ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಪರಿಶಿಷ್ಟ ಜಾತಿಯ (ಎಸ್‌.ಸಿ.) -ನೇತೃತ್ವದ ಆವಿಷ್ಕಾರದ ಸಬಲೀಕರಣ: ವಿಸಿಎಫ್-ಎಸ್‌ಸಿ ಮೂಲಕ ತ್ರಿಶಂಕು ಟೆಕ್ನಾಲಜೀಸ್ ಸಂಸ್ಥೆಯು ಭಾರತದ ರಕ್ಷಣಾ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯನ್ನು ಬಲಪಡಿಸಿದ್ದು ಹೇಗೆ

प्रविष्टि तिथि: 02 AUG 2026 4:38PM by PIB Bengaluru

ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಕಾಲಿಕ ಸಾಂಸ್ಥಿಕ ಬೆಂಬಲವು ಅನೇಕ ಮಹತ್ವಾಕಾಂಕ್ಷಿ ಉದ್ಯಮಿಗಳು ಭಾರತದ ತಾಂತ್ರಿಕ ಪ್ರಗತಿ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡುವ ಉದ್ಯಮಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ. ಅಂತಹ ಒಂದು ಸ್ಪೂರ್ತಿದಾಯಕ ಉದಾಹರಣೆಯೆಂದರೆ, ಶ್ರೀ ಸುನೀಲ್ ಕುಮಾರ್ ಸಿರಿಗಿರಿ ಅವರು ಸ್ಥಾಪಿಸಿದ ಬೆಂಗಳೂರು ಮೂಲದ ಕಂಪನಿಯಾದ “ತ್ರಿಶಂಕು ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್”ಯ ಯಶಸ್ಸಿನ ಕಥೆ. ಪ್ರಗತಿಯ ಹಾದಿಯಲ್ಲಿ ಕಂಪನಿಯ ಅಭಿವೃದ್ಧಿಯ ಪ್ರಯಾಣವು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ ವೆಂಚರ್ ಕ್ಯಾಪಿಟಲ್ ಫಂಡ್ (ವಿಸಿಎಫ್‌ - ಎಸ್‌.ಸಿ.) ಹಣಕಾಸು ಯೋಜನೆಯ ಪರಿವರ್ತನಾತ್ಮಕ ಪರಿಣಾಮವನ್ನು ಸಾಕಾರ ಪೂರ್ವಕ ಪ್ರದರ್ಶಿಸುತ್ತದೆ.

“ತ್ರಿಶಂಕು ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್” ಮುದ್ರಿತ “ಸರ್ಕ್ಯೂಟ್ ಬೋರ್ಡ್‌ಗಳು (ಪಿಸಿಬಿ ಗಳು)”, “ರಾಡಾರ್” ವ್ಯವಸ್ಥೆಗಳು ಮತ್ತು “ಎಡ್ಜ್‌ ಎಐ” ಸಾಧನಗಳ ಉತ್ಪಾದನೆಗೆ ಮೀಸಲಾಗಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನಾ ಸೌಲಭ್ಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಕಂಪನಿಯು ಎಲ್&ಟಿ, ಬಿಇಎಲ್, ಡಿ.ಆರ್‌.ಡಿ.ಒ. ಪ್ರಯೋಗಾಲಯಗಳು, ಇಸಿಐಎಲ್, ಅಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್ ಲಿಮಿಟೆಡ್, ಕ್ಯಾಪ್ಜೆಮಿನಿ, ವಿಪ್ರೋ ಮತ್ತು ಸೈಪ್ರೆಸ್ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಗೆ ಸುಧಾರಿತ ಎಲೆಕ್ಟ್ರಾನಿಕ್ ಉತ್ಪಾದನಾ ಸೇವೆಗಳನ್ನು ಒದಗಿಸುತ್ತದೆ. ಯೋಜನೆಯ ಕಾರ್ಯತಂತ್ರದ ಮಹತ್ವವನ್ನು ಗುರುತಿಸಿ, ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ವಿಶೇಷ “ವೆಂಚರ್ ಕ್ಯಾಪಿಟಲ್ ಫಂಡ್ 2022” ರಲ್ಲಿ ಈಕ್ವಿಟಿ ಮತ್ತು ಐಚ್ಛಿಕವಾಗಿ ಪರಿವರ್ತಿಸಬಹುದಾದ ಡಿಬೆಂಚರ್‌ ಗಳನ್ನು ಒಳಗೊಂಡಿರುವ “ವೆಂಚರ್ ಕ್ಯಾಪಿಟಲ್” ಹಣಕಾಸು  ನೆರವಿನ ಮೂಲಕ ₹4.47 ಕೋಟಿ ಆರ್ಥಿಕ ಸಹಾಯವನ್ನು ನೀಡಿತು.

ಶ್ರೀ ಸುನೀಲ್ ಕುಮಾರ್ ಸಿರಿಗಿರಿ

 

ಎಲೆಕ್ಟ್ರಾನಿಕ್ಸ್ ವಿನ್ಯಾಸ, ರಾಡಾರ್ ಸಿಸ್ಟಮ್ಸ್ ಮತ್ತು ಎಡ್ಜ್‌ ಎಐ ಉತ್ಪಾದನಾ ಸೌಲಭ್ಯ

ಸಕಾಲಿಕ ಹಣಕಾಸಿನ ನೆರವು, ಕಂಪನಿಗೆ ಬೆಂಗಳೂರಿನ ಕೆಐಎಡಿಬಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌ನಲ್ಲಿ ವಿಶ್ವ ದರ್ಜೆಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿತು. ಬೆಂಬಲವು ಸುಧಾರಿತ ಯಂತ್ರೋಪಕರಣಗಳು, ಪರೀಕ್ಷಾ ಉಪಕರಣಗಳು ಮತ್ತು ಸಾಫ್ಟ್‌ವೇರ್ ಪರಿಕರಗಳ ಖರೀದಿಗೆ ಅನುಕೂಲ ಮಾಡಿಕೊಟ್ಟಿತು, ಈ ಮೂಲಕ  “ರಾಡಾರ್” ವ್ಯವಸ್ಥೆಗಳು ಮತ್ತು ಎಡ್ಜ್‌ ಎಐ ಉತ್ಪನ್ನ ಅಭಿವೃದ್ಧಿಯಲ್ಲಿ ಕಂಪನಿಯ ಸಾಮರ್ಥ್ಯಗಳನ್ನು ಬಲಪಡಿಸಲು ಅವಕಾಶ ದೊರಕಿತು ಮತ್ತು ತಂತ್ರಜ್ಞಾನ ವಲಯದಲ್ಲಿ ಸಂಸ್ಥೆಯು ಕೌಶಲ್ಯಪೂರ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಿತು.

ಹಣಕಾಸು ನೆರವಿನ ಹಸ್ತಕ್ಷೇಪದ ಪರಿಣಾಮವು ಮಹತ್ವದ್ದಾಗಿದೆ. ಇಂದು, ಈ ಉದ್ಯಮವು 8 ಪರಿಶಿಷ್ಟ ಜಾತಿ ಉದ್ಯೋಗಿಗಳು ಮತ್ತು 22 ಪರಿಶಿಷ್ಟ ಜಾತಿಯೇತರ ಉದ್ಯೋಗಿಗಳು ಸೇರಿದಂತೆ 30 ವೃತ್ತಿಪರರಿಗೆ ನೇರ ಉದ್ಯೋಗವನ್ನು ಸೃಷ್ಟಿಸಿದೆ. ಇದು ₹7 ಕೋಟಿ ಮೌಲ್ಯದ ಆಸ್ತಿಗಳನ್ನು ಸೃಷ್ಟಿಸಿದೆ, ₹3.92 ಕೋಟಿ ನಿವ್ವಳ ಮೌಲ್ಯವನ್ನು ಸಾಧಿಸಿದೆ, ₹2.85 ಕೋಟಿ ಆದಾಯವನ್ನು ಗಳಿಸಿದೆ ಮತ್ತು ಸುಮಾರು ₹4 ಲಕ್ಷ ಲಾಭವನ್ನು ದಾಖಲಿಸಿದೆ. ಕಂಪನಿಯು ಭಾರತದ ರಕ್ಷಣಾ, ಏರೋಸ್ಪೇಸ್ ಮತ್ತು ಕೈಗಾರಿಕಾ ವಲಯಗಳೊಂದಿಗೆ ಬಲವಾದ ವ್ಯವಹಾರ ಸಂಪರ್ಕವನ್ನು ಸ್ಥಾಪಿಸಿದೆ, ಈ ಮೂಲಕ “ಮೇಕ್ ಇನ್ ಇಂಡಿಯಾ” ಮತ್ತು “ಆತ್ಮನಿರ್ಭರ ಭಾರತ”ದ ದೃಷ್ಟಿಕೋನಕ್ಕೆ ಕೊಡುಗೆ ನೀಡಿದೆ.

ಎಲೆಕ್ಟ್ರಾನಿಕ್ಸ್ ವಿನ್ಯಾಸ, ರಾಡಾರ್ ಸಿಸ್ಟಮ್ಸ್ ಮತ್ತು

ಶ್ರೀ ಸುನೀಲ್ ಕುಮಾರ್ ಸಿರಿಗಿರಿ (ನಿರ್ದೇಶಕ)

ಸಂಸ್ಥೆಯ ಈ ಪ್ರಯಾಣದ ಬಗ್ಗೆ, ಶ್ರೀ ಸುನೀಲ್ ಕುಮಾರ್ ಸಿರಿಗಿರಿ ಅವರು ಹೀಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ: -

"ಪರಿಶಿಷ್ಟ ಜಾತಿಗಳಿಗೆ ಮೀಸಲಾದ ವಿಶೇಷ ವೆಂಚರ್ ಕ್ಯಾಪಿಟಲ್ ಫಂಡ್ (ವಿಸಿಎಫ್-ಎಸ್‌.ಸಿ.)  ಹಣಕಾಸು ನೆರವು ಯೋಜನೆಯಡಿಯಲ್ಲಿ ಪಡೆದ ರಿಯಾಯಿತಿ ಹಣಕಾಸು ತಂತ್ರಜ್ಞಾನ-ಚಾಲಿತ ದೃಷ್ಟಿಕೋನವನ್ನು ವಿಶ್ವ ದರ್ಜೆಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವಾಗಿ ಪರಿವರ್ತಿಸಲು ನಮಗೆ ಅನುವು ಮಾಡಿಕೊಟ್ಟಿತು. ಇಂದು, “ತ್ರಿಶಂಕು ಟೆಕ್ನಾಲಜೀಸ್” ಸಂಸ್ಥೆಯು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುತ್ತಿದೆ ಮತ್ತು ಕೌಶಲ್ಯಪೂರ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಮುಂದುವರಿದ ತಂತ್ರಜ್ಞಾನ ವಲಯಗಳಲ್ಲಿ ಎಸ್‌.ಸಿ. ಸಮುದಾಯದ ಮಂದಿಯ ನೇತೃತ್ವದ ನಾವೀನ್ಯತೆಯ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ."

ಎಲೆಕ್ಟ್ರಾನಿಕ್ಸ್ ವಿನ್ಯಾಸ, ರಾಡಾರ್ ವ್ಯವಸ್ಥೆಗಳು ಮತ್ತು ಎಡ್ಜ್‌ ಎಐ ಉತ್ಪಾದನಾ ಸೌಲಭ್ಯ

“ತ್ರಿಶಂಕು ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌” ಸಂಸ್ಥೆಯ  ಯಶಸ್ಸು, ಪರಿಶಿಷ್ಟ ಜಾತಿಯ ಮಂದಿಗೆ ವೆಂಚರ್ ಕ್ಯಾಪಿಟಲ್ ಫಂಡ್ ಹಣಕಾಸು ನೆರವು ಯೋಜನೆಯಡಿಯಲ್ಲಿ ಉದ್ದೇಶಿತ ಹಣಕಾಸಿನ ಬೆಂಬಲವು ಮುಂದುವರಿದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿಯ ಉದ್ಯಮಿಗಳಿಗೆ ಹೇಗೆ ಅಧಿಕಾರ ನೀಡುತ್ತಿದೆ ಎಂಬುದನ್ನು ತೋರಿಸುತ್ತದೆ. ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ, ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ ಮತ್ತು ಗುಣಮಟ್ಟದ ಉದ್ಯೋಗವನ್ನು ಉತ್ಪಾದಿಸುವ ಮೂಲಕ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಸಮಗ್ರ ಉದ್ಯಮಶೀಲತೆಯನ್ನು ಬೆಳೆಸುವುದನ್ನು ಮುಂದುವರೆಸಿದೆ ಮತ್ತು ತಂತ್ರಜ್ಞಾನ, ನಾವೀನ್ಯತೆ ಮತ್ತು ಸಾಮಾಜಿಕ ಸಬಲೀಕರಣದಿಂದ ನಡೆಸಲ್ಪಡುವ ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುತ್ತಿದೆ.

 

*****


(रिलीज़ आईडी: 2293505) आगंतुक पटल : 11
इस विज्ञप्ति को इन भाषाओं में पढ़ें: Urdu , English , हिन्दी