ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಅಂದಾಜುಗಳ ಹೊಸ ಸರಣಿ - ಮೂಲವರ್ಷ 2022-23


ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2011-12ರ ಹಿಂದಿನ ಮೂಲ ವರ್ಷದ ಸರಣಿಯ ಬದಲಿಗೆ 2022-23ರ ಮೂಲ ವರ್ಷದೊಂದಿಗೆ ವಾರ್ಷಿಕ ಮತ್ತು ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರ ಅಂದಾಜುಗಳ ಹೊಸ ಸರಣಿಯನ್ನು ಬಿಡುಗಡೆ ಮಾಡುತ್ತಿದೆ

ಪ್ರಕಟಣಾ ದಿನಾಂಕ: 27 FEB 2026 4:00PM by PIB Bengaluru

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, 2011-12ರ ಹಿಂದಿನ ಮೂಲ ವರ್ಷದ ಸರಣಿಯ ಬದಲಿಗೆ 2022-23ರ ಮೂಲ ವರ್ಷದೊಂದಿಗೆ ವಾರ್ಷಿಕ ಮತ್ತು ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರ ಅಂದಾಜುಗಳ ಹೊಸ ಸರಣಿಯನ್ನು ಬಿಡುಗಡೆ ಮಾಡುತ್ತಿದೆ. ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳ ಪ್ರಕಾರ, ಮೂಲ ವರ್ಷದ ಪರಿಷ್ಕರಣೆಯನ್ನು ಕಾಲಕಾಲಕ್ಕೆ ಕೈಗೊಳ್ಳಲಾಗುತ್ತದೆ ಮತ್ತು ಬದಲಾವಣೆಗಳ ಸ್ವರೂಪದಿಂದಾಗಿ ಇದು ರಾಷ್ಟ್ರೀಯ ಲೆಕ್ಕಪತ್ರಗಳ ಸಾಮಾನ್ಯ ಪರಿಷ್ಕರಣೆಗಿಂತ ಭಿನ್ನವಾಗಿರುತ್ತದೆ. ವಾರ್ಷಿಕ ಪರಿಷ್ಕರಣೆಗಳಲ್ಲಿ, ವರ್ಷಗಳ ನಡುವೆ ನಿಖರವಾದ ಹೋಲಿಕೆಯನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಪರಿಕಲ್ಪನಾ ಚೌಕಟ್ಟನ್ನು ಬದಲಾಯಿಸದೆ ಅಥವಾ ಯಾವುದೇ ಹೊಸ ದತ್ತಾಂಶ ಮೂಲವನ್ನು ಬಳಸದೆ ಕೇವಲ ಲಭ್ಯವಿರುವ ನವೀಕೃತ ದತ್ತಾಂಶದ ಮೂಲದ ಮೇಲೆ ಬದಲಾವಣೆಗಳನ್ನು ಮಾಡಲಾಗುತ್ತದೆ. ಮೂಲ ವರ್ಷದ ಪರಿಷ್ಕರಣೆಯ ಸಂದರ್ಭದಲ್ಲಿ, ಈ ಕೆಳಗಿನವುಗಳಿಗಾಗಿ ಬದಲಾವಣೆಗಳನ್ನು ಮಾಡಲಾಗುತ್ತದೆ:

  • ಆರ್ಥಿಕತೆಯಲ್ಲಿನ ರಚನಾತ್ಮಕ ಬದಲಾವಣೆಗಳನ್ನು ಪಡೆಯಲು
  • ಇತ್ತೀಚಿನ ದತ್ತಾಂಶ ಮೂಲಗಳನ್ನು ಸಂಯೋಜಿಸಲು
  • ಅಂದಾಜು ಮಾಡುವ ವಿಧಾನಗಳನ್ನು ಸುಧಾರಿಸಲು
  • ವ್ಯಾಪ್ತಿ ಮತ್ತು ನಿಖರತೆಯನ್ನು ಹೆಚ್ಚಿಸಲು

ಹಣಕಾಸು ವರ್ಷ 2022-23 ಅನ್ನು ಮೂಲ ವರ್ಷವಾಗಿ ಆಯ್ಕೆ ಮಾಡಲಾಗಿದೆ, ಏಕೆಂದರೆ ಇದು ಇತ್ತೀಚಿನ ಸಾಮಾನ್ಯ ವರ್ಷವನ್ನು (ಕೋವಿಡ್ ನಂತರದ) ಪ್ರತಿನಿಧಿಸುತ್ತದೆ ಮತ್ತು ಆರ್ಥಿಕತೆಯ ಎಲ್ಲಾ ವಲಯಗಳಲ್ಲಿ ದೃಢವಾದ ಹಾಗೂ ಸಮಗ್ರವಾದ ದತ್ತಾಂಶಗಳು ಲಭ್ಯವಿವೆ. ಇದು ವಾರ್ಷಿಕ ಮತ್ತು ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರ ಅಂದಾಜುಗಳ ಹೊಸ ಸರಣಿಗೆ ಸೂಕ್ತವಾದ ಮಾನದಂಡವಾಗಿದೆ. ಹೊಸ ಒಟ್ಟು ಆಂತರಿಕ ಉತ್ಪನ್ನ ಸರಣಿಗಾಗಿ, ಈ ಪತ್ರಿಕಾ ಪ್ರಕಟಣೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಭಾಗ

ವಿವರಗಳು

ಭಾಗ ಎ

• ಹಣಕಾಸು ವರ್ಷ 2025-26ರ ವಾರ್ಷಿಕ ಜಿಡಿಪಿಯ ಎರಡನೇ ಮುಂಗಡ ಅಂದಾಜುಗಳು.

• ಹಣಕಾಸು ವರ್ಷ 2022-23ರ ಮೊದಲ ತ್ರೈಮಾಸಿಕದಿಂದ (ಏಪ್ರಿಲ್-ಜೂನ್) ಹಣಕಾಸು ವರ್ಷ 2025-26ರ ಮೂರನೇ ತ್ರೈಮಾಸಿಕದವರೆಗಿನ (ಅಕ್ಟೋಬರ್-ಡಿಸೆಂಬರ್) ಜಿಡಿಪಿಯ ತ್ರೈಮಾಸಿಕ ಅಂದಾಜುಗಳು.

ಭಾಗ ಬಿ

• ಹಣಕಾಸು ವರ್ಷ 2022–23, 2023–24 ಮತ್ತು 2024–25ರ ಜಿಡಿಪಿ ಮತ್ತು ಸಂಬಂಧಿತ ಒಟ್ಟು ಮೊತ್ತದ ವಾರ್ಷಿಕ ಅಂದಾಜುಗಳು.

ಭಾಗ ಸಿ

• ಚರ್ಚಾ ಪತ್ರಗಳು, ಉಪ-ಸಮಿತಿಗಳ ವರದಿಗಳು ಮತ್ತು ಎಫ್‌ ಎ ಕ್ಯು ಗಳನ್ನು ಒಳಗೊಂಡಂತೆ ಹೊಸ ಸರಣಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಪ್ರವೇಶಿಸಲು ಲಿಂಕ್‌ ಗಳು.

• 'ಬ್ಯಾಕ್ ಸೀರೀಸ್' (ಹಳೆಯ ಸರಣಿ ಮಾಹಿತಿ) ಮತ್ತು ಮೂಲಗಳು ಹಾಗೂ ವಿಧಾನಗಳ ಪ್ರಕಟಣೆಯ ಬಿಡುಗಡೆ ದಿನಾಂಕಗಳಿಗೆ ಸಂಬಂಧಿಸಿದ ಮಾಹಿತಿ.

• ಹಣಕಾಸು ವರ್ಷ 2022-23, ಹಣಕಾಸು ವರ್ಷ 2023-24 ಮತ್ತು ಹಣಕಾಸು ವರ್ಷ 2024-25ಕ್ಕೆ ಸಂಬಂಧಿಸಿದಂತೆ ಹಳೆಯ ಮತ್ತು ಹೊಸ ಸರಣಿಗಳ ನಡುವಿನ ತುಲನಾತ್ಮಕ ಕೋಷ್ಟಕಗಳು.

* ವಿವಿಧ ಲಿಂಕ್ ಮಾಡಲಾದ ದಾಖಲೆಗಳನ್ನು ಪ್ರವೇಶಿಸಲು, ಸಚಿವಾಲಯದ ವೆಬ್‌ಸೈಟ್‌ನಿಂದ (www.mospi.gov.in) ಪತ್ರಿಕಾ ಟಿಪ್ಪಣಿಯನ್ನು ಪ್ರವೇಶಿಸಬಹುದು.

ಹೊಸ ಜಿಡಿಪಿ ಸರಣಿಯಲ್ಲಿ ಪ್ರಮುಖ ಸುಧಾರಣೆಗಳು (ಮೂಲ ವರ್ಷ 2022-23)

 

ಬಹು-ಚಟುವಟಿಕೆಯ ಉದ್ಯಮಗಳಲ್ಲಿ ಚಟುವಟಿಕೆಗಳ ಪ್ರತ್ಯೇಕೀಕರಣ: ಬಹು-ಚಟುವಟಿಕೆಯ ಉದ್ಯಮಗಳಲ್ಲಿನ ಚಟುವಟಿಕೆಗಳನ್ನು ಪ್ರತ್ಯೇಕಿಸುವ ಮೂಲಕ ಖಾಸಗಿ ಕಾರ್ಪೊರೇಟ್ ಸಾಂಸ್ಥಿಕ ವಲಯದ ಸಂಕಲನದಲ್ಲಿ ಸುಧಾರಣೆ.

· ನೋಂದಾಯಿತವಲ್ಲದ ವಲಯದ ಸುಧಾರಿತ ವ್ಯಾಪ್ತಿ: ನಿಯಮಿತವಾಗಿ ಆರ್ಥಿಕ ಬದಲಾವಣೆಗಳನ್ನು ಪತ್ತೆಹಚ್ಚಲು ವಾರ್ಷಿಕ ಸಮೀಕ್ಷೆಯ ದತ್ತಾಂಶವನ್ನು ಬಳಸಿಕೊಂಡು ಅನೋಂದಾಯಿತವಲ್ಲದ ವಲಯದ ವ್ಯಾಪ್ತಿಯನ್ನು ಸುಧಾರಿಸಲಾಗಿದೆ.

· ಡಬಲ್ ಡಿಫ್ಲೇಷನ್ ಮತ್ತು ವಾಲ್ಯೂಮ್/ಸಿಂಗಲ್ ಎಕ್ಸ್ಟ್ರಾಪೋಲೇಷನ್ ಅಳವಡಿಕೆ: ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ 'ಡಬಲ್ ಡಿಫ್ಲೇಷನ್' (ದ್ವಿಮುಖ ಬೆಲೆ ಹೊಂದಾಣಿಕೆ) ಬಳಕೆ. ಉಳಿದ ವಲಯಗಳಲ್ಲಿ 'ವಾಲ್ಯೂಮ್/ಸಿಂಗಲ್ ಎಕ್ಸ್‌ಟ್ರಾಪೋಲೇಷನ್' (ಏಕಮುಖ ಪ್ರಮಾಣ ಆಧಾರಿತ ಅಂದಾಜಿಸುವಿಕೆ) ಬಳಕೆ.

· ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರ ಸರಣಿಗಾಗಿ ಸುಧಾರಿತ ಮಾನದಂಡ ವಿಧಾನ: ಹಿಂದಿನ ಸರಣಿಯಲ್ಲಿದ್ದ 'ಪ್ರೊ-ರೇಟಾ' ಮಾನದಂಡ ವಿಧಾನದ ಬದಲಿಗೆ 'ಪ್ರೊಪೋರ್ಶನಲ್ ಡೆಂಟನ್ ಬೆಂಚ್‌ಮಾರ್ಕಿಂಗ್' (ಸಮಾನಾಂತರ ಸುಧಾರಿತ ಹೊಂದಾಣಿಕೆ ವಿಧಾನ) ವಿಧಾನವನ್ನು ಅಳವಡಿಸಲಾಗಿದೆ.

· ಇತ್ತೀಚಿನ ಸಮೀಕ್ಷೆಗಳು ಮತ್ತು ಅಧ್ಯಯನಗಳಿಂದ ನವೀಕರಿಸಿದ ದರಗಳು ಮತ್ತು ಅನುಪಾತಗಳ ಸೇರ್ಪಡೆ: ವಿವಿಧ ಸಮೀಕ್ಷೆಗಳಿಂದ ಹಾಗೂ ವಿವಿಧ ತಜ್ಞ ಸಂಸ್ಥೆಗಳ ಸಹಯೋಗದೊಂದಿಗೆ ಸಚಿವಾಲಯವು ನಡೆಸಿದ ಕ್ರಮಬದ್ಧ ಅಧ್ಯಯನಗಳಿಂದ ನವೀಕರಿಸಿದ ದರಗಳು ಮತ್ತು ಅನುಪಾತಗಳನ್ನು ಪಡೆಯಲಾಗಿದೆ.

· ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರಗಳಿಗಾಗಿ ಜಿ ಎಸ್ಟಿ ಮತ್ತು ವಿವಿಧ ಹೊಸ ಆಡಳಿತಾತ್ಮಕ ದತ್ತಾಂಶ ಮೂಲಗಳ ವ್ಯಾಪಕ ಬಳಕೆ.

· ಖಾಸಗಿ ಅಂತಿಮ ಬಳಕೆ ವೆಚ್ಚದ ಸುಧಾರಿತ ಅಂದಾಜುಗಳು: ಉದ್ದೇಶಕ್ಕೆ ಅನುಗುಣವಾಗಿ ವೈಯಕ್ತಿಕ ಬಳಕೆಯ ವರ್ಗೀಕರಣ (COICOP) 2018 ರ ವರ್ಗೀಕರಣವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಸಮೀಕ್ಷೆ ಹಾಗೂ ವಿವಿಧ ಆಡಳಿತಾತ್ಮಕ ದತ್ತಾಂಶ ಮೂಲಗಳನ್ನು ಸಂಯೋಜಿಸುವ ಮೂಲಕ ಅಂದಾಜುಗಳನ್ನು ಸುಧಾರಿಸಲಾಗಿದೆ.

· ಪೂರೈಕೆ ಮತ್ತು ಬಳಕೆ ಕೋಷ್ಟಕದ (ಎಸ್ಯು ಟಿ) ಇಂಟಿಗ್ರೇಶನ್ ಮೂಲಕ ವ್ಯತ್ಯಾಸಗಳ ಕಡಿತ: ಪೂರೈಕೆ ಮತ್ತು ಬಳಕೆ ಕೋಷ್ಟಕದ ಚೌಕಟ್ಟಿನೊಂದಿಗೆ ಸಂಕಲನವನ್ನು ಸಂಯೋಜಿಸುವ ಮೂಲಕ ಉತ್ಪಾದನೆ ಮತ್ತು ವೆಚ್ಚದ ಕಡೆಯ ಅಂದಾಜುಗಳ ನಡುವೆ ಉತ್ತಮ ಸಮನ್ವಯ ಸಾಧಿಸಲಾಗಿದೆ.

ಹೊಸ ಜಿಡಿಪಿ ಸರಣಿಯ ಮುಖ್ಯಾಂಶಗಳು (ಮೂಲ ವರ್ಷ 2022-23)

· ಹಣಕಾಸು ವರ್ಷ 2025-26ರಲ್ಲಿ ನೈಜ ಜಿಡಿಪಿ ಶೇಕಡಾ 7.6 ರಷ್ಟು ಮತ್ತು ನಾಮಮಾತ್ರದ ಜಿಡಿಪಿ (ಪ್ರಸಕ್ತ ಬೆಲೆಗಳನ್ನು ಆಧರಿಸಿದ ಜಿಡಿಪಿ) ಶೇಕಡಾ 8.6 ರಷ್ಟು ಬೆಳವಣಿಗೆ ಸಾಧಿಸುವ ಅಂದಾಜಿದೆ. ಹಿಂದಿನ ಮೂಲ ವರ್ಷದ (2011-12) ಪ್ರಕಾರ ಮಾಡಲಾಗಿದ್ದ ಮೊದಲ ಮುಂಗಡ ಅಂದಾಜುಗಳಿಗಿಂತ ಈ ಬೆಳವಣಿಗೆಯ ದರಗಳನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ.

· ಹಣಕಾಸು ವರ್ಷ 2025-26ರ ಒಟ್ಟಾರೆ ಆರ್ಥಿಕ ಪ್ರದರ್ಶನವು ಮುಖ್ಯವಾಗಿ ಎರಡನೇ ತ್ರೈಮಾಸಿಕ (8.4%) ಮತ್ತು ಮೂರನೇ ತ್ರೈಮಾಸಿಕದಲ್ಲಿ (7.8%) ಕಂಡುಬಂದ ಸದೃಢ ನೈಜ ಬೆಳವಣಿಗೆಯಿಂದ ಕೂಡಿದೆ.

· ಆರ್ಥಿಕತೆಯು ಸುಸ್ಥಿರ ಪ್ರದರ್ಶನವನ್ನು ಪ್ರದರ್ಶಿಸಿದ್ದು, ಹಣಕಾಸು ವರ್ಷ 2023-24 ಮತ್ತು 2024-25ರಲ್ಲಿ ಕ್ರಮವಾಗಿ ಶೇಕಡಾ 7.2 ಮತ್ತು ಶೇಕಡಾ 7.1 ರಷ್ಟು ನೈಜ ಜಿಡಿಪಿ ಬೆಳವಣಿಗೆ ದಾಖಲಿಸಿದೆ.

· ನಾಮಮಾತ್ರದ ಜಿಡಿಪಿಯು ಹಣಕಾಸು ವರ್ಷ 2023-24 ಮತ್ತು 2024-25ರಲ್ಲಿ ಕ್ರಮವಾಗಿ 11.0% ಮತ್ತು 9.7% ಬೆಳವಣಿಗೆ ದರಗಳನ್ನು ದಾಖಲಿಸಿದೆ.

· ಮೂಲ ವರ್ಷದ ಪರಿಷ್ಕರಣೆಯ ನಂತರ ಸತತ 3 ಹಣಕಾಸು ವರ್ಷಗಳಲ್ಲಿ ಆರ್ಥಿಕತೆಯ ಚೇತೋಹಾರಿ ಪ್ರದರ್ಶನಕ್ಕೆ ತಯಾರಿಕಾ ವಲಯ ಪ್ರಮುಖ ಚಾಲಕಶಕ್ತಿಯಾಗಿದೆ. ಈ ವಲಯವು ಹಣಕಾಸು ವರ್ಷ 2023-24 ಮತ್ತು 2025-26ರಲ್ಲಿ ಎರಡಂಕಿಯ ಬೆಳವಣಿಗೆ ದರವನ್ನು ತಲುಪಿದೆ.

· ದ್ವಿತೀಯ ಮತ್ತು ತೃತೀಯ ವಲಯಗಳು ಹಣಕಾಸು ವರ್ಷ 2025-26ರಲ್ಲಿ ಶೇಕಡಾ 9.0 ಕ್ಕಿಂತ ಹೆಚ್ಚು ಬೆಳವಣಿಗೆ ದರವನ್ನು ದಾಖಲಿಸುವ ಮೂಲಕ ಆರ್ಥಿಕತೆಯ ಪ್ರದರ್ಶನವನ್ನು ಹೆಚ್ಚಿಸಿವೆ.

· 'ವ್ಯಾಪಾರ, ದುರಸ್ತಿ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು, ಸಂಗ್ರಹಣೆ' ವಲಯವು ಹಣಕಾಸು ವರ್ಷ 2025-26ರಲ್ಲಿ ಸ್ಥಿರ ಬೆಲೆಗಳಲ್ಲಿ 10.1% ಬೆಳವಣಿಗೆ ದರವನ್ನು ಸಾಧಿಸಿದೆ.

· ಬಳಕೆಯ ದೃಷ್ಟಿಕೋನದಿಂದ ನೋಡುವುದಾದರೆ, ಹಣಕಾಸು ವರ್ಷ 2025-26ರಲ್ಲಿ ಖಾಸಗಿ ಅಂತಿಮ ಬಳಕೆ ವೆಚ್ಚ (ಪಿ ಎಫ್‌ ಸಿ ಇ) ಮತ್ತು ಒಟ್ಟು ಸ್ಥಿರ ಬಂಡವಾಳ ರಚನೆ (GFCF) ಎರಡೂ ಶೇಕಡಾ 7.0 ಕ್ಕಿಂತ ಹೆಚ್ಚು ಬೆಳವಣಿಗೆ ದರವನ್ನು ಪ್ರದರ್ಶಿಸಿವೆ.

ಭಾಗ ಎ

2025-26 ವಾರ್ಷಿಕ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಎರಡನೇ ಮುಂಗಡ ಅಂದಾಜುಗಳ ಕುರಿತಾದ ಟಿಪ್ಪಣಿ

2022-23 ಮೊದಲ ತ್ರೈಮಾಸಿಕ (ಏಪ್ರಿಲ್-ಜೂನ್) ರಿಂದ 2025-26 ಮೂರನೇ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್) ವರೆಗಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ತ್ರೈಮಾಸಿಕ ಅಂದಾಜುಗಳು

ರಾಷ್ಟ್ರೀಯ ಲೆಕ್ಕಪತ್ರಗಳ ಮೂಲವರ್ಷವನ್ನು 2022-23ಕ್ಕೆ ಪರಿಷ್ಕರಿಸುವ ಹಿನ್ನೆಲೆಯಲ್ಲಿ, ತ್ರೈಮಾಸಿಕ ಜಿಡಿಪಿ ಅಂದಾಜುಗಳು ಮತ್ತು ವಿವಿಧ ಒಟ್ಟು ಮೊತ್ತಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಆಯಾ ವರ್ಷಗಳಲ್ಲಿ ಆರ್ಥಿಕತೆಯ ಪ್ರಗತಿಯನ್ನು ಪರಿಣಾಮಕಾರಿಯಾಗಿ ಸೆರೆಹಿಡಿಯಲು ಪರಿಷ್ಕೃತ ಸರಣಿಯು ಈ ಕೆಳಗಿನ ಪ್ರಮುಖ ಬದಲಾವಣೆಗಳನ್ನು ಒಳಗೊಂಡಿದೆ:

· ಅಂದಾಜು ಮಾಡುವ ವಿಧಾನದಲ್ಲಿ ಪರಿಷ್ಕರಣೆ

· ಹೊಸ 'ಹೈ ಫ್ರೀಕ್ವೆನ್ಸಿ ಇಂಡಿಕೇಟರ್‌ ಗಳ' (ಉನ್ನತ ಆವರ್ತನ ಸೂಚಕಗಳು) ಸೇರ್ಪಡೆ

· ಡಿಫ್ಲೇಷನ್ (ಬೆಲೆ ಇಳಿಕೆ ಹೊಂದಾಣಿಕೆ) ಕಾರ್ಯತಂತ್ರದಲ್ಲಿ ಸುಧಾರಣೆ

· ಅಂದಾಜು ಮಾಡುವಿಕೆಯ ಸೂಕ್ಷ್ಮತೆಯಲ್ಲಿ ಸುಧಾರಣೆ

ಮೂಲ ವರ್ಷ ಬದಲಾವಣೆ ಮಾಡಲಾದ ತ್ರೈಮಾಸಿಕ ಜಿಡಿಪಿ ಅಂದಾಜುಗಳ ಹೊರತಾಗಿ, ಪತ್ರಿಕಾ ಪ್ರಕಟಣೆಯ ಈ ಭಾಗವು ಮುಖ್ಯವಾಗಿ ಹಣಕಾಸು ವರ್ಷ 2025-26ರ ವಾರ್ಷಿಕ ಜಿಡಿಪಿಯ ಎರಡನೇ ಮುಂಗಡ ಅಂದಾಜುಗಳನ್ನು (SAE) ಮತ್ತು ಹಣಕಾಸು ವರ್ಷ 2025-26ರ Q3 (ಅಕ್ಟೋಬರ್-ಡಿಸೆಂಬರ್) ಅವಧಿಯ ತ್ರೈಮಾಸಿಕ ಜಿಡಿಪಿ ಅಂದಾಜುಗಳನ್ನು ಒಳಗೊಂಡಿದೆ. ಪತ್ರಿಕಾ ಪ್ರಕಟಣೆಯ ಭಾಗ ಎ  ನ ವಿವರವಾದ ರಚನೆಯು ಈ ಕೆಳಗಿನಂತಿದೆ.

    1. ವಾರ್ಷಿಕ ಜಿಡಿಪಿ ಅಂದಾಜುಗಳು ಮತ್ತು ಬೆಳವಣಿಗೆಯ ದರಗಳು
    2. ತ್ರೈಮಾಸಿಕ ಜಿಡಿಪಿ ಅಂದಾಜುಗಳು ಮತ್ತು ಬೆಳವಣಿಗೆಯ ದರಗಳು
    3. ವಿಧಾನ ಮತ್ತು ಪ್ರಮುಖ ದತ್ತಾಂಶ ಮೂಲಗಳು
    4. ವಿವರಣಾ ಪಟ್ಟಿಗಳು:

· ಸ್ಥಿರ ಮತ್ತು ಪ್ರಸಕ್ತ ಬೆಲೆಗಳಲ್ಲಿನ ಜಿಡಿಪಿಯ ಎರಡನೇ ಮುಂಗಡ ಅಂದಾಜುಗಳು, ವೆಚ್ಚದ ಘಟಕಗಳು ಮತ್ತು ರಾಷ್ಟ್ರೀಯ ಆದಾಯದೊಂದಿಗೆ (ಕೋಷ್ಟಕ 1ಎ ಮತ್ತು 2ಎ)

· ಸ್ಥಿರ ಮತ್ತು ಪ್ರಸಕ್ತ ಬೆಲೆಗಳಲ್ಲಿನ ಒಟ್ಟು ಮೌಲ್ಯವರ್ಧಿತ (ಜಿವಿಎ) ಎರಡನೇ ಮುಂಗಡ ಅಂದಾಜುಗಳು (ಕೋಷ್ಟಕ 3ಎ, 4ಎ)

· ಸ್ಥಿರ ಮತ್ತು ಪ್ರಸಕ್ತ ಬೆಲೆಗಳಲ್ಲಿನ ವೆಚ್ಚದ ಘಟಕಗಳೊಂದಿಗೆ ತ್ರೈಮಾಸಿಕ ಜಿಡಿಪಿ ಅಂದಾಜುಗಳು (ಕೋಷ್ಟಕ 5ಎ, 6ಎ, 7ಎ, 8ಎ)

· ಸ್ಥಿರ ಮತ್ತು ಪ್ರಸಕ್ತ ಬೆಲೆಗಳಲ್ಲಿನ ವೆಚ್ಚದ ಘಟಕಗಳೊಂದಿಗೆ ಏಪ್ರಿಲ್-ಡಿಸೆಂಬರ್ ಅವಧಿಯ ಜಿಡಿಪಿ ಅಂದಾಜುಗಳು (ಕೋಷ್ಟಕ 9ಎ, 10ಎ)

ಅನುಬಂಧಗಳು:

· ಸೂಚಕಗಳಲ್ಲಿನ ವರ್ಷದಿಂದ ವರ್ಷಕ್ಕೆ (Y-o-Y) ಬೆಳವಣಿಗೆಯ ದರಗಳು - ಅನುಬಂಧ ಎ1

· ತ್ರೈಮಾಸಿಕ ಜಿಡಿಪಿ ಅಂದಾಜುಗಳ ಹೊಸ ಸರಣಿಯಲ್ಲಿನ (ಉತ್ಪಾದನಾ ಹಂತ) ವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್ (ಬೆಲೆ ಇಳಿಕೆ ಹೊಂದಾಣಿಕೆ) ಕಾರ್ಯತಂತ್ರ - ಅನುಬಂಧ ಎ2

· ಹೊಸ ಜಿಡಿಪಿ ಸರಣಿಯ ತ್ರೈಮಾಸಿಕ ವೆಚ್ಚ-ಆಧಾರಿತ ಘಟಕಗಳಲ್ಲಿನ ವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್ ಕಾರ್ಯತಂತ್ರ - ಅನುಬಂಧ ಎ3

https://www.mospi.gov.in/themes/product/6-gross-domestic-product#latest-release

I. ವಾರ್ಷಿಕ ಜಿಡಿಪಿ ಅಂದಾಜುಗಳು ಮತ್ತು ಬೆಳವಣಿಗೆಯ ದರಗಳು

2025-26ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿಯು ₹322.58 ಲಕ್ಷ ಕೋಟಿ ಮಟ್ಟವನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ. 2024-25ನೇ ಸಾಲಿನ ಮೊದಲ ಪರಿಷ್ಕೃತ ಅಂದಾಜು (FRE) ₹299.89 ಲಕ್ಷ ಕೋಟಿಯಾಗಿದ್ದು, ಅದರ ವಿರುದ್ಧ ಈ ಅಂದಾಜು ಮಾಡಲಾಗಿದೆ. 2025-26ರ ಅವಧಿಯಲ್ಲಿ ನೈಜ ಜಿಡಿಪಿಯ ಬೆಳವಣಿಗೆ ದರವು ಶೇಕಡಾ 7.6 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದ್ದು, 2024-25ರಲ್ಲಿ ಇದು ಶೇಕಡಾ 7.1 ರಷ್ಟಿತ್ತು. 2025-26ನೇ ಸಾಲಿನಲ್ಲಿ ನಾಮಮಾತ್ರದ ಜಿಡಿಪಿಯು ₹345.47 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ. 2024-25ರಲ್ಲಿ ಇದು ₹318.07 ಲಕ್ಷ ಕೋಟಿಯಾಗಿದ್ದು, ಈ ಬಾರಿ ಶೇಕಡಾ 8.6 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ.

2025-26ನೇ ಸಾಲಿನಲ್ಲಿ ನೈಜ ಜಿವಿಎ ₹294.40 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಇದು ₹273.36 ಲಕ್ಷ ಕೋಟಿಯಾಗಿದ್ದು, ಶೇಕಡಾ 7.7 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ (2024-25ರಲ್ಲಿ ಬೆಳವಣಿಗೆ ದರವು 7.3% ರಷ್ಟಿತ್ತು). 2025-26ರ ಹಣಕಾಸು ವರ್ಷದಲ್ಲಿ ನಾಮಮಾತ್ರದ ಜಿವಿಎ ₹313.61 ಲಕ್ಷ ಕೋಟಿ ಮಟ್ಟವನ್ನು ತಲುಪುವ ಅಂದಾಜಿದೆ. 2024-25ರಲ್ಲಿ ₹288.54 ಲಕ್ಷ ಕೋಟಿಯಾಗಿದ್ದ ಜಿವಿಎಗೆ ಹೋಲಿಸಿದರೆ ಇದು ಶೇಕಡಾ 8.7 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.

ಚಿತ್ರ 1: ಸ್ಥಿರ ಬೆಲೆಗಳಲ್ಲಿ ವಾರ್ಷಿಕ ಜಿಡಿಪಿ ಮತ್ತು ಜಿವಿಎ ಅಂದಾಜುಗಳು ಹಾಗೂ ವರ್ಷದಿಂದ ವರ್ಷಕ್ಕೆ (Y-o-Y) ಬೆಳವಣಿಗೆಯ ದರಗಳು.

ಚಿತ್ರ 2: ವಾರ್ಷಿಕ ಜಿವಿಎ ವಲಯ ಸಂಯೋಜನೆ ಮತ್ತು ಬೆಳವಣಿಗೆಯ ದರಗಳು

2025-26ನೇ ಹಣಕಾಸು ವರ್ಷದಲ್ಲಿ ನಾಮಮಾತ್ರ ಜಿವಿಎ ವಲಯ ಸಂಯೋಜನೆ

ಚಿತ್ರ 3: ವಿಶಾಲ ವಲಯಗಳಲ್ಲಿ ವಾರ್ಷಿಕ ಜಿವಿಎ ಸಂಯೋಜನೆ ಮತ್ತು ಬೆಳವಣಿಗೆಯ ದರಗಳು

II. ತ್ರೈಮಾಸಿಕ ಅಂದಾಜುಗಳು ಮತ್ತು ಬೆಳವಣಿಗೆಯ ದರಗಳು

2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನೈಜ ಜಿಡಿಪಿಯು ₹84.54 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇದು ₹78.41 ಲಕ್ಷ ಕೋಟಿಯಾಗಿದ್ದು, ಈ ಬಾರಿ ಶೇಕಡಾ 7.8 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ. 2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಾಮಮಾತ್ರದ ಜಿಡಿಪಿಯು ₹90.91 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇದು ₹83.46 ಲಕ್ಷ ಕೋಟಿಯಾಗಿದ್ದು, ಈ ಬಾರಿ ಶೇಕಡಾ 8.9 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ.

2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನೈಜ ಜಿವಿಎ ₹77.38 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇದು ₹71.77 ಲಕ್ಷ ಕೋಟಿಯಾಗಿದ್ದು, ಶೇಕಡಾ 7.8 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ. 2025-26ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಾಮಮಾತ್ರದ ಜಿವಿಎ ₹82.58 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಇದು ₹76.35 ಲಕ್ಷ ಕೋಟಿಯಾಗಿದ್ದು, ಶೇಕಡಾ 8.2 ರಷ್ಟು ಬೆಳವಣಿಗೆಯ ದರವನ್ನು ತೋರಿಸುತ್ತದೆ.

ಚಿತ್ರ 4: ಸ್ಥಿರ ಬೆಲೆಗಳಲ್ಲಿ ತ್ರೈಮಾಸಿಕ ಜಿಡಿಪಿ ಮತ್ತು ಜಿವಿಎ ಅಂದಾಜುಗಳು ಹಾಗೂ ವರ್ಷದಿಂದ ವರ್ಷಕ್ಕೆ (Y-o-Y) ಬೆಳವಣಿಗೆಯ ದರಗಳು.

 

ಚಿತ್ರ 5: ತ್ರೈಮಾಸಿಕ ಜಿವಿಎ ಯ ವಲಯ ಸಂಯೋಜನೆ ಮತ್ತು ಬೆಳವಣಿಗೆಯ ದರಗಳು

2025-26 ರ ಹಣಕಾಸು ವರ್ಷದ ತ್ರೈಮಾಸಿಕ 3 ರಲ್ಲಿ ನಾಮಮಾತ್ರ ಜಿವಿಎ ಯ ವಲಯ ಸಂಯೋಜನೆ

*ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳ ವರ್ಗವು ಶಿಕ್ಷಣ, ಆರೋಗ್ಯ, ಮನರಂಜನೆ ಮತ್ತು ಇತರ ವೈಯಕ್ತಿಕ ಸೇವೆಗಳಂತಹ ಇತರ ಸೇವಾ ವಲಯವನ್ನು ಒಳಗೊಂಡಿದೆ

 

ಚಿತ್ರ 6: ವಿಶಾಲ ವಲಯಗಳಲ್ಲಿ ತ್ರೈಮಾಸಿಕ ಜಿವಿಎ ಯ ಸಂಯೋಜನೆ ಮತ್ತು ಬೆಳವಣಿಗೆಯ ದರಗಳು

[ಪ್ರಾಥಮಿಕ ವಲಯ: ಕೃಷಿ, ಜಾನುವಾರು, ಅರಣ್ಯ ಮತ್ತು ಮೀನುಗಾರಿಕೆ ಮತ್ತು ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ

ಮಾಧ್ಯಮಿಕ ವಲಯ: ಉತ್ಪಾದನೆ; ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳು ಮತ್ತು ನಿರ್ಮಾಣ

ತೃತೀಯ ವಲಯ: ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಪ್ರಸಾರ, ಸಂಗ್ರಹಣೆಗೆ ಸಂಬಂಧಿಸಿದ ಸೇವೆಗಳು; ಹಣಕಾಸು, ರಿಯಲ್ ಎಸ್ಟೇಟ್, ಐಟಿ ಮತ್ತು ವೃತ್ತಿಪರ ಸೇವೆಗಳು, ವಸತಿ ಮತ್ತು ಸಾರ್ವಜನಿಕ ಆಡಳಿತ, ರಕ್ಷಣಾ ಮತ್ತು ಇತರ ಸೇವೆಗಳ ಮಾಲೀಕತ್ವ]

 

III. ವಿಧಾನ ಮತ್ತು ಪ್ರಮುಖ ದತ್ತಾಂಶ ಮೂಲಗಳು:

ವಾರ್ಷಿಕ ಜಿಡಿಪಿಯ ಎರಡನೇ ಮುಂಗಡ ಅಂದಾಜುಗಳು ಮತ್ತು ತ್ರೈಮಾಸಿಕ ಜಿಡಿಪಿ ಅಂದಾಜುಗಳ ಸಂಕಲನವು 'ಬೆಂಚ್‌ಮಾರ್ಕ್-ಸೂಚಕ' ವಿಧಾನವನ್ನು ಆಧರಿಸಿದೆ. ಇದರಲ್ಲಿ ಹಿಂದಿನ ಹಣಕಾಸು ವರ್ಷಕ್ಕೆ ಲೆಕ್ಕಹಾಕಿದ ಅಂದಾಜುಗಳನ್ನು, ವಿವಿಧ ಆರ್ಥಿಕ ಮತ್ತು ಸಾಂಸ್ಥಿಕ ವಲಯಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ಸಂಬಂಧಿತ ಸೂಚಕಗಳನ್ನು ಬಳಸಿಕೊಂಡು ವಿಸ್ತರಿಸಲಾಗುತ್ತದೆ. ತ್ರೈಮಾಸಿಕ ಜಿಡಿಪಿ ಅಂದಾಜುಗಳು ಪ್ರಮುಖವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ, 2017ರ 'ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರಗಳ ಕೈಪಿಡಿ'ಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಅನುಸರಿಸುತ್ತವೆ. ಹೊಸ ಮೂಲವರ್ಷವನ್ನು (2022-23) ಆಧರಿಸಿದ ಈ ಅಂದಾಜುಗಳು ವಿವಿಧ ಕ್ರಮಬದ್ಧ ಬದಲಾವಣೆಗಳು, ಹೊಸ ದತ್ತಾಂಶ ಮೂಲಗಳು ಇತ್ಯಾದಿಗಳನ್ನು ಒಳಗೊಂಡಿವೆ. ಅದರಂತೆ, ಹಣಕಾಸು ವರ್ಷ 2022-23ರ ಮೊದಲ ತ್ರೈಮಾಸಿಕದಿಂದ ಆರಂಭವಾಗುವ ತ್ರೈಮಾಸಿಕ ಅಂದಾಜುಗಳ ಸರಣಿಯು ಈ ಹಿಂದೆ ಪ್ರಕಟಿಸಲಾದ ಮೌಲ್ಯಗಳಿಗೆ ಹೋಲಿಸಿದರೆ ಬದಲಾವಣೆಯನ್ನು ಕಂಡಿದೆ; ಇದರ ಪರಿಣಾಮವಾಗಿ ಬೆಳವಣಿಗೆಯ ದರಗಳಲ್ಲಿನ ಬದಲಾವಣೆಗಳು ಹಣಕಾಸು ವರ್ಷ 2023-24ರ ಮೊದಲ ತ್ರೈಮಾಸಿಕದಿಂದ ಪ್ರತಿಫಲಿಸುತ್ತವೆ. ಉತ್ಪಾದನಾ ಹಂತದಿಂದ ಜಿಡಿಪಿ ಅಂದಾಜುಗಳ ಹೊಸ ಸರಣಿಯಲ್ಲಿನ ಪರಿಷ್ಕೃತ ವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್ (ಬೆಲೆ ಇಳಿಕೆ ಹೊಂದಾಣಿಕೆ) ಕಾರ್ಯತಂತ್ರದ ಸಂಕ್ಷಿಪ್ತ ವಿವರವನ್ನು ಅನುಬಂಧ 2 ರಲ್ಲಿ ಉಲ್ಲೇಖಿಸಲಾಗಿದೆ.

ತ್ರೈಮಾಸಿಕ ಮಟ್ಟದಲ್ಲಿ ಜಿಡಿಪಿಯ ವೆಚ್ಚದ ಘಟಕಗಳು ಸಹ ಅಂದಾಜು ಮಾಡುವ ವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್ ಕಾರ್ಯತಂತ್ರದಲ್ಲಿ ಬದಲಾವಣೆಗೆ ಒಳಪಟ್ಟಿವೆ, ಇವುಗಳನ್ನು ಅನುಬಂಧ 3 ರಲ್ಲಿ ಪ್ರಸ್ತುತಪಡಿಸಲಾಗಿದೆ.

ಸಚಿವಾಲಯದ ಮುಂಗಡ ಬಿಡುಗಡೆ ವೇಳಾಪಟ್ಟಿಯ ಪ್ರಕಾರ, ಹಣಕಾಸು ವರ್ಷ 2025-26ರ ವಾರ್ಷಿಕ ಜಿಡಿಪಿಯ ತಾತ್ಕಾಲಿಕ ಅಂದಾಜುಗಳು ಮತ್ತು 2025-26ರ ಜನವರಿ-ಮಾರ್ಚ್ ಅವಧಿಯ (4ನೇ ತ್ರೈಮಾಸಿಕ, 2025-26) ತ್ರೈಮಾಸಿಕ ಜಿಡಿಪಿ ಅಂದಾಜುಗಳನ್ನು 29.05.2026 ರಂದು ಬಿಡುಗಡೆ ಮಾಡಲಾಗುವುದು.

IV ಸ್ಟೇಟ್‌ಮೆಂಟ್‌ ಗಳು (ಭಾಗ ಎ)

ಅನುಬಂಧ ಎ1

ಸೂಚಕಗಳಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ದರ (%)

ಸೂಚಕಗಳು

Q1 (%)

Q2 (%)

Q3 (%)

ಸಿಮೆಂಟ್ ಉತ್ಪಾದನಾ ಸೂಚ್ಯಂಕ

8.0

7.3

11.2

ಸಿದ್ಧಪಡಿಸಿದ ಉಕ್ಕಿನ ಬಳಕೆ

7.9

8.8

3.9

ಐಐಪಿ ಮೂಲಸೌಕರ್ಯ/ನಿರ್ಮಾಣ ಸರಕುಗಳು

6.0

11.6

10.7

ಐಐಪಿ ವಿದ್ಯುಚ್ಛಕ್ತಿ

-1.5

3.7

-0.9

ನೈಸರ್ಗಿಕ ಅನಿಲ ಬಳಕೆ

-8.7

-0.9

0.6

ವಾಣಿಜ್ಯ ವಾಹನಗಳ ಮಾರಾಟ

-0.6

8.6

21.5

ತ್ರಿಚಕ್ರ ವಾಹನಗಳ ಮಾರಾಟ

0.1

9.8

14.0

ಪ್ರಮುಖ ಬಂದರುಗಳಲ್ಲಿ ನಿರ್ವಹಿಸಲಾದ ಸರಕು

5.6

5.9

13.2

ಸಣ್ಣ ಬಂದರುಗಳಲ್ಲಿ ನಿರ್ವಹಿಸಲಾದ ಸರಕು

-0.4

3.5

0.8

ವೈಮಾನಿಕ ಪ್ರಯಾಣಿಕರ ಸಂಚಾರ ಮತ್ತು ಸರಕು (ದೇಶೀಯ)

6.7

-0.2

4.2

ವೈಮಾನಿಕ ಪ್ರಯಾಣಿಕರ ಸಂಚಾರ ಮತ್ತು ಸರಕು (ಅಂತರರಾಷ್ಟ್ರೀಯ)

8.4

3.7

14.9

ರೈಲ್ವೆ ನಿವ್ವಳ ಟನ್ ಕಿಮೀ

0.7

2.3

0.6

ರೈಲ್ವೆ ಪ್ರಯಾಣಿಕರ ಕಿಮೀ

3.0

1.2

13.0

ಕೇಂದ್ರ ಸರಕು ಮತ್ತು ಸೇವಾ ತೆರಿಗೆ

1.5

10.4

5.1

ಕಸ್ಟಮ್ಸ್ ಸುಂಕ

-9.9

-1.8

54.9

ಕೇಂದ್ರ ಅಬಕಾರಿ ಸುಂಕ

8.3

8.0

13.1

ಮನೆಬಳಕೆಯ ವಾಹನಗಳ ನೋಂದಣಿ

5.2

1.8

19.8

ಪ್ರಯಾಣಿಕ ಸಾರಿಗೆ ವಾಹನಗಳ ನೋಂದಣಿ

8.0

-1.2

20.9

ಸರಕು ಸಾಗಣೆ ವಾಹನಗಳ ನೋಂದಣಿ

2.6

4.9

24.1

ಐಐಪಿ (ಇತರ ಸಾರಿಗೆ ಉಪಕರಣಗಳ ತಯಾರಿಕೆ)

2.1

9.5

14.2

ಐಐಪಿ ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳ ತಯಾರಿಕೆ

1.3

4.4

19.4

ಐಐಪಿ ವಿದ್ಯುತ್ ಉಪಕರಣಗಳ ತಯಾರಿಕೆ

8.5

18.1

1.5

ಐಐಪಿ ಯಂತ್ರೋಪಕರಣಗಳು ಮತ್ತು ಉಪಕರಣಗಳ ತಯಾರಿಕೆ

8.4

3.1

5.1

ಸಾರಿಗೆ ಸರಕುಗಳ ಆಮದು

-22.5

5.9

4.1

ಯಂತ್ರೋಪಕರಣಗಳ ಆಮದು

16.6

14.0

21.8

 

ಅನುಬಂಧ ಎ2

ತ್ರೈಮಾಸಿಕ ಜಿಡಿಪಿ ಅಂದಾಜುಗಳ ಹೊಸ ಸರಣಿಯಲ್ಲಿ (ಉತ್ಪಾದನಾ ಭಾಗ) ವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್ (ಬೆಲೆ ಇಳಿಕೆ ಹೊಂದಾಣಿಕೆ) ತಂತ್ರ

ವಲಯ

ಪ್ರಮುಖ ದತ್ತಾಂಶ ಮೂಲಗಳು

ಡಿಫ್ಲೇಷನ್ (ಬೆಲೆ ಇಳಿಕೆ ಹೊಂದಾಣಿಕೆ) ಕಾರ್ಯತಂತ್ರ

ವಿಧಾನದಲ್ಲಿನ ಪರಿಷ್ಕರಣೆ

ಕೃಷಿ ಮತ್ತು ಸಂಬಂಧಿತ ವಲಯ

ಹೊಸ ಸರಣಿಯಲ್ಲಿ ಸೇರಿಸಲಾದ ಹೆಚ್ಚುವರಿ ಬೆಳೆಗಳೂ ಸೇರಿದಂತೆ ವಿವಿಧ ಬೆಳೆಗಳ ತ್ರೈಮಾಸಿಕ ಅಂದಾಜುಗಳು


ಪ್ರಮುಖ ಜಾನುವಾರು ಉತ್ಪನ್ನಗಳ ಋತುಮಾನವಾರು ಅಂದಾಜುಗಳು


ಒಳನಾಡು ಮತ್ತು ಸಮುದ್ರ ಮೀನುಗಾರಿಕೆಯ ತ್ರೈಮಾಸಿಕ ಅಂದಾಜುಗಳು

ಪ್ರತಿಯೊಂದು ಉಪ-ವಲಯಕ್ಕೆ ತಳಮಟ್ಟದಲ್ಲಿ 'ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್' (ಪ್ರಮಾಣ ಆಧಾರಿತ ಅಂದಾಜಿಸುವಿಕೆ)

ಬೆಂಚ್ಮಾರ್ಕಿಂಗ್ ವಿಧಾನದಲ್ಲಿ ಬದಲಾವಣೆ: ಹಳೆಯ ಸರಣಿಯಲ್ಲಿದ್ದ 'ಪ್ರೊ-ರಾಟಾ' ವಿಧಾನದ ಬದಲಿಗೆ ಹೊಸ ಸರಣಿಯಲ್ಲಿ 'ಪ್ರೊಪೋರ್ಶನಲ್ ಡೆಂಟನ್' ವಿಧಾನದ ಬಳಕೆ.

ತ್ರೈಮಾಸಿಕ ವಿಭಜನಾ ಮಾದರಿಯ ಪರಿಷ್ಕರಣೆ: 2022-23ನೇ ಸಾಲಿನ ವಲಯ ಅಥವಾ ಉಪ-ವಲಯಕ್ಕೆ ನಿರ್ದಿಷ್ಟವಾದ ಸೂಚಕಗಳ ಆಧಾರದ ಮೇಲೆ ಪರಿಷ್ಕರಣೆ.

ತ್ರೈಮಾಸಿಕ ಅಂದಾಜು ವಿಧಾನದ ಪರಿಷ್ಕರಣೆ: ಉತ್ಪಾದನೆ, ಹಣಕಾಸು ಸೇವೆಗಳು, ಸಾರ್ವಜನಿಕ ಆಡಳಿತ ಮತ್ತು ರಕ್ಷಣೆ ಮುಂತಾದ ವಿವಿಧ ವಲಯಗಳಲ್ಲಿ ಪರಿಷ್ಕರಣೆ.
 

ಡಿಫ್ಲೇಷನ್ ಕಾರ್ಯತಂತ್ರದ ಪರಿಷ್ಕರಣೆ: ಉತ್ಪಾದನಾ ವಲಯವನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳಿಗೆ 'ಸಿಂಗಲ್/ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್'ಗೆ ಬದಲಾವಣೆ. ಉತ್ಪಾದನಾ ವಲಯಕ್ಕೆ ಮಾತ್ರ 'ಡಬಲ್ ಡಿಫ್ಲೇಷನ್' ವಿಧಾನದ ಅನ್ವಯ.

ಸೂಕ್ಷ್ಮತೆ ಮತ್ತು ವ್ಯಾಪ್ತಿಯ ಸುಧಾರಣೆ: ಅಂದಾಜು ಮಾಡುವಿಕೆಯ ದಾನೀಕರಣ (Granularity) ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.

ಗಣಿಗಾರಿಕೆ ಮತ್ತು ಕ್ವಾರಿ

ಐಟಂ ಮಟ್ಟದ ಐಐಪಿಗಳು

ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್

 

ತಯಾರಿಕಾ ವಲಯ

ಪಟ್ಟಿ ಮಾಡಲಾದ ಉತ್ಪಾದನಾ ಕಂಪನಿಗಳ ತ್ರೈಮಾಸಿಕ ಹಣಕಾಸು ಫಲಿತಾಂಶಗಳು


 

ವ್ಯವಹಾರದ ಸ್ವರೂಪದ ಆಧಾರಿತ ಜಿ ಎಸ್‌ ಟಿ ದತ್ತಾಂಶ

ಡಬಲ್ ಡಿಫ್ಲೇಷನ್

ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳು

ಐಐಪಿ ವಿದ್ಯುಚ್ಛಕ್ತಿ
 

ನೈಸರ್ಗಿಕ ಅನಿಲ ಬಳಕೆ


ವ್ಯವಹಾರದ ಸ್ವರೂಪದೊಂದಿಗೆ ಎಸ್‌ ಎ ಸಿ ವಾರು ಜಿ ಎಸ್‌ ಟಿ ದತ್ತಾಂಶ

ವಿದ್ಯುತ್ ಮತ್ತು ಅನಿಲಕ್ಕೆ 'ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್'. ನೀರು ಸರಬರಾಜು ಮತ್ತು ಇತರ ಸೇವೆಗಳಿಗೆ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್'.

ನಿರ್ಮಾಣ ವಲಯ

ಸಿಮೆಂಟ್ ಉತ್ಪಾದನಾ ಸೂಚ್ಯಂಕ
 

ಸಿದ್ಧಪಡಿಸಿದ ಉಕ್ಕಿನ ಬಳಕೆ
 

ಐಟಂ ಮಟ್ಟದ ಐಐಪಿಗಳು


ಐಐಪಿ ಮೂಲಸೌಕರ್ಯ ಮತ್ತು ನಿರ್ಮಾಣ ಸರಕುಗಳು

ವಿವಿಧ ಪರಿಕರಗಳ ಮೇಲೆ ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್

ವ್ಯಾಪಾರ, ದುರಸ್ತಿ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು, ಸಂಗ್ರಹಣೆ

ಪಟ್ಟಿ ಮಾಡಲಾದ ಕಂಪನಿಗಳ ತ್ರೈಮಾಸಿಕ ಹಣಕಾಸು ಫಲಿತಾಂಶಗಳು


ಜಿ ಎಸ್‌ ಟಿ ದತ್ತಾಂಶ


ವಾಣಿಜ್ಯ ಮತ್ತು ತ್ರಿಚಕ್ರ ವಾಹನಗಳ ಮಾರಾಟ


ಬಂದರುಗಳಲ್ಲಿನ ಸರಕು ನಿರ್ವಹಣೆ


ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸಂಚಾರ ಅಂಕಿಅಂಶಗಳು


ರೈಲ್ವೆ ನೆಟ್‌ ಟನ್‌ ಮತ್ತು ಪ್ರಯಾಣಿಕರ ಕಿಮೀ. ಮಾಹಿತಿ


ದೂರಸಂಪರ್ಕದ ಡೇಟಾ ಬಳಕೆ ಮತ್ತು ಚಂದಾದಾರರ ವಿವರಗಳು

ವ್ಯಾಪಾರ, ಹೋಟೆಲ್, ಸಂಗ್ರಹಣೆ ಮತ್ತು ಪ್ರಸಾರ ಸೇವೆಗಳಿಗೆ ಸಾಂಸ್ಥಿಕ ಮತ್ತು ಆರ್ಥಿಕ ಉಪ-ವಲಯ ಮಟ್ಟದಲ್ಲಿ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್'. ಸಾರಿಗೆ ಮತ್ತು ಸಂವಹನಕ್ಕೆ 'ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್'.

 

ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು

ಬ್ಯಾಂಕುಗಳ ಸಾಲ, ಠೇವಣಿ ಮತ್ತು ಬಡ್ಡಿಯ ಮಾಹಿತಿ


ಆರ್‌ ಬಿ ನೌಕರರ ಪರಿಹಾರ


ಎನ್‌ ಬಿ ಎಫ್‌ ಸಿ ಗಳ ಮಾಹಿತಿ


ವಿಮಾ ಕಂಪನಿಗಳ ಹಣಕಾಸು ಫಲಿತಾಂಶಗಳು

ಹಣಕಾಸು ಸೇವೆಗಳಿಗೆ ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್. ರಿಯಲ್ ಎಸ್ಟೇಟ್, ಐಟಿ ಮತ್ತು ವೃತ್ತಿಪರ ಸೇವೆಗಳಿಗೆ ಸಾಂಸ್ಥಿಕ ಮಟ್ಟದಲ್ಲಿ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್'.

 

ಸಾರ್ವಜನಿಕ ಆಡಳಿತ ಮತ್ತು ಇತರ ಸೇವೆಗಳು

ರಾಜ್ಯ ಸರ್ಕಾರಗಳ ವೇತನ ಮತ್ತು ಸಂಬಳದ ಮಾಹಿತಿ


 

ಕೇಂದ್ರ ಸರ್ಕಾರದ ನೌಕರರ ಪರಿಹಾರದ ಮಾಹಿತಿ (PFMS ಮೂಲಕ)


ಎಸ್‌ಎಸಿ ವಾರು ಜಿಎಸ್‌ಟಿ ದತ್ತಾಂಶ

ಸಾಂಸ್ಥಿಕ ಮತ್ತು ಆರ್ಥಿಕ ಉಪ-ವಲಯ ಮಟ್ಟದಲ್ಲಿ ಸಿಂಗಲ್ ಎಕ್ಸ್‌ಟ್ರಾಪೋಲೇಷನ್

ತೆರಿಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಿಎಸ್‌ಟಿ ಸಂಗ್ರಹ ಮತ್ತು ಇತರ ತೆರಿಗೆ ಘಟಕಗಳು

ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್

 

ಸಬ್ಸಿಡಿ

ಕೇಂದ್ರ ಮತ್ತು ರಾಜ್ಯಗಳ ಉತ್ಪನ್ನ ಸಬ್ಸಿಡಿ ದತ್ತಾಂಶ

ವಿವಿಧ ಸಬ್ಸಿಡಿ ಘಟಕಗಳಿಗೆ 'ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್' ಮತ್ತು 'ಸಿಂಗಲ್ ಡಿಫ್ಲೇಷನ್'

 

ಅನುಬಂಧ 3

ಹೊಸ ಜಿಡಿಪಿ ಸರಣಿಯ ವೆಚ್ಚದ ಹಂತದ ಘಟಕಗಳಿಗೆ ಸಂಬಂಧಿಸಿದ ವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್ ಕಾರ್ಯತಂತ್ರ

ವೆಚ್ಚದ ಘಟಕಗಳು

ಪ್ರಮುಖ ದತ್ತಾಂಶ ಮೂಲಗಳು

ಡಿಫ್ಲೇಷನ್ (ಬೆಲೆ ಇಳಿಕೆ ಹೊಂದಾಣಿಕೆ) ಕಾರ್ಯತಂತ್ರ

ವಿಧಾನದಲ್ಲಿನ ಪರಿಷ್ಕರಣೆ

ಖಾಸಗಿ ಅಂತಿಮ ಬಳಕೆ ವೆಚ್ಚ (PFCE)

ತ್ರೈಮಾಸಿಕ ವಿಭಜನೆಗಾಗಿ ಕುಟುಂಬ ಬಳಕೆಯ ವೆಚ್ಚ ಸಮೀಕ್ಷೆ


PFCE ಗೆ ಸಂಬಂಧಿಸಿದ ವಿವಿಧ ವಲಯಗಳ ಒಟ್ಟು ಉತ್ಪಾದನಾ ಮೌಲ್ಯ


ವಿವಿಧ ಸೇವಾ ಅಂಶಗಳ ಆಮದು ಮತ್ತು ರಫ್ತು ದತ್ತಾಂಶ

 

ಇ-ವಾಹನ (e-VAHAN) ಪೋರ್ಟಲ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ವಾಹನ ವರ್ಗ ಮತ್ತು ಶ್ರೇಣಿವಾರು ನೋಂದಣಿ ಮತ್ತು ಮಾರಾಟದ ಮೌಲ್ಯ


 

ಐಟಂ ಮಟ್ಟದ ಐಐಪಿಗಳು


ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿ ಮತ್ತು ಗೋಧಿಯ ವಿತರಣಾ ಮಾಹಿತಿ

ಪ್ರತಿಯೊಂದು ವಸ್ತುವಿಗೆ ತಳಮಟ್ಟದಲ್ಲಿ 'ಎಕ್ಸ್‌ಟ್ರಾಪೋಲೇಷನ್' ಅಥವಾ 'ಡಿಫ್ಲೇಷನ್'. ಡಿಫ್ಲೇಷನ್‌ಗಾಗಿ ವಸ್ತು-ವಾರು ಸಂಬಂಧಿತ ಗ್ರಾಹಕ ಬೆಲೆ ಸೂಚ್ಯಂಕಗಳ ಬಳಕೆ.

ಬೆಂಚ್ಮಾರ್ಕಿಂಗ್ ವಿಧಾನದಲ್ಲಿ ಬದಲಾವಣೆ: ಹಳೆಯ ಸರಣಿಯಲ್ಲಿದ್ದ 'ಪ್ರೊ-ರಾಟಾ' ವಿಧಾನದ ಬದಲಿಗೆ ಹೊಸ ಸರಣಿಯಲ್ಲಿ 'ಪ್ರೊಪೋರ್ಶನಲ್ ಡೆಂಟನ್' ವಿಧಾನದ ಬಳಕೆ.

 

ತ್ರೈಮಾಸಿಕ ವಿಭಜನಾ ಮಾದರಿಯ ಪರಿಷ್ಕರಣೆ: ವಿವಿಧ ಘಟಕಗಳಿಗಾಗಿ ಹೊಸ ದತ್ತಾಂಶ ಮೂಲಗಳ ಆಧಾರದ ಮೇಲೆ ಪರಿಷ್ಕರಣೆ. ಮುಖ್ಯವಾಗಿ HCES ದತ್ತಾಂಶದ ಪ್ರಕಾರ PFCE ವಿಭಜನಾ ಕಾರ್ಯತಂತ್ರದಲ್ಲಿ ಬದಲಾವಣೆಯಾಗಿದೆ.
 

ಡಿಫ್ಲೇಷನ್ ಕಾರ್ಯತಂತ್ರದ ಪರಿಷ್ಕರಣೆ: ಐಟಂ ಮಟ್ಟದ WPI ಮತ್ತು CPI, ಪ್ರಮುಖ ಸರಕು-ವಾರು ಯೂನಿಟ್ ವ್ಯಾಲ್ಯೂ ಇಂಡೆಕ್ಸ್ (UVI), CPI (IW) ಇತ್ಯಾದಿಗಳ ಬಳಕೆ.



 

ಅಂದಾಜು ಮತ್ತು ವ್ಯಾಪ್ತಿಯ ಸುಧಾರಣೆ: ಅಂದಾಜು ಮಾಡುವಿಕೆಯ ಸೂಕ್ಷ್ಮತೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.

ಸರ್ಕಾರಿ ಅಂತಿಮ ಬಳಕೆ ವೆಚ್ಚ (GFCE)

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೇತನ ಮತ್ತು ಸಂಬಳದ ಮಾಹಿತಿ


 

ಆಹಾರ ಸಬ್ಸಿಡಿ ಮಾಹಿತಿ


 

ಭಾರತೀಯ ಆಹಾರ ನಿಗಮದ ಖರೀದಿ ಮಾಹಿತಿ

ನೌಕರರ ಪರಿಹಾರಕ್ಕಾಗಿ 'ಡಿಫ್ಲೇಷನ್' ಮತ್ತು ಆಹಾರ ಸಬ್ಸಿಡಿಗಾಗಿ 'ವಾಲ್ಯೂಮ್ ಎಕ್ಸ್‌ಟ್ರಾಪೋಲೇಷನ್'.

 

ಒಟ್ಟು ಸ್ಥಿರ ಬಂಡವಾಳ ರಚನೆ (GFCF)

ಐಟಂ ಮಟ್ಟದ ಐಐಪಿಗಳು ಮತ್ತು ಎನ್ ಸಿ 2-ಅಂಕಿ ಮಟ್ಟದ ಐಐಪಿ


ವಿವಿಧ ಆಸ್ತಿಗಳ ಆಮದು ಮತ್ತು ರಫ್ತು

ಸಂಬಂಧಿತ WPI ಅಥವಾ CPI ಬಳಸಿ ಆಸ್ತಿ ವರ್ಗದ ಮಟ್ಟದಲ್ಲಿ 'ಡಿಫ್ಲೇಷನ್'.

 

ದಾಸ್ತಾನುಗಳಲ್ಲಿನ ಬದಲಾವಣೆ (CIS)

ವಿವಿಧ ಕೈಗಾರಿಕೆಗಳ (ಉತ್ಪಾದನೆ - ಮಧ್ಯಂತರ ಬಳಕೆ - PFCE) ಬೆಳವಣಿಗೆಯನ್ನು ಗಮನಿಸಲಾಗುತ್ತದೆ.

-

 

ಅಮೂಲ್ಯ ವಸ್ತುಗಳು

ಚಿನ್ನ, ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳ ಆಮದು ಮತ್ತು ರಫ್ತು.

ಸಂಬಂಧಿತ ವಸ್ತುಗಳನ್ನು ಬಳಸಿ ಅಮೂಲ್ಯ ವಸ್ತುಗಳಿಗಾಗಿ 'CPI' ಲೆಕ್ಕಹಾಕುವ ಮೂಲಕ 'ಡಿಫ್ಲೇಷನ್'.

 

ರಫ್ತು

ಪ್ರಮುಖ ಸರಕು-ವಾರು ರಫ್ತು ಮತ್ತು ಯೂನಿಟ್ ವ್ಯಾಲ್ಯೂ ಇಂಡೆಕ್ಸ್ (UVI)

ಸರಕುಗಳು: ಪ್ರಮುಖ ಸರಕುಗಳಾದ್ಯಂತ UVI ಬಳಸಿ ಡಿಫ್ಲೇಷನ್.


 

ಸೇವೆಗಳು: ಸಂಬಂಧಿತ ಸೇವಾ ವಲಯಗಳ IPD ಬಳಕೆ.

 

ಆಮದು

ಪ್ರಮುಖ ಸರಕು-ವಾರು ಆಮದು ಮತ್ತು ಯೂನಿಟ್ ವ್ಯಾಲ್ಯೂ ಇಂಡೆಕ್ಸ್ (UVI)


ಭಾರತಕ್ಕೆ ಆಮದು ಮಾಡುವ ಪ್ರಮುಖ ದೇಶಗಳ ಪಿಪಿಐ (PPI) ಮತ್ತು ವಿನಿಮಯ ದರ

ಸರಕುಗಳು: ಪ್ರಮುಖ ಸರಕುಗಳ ಮಟ್ಟದಲ್ಲಿ UVI ಬಳಸಿ ಡಿಫ್ಲೇಷನ್.


 

ಸೇವೆಗಳು: ಪ್ರಮುಖ ಆಮದು ದೇಶಗಳ PPI ಆಧಾರಿತ ಡಿಫ್ಲೇಷನ್.

 

ಭಾಗ ಬಿ

2022-23, 2023-24 ಮತ್ತು 2024-25ನೇ ಸಾಲಿನ ಒಟ್ಟು ಆಂತರಿಕ ಉತ್ಪನ್ನ, ರಾಷ್ಟ್ರೀಯ ಆದಾಯ, ಬಳಕೆ ವೆಚ್ಚ, ಉಳಿತಾಯ ಮತ್ತು ಬಂಡವಾಳ ರಚನೆಯ ಪರಿಷ್ಕೃತ ಅಂದಾಜುಗಳ ಕುರಿತಾದ ಟಿಪ್ಪಣಿ

ಪತ್ರಿಕಾ ಪ್ರಕಟಣೆಯ ಈ ಭಾಗದಲ್ಲಿ, ಹೊಸ ಆಧಾರ ವರ್ಷದ (2022-23) ಪ್ರಕಾರ ಹಣಕಾಸು ವರ್ಷ 2024-25ರ ರಾಷ್ಟ್ರೀಯ ಆದಾಯ, ಬಳಕೆ ವೆಚ್ಚ, ಉಳಿತಾಯ ಮತ್ತು ಬಂಡವಾಳ ರಚನೆಯ ಮೊದಲ ಪರಿಷ್ಕೃತ ಅಂದಾಜುಗಳನ್ನು ಹಾಗೂ ಹಣಕಾಸು ವರ್ಷ 2023-24 ಮತ್ತು 2022-23ರ ಅಂದಾಜುಗಳನ್ನು ನೀಡಲಾಗಿದೆ.

2024-25ನೇ ವರ್ಷದ ಮೊದಲ ಪರಿಷ್ಕೃತ ಅಂದಾಜುಗಳನ್ನು, 30 ಮೇ 2025 ರಂದು ತಾತ್ಕಾಲಿಕ ಅಂದಾಜುಗಳ ಬಿಡುಗಡೆಯ ಸಮಯದಲ್ಲಿ ಬಳಸಲಾಗಿದ್ದ 'ಬೆಂಚ್‌ಮಾರ್ಕ್-ಸೂಚಕ' ವಿಧಾನದ ಬದಲಿಗೆ, ಉದ್ಯಮವಾರು/ಸಂಸ್ಥೆವಾರು ವಿವರವಾದ ಮಾಹಿತಿಯನ್ನು ಬಳಸಿಕೊಂಡು ಸಂಕಲಿಸಲಾಗಿದೆ. ಆಧಾರ ವರ್ಷದ ಪರಿಷ್ಕರಣೆ ಹಾಗೂ ಲಭ್ಯವಿರುವ ಇತ್ತೀಚಿನ ದತ್ತಾಂಶಗಳ ಬಳಕೆಯಿಂದಾಗಿ 2022-23 ಮತ್ತು 2023-24ನೇ ಸಾಲಿನ ಒಟ್ಟು ಆಂತರಿಕ ಉತ್ಪನ್ನ (GDP) ಮತ್ತು ಇತರ ಒಟ್ಟು ಮೊತ್ತದ ಅಂದಾಜುಗಳು ಸಹ ಪರಿಷ್ಕರಣೆಗೆ ಒಳಪಟ್ಟಿವೆ. ಇವುಗಳಲ್ಲಿ ಕೃಷಿ ಉತ್ಪಾದನೆ; ಕೈಗಾರಿಕಾ ಉತ್ಪಾದನೆ (ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ ಅಂತಿಮ ಫಲಿತಾಂಶಗಳು: 2023-24); ಪಿ ಎಫ್‌ ಎಂ ಎಸ್ ಮತ್ತು ಬಜೆಟ್ ದಾಖಲೆಗಳ ಮೂಲಕ ಲಭ್ಯವಿರುವ ಸರ್ಕಾರಿ ದತ್ತಾಂಶ (2023-24ನೇ ಸಾಲಿನ ಪರಿಷ್ಕೃತ ಅಂದಾಜುಗಳ ಬದಲಿಗೆ ನೈಜ ಅಂಕಿಅಂಶಗಳ ಬಳಕೆ); ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಇ-ವಾಹನ  ದತ್ತಾಂಶ ಮುಂತಾದ ವಿವಿಧ ಮೂಲ ಏಜೆನ್ಸಿಗಳಿಂದ ಲಭ್ಯವಿರುವ ಸಮಗ್ರ ದತ್ತಾಂಶಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯಗಳ ಹೆಚ್ಚುವರಿ ದತ್ತಾಂಶಗಳನ್ನು ಬಳಸಲಾಗಿದೆ.

ಹೊಸ ಸರಣಿಯ ಅಂದಾಜುಗಳಲ್ಲಿನ ಪ್ರಮುಖ ಸ್ಥೂಲ ಆರ್ಥಿಕ ಒಟ್ಟು ಮೊತ್ತಗಳ  ಪ್ರಮುಖ ಲಕ್ಷಣಗಳನ್ನು ಮುಂದೆ ನೀಡಲಾಗಿದೆ.

ಒಟ್ಟು ಆಂತರಿಕ ಉತ್ಪನ್ನ

2022-23ರ ಮೂಲವರ್ಷದ ಜಿಡಿಪಿಯನ್ನು ₹261.18 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2023-24 ಮತ್ತು 2024-25ನೇ ಸಾಲಿನ ನೈಜ ಜಿಡಿಪಿ ಅಥವಾ ಸ್ಥಿರ ಬೆಲೆಗಳಲ್ಲಿನ ಜಿಡಿಪಿಯು ಕ್ರಮವಾಗಿ ₹280.01 ಲಕ್ಷ ಕೋಟಿ ಮತ್ತು ₹299.89 ಲಕ್ಷ ಕೋಟಿ ಆಗಿದ್ದು, 2023-24ರಲ್ಲಿ 7.2% ಮತ್ತು 2024-25ರಲ್ಲಿ 7.1% ಬೆಳವಣಿಗೆಯನ್ನು ದಾಖಲಿಸಿದೆ.

2023-24 ಮತ್ತು 2024-25ನೇ ಸಾಲಿನ ನಾಮಮಾತ್ರದ ಜಿಡಿಪಿ ಅಥವಾ ಪ್ರಸಕ್ತ ಬೆಲೆಗಳಲ್ಲಿನ ಜಿಡಿಪಿಯು ಕ್ರಮವಾಗಿ ₹289.84 ಲಕ್ಷ ಕೋಟಿ ಮತ್ತು ₹318.07 ಲಕ್ಷ ಕೋಟಿ ಆಗಿದ್ದು, 2023-24ರಲ್ಲಿ 11.0% ಮತ್ತು 2024-25ರಲ್ಲಿ 9.7% ಬೆಳವಣಿಗೆಯನ್ನು ಪ್ರದರ್ಶಿಸಿದೆ.

 

ಜಿವಿಎ ಮತ್ತು ಅದರ ವಲಯವಾರು ವಿಶ್ಲೇಷಣೆ

ಒಟ್ಟಾರೆ ಮಟ್ಟದಲ್ಲಿ, ಮೂಲ ಬೆಲೆಗಳಲ್ಲಿನ ನಾಮಮಾತ್ರದ ಒಟ್ಟು ಮೌಲ್ಯವರ್ಧಿತ ಬೆಳವಣಿಗೆಯು 2023-24ರಲ್ಲಿ ಶೇಕಡಾ 10.7 ರಷ್ಟಿದ್ದರೆ, 2024-25ರ ಅವಧಿಯಲ್ಲಿ ಶೇಕಡಾ 9.6 ರಷ್ಟು ಏರಿಕೆ ಕಂಡಿದೆ. ನೈಜ ಜಿವಿಎ ಅಥವಾ ಸ್ಥಿರ ಬೆಲೆಗಳಲ್ಲಿನ ಜಿವಿಎ ಬೆಳವಣಿಗೆಯು 2023-24ರಲ್ಲಿ ಶೇಕಡಾ 7.2 ರಷ್ಟಿದ್ದರೆ, 2024-25ರಲ್ಲಿ ಶೇಕಡಾ 7.3 ರಷ್ಟು ಹೆಚ್ಚಳವಾಗಿದೆ.

 

2022-23 ರಿಂದ 2024-25 ರವರೆಗಿನ ಅವಧಿಯಲ್ಲಿ ಒಟ್ಟಾರೆ ಜಿವಿಎಯಲ್ಲಿ ಆರ್ಥಿಕತೆಯ ವಿಶಾಲ ವಲಯಗಳ ಪಾಲುಗಳು ಮತ್ತು ಈ ಅವಧಿಗಳಲ್ಲಿನ ವಾರ್ಷಿಕ ಬೆಳವಣಿಗೆ ದರಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

2022-23, 2023-24 ಮತ್ತು 2024-25 ವರ್ಷಗಳ ಪ್ರಸ್ತುತ ಬೆಲೆಗಳಲ್ಲಿ ಜಿವಿಎಯಲ್ಲಿ ವಲಯವಾರು ಪಾಲು

*ರೌಂಡಿಂಗ್ ಆಫ್ (ಪೂರ್ಣಾಂಕಕ್ಕೆ ಸರಿಹೊಂದಿಸುವುದು) ಕಾರಣದಿಂದಾಗಿ ವಲಯವಾರು ಅಂಕಿಅಂಶಗಳ ಒಟ್ಟು ಮೊತ್ತವು 100ಕ್ಕೆ ಸರಿಯಾಗಿ ಬರದೇ ಇರಬಹುದು.

@: ಮೊದಲ ಪರಿಷ್ಕೃತ ಅಂದಾಜುಗಳು

[i] ಪ್ರಾಥಮಿಕ ವಲಯ: ಇದು ಕೃಷಿ, ಜಾನುವಾರು, ಅರಣ್ಯ, ಮೀನುಗಾರಿಕೆ ಮತ್ತು ಗಣಿಗಾರಿಕೆ ಹಾಗೂ ಕ್ವಾರಿ ಉದ್ದಿಮೆಗಳನ್ನು ಸೂಚಿಸುತ್ತದೆ.

[ii] ದ್ವಿತೀಯ ವಲಯ: ಇದು ಉತ್ಪಾದನೆ, ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳು ಹಾಗೂ ನಿರ್ಮಾಣ ಉದ್ದಿಮೆಗಳನ್ನು ಸೂಚಿಸುತ್ತದೆ.

[iii] ತೃತೀಯಕ ವಲಯ: ವ್ಯಾಪಾರ, ಹೋಟೆಲ್, ಸಾರಿಗೆ, ಹಣಕಾಸು ಮತ್ತು ಇತರ ಸೇವೆಗಳು.

  

2024-25ರಲ್ಲಿ ಪ್ರಾಥಮಿಕ ವಲಯ (ಕೃಷಿ, ಜಾನುವಾರು, ಅರಣ್ಯ, ಮೀನುಗಾರಿಕೆ ಮತ್ತು ಗಣಿಗಾರಿಕೆ ಹಾಗೂ ಕ್ವಾರಿ ಒಳಗೊಂಡಂತೆ), ದ್ವಿತೀಯ ವಲಯ (ಉತ್ಪಾದನೆ, ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳು ಹಾಗೂ ನಿರ್ಮಾಣ ಒಳಗೊಂಡಂತೆ) ಮತ್ತು ತೃತೀಯಕ ವಲಯದ (ಸೇವೆಗಳು) ಬೆಳವಣಿಗೆಯ ದರಗಳು ಕ್ರಮವಾಗಿ 4.9%, 8.0% ಮತ್ತು 7.9% ಎಂದು ಅಂದಾಜಿಸಲಾಗಿದೆ; 2023-24ರಲ್ಲಿ ಈ ವಲಯಗಳ ಬೆಳವಣಿಗೆಯ ದರಗಳು ಕ್ರಮವಾಗಿ 2.6%, 11.6% ಮತ್ತು 7.3% ರಷ್ಟಿದ್ದವು. ಸ್ಟೇಟ್‌ಮೆಂಟ್ 4.2ಬಿ ನಲ್ಲಿ ಕಾಣುವಂತೆ, 2024-25ರ ಅವಧಿಯಲ್ಲಿ ನೈಜ ಜಿವಿಎಯಲ್ಲಿನ ಪ್ರಗತಿಯು ಪ್ರಮುಖವಾಗಿ 'ಉತ್ಪಾದನೆ', 'ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ', 'ನಿರ್ಮಾಣ', 'ಹಣಕಾಸು ಸೇವೆಗಳು' ಮತ್ತು 'ರಿಯಲ್ ಎಸ್ಟೇಟ್, ವಸತಿ ಮಾಲೀಕತ್ವ ಮತ್ತು ವೃತ್ತಿಪರ ಸೇವೆಗಳ' ಬೆಳವಣಿಗೆಯಿಂದಾಗಿ ಕಂಡುಬಂದಿದೆ. ಆದಾಗ್ಯೂ, 'ಕೃಷಿ, ಜಾನುವಾರು, ಅರಣ್ಯ ಮತ್ತು ಮೀನುಗಾರಿಕೆ', 'ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳು' ಹಾಗೂ 'ಇತರ ಸೇವೆಗಳು' 2024-25ರ ಅವಧಿಯಲ್ಲಿ ಸಾಧಾರಣ ಬೆಳವಣಿಗೆಯನ್ನು ಕಂಡಿವೆ.

ನಿವ್ವಳ ರಾಷ್ಟ್ರೀಯ ಆದಾಯ

2024-25ನೇ ಸಾಲಿನ ಪ್ರಸಕ್ತ ಬೆಲೆಗಳಲ್ಲಿನ ನಿವ್ವಳ ರಾಷ್ಟ್ರೀಯ ಆದಾಯವು ₹271.44 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2023-24ರಲ್ಲಿ ಇದು ₹246.25 ಲಕ್ಷ ಕೋಟಿಯಾಗಿದ್ದು, 2023-24ರಲ್ಲಿದ್ದ 11.6% ಬೆಳವಣಿಗೆಗೆ ಹೋಲಿಸಿದರೆ 2024-25ರಲ್ಲಿ 10.2% ಬೆಳವಣಿಗೆಯನ್ನು ದಾಖಲಿಸಿದೆ.

ಒಟ್ಟು ರಾಷ್ಟ್ರೀಯ ಲಭ್ಯವಿರುವ ಆದಾಯ

2024-25ನೇ ಸಾಲಿನ ಪ್ರಸಕ್ತ ಬೆಲೆಗಳಲ್ಲಿನ ಒಟ್ಟು ರಾಷ್ಟ್ರೀಯ ಲಭ್ಯವಿರುವ ಆದಾಯವು (GNDI) ₹324.52 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಇದು ₹294.55 ಲಕ್ಷ ಕೋಟಿಯಾಗಿದ್ದು, 2023-24ರಲ್ಲಿದ್ದ 10.9% ಬೆಳವಣಿಗೆಗೆ ಹೋಲಿಸಿದರೆ 2024-25ರಲ್ಲಿ 10.2% ಬೆಳವಣಿಗೆಯನ್ನು ದಾಖಲಿಸಿದೆ.

ಉಳಿತಾಯ

2023-24ರಲ್ಲಿ ₹95.17 ಲಕ್ಷ ಕೋಟಿಯಾಗಿದ್ದ ಒಟ್ಟು ಉಳಿತಾಯವು 2024-25ರಲ್ಲಿ ₹111.13 ಲಕ್ಷ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. 2024-25ರ ಒಟ್ಟು ಉಳಿತಾಯದಲ್ಲಿ ಪ್ರಮುಖ ಪಾಲು ಮನೆಬಳಕೆ ವಲಯದ್ದು (62.1%) ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳದ್ದು (28.9%). ಮನೆಬಳಕೆ ವಲಯದ ಉಳಿತಾಯವು ಹೆಚ್ಚಾಗಿದ್ದು, ಇದರಿಂದ ಹೂಡಿಕೆ ಮತ್ತು ಬಂಡವಾಳ ರಚನೆಗೆ ಅಗತ್ಯವಾದ ದೇಶೀಯ ಸಂಪನ್ಮೂಲಗಳ ಮೂಲವು ಬಲಗೊಂಡಿದೆ. ಇದು ಮನೆಬಳಕೆ ವಲಯದ ಆರ್ಥಿಕ ಸ್ಥಿತಿಸ್ಥಾಪಕತ್ವ ಸುಧಾರಿಸಿರುವುದನ್ನು ಮತ್ತು ದೀರ್ಘಕಾಲೀನ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಹಣಕಾಸು ಲಭ್ಯವಿರುವುದನ್ನು ಸೂಚಿಸುತ್ತದೆ. ಭೌತಿಕ ಆಸ್ತಿಗಳು ಹಾಗೂ ಅಮೂಲ್ಯ ವಸ್ತುಗಳ ರೂಪದಲ್ಲಿನ ಉಳಿತಾಯವು 2022-23 ರಿಂದ 2024-25ರ ಅವಧಿಯಲ್ಲಿ ಏರಿಕೆ ಕಂಡಿದೆ.

ಬಂಡವಾಳ ರಚನೆ

2024-25ನೇ ಸಾಲಿನ ಪ್ರಸಕ್ತ ಬೆಲೆಗಳಲ್ಲಿನ ಒಟ್ಟು ಬಂಡವಾಳ ರಚನೆಯು (ಜಿಸಿಎಫ್) ₹109.25 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ (2023-24ರಲ್ಲಿ ಇದು ₹100.00 ಲಕ್ಷ ಕೋಟಿಯಾಗಿತ್ತು). ಜಿಡಿಪಿಗೆ ಹೋಲಿಸಿದರೆ ಜಿಸಿಎಫ್ ದರವು 2023-24ರಲ್ಲಿ 34.5% ರಷ್ಟಿದ್ದರೆ, 2024-25ರಲ್ಲಿ 34.3% ರಷ್ಟಿದೆ.

ಸ್ಥಿರ ಬೆಲೆಗಳಲ್ಲಿ ಜಿಡಿಪಿಗೆ ಹೋಲಿಸಿದರೆ ಜಿಸಿಎಫ್ ದರವು 2023-24ರಲ್ಲಿ 34.9% ಮತ್ತು 2024-25ರಲ್ಲಿ 34.6% ಆಗಿತ್ತು.

ಬಳಕೆ ವೆಚ್ಚ

2024-25ನೇ ಸಾಲಿನ ಪ್ರಸಕ್ತ ಬೆಲೆಗಳಲ್ಲಿನ ಖಾಸಗಿ ಅಂತಿಮ ಬಳಕೆ ವೆಚ್ಚವು (ಪಿ.ಎಫ್.ಸಿ.ಇ) ₹179.71 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ (2023-24ರಲ್ಲಿ ಇದು ₹163.77 ಲಕ್ಷ ಕೋಟಿಯಾಗಿತ್ತು). ಜಿಡಿಪಿಗೆ ಹೋಲಿಸಿದರೆ, ಪ್ರಸಕ್ತ ಬೆಲೆಗಳಲ್ಲಿ ಪಿ.ಎಫ್.ಸಿ.ಇ ಮತ್ತು ಜಿಡಿಪಿ ಅನುಪಾತವು 2023-24 ಮತ್ತು 2024-25 ಎರಡೂ ವರ್ಷಗಳಲ್ಲಿ 56.5% ರಷ್ಟಿದೆ. ಸ್ಥಿರ ಬೆಲೆಗಳಲ್ಲಿ, 2023-24 ಮತ್ತು 2024-25ನೇ ಸಾಲಿನ ಪಿ.ಎಫ್.ಸಿ.ಇ ಕ್ರಮವಾಗಿ ₹157.85 ಲಕ್ಷ ಕೋಟಿ ಮತ್ತು ₹167.00 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಡಿಪಿಗೆ ಪಿ.ಎಫ್.ಸಿ.ಇ ಅನುಪಾತವು 2023-24ರಲ್ಲಿ 56.4% ಮತ್ತು 2024-25ರಲ್ಲಿ 55.7% ಆಗಿದೆ.

2024-25ನೇ ಸಾಲಿನ ಪ್ರಸಕ್ತ ಬೆಲೆಗಳಲ್ಲಿನ ಸರ್ಕಾರಿ ಅಂತಿಮ ಬಳಕೆ ವೆಚ್ಚವು (ಜಿ.ಎಫ್.ಸಿ.ಇ) ₹33.95 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ (2023-24ರಲ್ಲಿ ಇದು ₹30.74 ಲಕ್ಷ ಕೋಟಿಯಾಗಿತ್ತು). ಸ್ಥಿರ ಬೆಲೆಗಳಲ್ಲಿ, 2023-24 ಮತ್ತು 2024-25ನೇ ಸಾಲಿನ ಜಿ.ಎಫ್.ಸಿ.ಇ ಅಂದಾಜುಗಳು ಕ್ರಮವಾಗಿ ₹29.08 ಲಕ್ಷ ಕೋಟಿ ಮತ್ತು ₹30.96 ಲಕ್ಷ ಕೋಟಿ ಗಳಾಗಿವೆ.

ತಲಾದಾಯ ಅಂದಾಜುಗಳು

ಪ್ರಸಕ್ತ ಬೆಲೆಗಳಲ್ಲಿನ ತಲಾದಾಯ, ಅಂದರೆ ತಲಾ ನಿವ್ವಳ ರಾಷ್ಟ್ರೀಯ ಆದಾಯವನ್ನು 2022-23, 2023-24 ಮತ್ತು 2024-25ನೇ ಸಾಲಿಗೆ ಕ್ರಮವಾಗಿ ₹1,59,557, ₹1,76,465 ಮತ್ತು ₹1,92,774 ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಬೆಲೆಗಳಲ್ಲಿನ ತಲಾ ಖಾಸಗಿ ಅಂತಿಮ ಬಳಕೆ ವೆಚ್ಚವನ್ನು  2022-23, 2023-24 ಮತ್ತು 2024-25ನೇ ಸಾಲಿಗೆ ಕ್ರಮವಾಗಿ ₹1,07,910, ₹1,17,356 ಮತ್ತು ₹1,27,627 ಎಂದು ಅಂದಾಜಿಸಲಾಗಿದೆ.

ವಿವರವಾದ ಹೇಳಿಕೆಗಳು

ಹಣಕಾಸು ವರ್ಷ 2022-23, 2023-24 ಮತ್ತು 2024-25ರ ಹೊಸ ಸರಣಿಯ ಅಂದಾಜುಗಳ ಕುರಿತು ಹೆಚ್ಚಿನ ವಿವರಗಳು ಪತ್ರಿಕಾ ಪ್ರಕಟಣೆಯ ಪಿಡಿಎಫ್ ರೂಪದಲ್ಲಿರುವ ಹೇಳಿಕೆ 1.1ಬಿ ಯಿಂದ 9ಬಿ ವರೆಗೆ ಲಭ್ಯವಿವೆ (ಲಿಂಕ್ ಅನ್ನು ಕೊನೆಯಲ್ಲಿ ನೀಡಲಾಗಿದೆ). ಇವುಗಳನ್ನು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ವೆಬ್‌ಸೈಟ್‌ನಿಂದಲೂ ಪಡೆದುಕೊಳ್ಳಬಹುದು: https://www.mospi.gov.in/themes/product/6-gross-domestic-product#latest-release.

· ಹೇಳಿಕೆ 1.1 ಬಿ: ಪ್ರಸಕ್ತ ಬೆಲೆಗಳಲ್ಲಿ ರಾಷ್ಟ್ರೀಯ ಲೆಕ್ಕಪತ್ರಗಳ ಪ್ರಮುಖ ಒಟ್ಟು ಮೊತ್ತಗಳು

· ಹೇಳಿಕೆ 1.2ಬಿ: ಸ್ಥಿರ (2022-23) ಬೆಲೆಗಳಲ್ಲಿ ರಾಷ್ಟ್ರೀಯ ಲೆಕ್ಕಪತ್ರಗಳ ಪ್ರಮುಖ ಒಟ್ಟು ಮೊತ್ತಗಳು

· ಹೇಳಿಕೆ 2ಬಿ: ತಲಾದಾಯ, ಉತ್ಪನ್ನ ಮತ್ತು ಅಂತಿಮ ಬಳಕೆ

· ಹೇಳಿಕೆ 3.1ಬಿ: ಪ್ರಸಕ್ತ ಬೆಲೆಗಳಲ್ಲಿ ಆರ್ಥಿಕ ಚಟುವಟಿಕೆವಾರು ಉತ್ಪಾದನೆ ಮತ್ತು ಬಳಕೆಯ ಉದ್ದಿಮೆವಾರು ಬಂಡವಾಳ ರಚನೆ

· ಹೇಳಿಕೆ 3.2ಬಿ: ಸ್ಥಿರ (2022-23) ಬೆಲೆಗಳಲ್ಲಿ ಆರ್ಥಿಕ ಚಟುವಟಿಕೆವಾರು ಉತ್ಪಾದನೆ ಮತ್ತು ಬಳಕೆಯ ಉದ್ದಿಮೆವಾರು ಬಂಡವಾಳ ರಚನೆ

· ಹೇಳಿಕೆ 4.1ಬಿ: ಪ್ರಸಕ್ತ ಮೂಲ ಬೆಲೆಗಳಲ್ಲಿ ಆರ್ಥಿಕ ಚಟುವಟಿಕೆವಾರು ಒಟ್ಟು ಮೌಲ್ಯವರ್ಧಿತ

· ಹೇಳಿಕೆ 4.2ಬಿ: ಸ್ಥಿರ (2022-23) ಮೂಲ ಬೆಲೆಗಳಲ್ಲಿ ಆರ್ಥಿಕ ಚಟುವಟಿಕೆವಾರು ಒಟ್ಟು ಮೌಲ್ಯವರ್ಧಿತ

· ಹೇಳಿಕೆ 5ಬಿ: ಒಟ್ಟು ಬಂಡವಾಳ ರಚನೆಗಾಗಿ ಹಣಕಾಸು

· ಹೇಳಿಕೆ 6.1ಬಿ: ಪ್ರಸಕ್ತ ಬೆಲೆಗಳಲ್ಲಿ ಬಳಕೆಯ ಉದ್ದಿಮೆವಾರು ಒಟ್ಟು ಬಂಡವಾಳ ರಚನೆ

· ಹೇಳಿಕೆ 6.2ಬಿ: ಸ್ಥಿರ (2022-23) ಬೆಲೆಗಳಲ್ಲಿ ಬಳಕೆಯ ಉದ್ದಿಮೆವಾರು ಒಟ್ಟು ಬಂಡವಾಳ ರಚನೆ

· ಹೇಳಿಕೆ 7.1ಬಿ: ಪ್ರಸಕ್ತ ಬೆಲೆಗಳಲ್ಲಿ ಆಸ್ತಿ ಮತ್ತು ಸಾಂಸ್ಥಿಕ ವಲಯವಾರು ಒಟ್ಟು ಸ್ಥಿರ ಬಂಡವಾಳ ರಚನೆ (GFCF)

· ಹೇಳಿಕೆ 7.2ಬಿ: ಸ್ಥಿರ (2022-23) ಬೆಲೆಗಳಲ್ಲಿ ಆಸ್ತಿ ಮತ್ತು ಸಾಂಸ್ಥಿಕ ವಲಯವಾರು ಒಟ್ಟು ಸ್ಥಿರ ಬಂಡವಾಳ ರಚನೆ (GFCF)

· ಹೇಳಿಕೆ 8.1ಬಿ: ಪ್ರಸಕ್ತ ಬೆಲೆಗಳಲ್ಲಿ ಖಾಸಗಿ ಅಂತಿಮ ಬಳಕೆ ವೆಚ್ಚ (PFCE)

· ಹೇಳಿಕೆ 8.2ಬಿ: ಸ್ಥಿರ ಬೆಲೆಗಳಲ್ಲಿ ಖಾಸಗಿ ಅಂತಿಮ ಬಳಕೆ ವೆಚ್ಚ (PFCE)

· ಹೇಳಿಕೆ 9ಬಿ: ಸಾಂಸ್ಥಿಕ ವಲಯಗಳು – ಪ್ರಸಕ್ತ ಬೆಲೆಗಳಲ್ಲಿ ಪ್ರಮುಖ ಆರ್ಥಿಕ ಸೂಚಕಗಳು

 

ಸೂತ್ರ

  1. ಮೂಲ ಬೆಲೆಗಳಲ್ಲಿ ಜಿವಿಎ (ಉತ್ಪಾದನಾ ವಿಧಾನ) = ಮೂಲ ಬೆಲೆಯಲ್ಲಿ ಔಟ್‌ಪುಟ್ - ಮಧ್ಯಂತರ ಬಳಕೆ
  2. ಮೂಲ ಬೆಲೆಗಳಲ್ಲಿ ಜಿವಿಎ (ಆದಾಯ ವಿಧಾನ) = CE + OS/MI + CFC + ಉತ್ಪಾದನಾ ತೆರಿಗೆಗಳು ಕಡಿಮೆ ಉತ್ಪಾದನಾ ಸಬ್ಸಿಡಿಗಳು(i)
  3. ಜಿಡಿಪಿ = ∑ ಮೂಲ ಬೆಲೆಗಳಲ್ಲಿ ಜಿವಿಎ + ಉತ್ಪನ್ನ ತೆರಿಗೆಗಳು ಕಡಿಮೆ ಉತ್ಪನ್ನ ಸಬ್ಸಿಡಿಗಳು(ii)
  4. NDP/NNI = GDP/GNI - CFC
  5. GNI = GDP + ROW ನಿಂದ ನಿವ್ವಳ ಪ್ರಾಥಮಿಕ ಆದಾಯ (ಕಡಿಮೆ ಪಾವತಿಗಳನ್ನು ಸ್ವೀಕರಿಸುತ್ತದೆ)
  6. ಪ್ರಾಥಮಿಕ ಆದಾಯಗಳು = CE + ಆಸ್ತಿ ಮತ್ತು ಉದ್ಯಮಶೀಲ ಆದಾಯ
  7. NNDI = NNI + ಇತರ ಪ್ರಸ್ತುತ ವರ್ಗಾವಣೆಗಳು(iii) ROW ನಿಂದ, ನಿವ್ವಳ (ಕಡಿಮೆ ಪಾವತಿಗಳನ್ನು ಸ್ವೀಕರಿಸುತ್ತದೆ)
  8. GNDI = NNDI + CFC = GNI + ಇತರ ಪ್ರಸ್ತುತ ವರ್ಗಾವಣೆಗಳು(iii) ROW ನಿಂದ, ನಿವ್ವಳ (ಕಡಿಮೆ ಪಾವತಿಗಳನ್ನು ಸ್ವೀಕರಿಸುತ್ತದೆ)
  9. ಒಟ್ಟು ಬಂಡವಾಳ ರಚನೆ (GCF)(iv) (ಹಣಕಾಸು ಭಾಗ) = ಒಟ್ಟು ಉಳಿತಾಯ + ROW ನಿಂದ ನಿವ್ವಳ ಬಂಡವಾಳ ಒಳಹರಿವು

10. GCF (ಖರ್ಚು ಭಾಗ) = GFCF + CIS + ಮೌಲ್ಯಯುತಗಳು

11. ಒಟ್ಟು ಸರ್ಕಾರದ ವಿಲೇವಾರಿ ಆದಾಯ = GFCE + ಸಾಮಾನ್ಯ ಸರ್ಕಾರದ ಒಟ್ಟು ಉಳಿತಾಯ

12. ಕುಟುಂಬಗಳ ಒಟ್ಟು ವಿಲೇವಾರಿ ಆದಾಯ (GDI) = GNDI – ಸರ್ಕಾರದ GDI. – ಎಲ್ಲಾ ನಿಗಮಗಳ ಒಟ್ಟು ಉಳಿತಾಯ

ಸೂತ್ರಗಳ ಕುರಿತು ಟಿಪ್ಪಣಿಗಳು

  1. ಉತ್ಪಾದನಾ ತೆರಿಗೆಗಳು ಮತ್ತು ಸಬ್ಸಿಡಿಗಳು: ಇವುಗಳನ್ನು ಉತ್ಪಾದನೆಗೆ ಸಂಬಂಧಿಸಿದಂತೆ ಪಾವತಿಸಲಾಗುತ್ತದೆ ಅಥವಾ ಸ್ವೀಕರಿಸಲಾಗುತ್ತದೆ ಮತ್ತು ಇವು ನೈಜ ಉತ್ಪಾದನೆಯ ಪ್ರಮಾಣದಿಂದ ಸ್ವತಂತ್ರವಾಗಿರುತ್ತವೆ. ಕೆಲವು ಉದಾಹರಣೆಗಳು:

ಉತ್ಪಾದನಾ ತೆರಿಗೆಗಳು: ಭೂ ಕಂದಾಯ, ಮುದ್ರಾಂಕ (Stamps) ಮತ್ತು ನೋಂದಣಿ ಶುಲ್ಕಗಳು ಹಾಗೂ ವೃತ್ತಿ ತೆರಿಗೆ.

ಉತ್ಪಾದನಾ ಸಬ್ಸಿಡಿಗಳು: ರೈಲ್ವೆಗೆ ನೀಡುವ ಸಬ್ಸಿಡಿಗಳು, ಗ್ರಾಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನೀಡುವ ಸಬ್ಸಿಡಿಗಳು.

  1. ಉತ್ಪನ್ನ ತೆರಿಗೆಗಳು ಮತ್ತು ಸಬ್ಸಿಡಿಗಳು: ಇವುಗಳನ್ನು ಉತ್ಪನ್ನದ ಪ್ರತಿ ಯೂನಿಟ್‌ ಗೆ ಅನುಗುಣವಾಗಿ ಪಾವತಿಸಲಾಗುತ್ತದೆ ಅಥವಾ ಸ್ವೀಕರಿಸಲಾಗುತ್ತದೆ. ಕೆಲವು ಉದಾಹರಣೆಗಳು:

ಉತ್ಪನ್ನ ತೆರಿಗೆಗಳು: ಸರಕು ಮತ್ತು ಸೇವಾ ತೆರಿಗೆ, ಅಬಕಾರಿ ಸುಂಕ, ಮಾರಾಟ ತೆರಿಗೆ, ಸೇವಾ ತೆರಿಗೆ ಮತ್ತು ಆಮದು-ರಫ್ತು ಸುಂಕಗಳು.

ಉತ್ಪನ್ನ ಸಬ್ಸಿಡಿಗಳು: ವಿದ್ಯುತ್ ಶಕ್ತಿ, ಪೆಟ್ರೋಲಿಯಂ ಮತ್ತು ರಸಗೊಬ್ಬರ ಸಬ್ಸಿಡಿಗಳು.

  • III. ಇತರ ಚಾಲ್ತಿ ವರ್ಗಾವಣೆಗಳು: ಇದು ಪ್ರಾಥಮಿಕ ಆದಾಯಗಳನ್ನು ಹೊರತುಪಡಿಸಿದ ಉಳಿದ ಚಾಲ್ತಿ ವರ್ಗಾವಣೆಗಳನ್ನು ಸೂಚಿಸುತ್ತದೆ.
  1. ಒಟ್ಟು ಬಂಡವಾಳ ರಚನೆ (GCF): ಪ್ರಸಕ್ತ ಮತ್ತು ಸ್ಥಿರ ಬೆಲೆಗಳೆರಡರಲ್ಲೂ ಒಟ್ಟು ಬಂಡವಾಳ ರಚನೆಯನ್ನು (GCF) ಎರಡು ವಿಧಾನಗಳ ಮೂಲಕ ಅಂದಾಜಿಸಲಾಗುತ್ತದೆ:

(a) ನಿಧಿಗಳ ಹರಿವಿನ ಮೂಲಕ: ಒಟ್ಟು ಉಳಿತಾಯ ಮತ್ತು ಉಳಿದ ನಿವ್ವಳ ಬಂಡವಾಳ ಹರಿವಿನ ಮೊತ್ತವಾಗಿ ಇದನ್ನು ಪಡೆಯಲಾಗುತ್ತದೆ.

(b) ಸರಕು ಹರಿವಿನ ವಿಧಾನ: ಆಸ್ತಿಗಳ ಪ್ರಕಾರದ ಆಧಾರದ ಮೇಲೆ ಇದನ್ನು ಲೆಕ್ಕಹಾಕಲಾಗುತ್ತದೆ.

ಭಾಗ ಸಿ

ರಾಷ್ಟ್ರೀಯ ಲೆಕ್ಕಪತ್ರಗಳ ಆಧಾರ ವರ್ಷದ ಪರಿಷ್ಕರಣೆ

ರಾಷ್ಟ್ರೀಯ ಲೆಕ್ಕಪತ್ರಗಳ ಸಾಂಖ್ಯಿಕ ಸಲಹಾ ಸಮಿತಿ (ACNAS):

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, ರಾಷ್ಟ್ರೀಯ ಲೆಕ್ಕಪತ್ರಗಳ ಅಂಕಿಅಂಶ ಸಂಕಲನ ಪ್ರಕ್ರಿಯೆಯಲ್ಲಿ ತಾಂತ್ರಿಕ ತಜ್ಞರು, ಕೇಂದ್ರ ಸಚಿವಾಲಯಗಳ ಪ್ರತಿನಿಧಿಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯಗಳ ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ. ಇದು 'ರಾಷ್ಟ್ರೀಯ ಲೆಕ್ಕಪತ್ರಗಳ ಅಂಕಿಅಂಶ ಸಲಹಾ ಸಮಿತಿ' (ACNAS) ರೂಪದಲ್ಲಿದ್ದು, ಇದು ಒಂದು ಶಾಶ್ವತ ಸ್ಥಾಯಿ ಸಮಿತಿಯಾಗಿದೆ ಮತ್ತು ಕಾಲಕಾಲಕ್ಕೆ ಇದನ್ನು ಪುನರ್ ರಚಿಸಲಾಗುತ್ತದೆ.

ಪ್ರಸ್ತುತ, ಪ್ರೊ. ಬಿಸ್ವನಾಥ್ ಗೋಲ್ಡರ್ ಅವರು ACNAS ಸಮಿತಿಯ ನೇತೃತ್ವ ವಹಿಸಿದ್ದಾರೆ. ಆರ್ಥಿಕ ವಿಶ್ಲೇಷಣೆ ಮತ್ತು ನೀತಿ ನಿರೂಪಣೆಯ ಉದ್ದೇಶಗಳಿಗಾಗಿ ಹೊಸ ದತ್ತಾಂಶ ಮೂಲಗಳನ್ನು ಸೇರಿಸುವುದು ಹಾಗೂ ರಾಷ್ಟ್ರೀಯ ಲೆಕ್ಕಪತ್ರಗಳ ಸಾಂಖ್ಯಿಕ ಸಂಕಲನ ಮತ್ತು ಪ್ರಸ್ತುತಿಯ ವಿಧಾನಗಳ ಕುರಿತು ಸಚಿವಾಲಯಕ್ಕೆ ಸಲಹೆ ನೀಡುವುದು ಈ ಸಮಿತಿಯ ಪ್ರಮುಖ ಪಾತ್ರವಾಗಿದೆ. ಈ ಸಮಿತಿಯ ಶಿಫಾರಸಿನ ಮೇರೆಗೆ, ರಾಷ್ಟ್ರೀಯ ಲೆಕ್ಕಪತ್ರಗಳ ಆಧಾರ ವರ್ಷವನ್ನು 2011-12 ರಿಂದ 2022-23 ಕ್ಕೆ ಪರಿಷ್ಕರಿಸಲಾಗುತ್ತಿದೆ.

ಮೂಲವರ್ಷ ಪರಿಷ್ಕರಣೆಗಾಗಿ ಉಪ-ಸಮಿತಿಗಳು:

ನಿರ್ದಿಷ್ಟ ವಿಷಯಗಳ ಬಗ್ಗೆ ಏಕಕಾಲದಲ್ಲಿ ಚರ್ಚಿಸಲು ACNAS ಅಡಿಯಲ್ಲಿ ಎರಡು ವರ್ಷಗಳ ಅವಧಿಯ ಐದು ಉಪ-ಸಮಿತಿಗಳನ್ನು ರಚಿಸಲಾಗಿದೆ. ಅಖಿಲ ಭಾರತ ಅಂದಾಜುಗಳಿಗೆ ಸಂಬಂಧಿಸಿದ ಮೊದಲ ಮೂರು ಉಪ-ಸಮಿತಿಗಳ ವರದಿಗಳು ಸಚಿವಾಲಯದ ವೆಬ್‌ಸೈಟ್‌ ನಲ್ಲಿ ಲಭ್ಯವಿದ್ದು, ಕೆಳಗೆ ನೀಡಲಾದ ಆಯಾ ಉಪ-ಸಮಿತಿಗಳ ಹೆಸರುಗಳಿಗೆ ಅವುಗಳನ್ನು ಹೈಪರ್‌ ಲಿಂಕ್ ಮಾಡಲಾಗಿದೆ. ಉಳಿದ ಎರಡು ಉಪ-ಸಮಿತಿಗಳ ವರದಿಗಳನ್ನು ನಂತರ ಬಿಡುಗಡೆ ಮಾಡಲಾಗುವುದು.

I. ಹೊಸ ದತ್ತಾಂಶ ಮೂಲಗಳು, ದರಗಳು ಮತ್ತು ಅನುಪಾತಗಳ ಸೇರ್ಪಡೆಗಾಗಿನ ಉಪ-ಸಮಿತಿ

II. ವಿಧಾನದ ಸುಧಾರಣೆಗಾಗಿನ ಉಪ-ಸಮಿತಿ

III. ಸ್ಥಿರ ಬೆಲೆ ಅಂದಾಜುಗಳಿಗಾಗಿನ ಉಪ-ಸಮಿತಿ

IV. ಪ್ರಾದೇಶಿಕ ಲೆಕ್ಕಪತ್ರಗಳ ಕುರಿತಾದ ಉಪ-ಸಮಿತಿ

  1. ಎಸ್‌ ಎನ್‌ ಎ 2025 ನವೀಕರಣಕ್ಕಾಗಿನ ಉಪ-ಸಮಿತಿ

ಚರ್ಚಾ ಪ್ರಬಂಧಗಳು ಮತ್ತು ಪ್ರಮುಖ ಸುಧಾರಣೆಗಳು:

ರಾಷ್ಟ್ರೀಯ ಲೆಕ್ಕಪತ್ರಗಳ ಹೊಸ ಸರಣಿಯಲ್ಲಿನ ವಿಧಾನದ ಸುಧಾರಣೆಗಳು, 'ವಿಕಸಿತ ಭಾರತ'ದತ್ತದ ದೀರ್ಘಕಾಲೀನ ದೃಷ್ಟಿಕೋನವನ್ನು ತಲುಪಲು ಆಗಿರುವ ರಚನಾತ್ಮಕ ಬದಲಾವಣೆಗಳಿಗೆ ಅನುಗುಣವಾದ ನಿರ್ಣಾಯಕ ಹೆಜ್ಜೆಯಾಗಿವೆ. ಹೊಸ ಸರಣಿಯಲ್ಲಿನ ಸುಧಾರಣೆಗಳ ವಿವರಗಳನ್ನು ಸಚಿವಾಲಯವು ಬಿಡುಗಡೆ ಮಾಡಿದ 'ಉತ್ಪಾದನಾ ವಿಧಾನ', 'ವೆಚ್ಚದ ವಿಧಾನ' ಮತ್ತು 'ತ್ರೈಮಾಸಿಕ ಜಿಡಿಪಿ ಮತ್ತು ಉಪ-ರಾಷ್ಟ್ರೀಯ ಲೆಕ್ಕಪತ್ರಗಳು' ಎಂಬ ಪ್ರತ್ಯೇಕ ಚರ್ಚಾ ಪ್ರಬಂಧಗಳಲ್ಲಿ ದಾಖಲಿಸಲಾಗಿದೆ. ಈ ಚರ್ಚಾ ಪ್ರಬಂಧಗಳು ಸಚಿವಾಲಯದ ವೆಬ್‌ಸೈಟ್‌ ನಲ್ಲಿ ಲಭ್ಯವಿವೆ. ಹೊಸ ಸರಣಿಯಲ್ಲಿನ ಕೆಲವು ಪ್ರಮುಖ ಸುಧಾರಣೆಗಳನ್ನು ಈ ಕೆಳಗೆ ಸಂಕ್ಷೇಪಿಸಲಾಗಿದೆ:

· ಮನೆಬಳಕೆ ವಲಯದ ಮಾಪನದಲ್ಲಿ ಹೆಚ್ಚಿನ ಚೈತನ್ಯ: ಹಳೆಯ ಸರಣಿಯಲ್ಲಿ, ಮನೆಬಳಕೆ ವಲಯವನ್ನು ಸಮೀಕ್ಷೆಗಳ ನಡುವಿನ ಬೆಳವಣಿಗೆಯ ಆಧಾರದ ಮೇಲೆ ಅಥವಾ ಕೆಲವು ಪರೋಕ್ಷ ಸೂಚಕಗಳ ಮೂಲಕ ಅಂದಾಜಿಸಲಾಗುತ್ತಿತ್ತು. ಹೊಸ ಸರಣಿಯಲ್ಲಿ, ಪ್ರತಿ ವರ್ಷ ನಡೆಸಲಾಗುವ ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASUSE) ಮತ್ತು ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆ (PLFS) ಮೂಲಕ ಮನೆಬಳಕೆ ವಲಯದ ನಿಖರ ಅಂದಾಜುಗಳನ್ನು ಸಂಕಲಿಸಲಾಗುತ್ತದೆ.

· ಡಬಲ್ ಡಿಫ್ಲೇಷನ್ ಅಥವಾ ಸಿಂಗಲ್ ಎಕ್ಸ್ಟ್ರಾಪೋಲೇಷನ್ ಬಳಕೆ: ಹೊಸ ಸರಣಿಯಲ್ಲಿ, ಉತ್ಪಾದನಾ ಮತ್ತು ಕೃಷಿ ಕೈಗಾರಿಕೆಗಳಲ್ಲಿ 'ಡಬಲ್ ಡಿಫ್ಲೇಷನ್' ವಿಧಾನವನ್ನು ಮತ್ತು ಉಳಿದ ವಲಯಗಳಲ್ಲಿ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' ವಿಧಾನವನ್ನು ಬಳಸಲಾಗುತ್ತದೆ. ಇದರೊಂದಿಗೆ 'ಸಿಂಗಲ್ ಡಿಫ್ಲೇಷನ್' ವಿಧಾನವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಅಲ್ಲದೆ, ಡಿಫ್ಲೇಟರ್‌ ಗಳನ್ನು ಹೆಚ್ಚು ತಳಮಟ್ಟದಲ್ಲಿ ಬಳಸಲಾಗುತ್ತದೆ.

· ಕಡಿಮೆ ವ್ಯತ್ಯಾಸ: ಉತ್ಪಾದನಾ ವಿಧಾನ ಮತ್ತು ವೆಚ್ಚದ ವಿಧಾನಗಳ ನಡುವಿನ ಜಿಡಿಪಿ ವ್ಯತ್ಯಾಸವನ್ನು ಕಡಿಮೆ ಮಾಡಲು 'ಪೂರೈಕೆ ಬಳಕೆ ಟೇಬಲ್' (ಎಸ್‌ ಯು ಟಿ) ಚೌಕಟ್ಟನ್ನು ರಾಷ್ಟ್ರೀಯ ಲೆಕ್ಕಪತ್ರಗಳ ಚೌಕಟ್ಟಿನೊಂದಿಗೆ ಸಂಯೋಜಿಸಲಾಗುತ್ತದೆ. ಎಸ್‌ ಯು ಟಿ ವಿಧಾನವು ಕೈಗಾರಿಕೆಗಳು ಏನನ್ನು ಉತ್ಪಾದಿಸುತ್ತವೆ (ಪೂರೈಕೆ) ಮತ್ತು ಆ ಉತ್ಪನ್ನಗಳನ್ನು ಕೈಗಾರಿಕೆಗಳು ಅಥವಾ ಅಂತಿಮ ಗ್ರಾಹಕರು ಹೇಗೆ ಬಳಸುತ್ತಾರೆ (ಬಳಕೆ) ಎಂಬುದನ್ನು ತೋರಿಸುತ್ತದೆ. ಸಮತೋಲಿತ ಎಸ್‌ ಯು ಟಿ ವ್ಯವಸ್ಥೆಯು ಆರ್ಥಿಕತೆಯಲ್ಲಿ ಒಟ್ಟು ಪೂರೈಕೆಯು ಒಟ್ಟು ಬೇಡಿಕೆಗೆ ಸರಿಹೊಂದುವುದನ್ನು ಖಚಿತಪಡಿಸುತ್ತದೆ.

· ನವೀಕರಿಸಿದ ದರಗಳು/ಅನುಪಾತಗಳ ಬಳಕೆ: ಸಂಕಲನದಲ್ಲಿ ಬಳಸುವ ದರಗಳು ಮತ್ತು ಅನುಪಾತಗಳನ್ನು ಹೊಸ ಸರಣಿಯಲ್ಲಿ ಪರಿಷ್ಕರಿಸಲಾಗುತ್ತದೆ. ಇದಕ್ಕಾಗಿ ಇತ್ತೀಚಿನ ಸಮೀಕ್ಷೆಗಳು ಅಥವಾ ಸಚಿವಾಲಯದ ಇತರ ತಜ್ಞ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿದ ಅಧ್ಯಯನಗಳನ್ನು ಬಳಸಲಾಗುತ್ತದೆ.

· ಬಹುವಿಧದ ಚಟುವಟಿಕೆ ಹೊಂದಿರುವ ಖಾಸಗಿ ಸಂಸ್ಥೆಗಳ ವಿಂಗಡಣೆ: ಹಳೆಯ ಸರಣಿಯಲ್ಲಿ, ಬಹುವಿಧದ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಒಟ್ಟು ಮೌಲ್ಯವರ್ಧನೆಯನ್ನು ಅವುಗಳ 'ಪ್ರಮುಖ ಚಟುವಟಿಕೆ'ಗೆ ಮಾತ್ರ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈಗ ಆಡಳಿತಾತ್ಮಕ ದತ್ತಾಂಶ ಲಭ್ಯವಿರುವುದರಿಂದ ಮತ್ತು ಕಂಪನಿಗಳು ತಮ್ಮ ವಹಿವಾಟಿನಲ್ಲಿ ಪ್ರತಿ ಚಟುವಟಿಕೆಯ ಪಾಲನ್ನು ವರದಿ ಮಾಡುವುದು ಕಡ್ಡಾಯವಾಗಿರುವುದರಿಂದ, ಒಟ್ಟು ಮೌಲ್ಯವರ್ಧನೆಯನ್ನು ವಿವಿಧ ಚಟುವಟಿಕೆಗಳ ನಡುವೆ ವಿಂಗಡಿಸಲು ಸಾಧ್ಯವಾಗುತ್ತದೆ.

· ಖಾಸಗಿ ಅಂತಿಮ ಬಳಕೆ ವೆಚ್ಚ (ಪಿ ಎಫ್ಸಿ ): ಹೊಸ ಸರಣಿಯಲ್ಲಿ ಪಿ ಎಫ್‌ ಸಿ ಇ ಅಂದಾಜು ಮಾಡುವಿಕೆಯು ಹೆಚ್ಚು ಸೂಕ್ಷ್ಮವಾಗಿದೆ. ಇದಕ್ಕಾಗಿ (a) ಮನೆಬಳಕೆ ಗ್ರಾಹಕ ವೆಚ್ಚ ಸಮೀಕ್ಷೆಯ ಹೆಚ್ಚಿನ ಬಳಕೆ (b) ಉತ್ಪಾದನೆ ಮತ್ತು ಇತರ ಮೂಲಗಳ ಆಧಾರದ ಮೇಲೆ ನೇರ ಅಂದಾಜು (c) ಸರಕು ಹರಿವಿನ ವಿಧಾನ ಎಂಬ ಮಿಶ್ರ ವಿಧಾನವನ್ನು ಬಳಸಲಾಗುತ್ತದೆ. ಇದರೊಂದಿಗೆ, ಪಿ ಎಫ್‌ ಸಿ ಇ ಸಂಕಲನದಲ್ಲಿ ಇತ್ತೀಚಿನ ಅಂತರರಾಷ್ಟ್ರೀಯ ಮಾನದಂಡವಾದ COICOP 2018 ಅನ್ನು ಅಳವಡಿಸಿಕೊಳ್ಳಲಾಗಿದೆ.

· ಹೊಸ ದತ್ತಾಂಶ ಮೂಲಗಳ ಬಳಕೆ: ದಾಖಲೆಗಳ ಡಿಜಿಟಲೀಕರಣದಿಂದಾಗಿ ಹೊಸ ಮತ್ತು ಹೆಚ್ಚು ನಿಖರವಾದ ದತ್ತಾಂಶಗಳು ಲಭ್ಯವಾಗಿವೆ. ಸರಕು ಮತ್ತು ಸೇವಾ ತೆರಿಗೆ ದತ್ತಾಂಶ, ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿ ಎಫ್‌ ಎಂ ಎಸ್), ಇ-ವಾಹನ  ಮುಂತಾದ ಸಮಗ್ರ ಮತ್ತು ವೇಗವಾಗಿ ಲಭ್ಯವಾಗುವ ಮೂಲಗಳನ್ನು ಅಂದಾಜುಗಳ ಸಂಕಲನ ಮತ್ತು ದೃಢೀಕರಣಕ್ಕಾಗಿ ಬಳಸಿಕೊಳ್ಳಲಾಗಿದೆ.‌

ಮೂಲಗಳು ಮತ್ತು ವಿಧಾನಗಳು:

ಅಂದಾಜುಗಳ ಸಂಕಲನದಲ್ಲಿ ಬಳಸಲಾದ ಕಾರ್ಯವಿಧಾನ ಮತ್ತು ದತ್ತಾಂಶ ಮೂಲಗಳನ್ನು ಸಚಿವಾಲಯದ 'ಮೂಲಗಳು ಮತ್ತು ವಿಧಾನಗಳು' ಎಂಬ ಪ್ರಕಟಣೆಯಲ್ಲಿ ಸಮಗ್ರವಾಗಿ ಪ್ರಸ್ತುತಪಡಿಸಲಾಗುತ್ತದೆ. ಈ ಪ್ರಕಟಣೆಯು ಆಗಸ್ಟ್ 2026 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ರಾಷ್ಟ್ರೀಯ ಲೆಕ್ಕಪತ್ರಗಳ ದತ್ತಾಂಶ ಬಳಕೆದಾರರಿಗೆ ಹೊಸ ಸರಣಿಯ ಬಗ್ಗೆ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡಲು ಮತ್ತು ಸಾಮಾನ್ಯ ಪ್ರಶ್ನೆಗಳಿಗೆ ತಕ್ಷಣದ ಉತ್ತರಗಳನ್ನು ಒದಗಿಸಲು, ವೆಬ್‌ಸೈಟ್‌ನಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು ವಿಭಾಗವನ್ನು ಅಪ್‌ಲೋಡ್ ಮಾಡಲಾಗಿದೆ.

ಪರಿಷ್ಕೃತ ಡಬ್ಲ್ಯುಪಿಐ/ಪಿಪಿಐ ಬಳಕೆ:

ಸೂಚ್ಯಂಕಗಳ (ಸಗಟು ಬೆಲೆ ಸೂಚ್ಯಂಕ/ಉತ್ಪಾದನಾ ಬೆಲೆ ಸೂಚ್ಯಂಕ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕ) ಮೂಲವರ್ಷವನ್ನು ಪರಿಷ್ಕರಿಸುತ್ತಿರುವುದರಿಂದ, ಹೊಸ ಸರಣಿಯ ಸ್ಥಿರ ಬೆಲೆ ಅಂದಾಜುಗಳನ್ನು ತದನಂತರ ಪರಿಷ್ಕರಿಸಲಾಗುತ್ತದೆ.

ಹಿಂದಿನ ಸರಣಿ (Back Series):

ಭಾರತದಲ್ಲಿ 'ಹಿಂದಿನ ಸರಣಿ'ಯನ್ನು (Back Series) ಲೆಕ್ಕಹಾಕುವ ಈ ಹಿಂದಿನ ಪದ್ಧತಿಯಂತೆ, ಹೊಸ ಸರಣಿಯ ಪರಿಷ್ಕೃತ ವಿಧಾನವನ್ನು ಬಳಸಿ ತಕ್ಷಣದ ಹಿಂದಿನ ಮೂಲವರ್ಷದವರೆಗಿನ ಅಂದಾಜುಗಳನ್ನು ಮರುಲೆಕ್ಕಾಚಾರ ಮಾಡಲಾಗುತ್ತದೆ. ತದನಂತರ, 1950-51ರವರೆಗಿನ ದತ್ತಾಂಶಗಳನ್ನು ವಿಭಜಿತ ಹಂತಗಳಲ್ಲಿ ಜೋಡಿಸಲಾಗುತ್ತದೆ. ಅಂತರರಾಷ್ಟ್ರೀಯ ಅತ್ಯುತ್ತಮ ಅಭ್ಯಾಸಗಳಿಗೆ ಅನುಗುಣವಾಗಿ, 'ಸೈಪ್ಲಿಸಿಂಗ್' ಮತ್ತು 'ಮರುಲೆಕ್ಕಾಚಾರ' ಎರಡನ್ನೂ ಒಳಗೊಂಡ ವಿವೇಕಯುತ ವಿಧಾನವನ್ನು ಇಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಜಿಡಿಪಿ ಅಂದಾಜುಗಳ ಸಂಕಲನದಲ್ಲಿ ಹೊಸ ದತ್ತಾಂಶ ಮೂಲಗಳ ಸೇರ್ಪಡೆ ಮತ್ತು ವಿಧಾನದ ಸುಧಾರಣೆಗಳ ಕುರಿತು ಸಚಿವಾಲಯಕ್ಕೆ ಸಲಹೆ ನೀಡಲು ರಚಿಸಲಾದ ಸಲಹಾ ಸಮಿತಿಯೊಂದಿಗೆ ಸಮಾಲೋಚಿಸಿ 'ಹಿಂದಿನ ಸರಣಿ'ಯ ವಿಧಾನವನ್ನು ಅಂತಿಮಗೊಳಿಸಲಾಗುತ್ತದೆ. ಈ ಹಿಂದಿನ ಸರಣಿಯು ಡಿಸೆಂಬರ್ 2026 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಂದಾಜುಗಳು:

ಹಣಕಾಸು ವರ್ಷ 2022-23, 2023-24 ಮತ್ತು 2024-25ಕ್ಕೆ ಸಂಬಂಧಿಸಿದಂತೆ ಹಳೆಯ ಮತ್ತು ಹೊಸ ಸರಣಿಗಳೆರಡರ ಉದ್ದಿಮೆವಾರು ಅಂದಾಜುಗಳು ಮತ್ತು ಅಂದಾಜುಗಳ ಪರಿಷ್ಕರಣೆಗೆ ಕಾರಣಗಳನ್ನು ಅನುಬಂಧಗಳಲ್ಲಿ ನೀಡಲಾಗಿದೆ.

 

ಅನುಬಂಧ-I

ಉದ್ಯಮವಾರು ಜಿವಿಎ ಅಂದಾಜುಗಳು: ಸರಣಿ ಮತ್ತು ಹೊಸ ಸರಣಿಯ ನಡುವಿನ ಹೋಲಿಕೆ (ಪ್ರಸ್ತುತ ಬೆಲೆಗಳಲ್ಲಿ)

ಅನುಬಂಧ-II

ಉದ್ಯಮವಾರು ಜಿವಿಎ ಅಂದಾಜುಗಳಲ್ಲಿನ ಬೆಳವಣಿಗೆಯ ದರ: ಸರಣಿ ಮತ್ತು ಹೊಸ ಸರಣಿಯ ನಡುವಿನ ಹೋಲಿಕೆ (ಸ್ಥಿರ ಬೆಲೆಗಳಲ್ಲಿ)

ಅನುಬಂಧ-III

ವೆಚ್ಚದ ವಿಧಾನದಿಂದ ಒಟ್ಟು ಮೊತ್ತಗಳು: ಹಳೆಯ ಸರಣಿ ಮತ್ತು ಹೊಸ ಸರಣಿಯ ನಡುವಿನ ಹೋಲಿಕೆ (ಪ್ರಸಕ್ತ ಬೆಲೆಗಳಲ್ಲಿ)

* ವ್ಯತ್ಯಾಸ ಕಂಡುಬಂದಲ್ಲಿ ಅದರ ಪಾಲನ್ನು ನೀಡಲಾಗಿದೆ.

ಅನುಬಂಧ-IV

ವೆಚ್ಚದ ವಿಧಾನದಿಂದ ಒಟ್ಟು ಮೊತ್ತಗಳು: ಹಳೆಯ ಸರಣಿ ಮತ್ತು ಹೊಸ ಸರಣಿಯ ನಡುವಿನ ಹೋಲಿಕೆ (ಸ್ಥಿರ ಬೆಲೆಗಳಲ್ಲಿ)

ಅನುಬಂಧ-V

ಜಿಡಿಪಿ ಅಂದಾಜುಗಳ ಹೊಸ ಸರಣಿಯಲ್ಲಿನ ದತ್ತಾಂಶ ಪರಿಷ್ಕರಣೆಗೆ ಸಂಕ್ಷಿಪ್ತ ಕಾರಣಗಳು (ಮೂಲವರ್ಷ: 2022-23)

ಉದ್ಯಮ

ಮಟ್ಟದ ಅಂದಾಜು (ಎಫ್ವೈ 2022-23)

ಹಣಕಾಸು ವರ್ಷ (ಎಫ್ವೈ 2023-24

ಹಣಕಾಸು ವರ್ಷ (ಎಫ್ವೈ 2024-25

ಕೃಷಿ ಮತ್ತು ಸಂಬಂಧಿತ ವಲಯ

ಬೆಳೆ: (i) ಹೊಸ ಹಣ್ಣು ಮತ್ತು ತರಕಾರಿಗಳ ಸೇರ್ಪಡೆ

(ii) ಹುಲ್ಲು ಮತ್ತು ಮೇವಿನ ಉತ್ಪಾದನಾ ದರ/ಅನುಪಾತದ ನವೀಕರಣ (iii) ಇನ್‌ಪುಟ್ ಮೌಲ್ಯದಲ್ಲಿ ಇಳಿಕೆ (ವಿದ್ಯುತ್, ಡೀಸೆಲ್).


 

ಜಾನುವಾರು, ಮೀನುಗಾರಿಕೆ: ಇನ್‌ಪುಟ್ ದರದಲ್ಲಿ ಹೆಚ್ಚಳ.


 

ಅರಣ್ಯ: ರಾಜ್ಯವಾರು ನವೀಕರಿಸಿದ ಇನ್‌ಪುಟ್ ದರ.

ರಾಜ್ಯಗಳಿಂದ ಸ್ವೀಕರಿಸಿದ ಪರಿಷ್ಕೃತ ಬೆಲೆಗಳು.

ತಾತ್ಕಾಲಿಕ ಅಂದಾಜುಗಳಲ್ಲಿ ಬಳಸಲಾಗುತ್ತಿದ್ದ ಡಬ್ಲ್ಯುಪಿಐ ಹೊಂದಾಣಿಕೆಯ ಬೆಲೆಗಳ ಬದಲಿಗೆ ರಾಜ್ಯಗಳು ಒದಗಿಸಿದ ನೈಜ ಬೆಲೆಗಳ ಬಳಕೆ.

ಗಣಿಗಾರಿಕೆ ಮತ್ತು ಕ್ವಾರಿ

ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ರಾಜ್ಯಗಳಿಂದ ಉಪ ಖನಿಜಗಳ ದತ್ತಾಂಶದ ಪರಿಷ್ಕರಣೆ.

ಸ್ಥಿರ ಬೆಲೆ ಅಂದಾಜಿಗಾಗಿ 'ಸಿಂಗಲ್ ಡಿಫ್ಲೇಷನ್' ಬದಲಿಗೆ 'ವಲ್ಯೂಮ್ ಎಕ್ಸ್‌ಟ್ರಾಪೋಲೇಷನ್' ಆಧಾರಿತ ಹೊಸ ವಿಧಾನದ ಬಳಕೆ.

ತಯಾರಿಕೆ

ಎಂಸಿಎದಲ್ಲಿನ ಖಾಸಗಿ ಕಾರ್ಪೊರೇಟ್ ದತ್ತಾಂಶದಿಂದ ಬಹುವಿಧದ ಚಟುವಟಿಕೆಗಳ ಪ್ರತ್ಯೇಕಿಸುವಿಕೆ.

ಬೆಳವಣಿಗೆ ದರದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಸೀಮಿತ ದತ್ತಾಂಶ ಆಧಾರಿತ ತಾತ್ಕಾಲಿಕ ಅಂದಾಜುಗಳ ಬದಲಿಗೆ ವಿವರವಾದ ಎಂಸಿಎ, ಎನ್‌ ಡಿ ಮತ್ತು ಎಸ್‌ ಯು ಎಸ್‌ ಇ ಹಾಗೂ ಪಿ ಎಲ್‌ ಎಫ್‌ ಎಸ್‌ ದತ್ತಾಂಶಗಳ ಬಳಕೆ.

ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಸೇವೆಗಳು

ಹಳೆಯ ಸರಣಿಯ ಸೂಚಕ ಆಧಾರಿತ ಅಂದಾಜುಗಳ ಬದಲಿಗೆ ಅರೆ-ಕಾರ್ಪೊರೇಟ್ ಮತ್ತು ಮನೆಬಳಕೆ ವಲಯಕ್ಕಾಗಿ ಎಸ್‌ ಯು ಎಸ್‌ ಇ ಮತ್ತು ಪಿ ಎಲ್‌ ಎಫ್‌ ಎಸ್‌ ದತ್ತಾಂಶದಿಂದ ನೇರ ಅಂದಾಜುಗಳ ಬಳಕೆ.

ಪ್ರಸಕ್ತ ಬೆಲೆ ಅಂದಾಜುಗಳಿಗೆ 2022-23 ರಂತೆಯೇ ಮುಂದುವರಿಕೆ.

ಹಳೆಯ ಸರಣಿಯ 'ಸಿಂಗಲ್ ಡಿಫ್ಲೇಷನ್' ಬದಲಿಗೆ ಹೊಸ ಸರಣಿಯಲ್ಲಿ 'ವಲ್ಯೂಮ್ ಎಕ್ಸ್‌ಟ್ರಾಪೋಲೇಷನ್' (ವಿದ್ಯುತ್, ಅನಿಲ) ಮತ್ತು 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' (ಇತರವು) ಬಳಕೆ.

ನಿರ್ಮಾಣ

ನಿರ್ಮಾಣದ ಕುರಿತಾದ ಎನ್‌ ಎಸ್‌ ಎಸ್‌ ನ ಇತ್ತೀಚಿನ ಸಮೀಕ್ಷೆಯ ಆಧಾರದ ಮೇಲೆ ನವೀಕರಿಸಿದ ದರಗಳು ಮತ್ತು ಅನುಪಾತಗಳ ಬಳಕೆ.

ಒಟ್ಟು ಉತ್ಪಾದನೆ ಮತ್ತು ಇನ್‌ಪುಟ್ ವಸ್ತುಗಳ ಲಭ್ಯತೆಯನ್ನು ತಿಳಿಯಲು ಇತ್ತೀಚಿನ ಎಸ್‌ ಐ ದತ್ತಾಂಶದ ಬಳಕೆ.

ಸ್ಥಿರ ಬೆಲೆ ಅಂದಾಜುಗಳಿಗಾಗಿ 'ಸಿಂಗಲ್ ಡಿಫ್ಲೇಷನ್' ಬದಲಿಗೆ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' ಬಳಕೆ.

ವ್ಯಾಪಾರ, ದುರಸ್ತಿ, ಹೋಟೆಲ್ ಮತ್ತು ರೆಸ್ಟೋರೆಂಟ್ಗಳು

ಹಳೆಯ ಸರಣಿಯ ಸೂಚಕ ಆಧಾರಿತ ಅಂದಾಜುಗಳ ಬದಲಿಗೆ ಅರೆ-ಕಾರ್ಪೊರೇಟ್ ಮತ್ತು ಮನೆಬಳಕೆ ವಲಯಕ್ಕಾಗಿ ಎಸ್‌ ಯು ಎಸ್‌ ಇ ಮತ್ತು ಪಿ ಎಲ್‌ ಎಫ್‌ ಎಸ್‌ ದತ್ತಾಂಶದಿಂದ ನೇರ ಅಂದಾಜುಗಳ ಬಳಕೆ.

ಪ್ರಸಕ್ತ ಬೆಲೆ ಅಂದಾಜುಗಳಿಗೆ 2022-23 ರಂತೆಯೇ ಮುಂದುವರಿಕೆ.

ಮೇಲಿನಂತೆಯೇ ಮುಂದುವರಿಕೆ.

ಸಾರಿಗೆ, ಸಂಗ್ರಹಣೆ, ಸಂವಹನ ಮತ್ತು ಪ್ರಸಾರ

ಮೇಲಿನಂತೆಯೇ (ವ್ಯಾಪಾರ ವಲಯದಂತೆ).

ಮೇಲಿನಂತೆಯೇ.

ಮೇಲಿನಂತೆಯೇ.

ಹಣಕಾಸು ಸೇವೆಗಳು

ಎಂ ಸಿ ದತ್ತಾಂಶವನ್ನು ಬಳಸಿ ಖಾಸಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವ್ಯಾಪ್ತಿಯ ವಿಸ್ತರಣೆ.

ಬೆಳವಣಿಗೆ ದರದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ಬೆಳವಣಿಗೆ ದರದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು ಮತ್ತು ವಸತಿ ಮಾಲೀಕತ್ವ

ಹೊಸ ಸರಣಿಯಲ್ಲಿ, ಒಟ್ಟು ವಸತಿಗಳ ಅಂದಾಜನ್ನು ಜನಸಂಖ್ಯಾ ಪ್ರಕ್ಷೇಪಣ (ಮೂಲ: MoH&FW) ಮತ್ತು ಇತ್ತೀಚಿನ ಸಮೀಕ್ಷೆಯ ಮನೆಬಳಕೆ ಗಾತ್ರದ ಆಧಾರದ ಮೇಲೆ ನವೀಕರಿಸಲಾಗಿದೆ.

ಅಸಂಘಟಿತ ವಲಯಕ್ಕಾಗಿ ಕಾರ್ಪೊರೇಟ್ ವಲಯದಿಂದ ಪಡೆದ ಸೂಚಕಗಳ ಬದಲಿಗೆ ಎಸ್‌ ಯು ಎಸ್‌ ಇ ಮತ್ತು ಪಿ ಎಲ್‌ ಎಫ್‌ ಎಸ್‌ ದತ್ತಾಂಶಗಳ ಬಳಕೆ.

ಸಿಪಿಐ ಮತ್ತು ಡಬ್ಲ್ಯುಪಿಐ ಮಿಶ್ರಣದ 'ಸಿಂಗಲ್ ಡಿಫ್ಲೇಷನ್' ಬದಲಿಗೆ ಸಂಬಂಧಿತ ವಸ್ತುಗಳ ಸಿಪಿಐ ಆಧಾರಿತ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' ಬಳಕೆ.

ಸಾರ್ವಜನಿಕ ಆಡಳಿತ ಮತ್ತು ರಕ್ಷಣೆ

ಪಿಂಚಣಿ ಪಾವತಿಗಳ ಹೊಂದಾಣಿಕೆಯಿಂದಾಗಿ ಬದಲಾವಣೆ.

ರಾಜ್ಯಗಳು ಮತ್ತು ರಕ್ಷಣಾ ಅಂದಾಜುಗಳು 'ಪರಿಷ್ಕೃತ ಅಂದಾಜುಗಳ' ಬದಲಿಗೆ 'ನೈಜ ವೆಚ್ಚ'ವನ್ನು ಆಧರಿಸಿವೆ.

ಸೂಚಕ ಆಧಾರಿತ ತಾತ್ಕಾಲಿಕ ಅಂದಾಜುಗಳ ಬದಲಿಗೆ ಬಜೆಟ್ ದಾಖಲೆಗಳು ಮತ್ತು ರಾಜ್ಯಗಳ ವಿವರವಾದ ದತ್ತಾಂಶದ ಬಳಕೆ.

ಇತರ ಸೇವೆಗಳು

ಅರೆ-ಕಾರ್ಪೊರೇಟ್ ಮತ್ತು ಮನೆಬಳಕೆ ವಲಯಕ್ಕಾಗಿ ಎನ್‌ ಎಸ್‌ ಎಸ್ ಸಮೀಕ್ಷೆಗಳ ನಡುವಿನ ಬೆಳವಣಿಗೆಯ ಬದಲಿಗೆ ಎಸ್‌ ಯು ಎಸ್‌ ಇ ಮತ್ತು ಪಿ ಎಲ್‌ ಎಫ್‌ ಎಸ್‌ ನ ವಾರ್ಷಿಕ ಫಲಿತಾಂಶಗಳ ಬಳಕೆ.

ಅಸಂಘಟಿತ ವಲಯಕ್ಕೆ ಸಮೀಕ್ಷೆಗಳ ನಡುವಿನ ಬೆಳವಣಿಗೆಯ ಸೂಚಕಗಳ ಬದಲಿಗೆ ಎಸ್‌ ಯು ಎಸ್‌ ಇ ಮತ್ತು ಪಿ ಎಲ್‌ ಎಫ್‌ ಎಸ್‌ ದತ್ತಾಂಶದ ಬಳಕೆ.

ಸ್ಥಿರ ಬೆಲೆ ಅಂದಾಜಿಗಾಗಿ ಒಂದೇ ರೀತಿಯ ವಸ್ತುಗಳ ಸಿಪಿಐ ಬಳಸಿ ಮಾಡುವ 'ಸಿಂಗಲ್ ಡಿಫ್ಲೇಷನ್' ವಿರುದ್ಧವಾಗಿ 'ಸಿಂಗಲ್ ಎಕ್ಸ್‌ಟ್ರಾಪೋಲೇಷನ್' ಬಳಕೆ.

 

Click here to download in PDF Format

 

*****


(ಪ್ರಕಟಣೆ ಐ.ಡಿ.: 2233800) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , हिन्दी