ಭಾರೀ ಕೈಗಾರಿಕೆಗಳ ಸಚಿವಾಲಯ
ಬೃಹತ್ ಕೈಗಾರಿಕೆಗಳ ಸಚಿವಾಲಯದ ಸಮಾಲೋಚನಾ ಸಮಿತಿಯ ಸಭೆಯು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೂತನ ಸಂಸತ್ ಭವನದಲ್ಲಿ ನಡೆಯಿತು
ಪ್ರಕಟಣಾ ದಿನಾಂಕ:
25 MAR 2026 1:13PM by PIB Bengaluru
ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯ ನೂತನ ಸಂಸತ್ ಭವನದಲ್ಲಿ ಭಾರೀ ಕೈಗಾರಿಕೆಗಳ ಸಚಿವಾಲಯದ (ಎಂ.ಎಚ್.ಐ) ಸಮಾಲೋಚನಾ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಬೃಹತ್ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ; ನೀತಿ ಆಯೋಗದ ಯೋಜನಾ ನಿರ್ದೇಶಕ ಡಾ. ಅಂಶು ಭಾರದ್ವಾಜ್; ಮತ್ತು ಬಿ.ಎಚ್.ಇ.ಎಲ್.ನ ಸಿ.ಎಂ.ಡಿ ಶ್ರೀ ಕೆ. ಸದಾಶಿವ ಮೂರ್ತಿ ಮತ್ತು ಎಂ.ಎಚ್.ಐ, ನೀತಿ ಆಯೋಗ ಮತ್ತು ಬಿ.ಎಚ್.ಇ.ಎಲ್.ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ, ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು "ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದ ಮಾರ್ಗದರ್ಶನದಲ್ಲಿ, ಭಾರತವು ಸುಸ್ಥಿರ ಭವಿಷ್ಯದತ್ತ ಸಾಗುತ್ತಿದೆ. '2047ರಲ್ಲಿ ವಿಕಸಿತ ಭಾರತ' ಪರಿಕಲ್ಪನೆಯು ಭಾರತವನ್ನು ಪ್ರಮುಖ ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರ ಮತ್ತು ಹೆಚ್ಚಿನ ಮೌಲ್ಯದ ರಫ್ತು ಕೇಂದ್ರವಾಗಿ ಪರಿವರ್ತಿಸುವ ಸಮಗ್ರ ಮಾರ್ಗಸೂಚಿಯಾಗಿದೆ. ಸ್ಥಳೀಯ ನಾವೀನ್ಯತೆ ಮತ್ತು ದೊಡ್ಡ ಪ್ರಮಾಣದ ಉತ್ಪಾದನಾ ಶ್ರೇಷ್ಠತೆಯ ಮೂಲಕ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ರಾಷ್ಟ್ರವನ್ನು ನಿರ್ಣಾಯಕ ಕೇಂದ್ರವಾಗಿ ಇರಿಸುವತ್ತ ಗಮನ ಹರಿಸಲಾಗಿದೆ. ದೃಷ್ಟಿಕೋನ ಸ್ಪಷ್ಟವಾಗಿದೆ: ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್." ಎಂದು ಹೇಳಿದರು. ರಾಷ್ಟ್ರ ನಿರ್ಮಾಣಕ್ಕೆ ಬಿ.ಎಚ್.ಇ.ಎಲ್.ನ ನೀಡುತ್ತಿರುವ ಕೊಡುಗೆಯನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಸಭೆಯಲ್ಲಿ, ವಂದೇ ಭಾರತ್ ನ ಪ್ರಗತಿಯ ಕುರಿತು ವಿವರವಾದ ಪ್ರಸ್ತುತಿಯನ್ನು ಬಿ.ಎಚ್.ಇ.ಎಲ್.ನ ಸಿ.ಎಂ.ಡಿ ಶ್ರೀ ಕೆ. ಸದಾಶಿವ ಮೂರ್ತಿ ಅವರು ಪ್ರದರ್ಶನ ಮಾಡಿದರು, ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳನ್ನು ಮುಂದುವರಿಸುವಲ್ಲಿ ಗಮನಾರ್ಹ ಬೆಳವಣಿಗೆಗಳು ಮತ್ತು ಸಾಧನೆಗಳನ್ನು ಅವರು ಉಲ್ಲೇಖಿಸಿದರು.
ಇದರ ನಂತರ ನೀತಿ ಆಯೋಗದ ಯೋಜನಾ ನಿರ್ದೇಶಕ (ಇಂಧನ, ಹಸಿರು ಪರಿವರ್ತನೆ ಮತ್ತು ಹವಾಮಾನ ಬದಲಾವಣೆ) ಡಾ. ಅಂಶು ಭಾರದ್ವಾಜ್ ಅವರು "ಸುಸ್ಥಿರ ಹಸಿರು ಇಂಧನಕ್ಕೆ ಪರಿವರ್ತನೆ" ಕುರಿತು ಪ್ರಸ್ತುತಿ ನಡೆಸಿದರು, ಇದು ಸುಸ್ಥಿರ, ಕಡಿಮೆ-ಇಂಗಾಲ ಮತ್ತು ಇಂಧನ-ಸಮರ್ಥ ಭವಿಷ್ಯವನ್ನು ಸಾಧಿಸುವ ಕಡೆಗೆ ಭಾರತದ ಕಾರ್ಯತಂತ್ರದ ವಿಧಾನವನ್ನು ಕೇಂದ್ರೀಕರಿಸಿದೆ." ಎಂದು ಹೇಳಿದರು.
ಸಮಿತಿಯ ಸದಸ್ಯರು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಚರ್ಚಿಸಿದ ವಿಷಯಗಳ ಕುರಿತು ಅಮೂಲ್ಯವಾದ ಒಳನೋಟಗಳು, ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.
*****
(ಪ್ರಕಟಣೆ ಐ.ಡಿ.: 2244955)
ವಿಸಿಟರ್ ಕೌಂಟರ್ : 7