ರೈಲ್ವೇ ಸಚಿವಾಲಯ
ರೈಲ್ವೆ ಮೂಲಕ ಫ್ಲೈ ಆಶ್ (ಬೂದಿ) ಸಾಗಿಸಲು ಹಸಿರು ಉಪಕ್ರಮ
प्रविष्टि तिथि:
18 JUN 2026 5:01PM by PIB Bengaluru
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ, ರೈಲ್ವೆ ಜಾಲದ ಮೂಲಕ ದೊಡ್ಡ ಪ್ರಮಾಣದ ಕಲ್ಲಿದ್ದಲ್ಲು ಹೊಗೆ ಬೂದಿಯನ್ನು ಸಾಗಣೆಯನ್ನು ಸಕ್ರಿಯಗೊಳಿಸಲು ನೂತನ ಒಂದು ಪ್ರಮುಖ ಉಪಕ್ರಮವನ್ನು ಚರ್ಚಿಸಲಾಯಿತು. ಉದ್ದೇಶ ಸರಳವಾದರೂ ರೂಪಾಂತರಕಾರಿಯಾಗಿದೆ: ಕಲ್ಲಿದ್ದಲ್ಲು ಹೊಗೆ ಬೂದಿ (ಹಾರುಬೂದಿ)ಯನ್ನು ವಿದ್ಯುತ್ ಸ್ಥಾವರಗಳಿಂದ ಕೈಗಾರಿಕೆಗಳಿಗೆ ಪರಿಣಾಮಕಾರಿಯಾಗಿ ಸಾಗಿಸುವುದು, ಅಲ್ಲಿ ಅದನ್ನು ರಸ್ತೆಗಳನ್ನು ನಿರ್ಮಿಸಲು, ಇಟ್ಟಿಗೆಗಳನ್ನು ತಯಾರಿಸಲು, ಸಿಮೆಂಟ್ ಉತ್ಪಾದಿಸಲು ಮತ್ತು ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸಲು ಬಳಸಬಹುದು. ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಶ್ರೀ ರವನೀತ್ ಸಿಂಗ್ ಬಿಟ್ಟು ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಉಷ್ಣ ವಿದ್ಯುತ್ ಸ್ಥಾವರಗಳಿಂದ ಪ್ರತಿ ವರ್ಷ ಸುಮಾರು 340 ಮಿಲಿಯನ್ ಟನ್ ಕಲ್ಲಿದ್ದಲ್ಲು ಹೊಗೆ ಬೂದಿಯನ್ನು ಉತ್ಪಾದಿಸಲಾಗುತ್ತದೆ. ದಶಕಗಳಿಂದ, ಈ ಬೂದು ಹೊರೆ ಹೊಗೆಯ ರಾಶಿಗಳ ಸುತ್ತಲೂ ಭಾರವಾಗಿರುತ್ತದೆ. ಈಗ, ಭಾರತೀಯ ರೈಲ್ವೆ ಅದನ್ನು ಹಸಿರು ಉಪಕ್ರಮದ ಮೂಲಕ ಬದಲಾಯಿಸುತ್ತಿದೆ, ವಿಶೇಷ ಕಂಟೇನರ್ಗಳು ಮತ್ತು ರೈಲು ಕಾರಿಡಾರ್ ಗಳ ಮೀಸಲಾದ ಲಾಜಿಸ್ಟಿಕ್ಸ್ ಜಾಲವನ್ನು ರಚಿಸುತ್ತಿದೆ. ಈ ಜಾಲವು ತ್ಯಾಜ್ಯ ವಸ್ತುಗಳನ್ನು ಅದು ಉತ್ಪತ್ತಿಯಾಗುವ ಸ್ಥಳದಿಂದ ಅಗತ್ಯವಿರುವ ಸ್ಥಳಕ್ಕೆ ಸಾಗಿಸುತ್ತದೆ.

ಈ ಉಪಕ್ರಮದ ವಿಶೇ಼ತೆಯು ಅದರ ಸರಳತೆಯಲ್ಲಿದೆ: ವಿದ್ಯುತ್ ಸ್ಥಾವರವು ಏನು ತ್ಯಜಿಸುತ್ತದೆಯೋ ಅದನ್ನು ಸಿಮೆಂಟ್ ಸ್ಥಾವರ ಮೂಲವಸ್ತುವಾಗಿ ವಿಶೇಷ ನಿಧಿರೂಪದಲ್ಲಿ ಬಳಸುತ್ತವೆ. ಸರಿಯಾಗಿ ಸಾಗಿಸಿ ಸರಿಯಾಗಿ ಬಳಸಿದ ಕಲ್ಲಿದ್ದಲ್ಲು ಹೊಗೆ ಬೂದಿ(ಹಾರುಬೂದಿ), ಸಿಮೆಂಟ್, ಕಾಂಕ್ರೀಟ್, ಬ್ಲಾಕ್ಗಳು ಮತ್ತು ಬೋರ್ಡ್ತಯಾರಿಕೆಗಳಿಗೆ ಮೂಲ ಕಚ್ಚಾ ವಸ್ತುವಾಗಿದೆ. ಅಗ್ಗದ ಇಟ್ಟಿಗೆಗಳು, ಕಡಿಮೆ ಸಿಮೆಂಟ್ ಬೆಲೆಗಳು ಮತ್ತು ಅಂತಿಮವಾಗಿ ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ಹೆಚ್ಚು ಪ್ರವೇಶಿಸಬಹುದಾದ ವಸತಿಗಳಿಗೆ ಕೈಗೆಟುಕುವ ಕಲ್ಲಿದ್ದಲ್ಲು ಹೊಗೆ ಬೂದಿ(ಹಾರುಬೂದಿ)ಯನ್ನು ಬಲು ಉಪಯುಕ್ತವಾಗಿದೆ.

ರೈಲು ವ್ಯಾಗನ್ಗಳು ಮತ್ತು ಉದ್ದೇಶಿತ ಸಾಗಣಿಕೆ (ಲಾಜಿಸ್ಟಿಕ್ಸ್) ವ್ಯವಸ್ಥೆಗಳಲ್ಲಿ ಒಳಗೊಂಡಿರುವ ಕಲ್ಲಿದ್ದಲ್ಲು ಹೊಗೆ ಬೂದಿ (ಹಾರುಬೂದಿ) ಮಾಲಿನ್ಯಕಾರಕವಾಗಿದೆ ಸ್ವಚ್ಛವಾಗಿ ಚಲಿಸುತ್ತದೆ, ಇದು ಭಾರತದ ಮೂಲಸೌಕರ್ಯ ಕಥೆಯಲ್ಲಿ ಉತ್ಪಾದಕ ಮೂಲ ವಸ್ತುವಾಗಿದೆ.

ತ್ಯಾಜ್ಯವು ಸಂಪತ್ತಾಗಿ, ಹೊರೆಯು ಕಟ್ಟಡ ನಿರ್ಮಾಣ ಘಟಕವಾಗಿ ಬದಲಾಗುವ ವೃತ್ತಾಕಾರದ ಆರ್ಥಿಕತೆಯ ವ್ಯಾಕರಣದ ಮೂಲತತ್ವ ಇದು.
*****
(रिलीज़ आईडी: 2274722)
आगंतुक पटल : 14