ಭಾರೀ ಕೈಗಾರಿಕೆಗಳ ಸಚಿವಾಲಯ
ʻಫೇಮ್ ಇಂಡಿಯಾʼ ಯೋಜನೆ ಹಂತ-II: ಎಲೆಕ್ಟ್ರಿಕ್ ವಾಹನ ಅಳವಡಿಕೆ ಮತ್ತು ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಪ್ರಗತಿ
प्रविष्टि तिथि:
12 AUG 2026 11:27AM by PIB Bengaluru
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯ ಪ್ರಗತಿಗೆ ಬೃಹತ್ ಕೈಗಾರಿಕೆಗಳ ಸಚಿವಾಲಯ(ಎಂಎಚ್ಐ) ಜಾರಿಗೆ ತಂದ ಯೋಜನೆಗಳ ವಿವರಗಳು ಮತ್ತು ಪ್ರಗತಿ ಈ ಕೆಳಗಿನಂತಿದೆ:-
ಭಾರತದಲ್ಲಿ (ಹೈಬ್ರಿಡ್ ಮತ್ತು) ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ (ಫೇಮ್ ಇಂಡಿಯಾ) ಯೋಜನೆ ಹಂತ-II: ಸರ್ಕಾರವು ಈ ಯೋಜನೆಯನ್ನು 01.04.2019 ರಿಂದ 31.03.2024 ರವರೆಗೆ ಐದು ವರ್ಷಗಳ ಅವಧಿಗೆ ಒಟ್ಟು 11,500 ಕೋಟಿ ರೂ.ಗಳ ಆಯವ್ಯಯ ಅನುದಾನದೊಂದಿಗೆ ಜಾರಿಗೆ ತಂದಿದೆ. ಈ ಯೋಜನೆಯು ಎಲೆಕ್ಟ್ರಿಕ್ ದ್ವಿಚಕ್ರವಾಹನ(ಇ-2ಡಬ್ಲ್ಯೂ), ಎಲೆಕ್ಟ್ರಿಕ್ ತ್ರಿಚಕ್ರ ವಾಹನ(ʻಇ-3ಡಬ್ಲ್ಯೂʼ) ಎಲೆಕ್ಟ್ರಿಕ್ ನಾಲ್ಕುಚಕ್ರದ ವಾಹನಗಳಿಗೆ(ʻಇ-4ಡಬ್ಲ್ಯೂʼ) ಬೇಡಿಕೆ ಪ್ರೋತ್ಸಾಹಧನ; ಹಾಗೂ ʻಇ-ಬಸ್ʼಗಳಿಗೆ ಮತ್ತು ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳ (ಇವಿ ಪಿಸಿಎಸ್) ಸ್ಥಾಪನೆಗೆ ಅನುದಾನವನ್ನು ಒದಗಿಸಿದೆ. ʻಫೇಮ್-IIʼ ಯೋಜನೆಯು ʻಇ-2ಡಬ್ಲ್ಯೂʼ, ʻಇ-3ಡಬ್ಲ್ಯೂʼ ಮತ್ತು ʻಇ-4ಡಬ್ಲ್ಯೂʼ ಸೇರಿದಂತೆ ಸುಮಾರು 16.72 ಲಕ್ಷ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಬೆಂಬಲಿಸಿದೆ. ಇದಲ್ಲದೆ, 31.07.2026 ರವರೆಗೆ ಯೋಜನೆಯಡಿ 5,299 ಎಲೆಕ್ಟ್ರಿಕ್ ಬಸ್ಸುಗಳನ್ನು (ಇ-ಬಸ್‌ಗಳು) ನಿಯೋಜಿಸಲಾಗಿದೆ. ಇದಲ್ಲದೆ, ದೇಶಾದ್ಯಂತ ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗಾಗಿ ಯೋಜನೆಯಡಿ 912.50 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ 9,583 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಭಾರತದಲ್ಲಿ ವಾಹನ ಮತ್ತು ವಾಹನ ಬಿಡಿಭಾಗಗಳ ಉದ್ಯಮಕ್ಕಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ(ಪಿಎಲ್ಐ) ಯೋಜನೆ (ಪಿಎಲ್ಐ-ಆಟೋ): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಸುಧಾರಿತ ಆಟೋಮೋಟಿವ್ ಟೆಕ್ನಾಲಜಿ (ಎಎಟಿ) ಉತ್ಪನ್ನಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು 23.09.2021ರಂದು ಸರ್ಕಾರವು ಈ ಯೋಜನೆಯನ್ನು ಆರಂಭಿಸಿ ಅಧಿಸೂಚನೆ ಹೊರಡಿಸಿದೆ. ಆಟೋಮೊಬೈಲ್ ಮತ್ತು ಆಟೋ ಬಿಡಿಭಾಗಗಳ ಉದ್ಯಮಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ.
ಸುಧಾರಿತ ರಸಾಯನಶಾಸ್ತ್ರ ಕೋಶ (ಎಸಿಸಿ) ಬ್ಯಾಟರಿ ಸಂಗ್ರಹಣೆಯ ರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ʻಉತ್ಪಾದನೆ ಆಧಾರಿತ ಪ್ರೋತ್ಸಾಹಧನʼ(ಪಿಎಲ್ಐ) ಯೋಜನೆ: ಸರ್ಕಾರವು 09.06.2021ರಂದು 18,100 ಕೋಟಿ ರೂ.ಗಳ ಅನುದಾನದೊಂದಿಗೆ ದೇಶದಲ್ಲಿ ʻಎಸಿಸಿʼ ಉತ್ಪಾದನೆಗಾಗಿ ʻಪಿಎಲ್ಐʼ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯು 50GWh ಎಸಿಸಿ ಬ್ಯಾಟರಿಗಳಿಗೆ ಸ್ಪರ್ಧಾತ್ಮಕ ದೇಶೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಅದರಲ್ಲಿ 40GWh ಅನ್ನು ನಾಲ್ಕು ಫಲಾನುಭವಿ ಸಂಸ್ಥೆಗಳಿಗೆ ನೀಡಲಾಗಿದೆ. 40GWh ಸಾಮರ್ಥ್ಯದ ಬಹು ಉದ್ದೇಶದ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಯಾವುದೇ ಉದ್ದೇಶಕ್ಕೆ ಬಳಸಬಹುದಾಗಿದೆ.
ಪಿಎಂ ಎಲೆಕ್ಟ್ರಿಕ್ ಡ್ರೈವ್ ರೆವಲ್ಯೂಷನ್ ಇನ್ ಇನ್ನೋವೇಟಿವ್ ವೆಹಿಕಲ್ ಎನ್ಹಾನ್ಸ್ಮೆಂಟ್ (ಪಿಎಂ ಇಡ್ರೈವ್) ಯೋಜನೆ: 10,900 ಕೋಟಿ ರೂ.ಗಳ ವೆಚ್ಚದೊಂದಿಗೆ ಈ ಯೋಜನೆಯ ಆರಂಭಕ್ಕೆ 29.09.2024 ರಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆಯು ಇ-2ಡಬ್ಲ್ಯೂ, ಇ-3ಡಬ್ಲ್ಯೂ, ಇ-ಟ್ರಕ್‌ಗಳು, ಇ-ಬಸ್‌ಗಳು ಮತ್ತು ಇ-ಆಂಬುಲೆನ್ಸ್‌ಗಳು ಸೇರಿದಂತೆ ಸುಮಾರು 28.30 ಲಕ್ಷ ಎಲೆಕ್ಟ್ರಿಕ್ ವಾಹನಗಳ (ಇವಿ) ಪ್ರೋತ್ಸಾಹವನ್ನು ಬೆಂಬಲಿಸುತ್ತದೆ. ಇದಲ್ಲದೆ, ಈ ಯೋಜನೆಯಡಿ ಪರೀಕ್ಷಾ ಏಜೆನ್ಸಿಗಳ ಉನ್ನತೀಕರಣಕ್ಕೂ ಅನುದಾನ ಲಭ್ಯವಿದೆ. 14,028 ಇ-ಬಸ್‌ಗಳನ್ನು ನಿಯೋಜಿಸಲು ಯೋಜನೆಯಡಿ 4,391 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 14,000 ಇ-ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಭಾರತದಾದ್ಯಂತ ಇವಿ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗಾಗಿ 2,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಹಂತ ಹಂತದ ಉತ್ಪಾದನಾ ಕಾರ್ಯಕ್ರಮವು (ಪಿಎಂಪಿ) ಬ್ಯಾಟರಿ ಪ್ಯಾಕ್‌ಗಳು ಸೇರಿದಂತೆ ಇವಿ ಸಾಧನಗಳನ್ನು ಹಂತ ಹಂತವಾಗಿ ದೇಶೀಯವಾಗಿಯೇ ಉತ್ಪಾದನೆ ಮಾಡುವುದನ್ನು ಕಡ್ಡಾಯಗೊಳಿಸುತ್ತದೆ.
ಪಿಎಂ ಇ-ಬಸ್ ಸೇವಾ: ಪಾವತಿ ಭದ್ರತಾ ಕಾರ್ಯವಿಧಾನ (ಪಿಎಸ್ಎಂ) ಯೋಜನೆ: 28.10.2024 ರಂದು ಅಧಿಸೂಚಿಸಲಾದ ಈ ಯೋಜನೆಗೆ 3,435.33 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದ್ದು, 38,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಸಾರ್ವಜನಿಕ ಸಾರಿಗೆ ಪ್ರಾಧಿಕಾರಗಳು (ಪಿಟಿಎ) ಸುಸ್ತಿದಾರರಾದರೆ ಇ-ಬಸ್ ನಿರ್ವಾಹಕರಿಗೆ ಪಾವತಿ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. 10.07.2026 ರಂತೆ, ʻಪಿಎಂ-ಇಬಸ್ ಸೇವಾʼ ಪಾವತಿ ಭದ್ರತಾ ಕಾರ್ಯವಿಧಾನ (ಪಿಎಸ್‌ಎಂ) ಯೋಜನೆಯು 27,555 ಇ-ಬಸ್‌ಗಳನ್ನು ಒಳಗೊಂಡಿದೆ. ಈ ಪೈಕಿ 10,000 ಇ-ಬಸ್‌ಗಳು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ʻಪಿಎಂ-ಇ-ಬಸ್ ಸೇವಾʼ ಯೋಜನೆಯಡಿಯಲ್ಲಿ, 14,000 ಇ-ಬಸ್‌ಗಳು ಬೃಹತ್ ಕೈಗಾರಿಕಾ ಸಚಿವಾಲಯದ (ʻಪಿಎಂ ಇ-ಡ್ರೈವ್ ಯೋಜನೆʼ ಅಡಿಯಲ್ಲಿವೆ ಮತ್ತು 3,555 ಇ-ಬಸ್‌ಗಳು ವಿವಿಧ ರಾಜ್ಯ ಸರ್ಕಾರ / ರಾಜ್ಯ ಸಾರಿಗೆ ಸಂಸ್ಥೆಗಳ(ಎಸ್‌ಟಿಯು) ಉಪಕ್ರಮಗಳ ಅಡಿಯಲ್ಲಿ ಇವೆ.
ಇದಲ್ಲದೆ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ಈ ಕೆಳಗಿನ ಉಪಕ್ರಮಗಳನ್ನು ಕೈಗೊಂಡಿದೆ: -
i. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜರ್‌ಗಳು / ಚಾರ್ಜಿಂಗ್ ಕೇಂದ್ರಗಳ ಮೇಲಿನ ʻಜಿಎಸ್‌ಟಿʼಯನ್ನು ಶೇ.5 ಕ್ಕೆ ಇಳಿಸಲಾಗಿದೆ.
ii. ಬ್ಯಾಟರಿ ಚಾಲಿತ ವಾಹನಗಳಿಗೆ ಹಸಿರು ಪರವಾನಗಿ ಫಲಕಗಳನ್ನು ನೀಡಲಾಗುವುದು ಮತ್ತು ಪರವಾನಗಿ ಅವಶ್ಯಕತೆಗಳಿಂದ ವಿನಾಯಿತಿ ನೀಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಘೋಷಿಸಿದೆ.
iii. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಮನ್ನಾ ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ, ಇದು ಎಲೆಕ್ಟ್ರಿಕ್ ವಾಹನಗಳ ಆರಂಭಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
30.06.2026 ರವರೆಗೆ ಬೃಹತ್ ಕೈಗಾರಿಕೆಗಳ ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಬೆಂಬಲಿತವಾದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಈ ಕೆಳಗಿನಂತಿದೆ:
|
ಯೋಜನೆ
|
ಫೇಮ್-I
|
ಫೇಮ್-II
(ಮಾರಾಟ ಮಾಡಲಾಗಿದೆ)
|
ಪಿಎಂ ಇ-ಡ್ರೈವ್ ಯೋಜನೆ
(ಮಾರಾಟ ಮಾಡಲಾಗಿದೆ)
|
ಪಿಎಲ್ಐ ಆಟೋ ಮತ್ತು ಆಟೋ ಬಿಡಿಭಾಗಗಳು
(ಮಾರಾಟ ಮಾಡಲಾಗಿದೆ)
|
|
ಬೆಂಬಲಿತ/ಮಾರಾಟ ಮಾಡಿದ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ
|
2.80 ಲಕ್ಷ
|
16.72 ಲಕ್ಷ
|
26.59 ಲಕ್ಷ
|
21.30 ಲಕ್ಷ
(31.03.2026 ರವರೆಗೆ)
|
ಮೇಲೆ ಹೇಳಿದ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಬೆಂಬಲಿಸುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಲು ಸಚಿವಾಲಯವು ಕೊಡುಗೆ ನೀಡಿದೆ.
07.08.2026ರ ಹೊತ್ತಿಗೆ, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 67,657 ಇವಿ ಚಾರ್ಜರ್‌ಗಳನ್ನು ಸ್ಥಾಪಿಸಲಾಗಿದೆ, ಇದರಲ್ಲಿ 1,139 ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ಚಾರ್ಜರ್ಗಳು ಸೇರಿವೆ.
*****
(रिलीज़ आईडी: 2298094)
आगंतुक पटल : 32