ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ನಾಲ್ಕು ವರ್ಷ ಪೂರೈಸಿದ ಭಾರತ-ಆಸ್ಟ್ರೇಲಿಯಾ ಇಸಿಟಿಎ; ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆ ಬಲವರ್ಧನೆ


ಬಲಿಷ್ಠ ರಫ್ತು ಬೆಳವಣಿಗೆಯ ಮಧ್ಯೆ 2024-25ರಲ್ಲಿ 24.1 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದ ಭಾರತ-ಆಸ್ಟ್ರೇಲಿಯಾ ವ್ಯಾಪಾರ

ಇಸಿಟಿಎ ಅಡಿಯಲ್ಲಿ ಭಾರತಕ್ಕೆ ಶೇ.100ರಷ್ಟು ಸುಂಕ ರೇಖೆಯ ಲಭ್ಯತೆ ನೀಡಿದ ಆಸ್ಟ್ರೇಲಿಯಾ; 2026 ರಿಂದ ಎಲ್ಲಾ ರಫ್ತುಗಳ ಮೇಲೆ ಶೂನ್ಯ ಸುಂಕ

ಪ್ರಕಟಣಾ ದಿನಾಂಕ: 02 APR 2026 1:19PM by PIB Bengaluru

ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಭಾರತ-ಆಸ್ಟ್ರೇಲಿಯಾ ಇಸಿಟಿಎ)ಗೆ ಸಹಿ ಹಾಕಿ ಇಂದಿಗೆ  ನಾಲ್ಕು ವರ್ಷ ಪೂರ್ಣಗೊಂಡಿದ್ದು, ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಕಸನಗೊಳ್ಳುತ್ತಿರುವ ಆರ್ಥಿಕ ಪಾಲುದಾರಿಕೆಯಲ್ಲಿ ಪ್ರಮುಖ ಮೈಲಿಗಲ್ಲಿನ ಸಂಕೇತವಾಗಿದೆ. 2022ರ ಏಪ್ರಿಲ್ 2 ರಂದು ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ವ್ಯಾಪಾರ ಹರಿವುಗಳನ್ನು ಹೆಚ್ಚಿಸುವಲ್ಲಿ, ಕೈಗಾರಿಕಾ ಸಂಪರ್ಕಗಳನ್ನು ಬೆಳೆಸುವಲ್ಲಿ ಮತ್ತು ಎರಡೂ ದೇಶಗಳ ನಡುವಿನ ವ್ಯವಹಾರಗಳು, ಉದ್ಯಮಿಗಳು ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ಒಪ್ಪಂದವು ದ್ವಿಪಕ್ಷೀಯ ಆರ್ಥಿಕ ಒಳಗೊಳ್ಳುವಿಕೆ ಬಲಪಡಿಸುವುದನ್ನು ಮುಂದುವರಿಸಿದೆ, ಸುಧಾರಿತ ಮಾರುಕಟ್ಟೆ ಲಭ್ಯತೆ ಮತ್ತು ತಗ್ಗಿದ ವ್ಯಾಪಾರ ಅಡೆತಡೆಗಳಿಂದ ಉಭಯ ದೇಶಗಳಲ್ಲಿ ಪ್ರಯೋಜನ ಪಡೆಯುತ್ತಿವೆ. ಆಸ್ಟ್ರೇಲಿಯಾಗೆ ಭಾರತದ ರಫ್ತು ದ್ವಿಗುಣಗೊಂಡಿದೆ, 2020–21 ಹಣಕಾಸು ವರ್ಷದಲ್ಲಿ 4 ಬಿಲಿಯನ್ ಅಮೆರಿಕನ್ ಡಾಲರ್‌ನಿಂದ 2024–25 ಹಣಕಾಸು ವರ್ಷದಲ್ಲಿ 8.5 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಏರಿದೆ. 2024–25ರ ಅವಧಿಯಲ್ಲಿ, ಒಟ್ಟು ದ್ವಿಪಕ್ಷೀಯ ವ್ಯಾಪಾರವು 24.1 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿತ್ತು, ಆದರೆ ಆಸ್ಟ್ರೇಲಿಯಾಕ್ಕೆ ಭಾರತದ ರಫ್ತುಗಳು ಹಿಂದಿನ ವರ್ಷಕ್ಕಿಂತ ಶೇ.8ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. 2025–26 ಹಣಕಾಸು ವರ್ಷದಲ್ಲಿ (ಫೆಬ್ರವರಿ ವರೆಗೆ), ಆಸ್ಟ್ರೇಲಿಯಾದೊಂದಿಗಿನ ಭಾರತದ ಒಟ್ಟು ವ್ಯಾಪಾರವು 19.3 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿತ್ತು.

ಭಾರತ-ಆಸ್ಟ್ರೇಲಿಯಾ ಇಸಿಟಿಎ ಅಡಿಯಲ್ಲಿ, ಭಾರತವು ತನ್ನ ಸುಂಕದ ಶೇ. 70.3 ರಷ್ಟು ಮೇಲೆ ಆದ್ಯತೆಯ ಮಾರುಕಟ್ಟೆ ಲಭ್ಯತೆಯನ್ನು ಒದಗಿಸಿತು, ಇದು ವ್ಯಾಪಾರ ಮೌಲ್ಯದ ಶೇ.90.6 ರಷ್ಟನ್ನು ಒಳಗೊಂಡಿದೆ, ಆದರೆ ಆಸ್ಟ್ರೇಲಿಯಾವು ತನ್ನ ಸುಂಕದ ಶೇ.100 ರಷ್ಟು ಮೇಲೆ ಆದ್ಯತೆಯ ಮಾರುಕಟ್ಟೆ ಲಭ್ಯತೆಯನ್ನು ಒದಗಿಸಿತು. ಇದು ಭಾರತದಿಂದ ಆಮದುಗಳ ಶೇ.100ಕ್ಕೆ ಅನುಗುಣವಾಗಿದೆ. ಇದರಲ್ಲಿ, ಶೇ.98.3 ರಷ್ಟು ಸುಂಕದ ಮಾರ್ಗಗಳನ್ನು ಅನುಷ್ಠಾನಗೊಳಿಸಿದ ತಕ್ಷಣ ಸುಂಕ-ಮುಕ್ತಗೊಳಿಸಲಾಯಿತು, ಆದರೆ ಉಳಿದ ಶೇ. 1.7 ರಷ್ಟು (113 ಸುಂಕದ ಮಾರ್ಗಗಳು) ಐದು ವರ್ಷಗಳಲ್ಲಿ ಹಂತಹಂತವಾಗಿ ತೆಗೆದುಹಾಕಲಾಗುತ್ತಿದೆ. 2026ರ  ಜನವರಿ 1 ರಿಂದ, ಎಲ್ಲಾ ಭಾರತೀಯ ರಫ್ತುಗಳು ಆಸ್ಟ್ರೇಲಿಯಾಕ್ಕೆ ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶಕ್ಕೆ ಅರ್ಹವಾಗಿವೆ.

ಇಸಿಟಿಎ ಅಡಿಯಲ್ಲಿ ವಲಯಕ್ಕೆ ಆಗುತ್ತಿರುವ ಲಾಭಗಳು ಹೆಚ್ಚು ವಿಸ್ತೃತವಾಗಿವೆ, ಜವಳಿ, ಔಷಧಗಳು, ರಾಸಾಯನಿಕಗಳು ಮತ್ತು ಕೃಷಿ ಉತ್ಪನ್ನಗಳಾದ್ಯಂತ ರಫ್ತಿನಲ್ಲಿ ಗಮನಾರ್ಹ ಬೆಳವಣಿಗೆಯೊಂದಿಗೆ. ಆಮದು ಭಾಗದಲ್ಲಿ, ಭಾರತದ ಉತ್ಪಾದನೆ ಮತ್ತು ಕೈಗಾರಿಕಾ ವಲಯಗಳಿಗೆ ನಿರ್ಣಾಯಕವಾದ ಮೂಲ ಲೋಹಗಳು, ಕಚ್ಚಾ ಹತ್ತಿ, ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಮತ್ತು ದ್ವಿದಳ ಧಾನ್ಯಗಳಂತಹ ಅಗತ್ಯ ಕಚ್ಚಾ ವಸ್ತುಗಳ ಲಭ್ಯತೆಯನ್ನು ಸುಗಮಗೊಳಿಸುವುದನ್ನು ಒಪ್ಪಂದವು ಮುಂದುವರೆಸಿದೆ. ಈ ಪೂರಕ ವ್ಯಾಪಾರ ವ್ಯವಸ್ಥೆಯು ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಿದೆ ಮತ್ತು ದೇಶೀಯ ಮೌಲ್ಯವರ್ಧನೆಯನ್ನು ಬೆಂಬಲಿಸಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2025ರ ಸೆಪ್ಟೆಂಬರ್ 24 ರಂದು ಸಾವಯವ ಉತ್ಪನ್ನಗಳ ಮೇಲಿನ ಪರಸ್ಪರ ಮಾನ್ಯತೆ ಒಪ್ಪಂದ (ಎಂ ಆರ್ ಎ)ಗೆ ಸಹಿ ಹಾಕುವುದರೊಂದಿಗೆ ದ್ವಿಪಕ್ಷೀಯ ಸಹಕಾರದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಲಾಯಿತು. ಎಂ ಆರ್ ಎ ಪರಸ್ಪರ ಪ್ರಮಾಣೀಕರಣ ವ್ಯವಸ್ಥೆಗಳನ್ನು ಗುರುತಿಸುವ ಮೂಲಕ ಸಾವಯವ ಉತ್ಪನ್ನಗಳಲ್ಲಿ ತಡೆರಹಿತ ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಇದರಿಂದಾಗಿ ರಫ್ತುದಾರರಿಗೆ ನಕಲು, ವೆಚ್ಚ ಮತ್ತು ಸಮಯವನ್ನು ಉಳಿತಾಯ ಮಾಡುತ್ತದೆ. ಈ ಹಂತವು ಸಾವಯವ ವಲಯದಲ್ಲಿ ಸಹಕಾರವನ್ನು ಬಲಪಡಿಸಿದೆ ಮತ್ತು ಸಾವಯವ ವ್ಯಾಪಾರ ಪದ್ಧತಿಗಳಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ವೃದ್ಧಿಸಿದೆ,

ಈ ಒಪ್ಪಂದವು ದ್ವಿಪಕ್ಷೀಯ ಒಳಗೊಳ್ಳುವಿಕೆಯ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದ್ದು, ಎರಡೂ ದೇಶಗಳಲ್ಲಿನ ವ್ಯವಹಾರಗಳು, ಎಂ ಎಸ್ ಎಂ ಇ ಗಳು, ಕಾರ್ಮಿಕರು ಮತ್ತು ಗ್ರಾಹಕರಿಗೆ ಸ್ಪಷ್ಟ ಪ್ರಯೋಜನಗಳನ್ನು ನೀಡುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ಇಂಡೋ-ಆಸ್ ಇಸಿಟಿಎ ನಾಲ್ಕು ವರ್ಷಗಳನ್ನು ಆಚರಿಸುತ್ತಿರುವುದರಿಂದ, ವ್ಯಾಪಾರವನ್ನು ವಿಸ್ತರಿಸಲು, ಪೂರೈಕೆ ಸರಣಿಯನ್ನು ಬಲಪಡಿಸಲು, ಹೂಡಿಕೆ ಪಾಲುದಾರಿಕೆಗಳನ್ನು ಉತ್ತೇಜಿಸಲು ಮತ್ತು ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಹಂಚಿಕೆಯ ಉದ್ದೇಶವನ್ನು ಮುನ್ನಡೆಸಲು ಉಭಯ ದೇಶಗಳು ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿವೆ.

 

*****


(ಪ್ರಕಟಣೆ ಐ.ಡಿ.: 2248275) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati