ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

ಎನ್.ಎಸ್.ಟಿ.ಐ. ಬೆಂಗಳೂರಿನಲ್ಲಿ ನಡೆದ 'ಕೌಶಲ್ಯತೆಯಿಂದ ಉದ್ಯಮಿಯತ್ತ (ಕೌಶಲ್ತ ಸೆ ಉದ್ಯಮಮಿತ)' ಸನ್ಮಾನ ಸಮಾರಂಭದಲ್ಲಿ ಎಂಎಸ್‌ಡಿಇ ಯುವ ನಾವೀನ್ಯಕಾರರನ್ನು ಆಚರಿಸುತ್ತದೆ


ಕೌಶಲ್ಯದಿಂದ ನವೋದ್ಯಮಗಳವರೆಗೆ: ಡಿಜಿಟಿ ಬೆಂಗಳೂರಿನ ಎನ್.ಎಸ್.ಟಿ.ಐ.ನಲ್ಲಿ ಯುವ ನಾವೀನ್ಯಕಾರರನ್ನು ಸನ್ಮಾನಿಸುತ್ತದೆ

ಪ್ರಕಟಣಾ ದಿನಾಂಕ: 11 MAR 2026 4:01PM by PIB Bengaluru

ಭಾರತದ ಕೌಶಲ್ಯ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸುವ ಮಹತ್ವದ ಹೆಜ್ಜೆಯಾಗಿ, "'ಕೌಶಲ್ಯತೆಯಿಂದ ಉದ್ಯಮಿಯತ್ತ : ನವೋನ್ಮೇಷ ಪ್ರೋತ್ಸಾಹದ ಸ್ಪರ್ಧೆ( ಕೌಶಲ್ತ ಸೆ ಉದ್ಯಮಮಿತ: ನವೋನ್ಮೇಷ್ ಪ್ರೋತ್ಸಾಹನ್ ಸ್ಪರ್ಧಾ)" ಸನ್ಮಾನ ಸಮಾರಂಭವನ್ನು ಬೆಂಗಳೂರಿನ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ (ಎನ್.ಎಸ್.ಟಿ.ಐ.), ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂ.ಎಸ್.ಡಿ.ಇ.) ಆಶ್ರಯದಲ್ಲಿ ನಡೆಸಲಾಯಿತು. ದೇಶದ ಕೌಶಲ್ಯಪೂರ್ಣ ಯುವಕರಲ್ಲಿ ಉದ್ಯಮಶೀಲತಾ ಸೃಷ್ಟಿಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ತರಬೇತಿ ಪಡೆಯುವವರು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ನವೀನ ಆಲೋಚನೆಗಳು ಮತ್ತು ಉದ್ಯಮಶೀಲತಾ ಉದ್ಯಮಗಳಾಗಿ ಪರಿವರ್ತಿಸಲು ಪ್ರೋತ್ಸಾಹಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.

ದೇಶಾದ್ಯಂತದ ಎಲ್ಲಾ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳಲ್ಲಿ (ಎನ್.ಎಸ್.ಟಿ.ಐ.) ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ, ಬಿಐಟಿಎಸ್ ಪಿಲಾನಿಯ ಇನ್ಕ್ಯುಬೇಟರ್ ಆಗಿರುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ (ಎ.ಬಿ.ಸಿ.ಎಫ್.) ಮತ್ತು ಪಿಲಾನಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಸೊಸೈಟಿ (ಪಿ.ಐ.ಇ.ಡಿ.ಎಸ್.) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು.

ಡಿಜಿಟಿಯ ಮಹಾನಿರ್ದೇಶಕ ಶ್ರೀ ದಿಲೀಪ್ ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೌಶಲ್ಯಪೂರ್ಣ ಯುವಕರಲ್ಲಿ ಉದ್ಯಮಶೀಲತಾ ಮನಸ್ಥಿತಿಯನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು, ಇದರಿಂದ ಅವರು ಉದ್ಯೋಗಾಕಾಂಕ್ಷಿಗಳಿಗಿಂತ ಉದ್ಯೋಗ ಸೃಷ್ಟಿಕರ್ತರಾಗಿ ಹೊರಹೊಮ್ಮುತ್ತಾರೆ. ಕೌಶಲ್ಯವನ್ನು ನಾವೀನ್ಯತೆಗೆ ಪೂರಕಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ತಾಂತ್ರಿಕ ಸಾಮರ್ಥ್ಯಗಳನ್ನು ನೀಡುವುದರ ಜೊತೆಗೆ, ತರಬೇತಿ ಪಡೆಯುವವರು ಸೃಜನಾತ್ಮಕವಾಗಿ ಯೋಚಿಸಲು ಮತ್ತು ಉದ್ಯಮಶೀಲತಾ ಸಾಧ್ಯತೆಗಳನ್ನು ಅನ್ವೇಷಿಸಲು ಪ್ರೋತ್ಸಾಹಿಸುವ ಸಂಸ್ಕೃತಿಯನ್ನು ಬೆಳೆಸುವುದು ಅಷ್ಟೇ ಮುಖ್ಯ ಎಂದು ಹೇಳಿದರು.

ತರಬೇತಿ ಪಡೆಯುವವರು ಮತ್ತು ಸಂಸ್ಥೆಗಳು ದೊಡ್ಡ ಕನಸು ಕಾಣುವಂತೆ ಪ್ರೋತ್ಸಾಹಿಸಬೇಕು ಮತ್ತು ಅವರ ಆಲೋಚನೆಗಳನ್ನು ನೈಜ ಜಗತ್ತಿನ ಸವಾಲುಗಳನ್ನು ಎದುರಿಸಬಲ್ಲ ಪ್ರಭಾವಶಾಲಿ ಫಲಿತಾಂಶಗಳಾಗಿ ಪರಿವರ್ತಿಸುವತ್ತ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಎನ್.ಎಸ್.ಟಿ.ಐ ಪರಿಸರ ವ್ಯವಸ್ಥೆಯೊಳಗೆ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಈ ಮೊದಲ-ರೀತಿಯ ಉಪಕ್ರಮವನ್ನು ಪರಿಕಲ್ಪನೆ ಮಾಡಿ ಕಾರ್ಯಗತಗೊಳಿಸಿದ್ದಕ್ಕಾಗಿ ಡಿಜಿಟಿ ತಂಡವನ್ನು ಶ್ರೀ ಕುಮಾರ್ ಅವರು ಶ್ಲಾಘಿಸಿದರು. ಪಿಲಾನಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಸೊಸೈಟಿ (ಪಿ.ಐ.ಇ.ಡಿ.ಎಸ್.), ಬಿಟ್ಸ್ ಪಿಲಾನಿ ವಿಜೇತರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು ಮತ್ತು ಅವರ ಆಲೋಚನೆಗಳನ್ನು ಮತ್ತಷ್ಟು ಪರಿಷ್ಕರಿಸುವ ಮತ್ತು ಅಭಿವೃದ್ಧಿಪಡಿಸುವಲ್ಲಿ ಮಾರ್ಗದರ್ಶನ ನೀಡಬೇಕೆಂದು ಅವರು ವಿನಂತಿಸಿದರು, ಜೊತೆಗೆ ಭವಿಷ್ಯದಲ್ಲಿ ಡಿಜಿಟಿ ಮತ್ತು ಎಂ.ಎಸ್.ಡಿ.ಇ.ಯೊಂದಿಗೆ ಅಂತಹ ಸಹಯೋಗದ ಉಪಕ್ರಮಗಳನ್ನು ಉಳಿಸಿಕೊಳ್ಳಬೇಕು.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪಿಲಾನಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಸೊಸೈಟಿ (ಪಿ.ಐ.ಇ.ಡಿ.ಎಸ್.), ಬಿಟ್ಸ್ ಪಿಲಾನಿ ರವರಿಂದ ಆಕರ್ಷಕ ಪ್ರಸ್ತುತಿಯು ಕಾರ್ಯಕ್ರಮದ ಪ್ರಯಾಣ ಮತ್ತು ಸ್ಪರ್ಧೆಯ ಸಮಯದಲ್ಲಿ ಭಾಗವಹಿಸುವವರಿಗೆ ಒದಗಿಸಲಾದ ಮಾರ್ಗದರ್ಶನವನ್ನು ಎತ್ತಿ ತೋರಿಸಿತು.

ರಾಷ್ಟ್ರೀಯ ಮಟ್ಟದ ಸ್ಪರ್ಧೆಯು - ಐಟಿ ಮತ್ತು ಐ.ಟಿ.ಇ.ಎಸ್., ಆಟೋಮೋಟಿವ್, ಉಡುಪು, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ಮತ್ತು ಉತ್ಪಾದನೆ ಎಂಬ ಐದು ಪ್ರಮುಖ ವಲಯಗಳನ್ನು ಒಳಗೊಂಡಿದೆ. ದೇಶಾದ್ಯಂತ ಒಟ್ಟು 773 ಪ್ರಶಿಕ್ಷಣಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು, ಅವರ ತಾಂತ್ರಿಕ ತರಬೇತಿಯಲ್ಲಿ ಬೇರೂರಿರುವ ನವೀನ ವಿಚಾರಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಿದರು. ಬಹು ಹಂತದ ಮೌಲ್ಯಮಾಪನದ ನಂತರ, ಅಗ್ರ 15 ವಿಚಾರಗಳನ್ನು ಶಾರ್ಟ್ಲಿಸ್ಟ್ ಮಾಡಲಾಯಿತು ಮತ್ತು ಅಂತಿಮ ಸ್ಪರ್ಧಾ ಸುತ್ತಿನಲ್ಲಿ ತಜ್ಞ ತೀರ್ಪುಗಾರರ ಮುಂದೆ ಪ್ರಸ್ತುತಪಡಿಸಲಾಯಿತು. ತರಬೇತಿ ಪಡೆಯುವವರಲ್ಲಿ ಉದ್ಯಮಶೀಲತಾ ಚಿಂತನೆಯನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು, ವಿಜೇತರಿಗೆ ವಲಯವಾರು ನಗದು ಬಹುಮಾನಗಳನ್ನು : ಪ್ರಥಮ ಬಹುಮಾನ  ₹1,00,000, ಎರಡನೇ ಬಹುಮಾನ  ₹75,000 ಮತ್ತು ಮೂರನೇ ಬಹುಮಾನ  ₹50,000 – ಎಂಬ ರೀತಿಯಲ್ಲಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಿ.ಸಿ. ರಾಮಮೂರ್ತಿ; ಡಿಜಿಟಿ ನಿರ್ದೇಶಕರಾದ ಶ್ರೀ ಹೇಮಂತ್ ಡಿ. ಗಂಜಾರೆ; ಡಿ.ಜಿ.ಟಿ ನಿರ್ದೇಶಕರಾದ ಶ್ರೀಮತಿ ಸ್ವಾತಿ ಸೇಥಿ; ಎಂ.ಎಸ್.ಡಿ.ಇ.ಯ ಹಿರಿಯ ಅಧಿಕಾರಿಗಳು, ಕೈಗಾರಿಕೆ ಮತ್ತು ಇನ್ಕ್ಯುಬೇಶನ್ ಕೇಂದ್ರಗಳ ಪ್ರತಿನಿಧಿಗಳು, ಮಾರ್ಗದರ್ಶಕರು, ಅಧ್ಯಾಪಕರು ಮತ್ತು ದೇಶಾದ್ಯಂತದ ಎನ್.ಎಸ್.ಟಿ.ಐ. ಪರಿಸರ ವ್ಯವಸ್ಥೆಯ ತರಬೇತಿದಾರರು ಉಪಸ್ಥಿತರಿದ್ದರು. ಇದು ಭಾರತದ ಕೌಶಲ್ಯ ಅಭಿವೃದ್ಧಿ ಪರಿಸರ ವ್ಯವಸ್ಥೆಯಿಂದ ಹೊರಹೊಮ್ಮುವ ನಾವೀನ್ಯತೆಯನ್ನು ಆಚರಿಸುವ ಒಂದು ರೋಮಾಂಚಕ ವೇದಿಕೆಯಾಗಿದೆ.

ಕೌಶಲ್ಯಪೂರ್ಣ ಯುವಕರು ತಮ್ಮ ಆಲೋಚನೆಗಳನ್ನು ಸುಸ್ಥಿರ ಉದ್ಯಮಗಳಾಗಿ ಪರಿವರ್ತಿಸಲು ಮತ್ತು ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಸಬಲೀಕರಣಗೊಳಿಸುವ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವಿಶಾಲ ದೃಷ್ಟಿಕೋನವನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2238316) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी