ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸಮಗ್ರ ಪುನರ್ ವಸತಿಯ ಮೂಲಕ ‘ಭಿಕ್ಷಾ ವೃತ್ತಿ ಮುಕ್ತ ಭಾರತ’ದತ್ತ ಭಾರತದ ಬದ್ಧತೆಯನ್ನು ಬಲಪಡಿಸಿದ ‘ಸ್ಮೈಲ್’ (ಎಸ್ ಎಂ ಐಎಲ್ ಇ) ಯೋಜನೆ*


ದೇಶಾದ್ಯಂತ 216 ನಗರಗಳಲ್ಲಿ ‘ಸ್ಮೈಲ್’ ಭಿಕ್ಷಾಟನೆ ಯೋಜನೆ ಕಾರ್ಯನಿರ್ವಹಣೆ, ಸ್ಮೈಲ್ ಭಿಕ್ಷಾಟನೆ ಯೋಜನೆಯಡಿ 10,200ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಯಶಸ್ವಿ ಪುನರ್ವಸತಿ*

2030-31ರ ಹಣಕಾಸು ವರ್ಷದ ವೇಳೆಗೆ ‘ಸ್ಮೈಲ್’ ಭಿಕ್ಷಾಟನೆ ಯೋಜನೆಯಡಿ 35,000 ವ್ಯಕ್ತಿಗಳನ್ನು ತರುವ ಗುರಿ

प्रविष्टि तिथि: 20 JUL 2026 6:39PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದುರ್ಬಲ ಸಮುದಾಯಗಳಿಗೆ ಘನತೆ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳೊಂದಿಗೆ ಸಾಮಾಜಿಕ ಹಾಗೂ ಆರ್ಥಿಕ ಪುನರ್ವಸತಿಯನ್ನು ಖಚಿತಪಡಿಸಲು ‘ಸ್ಮೈಲ್’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಮಹಾ ಯೋಜನೆಯು "ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್‌ ವಸತಿಗಾಗಿ ಕೇಂದ್ರ ವಲಯದ ಯೋಜನೆ"ಯನ್ನು ಒಳಗೊಂಡಿದ್ದು, ಪುನರ್ವಸತಿ, ಕೌಶಲ್ಯಾಭಿವೃದ್ಧಿ, ಶಿಕ್ಷಣ, ಆರೋಗ್ಯ ರಕ್ಷಣೆ, ಆಪ್ತಸಮಾಲೋಚನೆ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜನರ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ.

ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, 'ಸ್ಮೈಲ್ ಭಿಕ್ಷಾಟನೆ ಯೋಜನೆ'ಯು ಪ್ರಸ್ತುತ ದೇಶದ 216 ನಗರಗಳಲ್ಲಿ ಜಾರಿಯಲ್ಲಿದ್ದು, ಮುಂದಿನ 5 ವರ್ಷಗಳಲ್ಲಿ ಅಂದರೆ 2030-31ರ ಹಣಕಾಸು ವರ್ಷದ ವೇಳೆಗೆ 295 ನಗರಗಳನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. 2026-31ರ ಹಣಕಾಸು ವರ್ಷಕ್ಕೆ ಅನುಮೋದಿಸಲಾದ ಸ್ಥಾಯಿ ಹಣಕಾಸು ಸಮಿತಿ (ಎಸ್ ಎಫ್ ಸಿ) ಪ್ರಕಾರ, ಈ ಯೋಜನೆಯು ಮಹಾನಗರಗಳು, ಧಾರ್ಮಿಕ, ಪ್ರವಾಸಿ ಮತ್ತು ಐತಿಹಾಸಿಕ ಸ್ಥಳಗಳ ಮೇಲೆ ವಿಶೇಷ ಗಮನ ಹರಿಸಲಿದೆ ಎಂದು ಅಧಿಕಾರಿ ಹೇಳಿದರು. ಸ್ಮೈಲ್ ಭಿಕ್ಷಾಟನೆ ಯೋಜನೆಯಡಿ ಪುನರ್ವಸತಿಯ ಗುರಿಯು 35,000 ಜನರಾಗಿದ್ದು, ಇದುವರೆಗೆ ಭಿಕ್ಷಾಟನೆಯಲ್ಲಿ ತೊಡಗಿದ್ದ 10,200ಕ್ಕೂ ಹೆಚ್ಚು ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. ಅನುಮೋದಿತ ಅನುಷ್ಠಾನ ಯೋಜನೆಯಂತೆ ಉಳಿದ ಗುರಿಯನ್ನು 2030-31ರ ಹಣಕಾಸು ವರ್ಷದ ವೇಳೆಗೆ ಹಂತ ಹಂತವಾಗಿ ತಲುಪಲು ಯೋಜಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲಾಡಳಿತಗಳು, ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳು ಮತ್ತು ಅನುಷ್ಠಾನ ಸಂಸ್ಥೆಗಳ ಸಂಯೋಜಿತ ಪ್ರಯತ್ನಗಳ ಮೂಲಕ "ಭಿಕ್ಷಾ ವೃತ್ತಿ ಮುಕ್ತ ಭಾರತ"ದ ದೃಷ್ಟಿಕೋನವನ್ನು ನನಸಾಗಿಸಲು ಈ ಯೋಜನೆ ಶ್ರಮಿಸುತ್ತದೆ. ಸಮನ್ವಯ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ, ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸುವುದು, ರಕ್ಷಿಸುವುದು, ಪುನರ್ವಸತಿ ಕಲ್ಪಿಸುವುದು ಮತ್ತು ಘನತೆ ಹಾಗೂ ಆತ್ಮವಿಶ್ವಾಸದೊಂದಿಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ಮರಳಿ ತರುವುದಕ್ಕೆ ಈ ಯೋಜನೆ ಅನುಕೂಲ ಮಾಡಿಕೊಡುತ್ತದೆ.

ಪರಿಣಾಮಕಾರಿ ಅನುಷ್ಠಾನ ಮತ್ತು ಪಾರದರ್ಶಕತೆಗಾಗಿ ಪುನರ್ವಸತಿ ಕೇಂದ್ರಗಳು ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಗಳ ನೋಂದಣಿ, ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಗೆ ಅವಕಾಶ ಕಲ್ಪಿಸಲು ಸಚಿವಾಲಯವು 'SMILE-Beggary National Portal' ಮೂಲಕ ಡಿಜಿಟಲ್ ಮೇಲ್ವಿಚಾರಣೆಯನ್ನು ಬಲಪಡಿಸಿದೆ. ಈ ಯೋಜನೆಯು ಮರುಪರಿಶೀಲಿಸಿದ ಕಾರ್ಯಾಚರಣೆಯ ಮಾರ್ಗಸೂಚಿಗಳು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಬೆಂಬಲವನ್ನು ಮುಂದುವರಿಸಿದೆ. ಪುನರ್ವಸತಿ ಪ್ರಯತ್ನಗಳು ದೀರ್ಘಕಾಲೀನ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವಾಗಿ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಜಾಗೃತಿಯನ್ನು ವಿಸ್ತರಿಸುವುದು, ಸಾಂಸ್ಥಿಕ ಬೆಂಬಲವನ್ನು ಬಲಪಡಿಸುವುದು ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದನ್ನು ಮುಂದುವರಿಸಿದೆ.

 

******


(रिलीज़ आईडी: 2286780) आगंतुक पटल : 52
इस विज्ञप्ति को इन भाषाओं में पढ़ें: English , Gujarati , Urdu , हिन्दी , Marathi , Tamil