Gujarati , Malayalam