ರೈಲ್ವೇ ಸಚಿವಾಲಯ
ಶಕುರ್ ಬಸ್ತಿ ಡಿಪೋದಲ್ಲಿ ಹೈಡ್ರೋಜನ್ ರೈಲು ಮತ್ತು ಅತ್ಯಾಧುನಿಕ ರೈಲು ನಿರ್ವಹಣಾ ಸೌಲಭ್ಯಗಳನ್ನು ರೈಲ್ವೆ ಸಚಿವರು ಪರಿಶೀಲನೆ ನಡೆಸಿದರು
ವಿಶ್ವ ಪರಿಸರ ದಿನದಂದು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸಸಿ ನೆಟ್ಟರು
ಗುರುಗ್ರಾಮ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಪ್ರಗತಿಯನ್ನು ರೈಲ್ವೆ ಸಚಿವರು ಪರಿಶೀಲಿಸಿದರು
प्रविष्टि तिथि:
05 JUN 2026 8:59PM by PIB Bengaluru
ಉತ್ತರ ರೈಲ್ವೆಯ ತಿಲಕ್ ಸೇತುವೆ-ಶಕುರ್ ಬಸ್ತಿ ರೈಲು ವಿಭಾಗದ ಸಮಗ್ರ ಪರಿಶೀಲನೆಯನ್ನು ಇಂದು ರೈಲ್ವೆ, ವಾರ್ತಾ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನಡೆಸಿದರು. ಭೇಟಿಯ ಸಮಯದಲ್ಲಿ, ಅವರು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು ಮತ್ತು ಈ ಪ್ರದೇಶದಲ್ಲಿನ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಶಕುರ್ ಬಸ್ತಿ ಡಿಪೋದಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ನಿರ್ವಹಣಾ ಸೌಲಭ್ಯಗಳ ಪರಿಶೀಲನೆ ನಡೆಸಿದರು
ತಪಾಸಣೆಯ ಸಮಯದಲ್ಲಿ, ರೈಲ್ವೆ ಸಚಿವರು ಶಕುರ್ ಬಸ್ತಿ ನಿಲ್ದಾಣಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಅತ್ಯಾಧುನಿಕ ರಿಟ್ರಾಕ್ಟಬಲ್ ಓವರ್ಹೆಡ್ ಸಲಕರಣೆ (ಒಹೆಚ್.ಇ) ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನಿರ್ವಹಣಾ ಶೆಡ್‌ಗಳ ಒಳಗೆ ಲೋಕೋಮೋಟಿವ್ ಗಳು ಮತ್ತು ರೈಲುಗಳ ಸುರಕ್ಷಿತ ಮತ್ತು ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಈ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತದೆ.
ಅವರು ಬೋಗಿ ಪಿಟ್ ಮತ್ತು ಬೋಗಿ ಎತ್ತುವ ಸೌಲಭ್ಯಗಳನ್ನು ಸಹ ಪರಿಶೀಲಿಸಿದರು ಮತ್ತು ನೆಲದ ಮಟ್ಟದಲ್ಲಿ ಕಾರ್ಯಾಚರಣೆಯ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೈಡ್ರೋಜನ್ ರೈಲಿನ ಪರಿಶೀಲನೆ
ಹೈಡ್ರೋಜನ್ ರೈಲಿನ ಪರಿಶೀಲನೆಯು ಈ ಭೇಟಿಯ ಪ್ರಮುಖ ಅಂಶವಾಗಿತ್ತು. ಭವಿಷ್ಯದಲ್ಲಿ ಭಾರತೀಯ ರೈಲ್ವೆಯನ್ನು ಸಂಪೂರ್ಣವಾಗಿ ಮಾಲಿನ್ಯ ಮುಕ್ತಗೊಳಿಸುವತ್ತ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುವ ಈ ಪರಿಸರ ಸ್ನೇಹಿ ಹಸಿರು ತಂತ್ರಜ್ಞಾನ ಉಪಕ್ರಮದ ಪ್ರಗತಿಯನ್ನು ರೈಲ್ವೆ ಸಚಿವರು ಪರಿಶೀಲಿಸಿದರು.

ವಿಶ್ವ ಪರಿಸರ ದಿನ ಮತ್ತು ಹಸಿರು ರೈಲ್ವೆಗಳಿಗೆ ಬದ್ಧತೆ
ವಿಶ್ವ ಪರಿಸರ ದಿನದ ಸಂದರ್ಭದಲ್ಲಿ, ರೈಲ್ವೆ ಸಚಿವರು ಡಿಪೋ ಆವರಣದಲ್ಲಿ ಆಯೋಜಿಸಲಾದ ಗಿಡ ನೆಡುವ ಅಭಿಯಾನದಲ್ಲಿ ಭಾಗವಹಿಸಿ ಸಸಿ ನೆಟ್ಟರು. ಈ ಸಂದರ್ಭದಲ್ಲಿ, ಪರಿಸರ ಸಂರಕ್ಷಣೆಗೆ ಭಾರತೀಯ ರೈಲ್ವೆಯ ಬಲವಾದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಭಾರತೀಯ ರೈಲ್ವೆ 100% ವಿದ್ಯುದೀಕರಣದತ್ತ ವೇಗವಾಗಿ ಸಾಗುತ್ತಿದೆ, ಇದು ನಿವ್ವಳ-ಶೂನ್ಯ ಕಾರ್ಬನ್ ಹೊರಸೂಸುವ ರಾಷ್ಟ್ರದ ಬದ್ಧತೆಯನ್ನು ಸಾಧಿಸಲು ಗಮನಾರ್ಹವಾಗಿ ಕೊಡುಗೆ ನೀಡುವ ಪ್ರಮುಖ ಮೈಲಿಗಲ್ಲಾಗಿದೆ
ಶ್ರೀ ಅಶ್ವಿನಿ ವೈಷ್ಣವ್ ಶಕುರ್ಬಸ್ತಿ ಡಿಪೋದಲ್ಲಿ ಕೆಲಸ ಮಾಡುವ ನೌಕರರು, ನಿರ್ವಹಣಾ ಸಿಬ್ಬಂದಿ ಮತ್ತು ಇತರ ರೈಲ್ವೆ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿದರು. ಆತ್ಮೀಯ ಮತ್ತು ಸೌಹಾರ್ದಯುತ ವಾತಾವರಣದಲ್ಲಿ, ರೈಲ್ವೆ ಸಚಿವರು ಅವರ ಅನುಭವಗಳನ್ನು ಆಲಿಸಿದರು, ಅವರ ಪ್ರಯತ್ನಗಳನ್ನು ವೈಯಕ್ತಿಕವಾಗಿ ಶ್ಲಾಘಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರು ಮತ್ತು ಅವರ ದಿನನಿತ್ಯದ ಕೆಲಸದಲ್ಲಿ ಅವರು ಎದುರಿಸುತ್ತಿರುವ ಪ್ರಾಯೋಗಿಕ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದರು. ಸಿಬ್ಬಂದಿ ತಿಳಿಸಿರುವ ಕಳವಳಗಳನ್ನು ತಕ್ಷಣ ಮತ್ತು ಸಮಯಕ್ಕೆ ಸರಿಯಾಗಿ ಪರಿಹರಿಸಲು ಕೇಂದ್ರ ಸಚಿವರು ಹಿರಿಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.

ಗುರುಗ್ರಾಮ್ ರೈಲು ನಿಲ್ದಾಣದ ಪರಿಶೀಲನೆ
ಕೇಂದ್ರ ರೈಲ್ವೆ ಸಚಿವರು ಗುರುಗ್ರಾಮ್ ರೈಲು ನಿಲ್ದಾಣದ ಅನಿರೀಕ್ಷಿತ ಪರಿಶೀಲನೆಯನ್ನೂ ನಡೆಸಿದರು. ನಡೆಯುತ್ತಿರುವ ವಿಶ್ವ ದರ್ಜೆಯ ಪುನರಾಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು. ನಿಲ್ದಾಣವನ್ನು ₹300 ಕೋಟಿ ವೆಚ್ಚದಲ್ಲಿ ಮರುಅಭಿವೃದ್ಧಿಪಡಿಸಲಾಗುತ್ತಿದೆ.

ನಿಲ್ದಾಣದಲ್ಲಿ ಹಾಜರಿದ್ದ ಪ್ರಯಾಣಿಕರೊಂದಿಗೆ ರೈಲ್ವೆ ಸಚಿವರು ನೇರವಾಗಿ ಸಂವಹನ ನಡೆಸುವ ಮೂಲಕ ತಮ್ಮ ತಲಮಟ್ಟದ-ಸಂಪರ್ಕಿತ ನಾಯಕತ್ವವನ್ನು ಪ್ರದರ್ಶಿಸಿದರು. ರೈಲ್ವೆ ಸೇವೆಗಳು, ಅವರ ಪ್ರಯಾಣದ ಅನುಭವಗಳು ಮತ್ತು ಅವರ ಪ್ರಯಾಣದ ಸಮಯದಲ್ಲಿ ಅವರುಗಳು ಎದುರಿಸುವ ಸವಾಲುಗಳ ಕುರಿತು ಸಚಿವರು ಅವರಗಳೊಂದಿಗೆ ವಿವರವಾದ ಚರ್ಚೆಗಳನ್ನು ನಡೆಸಿದರು.
*****
(रिलीज़ आईडी: 2269594)
आगंतुक पटल : 9