ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಆರ್ಥಿಕ ಒತ್ತಡದಿಂದ ಜಾಗತಿಕ ಸಂಶೋಧನಾ ಮಾನ್ಯತೆಯವರೆಗೆ: ಹೇಗೆ ಪರಿಶಿಷ್ಟ ಜಾತಿ ಯೋಜನೆಗಾಗಿ ರಾಷ್ಟ್ರೀಯ ಫೆಲೋಶಿಪ್ ಪ್ರಿಯಂಗ ಜಿ ಪಿಎಚ್‌ಡಿ ಮುಂದುವರಿಕೆಗೆ  ಸಹಾಯ

प्रविष्टि तिथि: 16 AUG 2026 5:21PM by PIB Bengaluru

ಉನ್ನತ ಶಿಕ್ಷಣದ ಪ್ರವೇಶವು ಸಂಶೋಧಕರು ತಮ್ಮ ಆಕಾಂಕ್ಷೆಗಳನ್ನು ಮುಂದುವರಿಸಲು ಮತ್ತು ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅವಕಾಶಗಳನ್ನು ನಿರ್ಮಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೂ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಮುಂದುವರಿಸಲು ಬಯಸುವ ಸಂಶೋಧಕರಿಗೆ ಆರ್ಥಿಕ ತೊಂದರೆಗಳು ಮತ್ತು ಕೌಟುಂಬಿಕ ಒತ್ತಡವು ಸವಾಲುಗಳಾಗಿ ಪರಿಣಮಿಸಬಹುದು.

ಫೆಲೋಶಿಪ್ ನೆರವು ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪುದುಚೇರಿಯ 27 ವರ್ಷದ ಸಂಶೋಧಕಿ ಶ್ರೀಮತಿ ಪ್ರಿಯಂಗಾ ಜಿ ತಮ್ಮ ಪಿಎಚ್‌ಡಿಯನ್ನು ಮುಂದುವರಿಸುವ ಮೂಲಕ ಪ್ರದರ್ಶಿಸಿದ್ದಾರೆ.

ಪರಿಶಿಷ್ಟ ಜಾತಿಗಾಗಿ ರಾಷ್ಟ್ರೀಯ ಫೆಲೋಶಿಪ್ (ಎನ್ ಎಫ್ ಎಸ್ ಸಿ) ಯೋಜನೆಯ ಪ್ರಯೋಜನವನ್ನು ಪಡೆಯುವ ಮುನ್ನ ಅವರು ಉನ್ನತ ಶಿಕ್ಷಣದ ಕನಸನ್ನು ಮುಂದುವರಿಸುವಾಗ ಆರ್ಥಿಕ ಹೊರೆ ಮತ್ತು ಕುಟುಂಬದ ಒತ್ತಡವನ್ನು ಎದುರಿಸಿದರು. ಈ ಸವಾಲುಗಳ ಹೊರತಾಗಿಯೂ, ಅವರು ಸಂಶೋಧನೆಗೆ ಬದ್ಧರಾಗಿದ್ದರು ಮತ್ತು ತಮ್ಮ ವೃತ್ತಿಜೀವನದ ಬೆಳವಣಿಗೆಗೆ ಸರ್ಕಾರದ ಫೆಲೋಶಿಪ್ ಅನ್ನು ಬಳಸಿಕೊಳ್ಳಲು ಆಶಿಸಿದರು.

ಅವರ ಎನ್ ಎಫ್ ಎಸ್ ಸಿ ಫೆಲೋಶಿಪ್ ನೆರವು 2022ರ ನವೆಂಬರ್ 2022 ನಲ್ಲಿ ಆರಂಭವಾಯಿತು. ಫೆಲೋಶಿಪ್ ಸಹಾಯ ಅವರ ಪಿಎಚ್‌ಡಿ ಅವಧಿಯಲ್ಲಿ ಅವರ ಹಣಕಾಸಿನ ನಿರ್ಬಂಧಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿತು ಮತ್ತು ಸಂಶೋಧನೆಗೆ ಸಂಬಂಧಿಸಿದ ವೆಚ್ಚಗಳನ್ನು ಪೂರೈಸಲು ಅವರಿಗೆ ಅನುವು ಮಾಡಿಕೊಟ್ಟಿತು. 10,000 ರಿಂದ 15,000 ರೂಪಾಯಿ ಬೆಲೆಯ ದುಬಾರಿ ಸಂಶೋಧನಾ ಸಾಮಗ್ರಿಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಖರೀದಿಸಲು ಆಕೆಗೆ ಸಾಧ್ಯವಾಯಿತು, ಇದು ಅವರ ಸಂಶೋಧನಾ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಂಬಲಿಸಿತು.

ಈ ಫೆಲೋಶಿಪ್ ಪ್ರಿಯಾಂಗ ಅವರಿಗೆ ವಿದೇಶಗಳಲ್ಲಿ ಎರಡು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು, ಅಲ್ಲಿ ಅವರು ಅಂತಾರಾಷ್ಟ್ರೀಯ ಶೈಕ್ಷಣಿಕ ಮಾನ್ಯತೆಯನ್ನು ಪಡೆಯಲು ಸಾಧ್ಯವಾಯಿತು. ಅವರು ತಮ್ಮ ಪೋಷಕರನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಲು ಸಾಧ್ಯವಾಯಿತು, ಫೆಲೋಶಿಪ್ ಬೆಂಬಲವಿಲ್ಲದೆ ಈ ಅನುಭವ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಅಲ್ಲದೆ, ಅವರು ಭಾರತದಲ್ಲಿ ನಡೆದ 10 ಕ್ಕೂ ಅಧಿಕ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನೆಯನ್ನು ಮಂಡಿಸಿದ್ದಾರೆ.

ಎನ್ ಎಫ್ ಎಸ್‌ ಸಿ ಫೆಲೋಶಿಪ್‌ನ ಬೆಂಬಲದೊಂದಿಗೆ ಪ್ರಿಯಂಗ ತನ್ನ ಪಿಎಚ್‌ಡಿ ಪದವಿಯನ್ನು ಮುಂದುವರಿಸುತ್ತಾ ತನ್ನ ಸಂಶೋಧನಾ ಅನುಭವ ಮತ್ತು ವೃತ್ತಿ ನಿರೀಕ್ಷೆಗಳನ್ನು ಬಲಪಡಿಸಿಕೊಂಡಿದ್ದಾರೆ. ಕೇವಲ ಫಲಿತಾಂಶಗಳಿಗಿಂತ ಹೆಚ್ಚಾಗಿ ಸಂಶೋಧನೆಗೆ ನೈಜ ಬದ್ಧತೆಯ ಮೇಲೆ ಅವರು ಗಮನಹರಿಸಿದರು ಮತ್ತು ಫೆಲೋಶಿಪ್ ಅನ್ನು ತನ್ನ ವೃತ್ತಿಜೀವನದ ಬೆಳವಣಿಗೆಗೆ ಪ್ರಮುಖ ಬೆಂಬಲವೆಂದು ಪರಿಗಣಿಸಿದ್ದಾರೆ.

ಪ್ರಿಯಂಗ ಜಿ ಅವರು 'ಈ ಸರ್ಕಾರಿ ಫೆಲೋಶಿಪ್ (ಎನ್ ಎಫ್ ಎಸ್ ಸಿ) ನನ್ನ ಪಯಣದಲ್ಲಿ ಒಂದು ಮಹತ್ವದ ತಿರುವು ನೀಡಿದೆ. ಇದು ನನ್ನ ಸಂಶೋಧನೆಗೆ ಬೆಂಬಲ ನೀಡುವುದಲ್ಲದೆ, ಬೆಳೆಯಲು, ಕಲಿಯಲು ಮತ್ತು ನನ್ನ ಕುಟುಂಬವನ್ನು ಹೆಮ್ಮೆಪಡುವಂತೆ ಮಾಡಲು ನನಗೆ ಶಕ್ತಿಯನ್ನು ನೀಡಿದೆ' ಎಂದು ಹೇಳಿದರು.

ಆರ್ಥಿಕ ಒತ್ತಡಗಳ ಹೊರತಾಗಿಯೂ ಫೆಲೋಶಿಪ್ ಬೆಂಬಲವು ಸಂಶೋಧಕರು ತಮ್ಮ ಸಂಶೋಧನೆಯನ್ನು ಮುಂದುವರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಪ್ರಿಯಂಗಾ ಅವರ ಪಯಣವು ಉಲ್ಲೇಖಿಸುತ್ತದೆ. ಉನ್ನತ ಶಿಕ್ಷಣವನ್ನು ಬಯಸುವಾಗ ಆರ್ಥಿಕ ಹೊರೆ ಮತ್ತು ಕುಟುಂಬದ ಒತ್ತಡವನ್ನು ಎದುರಿಸುವುದರಿಂದ ಹಿಡಿದು ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಹಾಜರಾಗುವುದು ಮತ್ತು ಅವರ ಶೈಕ್ಷಣಿಕ ಅನುಭವವನ್ನು ವಿಸ್ತರಿಸುವುದು, ಅವರ ಪ್ರಯಾಣವು ಎನ್ ಎಫ್ ಎಸ್ ಸಿ ಫೆಲೋಶಿಪ್ ಮೂಲಕ ಸಕ್ರಿಯಗೊಳಿಸಲಾದ ಸಕಾರಾತ್ಮಕ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ.

 

*****


(रिलीज़ आईडी: 2300251) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Tamil