ಕೃಷಿ ಸಚಿವಾಲಯ
ಉತ್ತರ ಪ್ರದೇಶದಲ್ಲಿ 20 ಲಕ್ಷ ಮೆಟ್ರಿಕ್ ಟನ್ ಆಲೂಗಡ್ಡೆ ಖರೀದಿಗೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುಮೋದನೆ, ಇದು ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವೊದಗಿಸಲಿದೆ
ಆಂಧ್ರಪ್ರದೇಶದಲ್ಲಿ ಕಡಲೆ ಖರೀದಿ ಮಿತಿಯನ್ನು 1,13,250 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲು ಮತ್ತು ಕರ್ನಾಟಕದಲ್ಲಿ ತೊಗರಿ ಖರೀದಿ ಕಾಲ ಮಿತಿಯನ್ನು ಮೇ 15, 2026 ರವರೆಗೆ ವಿಸ್ತರಿಸಲು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರ ಅನುಮೋದನೆ
ರೈತರಿಗೆ ಪ್ರಮುಖ ಪರಿಹಾರ: ಕೇಂದ್ರ ಸರ್ಕಾರದ ನಿರ್ಧಾರಗಳ ಮೂಲಕ ಮೂರು ರಾಜ್ಯಗಳ ರೈತರಿಗೆ ಅನುಕೂಲಕರ ಬೆಲೆಗಳು
ಪ್ರಕಟಣಾ ದಿನಾಂಕ:
18 APR 2026 4:04PM by PIB Bengaluru
ರೈತರಿಗೆ ಗಣನೀಯ ಪರಿಹಾರ ನೀಡುವ ಮತ್ತು ಅವರ ಆರ್ಥಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಒಂದು ಮಹತ್ವದ ನಿರ್ಧಾರದಲ್ಲಿ, ಭಾರತ ಸರ್ಕಾರವು ಆಂಧ್ರಪ್ರದೇಶದಲ್ಲಿ ಕಡಲೆ ಖರೀದಿ ಕಾರ್ಯಾಚರಣೆಗಳ ಜೊತೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಆಲೂಗಡ್ಡೆ ಖರೀದಿಗೆ ಔಪಚಾರಿಕವಾಗಿ ಅನುಮೋದನೆ ನೀಡಿದೆ ಮತ್ತು ಕರ್ನಾಟಕದಲ್ಲಿ ತೊಗರಿ ಖರೀದಿ ಕಾಲಮಿತಿಯೂ ವಿಸ್ತರಣೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ವೈಯಕ್ತಿಕವಾಗಿ ಹಸಿರು ನಿಶಾನೆ ತೋರಿದ ಈ ಕಾರ್ಯತಂತ್ರದ ಅನುಮೋದನೆಗಳನ್ನು ರೈತರು ತಮ್ಮ ಕಷ್ಟಪಟ್ಟು ಗಳಿಸಿದ ಉತ್ಪನ್ನಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಅಸ್ಥಿರ ಮಾರುಕಟ್ಟೆಗಳಲ್ಲಿ ಭಯದ/ಸಂಕಷ್ಟದ ಪರಿಸ್ಥಿತಿಯ ಮಾರಾಟದ ಕಷ್ಟಗಳಿಂದ ಅವು ಉತ್ಪಾದಕರನ್ನು ಪರಿಣಾಮಕಾರಿಯಾಗಿ ರಕ್ಷಿಸುತ್ತವೆ ಮತ್ತು ಕೃಷಿ ಮಾರುಕಟ್ಟೆಯಲ್ಲಿ ಒಟ್ಟಾರೆ ಸ್ಥಿರತೆ ಹಾಗು ಊಹನೆಯ ಸಾಧ್ಯತೆಗೆ ಕೊಡುಗೆ ನೀಡುತ್ತವೆ, ಕೃಷಿ ಮತ್ತು ವ್ಯಾಪಾರಕ್ಕಾಗಿ ಹೆಚ್ಚು ಸುರಕ್ಷಿತ ವಾತಾವರಣವನ್ನು ಬೆಳೆಸುತ್ತವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವ ಮತ್ತು ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ದೇಶಾದ್ಯಂತ ಪ್ರತಿಯೊಬ್ಬ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಮುನ್ನಡೆಸಲು ಕೇಂದ್ರ ಸರ್ಕಾರವು ದೃಢವಾಗಿ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಪುನರುಚ್ಚರಿಸಿದರು. ಮಾರುಕಟ್ಟೆಯ ಒತ್ತಡಗಳು ಅಥವಾ ಯಾವುದೇ ಅನಿರೀಕ್ಷಿತ ಸಂದರ್ಭಗಳಿಂದಾಗಿ ಯಾವುದೇ ರೈತರು ತಮ್ಮ ಬೆಳೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತಹ ಪರಿಸ್ಥಿತಿ ಬರಬಾರದು ಎಂದು ಖಚಿತಪಡಿಸಿಕೊಳ್ಳುವುದು ಆಡಳಿತದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು. ರೈತರ ಅಗತ್ಯಗಳಿಗೆ ಅನುಗುಣವಾಗಿ ತ್ವರಿತ, ಸಹಾನುಭೂತಿಯ ಮತ್ತು ಹೆಚ್ಚು ಪರಿಣಾಮಕಾರಿ ಮಧ್ಯಸ್ಥಿಕೆಗಳನ್ನು ನೀಡಲು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಮತ್ತು ನಿಕಟ ಸಮನ್ವಯವನ್ನು ಒತ್ತಿಹೇಳಿದ ಅವರು, ಸಚಿವಾಲಯದ ಪೂರ್ವಭಾವಿ ಮುಂಜಾಗ್ರತೆಯ ವಿಧಾನವನ್ನು ಶ್ರೀ ಚೌಹಾಣ್ ಉಲ್ಲೇಖಿಸಿದರು. ಇದಕ್ಕೆ ಅನುಗುಣವಾಗಿ, ಸರ್ಕಾರದ ಸ್ಪಂದಿಸುವ ಕಾರ್ಯವಿಧಾನವನ್ನು ಒತ್ತಿ ಹೇಳುವಂತೆ, ಶ್ರೀ ಶಿವರಾಜ್ ಸಿಂಗ್ ಅವರು ಸಂಬಂಧಿತ ರಾಜ್ಯಗಳ ಕೃಷಿ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಫಲಪ್ರದ ವರ್ಚುವಲ್ ಸಭೆಯ ನಂತರ ಇಂದು ಈ ಅನುಮೋದನೆಗಳನ್ನು ನೀಡಲಾಯಿತು.

ಉತ್ತರ ಪ್ರದೇಶ: 20 ಲಕ್ಷ ಮೆಟ್ರಿಕ್ ಟನ್ ಆಲೂಗಡ್ಡೆ ಖರೀದಿಗೆ ಹಸಿರು ನಿಶಾನೆ
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು 2025-26 ಕೃಷಿ ವರ್ಷಕ್ಕೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂ.ಐ.ಎಸ್.-MIS) ಅಡಿಯಲ್ಲಿ ಆಲೂಗಡ್ಡೆ ಖರೀದಿಸುವ ಉತ್ತರ ಪ್ರದೇಶ ಸರ್ಕಾರದ ವಿವರವಾದ ಪ್ರಸ್ತಾವನೆಗೆ ಸಂಪೂರ್ಣ ಅನುಮೋದನೆ ನೀಡಿದೆ. ಈ ಮಂಜೂರಾತಿಯ ಪ್ರಕಾರ, ರಾಜ್ಯಾದ್ಯಂತ 20 ಎಲ್.ಎಂ.ಟಿ - ಅಥವಾ 20 ಲಕ್ಷ ಮೆಟ್ರಿಕ್ ಟನ್ - ಆಲೂಗಡ್ಡೆಯನ್ನು ಖರೀದಿಸಲಾಗುವುದು, ಪ್ರತಿ ಮೆಟ್ರಿಕ್ ಟನ್‌ಗೆ ರೂ. 6,500.9 ರಂತೆ ನಿಗದಿಪಡಿಸಿದ ಪೂರ್ವನಿರ್ಧರಿತ ಮಾರುಕಟ್ಟೆ ಮಧ್ಯಪ್ರವೇಶ ಅಥವಾ ಬೆಂಬಲ ಬೆಲೆಯಲ್ಲಿ. ಖರೀದಿಯ ಈ ಉಪಕ್ರಮಕ್ಕೆ ಭಾರತ ಸರ್ಕಾರದ ಯೋಜಿತ ಆರ್ಥಿಕ ಕೊಡುಗೆ ರೂ. 203.15 ಕೋಟಿಗಳಾಗಿದ್ದು, ಇದು ದೃಢವಾದ ಕೇಂದ್ರ ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ಈ ಸಕಾಲಿಕ ಕ್ರಮವು ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುವ ರೈತರಿಗೆ ಅವರ ಹೂಡಿಕೆ ಮತ್ತು ಉತ್ಪಾದನೆಯ ಮೇಲೆ ಲಾಭದಾಯಕ ಆದಾಯವನ್ನು ಭದ್ರಪಡಿಸುವ ಮೂಲಕ ಸಬಲೀಕರಣಗೊಳಿಸುತ್ತದೆ ಮತ್ತು ಮಾರುಕಟ್ಟೆ ಏರಿಳಿತಗಳ ನಡುವೆ ಕಡಿಮೆ ಬೆಲೆಯಲ್ಲಿ ಅನಿವಾರ್ಯ/ಬಲವಂತದ ಮಾರಾಟವನ್ನು ತಡೆಯುತ್ತದೆ. ರಾಜ್ಯದೊಳಗಿನ ಆಲೂಗಡ್ಡೆ ಮಾರುಕಟ್ಟೆ ಚಲನಶೀಲತೆಯನ್ನು ಸಮತೋಲನಗೊಳಿಸಲು ಮತ್ತು ಎಲ್ಲಾ ಆಲೂಗಡ್ಡೆ ಉತ್ಪಾದಕರ ಜೀವನೋಪಾಯ ಹಾಗು ಆರ್ಥಿಕ ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಲು ಇದು ಒಂದು ಪ್ರಮುಖ ಮಧ್ಯಪ್ರವೇಶದ ಕ್ರಮವನ್ನು ಪ್ರತಿನಿಧಿಸುತ್ತದೆ.
ಆಂಧ್ರಪ್ರದೇಶ: ಕಡಲೆ ಖರೀದಿ ಮಿತಿಯನ್ನು 1,13,250 ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಲಾಗಿದೆ
ರೈತ ಸ್ನೇಹಿ ಕ್ರಮದಲ್ಲಿ, ಕೇಂದ್ರ ಕೃಷಿ ಸಚಿವರಾದ ಶ್ರೀ ಚೌಹಾಣ್ ಅವರು ಬೆಲೆ ಬೆಂಬಲ ಯೋಜನೆ (ಪಿಎಸ್ಎಸ್) ಅಡಿಯಲ್ಲಿ ಆಂಧ್ರಪ್ರದೇಶ ಸರ್ಕಾರದ ವಿನಂತಿಯನ್ನು ಅನುಮೋದಿಸಿದ್ದಾರೆ, ಆರಂಭದಲ್ಲಿ 94,500 ಮೆಟ್ರಿಕ್ ಟನ್ ಕಡಲೆ ಅಥವಾ ಕಡಲೆ ಬೇಳೆಯನ್ನು ಖರೀದಿಸಲು ಅನುಮೋದನೆ ನೀಡಲಾಗಿತ್ತು. ಇದರ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರದ ಮನವಿಗೆ ನೇರ ಪ್ರತಿಕ್ರಿಯೆಯಾಗಿ, ಶ್ರೀ ಶಿವರಾಜ್ ಸಿಂಗ್ ಅವರು 2025-26 ರ ರಬಿ ಮಾರುಕಟ್ಟೆ ಋತುವಿನಲ್ಲಿ ಪಿಎಸ್ಎಸ್ ಅಡಿಯಲ್ಲಿ ಕಡಲೆ ಬೇಳೆಗೆ ಗರಿಷ್ಠ ಅನುಮತಿಸಬಹುದಾದ ಖರೀದಿ ಕೋಟಾವನ್ನು 1,13,250 ಮೆಟ್ರಿಕ್ ಟನ್‌ಗಳ ವರ್ಧಿತ ಮಿತಿಗೆ ಹೆಚ್ಚಿಸಿದ್ದಾರೆ. ಈ ಮೇಲ್ಮುಖ ಪರಿಷ್ಕರಣೆಯು ಆಂಧ್ರಪ್ರದೇಶದ ಕಡಲೆ ಬೆಳೆಗಾರರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ, ಲಾಭದಾಯಕ ಬೆಲೆ ಕಾರ್ಯವಿಧಾನಗಳನ್ನು ಒದಗಿಸುತ್ತದೆ ಮತ್ತು ಅವರು ತಮ್ಮ ಗಳಿಕೆಯನ್ನು ಕಳೆದುಕೊಳ್ಳಬಹುದಾದ ತೊಂದರೆಯ/ಸಂಕಷ್ಟದ ಮಾರಾಟದ ಸನ್ನಿವೇಶಗಳನ್ನು ತಪ್ಪಿಸುತ್ತದೆ.
ಕರ್ನಾಟಕ: ತೊಗರಿ ಖರೀದಿ ಅವಧಿ ಮೇ 15, 2026 ರವರೆಗೆ ವಿಸ್ತರಣೆ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕರ್ನಾಟಕದಲ್ಲಿ 2025-26 ರ ಖಾರಿಫ್ ಋತುವಿನಲ್ಲಿ ಬೆಲೆ ಬೆಂಬಲ ಯೋಜನೆ (ಪಿಎಸ್ಎಸ್) ಮೂಲಕ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.)ಯಲ್ಲಿ ಅರ್ಹರ್ ಎಂದು ಕರೆಯಲ್ಪಡುವ ತೊಗರಿ ಖರೀದಿಗೆ 30 ದಿನಗಳ ವಿಸ್ತರಣೆಯನ್ನು ಉದಾರವಾಗಿ ಅನುಮೋದಿಸಿದ್ದಾರೆ. ಈ ವಿಸ್ತರಣೆಯೊಂದಿಗೆ, ಖರೀದಿ ಚಟುವಟಿಕೆಗಳು ಈಗ ಮೇ 15, 2026 ರವರೆಗೆ ಇರುತ್ತವೆ, ಇದು ಉತ್ಪಾದಕರಿಗೆ ಹೆಚ್ಚು ಅಗತ್ಯವಿರುವ ಹೆಚ್ಚುವರಿ ಅವಕಾಶ/ನಮ್ಯತೆಯನ್ನು ನೀಡುತ್ತದೆ. ಇದರಿಂದ ಕರ್ನಾಟಕದ ತೊಗರಿ ರೈತರು ಅಪಾರ ಲಾಭ ಗಳಿಸಲಿದ್ದಾರೆ, ಏಕೆಂದರೆ ಈ ದೀರ್ಘಾವಧಿಯ ಕಾಲಾವಕಾಶ ಹೆಚ್ಚಿನವರಿಗೆ ಖಚಿತವಾದ ಎಂ.ಎಸ್.ಪಿ.ಯಲ್ಲಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಅವರಿಗೆ ನ್ಯಾಯಯುತ ಪರಿಹಾರ/ಬೆಲೆ ಲಭಿಸುತ್ತದೆ ಮತ್ತು ಸ್ಥಳೀಯ ಮಂಡಿಗಳಲ್ಲಿ ಕಡಿಮೆ ಮೌಲ್ಯದಲ್ಲಿ ಮಾರಾಟ ಮಾಡುವಂತಹ ಸಂಕಷ್ಟದ ವಹಿವಾಟುಗಳಿಂದ ಅವರನ್ನು ಪಾರು ಮಾಡುತ್ತದೆ.
ಈ ನಿರ್ಧಾರಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅಚಲವಾದ ಮುಂಜಾಗರೂಕತಾ ಚಟುವಟಿಕೆಯನ್ನು ಹಾಗು ರೈತರ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ, ಪ್ರಮುಖ ಕೃಷಿ ಸರಕುಗಳಿಗೆ ಉತ್ತಮ ಬೆಲೆಯನ್ನು ನಿಗದಿ ಮಾಡುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯ ಅಡಿಪಾಯದ ಆಧಾರಸ್ತಂಭಗಳನ್ನು ಬಲಪಡಿಸುವಲ್ಲಿ ಅದರ ಬದ್ಧತೆಯನ್ನು ಸ್ಪಷ್ಟವಾಗಿ ವಿವರಿಸುತ್ತವೆ. ರಾಜ್ಯಗಳ ಆಡಳಿತಗಳೊಂದಿಗೆ ಸುಗಮ ಸಹಯೋಗದ ಮೂಲಕ, ಇಂತಹ ಕ್ರಮಗಳು ಭಾಗೀದಾರರಲ್ಲಿ/ ಪಾಲುದಾರರಲ್ಲಿ ಹೆಚ್ಚಿನ ವಿಶ್ವಾಸವನ್ನು ತುಂಬುತ್ತವೆ ಮಾತ್ರವಲ್ಲದೆ ಕೃಷಿ ಕ್ಷೇತ್ರದಲ್ಲಿ ಸ್ಥಿರತೆಯನ್ನು, ಊಹನಾತ್ಮಕತೆಯನ್ನು ಹಾಗು ಭದ್ರತೆಯನ್ನು ಹೆಚ್ಚಿಸುತ್ತವೆ ಮತ್ತು ಸುಸ್ಥಿರ ಬೆಳವಣಿಗೆ ಹಾಗು ಸಮೃದ್ಧಿಗೆ ಹಾದಿ ಮಾಡಿಕೊಡುತ್ತವೆ.
*****
(ಪ್ರಕಟಣೆ ಐ.ಡಿ.: 2253351)
ವಿಸಿಟರ್ ಕೌಂಟರ್ : 6