ಹಣಕಾಸು ಸಚಿವಾಲಯ
azadi ka amrit mahotsav

ನಿರಂತರ ಕಡಲ ವಿಮಾ ವ್ಯಾಪ್ತಿಯನ್ನು ಸುಗಮಗೊಳಿಸಲು 12,980 ಕೋಟಿ ರೂ.ಗಳ ಸಾರ್ವಭೌಮ ಖಾತರಿಯೊಂದಿಗೆ 'ಭಾರತದ ಸಮುದ್ರ ವಿಮಾ ಸಂಗ್ರಹಣೆ' (ಬಿಎಂಐ ಪೂಲ್) ಅನ್ನು ರಚಿಸುವ ಪ್ರಸ್ತಾಪವನ್ನು ಸಂಪುಟ ಅನುಮೋದಿಸಿದೆ


ದೇಶೀಯ ವಿಮಾ ಪೂಲ್ ಜಾಗತಿಕ ಏರಿಳಿತ, ಭೌಗೋಳಿಕ ರಾಜಕೀಯ ಅಸ್ಥಿರತೆಯನ್ನು ಪರಿಹರಿಸುತ್ತದೆ ಮತ್ತು ಭಾರತೀಯ ಹಡಗುಗಳ ಬಾಹ್ಯ ವಿಮಾ ಅವಲಂಬನೆಯನ್ನು ಕಡಿಮೆ ಮಾಡುತ್ತದೆ


ಈ ವಿಮಾ ಸಂಗ್ರಹಣೆಯು ಹಲ್ ಮತ್ತು ಮೆಷಿನರಿ, ಸರಕು, ಪಿ&ಐ ಮತ್ತು ಯುದ್ಧ ಅಪಾಯದಂತಹ ಎಲ್ಲಾ ಕಡಲ ಅಪಾಯಗಳನ್ನು ಒಳಗೊಳ್ಳುತ್ತದೆ, ಯಾವುದೇ ಅಂತರರಾಷ್ಟ್ರೀಯ ಮೂಲದಿಂದ ಭಾರತೀಯ ಬಂದರುಗಳಿಗೆ ಸರಕು ಸಾಗಿಸುವ ಹಡಗುಗಳನ್ನು ಮತ್ತು ಪ್ರತಿಯಾಗಿ, ಅಸ್ಥಿರ ಕಡಲ ಕಾರಿಡಾರ್ ಗಳನ್ನು ಸಾಗಿಸುವಾಗಲೂ ಸಹ ಒಳಗೊಳ್ಳುತ್ತದೆ

ಪ್ರಕಟಣಾ ದಿನಾಂಕ: 18 APR 2026 3:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ನಿರಂತರ ಸಮುದ್ರ ವಿಮಾ ವ್ಯಾಪ್ತಿಯನ್ನು ಸುಗಮಗೊಳಿಸಲು 12,980 ಕೋಟಿ ರೂ. ಗಳ ಸಾರ್ವಭೌಮ ಖಾತರಿಯೊಂದಿಗೆ 'ಭಾರತದ ಸಮುದ್ರ ವಿಮಾ ಸಂಗ್ರಹಣೆ' (ಬಿಎಂಐ ಪೂಲ್) ಎಂಬ ದೇಶೀಯ ವಿಮಾ ಸಂಗ್ರಹಣೆಯನ್ನು ರಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಯಾವುದೇ ಅಂತಾರಾಷ್ಟ್ರೀಯ ಮೂಲದಿಂದ ಭಾರತೀಯ ಬಂದರುಗಳಿಗೆ ಸರಕು ಸಾಗಿಸುವ ಹಡಗುಗಳಿಗೆ ಮತ್ತು ಪ್ರತಿಯಾಗಿ, ಅಸ್ಥಿರ ಸಮುದ್ರ(ಸಾಗರ/ಕಡಲ) ಕಾರಿಡಾರ್ ಗಳನ್ನು ಸಾಗಿಸುವಾಗಲೂ ಸಹ ಭಾರತೀಯ ವ್ಯಾಪಾರವು ಕೈಗೆಟುಕುವ ವಿಮೆಯನ್ನು ಪ್ರವೇಶಿಸುವುದನ್ನು ಈ ವಿಮಾ ಸಂಗ್ರಹಣೆಯು ಖಚಿತಪಡಿಸುತ್ತದೆ.


ಹೆಚ್ಚಿದ ಜಾಗತಿಕ ಚಂಚಲತೆ ಮತ್ತು ಭೌಗೋಳಿಕ ರಾಜಕೀಯ ಅಸ್ಥಿರತೆಯೊಂದಿಗೆ, ಕಡಲ ವ್ಯಾಪಾರವು ಸರಕು ಮತ್ತು ಹಡಗುಗಳಿಗೆ ನಷ್ಟದ ಅಪಾಯವನ್ನು ಹೆಚ್ಚಿಸಿದೆ, ಇದರ ಪರಿಣಾಮವಾಗಿ ವಿಮಾ ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ವಿಮೆಯ ನಿರಂತರ ಲಭ್ಯತೆಯಲ್ಲಿ ಅನಿಶ್ಚಿತತೆ ಉಂಟಾಗುತ್ತದೆ. ಇದಲ್ಲದೆ, ತೈಲ ಮಾಲಿನ್ಯ ಹೊಣೆಗಾರಿಕೆ, ಭಗ್ನಾವಶೇಷ ತೆಗೆಯುವಿಕೆ, ಸರಕು ಹಾನಿ, ಸಿಬ್ಬಂದಿ ಗಾಯ ಮತ್ತು ವಾಪಸಾತಿ, ಘರ್ಷಣೆ ಹೊಣೆಗಾರಿಕೆಗಳು ಮತ್ತು ಮುಂತಾದ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳನ್ನು ಒಳಗೊಳ್ಳುವ ಪಿ&ಐ ವಿಮೆಗಾಗಿ ಅಂತಾರಾಷ್ಟ್ರೀಯ ರಕ್ಷಣೆ ಮತ್ತು ಪರಿಹಾರ ಗುಂಪು (ಇಂಟರ್ನ್ಯಾಷನಲ್ ಗ್ರೂಪ್ ಆಫ್ ಪ್ರೊಟೆಕ್ಷನ್ ಅಂಡ್ ಇಂಡೆಮ್ನಿಟಿ - ಐಜಿಪಿ&ಐ) ಕ್ಲಬ್ ಮೇಲೆ ಭಾರತೀಯ ಹಡಗುಗಳು ಹೆಚ್ಚಿನ ಅವಲಂಬನೆಯನ್ನು ಹೊಂದಿವೆ. ಅಂತೆಯೇ, ನಿರ್ಬಂಧಗಳಿಂದಾಗಿ ಅಥವಾ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ವ್ಯಾಪ್ತಿಯನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಸಾರ್ವಭೌಮತ್ವ ಮತ್ತು ವ್ಯಾಪಾರದ ನಿರಂತರತೆಯನ್ನು ಕಾಪಾಡಿಕೊಳ್ಳಲು ದೇಶೀಯ ಕಡಲ ಅಪಾಯ-ಒಳಗೊಳ್ಳುವ ಸಂಗ್ರಹಣೆಯ ಅಗತ್ಯವಿತ್ತು.


ಮೇಲಿನ ಹಿನ್ನೆಲೆಯಲ್ಲಿ, ಸಾರ್ವಭೌಮ ಗ್ಯಾರಂಟಿಯಿಂದ ಬೆಂಬಲಿತವಾದ ಭಾರತೀಯ ಧ್ವಜ ಅಥವಾ ನಿಯಂತ್ರಿತ ಹಡಗುಗಳು ಅಥವಾ ಭಾರತದಿಂದ ಪ್ರಾರಂಭವಾಗುವ ಹಡಗುಗಳಿಗೆ 'ಭಾರತದ ಸಮುದ್ರ ವಿಮಾ ಸಂಗ್ರಹಣೆ' (ಬಿಎಂಐ ಸಂಗ್ರಹಣೆ) ರಚನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಸಂಗ್ರಹಣೆಯು, ಹಲ್ ಮತ್ತು ಮೆಷಿನರಿ, ಸರಕು, ಪಿ&ಐ ಮತ್ತು ಯುದ್ಧ ಅಪಾಯದಂತಹ ಎಲ್ಲಾ ಕಡಲ ಅಪಾಯಗಳನ್ನು ಒಳಗೊಳ್ಳುತ್ತದೆ. ಈ ವಿಮಾ ಸಂಗ್ರಹಣೆಯ ಸದಸ್ಯರಾಗಿರುವ ವಿಮಾದಾರರು ವಿಮಾಸಂಗ್ರಹಣೆಯ ಸಂಯೋಜಿತ ಅಂಡರ್ರೈಟಿಂಗ್ ಸಾಮರ್ಥ್ಯವನ್ನು ಬಳಸಿಕೊಂಡು ಪಾಲಿಸಿಗಳನ್ನು ನೀಡುತ್ತಾರೆ, ಇದು ಸುಮಾರು ರೂ.950 ಕೋಟಿಗಳಷ್ಟಿರುತ್ತದೆ. ಈ ಸಂಗ್ರಹಣೆ ಸ್ಥಳೀಯವಾಗಿ ಹೊಣೆಗಾರಿಕೆ ವಿಮೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಭಾರತೀಯ ಹಡಗು ಪರಿಸ್ಥಿತಿಗಳು ಮತ್ತು ನಿಯಂತ್ರಕ ಅವಶ್ಯಕತೆಗಳಿಗೆ ಅನುಗುಣವಾಗಿ, ವಿಶೇಷ ಸಾಗರ ಅಂಡರ್ರೈಟಿಂಗ್, ಕ್ಲೈಮ್ ನಿರ್ವಹಣೆ ಮತ್ತು ಭಾರತದೊಳಗೆ ಕಾನೂನು ಪರಿಣತಿಯನ್ನು ಅಭಿವೃದ್ಧಿಪಡಿಸುತ್ತದೆ.


ಇದಲ್ಲದೆ, ಈ ವಿಮಾ ಸಂಗ್ರಹಣೆಗಾಗಿ ರಚಿಸಲಾದ ಆಡಳಿತ ಮಂಡಳಿಯು ವಿಮಾ ಸಂಗ್ರಹಣೆಯ ರಚನೆ ಮತ್ತು ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಪ್ರಸ್ತಾವಿತ ದೇಶೀಯ ವಿಮಾ ಘಟಕಕ್ಕೆ ಸಾರ್ವಭೌಮ ಖಾತರಿಯನ್ನು ಒದಗಿಸುವ ತಾರ್ಕಿಕತೆಯು ಸ್ವಾವಲಂಬನೆಯನ್ನು ಬಲಪಡಿಸುವುದು, ನಿರ್ಬಂಧಗಳ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಸಾರ್ವಭೌಮ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಉದ್ದೇಶಗಳಲ್ಲಿ ಬೇರೂರಿದೆ.

 

******
 

 


(ಪ್ರಕಟಣೆ ಐ.ಡಿ.: 2253264) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी