ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆ ಎಸ್‌ ಒ ಯು) ಗೆ ದ್ವಿ ಪದವಿ ಪ್ರದಾನ ಮಾಡಬಲ್ಲ ಸಂಸ್ಥೆಯಾಗಿ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್‌ ಸಿ ವಿ ಇ ಟಿ) ಮಾನ್ಯತೆ

ಪ್ರಕಟಣಾ ದಿನಾಂಕ: 02 MAR 2026 8:15PM by PIB Bengaluru

ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್ ಸಿ ವಿ ಇ ಟಿ) ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆ ಎಸ್ ಒ ಯು) 2026ರ ಮಾರ್ಚ್ 2 ರಂದು ಕೆ ಎಸ್ ಒ ಯು ಗೆ ದ್ವಿ ಪದವಿ ಪ್ರದಾನ ಸಂಸ್ಥೆ (ಎಬಿ – ಡ್ಯುಯಲ್) ಆಗಿ ಎನ್ ಸಿ ವಿ ಇ ಟಿ ಮಾನ್ಯತೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿವೆ. 

ಈ ಮಾನ್ಯತೆಯೊಂದಿಗೆ, ಕೆ ಎಸ್‌ ಒ ಯು ತನ್ನ ಅನುಮೋದಿತ ಅಥವಾ ತಾನು ಅಳವಡಿಸಿಕೊಂಡ ವಿದ್ಯಾರ್ಹತೆಗಳಿಗಾಗಿ ತನ್ನ ಒಡೆತನದ ಕೇಂದ್ರಗಳಲ್ಲಿ ಅಥವಾ ಸಂಪೂರ್ಣವಾಗಿ ತಾನು ನಿರ್ವಹಿಸುವ ಆವರಣಗಳಲ್ಲಿ ಅಥವಾ ತರಬೇತಿ ಕೇಂದ್ರಗಳಲ್ಲಿ ಪದವಿ ನೀಡುವ ಸಂಸ್ಥೆಯಾಗಿ ನೇರವಾಗಿ ತರಬೇತಿಯನ್ನು ನೀಡುತ್ತಿರುವೆಡೆ ಕಲಿಕಾರ್ಥಿಗಳ ಮೌಲ್ಯಮಾಪನ ಮಾಡಿ, ಪ್ರಮಾಣೀಕರಿಸುತ್ತಾ ಪದವಿ ಪ್ರದಾನ ಮಾಡಲು ಕೆ ಎಸ್‌ ಒ ಯು ಅರ್ಹವಾಗಲಿದೆ. 

ಕೆ ಎಸ್‌ ಒ ಯು ಗೆ ಡ್ಯುಯಲ್ ಅವಾರ್ಡಿಂಗ್ ಬಾಡಿ (ದ್ವಿಪದವಿ ಪ್ರದಾನ ಸಂಸ್ಥೆ)ಯ ಸ್ಥಾನಮಾನವು ಭಾರತದಲ್ಲಿ ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ಪರಿಸರ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಮಾನ್ಯತೆಯು ಕರ್ನಾಟಕ ರಾಜ್ಯದ ಪ್ರಾದೇಶಿಕ ನ್ಯಾಯವ್ಯಾಪ್ತಿಯೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತಾ, ಮುಕ್ತ ವಿಶ್ವವಿದ್ಯಾಲಯ ಮಾದರಿಯ ಮೂಲಕ ಗುಣಮಟ್ಟದ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯಕ್ಕೆ ಪ್ರವೇಶಾವಕಾಶವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. 

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ಎನ್ ಎ ಎ ಸಿ – ನ್ಯಾಕ್ ) ನಿಂದ ಎ+ ಗ್ರೇಡ್ ಮಾನ್ಯತೆ ಪಡೆದಿರುವ ಮತ್ತು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್‌ ಐ ಆರ್‌ ಎಫ್) 2025 ರ‌ ಪಟ್ಟಿಯಲ್ಲಿ ಮುಕ್ತ ವಿಶ್ವವಿದ್ಯಾಲಯಗಳ ಪೈಕಿ 2 ನೇ ಸ್ಥಾನದಲ್ಲಿರುವ ಕೆ ಎಸ್‌ ಒ ಯು, ಈಗ ವೃತ್ತಿಪರ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್ ಗಳನ್ನು ತನ್ನ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಂಯೋಜಿಸಲಿದೆ. ವಿಶ್ವವಿದ್ಯಾನಿಲಯವು ಈಗಾಗಲೇ ಎನ್‌ ಸಿ ವಿ ಇ ಟಿ ಚೌಕಟ್ಟಿನ ಅಡಿಯಲ್ಲಿ 'ಸಸ್ಯ ರೋಗಶಾಸ್ತ್ರಜ್ಞ' ವಿದ್ಯಾರ್ಹತೆಗೆ ಅನುಮೋದನೆಯನ್ನು ಪಡೆದುಕೊಂಡಿದೆ. ಮುಂದುವರಿಯುತ್ತಾ, ಮಾನ್ಯತೆ ಪಡೆದ ಪ್ರಮಾಣೀಕರಣ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಮತ್ತು ಕೌಶಲ್ಯ ಮೌಲ್ಯಮಾಪನ ಮಾನದಂಡಗಳನ್ನು ತನ್ನ ಪಠ್ಯಕ್ರಮದಲ್ಲಿ ನಿರ್ದಿಷ್ಟವಾಗಿ ಮಾಹಿತಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಮತ್ತು ಇತರ ಹೆಚ್ಚಿನ-ಬೆಳವಣಿಗೆಯ ವಲಯಗಳಲ್ಲಿ ಸೇರ್ಪಡೆ ಮಾಡಿಕೊಳ್ಳುವ ಗುರಿಯನ್ನು ಕೆ ಎಸ್‌ ಒ ಯು ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2234880) ವಿಸಿಟರ್ ಕೌಂಟರ್ : 75
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी