ಸಂವಹನ ಸಚಿವಾಲಯ
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ (ಸಂಪರ್ಕಜಾಲ) ಗುಣಮಟ್ಟವನ್ನು ಮೌಲ್ಯಮಾಪನ ಮಾಡಿದ ʻಟ್ರಾಯ್ʼ
प्रविष्टि तिथि:
01 JUL 2026 12:47PM by PIB Bengaluru
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಮಾರ್ಚ್ 2026ರಲ್ಲಿ ಕರ್ನಾಟಕ ʻಎಲ್ಎಸ್ಎʼ ವ್ಯಾಪ್ತಿಯ ಉಡುಪಿ ಜಿಲ್ಲೆಯಾದ್ಯಂತ ನಡೆಸಿದ ʻಇಂಡಿಪೆಂಡೆಂಟ್ ಡ್ರೈವ್ ಟೆಸ್ಟ್ʼನ (ಐಡಿಟಿ) ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ. ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಒದಗಿಸುವ ಮೊಬೈಲ್ ನೆಟ್‌ವರ್ಕ್ ಸೇವೆಗಳ (ಧ್ವನಿ ಮತ್ತು ಡೇಟಾ ಎರಡೂ) ನೈಜ ಸಮಯದ ಗುಣಮಟ್ಟವನ್ನು ನಿರ್ಣಯಿಸುವುದು ಮತ್ತು ಪರಿಶೀಲಿಸುವುದು ಈ ಡ್ರೈವ್ ಪರೀಕ್ಷೆಯ ಉದ್ದೇಶವಾಗಿದೆ. ʻಐಡಿಟಿʼ ಸಮಯದಲ್ಲಿ, ಕವರೇಜ್, ಕಾಲ್ ಡ್ರಾಪ್ ರೇಟ್ (ಸಿಡಿಆರ್), ಕಾಲ್ ಸೆಟಪ್ ಸಕ್ಸಸ್ ರೇಟ್ (ಸಿಎಸ್ಎಸ್ಆರ್), ಡೇಟಾ ಡೌನ್ಲೋಡ್ (ಡಿಎಲ್) ಮತ್ತು ಅಪ್‌ಲೋಡ್ (ಯುಎಲ್) ಥ್ರೋಪುಟ್ ಮುಂತಾದ ಪ್ರಮುಖ ಸೇವೆಯ ಗುಣಮಟ್ಟ (ಕ್ಯೂಒಎಸ್) ಮಾನದಂಡಗಳಿಗಾಗಿ ಟೆಲಿಕಾಂ ಸೇವಾ ಪೂರೈಕೆದಾರರ ಕಾರ್ಯಕ್ಷಮತೆಯನ್ನು ಟ್ರಾಯ್ ಸೆರೆಹಿಡಿಯುತ್ತದೆ, ನಂತರ ಗ್ರಾಹಕರಿಗೆ ಈ ಮಾಹಿತಿಯನ್ನು ತಿಳಿಸಲು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪರೀಕ್ಷೆಯ ವರದಿಯನ್ನು ಪ್ರಕಟಿಸಲಾಗುತ್ತದೆ.
ನಗರಗಳು, ಹಾಟ್‌ಸ್ಪಾಟ್‌ಗಳು, ಸಾರ್ವಜನಿಕ ಸಾರಿಗೆ ಕೇಂದ್ರಗಳು ಮುಂತಾದ ವೈವಿಧ್ಯಮಯ ಬಳಕೆಯ ಪರಿಸರದಲ್ಲಿ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಸೆರೆಹಿಡಿಯಲು ಈ ʻಐಡಿಟಿʼಯನಬ್ನು ವಿನ್ಯಾಸಗೊಳಿಸಲಾಗಿದೆ. ಈ ರೀತಿಯ ಡ್ರೈವ್ ಪರೀಕ್ಷೆಯಲ್ಲಿ, 2G, 3G, 4G ಮತ್ತು 5G ನೆಟ್‌ವರ್ಕ್‌ಗಳಲ್ಲಿನ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಲೈವ್ ಡೇಟಾ ಮತ್ತು ಧ್ವನಿ ಸೆಷನ್ ಗಳನ್ನು ಸ್ಥಾಪಿಸಲಾಗುತ್ತದೆ. ಅನೇಕ ಸುಧಾರಿತ ಪರೀಕ್ಷಾ ಹ್ಯಾಂಡ್ ಸೆಟ್‌ಗಳನ್ನು ಬಳಸಲಾಗುತ್ತದೆ, ಮತ್ತು ಸುಧಾರಿತ ತಂತ್ರಾಂಶ ವ್ಯವಸ್ಥೆಗಳನ್ನು ಬಳಸಿಕೊಂಡು ನೈಜ ಸಮಯದಲ್ಲಿ ಸೆಷನ್ ಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ.
ಟ್ರಾಯ್, ತನ್ನ ನೇಮಕಗೊಂಡ ಏಜೆನ್ಸಿಯ ಮೂಲಕ, ಕರ್ನಾಟಕ ʻಎಲ್ಎಸ್ಎʼ ವ್ಯಾಪ್ತಿಯಲ್ಲಿ 17ನೇ ಮಾರ್ಚ್ 2026 ರಿಂದ 2026ರ ಮಾರ್ಚ್ 20ರವರೆಗೆ ಉಡುಪಿ ಜಿಲ್ಲೆಯಲ್ಲಿ ಈ ಪರೀಕ್ಷೆಗಳನ್ನು ನಡೆಸಿತು. ಇದರಲ್ಲಿ ನಗರ ಪ್ರಯಾಣದ ವೇಳೆ ಪರೀಕ್ಷೆ(ಸಿಟಿ ಡ್ರೈವ್) - 535.5 ಕಿಮೀಗಳು, ಹಾಟ್‌ಸ್ಪಾಟ್ ಸ್ಥಳಗಳು - 15, ನಡಿಗೆಯ ವೇಳೆ ಪರೀಕ್ಷೆ (ವಾಕ್ ಟೆಸ್ಟ್) - 9.8 ಕಿಮೀ ಮತ್ತು ಹೆದ್ದಾರಿ ಪ್ರಯಾಣದ ವೇಳೆ ಪರೀಕ್ಷೆ(ಹೈವೇ ಡ್ರೈವ್)- 103.3 ಕಿಮೀ ಸೇರಿವೆ. ಬೆಂಗಳೂರಿನ ʻಟ್ರಾಯ್ʼ ಪ್ರಾದೇಶಿಕ ಕಚೇರಿಯ ಮೇಲ್ವಿಚಾರಣೆಯಲ್ಲಿ ಈ ಪರೀಕ್ಷೆಗಳನ್ನು ನಡೆಸಲಾಯಿತು. ʻಡ್ರೈವ್ ಟೆಸ್ಟ್ʼ ವರದಿಗಳಲ್ಲಿ ಪ್ರಸ್ತುತಪಡಿಸಲಾದ ಅವಲೋಕನಗಳು ಡ್ರೈವ್ ಟೆಸ್ಟ್ ನಡೆಸುವ ದಿನ/ಸಮಯದಲ್ಲಿ ಪರೀಕ್ಷೆಗೆ ಒಳಪಡುವ ಪ್ರದೇಶ/ಮಾರ್ಗದಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುತ್ತವೆ.

ಡ್ರೈವ್ ಟೆಸ್ಟ್ ಮಾರ್ಗ ನಕ್ಷೆ: ಈ ಕೆಳಗಿನ ಚಿತ್ರವು, ನಕ್ಷೆಯಲ್ಲಿ ತೋರಿಸಿದ ಪ್ರಕಾರ ʻಸಿಟಿ ಡ್ರೈವ್ʼ, ಇಂಟರ್-ಆಪರೇಟರ್ ಕರೆ, ಹಾಟ್ ಸ್ಪಾಟ್‌ಗಳು ಮತ್ತು ನಡಿಗೆ ವೇಳೆ ಪರೀಕ್ಷೆಗಳನ್ನು ಸೂಚಿಸುವ ʻಡ್ರೈವ್ ಟೆಸ್ಟ್ʼ ಮಾರ್ಗಗಳ ಅವಲೋಕನವನ್ನು ಒದಗಿಸುತ್ತದೆ: -
ಮೌಲ್ಯಮಾಪನ ಮಾಡಿದ ಪ್ರಮುಖ ಮಾನದಂಡಗಳು
- ವ್ಯಾಪ್ತಿ ಅಂತರ: ಮಾದರಿಗಳ ಶೇಕಡಾವಾರು, ಇದಕ್ಕಾಗಿ ಸಿಗ್ನಲ್ ಸಾಮರ್ಥ್ಯವು ಆಯಾ ತಂತ್ರಜ್ಞಾನಕ್ಕೆ (2G / 3G / 4G / 5G) ಕನಿಷ್ಠ ನಿಗದಿತ ಸಿಗ್ನಲ್ ಶಕ್ತಿಗಿಂತ ಕಡಿಮೆ ಇರುವುದನ್ನು ಗಮನಿಸಲಾಗಿದೆ.
- ಧ್ವನಿ ಸೇವೆಗಳು: ಕರೆ ಸೆಟಪ್ ಯಶಸ್ವಿ ದರ (ಸಿಎಸ್ಎಸ್ಆರ್), ಡ್ರಾಪ್ ಕಾಲ್ ರೇಟ್ (ಡಿಸಿಆರ್), ಕಾಲ್ ಸೆಟಪ್ ಸಮಯ, ಕಾಲ್ ಸೈಲೆನ್ಸ್ ರೇಟ್, ಸ್ಪೀಚ್ ಕ್ವಾಲಿಟಿ (ಎಂಒಎಸ್).
- ಕರೆ ಮೌನ ಉದಾಹರಣೆ: ಕರೆಗಳ ಸಮಯದಲ್ಲಿ ಸಂಭವಿಸಿದ ಕರೆ ಮೌನ ನಿದರ್ಶನಗಳ ಸಂಖ್ಯೆ.
- ಡೇಟಾ ಸೇವೆಗಳು: ಡೌನ್ಲೋಡ್ / ಅಪ್ಲೋಡ್ ಥ್ರೋಪುಟ್, ಲೇಟೆನ್ಸಿ, ಜಿಟ್ಟರ್, ಪ್ಯಾಕೆಟ್ ಡ್ರಾಪ್ ರೇಟ್
ಪ್ರಮುಖ ಮಾನದಂಡಗಳಿಗಾಗಿ ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ ಮೊಬೈಲ್ ನೆಟ್‌ವರ್ಕ್ ಕಾರ್ಯಕ್ಷಮತೆಯನ್ನು ಈ ಕೆಳಗೆ ಸಂಕ್ಷಿಪ್ತಗೊಳಿಸಲಾಗಿದೆ: -
ಎ) ವ್ಯಾಪ್ತಿ ಅಂತರ - ಸ್ವಯಂ-ಆಯ್ಕೆ ಮೋಡ್‌ನಲ್ಲಿ (5ಜಿ / 4ಜಿ / 3ಜಿ / 2ಜಿ) ಡ್ರೈವ್ ಟೆಸ್ಟ್ ಮಾರ್ಗದಲ್ಲಿ ಧ್ವನಿ ಪರೀಕ್ಷೆಯ ಸಮಯದಲ್ಲಿ ಸಿಗ್ನಲ್ ಸಾಮರ್ಥ್ಯವನ್ನು ಅಳತೆ ಮಾಡಲಾಯಿತು ಈ ವೇಳೆ ಸಂಗ್ರಹಿಸಿದ ಒಟ್ಟು ಮಾದರಿಗಳಲ್ಲಿ ಕಳಪೆ ಸಿಗ್ನಲ್ ಸಾಮರ್ಥ್ಯವನ್ನು ಹೊಂದಿರುವುದು ಕಂಡುಬಂದಿದೆ. ಇದು ಏರ್ಟೆಲ್ಗೆ 5304/46558, ʻಬಿಎಸ್‌ಎನ್‌ಎಲ್ʼಗೆ 18643/44700, ʻಆರ್ಜೆಐಎಲ್ʼಗೆ 4561/46087 ಮತ್ತು ʻವಿಐಎಲ್ʼಗೆ 11219/42475 ದಾಖಲಾಗಿದೆ. ವ್ಯಾಪ್ತಿಯ ಅಂತರಗಳ ವಿವರಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ಒದಗಿಸಲಾಗಿದೆ.
ಬಿ) ಡ್ರಾಪ್ ಆದ ಕರೆಗಳು - ಯಶಸ್ವಿಯಾಗಿ ಸ್ಥಾಪಿಸಲಾದ ಕರೆಗಳ ಸಂಖ್ಯೆಯಲ್ಲಿ ಡ್ರಾಪ್ ಮಾಡಿದ ಕರೆಗಳ ಸಂಖ್ಯೆಯನ್ನು ಅಳೆಯಲಾಗುತ್ತದೆ. ಇದು ಏರ್ಟೆಲ್ಗೆ 1/420, ಬಿಎಸ್ಎನ್ಲ್ಗೆ 22/396, ಆರ್ಜೆಐಎಲ್ಗೆ 4/422 ಮತ್ತು ವಿಐಎಲ್‌ಗೆ 13/392. ಡ್ರಾಪ್ ಆದ ಕರೆ ಸ್ಥಳಗಳ ವಿವರಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ಒದಗಿಸಲಾಗಿದೆ.
ಸಿ) ಕಾಲ್ ಸೈಲೆನ್ಸ್ ಇನ್ ಸ್ಟೆನ್ಸ್ - ಸ್ಥಾಪಿಸಲಾದ ಒಟ್ಟು ಕರೆಗಳಲ್ಲಿ > 3 ಸೆಕೆಂಡುಗಳ ಕಾಲ ಗಮನಿಸಿದ ಮೌನ ನಿದರ್ಶನಗಳ ಒಟ್ಟು ಸಂಖ್ಯೆ ಎಂದು ಅಳೆಯಲಾಗುತ್ತದೆ, ಇದು ಏರ್ ಟೆಲ್ ಗೆ 30/407, ಬಿಎಸ್ ಎನ್ ಎಲ್ ಗೆ 22/316, ಆರ್ ಜೆಐಎಲ್ ಗೆ 16/402 ಮತ್ತು ವಿಐಎಲ್ ಗೆ 32/380 ಆಗಿತ್ತು. ಕಾಲ್ ಸೈಲೆನ್ಸ್ ಇನ್ ಸ್ಟೆನ್ಸ್ ಸ್ಥಳಗಳ ವಿವರಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ಒದಗಿಸಲಾಗಿದೆ.
ಡಿ) ಡೇಟಾ ಡೌನ್ಲೋಡ್ ಮತ್ತು ಅಪ್ಲೋಡ್ ಥ್ರೋಪುಟ್:
i)ಡೇಟಾ ಡೌನ್ಲೋಡ್ ಕಾರ್ಯಕ್ಷಮತೆ (ಒಟ್ಟಾರೆ): ಸರಾಸರಿ ಡೌನ್ಲೋಡ್ ವೇಗವನ್ನು ಏರ್ಟೆಲ್ (5ಜಿ/4ಜಿ) 96.45 ಎಂಬಿಪಿಎಸ್, ಬಿಎಸ್ಎನ್ಎಲ್ (4ಜಿ) 5.65 ಎಂಬಿಪಿಎಸ್, ಆರ್ಐಎಲ್ (5ಜಿ/4ಜಿ) 197.40 ಎಂಬಿಪಿಎಸ್ ಮತ್ತು ವಿಐಎಲ್ (5ಜಿ/4ಜಿ/2ಜಿ) 23.09 ಎಂಬಿಪಿಎಸ್ ಎಂದು ಗಮನಿಸಲಾಗಿದೆ. ಡೌನ್‌ಲೋಡ್ ಥ್ರೋಪುಟ್‌ನ ವಿವರವನ್ನು ಲಗತ್ತಿಸಲಾದ ನಕ್ಷೆಯಲ್ಲಿ ಒದಗಿಸಲಾಗಿದೆ.
ii) ಡೇಟಾ ಅಪ್ಲೋಡ್ ಕಾರ್ಯಕ್ಷಮತೆ (ಒಟ್ಟಾರೆ): ಸರಾಸರಿ ಅಪ್‌ಲೋಡ್ ವೇಗವನ್ನು ಏರ್ಟೆಲ್ (5ಜಿ/4ಜಿ)ಗೆ 17.00 ಎಂಬಿಪಿಎಸ್, ಬಿಎಸ್ಎನ್ಎಲ್ (4ಜಿ) 1.76 ಎಂಬಿಪಿಎಸ್, ಆರ್ಜೆಐಎಲ್ (5ಜಿ/4ಜಿ) ಗೆ 14.78 ಎಂಬಿಪಿಎಸ್ ಮತ್ತು ವಿಐಎಲ್ (5ಜಿ/4ಜಿ/2ಜಿ) 10.81 ಎಂಬಿಪಿಎಸ್ ಎಂದು ಗಮನಿಸಲಾಗಿದೆ. ಅಪ್‌ಲೋಡ್ ಥ್ರೋಪುಟ್‌ನ ವಿವರವನ್ನು ಲಗತ್ತಿಸಲಾದ ನಕ್ಷೆಯಲ್ಲಿ ಒದಗಿಸಲಾಗಿದೆ.
ಕಾಲ್ ಡ್ರಾಪ್ ಮತ್ತು ಕಾಲ್ ಸೈಲೆನ್ಸ್ ಪ್ರಕರಣಗಳ ಸ್ಥಳಗಳನ್ನು ಲಗತ್ತಿಸಲಾದ ನಕ್ಷೆಯಲ್ಲಿ ಕೆಂಪು ಚುಕ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೋಡಬಹುದು.
ಡ್ರೈವ್ ಟೆಸ್ ಮಾರ್ಗ ಮತ್ತು ʻಐಡಿಟಿʼ ಸಮಯದಲ್ಲಿ ಕವರೇಜ್ ಪ್ರದೇಶದ ವಿವರಗಳು ಈ ಕೆಳಗಿನಂತಿವೆ: -
ಎ) ನಗರ - ಉಡುಪಿ ಜಿಲ್ಲೆಯ ಪಡುಬಿದ್ರಿ, ಸಂತೇಕಟ್ಟೆ, ಕೋಟ, ಕುಂಭಾಶಿ, ಕುಂದಾಪುರ, ಬೈಂದೂರು, ನೆಲ್ಲಿಕಟ್ಟೆ, ಶಿರೂರು ಮುರುಕೈ, ಹೆಬ್ರಿ, ಅಜೇಕರ್ ಜೆ.ಎಚ್.ಸಿ., ಕಾರ್ಕಳ ಮತ್ತು ಬೆಳ್ಮನ್ ಇತ್ಯಾದಿ ಪ್ರದೇಶಗಳು ʻಸಿಟಿ ಡ್ರೈವ್ʼನಲ್ಲಿ ಸೇರಿವೆ.
ಬಿ) ಕರಾವಳಿ - ಸಾಲಿಗ್ರಾಮ್ ಎ ಯಿಂದ ಸಾಲಿಗ್ರಾಮ್ ಬಿ ಗ್ರೇಟ್ ಮ್ಯಾಂಗ್ರೋವ್ ದ್ವೀಪಗಳು ಮತ್ತು ಮಲ್ಪೆ ಬೀಚ್ ಮೂಲಕ ಸೇಂಟ್ ಮೇರಿಸ್ ದ್ವೀಪಕ್ಕೆ ಹಾದುಹೋಗುವ ಮಲ್ಪೆ ಸೀ ವ್ಯೂ ಪಾಯಿಂಟ್ ಮತ್ತು ಸೇಂಟ್ ಮೇರಿಸ್ ಲೈನ್ ಇತ್ಯಾದಿ.
ಸಿ) ಹಾಟ್ ಸ್ಪಾಟ್ - ಕೆನರಾ ಮಾಲ್ ಮಣಿಪಾಲ, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಕಸ್ತೂರಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಸ್ಪತ್ರೆ ಮಣಿಪಾಲ, ಮಾಂಡವಿ ಟೈಮ್ಸ್ ಸ್ಕ್ವೇರ್ ಮಾಲ್ ಉಡುಪಿ, ಮಣಿಪಾಲ್ ಎಂಐಟಿ ಕ್ಯಾಂಪಸ್, ಆರ್ ಟಿಒ ಕಚೇರಿ ಉಡುಪಿ, ಶ್ರೀ ಕೃಷ್ಣ ದೇವಸ್ಥಾನ (ಕಾರ್ ಸ್ಟ್ರೀಟ್) ಉಡುಪಿ, ಟಿಪ್ ಟಾಪ್ ಸಿಟಿ ಸೆಂಟರ್ ಮಾಲ್ ಉಡುಪಿ, ಟಿಎಂಎ ಪಿಎಐ ಆಸ್ಪತ್ರೆ ಮಣಿಪಾಲ, ಉಡುಪಿ ಜಿಲ್ಲಾಧಿಕಾರಿ ಕಚೇರಿ, ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ. ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಉಡುಪಿ ನಗರಸಭೆ ಮುನ್ಸಿಪಲ್ ಕಚೇರಿ, ಉಡುಪಿ ರೈಲ್ವೆ ನಿಲ್ದಾಣ ಮತ್ತು ಉಡುಪಿ ತಾಲ್ಲೂಕು ಕಚೇರಿ.
ಡಿ) ವಾಕ್ ಟೆಸ್ಟ್ - 2026ರ ಮಾರ್ಚ್ 17ರಿಂದ 20ರವರೆಗೆ ನಡೆದ ನಡಿಗೆ ಪರೀಕ್ಷೆಗಳು: ಕಾರ್ಕಳ ಬಾಹುಬಲಿ ಪ್ರತಿಮೆ ಬೆಟ್ಟದ ಮಾರ್ಗದರ್ಶಿ ಪ್ರದೇಶ, ಮಲ್ಪೆ ಬೀಚ್ ವಾಯುವಿಹಾರ-ಮಲ್ಪೆ ಬೀಚ್ ಪ್ರವೇಶದ್ವಾರ ಸಮುದ್ರ ನಡಿಗೆ ಪ್ರದೇಶಕ್ಕೆ ಪ್ರವೇಶದ್ವಾರ ಮತ್ತು ಶ್ರೀ ಕೃಷ್ಣ ದೇವಾಲಯ ಉಡುಪಿ-ಉಡುಪಿ ಸೇವಾ ಬಸ್ ನಿಲ್ದಾಣ ಇತ್ಯಾದಿಗಳನ್ನು ಒಳಗೊಂಡಿವೆ.
ಈ ಐಡಿಟಿ ವರದಿಯ ಸಂಶೋಧನೆಗಳನ್ನು ಆಯಾ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ಅವರ ಕಡೆಯಿಂದ ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ʻಐಡಿಟಿʼಯ ವಿವರವಾದ ವರದಿಗಳನ್ನು ʻಟ್ರಾಯ್ʼ ವೆಬ್‌ಸೈಟ್ - www.trai.gov.in ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಹೆಚ್ಚುವರಿ ಮಾಹಿತಿಗಾಗಿ, adv.bengaluru@trai.gov.in ಅಥವಾ ಬೆಂಗಳೂರಿನಲ್ಲಿರುವ ʻಟ್ರಾಯ್ʼ ಪ್ರಾದೇಶಿಕ ಕಚೇರಿಗೆ ಇ-ಮೇಲ್ ಕಳುಹಿಸಬಹುದು. ಅಥವಾ ದೂರವಾಣಿ +91-80-22865004 ಮೂಲಕ ಸಂಪರ್ಕಿಸಬಹುದು.
ಅನುಬಂಧ
- ಉಡುಪಿ ಜಿಲ್ಲೆ:
- ಕವರೇಜ್ ಗ್ಯಾಪ್ - ಧ್ವನಿ ಪರೀಕ್ಷೆಯ ಸಮಯದಲ್ಲಿ ಆಟೋ-ಸೆಲೆಕ್ಷನ್ ಮೋಡ್ (5G/4G/3G/2G) ನಲ್ಲಿ ಡ್ರೈವ್ ಟೆಸ್ಟ್ ಮಾರ್ಗಕ್ಕೆ ಕನಿಷ್ಠ ನಿರ್ದಿಷ್ಟಪಡಿಸಿದ ಸಿಗ್ನಲ್ ಸಾಮರ್ಥ್ಯಕ್ಕಿಂತ ಕಡಿಮೆ ಕಂಡುಬಂದ ಕವರೇಜ್ ವಿತರಣೆಯು ಈ ಕೆಳಗಿನಂತಿದೆ: -
|
ಮಾನದಂಡ
|
ಏರ್ ಟೆಲ್
|
ಬಿಎಸ್ಎನ್ಎಲ್
|
ಆರ್ಜಿಐಎಲ್
|
ವಿಐಎಲ್
|
|
ಡ್ರೈವ್ ಟೆಸ್ಟ್ ಮಾರ್ಗದಲ್ಲಿ ಸೆರೆಹಿಡಿಯಲಾದ ಒಟ್ಟು ಮಾದರಿಗಳ ಸಂಖ್ಯೆ
|
46558
|
44700
|
46087
|
42475
|
|
ಕಳಪೆ ಸಿಗ್ನಲ್ ಸಾಮರ್ಥ್ಯ ಹೊಂದಿರುವ ಮಾದರಿಗಳ ಸಂಖ್ಯೆ
|
5304
|
18643
|
4561
|
11219
|
ಸೂಚನೆ: ಸಿಗ್ನಲ್ ಸಾಮರ್ಥ್ಯವು 5ಜಿ ಮತ್ತು 4ಜಿಗೆ −110 ಡಿಬಿಎಂ, 3ಜಿಗೆ −90 ಡಿಬಿಎಂ ಮತ್ತು 2ಜಿಗೆ −85 ಡಿಬಿಎಂಗಿಂತ ಕಡಿಮೆಯಿದ್ದರೆ ಕಳಪೆ ಎಂದು ಪರಿಗಣಿಸಲಾಗುತ್ತದೆ.
ಗಮನಿಸಲಾದ ಕವರೇಜ್ ಅಂತರ

- ಕಾಲ್ ಡ್ರಾಪ್ - ಸ್ವಯಂ-ಆಯ್ಕೆ ಮೋಡ್ ನಲ್ಲಿ (5ಜಿ / 4 ಜಿ / 3 ಜಿ / 2 ಜಿ) ಕಾಲ್ ಡ್ರಾಪ್ ಪ್ರಮಾಣದ– ಸೇವಾ ಪೂರೈಕೆದಾರರವಾರು ವಿವರಗಳು ಈ ಕೆಳಗಿನಂತಿವೆ: -
|
ಮಾನದಂಡ
|
ಏರ್ ಟೆಲ್
|
ಬಿಎಸ್ಎನ್ಎಲ್
|
ಆರ್ಜಿಐಎಲ್
|
ವಿಐಎಲ್
|
|
ಯಶಸ್ವಿ ಕರೆಗಳ ಸಂಖ್ಯೆಯನ್ನು ಸ್ಥಾಪಿಸಲಾಗಿದೆ
|
420
|
396
|
422
|
392
|
|
ಕಾಲ್ ಡ್ರಾಪ್ ಸಂಖ್ಯೆ
|
1
|
22
|
4
|
13
|
ಕರೆ ಡ್ರಾಪ್ (ಕಾಲ್ ಡ್ರಾಪ್ ) ಸ್ಥಳಗಳು

ಗಮನಿಸಿ: ಕಾಲ್ ಡ್ರಾಪ್ ಸ್ಥಳಗಳನ್ನು ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ ಮತ್ತು ನಕ್ಷೆಯಲ್ಲಿ ನಿಖರವಾದ ಸ್ಥಳವನ್ನು (ಅಕ್ಷಾಂಶ ಮತ್ತು ರೇಖಾಂಶ) ತಿಳಿಯಲು ಕ್ಲಿಕ್ ಮಾಡಬಹುದು
- ಕರೆ ಮೌನ (ಕಾಲ್ ಸೈಲೆನ್ಸ್) ಪ್ರಕರಣಗಳು- ಆಟೋ-ಸೆಲೆಕ್ಷನ್ ಮೋಡ್ ನಲ್ಲಿ (5G/4G) ಟೆಲಿಕಾಂ ಸೇವಾ ಪೂರೈಕೆದಾರವಾರು ಕಾಲ್ ಸೈಲೆನ್ಸ್ ಪ್ರಕರಣಗಳ ವಿವರಗಳು ಈ ಕೆಳಗಿನಂತಿವೆ: -
|
ಮಾನದಂಡ
|
ಏರ್ ಟೆಲ್
|
ಬಿಎಸ್ಎನ್ಎಲ್
|
ಆರ್ಜಿಐಎಲ್
|
ವಿಐಎಲ್
|
|
ಕರೆ ಸಂಪರ್ಕ ಯಶಸ್ವಿ
(ಸೇವಾ ಪೂರೈಕೆದಾರರ ನೆಟ್ ವರ್ಕ್ ನೊಳಗೆ)
|
407
|
316
|
402
|
380
|
|
ಕರೆಗಳ ನಡುವೆ >3 ಸೆಕೆಂಡುಗಳ ಅವಧಿಗಿಂತಲೂ ಹೆಚ್ಚು ಮೌನದ ಪ್ರಕರಣಗಳ ಸಂಖ್ಯೆ
|
30
|
22
|
16
|
32
|
|
ಕರೆಗಳ ನಡುವೆ >3 ಸೆಕೆಂಡುಗಳ ಅವಧಿಗಿಂತ ಹೆಚ್ಚು ಕರೆಮೌನ ಪ್ರಕರಣಗಳ ಒಟ್ಟು ಸಂಖ್ಯೆ
|
41
|
30
|
17
|
49
|
* ಎನ್‌ಎ - ಅನ್ವಯಿಸುವುದಿಲ್ಲ
ಕರೆ ಮೌನ (ಕಾಲ್ ಸೈಲೆನ್ಸ್) ಪ್ರಕರಣಗಳ ಸ್ಥಳಗಳು

ಸೂಚನೆ: ಕರೆ ಮೌನ ನಿದರ್ಶನಗಳನ್ನು ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ ಮತ್ತು ನಕ್ಷೆಯಲ್ಲಿ ನಿಖರವಾದ ಸ್ಥಳವನ್ನು (ಅಕ್ಷಾಂಶ ಮತ್ತು ರೇಖಾಂಶ) ತಿಳಿಯಲು ಕ್ಲಿಕ್ ಮಾಡಬಹುದು
- ಡೇಟಾ ಡೌನ್ಲೋಡ್ ಮತ್ತು ಅಲ್ಲೋಡ್ ಥ್ರೋಪುಟ್: ಸ್ವಯಂ-ಆಯ್ಕೆ ಮೋಡ್‌ನಲ್ಲಿ(5G/4G/3G/2G) ತಿಂಗಳಿಗೆ ಘೋಷಿಸಲಾದ ವಿಶಿಷ್ಟ ಡಿಎಲ್/ಯುಎಲ್ ಥ್ರೋಪುಟ್‌ಗೆ ಬದಲಾಗಿ ಸರಾಸರಿ ಡೌನ್ಲೋಡ್ (ಡಿಎಲ್) ಮತ್ತು ಅಪ್ಲೋಡ್ (UL) ಥ್ರೋಪುಟ್ – ಟೆಲಿಕಾಂ ಸೇವಾ ಪೂರೈಕೆದಾರವಾರು ವಿವರಗಳು ಈ ಕೆಳಗಿನಂತಿವೆ:-
ಡೌನ್ಲೋಡ್ ಥ್ರೋಪುಟ್
|
ಮಾನದಂಡ
|
ಅಳತೆ
|
ಏರ್ ಟೆಲ್
(5G ವರೆಗೆ)
|
ಬಿಎಸ್ಎನ್ಎಲ್
(4G ವರೆಗೆ)
|
ಆರ್ಜೆಐಎಲ್
(5G ವರೆಗೆ)
|
ವಿಐಎಲ್
(4G ವರೆಗೆ)
|
|
ಟಿಎಸ್‌ಪಿ ಘೋಷಿಸಿದ ವಿಶಿಷ್ಟ ಡೌನ್ ಲೋಡ್ ಥ್ರೋಪುಟ್
|
(Mbits/s)
|
15.22
|
10.03
|
15.00
|
15.00
|
|
ಐಡಿಟಿ ಸಮಯದಲ್ಲಿ ಅಳೆಯಲಾದ ಸರಾಸರಿ ಡೌನ್ ಲೋಡ್ ಥ್ರೋಪುಟ್
|
(Mbits / s)
|
96.45
|
5.65
|
197.40
|
23.09
|
ಗಮನಿಸಿ: ಪ್ಲಾಟ್ ಡೈನಾಮಿಕ್ ಡ್ರೈವ್ ಟೆಸ್ಟ್ ಫಲಿತಾಂಶಗಳನ್ನು ಮಾತ್ರ ಆಧರಿಸಿದೆ
(ii) ಅಪ್ ಲೋಡ್ ಥ್ರೋಪುಟ್
|
ಮಾನದಂಡ
|
ಅಳತೆ
|
ಏರ್ ಟೆಲ್
(5G ವರೆಗೆ)
|
ಬಿಎಸ್ಎನ್ಎಲ್
(4G ವರೆಗೆ)
|
RJIL
(5G ವರೆಗೆ)
|
ವಿಐಎಲ್
(4G ವರೆಗೆ)
|
|
ಟಿಎಸ್‌ಪಿ ಘೋಷಿಸಿದ ವಿಶಿಷ್ಟ ಅಪ್‌ಲೋಡ್ ಥ್ರೋಪುಟ್
|
(Mbits / s)
|
7.94
|
3.00
|
7.00
|
8.00
|
|
ಟಿಐಟಿ ಸಮಯದಲ್ಲಿ ಅಳೆಯಲಾದ ಸರಾಸರಿ ಅಪ್‌ಲೋಡ್ ಥ್ರೋಪುಟ್
|
(Mbits / s)
|
17.00
|
1.76
|
14.78
|
10.81
|

ಗಮನಿಸಿ: ಪ್ಲಾಟ್ ಡೈನಾಮಿಕ್ ಡ್ರೈವ್ ಟೆಸ್ಟ್ ಫಲಿತಾಂಶಗಳನ್ನು ಮಾತ್ರ ಆಧರಿಸಿದೆ
- ಕೋಡಿ ಕಯಾಕ್ ಪಾಯಿಂಟ್-ಸಾಲಿಗ್ರಾಮ್ ಮತ್ತು ಮಲ್ಪೆ ಬೀಚ್ನಿಂದ ಸೇಂಟ್ ಮೇರಿಸ್ ದ್ವೀಪ ಕರಾವಳಿ ಡ್ರೈವ್:
- ಕವರೇಜ್ ಅಂತರ - ಧ್ವನಿ ಪರೀಕ್ಷೆಯ ಸಮಯದಲ್ಲಿ ಆಟೋ-ಸೆಲೆಕ್ಷನ್ ಮೋಡ್ (5G/4G/3G/2G) ನಲ್ಲಿ ಡ್ರೈವ್ ಟೆಸ್ಟ್ ಮಾರ್ಗಕ್ಕೆ ಕನಿಷ್ಠ ನಿರ್ದಿಷ್ಟಪಡಿಸಿದ ಸಿಗ್ನಲ್ ಶಕ್ತಿಗಿಂತ ಕಡಿಮೆ ಕಂಡುಬಂದ ಕವರೇಜ್ ವಿತರಣೆಯು ಈ ಕೆಳಗಿನಂತಿದೆ: -
|
ಮಾನದಂಡ
|
ಏರ್ ಟೆಲ್
|
ಬಿಎಸ್ಎನ್ಎಲ್
|
ಆರ್ಜೆಐಎಲ್
|
ವಿಐಎಲ್
|
|
ಡ್ರೈವ್ ಟೆಸ್ಟ್ ಮಾರ್ಗದಲ್ಲಿ ಸೆರೆಹಿಡಿಯಲಾದ ಒಟ್ಟು ಮಾದರಿಗಳ ಸಂಖ್ಯೆ
|
10938
|
8708
|
10828
|
10775
|
|
ಕಳಪೆ ಸಿಗ್ನಲ್ ಸಾಮರ್ಥ್ಯ ಹೊಂದಿರುವ ಮಾದರಿಗಳ ಸಂಖ್ಯೆ
|
3438
|
6146
|
3201
|
3708
|
ಸೂಚನೆ: ಸಿಗ್ನಲ್ ಸಾಮರ್ಥ್ಯವು 5ಜಿ ಮತ್ತು 4ಜಿಗೆ −110 ಡಿಬಿಎಂ, 3ಜಿಗೆ −90 ಡಿಬಿಎಂ ಮತ್ತು 2ಜಿಗೆ −85 ಡಿಬಿಎಂಗಿಂತ ಕಡಿಮೆಯಿದ್ದರೆ ಕಳಪೆ ಎಂದು ಪರಿಗಣಿಸಲಾಗುತ್ತದೆ.
ಗಮನಿಸಲಾದ ಕವರೇಜ್ ಅಂತರ

- ಕಾಲ್ ಡ್ರಾಪ್ - ಸ್ವಯಂ-ಆಯ್ಕೆ ಮೋಡ್‌ನಲ್ಲಿ (5ಜಿ / 4 ಜಿ / 3 ಜಿ / 2 ಜಿ) ಕಾಲ್ ಡ್ರಾಪ್ ಪ್ರಕರಣಗಳು - ಟೆಲಿಕಾಂ ಸೇವಾ ಪೂರೈಕೆದಾರವಾರು ವಿವರಗಳು ಈ ಕೆಳಗಿನಂತಿವೆ: -
|
ಮಾನದಂಡ
|
ಏರ್ ಟೆಲ್
|
ಬಿಎಸ್ಎನ್ಎಲ್
|
ಆರ್ಜೆಐಎಲ್
|
ವಿಐಎಲ್
|
|
ಕರೆಗಳ ಸಂಪರ್ಕ ಯಶಸ್ವಿ ಸಂಖ್ಯೆ
|
99
|
63
|
99
|
98
|
|
ಕಾಲ್ ಡ್ರಾಪ್ ಸಂಖ್ಯೆ
|
1
|
2
|
1
|
2
|
ಕಾಲ್ ಡ್ರಾಪ್ ಸ್ಥಳಗಳು

ಸೂಚನೆ: ಕಾಲ್ ಡ್ರಾಪ್ ಸ್ಥಳಗಳನ್ನು ಕೆಂಪು ಬಣ್ಣದಲ್ಲಿ ತೋರಿಸಲಾಗಿದೆ ಮತ್ತು ನಕ್ಷೆಯಲ್ಲಿ ನಿಖರವಾದ ಸ್ಥಳವನ್ನು (ಅಕ್ಷಾಂಶ ಮತ್ತು ರೇಖಾಂಶ) ತಿಳಿಯಲು ಕ್ಲಿಕ್ ಮಾಡಬಹುದು
- ಡೇಟಾ ಡೌನ್ಲೋಡ್ ಮತ್ತು ಅಪ್ಲೋಡ್ ಥ್ರೋಪುಟ್: ಸ್ವಯಂ-ಆಯ್ಕೆ ಮೋಡ್ ನಲ್ಲಿ (5G/4G/3G/2G) ತಿಂಗಳಿಗೆ ಘೋಷಿಸಲಾದ ವಿಶಿಷ್ಟ DL/UL ಥ್ರೋಪುಟ್ ವಿರುದ್ಧ ಸರಾಸರಿ ಡೌನ್ಲೋಡ್ (DL) ಮತ್ತು ಅಪ್ಲೋಡ್ (UL) ಥ್ರೋಪುಟ್ ನ TSP-ವಾರು ವಿವರಗಳು ಈ ಕೆಳಗಿನಂತಿವೆ: -
- ಡೌನ್ಲೋಡ್ ಥ್ರೋಪುಟ್
|
ಮಾನದಂಡ
|
ಅಳತೆ
|
ಏರ್ ಟೆಲ್
(5G ವರೆಗೆ)
|
ಬಿಎಸ್ಎನ್ಎಲ್
(4G ವರೆಗೆ)
|
ಆರ್ಜೆಐಎಲ್
(5G ವರೆಗೆ)
|
ವಿಐಎಲ್
(4G ವರೆಗೆ)
|
|
ಟಿಎಸ್‌ಪಿ ಘೋಷಿಸಿದ ವಿಶಿಷ್ಟ
ಡೌನ್‌ಲೋಡ್ ಥ್ರೋಪುಟ್
|
(Mbits / s)
|
15.22
|
10.03
|
15.00
|
15.00
|
|
ʻಐಡಿಟಿʼ ಸಮಯದಲ್ಲಿ ಅಳೆಯಲಾದ ಸರಾಸರಿ
ಡೌನ್‌ಲೋಡ್ ಥ್ರೋಪುಟ್
|
(Mbits / s)
|
89.41
|
3.91
|
174.55
|
9.68
|

ಗಮನಿಸಿ: ಪ್ಲಾಟ್ ಡೈನಾಮಿಕ್ ಡ್ರೈವ್ ಟೆಸ್ಟ್ ಫಲಿತಾಂಶಗಳನ್ನು ಮಾತ್ರ ಆಧರಿಸಿದೆ
- ಥ್ರೋಪುಟ್ ಅನ್ನು ಅಪ್ ಲೋಡ್ ಮಾಡಿ
|
ಮಾನದಂಡ
|
ಅಳತೆ
|
ಏರ್ ಟೆಲ್
(5G ವರೆಗೆ)
|
ಬಿಎಸ್ಎನ್ಎಲ್
(4G ವರೆಗೆ)
|
ಆರ್ಜೆಐಎಲ್
(5G ವರೆಗೆ)
|
ವಿಐಎಲ್
(4G ವರೆಗೆ)
|
|
ಟಿಎಸ್‌ಪಿ ಘೋಷಿಸಿದ ವಿಶಿಷ್ಟ
ಅಪ್‌ಲೋಡ್ ಥ್ರೋಪುಟ್
|
(Mbits / s)
|
7.94
|
3.00
|
7.00
|
8.00
|
|
ಐಡಿಟಿ ಸಮಯದಲ್ಲಿ ಅಳೆಯಲಾದ ಸರಾಸರಿ ಅಪ್ ಲೋಡ್ ಥ್ರೋಪುಟ್
|
(Mbits / s)
|
11.51
|
3.56
|
7.66
|
6.13
|

ಗಮನಿಸಿ: ಪ್ಲಾಟ್ ಡೈನಾಮಿಕ್ ಡ್ರೈವ್ ಟೆಸ್ಟ್ ಫಲಿತಾಂಶಗಳನ್ನು ಮಾತ್ರ ಆಧರಿಸಿದೆ.
*****
(रिलीज़ आईडी: 2279909)
आगंतुक पटल : 45