ಜಲ ಶಕ್ತಿ ಸಚಿವಾಲಯ
azadi ka amrit mahotsav

ನೀರು ನಿರ್ವಹಣೆ ಮತ್ತು ಸಂರಕ್ಷಣೆ

प्रविष्टि तिथि: 03 AUG 2026 3:21PM by PIB Bengaluru

2020ರ ಏ.1 ರಿಂದ 2025ರ ಅ.10 ರ ಅವಧಿಯಲ್ಲಿ, ಸಮುದಾಯ ನೇತೃತ್ವದ ಭಾಗವಹಿಸುವಿಕೆಯ ಅಂತರ್ಜಲ ನಿರ್ವಹಣಾ ಯೋಜನೆಯಾದ ಅಟಲ್ ಭೂಜಲ್ ಯೋಜನೆಯನ್ನು ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿ ಏಳು ರಾಜ್ಯಗಳ 80 ಜಿಲ್ಲೆಗಳ 229 ಬ್ಲಾಕ್‌ಗಳಲ್ಲಿ 8,203 ಆದ್ಯತೆಯ ನೀರಿನ  ಕೊರತೆ ಇರುವ ಗ್ರಾಮ ಪಂಚಾಯತ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಯಿತು. ಈ ಯೋಜನೆಯಡಿಯಲ್ಲಿ ಒಳಗೊಳ್ಳುವ ರಾಜ್ಯವಾರು ಗ್ರಾಮ ಪಂಚಾಯತ್‌ಗಳ ಸಂಖ್ಯೆಯು ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ವೆಬ್‌ಸೈಟ್‌ನಲ್ಲಿ ಈ ಕೆಳಗಿನ ವೆಬ್-ಲಿಂಕ್‌ನಲ್ಲಿ ಲಭ್ಯವಿದೆ: https://www.jalshakti-dowr.gov.in/static/uploads/2026/07/415c128c8892e9a870e6398d9195742a.pdf

ಅಟಲ್ ಭೂಜಲ್ ಯೋಜನೆಯ ಪ್ರಾಯೋಗಿಕ ಹಂತದ ಪ್ರಮುಖ ಉದ್ದೇಶವೆಂದರೆ ಆಯ್ದ ರಾಜ್ಯಗಳ ನೀರಿನ ಕೊರತೆ ಪ್ರದೇಶಗಳಲ್ಲಿ ಅಂತರ್ಜಲ ಸಂಪನ್ಮೂಲಗಳ ನಿರ್ವಹಣೆಯನ್ನು ಸುಧಾರಿಸುವುದು, ಬೇಡಿಕೆಯ ಭಾಗದ ನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ವಿವಿಧ ಕೇಂದ್ರ ಮತ್ತು ರಾಜ್ಯ ಯೋಜನೆಗಳ ಒಗ್ಗೂಡಿಸುವಿಕೆಯ ಮೂಲಕ ಸಮುದಾಯದ ನೇತೃತ್ವದಲ್ಲಿ ಸೂಕ್ತ ಹೂಡಿಕೆಗಳು / ನಿರ್ವಹಣಾ ಕ್ರಮಗಳನ್ನು ಅನುಷ್ಠಾನಗೊಳಿಸುವುದು. ಈ ಯೋಜನೆಯು ಸಾಂಸ್ಥಿಕ ಮತ್ತು ಆಡಳಿತ ಚೌಕಟ್ಟುಗಳನ್ನು ಬಲಪಡಿಸುವ ಮೂಲಕ ಮತ್ತು ತಳಮಟ್ಟದಲ್ಲಿ ಅಂತರ್ಜಲ ಸಂರಕ್ಷಣಾ ಕ್ರಮಗಳನ್ನು ಜಾರಿಗೆ ತರಲು ರಾಜ್ಯಗಳನ್ನು ಪ್ರೋತ್ಸಾಹಿಸುವ ಮೂಲಕ ಈ ಉದ್ದೇಶವನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಪ್ರಾಯೋಗಿಕ ಹಂತದ ಪ್ರಮುಖ ಕಲಿಕೆಗಳನ್ನು ಪುನರಾವರ್ತನೆಗಾಗಿ ಇತರ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಜಲಶಕ್ತಿ ಸಚಿವಾಲಯವು ದೇಶದಲ್ಲಿ ಜಲಮೂಲಗಳ ಜನಗಣತಿಯನ್ನು ನಡೆಸಿದೆ. ಈ ಕಾರ್ಯದಡಿಯಲ್ಲಿ 24.2 ಲಕ್ಷಕ್ಕೂ ಅಧಿಕ ಜಲಮೂಲಗಳನ್ನು ಗುರುತಿಸಿ, ಎಣಿಕೆ ಮಾಡಿ ಮತ್ತು ಜಿಯೋಟ್ಯಾಗ್ ಮಾಡಲಾಗಿದೆ. ಅಲ್ಲದೆ, ಜಲ ಸಂಚಯ್ ಜನ್ ಭಾಗೀದಾರಿ (ಜೆಎಸ್‌ಜೆಬಿ) ಉಪಕ್ರಮದಡಿಯಲ್ಲಿ ದೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣಕ್ಕಾಗಿ 1.55 ಕೋಟಿಗೂ ಅಧಿಕಅಂತರ್ಜಲ ಮರು ಪೂರಣ ಘಟಕಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಜಿಯೋಟ್ಯಾಗ್ ಮಾಡಲಾಗಿದೆ ಮತ್ತು ಜೆಎಸ್‌ಜೆಬಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ನೀರು ರಾಜ್ಯ ವಿಷಯವಾಗಿರುವುದರಿಂದ, ನೀರು ಮತ್ತು ಅಂತರ್ಜಲ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆ ಪ್ರಾಥಮಿಕವಾಗಿ ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಆದರೂ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳು ಮತ್ತು ಯೋಜನೆಗಳ ಮೂಲಕ ತಾಂತ್ರಿಕ ಮತ್ತು ಆರ್ಥಿಕ ನೆರವಿನ ಮೂಲಕ ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಸುಗಮಗೊಳಿಸುತ್ತದೆ.ಆ ನಿಟ್ಟಿನಲ್ಲಿ ಸರ್ಕಾರವು ದೇಶದ ಜಲ ಸಂಪನ್ಮೂಲಗಳನ್ನು ಮ್ಯಾಪ್ ಮಾಡುವಲ್ಲಿ ಮತ್ತು ಮೇಲ್ವಿಚಾರಣೆ ಮಾಡಲು ಮಾತ್ರವಲ್ಲದೆ, ನಿಖರವಾದ ನೀತಿ ಮಧ್ಯಸ್ಥಿಕೆಗಳನ್ನು ಯೋಜಿಸಲು ಮತ್ತು ಯೋಜನೆಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಅತ್ಯಾಧುನಿಕ ಡಿಜಿಟಲ್ ಮತ್ತು ತಾಂತ್ರಿಕ ಸಾಧನಗಳನ್ನು ಬಳಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ತೆಗೆದುಕೊಂಡ ಪ್ರಮುಖ ಕ್ರಮಗಳ ವಿವರಗಳು ಈ ಕೆಳಗಿನಂತಿವೆ:

  1. ರಾಷ್ಟ್ರೀಯ ಜಲಮೂಲ ಗುರುತಿಸುವುದು ಮತ್ತು ನಿರ್ವಹಣಾ ಕಾರ್ಯಕ್ರಮ (NAQUIM): ಕೇಂದ್ರೀಯ ಅಂತರ್ಜಲ ಮಂಡಳಿ (CGWB) NAQUIM ಅನ್ನು ಕಾರ್ಯಗತಗೊಳಿಸುತ್ತಿದೆ, ಜಲಚರ ನಕ್ಷೆ, ಮರು ಪೂರಣ ವಲಯಗಳನ್ನು ಗುರುತಿಸುವುದು ಮತ್ತು ಮೂಲ ಸುಸ್ಥಿರತೆಯನ್ನು ನಿರ್ಣಯಿಸಲು ರಿಮೋಟ್ ಸೆನ್ಸಿಂಗ್ (RS) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಗಳು (GIS) ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತಿದೆ. NAQUIM ಹಂತ 1.0 ರ ಅಡಿಯಲ್ಲಿ ದೇಶದ 25 ಲಕ್ಷ ಚದರ ಕಿ.ಮೀ.ಗಳ ಸಂಪೂರ್ಣ ಮ್ಯಾಪ್ ಮಾಡಬಹುದಾದ ಪ್ರದೇಶವನ್ನು ಗುರುತಿಸಲಾಗಿದೆ ಮತ್ತು ಜಿಲ್ಲಾ ಮಟ್ಟದ ಜಲಚರ ಮ್ಯಾಪ್ ಗಳು ಮತ್ತು ಸೂಕ್ತ ನಿರ್ವಹಣಾ ಯೋಜನೆಗಳನ್ನು ಅನುಷ್ಠಾನಕ್ಕಾಗಿ ರಾಜ್ಯ/ಜಿಲ್ಲಾ ಆಡಳಿತಗಳಿಗೆ ಪ್ರಸಾರ ಮಾಡಲಾಗಿದೆ. NAQUIM 2.0 ಅಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೆಚ್ಚು ವಿವರವಾದ ವೈಜ್ಞಾನಿಕ ದತ್ತಾಂಶ ಸೃಷ್ಟಿಸಲು ಬಳಸಿಕೊಳ್ಳಲಾಗುತ್ತದೆ, ಇದು ಸುಸ್ಥಿರ ಅಂತರ್ಜಲ ನಿರ್ವಹಣೆಗಾಗಿ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.
  2. ನೈಜ-ಸಮಯದ ಮೇಲ್ವಿಚಾರಣೆ: ರಾಷ್ಟ್ರೀಯ ಜಲವಿಜ್ಞಾನ ಯೋಜನೆ (NHP) ಅಡಿಯಲ್ಲಿ ಸ್ಥಾಪಿಸಲಾದ 5,260 DWLR ಗಳ ಮೂಲಕ CGWB ನೈಜ-ಸಮಯದ ಅಂತರ್ಜಲ ಮಟ್ಟದ ಮೇಲ್ವಿಚಾರಣೆಯನ್ನು ನಡೆಸುತ್ತದೆ. ಅಂತರ್ಜಲ ಮಟ್ಟದ ದತ್ತಾಂಶದ ಸಮಗ್ರ ವಿಶ್ಲೇಷಣೆಗಾಗಿ, CGWB, NHP ಅಡಿಯಲ್ಲಿ ರಾಜ್ಯ ಸರ್ಕಾರಗಳು ಸ್ಥಾಪಿಸಿದ 12,764 DWLR ಗಳು ಮತ್ತು ಅಟಲ್ ಭೂಜಲ್ ಯೋಜನೆಯಡಿಯಲ್ಲಿ ಸ್ಥಾಪಿಸಲಾದ 6,266 DWLR ಗಳಿಂದ ದತ್ತಾಂಶವನ್ನು ಸಂಯೋಜಿಸಿದೆ.
  3. ವೆಬ್ ಆಧಾರಿತ ವೇದಿಕೆಗಳು: CGWB ಭಾರತ-ಅಂತರ್ಜಲ ಸಂಪನ್ಮೂಲ ಅಂದಾಜು ವ್ಯವಸ್ಥೆಯನ್ನು (IN-GRES) ಅಭಿವೃದ್ಧಿಪಡಿಸಿದೆ, ಇದು ದೇಶಾದ್ಯಂತ ಅಂತರ್ಜಲ ಸಂಪನ್ಮೂಲ ಮೌಲ್ಯಮಾಪನಕ್ಕಾಗಿ ಪ್ರಮಾಣೀಕೃತ ವೇದಿಕೆಯನ್ನು ಒದಗಿಸುವ ವೆಬ್ ಆಧಾರಿತ ಅಪ್ಲಿಕೇಶನ್ ಆಗಿದೆ. ಅಂತಹ ದತ್ತಾಂಶವು ಮನ್ರೇಗಾ, ಅಟಲ್ ಭೂಜಲ್ ಯೋಜನೆ, ಜಲ ಶಕ್ತಿ ಅಭಿಯಾನ ಮುಂತಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ವೈಜ್ಞಾನಿಕ ಆಧಾರವನ್ನು ರೂಪಿಸುತ್ತದೆ.
  4. ಜೆಎಸ್ ಎ: ಸಿಟಿಆರ್ ಡ್ಯಾಶ್‌ಬೋರ್ಡ್: ಜಲ ಶಕ್ತಿ ಅಭಿಯಾನ (ಜೆಎಸ್ ಎ) ಅಡಿಯಲ್ಲಿ "ಕ್ಯಾಚ್ ದಿ ರೈನ್" (ಸಿಟಿಆರ್) ಅಭಿಯಾನವನ್ನು ಮೇಲ್ವಿಚಾರಣೆ ಮಾಡಲು, ಮೌಲ್ಯಮಾಪನ ಮಾಡಲು ಮತ್ತು ನಿರ್ವಹಿಸಲು ರಾಷ್ಟ್ರೀಯ ಜಲ ಮಿಷನ್ ಅಡಿಯಲ್ಲಿ ರಚಿಸಲಾದ ಕೇಂದ್ರ ಡಿಜಿಟಲ್ ವೇದಿಕೆಯಾಗಿದೆ. ಇದು ನೀರಿನ ಸಂರಕ್ಷಣಾ ಚಟುವಟಿಕೆಗಳ ಪ್ರಗತಿ ಪತ್ತೆಹಚ್ಚಲು ಮತ್ತು ವೈಜ್ಞಾನಿಕ ಜಲ ಸಂರಕ್ಷಣಾ ಯೋಜನೆಗಳ ರಚನೆಯನ್ನು ಸುಗಮಗೊಳಿಸಲು ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. 28.07.2026 ರ ಹೊತ್ತಿಗೆ, ದೇಶದಲ್ಲಿ 2.0 ಕೋಟಿಗೂ ಅಧಿಕ ಜಲ ಸಂರಕ್ಷಣೆ ಮತ್ತು ಕೃತಕ ಮರುಪೂರಣ ಕಾರ್ಯಗಳನ್ನು ಸಂಯೋಜಿಸುವ ಮೂಲಕ ಕೈಗೆತ್ತಿಕೊಳ್ಳಲಾಗಿದೆ ಎಂದು ಡ್ಯಾಶ್‌ಬೋರ್ಡ್ ಸೂಚಿಸುತ್ತದೆ.
  5. ಜಲ ಸಂಚಯ್ ಜನ್ ಭಾಗಿದಾರಿ (ಜೆಸ್ ಜೆ ಬಿ) ಡ್ಯಾಶ್‌ಬೋರ್ಡ್: ದೇಶದಲ್ಲಿ ಮಳೆ ನೀರು ಕೊಯ್ಲನ್ನು ಒಂದು ಬೃಹತ್ ಆಂದೋಲನವನ್ನಾಗಿ ಮಾಡುವ ಮತ್ತು ಈ ಉಪಕ್ರಮದಡಿಯಲ್ಲಿ ರಚಿಸಲಾದ ಮರುಪೂರಣ ರಚನೆಗಳ ಪರಿಣಾಮಕಾರಿ ಮೇಲ್ವಿಚಾರಣೆಗಾಗಿ, ಜಲ ಸಂಚಯ್ ಜನ್ ಭಾಗಿದಾರಿ ಡ್ಯಾಶ್‌ಬೋರ್ಡ್ 31 ಮೇ 2026 ರ ಹೊತ್ತಿಗೆ, ದೇಶಾದ್ಯಂತ 1.55 ಕೋಟಿಗೂ ಅಧಿಕ ಕೃತಕ ಅಂತರ್ಜಲ ಮರುಪೂರಣ ಮತ್ತು ಸಂಗ್ರಹಣಾ ಕಾರ್ಯಗಳನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ ಎಂದು ಸೂಚಿಸುತ್ತದೆ.
  6. ಜಲಾಶಯ ಮಟ್ಟ ಮತ್ತು ಪ್ರವಾಹ ಮೇಲ್ವಿಚಾರಣೆ: 'ಫ್ಲಡ್ ವಾಚ್ ಇಂಡಿಯಾ' ಅಪ್ಲಿಕೇಶನ್ ನಿಖರವಾದ ಮತ್ತು ಸಕಾಲಿಕ ಪ್ರವಾಹ ಮುನ್ಸೂಚನೆಗಳನ್ನು ನೀಡಲು ಉಪಗ್ರಹ ದತ್ತಾಂಶ ವಿಶ್ಲೇಷಣೆ, ಗಣಿತದ ಮಾದರಿ ಮತ್ತು ನೈಜ-ಸಮಯದ ಮೇಲ್ವಿಚಾರಣೆಯಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತದೆ. ಅಪ್ಲಿಕೇಶನ್ 592 ಪ್ರವಾಹ ಮೇಲ್ವಿಚಾರಣಾ ಕೇಂದ್ರಗಳು ಮತ್ತು ದೇಶದ 150 ಪ್ರಮುಖ ಜಲಾಶಯಗಳ ಸಂಗ್ರಹ ಸ್ಥಾನಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

vii. ಉಪಗ್ರಹ ಮತ್ತು ದೂರಸಂವೇದಿ ದತ್ತಾಂಶದ ಬಳಕೆ: ದೇಶದ ಜಲ ಸಂಪನ್ಮೂಲಗಳ ವಿವಿಧ ರೀತಿಯ ಮ್ಯಾಪಿಂಗ್ ಮತ್ತು ಮೇಲ್ವಿಚಾರಣೆಗಾಗಿ ಉಪಗ್ರಹ ಮತ್ತು ದೂರಸಂವೇದಿ ದತ್ತಾಂಶವನ್ನು ಬಳಸಿಕೊಳ್ಳಲು ಸಚಿವಾಲಯವು ಭಾಸ್ಕರಾಚಾರ್ಯ ರಾಷ್ಟ್ರೀಯ ಬಾಹ್ಯಾಕಾಶ ಅನ್ವಯಿಕೆಗಳು ಮತ್ತು ಜಿಯೋ-ಇನ್ಫರ್ಮ್ಯಾಟಿಕ್ಸ್ ಸಂಸ್ಥೆ (BISAG -N) ಮತ್ತು ಅಹಮದಾಬಾದ್‌ನ ಬಾಹ್ಯಾಕಾಶ ಅನ್ವಯಿಕೆ ಕೇಂದ್ರದಂತಹ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ.

  1. ಪಿಎಂಕೆಎಸ್ ವೈ ಅಡಿಯಲ್ಲಿ ತಂತ್ರಜ್ಞಾನ ಆಧರಿಸಿದ ಮೇಲ್ವಿಚಾರಣೆ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ ವೈ) ಅಡಿಯಲ್ಲಿ, ನೀರಾವರಿ ಮೂಲಸೌಕರ್ಯಗಳ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ. ಪಿಎಂಕೆಎಸ್ ವೈ ನ ವಿವಿಧ ಘಟಕಗಳ ಅಡಿಯಲ್ಲಿ ನೀರಾವರಿ ಯೋಜನೆಗಳು ಮತ್ತು ನೀರಿನ ಸಂರಕ್ಷಣಾ ಮಧ್ಯಸ್ಥಿಕೆಗಳ ಪ್ರಗತಿಯನ್ನು ಪತ್ತೆಹಚ್ಚಲು ಜಿಐಎಸ್ -ಆಧಾರಿತ ಅಪ್ಲಿಕೇಶನ್‌ಗಳು, ಜಿಯೋ-ಟ್ಯಾಗಿಂಗ್ ಮತ್ತು ಡಿಜಿಟಲ್ ಯೋಜನಾ ಮೇಲ್ವಿಚಾರಣಾ ಸಾಧನಗಳನ್ನು ಬಳಸಲಾಗುತ್ತದೆ.
  2. ಜಲಮೂಲಗಳ ಜಿಯೋ-ಟ್ಯಾಗಿಂಗ್ ಮತ್ತು ಜಿಐಎಸ್ ಆಧಾರಿತ ಮೇಲ್ವಿಚಾರಣೆ: ಪಿಎಂಕೆಎಸ್‌ವೈ–ಹರ್ ಖೇತ್ ಕೋ ಪಾನಿ (ಎಚ್‌ಕೆಕೆಪಿ) ಘಟಕದ ಅಡಿಯಲ್ಲಿ, ಮೇಲ್ಮೈ ಸಣ್ಣ ನೀರಾವರಿ (ಎಸ್‌ಎಂಐ) ಮತ್ತು ಜಲಮೂಲಗಳ ದುರಸ್ತಿ, ನವೀಕರಣ ಮತ್ತು ಪುನಃಸ್ಥಾಪನೆ (ಆರ್‌ಆರ್‌ಆರ್) ಯೋಜನೆಗಳ ಅಡಿಯಲ್ಲಿ ಕೈಗೊಂಡ ಕೆಲಸಗಳ ಗುರುತಿಸುವಿಕೆ, ಮೇಲ್ವಿಚಾರಣೆ ಮತ್ತು ಪ್ರಗತಿ ಟ್ರ್ಯಾಕಿಂಗ್‌ಗಾಗಿ ಜಿಯೋ-ಟ್ಯಾಗಿಂಗ್, ಜಿಐಎಸ್ ಮ್ಯಾಪಿಂಗ್ ಮತ್ತು ಪ್ರತ್ಯೇಕ ಜಲಮೂಲಗಳಿಗೆ ವಿಶಿಷ್ಟ ಗುರುತಿನ ಸಂಕೇತಗಳ ನಿಯೋಜನೆಯಂತಹ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನ-ಆಧರಿಸಿದ ಉಪಕರಣಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ, ನೈಜ-ಸಮಯದ ಮೇಲ್ವಿಚಾರಣೆಯನ್ನು ಸುಗಮಗೊಳಿಸುತ್ತವೆ ಮತ್ತು ಜಲಮೂಲಗಳ ಪುನಃಸ್ಥಾಪನೆ ಯೋಜನೆಗಳ ಪುರಾವೆ ಆಧಾರಿತ ಯೋಜನೆ ಮತ್ತು ಮೌಲ್ಯಮಾಪನವನ್ನು ಬೆಂಬಲಿಸುತ್ತವೆ.
  3. ಜಲ ಮಾಹಿತಿ ನಿರ್ವಹಣಾ ವ್ಯವಸ್ಥೆ (ವಿಮ್ಸ್): 2025 ರ ಸೆ.30ವರೆಗೆ ಜಾರಿಗೆ ತರಲಾದ ರಾಷ್ಟ್ರೀಯ ಜಲವಿಜ್ಞಾನ ಯೋಜನೆಯ (ಎನ್‌ಎಚ್‌ಪಿ) ಅಡಿಯಲ್ಲಿ, ಜಲವಿಜ್ಞಾನ ದತ್ತಾಂಶದ ಸಂಗ್ರಹಣೆ, ಸಂಗ್ರಹಣೆ, ಏಕೀಕರಣ ಮತ್ತು ಪ್ರಸರಣಕ್ಕಾಗಿ ಸಮಗ್ರ ಜಲ ಮಾಹಿತಿ ನಿರ್ವಹಣಾ ವ್ಯವಸ್ಥೆಯನ್ನು (ವಿಮ್ಸ್) ಸ್ಥಾಪಿಸಲಾಯಿತು. ಈ ವ್ಯವಸ್ಥೆಯು ನೀರಿನ ಲಭ್ಯತೆ ಮೌಲ್ಯಮಾಪನ, ಜಲಾಶಯ ಮತ್ತು ಕಾಲುವೆ ಕಾರ್ಯಾಚರಣೆಗಳು, ನೀರಾವರಿ ನಿರ್ವಹಣೆ, ನೀರಿನ ಲೆಕ್ಕಪತ್ರ ನಿರ್ವಹಣೆಗಾಗಿ ಕೇಂದ್ರೀಕೃತ ವೇದಿಕೆ ಒದಗಿಸುತ್ತದೆ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಗಾಗಿ ಪುರಾವೆ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆ ಸಕ್ರಿಯಗೊಳಿಸುತ್ತದೆ.
  4. ಮೇಲ್ಮೈ ನೀರಿನ ಮೌಲ್ಯಮಾಪನ ಮತ್ತು ಜಲವಿಜ್ಞಾನ ಮೇಲ್ವಿಚಾರಣೆ: ಮೇಲ್ಮೈ ನೀರಿನ ಸಂಪನ್ಮೂಲಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ, ಜಲಾನಯನ ಪ್ರದೇಶವಾರು ಮೇಲ್ಮೈ ನೀರಿನ ಸಂಪನ್ಮೂಲ ಮೌಲ್ಯಮಾಪನಕ್ಕಾಗಿ ಜಲಸಂಪನ್ಮೂಲ ಮೌಲ್ಯಮಾಪನ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ನದಿ ಹರಿವು ಮತ್ತು ನೀರಿನ ವೇಗವನ್ನು ಅಳೆಯಲು, ಮೇಲ್ಮೈ ಹರಿವಿನ ವೇಗವನ್ನು ಅಳೆಯಲು ಮತ್ತು ನೀರಿನ ಮಟ್ಟ ಮತ್ತು ಮಳೆಯಂತಹ ಜಲವಿಜ್ಞಾನ ನಿಯತಾಂಕಗಳ ನೈಜ-ಸಮಯದ ಮೇಲ್ವಿಚಾರಣೆಗಾಗಿ ಸಿಡಬ್ಲೂಸಿಯಿಂದ ಸುಧಾರಿತ ಜಲವಿಜ್ಞಾನ ಮೇಲ್ವಿಚಾರಣಾ ತಂತ್ರಜ್ಞಾನಗಳನ್ನು ನಿಯೋಜಿಸಲಾಗಿದೆ. ಈ ತಂತ್ರಜ್ಞಾನ- ಆಧರಿಸಿದ ವ್ಯವಸ್ಥೆಗಳ ಮೂಲಕ ಉತ್ಪತ್ತಿಯಾಗುವ ದತ್ತಾಂಶವನ್ನು ಜಲ ಸಂಪನ್ಮೂಲ ಯೋಜನೆ, ನೀರಿನ ಲಭ್ಯತೆಯ ಮೌಲ್ಯಮಾಪನ, ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಜಲ ಸಂಪನ್ಮೂಲ ಯೋಜನೆಗಳ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕಾಗಿ ಬಳಸಿಕೊಳ್ಳಲಾಗುತ್ತದೆ.
  5. ಎನ್ ಎಂಸಿಸಿ, ಎಂಐ ಜನಗಣತಿ ಮುಂತಾದ ಸಚಿವಾಲಯದ ಹಲವು ಯೋಜನೆಗಳ ದತ್ತಾಂಶ ಸಂಗ್ರಹಣೆ ಮತ್ತು ಪ್ರಸರಣ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆಗಾಗಿ ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳು, ವೆಬ್ ಪೋರ್ಟಲ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಇತ್ಯಾದಿಗಳ ವ್ಯಾಪಕ ಬಳಕೆ ಮಾಡಲಾಗುತ್ತಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಜಲಶಕ್ತಿ ರಾಜ್ಯ ಖಾತೆ ಸಚಿವರಾದ  ಶ್ರೀ ರಾಜ್ ಭೂಷಣ್ ಚೌಧರಿ  ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2293828) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी