ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಎಸ್ ಇ ಇ ಡಿ ಯೋಜನೆಯ ಮೂಲಕ ಅಧಿಸೂಚಿತವಲ್ಲದ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಕಲ್ಯಾಣ ಮತ್ತು ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಬಲ
ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ವಸತಿಯ ಸಮಗ್ರ ಬೆಂಬಲ ಡಿ ಎನ್ ಟಿ/ ಎನ್ ಟಿ / ಎಸ್ ಎನ್ ಟಿ ಸಮುದಾಯಗಳಿಗೆ ವಿಸ್ತರಣೆ
प्रविष्टि तिथि:
17 AUG 2026 7:51PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಧಿಸೂಚಿತವಲ್ಲದ ಸಮುದಾಯ, ಅಲೆಮಾರಿ ಸಮುದಾಯ ಮತ್ತು ಅರೆ-ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿ (ಡಿ ಬ್ಲ್ಯು ಬಿ ಡಿ ಎನ್ ಸಿ) ಮೂಲಕ ಅಧಿಸೂಚಿತವಲ್ಲದ, ಅಲೆಮಾರಿ ಮತ್ತು ಅರೆ-ಅಲೆಮಾರಿ (ಡಿ ಎನ್ ಟಿ/ ಎನ್ ಟಿ/ ಎಸ್ ಎನ್ ಟಿ) ಸಮುದಾಯಗಳ ಕಲ್ಯಾಣ ಮತ್ತು ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ಕೇಂದ್ರೀಕೃತ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಅಧಿಸೂಚನೆಯಾಗದ, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಜನಾಂಗದವರ ರಾಷ್ಟ್ರೀಯ ಆಯೋಗವನ್ನು 2015ರ ಜನವರಿಯಲ್ಲಿ ರಚಿಸಲಾಯಿತು ಮತ್ತು 2017ರ ಡಿಸೆಂಬರ್ ನಲ್ಲಿ ಆಯೋಗವು ತನ್ನ ವರದಿ ಸಲ್ಲಿಸಿತು. ಕೇಂದ್ರ ಸರ್ಕಾರವು ಆಯೋಗದ ಶಿಫಾರಸುಗಳನ್ವಯ ಫೆಬ್ರವರಿ 2019 ರಲ್ಲಿ ಅಧಿಸೂಚಿಸಲ್ಪಡದ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯನ್ನು (ಡಿ ಡಬ್ಲ್ಯು ಬಿ ಡಿ ಎನ್ ಸಿ) ರಚಿಸಿತು.
ಡಿ ಡಬ್ಲ್ಯು ಬಿ ಡಿ ಎನ್ ಸಿ ಯು ಡಿ ಎನ್ ಟಿ ಗಳ ಆರ್ಥಿಕ ಸಬಲೀಕರಣ ಯೋಜನೆ (ಎಸ್ ಇ ಇ ಡಿ) ಅನ್ನು ಜಾರಿಗೊಳಿಸುತ್ತಿದೆ, ಇದು ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ವಸತಿ ಎಂಬ ನಾಲ್ಕು ಅಂಶಗಳನ್ನು ಒಳಗೊಂಡಿದೆ. ಈ ಯೋಜನೆಯು ಡಿ ಎನ್ ಟಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಗುಣಮಟ್ಟದ ತರಬೇತಿ ನೀಡಲಿದೆ ಮತ್ತು ಡಿ ಎನ್ ಟಿ ಸಮುದಾಯಗಳಿಗೆ ಆರೋಗ್ಯ ವಿಮೆಯ ಬೆಂಬಲವನ್ನೂ ಒದಗಿಸಲಿದೆ. ಇದು ಸಮುದಾಯ ಮಟ್ಟದಲ್ಲಿ ಜೀವನೋಪಾಯ ಉಪಕ್ರಮಗಳನ್ನು ಸರಾಗಗೊಳಿಸಲಿದೆ ಮತ್ತು ಈ ಸಮುದಾಯಗಳ ಸದಸ್ಯರಿಗೆ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಲಿದೆ.

ಈ ಮಧ್ಯಸ್ಥಿಕೆಗಳ ಮೂಲಕ, ಸರ್ಕಾರವು ಡಿ ಎನ್ ಟಿ/ ಎನ್ ಟಿ/ ಎಸ್ ಎನ್ ಟಿ ಸಮುದಾಯಗಳ ಅರ್ಹ ಸದಸ್ಯರಿಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ವಸತಿ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆಯಲು ಬೆಂಬಲ ನೀಡುತ್ತಿದೆ. ಎಸ್ ಇ ಇ ಡಿ ಅಡಿಯಲ್ಲಿನ ಸಮಗ್ರ ವಿಧಾನವು ಪ್ರಮುಖ ಸಾಮಾಜಿಕ-ಆರ್ಥಿಕ ಅಗತ್ಯಗಳನ್ನು ಪರಿಹರಿಸಲು ಮತ್ತು ಈ ಸಮುದಾಯಗಳ ಹೆಚ್ಚಿನ ಆರ್ಥಿಕ ಸಬಲೀಕರಣ ಮತ್ತು ಸುಧಾರಿತ ಜೀವನ ಸ್ಥಿತಿಗತಿಗಳನ್ನು ಸುಗಮವಾಗಿ ಒದಗಿಸಲು ಪ್ರಯತ್ನಿಸುತ್ತದೆ.
ಅಧಿಸೂಚಿತವಲ್ಲದ, ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಕಲ್ಯಾಣ ಮತ್ತು ಅಭಿವೃದ್ಧಿ ಮಧ್ಯಸ್ಥಿಕೆಗಳನ್ನು ಬಲಪಡಿಸಲು ಹಾಗೂ ಡಿ ಡಬ್ಲ್ಯೂ ಬಿ ಡಿ ಎನ್ ಸಿ ಮತ್ತು ಸೀಡ್ ಯೋಜನೆಯಡಿ ಸಾಂಸ್ಥಿಕ ಚೌಕಟ್ಟಿನ ಮೂಲಕ ಅವರಿಗೆ ಅವಕಾಶಗಳು ಮತ್ತು ಅಗತ್ಯ ಬೆಂಬಲ ಪಡೆಯುವುದನ್ನು ಅನುಕೂಲವಾಗಿಸಲು ಸರ್ಕಾರ ಬದ್ಧವಾಗಿದೆ.
*****
(रिलीज़ आईडी: 2300735)
आगंतुक पटल : 5