ಕಾನೂನು ಮತ್ತು ನ್ಯಾಯ ಸಚಿವಾಲಯ
ಮಧ್ಯಸ್ಥಿಕೆ ಮತ್ತು ರಾಜೀ ಸಂಧಾನ ಸಾಮರ್ಥ್ಯ ನಿರ್ಮಾಣದ ಮೂಲಕ ಪರ್ಯಾಯ ವ್ಯಾಜ್ಯ ಇತ್ಯರ್ಥ ಪರಿಹಾರಗಳನ್ನು ಬಲವರ್ಧನೆಗೊಳಿಸುವ ಕುರಿತು ಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ ಮತ್ತು ನ್ಯಾಯ ಸಚಿವರ ಸಭೆ
ಪ್ರಕಟಣಾ ದಿನಾಂಕ:
18 MAY 2026 1:53PM by PIB Bengaluru
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಅಡಿಯಲ್ಲಿ ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ (ಎಸ್ ಒಎಂ) ಅನ್ನು 2026ರ ಮೇ 19–20 ರಂದು ಆಯೋಜಿಸುತ್ತಿದೆ. ನಂತರ ಬ್ರಿಕ್ಸ್ ನ್ಯಾಯಸಚಿವರುಗಳ ಸಭೆ (ಜೆಎಂಎಂ) ಅನ್ನು 2026ರ ಮೇ 21–22 ರಂದು ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸುತ್ತಿದೆ. ಈ ವರ್ಷ ಭಾರತವು ಬ್ರಿಕ್ಸ್ ನ್ಯಾಯ ಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಲಿದೆ.
ಸಾಂಸ್ಥಿಕ ಮಧ್ಯಸ್ಥಿಕೆ, ರಾಜೀ ಸಂಧಾನ ಸುಧಾರಣೆಗಳು ಮತ್ತು ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ವಿವಾದಗಳಲ್ಲಿ ಎಡಿಆರ್ ನ ಪಾತ್ರ ಸೇರಿದಂತೆ ಆದ್ಯತೆಯ ಎಡಿಆರ್ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು ಎಸ್ ಒಎಂ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಹಿರಿಯ ಅಧಿಕಾರಿಗಳನ್ನು ಒಗೂಡಿಸುತ್ತದೆ. ಪ್ರಕರಣಗಳ ಬಾಕಿ ಹೊರೆಯನ್ನು ತಗ್ಗಿಸಲು ಮತ್ತು ಸಕಾಲಿಕ, ಕಡಿಮೆ ವೆಚ್ಚದಲ್ಲಿ ವಿವಾದ ಪರಿಹಾರಗಳನ್ನು ಹೆಚ್ಚಿಸಲು ಮಾದರಿ ಮಧ್ಯಸ್ಥಿಕೆಗಳಾಗಿ ಬ್ರಿಕ್ಸ್ ವೇದಿಕೆಗಳಲ್ಲಿ ಪ್ರಮುಖವಾಗಿ ಎಡಿಆರ್ ಕೇಂದ್ರಿತ ಸುಧಾರಣೆಗಳ ಅನುಷ್ಠಾನದ ಚರ್ಚೆಗಳು ನಡೆಯಲಿವೆ.
ಬ್ರಿಕ್ಸ್ ನ್ಯಾಯ ಸಚಿವರು, ಬ್ರಿಕ್ಸ್ ಚೌಕಟ್ಟಿನಲ್ಲಿ ಎಡಿಆರ್ ನೇತೃತ್ವದ ಸಹಕಾರದ ಕುರಿತು ಜಂಟಿ ಹೇಳಿಕೆ ಅಳವಡಿಸಿಕೊಳ್ಳಲು, ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು, ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ತರಬೇತಿ ಕಾರ್ಯಕ್ರಮಗಳು, ಮಾದರಿ ನಿಯಮಗಳು ಮತ್ತು ಡಿಜಿಟಲ್ ವಿವಾದ ಪರಿಹಾರ ವೇದಿಕೆಗಳಂತಹ ಸಹಯೋಗದ ಎಡಿಆರ್ ಸಂಬಂಧಿತ ಉಪಕ್ರಮಗಳನ್ನು ಅನ್ವೇಷಿಸಲು ಸಮಗ್ರ ಬದ್ಧತೆಗಳನ್ನು ರೂಪಿಸಲು ಜೆಎಂಎಂ ಸಚಿವರಿಗೆ ಒಂದು ವೇದಿಕೆ ಒದಗಿಸುತ್ತದೆ. ಆಧುನಿಕ ಕಾನೂನು ವ್ಯವಸ್ಥೆಯ ಸುಧಾರಣೆಯ ಪ್ರಮುಖ ಅಂಶವಾಗಿ ಮತ್ತು ನಾಗರಿಕರಿಗೆ ಪ್ರವೇಶಿಸಬಹುದಾದ, ತ್ವರಿತ ಮತ್ತು ಕೈಗೆಟುಕುವ ನ್ಯಾಯವನ್ನು ತಲುಪಿಸುವ ಪ್ರಮುಖ ಸಾಧನವಾಗಿ ಎಡಿಆರ್ ಅನ್ನು ಉತ್ತೇಜಿಸುವಲ್ಲಿ ಭಾರತದ ನಾಯಕತ್ವವನ್ನು ಸಭೆಗಳು ಒತ್ತಿಹೇಳುತ್ತವೆ.
ಗುಜರಾತ್‌ನ ಗಾಂಧಿನಗರವನ್ನು ಸ್ಥಳವಾಗಿ ಆಯ್ಕೆ ಮಾಡಿರುವುದು ಭಾರತದ 2026 ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಕಾನೂನು ಮತ್ತು ಬಹುಪಕ್ಷೀಯ ಕಾರ್ಯಕ್ರಮಗಳಿಗೆ ಕೇಂದ್ರವಾಗಿ ನಗರದ ಹೊರಹೊಮ್ಮುವಿಕೆಯನ್ನು ಪ್ರತಿಬಿಂಬಿಸುತ್ತದೆ.
ಪ್ರಮುಖ ಉದ್ದೇಶಗಳು ಮತ್ತು ನಿರೀಕ್ಷಿತ ಫಲಿತಾಂಶಗಳು:
ಬ್ರಿಕ್ಸ್ ನ್ಯಾಯ ಸಚಿವರು ಪರ್ಯಾಯ ವಿವಾದ ಪರಿಹಾರ (ಎಡಿಆರ್), ವಿಶೇಷವಾಗಿ ಮಧ್ಯಸ್ಥಿಕೆ ಮತ್ತು ಸಂಧಾನ ಕುರಿತು ಸಂವಾದ ಮತ್ತು ಸಹಕಾರವನ್ನು ಉತ್ತೇಜಿಸುತ್ತಾರೆ. ಉತ್ತಮ ಪದ್ಧತಿಗಳು, ನೀತಿ ವಿಧಾನಗಳು ಮತ್ತು ಸಾಂಸ್ಥಿಕ ಅನುಭವಗಳ ವಿನಿಮಯವನ್ನು ಸುಗಮಗೊಳಿಸುವ ಮೂಲಕ; ಮಧ್ಯವರ್ತಿಗಳು, ಮಧ್ಯಸ್ಥಗಾರರು, ನ್ಯಾಯಾಧೀಶರು, ಸರ್ಕಾರಿ ಕಾನೂನು ಅಧಿಕಾರಿಗಳು ಮತ್ತು ಕಾನೂನು ವೃತ್ತಿಪರರಿಗೆ ತರಬೇತಿ, ವೃತ್ತಿಪರ ವಿನಿಮಯ, ಜಂಟಿ ಕಾರ್ಯಾಗಾರಗಳು ಮತ್ತು ಜ್ಞಾನ ಹಂಚಿಕೆ ವೇದಿಕೆಗಳ ಮೂಲಕ ವೃತ್ತಿಪರ ಸಾಮರ್ಥ್ಯ ಮತ್ತು ಸಾಂಸ್ಥಿಕ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದು; ನ್ಯಾಯಾಲಯಕ್ಕೆ ಉಲ್ಲೇಖಿಸಲಾದ ಮತ್ತು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯನ್ನು ಹೆಚ್ಚಿಸುವುದು; ಮಧ್ಯಸ್ಥಿಕೆ ಕೇಂದ್ರಗಳು, ಮಧ್ಯಸ್ಥಿಕೆ ಸಂಸ್ಥೆಗಳು ಮತ್ತು ಕಾನೂನು ತರಬೇತಿ ಸಂಸ್ಥೆಗಳ ನಡುವೆ ಸಾಂಸ್ಥಿಕ ಸಹಕಾರವನ್ನು ಬೆಳೆಸುವುದು; ಲಭ್ಯತೆ ಸಾಧ್ಯತೆ, ದಕ್ಷತೆಯನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು, ಗಡಿಯಾಚೆಗಿನ ವಾಣಿಜ್ಯ ವಿವಾದಗಳಲ್ಲಿ ಸಹಕಾರವನ್ನು ಬೆಂಬಲಿಸುವುದು; ವ್ಯಾಪಾರ ಮತ್ತು ಪರಿಸರದ ಮೇಲಿನ ಕಾನೂನುಗಳನ್ನು ಸಮನ್ವಯಗೊಳಿಸಲು ಬ್ರಿಕ್ಸ್ ನ್ಯಾಯಶಾಸ್ತ್ರದ ಕಾನೂನು ಸಂಶೋಧನೆ ಮತ್ತು ತುಲನಾತ್ಮಕ ಅಧ್ಯಯನವನ್ನು ಮುಂದುವರಿಸುವುದು; ಮತ್ತು ಸರ್ಕಾರಿ ಕಾನೂನು ಅಧಿಕಾರಿಗಳಿಗೆ ತರಬೇತಿಯನ್ನು ಉತ್ತೇಜಿಸುವುದು.
ಸಭೆಗಳು ಸಮಗ್ರ ಗೋಷ್ಠಿಗಳು ಮತ್ತು ಸಮಗ್ರ ಸಹಕಾರ ಉಪಕ್ರಮಗಳು, ಸಾಮರ್ಥ್ಯ ನಿರ್ಮಾಣ ಯೋಜನೆಗಳು ಮತ್ತು ಸಾಂಸ್ಥಿಕ ಸಂಪರ್ಕಗಳನ್ನು ಗುರಿಯಾಗಿಟ್ಟುಕೊಂಡು ದ್ವಿಪಕ್ಷೀಯ ವಿನಿಮಯಗಳನ್ನು ಒಳಗೊಂಡಿರುತ್ತವೆ. ಮಧ್ಯಸ್ಥಿಕೆ ಮತ್ತು ರಾಜೀ ಸಂಧಾನದಲ್ಲಿ ಸಾಮರ್ಥ್ಯ ವೃದ್ಧಿಯ ಮೂಲಕ ಪರ್ಯಾಯ ವಿವಾದ ಪರಿಹಾರವನ್ನು ಬಲಪಡಿಸುವ ಕುರಿತು ಬ್ರಿಕ್ಸ್ ದೇಶಗಳ ನ್ಯಾಯ ಸಚಿವರುಗಳ ಘೋಷಣೆಯಲ್ಲಿ ಫಲಿತಾಂಶಗಳನ್ನು ಕ್ರೋಢೀಕರಿಸಲಾಗುತ್ತದೆ’’.
*****
(ಪ್ರಕಟಣೆ ಐ.ಡಿ.: 2262246)
ವಿಸಿಟರ್ ಕೌಂಟರ್ : 7