|
ರೈಲ್ವೇ ಸಚಿವಾಲಯ
ಆಧುನಿಕ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸುಧಾರಿತ ನಿರ್ವಹಣೆಯ ಮೂಲಕ ರೈಲು ಸುರಕ್ಷತೆ ಬಲವರ್ಧನೆ; 2026-27ರಲ್ಲಿ ಇದುವರೆಗೆ ಕೇವಲ ಎರಡು ಪರಿಣಾಮಕಾರಿ ರೈಲು ಅಪಘಾತಗಳು ದಾಖಲು
6,671 ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಮತ್ತು ಸಂಪೂರ್ಣ ಟ್ರ್ಯಾಕ್ ಸರ್ಕ್ಯೂಟಿಂಗ್ ವ್ಯವಸ್ಥೆ; ಮಾನವ ತಪ್ಪುಗಳನ್ನು ಕಡಿಮೆ ಮಾಡಲು 10,395 ಲೆವೆಲ್ ಕ್ರಾಸಿಂಗ್ ಗೇಟ್ ಗಳ ಇಂಟರ್ ಲಾಕಿಂಗ್ 2014-26ರ ಅವಧಿಯಲ್ಲಿ ಭಾರತೀಯ ರೈಲ್ವೆಯಿಂದ 36,429 ಟ್ರ್ಯಾಕ್ ಕಿ.ಮೀ ಸೇರ್ಪಡೆ, ಇದು 2004-14ಕ್ಕಿಂತ 2.5 ಪಟ್ಟು ಹೆಚ್ಚು; ಆರ್ ಒ ಬಿ/ಆರ್ ಯು ಬಿ ಮೂರು ಪಟ್ಟು ಹೆಚ್ಚಾಗಿ 14,362ಕ್ಕೆ ಏರಿಕೆ ರೋಲಿಂಗ್ ಸ್ಟಾಕ್ ಮತ್ತು ನಿರ್ವಹಣಾ ಪದ್ಧತಿಗಳ ಆಧುನಿಕೀಕರಣದಿಂದ ಸುರಕ್ಷತೆ ಬಲವರ್ಧನೆ, 2014-26ರ ಅವಧಿಯಲ್ಲಿ ಎಲ್ ಎಚ್ ಬಿ ಕೋಚ್ ಉತ್ಪಾದನೆಯು 21 ಪಟ್ಟು ಹೆಚ್ಚು ಅಂದರೆ 49,366ಕ್ಕೆ ಏರಿಕೆಯಾಗಿದೆ ಮತ್ತು ವೆಲ್ಡ್ ವೈಫಲ್ಯಗಳು ಶೇ.93 ರಷ್ಟು ಕಡಿಮೆಯಾಗಿವೆ ಹೆಚ್ಚು ದಟ್ಟಣೆಯ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳನ್ನು ಒಳಗೊಂಡಂತೆ 2,490 ರೂಟ್ ಕಿಲೋಮೀಟರ್ ಗಳಲ್ಲಿ ಕವಚ್ 4.0 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ 21,937 ರೂಟ್ ಕಿಲೋಮೀಟರ್ ಗಳಲ್ಲಿ ಕವಚ್ ಅನುಷ್ಠಾನ ಕಾರ್ಯ ಪ್ರಗತಿಯಲ್ಲಿದೆ; 7,435 ಲೋಕೋಮೋಟಿವ್ ಗಳು ಮತ್ತು 1,200 ಎಮು/ಮೆಮು (ಇಎಂಯು/ಎಂಇಎಂಯು) ರೈಲುಗಳಲ್ಲಿ ಅಳವಡಿಕೆ ಕಾರ್ಯ ಆರಂಭ
प्रविष्टि तिथि:
22 JUL 2026 3:09PM by PIB Bengaluru
ಭಾರತೀಯ ರೈಲ್ವೆಯಲ್ಲಿ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ವರ್ಷಗಳಿಂದ ಕೈಗೊಂಡ ವಿವಿಧ ಸುರಕ್ಷತಾ ಕ್ರಮಗಳ ಪರಿಣಾಮವಾಗಿ, ಮುಖಾಮುಖಿ ಡಿಕ್ಕಿ ಮತ್ತು ರೈಲು ಹಳಿ ತಪ್ಪುವಿಕೆ ಸೇರಿದಂತೆ ಅಪಘಾತಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.
ಕೆಳಗಿನ ಕೋಷ್ಟಕದಲ್ಲಿ ತೋರಿಸಿರುವಂತೆ ಪರಿಣಾಮಕಾರಿ ರೈಲು ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ:-
|
ವರ್ಷ
|
ಪರಿಣಾಮಕಾರಿ ಅಪಘಾತಗಳು
|
|
2014-15
|
135
|
|
2025-26
|
16 (88% ಕಡಿಮೆ)
|
|
2026-27 (ಜೂನ್ 2026 ರವರೆಗೆ)
|
2
|
ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯ ಸುಧಾರಣೆಯನ್ನು ತೋರಿಸುವ ಮತ್ತೊಂದು ಪ್ರಮುಖ ಸೂಚ್ಯಂಕವೆಂದರೆ ಪರಿಣಾಮಕಾರಿ ಅಪಘಾತ ಸೂಚ್ಯಂಕ, ಇದರ ವಿವರಗಳು ಈ ಕೆಳಗಿನಂತಿವೆ:-
ಪರಿಣಾಮಕಾರಿ ಅಪಘಾತ ಸೂಚ್ಯಂಕ:-
|
ವರ್ಷ
|
ಅಪಘಾತ ಸೂಚ್ಯಂಕ
|
|
2014-15
|
0.11
|
|
2025-26
|
0.01 (91% ಕಡಿಮೆ)
|
ಈ ಸೂಚ್ಯಂಕವು ಎಲ್ಲಾ ರೈಲುಗಳು ಚಲಿಸಿದ ಒಟ್ಟು ಕಿಲೋಮೀಟರ್ ಗಳ ಅನುಪಾತವಾಗಿ ಪರಿಣಾಮಕಾರಿ ಅಪಘಾತಗಳ ಸಂಖ್ಯೆಯನ್ನು ಅಳೆಯುತ್ತದೆ.
ಅಪಘಾತ ಸೂಚ್ಯಂಕ = ಪರಿಣಾಮಕಾರಿ ಅಪಘಾತಗಳ ಸಂಖ್ಯೆ\ರೈಲುಗಳ ಸಂಖ್ಯೆXಮಿಲಿಯನ್ ಕಿಲೋಮೀಟರ್ ಗಳು

ಭಾರತೀಯ ರೈಲ್ವೆಯಲ್ಲಿ ಸಂಭವಿಸಿದ ಅಪಘಾತಗಳ ಕಾರಣಗಳಲ್ಲಿ ಪ್ರಮುಖವಾಗಿ ಹಳಿ ದೋಷಗಳು, ಲೋಕೋ/ಬೋಗಿ ದೋಷಗಳು, ಉಪಕರಣಗಳ ವೈಫಲ್ಯ, ಮಾನವ ತಪ್ಪುಗಳು ಇತ್ಯಾದಿ ಸೇರಿವೆ.
ಭಾರತೀಯ ರೈಲ್ವೆಯಲ್ಲಿ ಸಂಭವಿಸಿದ ಪರಿಣಾಮಕಾರಿ ರೈಲು ಅಪಘಾತಗಳು ಮತ್ತು ಅದರಲ್ಲಿ ಸಂಭವಿಸಿದ ಸಾವುನೋವುಗಳು (ರೈಲ್ವೆ ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿ ಸೇರಿದಂತೆ) ಈ ಕೆಳಗಿನಂತಿವೆ:-
|
ಅವಧಿ
|
ಪರಿಣಾಮಕಾರಿ ರೈಲು ಅಪಘಾತಗಳ ಸಂಖ್ಯೆ
|
ಸಾವುಗಳ ಸಂಖ್ಯೆ
|
ಗಾಯಗೊಂಡವರ ಸಂಖ್ಯೆ
|
|
2004-05 ರಿಂದ 2013-14
|
1,711
|
904
|
3,155
|
|
2014-15 ರಿಂದ 2023-24
|
678
|
748
|
2,087
|
|
2024-25
|
31
|
18
|
92
|
|
2025-26
|
16
|
17
|
27
|
ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಕೈಗೊಂಡ ವಿವಿಧ ಸುರಕ್ಷತಾ ಕ್ರಮಗಳು ಈ ಕೆಳಗಿನಂತಿವೆ:-
- ಭಾರತೀಯ ರೈಲ್ವೆಯಲ್ಲಿ, ಸುರಕ್ಷತೆ ಸಂಬಂಧಿತ ಚಟುವಟಿಕೆಗಳ ಮೇಲಿನ ವೆಚ್ಚವು ವರ್ಷಗಳಲ್ಲಿ ಈ ಕೆಳಗಿನಂತೆ ಹೆಚ್ಚಾಗಿದೆ:-
|
ವರ್ಷ
|
ಸುರಕ್ಷತೆ ಸಂಬಂಧಿತ ಚಟುವಟಿಕೆಗಳ ವೆಚ್ಚ/ಬಜೆಟ್ (ಕೋಟಿ ರೂ.ಗಳಲ್ಲಿ)
|
|
2013-14
|
39,200
|
|
2022-23
|
87,336
|
|
2023-24
|
1,01,662
|
|
2024-25
|
1,14,022
|
|
2025-26
|
1,17,693
|
|
2026-27
|
1,20,389
|
- ಮಾನವ ದೋಷಗಳಿಂದ ಆಗುವ ಅಪಘಾತಗಳನ್ನು ಕಡಿಮೆ ಮಾಡಲು 30.06.2026 ರವರೆಗೆ 6,671 ನಿಲ್ದಾಣಗಳಲ್ಲಿ ಪಾಯಿಂಟ್ ಗಳು ಮತ್ತು ಸಿಗ್ನಲ್ ಗಳ ಕೇಂದ್ರೀಕೃತ ಕಾರ್ಯಾಚರಣೆಯೊಂದಿಗೆ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ ಗಳನ್ನು ಒದಗಿಸಲಾಗಿದೆ.
- ಲೆವೆಲ್ ಕ್ರಾಸಿಂಗ್ ಗೇಟ್ ಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು 30.06.2026 ರವರೆಗೆ 10,395 ಲೆವೆಲ್ ಕ್ರಾಸಿಂಗ್ ಗೇಟ್ ಗಳಲ್ಲಿ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಒದಗಿಸಲಾಗಿದೆ.
- ವಿದ್ಯುತ್ ವಿಧಾನಗಳ ಮೂಲಕ ಟ್ರ್ಯಾಕ್ ಆಕ್ಯುಪೆನ್ಸಿಯನ್ನು (ಮಾರ್ಗದಲ್ಲಿ ರೈಲು ಇರುವುದನ್ನು) ಪರಿಶೀಲಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲು ನಿಲ್ದಾಣಗಳ ಸಂಪೂರ್ಣ ಟ್ರ್ಯಾಕ್ ಸರ್ಕ್ಯೂಟಿಂಗ್ ಅನ್ನು 30.06.2026 ರವರೆಗೆ 6,671 ನಿಲ್ದಾಣಗಳಲ್ಲಿ ಒದಗಿಸಲಾಗಿದೆ.
- ಸಿಗ್ನಲಿಂಗ್ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿವರವಾದ ಸೂಚನೆಗಳನ್ನು ನೀಡಲಾಗಿದೆ, ಉದಾ. ಕಡ್ಡಾಯ ಕರೆಸ್ಪಾಂಡೆನ್ಸ್ ಚೆಕ್, ಮಾರ್ಪಾಡು ಕೆಲಸದ ಪ್ರೋಟೋಕಾಲ್, ಪೂರ್ಣಗೊಳಿಸುವಿಕೆಯ ರೇಖಾಚಿತ್ರದ ತಯಾರಿ ಇತ್ಯಾದಿ.
- ಪ್ರೋಟೋಕಾಲ್ ಪ್ರಕಾರ ಸಿಗ್ನಲಿಂಗ್ ಮತ್ತು ಟೆಲಿಕಾಂ ಉಪಕರಣಗಳ ಕಡಿತ ಮತ್ತು ಮರುಸಂಪರ್ಕದ ವ್ಯವಸ್ಥೆಯನ್ನು ಮತ್ತೆ ಒತ್ತಿ ಹೇಳಲಾಗಿದೆ.
- ಲೋಕೋ ಪೈಲಟ್ ಗಳ ಜಾಗರೂಕತೆಯನ್ನು ಸುಧಾರಿಸಲು ಎಲ್ಲಾ ಲೋಕೋಮೋಟಿವ್ ಗಳಲ್ಲಿ ವಿಜಿಲೆನ್ಸ್ ಕಂಟ್ರೋಲ್ ಡಿವೈಸ್ ಗಳನ್ನು (ವಿಸಿಡಿ) ಅಳವಡಿಸಲಾಗಿದೆ.
- ದಟ್ಟ ಮಂಜಿನ ವಾತಾವರಣದಿಂದಾಗಿ ಗೋಚರತೆ ಕಡಿಮೆಯಿದ್ದಾಗ ಸಿಬ್ಬಂದಿಯನ್ನು ಎಚ್ಚರಿಸಲು, ವಿದ್ಯುದೀಕೃತ ಪ್ರದೇಶಗಳಲ್ಲಿ ಸಿಗ್ನಲ್ ಗಳಿಗಿಂತ ಎರಡು ಒ ಎಚ್ ಇ ಕಂಬಗಳ ಮೊದಲು ಇರುವ ಕಂಬದ ಮೇಲೆ ರೆಟ್ರೋ-ರಿಫ್ಲೆಕ್ಟಿವ್ ಸಿಗ್ಮಾ ಬೋರ್ಡ್ ಗಳನ್ನು ಒದಗಿಸಲಾಗಿದೆ.
- ಮಂಜು ಪೀಡಿತ ಪ್ರದೇಶಗಳಲ್ಲಿ ಲೋಕೋ ಪೈಲಟ್ ಗಳಿಗೆ ಜಿಪಿಎಸ್ ಆಧಾರಿತ ಫಾಗ್ ಸೇಫ್ಟಿ ಡಿವೈಸ್ (ಎಫ್ ಎಸ್ ಡಿ) ನೀಡಲಾಗುತ್ತದೆ, ಇದು ಮುಂಬರುವ ಸಿಗ್ನಲ್ ಗಳು, ಲೆವೆಲ್ ಕ್ರಾಸಿಂಗ್ ಗೇಟ್ ಗಳು ಇತ್ಯಾದಿ ಕುರಿತು ಅಂತರವನ್ನು ತಿಳಿಯಲು ಲೋಕೋ ಪೈಲಟ್ ಗಳಿಗೆ ಅನುವು ಮಾಡಿಕೊಡುತ್ತದೆ.
- ಪ್ರಾಥಮಿಕ ಟ್ರ್ಯಾಕ್ ನವೀಕರಣಗಳನ್ನು ಕೈಗೊಳ್ಳುವಾಗ 60 ಕೆಜಿ, 90 ಅಲ್ಟಿಮೇಟ್ ಟೆನ್ಸೈಲ್ ಸ್ಟ್ರೆಂತ್ (ಯುಟಿಎಸ್) ಹಳಿಗಳು, ಎಲಾಸ್ಟಿಕ್ ಫಾಸ್ಟೆನಿಂಗ್ ಹೊಂದಿರುವ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ ಸ್ಲೀಪರ್ (ಪಿ ಎಸ್ ಸಿ) ನಾರ್ಮಲ್/ವೈಡ್ ಬೇಸ್ ಸ್ಲೀಪರ್ ಗಳು, ಪಿ ಎಸ್ ಸಿ ಸ್ಲೀಪರ್ ಗಳ ಮೇಲೆ ಫ್ಯಾನ್ ಆಕಾರದ ಲೇಔಟ್ ಟರ್ನ್‌ಔಟ್, ಗರ್ಡರ್ ಸೇತುವೆಗಳ ಮೇಲೆ ಸ್ಟೀಲ್ ಚಾನೆಲ್/ಎಚ್-ಬೀಮ್ ಸ್ಲೀಪರ್ ಗಳನ್ನು ಒಳಗೊಂಡ ಆಧುನಿಕ ಟ್ರ್ಯಾಕ್ ರಚನೆಯನ್ನು ಬಳಸಲಾಗುತ್ತದೆ.
- ಮಾನವ ದೋಷಗಳನ್ನು ಕಡಿಮೆ ಮಾಡಲು PQRS, TRT, T-28 ಇತ್ಯಾದಿ ಟ್ರ್ಯಾಕ್ ಯಂತ್ರಗಳನ್ನು ಬಳಸುವ ಮೂಲಕ ಟ್ರ್ಯಾಕ್ ಅಳವಡಿಕೆ ಚಟುವಟಿಕೆಯ ಯಾಂತ್ರೀಕರಣ.
- ಹಳಿಗಳ ನವೀಕರಣದ ಪ್ರಗತಿಯನ್ನು ಹೆಚ್ಚಿಸಲು ಮತ್ತು ಜೋಡಣೆಗಳ ಬೆಸುಗೆಯನ್ನು ತಡೆಗಟ್ಟಲು 130m/260m ಉದ್ದದ ಹಳಿ ಪ್ಯಾನೆಲ್ ಗಳ ಪೂರೈಕೆಯನ್ನು ಗರಿಷ್ಠಗೊಳಿಸುವುದು, ಆ ಮೂಲಕ ಸುರಕ್ಷತೆಯನ್ನು ಸುಧಾರಿಸುವುದು.
- ದೋಷಗಳನ್ನು ಪತ್ತೆಹಚ್ಚಲು ಮತ್ತು ದೋಷಪೂರಿತ ಹಳಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಹಾಕಲು ಹಳಿಗಳ ಅಲ್ಟ್ರಾಸಾನಿಕ್ ಫ್ಲಾ ಡಿಟೆಕ್ಷನ್ (USFD) ಪರೀಕ್ಷೆ.
- ಉದ್ದವಾದ ಹಳಿಗಳನ್ನು ಹಾಕುವುದು, ಅಲುಮಿನೋ ಥರ್ಮಿಕ್ ವೆಲ್ಡಿಂಗ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಳಿಗಳಿಗೆ ಉತ್ತಮ ವೆಲ್ಡಿಂಗ್ ತಂತ್ರಜ್ಞಾನ ಅಂದರೆ ಫ್ಲ್ಯಾಶ್ ಬಟ್ ವೆಲ್ಡಿಂಗ್ ಅನ್ನು ಅಳವಡಿಸಿಕೊಳ್ಳುವುದು.
- ಒ ಎಂ ಎಸ್ (ಆಸಿಲೇಷನ್ ಮಾನಿಟರಿಂಗ್ ಸಿಸ್ಟಮ್) ಮತ್ತು ಟಿ ಆರ್ ಸಿ (ಟ್ರ್ಯಾಕ್ ರೆಕಾರ್ಡಿಂಗ್ ಕಾರ್ಸ್) ಮೂಲಕ ಟ್ರ್ಯಾಕ್ ಜ್ಯಾಮಿತಿಯ ಮೇಲ್ವಿಚಾರಣೆ.
- ವೆಲ್ಡ್/ರೈಲ್ ಬಿರುಕುಗಳನ್ನು ವೀಕ್ಷಿಸಲು ರೈಲ್ವೆ ಹಳಿಗಳ ಗಸ್ತು.
- ಟರ್ನ್‌ಔಟ್ ನವೀಕರಣ ಕಾಮಗಾರಿಗಳಲ್ಲಿ ಥಿಕ್ ವೆಬ್ ಸ್ವಿಚ್ ಗಳು ಮತ್ತು ವೆಲ್ಡಬಲ್ ಸಿಎಂಎಸ್ ಕ್ರಾಸಿಂಗ್ ಬಳಕೆಯು ಸೇರಿದೆ.
- ಸಿಬ್ಬಂದಿಗೆ ಸುರಕ್ಷಿತ ಅಭ್ಯಾಸಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಶಿಕ್ಷಣ ನೀಡಲು ನಿಯಮಿತ ಮಧ್ಯಂತರಗಳಲ್ಲಿ ತಪಾಸಣೆಗಳನ್ನು ನಡೆಸಲಾಗುತ್ತದೆ.
- ತರ್ಕಬದ್ಧ ನಿರ್ವಹಣಾ ಅಗತ್ಯವನ್ನು ನಿರ್ಧರಿಸಲು ಮತ್ತು ಇನ್‌ಪುಟ್ ಗಳನ್ನು ಅತ್ಯುತ್ತಮವಾಗಿಸಲು ಟ್ರ್ಯಾಕ್ ಸ್ವತ್ತುಗಳ ವೆಬ್ ಆಧಾರಿತ ಆನ್‌ಲೈನ್ ಮೇಲ್ವಿಚಾರಣಾ ವ್ಯವಸ್ಥೆ ಅಂದರೆ ಟ್ರ್ಯಾಕ್ ಡೇಟಾಬೇಸ್ ಮತ್ತು ನಿರ್ಧಾರ ಬೆಂಬಲ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
- ಟ್ರ್ಯಾಕ್ ನ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿವರವಾದ ಸೂಚನೆಗಳನ್ನು ನೀಡಲಾಗಿದೆ, ಉದಾ. ಇಂಟಿಗ್ರೇಟೆಡ್ ಬ್ಲಾಕ್, ಕಾರಿಡಾರ್ ಬ್ಲಾಕ್, ಕಾರ್ಯಸ್ಥಳದ ಸುರಕ್ಷತೆ, ಮುಂಗಾರು ಮುನ್ನೆಚ್ಚರಿಕೆಗಳು ಇತ್ಯಾದಿ.
- ಸುರಕ್ಷಿತ ರೈಲು ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಆಸ್ತಿಗಳ (ಬೋಗಿಗಳು ಮತ್ತು ವ್ಯಾಗನ್ ಗಳು) ತಡೆಗಟ್ಟುವ ನಿರ್ವಹಣೆಯನ್ನು ಕೈಗೊಳ್ಳಲಾಗುತ್ತದೆ.
- ಸಾಂಪ್ರದಾಯಿಕ ಐಸಿಎಫ್ ವಿನ್ಯಾಸದ ಬೋಗಿಗಳ ಬದಲಿಗೆ ಎಲ್ ಎಚ್ ಬಿ ವಿನ್ಯಾಸದ ಬೋಗಿಗಳನ್ನು ಬದಲಾಯಿಸಲಾಗುತ್ತಿದೆ.
- ಬ್ರಾಡ್ ಗೇಜ್ ಮಾರ್ಗದಲ್ಲಿರುವ ಎಲ್ಲಾ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಗಳನ್ನು (ಯು ಎಂ ಎಲ್ ಸಿ) ಜನವರಿ 2019 ರ ವೇಳೆಗೆ ತೆಗೆದುಹಾಕಲಾಗಿದೆ.
- ಸೇತುವೆಗಳ ನಿಯಮಿತ ತಪಾಸಣೆಯ ಮೂಲಕ ರೈಲ್ವೆ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ತಪಾಸಣೆಗಳ ಸಮಯದಲ್ಲಿ ಮೌಲ್ಯಮಾಪನ ಮಾಡಿದ ಪರಿಸ್ಥಿತಿಗಳ ಆಧಾರದ ಮೇಲೆ ಸೇತುವೆಗಳ ದುರಸ್ತಿ/ಪುನರುಜ್ಜೀವನವನ್ನು ಕೈಗೆತ್ತಿಕೊಳ್ಳಲಾಗುತ್ತದೆ.
- ಭಾರತೀಯ ರೈಲ್ವೆಯು ವ್ಯಾಪಕ ಪ್ರಯಾಣಿಕರ ಮಾಹಿತಿಗಾಗಿ ಎಲ್ಲಾ ಬೋಗಿಗಳಲ್ಲಿ ಶಾಸನಬದ್ಧ "ಅಗ್ನಿಶಾಮಕ ಸೂಚನೆಗಳನ್ನು" ಪ್ರದರ್ಶಿಸಿದೆ. ಬೆಂಕಿಯನ್ನು ತಡೆಗಟ್ಟಲು ವಿವಿಧ 'ಮಾಡಬೇಕಾದ ಮತ್ತು ಮಾಡಬಾರದ' ವಿಚಾರಗಳ ಬಗ್ಗೆ ಪ್ರಯಾಣಿಕರಿಗೆ ಶಿಕ್ಷಣ ನೀಡಲು ಮತ್ತು ಎಚ್ಚರಿಸಲು ಪ್ರತಿ ಬೋಗಿಯಲ್ಲಿ ಫೈರ್ ಪೋಸ್ಟರ್ ಗಳನ್ನು ಒದಗಿಸಲಾಗಿದೆ. ಯಾವುದೇ ದಹನಕಾರಿ ವಸ್ತುಗಳು, ಸ್ಫೋಟಕಗಳನ್ನು ಒಯ್ಯದಿರುವುದು, ಬೋಗಿಗಳ ಒಳಗೆ ಧೂಮಪಾನದ ನಿಷೇಧ, ದಂಡಗಳು ಇತ್ಯಾದಿ ಸಂದೇಶಗಳು ಇದರಲ್ಲಿ ಸೇರಿವೆ.
- ಉತ್ಪಾದನಾ ಘಟಕಗಳು ಹೊಸದಾಗಿ ತಯಾರಿಸಿದ ಪವರ್ ಕಾರ್ ಗಳು ಮತ್ತು ಪ್ಯಾಂಟ್ರಿ ಕಾರ್ ಗಳಲ್ಲಿ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಒದಗಿಸುತ್ತಿವೆ, ಹೊಸದಾಗಿ ತಯಾರಿಸಿದ ಬೋಗಿಗಳಲ್ಲಿ ಬೆಂಕಿ ಮತ್ತು ಹೊಗೆ ಪತ್ತೆ ವ್ಯವಸ್ಥೆಯನ್ನು ಒದಗಿಸುತ್ತಿವೆ. ಅಸ್ತಿತ್ವದಲ್ಲಿರುವ ಕೋಚ್‌ಗಳಲ್ಲಿ ಅದರ ಪ್ರಗತಿಪರ ಅಳವಡಿಕೆಯನ್ನು ವಲಯ ರೈಲ್ವೆಗಳು ಹಂತ ಹಂತವಾಗಿ ನಡೆಸುತ್ತಿವೆ.
- ಸಿಬ್ಬಂದಿಗೆ ನಿಯಮಿತ ಕೌನ್ಸಿಲಿಂಗ್ ಮತ್ತು ತರಬೇತಿಯನ್ನು ಕೈಗೊಳ್ಳಲಾಗುತ್ತದೆ.
- 30.11.2023 ರ ಗೆಜೆಟ್ ಅಧಿಸೂಚನೆಯ ಮೂಲಕ ಭಾರತೀಯ ರೈಲ್ವೆಯಲ್ಲಿ (ಓಪನ್ ಲೈನ್ಸ್) ರೋಲಿಂಗ್ ಬ್ಲಾಕ್ ಪರಿಕಲ್ಪನೆಯನ್ನು ಪರಿಚಯಿಸಲಾಯಿತು, ಇದರಲ್ಲಿ ಆಸ್ತಿಗಳ ಸಮಗ್ರ ನಿರ್ವಹಣೆ/ದುರಸ್ತಿ/ಬದಲಾವಣೆಯ ಕೆಲಸವನ್ನು ರೋಲಿಂಗ್ ಆಧಾರದ ಮೇಲೆ 52 ವಾರಗಳ ಮುಂಚಿತವಾಗಿ ಯೋಜಿಸಲಾಗುತ್ತದೆ ಮತ್ತು ಯೋಜನೆಯಂತೆ ಕಾರ್ಯಗತಗೊಳಿಸಲಾಗುತ್ತದೆ.
ಉತ್ತಮ ನಿರ್ವಹಣಾ ಪದ್ಧತಿಗಳು, ತಾಂತ್ರಿಕ ಸುಧಾರಣೆಗಳು, ಉತ್ತಮ ಮೂಲಸೌಕರ್ಯ ಮತ್ತು ರೋಲಿಂಗ್ ಸ್ಟಾಕ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ರೈಲ್ವೆ ಕೈಗೊಂಡ ಸುರಕ್ಷತಾ ಸಂಬಂಧಿತ ಕಾಮಗಾರಿಗಳ ವಿವರಗಳನ್ನು ಕೆಳಗೆ ಕೋಷ್ಟಕದಲ್ಲಿ ನೀಡಲಾಗಿದೆ:-
|
ಕ್ರ.ಸಂ.
|
ಕೆಲಸ
|
2004-05 ರಿಂದ 2013-14
|
2014-15 ರಿಂದ 2025-26
|
2014-26 ಮತ್ತು 2004-14 ರ ಹೋಲಿಕೆ
|
|
ತಾಂತ್ರಿಕ ಸುಧಾರಣೆಗಳು
|
|
1.
|
ಉತ್ತಮ ಗುಣಮಟ್ಟದ ಹಳಿಗಳ ಬಳಕೆ (60 ಕೆಜಿ) (ಕಿ.ಮೀ)
|
57,450 ಕಿ.ಮೀ
|
1.63 ಲಕ್ಷ ಕಿ.ಮೀ
|
2.8 ಪಟ್ಟಿಗಿಂತ ಹೆಚ್ಚು
|
|
2.
|
ಉದ್ದವಾದ ಹಳಿ ಪ್ಯಾನೆಲ್ ಗಳು (260ಮೀ) (ಕಿ.ಮೀ)
|
9,917 ಕಿ.ಮೀ
|
87,219 ಕಿ.ಮೀ
|
ಸುಮಾರು 9 ಪಟ್ಟು
|
|
3.
|
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (ನಿಲ್ದಾಣಗಳು)
|
837 ನಿಲ್ದಾಣಗಳು
|
3,691 ನಿಲ್ದಾಣಗಳು
|
4 ಪಟ್ಟಿಗಿಂತ ಹೆಚ್ಚು
|
|
4.
|
ಫಾಗ್ ಪಾಸ್ ಸೇಫ್ಟಿ ಡಿವೈಸಸ್ (ಸಂಖ್ಯೆ)
|
31.03.14 ರಂತೆ: 90 ನಂ.
|
31.03.26 ರಂತೆ: 31,693 ನಂ.
|
352 ಪಟ್ಟು
|
|
5.
|
ಥಿಕ್ ವೆಬ್ ಸ್ವಿಚ್ ಗಳು (ಸಂಖ್ಯೆ)
|
ಶೂನ್ಯ
|
35,971 ನಂ.
|
-
|
|
ಉತ್ತಮ ನಿರ್ವಹಣಾ ಪದ್ಧತಿಗಳು
|
|
1.
|
ಪ್ರಾಥಮಿಕ ಹಳಿ ನವೀಕರಣ (ಟ್ರ್ಯಾಕ್ ಕಿ.ಮೀ)
|
32,260 ಕಿ.ಮೀ
|
57,583 ಕಿ.ಮೀ
|
1.78 ಪಟ್ಟು
|
|
2.
|
ವೆಲ್ಡ್ ಗಳ ಯು ಎಸ್ ಎಫ್ ಡಿ (ಅಲ್ಟ್ರಾ ಸಾನಿಕ್ ಫ್ಲಾ ಡಿಟೆಕ್ಷನ್) ಪರೀಕ್ಷೆ (ಸಂಖ್ಯೆ)
|
79.43 ಲಕ್ಷ
|
2.25 ಕೋಟಿ
|
2.8 ಪಟ್ಟಿಗಿಂತ ಹೆಚ್ಚು
|
|
3.
|
ವೆಲ್ಡ್ ವೈಫಲ್ಯಗಳು (ಸಂಖ್ಯೆ)
|
2013-14ರಲ್ಲಿ: 3,699 ನಂ.
|
2025-26ರಲ್ಲಿ: 272 ನಂ.
|
93% ಇಳಿತ
|
|
4.
|
ಹಳಿ ಬಿರುಕುಗಳು (ಸಂಖ್ಯೆ)
|
2013-14ರಲ್ಲಿ: 2,548 ನಂ.
|
2025-26ರಲ್ಲಿ: 208 ನಂ.
|
92% ಇಳಿತ
|
|
ಉತ್ತಮ ಮೂಲಸೌಕರ್ಯ ಮತ್ತು ರೋಲಿಂಗ್ ಸ್ಟಾಕ್
|
|
1.
|
ಹೊಸದಾಗಿ ಸೇರಿಸಲಾದ ಟ್ರ್ಯಾಕ್ ಕಿ.ಮೀ
|
14,985 ಕಿ.ಮೀ
|
36,429 ಕಿ.ಮೀ
|
ಸುಮಾರು 2.5 ಪಟ್ಟು
|
|
2.
|
ಮೇಲ್ಸೇತುವೆಗಳು)/ಕೆಳ ಸೇತುವೆಗಳು (ಸಂಖ್ಯೆ)
|
4,148 ನಂ.
|
14,362 ನಂ.
|
3 ಪಟ್ಟಿಗಿಂತ ಹೆಚ್ಚು
|
|
3.
|
ಬ್ರಾಡ್ ಗೇಜ್ ನಲ್ಲಿರುವ ಮಾನವರಹಿತ ಲೆವೆಲ್ ಕ್ರಾಸಿಂಗ್ ಗಳು (ಸಂಖ್ಯೆ)
|
31.03.14 ರಂತೆ: 8,948
|
31.03.26 ರಂತೆ: ಶೂನ್ಯ (ಎಲ್ಲವನ್ನೂ 31.01.19 ರ ವೇಳೆಗೆ ತೆಗೆದುಹಾಕಲಾಗಿದೆ)
|
ತೆಗೆದುಹಾಕಲಾಗಿದೆ
|
|
4.
|
ಎಲ್ ಎಚ್ ಬಿ ಬೋಗಿಗಳ ತಯಾರಿಕೆ (ಸಂಖ್ಯೆ)
|
2,337 ನಂ.
|
49,366
|
21 ಪಟ್ಟಿಗಿಂತ ಹೆಚ್ಚು
|
ಕವಚ್ ಅನುಷ್ಠಾನ
- ಕವಚ್ ಎಂಬುದು ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯಾಗಿದೆ. ಕವಚ್ ಅತ್ಯಂತ ತಂತ್ರಜ್ಞಾನ ಸಾಂದ್ರಿತ ವ್ಯವಸ್ಥೆಯಾಗಿದ್ದು, ಅತ್ಯುನ್ನತ ಮಟ್ಟದ (SIL-4) ಸುರಕ್ಷತಾ ಪ್ರಮಾಣೀಕರಣದ ಅಗತ್ಯವಿದೆ.
- ಕವಚ್ ವ್ಯವಸ್ಥೆಯು ಲೋಕೋ ಪೈಲಟ್ ಬ್ರೇಕ್ ಅನ್ವಯಿಸಲು ವಿಫಲವಾದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್ ಹಾಕುವ ಮೂಲಕ ನಿಗದಿತ ವೇಗದ ಮಿತಿಯಲ್ಲಿ ರೈಲುಗಳನ್ನು ಚಲಾಯಿಸಲು ಲೋಕೋ ಪೈಲಟ್‌ಚಗೆ ಸಹಾಯ ಮಾಡುತ್ತದೆ ಮತ್ತು ಕಠಿಣ ವಾತಾವರಣದಲ್ಲೂ ರೈಲುಗಳು ಸುರಕ್ಷಿತವಾಗಿ ಚಲಿಸಲು ಸಹಾಯ ಮಾಡುತ್ತದೆ.
- ಪ್ರಯಾಣಿಕರ ರೈಲುಗಳಲ್ಲಿ ಮೊದಲ ಕ್ಷೇತ್ರ ಪರೀಕ್ಷೆಗಳನ್ನು ಫೆಬ್ರವರಿ 2016 ರಲ್ಲಿ ಪ್ರಾರಂಭಿಸಲಾಯಿತು. ಸ್ವೀಕರಿಸಿದ ಅನುಭವ ಮತ್ತು ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರ (ಐ ಎಸ್ ಎ) ಸ್ವತಂತ್ರ ಸುರಕ್ಷತಾ ಮೌಲ್ಯಮಾಪನದ ಆಧಾರದ ಮೇಲೆ, ಕವಚ್ ಆವೃತ್ತಿ 3.2 ಪೂರೈಕೆಗಾಗಿ 2018-19 ರಲ್ಲಿ ಮೂರು ಸಂಸ್ಥೆಗಳನ್ನು ಅನುಮೋದಿಸಲಾಗಿದೆ.
- ಜುಲೈ, 2020 ರಲ್ಲಿ ಕವಚ್ ಅನ್ನು ರಾಷ್ಟ್ರೀಯ ಎಟಿಪಿ ವ್ಯವಸ್ಥೆಯಾಗಿ ಅಳವಡಿಸಿಕೊಳ್ಳಲಾಯಿತು.
- ಕವಚ್ ವ್ಯವಸ್ಥೆಯ ಅನುಷ್ಠಾನವು ಈ ಕೆಳಗಿನ ಪ್ರಮುಖ ಚಟುವಟಿಕೆಗಳನ್ನು ಒಳಗೊಂಡಿದೆ:-
- ಪ್ರತಿಯೊಂದು ನಿಲ್ದಾಣ ಮತ್ತು ಬ್ಲಾಕ್ ವಿಭಾಗದಲ್ಲಿ ಸ್ಟೇಷನ್ ಕವಚ್ ಅಳವಡಿಕೆ.
- ಟ್ರ್ಯಾಕ್ ನ ಉದ್ದಕ್ಕೂ ಆರ್ ಎಫ್ ಐ ಡಿ ಟ್ಯಾಗ್ ಗಳ ಅಳವಡಿಕೆ.
- ವಿಭಾಗದ ಉದ್ದಕ್ಕೂ ಟೆಲಿಕಾಂ ಟವರ್ ಗಳ ಸ್ಥಾಪನೆ.
- ಹಳಿಯ ಉದ್ದಕ್ಕೂ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ.
- ಭಾರತೀಯ ರೈಲ್ವೆಯಲ್ಲಿ ಚಲಿಸುವ ಪ್ರತಿಯೊಂದು ಲೋಕೋಮೋಟಿವ್ ನಲ್ಲಿ ಲೋಕೋ ಕವಚ್ ಒದಗಿಸುವುದು.
- ದಕ್ಷಿಣ ಮಧ್ಯ ರೈಲ್ವೆಯ 1465 ಆರ್‌ಕೆಎಂ ನಲ್ಲಿ ಕವಚ್ ಆವೃತ್ತಿ 3.2 ಅನ್ನು ನಿಯೋಜಿಸಿದ ಆಧಾರದ ಮೇಲೆ ಮತ್ತು ಪಡೆದ ಅನುಭವದ ಮೇಲೆ ಹೆಚ್ಚಿನ ಸುಧಾರಣೆಗಳನ್ನು ಮಾಡಲಾಗಿದೆ. ಅಂತಿಮವಾಗಿ, ಕವಚ್ ವಿವರಣೆ ಆವೃತ್ತಿ 4.0 ಅನ್ನು 16.07.2024 ರಂದು ಆರ್ ಡಿ ಎಸ್ ಒ ಅನುಮೋದಿಸಿದೆ.
- ಕವಚ್ ಆವೃತ್ತಿ 4.0 ವೈವಿಧ್ಯಮಯ ರೈಲ್ವೆ ಜಾಲಕ್ಕೆ ಅಗತ್ಯವಿರುವ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಭಾರತೀಯ ರೈಲ್ವೆಗೆ ಸುರಕ್ಷತೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಕಡಿಮೆ ಅವಧಿಯಲ್ಲಿ, ಭಾರತೀಯ ರೈಲ್ವೆಯು ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಪರೀಕ್ಷಿಸಿದೆ ಮತ್ತು ನಿಯೋಜಿಸಲು ಪ್ರಾರಂಭಿಸಿದೆ.
- ಆವೃತ್ತಿ 4.0 ರಲ್ಲಿನ ಪ್ರಮುಖ ಸುಧಾರಣೆಗಳು ಹೆಚ್ಚಿದ ಸ್ಥಳದ ನಿಖರತೆ, ದೊಡ್ಡ ಯಾರ್ಡ್‌ಗಳಲ್ಲಿ ಸಿಗ್ನಲ್ ಆಸ್ಪೆಕ್ಟ್ ಗಳ ಸುಧಾರಿತ ಮಾಹಿತಿ, ಒ ಎಫ್ ಸಿ ಯಲ್ಲಿ ಸ್ಟೇಷನ್ ಟು ಸ್ಟೇಷನ್ ಕವಚ್ ಇಂಟರ್ಫೇಸ್ ಮತ್ತು ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸಿಸ್ಟಮ್ ಗೆ ನೇರ ಇಂಟರ್ಫೇಸ್ ಅನ್ನು ಒಳಗೊಂಡಿವೆ. ಈ ಸುಧಾರಣೆಗಳೊಂದಿಗೆ, ಕವಚ್ ಆವೃತ್ತಿ 4.0 ಅನ್ನು ಭಾರತೀಯ ರೈಲ್ವೆಯಲ್ಲಿ ಬೃಹತ್ ಪ್ರಮಾಣದಲ್ಲಿ ನಿಯೋಜಿಸಲು ಯೋಜಿಸಲಾಗಿದೆ.
- ವ್ಯಾಪಕ ಮತ್ತು ವಿಸ್ತಾರವಾದ ಪರೀಕ್ಷೆಗಳ ನಂತರ, ಕವಚ್ ಆವೃತ್ತಿ 4.0 ಅನ್ನು 13.07.2026 ರಂತೆ 2,490 ರೂಟ್ ಕಿಲೋಮೀಟರ್ ಗಳಲ್ಲಿ ಯಶಸ್ವಿಯಾಗಿ ಕಾರ್ಯಾರಂಭ ಮಾಡಲಾಗಿದೆ, ಇದು ಕೆಳಗಿನಂತೆ ಹೆಚ್ಚು ದಟ್ಟಣೆಯ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳನ್ನು ಒಳಗೊಂಡಿದೆ:-
|
ಕ್ರ.ಸಂ.
|
ವಿಭಾಗ
|
ಪ್ರಗತಿ (ರೂಟ್ ಕಿ.ಮೀ)
|
|
(1)
|
ದೆಹಲಿ-ಮುಂಬೈ ಮಾರ್ಗ: 1344 ರೂಟ್ ಕಿ.ಮೀ
|
|
|
i
|
ತಿಲಕ್ ಬ್ರಿಡ್ಜ್ - ಜಂಕ್ಷನ್ ಕ್ಯಾಬಿನ್ - ಪಾಲ್ವಾಲ್ - ಮಥುರಾ - ನಾಗ್ಡಾ - ವಡೋದರಾ - ವಿರಾರ್ ವಿಭಾಗ (ಮಂಗಲ್ ಮಹೂಡಿ - ಪಂಚ್‌ಪಿಪ್ಲಿಯಾ ಹೊರತುಪಡಿಸಿ)
|
1248
|
|
ii
|
ವಡೋದರಾ - ಅಹಮದಾಬಾದ್ ವಿಭಾಗ
|
96
|
|
(2)
|
ದೆಹಲಿ - ಹೌರಾ ಮಾರ್ಗ: 1146 ರೂಟ್ ಕಿ.ಮೀ
|
|
|
i.
|
ಚಿಪ್ಯಾನಾ - ತುಂಡ್ಲಾ - ಕಾನ್ಪುರ - ಸುಬೇದಾರ್‌ಗಂಜ್ ವಿಭಾಗ
|
563
|
|
ii.
|
ಕಾನ್ಪುರ - ಲಖನೌ ವಿಭಾಗ
|
71
|
|
iii.
|
ಡಿಡಿಯು(ಎಫ್ ಒ ಸಿ) - ಭಾಬುವಾ ರೋಡ್ ವಿಭಾಗ
|
50
|
|
iv.
|
ಸಸಾರಾಂ - ಫೇಸರ್ ವಿಭಾಗ
|
43
|
|
v.
|
ಗಯಾ - ಸರ್ಮಾತಾರ್ನ್ - ನಿಮಿಯಾಘಾಟ್ ವಿಭಾಗ
|
159
|
|
vi.
|
ಚೋಟಾ ಅಂಬಾನಾ - ಬರ್ಧಮಾನ್ - ಹೌರಾ ವಿಭಾಗ
|
260
|
- ಹೆಚ್ಚುವರಿಯಾಗಿ, ಭಾರತೀಯ ರೈಲ್ವೆಯ ಎಲ್ಲಾ GQ, GD, HDN ಮತ್ತು ಗುರುತಿಸಲಾದ ವಿಭಾಗಗಳನ್ನು ಒಳಗೊಂಡಂತೆ 21,937 ರೂಟ್ ಕಿ.ಮೀ ನಲ್ಲಿ ಟ್ರ್ಯಾಕ್ ಸೈಡ್ ಕವಚ್ ಅನುಷ್ಠಾನ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
- ಭಾರತೀಯ ರೈಲ್ವೆ ವಿಭಾಗಗಳಲ್ಲಿ ಕವಚ್ ನ ಪ್ರಮುಖ ಅಂಶಗಳ ಒಟ್ಟು ಪ್ರಗತಿ ಈ ಕೆಳಗಿನಂತಿದೆ:-
|
ಕ್ರ.ಸಂ.
|
ಅಂಶ
|
ಪ್ರಗತಿ
|
|
i
|
ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ
|
11,253 ಕಿ.ಮೀ
|
|
ii
|
ಟೆಲಿಕಾಂ ಟವರ್ ಗಳ ಸ್ಥಾಪನೆ
|
1,668 ಸಂಖ್ಯೆ
|
|
iii
|
ಸ್ಟೇಷನ್ ಡೇಟಾ ಸೆಂಟರ್
|
958 ನಿಲ್ದಾಣಗಳು
|
|
iv
|
ಟ್ರ್ಯಾಕ್ ಸೈಡ್ ಉಪಕರಣಗಳ ಸ್ಥಾಪನೆ
|
7,721 ರೂಟ್ ಕಿ.ಮೀ
|
|
v
|
ಲೋಕೋದಲ್ಲಿ ಕವಚ್ ಒದಗಿಸುವಿಕೆ
|
6,045 ಸಂಖ್ಯೆ
|
- ಹೆಚ್ಚುವರಿಯಾಗಿ, 7,435 ಲೋಕೋಮೋಟಿವ್ ಗಳು ಮತ್ತು 1,200 ಎಮು/ಮೆಮು (ಇಎಂಯು/ಎಂಇಎಂಯು) ರೈಲುಗಳಲ್ಲಿ ಕವಚ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
- ಕವಚ್ ಕುರಿತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ತರಬೇತಿ ನೀಡಲು ಭಾರತೀಯ ರೈಲ್ವೆಯ ಕೇಂದ್ರೀಕೃತ ತರಬೇತಿ ಸಂಸ್ಥೆಗಳಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸದ್ಯಕ್ಕೆ 94,000 ಕ್ಕೂ ಹೆಚ್ಚು ತಂತ್ರಜ್ಞರು, ನಿರ್ವಾಹಕರು ಮತ್ತು ಎಂಜಿನಿಯರ್ ಗಳಿಗೆ ಕವಚ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದೆ. ಇದರಲ್ಲಿ ಸುಮಾರು 57,000 ಲೋಕೋ ಪೈಲಟ್ ಗಳು ಮತ್ತು ಅಸಿಸ್ಟೆಂಟ್ ಲೋಕೋ ಪೈಲಟ್ ಗಳು ಸೇರಿದ್ದಾರೆ. IRISET ಸಹಯೋಗದೊಂದಿಗೆ ಕೋರ್ಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ.
- ಜೂನ್ '26 ರವರೆಗೆ ಕವಚ್ ಕಾಮಗಾರಿಗಳಿಗೆ ಬಳಸಲಾದ ಹಣ ರೂ. 3874.9 ಕೋಟಿ. 2026-27 ರ ಅವಧಿಯಲ್ಲಿ ಹಣದ ಹಂಚಿಕೆ ರೂ. 2066.24 ಕೋಟಿ. ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ಅಗತ್ಯ ಹಣವನ್ನು ಒದಗಿಸಲಾಗುತ್ತದೆ.
ರೈಲು ಅಪಘಾತಗಳ ತನಿಖೆಯನ್ನು ಶಾಸನಬದ್ಧ ಸಂಸ್ಥೆಗಳಾದ ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಬರುವ ರೈಲ್ವೆ ಸುರಕ್ಷತಾ ಆಯೋಗ (ಸಿ ಆರ್ ಎಸ್) ಮತ್ತು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಇಲಾಖಾ ತನಿಖಾ ಸಮಿತಿಗಳು ನಡೆಸುತ್ತವೆ.
ಸಂಬಂಧಪಟ್ಟ ವೃತ್ತಗಳ ಸಿ ಆರ್ ಎಸ್ ಸೂಕ್ತ ಆಲೋಚನೆಗಳ ನಂತರ ಅಪಘಾತಗಳಲ್ಲಿ ತಮ್ಮ ಸಂಶೋಧನೆಗಳು ಮತ್ತು ಶಿಫಾರಸುಗಳನ್ನು ಸಲ್ಲಿಸುತ್ತವೆ. ತಮ್ಮ ವರದಿಗಳಲ್ಲಿ ಸಿ ಆರ್ ಎಸ್ ಸೂಚಿಸಿದ ಶಿಫಾರಸುಗಳ ಮೇಲೆ ಸಂಬಂಧಪಟ್ಟ ರೈಲ್ವೆ ಆಡಳಿತವು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಕೈಗೊಂಡ ಕ್ರಮಗಳ ವರದಿಗಳು ಕಂಡುಬಂದ ಕೊರತೆಗಳನ್ನು ಪರಿಹರಿಸುತ್ತವೆ ಮತ್ತು ಆದ್ದರಿಂದ ಇದೇ ರೀತಿಯ ಅಪಘಾತಗಳ ಮರುಕಳಿಸುವಿಕೆಯನ್ನು ತಪ್ಪಿಸಲು ಸಹಾಯ ಮಾಡುತ್ತವೆ.
ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಈ ಮಾಹಿತಿಯನ್ನು ನೀಡಿದ್ದಾರೆ.
*****
(रिलीज़ आईडी: 2287787)
|