ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಸಮಗ್ರ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯು ಸಾರ್ವಜನಿಕ ವ್ಯವಸ್ಥೆಗಳು, ಮುಕ್ತ ನಾವೀನ್ಯತೆ ಮತ್ತು ಸಮತೋಲಿತ ಜಾಗತಿಕ ಆಡಳಿತವನ್ನು ಅವಲಂಬಿಸಿದೆ ಎಂದು ತಜ್ಞರ ಸಮಿತಿಯ ಅಭಿಪ್ರಾಯ 


ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಎಐ ಒಂದು ದಿಟ್ಟ ಬದಲಾವಣೆ ತರಬಹುದು: ವಿಶ್ವ ಬ್ಯಾಂಕ್ ಗುಂಪಿನ ದಕ್ಷಿಣ ಏಷ್ಯಾ ಪ್ರದೇಶದ ಉಪಾಧ್ಯಕ್ಷ ಜೋಹಾನ್ಸ್ ಜುಟ್

ಪ್ರಕಟಣಾ ದಿನಾಂಕ: 20 FEB 2026 8:34PM by PIB Bengaluru

ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ನಡೆದ “ಎಐ ಮತ್ತು ಆರ್ಥಿಕ ಪ್ರಗತಿಗೆ ಹೊಸ ಕ್ಷೇತ್ರ: ನಾವೀನ್ಯತೆಯನ್ನು ಸಮಗ್ರ ಬೆಳವಣಿಗೆಗೆ ಜೋಡಿಸುವುದು” ಎನ್ನುವ ಅಧಿವೇಶನವು ಮುಂದಿನ ದಶಕದ ನಿರ್ಣಾಯಕ ವಿಷಯವನ್ನು ಪರಿಶೀಲಿಸಲು ಪ್ರಮುಖ ಅರ್ಥಶಾಸ್ತ್ರಜ್ಞರು, ಅಭಿವೃದ್ಧಿ ವೃತ್ತಿಪರರು ಮತ್ತು ಜಾಗತಿಕ ನೀತಿ ಚಿಂತಕರನ್ನು ಒಟ್ಟುಗೂಡಿಸಿತು. ಅದೇನೆಂದರೆ ಕೃತಕ ಬುದ್ಧಿಮತ್ತೆ ಆರ್ಥಿಕ ಭೇದಗಳನ್ನು ವಿಸ್ತರಿಸುತ್ತದೆಯೇ ಅಥವಾ ಸಮಗ್ರ ಸಮೃದ್ಧಿಗೆ ವೇಗವರ್ಧಕವಾಗುತ್ತದೆಯೇ ಎಂದು.  ಉತ್ಪಾದಕತೆಯ ಲಾಭಗಳು, ಸಾರ್ವಜನಿಕ ವಲಯದ ಪರಿವರ್ತನೆ, ಮುಕ್ತ ನಾವೀನ್ಯತೆ ಪರಿಸರ ವ್ಯವಸ್ಥೆಗಳು ಮತ್ತು ಅವಶ್ಯಕತೆಗನುಗುಣವಾಗಿ ಸಿದ್ಧವಾದ ಕೆಲಸಗಾರರ ಲಭ್ಯತೆ ಸೇರಿದಂತೆ ಎಐ ನೇತೃತ್ವದ ಬೆಳವಣಿಗೆಗೆ ಅಗತ್ಯವಾದ ರಚನಾತ್ಮಕ ಪರಿಸ್ಥಿತಿಗಳನ್ನು ಚರ್ಚೆಯು ಪರಿಗಣಿಸಿತು.

ಉದಯೋನ್ಮುಖ ಆರ್ಥಿಕತೆಗಳಿಗೆ ಅವಕಾಶಗಳ ಕುರಿತು ಮಾತನಾಡುತ್ತಾ, ವಿಶ್ವ ಬ್ಯಾಂಕ್ ಸಮೂಹದ ದಕ್ಷಿಣ ಏಷ್ಯಾ ಪ್ರದೇಶದ ಉಪಾಧ್ಯಕ್ಷ ಜೋಹಾನ್ಸ್ ಜುಟ್, ಕೇವಲ ಹೊಸ ಕ್ಷೇತ್ರಗಳ ಪ್ರಗತಿಗಳ ಬದಲು ಪ್ರಾಯೋಗಿಕ, ನಿಯೋಜಿಸಬಹುದಾದ ಪರಿಹಾರಗಳ ಮೂಲಕ ಅಭಿವೃದ್ಧಿಯನ್ನು ವೇಗಗೊಳಿಸಲು ಎಐನ ಸಾಮರ್ಥ್ಯದ ಬಗ್ಗೆ   ಒತ್ತಿ ಹೇಳಿದರು. "ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ, ಎಐ ಒಂದು ಪ್ರಮುಖ ಬದಲಾವಣೆ ತರುವ  ಸಾಧನವಾಗಬಹುದು. ಇದು ದೀರ್ಘಕಾಲದ ಅಭಿವೃದ್ಧಿ ಸವಾಲುಗಳನ್ನು ನಿವಾರಿಸಲು ಹಾಗು ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಅವಕಾಶವನ್ನು ನೀಡುತ್ತದೆ" ಎಂದು ಅವರು ಹೇಳಿದರು. ʻಸಣ್ಣ ಎಐʼ - ಪ್ರಾಯೋಗಿಕ, ಕೈಗೆಟುಕುವ, ಸ್ಥಳೀಯವಾಗಿ ಪ್ರಸ್ತುತವಾದ ಎಐ,  ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಸಂಪರ್ಕ, ದತ್ತಾಂಶ, ಕೌಶಲ್ಯಗಳು ಮತ್ತು ಮೂಲಸೌಕರ್ಯ ಸೀಮಿತವಾಗಿದ್ದರೂ ಸಹ ಕಾರ್ಯನಿರ್ವಹಿಸುತ್ತದೆ. ಇದರ ಮೇಲೆ ಗಮನ ಹರಿಸಬೇಕು ಎಂದು ಅವರು ಹೇಳಿದರು.

ಚಿಕಾಗೋ ವಿಶ್ವವಿದ್ಯಾಲಯದ ಬೆಳವಣಿಗೆ ಮತ್ತು ಆರ್ಥಿಕತೆ ಕೇಂದ್ರದ ಸಹ-ನಿರ್ದೇಶಕ ಉಫುಕ್ ಅಕ್ಸಿಗಿಟ್, ನಾವೀನ್ಯತೆ ಪರಿಸರ ವ್ಯವಸ್ಥೆಯಲ್ಲಿನ ರಚನಾತ್ಮಕ ಅಸಮತೋಲನದ ಬಗ್ಗೆ ಗಮನ ಸೆಳೆದರು. ಅಪ್ಲಿಕೇಶನ್ ಪದರವು ಆರಂಭಿಕ ಮತ್ತು ಹೊಸಬರಿಗೆ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ, ಆದರೆ ಕಂಪ್ಯೂಟ್-, ಡೇಟಾ- ಮತ್ತು ಪ್ರತಿಭೆ-ತೀವ್ರವಾದ ಫೌಂಡೇಷನ್ ಪದರವು ಬಲಿಷ್ಠರೆಡೆಗೆ ಶಕ್ತಿಯನ್ನು ಕೇಂದ್ರೀಕರಿಸುವ ಮತ್ತು ದೀರ್ಘಕಾಲೀನ ಚೈತನ್ಯ ಲಕ್ಷಣಗಳನ್ನು  ನಿಧಾನಗೊಳಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದರು. "ಅಪ್ಲಿಕೇಶನ್ ಪದರದಲ್ಲಿ, ಪ್ರವೇಶ ಅಡೆತಡೆಗಳು ಕಡಿಮೆ, ಸೃಜನಶೀಲಕ್ಕೆ ಅನುಕೂಲಕರವಾಗಿವೆ. ಆದರೆ ಫೌಂಡೇಷನ್ ಪದರದಲ್ಲಿ, ಪ್ರವೇಶಕ್ಕಾಗಿ ಅಡೆತಡೆಗಳು ಹೆಚ್ಚಿರುತ್ತವೆ,   ಸಮಸ್ಯೆಯನ್ನು ಸೃಷ್ಟಿಸುತ್ತವೆ" ಎಂದು ಅವರು ಹೇಳಿದರು. ಭವಿಷ್ಯದ ಪ್ರಮುಖ ಪ್ರಶ್ನೆಯೆಂದರೆ "ಸೃಜನಶೀಲತೆಗೆ " ಏನಾಗುತ್ತದೆ ಎನ್ನುವುದು, ಇದು ನಿರಂತರ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಅಂಶ ಎಂದು ಅವರು ಹೇಳಿದರು.

ಅಭಿವೃದ್ಧಿ ಫಲಿತಾಂಶಗಳ ಮೇಲೆ ಮುಖ್ಯ ಗಮನ ಸೆಳೆಯುತ್ತಾ, ಚಿಕಾಗೋ ವಿಶ್ವವಿದ್ಯಾಲಯದ ಅಭಿವೃದ್ಧಿ ಇನ್ನೋವೇಶನ್ ಲ್ಯಾಬ್ನ ನಿರ್ದೇಶಕ ಮೈಕೆಲ್ ಕ್ರೆಮರ್ ಅವರು, ಕೇವಲ ಮಾರುಕಟ್ಟೆಯಿಂದ ಮಾತ್ರ ಬೆಂಬಲಿಸಲು ಸಾಧ್ಯವಾಗದ ಹೆಚ್ಚಿನ ಪರಿಣಾಮ ಬೀರುವ ಬಳಕೆಯ ಸಂದರ್ಭಗಳಲ್ಲಿ ಸಾರ್ವಜನಿಕ ಹೂಡಿಕೆಯ ಮಹತ್ವವನ್ನು ಒತ್ತಿ ಹೇಳಿದರು. "ನೀತಿ ನಿರೂಪಕರು ಸೂಕ್ತ ಕ್ರಮ ಕೈಗೊಂಡು ಸೂಕ್ತವಾಗಿ ಹೂಡಿಕೆ ಮಾಡಿದರೆ,  ಎಐ  ಕೆಲವು ಅಂತರಗಳನ್ನು ಗಮನಾರ್ಹವಾಗಿ ತೆಗೆದು ಹಾಕುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಅವರು ಹೇಳಿದರು, ಸಾರ್ವಜನಿಕ ಸರಕುಗಳನ್ನು ತಲುಪಿಸುವ ಅಪ್ಲಿಕೇಶನ್ಗಳಿಗೆ ಸರ್ಕಾರಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳಿಂದ ಸಕ್ರಿಯ ಬೆಂಬಲದ ಅಗತ್ಯವಿರುತ್ತದೆ ಏಕೆಂದರೆ ಅವುಗಳು "ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಾಣಿಜ್ಯ ಹೂಡಿಕೆಯನ್ನು ಆಕರ್ಷಿಸುವುದಿಲ್ಲ" ಎಂದು ಒತ್ತಿ ಹೇಳಿದರು.

ಎಂಐಟಿ ಯ ಜೆ-ಪಾಲ್ ನ ಜಾಗತಿಕ ಕಾರ್ಯನಿರ್ವಾಹಕ ನಿರ್ದೇಶಕರಾದ ಇಕ್ಬಾಲ್ ಸಿಂಗ್ ಧಲಿವಾಲ್ ಅವರು ಎಐ ಉತ್ಪಾದಕತೆಯಲ್ಲಿ ಕೇಂದ್ರಬಿಂದುವಾಗಿ ಮುಂಚೂಣಿಯ ಸೇವಾ ವಿತರಣೆಯ ಬಗ್ಗೆ ಮಾತನಾಡಿದರು.  ದತ್ತಾಂಶಗಳ ಪ್ರಮಾಣಗಳ ಮೇಲೆ ಅಳೆಯಬಹುದಾದ ಪ್ರಭಾವದ ಮೌಲ್ಯವನ್ನು ಒತ್ತಿ ಹೇಳುತ್ತಾ, "ಬಹಳ ಕಡಿಮೆ ವಿಷಯಗಳು ಮುಂಚೂಣಿಯ ಕೆಲಸಗಾರರಿಗೆ ಸಮಯವನ್ನು ಉಳಿಸುತ್ತವೆ. ನಿಮ್ಮ ಎಐ ಅಪ್ಲಿಕೇಶನ್,  ಶಿಕ್ಷಕರು ಅಥವಾ ಆರೋಗ್ಯ ಕಾರ್ಯಕರ್ತರಿಗೆ ಸಮಯವನ್ನು ಉಳಿಸಿದರೆ, ಅದು ತನ್ನ ಕಾರ್ಯದಲ್ಲಿ ಗೆದ್ದಂತೆ " ಎಂದು ಹೇಳಿದರು, ಬೆಳೆಯುತ್ತಿರುವ ಅಸಮಾನತೆಯನ್ನು ತಪ್ಪಿಸಲು ತಂತ್ರಜ್ಞಾನ ಪ್ರಸರಣದ ವೇಗವು ಅವಶ್ಯಕತೆಗನುಗುಣವಾಗಿ ಸಿದ್ಧವಾದ ಕೆಲಸಗಾರರ ಲಭ್ಯತೆಯೊಂದಿಗೆ ಹೊಂದಿಕೆಯಾಗಬೇಕು ಎಂದು ಎಚ್ಚರಿಸಿದರು.

ಜಾಗತಿಕ ಆಡಳಿತ ದೃಷ್ಟಿಕೋನದ ಬಗ್ಗೆ ಗಮನ ಸೆಳೆಯುತ್ತಾ, ಕೊಲಂಬಿಯಾ ವಿಶ್ವವಿದ್ಯಾಲಯದ ಕಾನೂನು ಮತ್ತು ಅಂತರರಾಷ್ಟ್ರೀಯ ಸಂಸ್ಥೆಯ ಪ್ರಾಧ್ಯಾಪಕರಾದ ಅನು ಬ್ರಾಡ್ಫೋರ್ಡ್, ಎಐ ಯುಗದಲ್ಲಿ ಸ್ವತಂತ್ರವಾಗಿರುವುದು  ಬಹುಮುಖಿಯಾಗಿದೆ ಮತ್ತು ಪೂರೈಕೆ ಸರಪಳಿಗಳು, ಮಾನದಂಡಗಳು ಮತ್ತು ನಿಯಂತ್ರಕ ಚೌಕಟ್ಟುಗಳಲ್ಲಿ ಹಂಚಿಕೊಳ್ಳಲ್ಪಟ್ಟಿದೆ ಎಂದು ಹೇಳಿದರು. "ಜಾಗತಿಕ ದಕ್ಷಿಣವು ಎಐ ಸ್ವಾತಂತ್ರ್ಯಕ್ಕೆ  ಇದೇ ರೀತಿಯ ಪ್ರೋತ್ಸಾಹವನ್ನು ಹೊಂದಿದೆ: ಇದು ಆ ದೇಶಗಳ  ಆರ್ಥಿಕತೆಗಳು ಮತ್ತು ಸಮಾಜಗಳಿಗೆ ಉತ್ತಮವಾಗಿ ಸೇವೆ ಸಲ್ಲಿಸುವ ನಿಯಮಗಳನ್ನು ರೂಪಿಸುವುದು" ಎಂದು ಅವರು ಹೇಳಿದರು, ಸ್ಪರ್ಧಾತ್ಮಕತೆಯನ್ನು ವಿರೋಧಿ  ಗುರಿಗಳಾಗಿ ಪರಿಗಣಿಸುವ ಬದಲು ಜವಾಬ್ದಾರಿಯುತ ನಿಯಂತ್ರಣದೊಂದಿಗೆ ಸಮತೋಲನಗೊಳಿಸುವ ಸಹಕಾರಿ ವಿಧಾನಗಳಿಗೆ ಕರೆ ನೀಡಿದರು.

ಚರ್ಚೆಯ ಸಮಯದಲ್ಲಿ, ತಜ್ಞರು ಸ್ಪಷ್ಟವಾದ ಆರ್ಥಿಕ ಸಂದೇಶದ ಬಗ್ಗೆ ಒಮ್ಮುಖವಾದರು: ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ನಿರ್ವಾಹಕರು ಮತ್ತು ಸಣ್ಣ ಉದ್ಯಮಗಳ ಉತ್ಪಾದಕತೆಯನ್ನು ಹೆಚ್ಚಿಸುವುದು, ಸಾರ್ವಜನಿಕ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಹೆಚ್ಚು ನಿಖರವಾದ ಗುರಿಯನ್ನು ಸಕ್ರಿಯಗೊಳಿಸುವಲ್ಲಿ ಎಐನ ಅತ್ಯಂತ ಪರಿವರ್ತನಾತ್ಮಕ ಪರಿಣಾಮವಿರಬಹುದು. ಅದೇ ಸಮಯದಲ್ಲಿ, ಕಾರ್ಮಿಕರ ಬದಲಾವಣೆ, ಮಾರುಕಟ್ಟೆ ಕೇಂದ್ರೀಕರಣ, ಗುಪ್ತ ನಾವೀನ್ಯತೆ ಮಾದರಿಗಳು ಮತ್ತು ಅಸಮಾನ ಪ್ರಸರಣವನ್ನು ಸುತ್ತುವರೆದಿರುವ ಅಪಾಯಗಳಿಗೆ ತ್ವರಿತ ನೀತಿ ಗಮನದ ಅಗತ್ಯವಿದೆ.

AI ಯುಗದಲ್ಲಿ ಸಮಗ್ರ ಬೆಳವಣಿಗೆಯು ಉದ್ದೇಶಪೂರ್ವಕ ಆಯ್ಕೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಧಿವೇಶನವು ತೀರ್ಮಾನಿಸಿದೆ: ಸಾರ್ವಜನಿಕ ಹಿತಾಸಕ್ತಿ ಅನ್ವಯಿಕೆಗಳಲ್ಲಿ ಹೂಡಿಕೆ ಮಾಡುವುದು, ಮುಕ್ತ ಜ್ಞಾನ ಹರಿವನ್ನು ಸಂರಕ್ಷಿಸುವುದು, ಅನ್ವಯಿಕ ಹಂತದಲ್ಲಿ ಉದ್ಯಮಶೀಲತೆಯನ್ನು ಸಕ್ರಿಯಗೊಳಿಸುವುದು ಮತ್ತು ನಾವೀನ್ಯತೆ ಮತ್ತು ಸಮಾನತೆ ಎರಡನ್ನೂ ಬೆಂಬಲಿಸುವ ನಿಯಂತ್ರಕ ಚೌಕಟ್ಟುಗಳನ್ನು ನಿರ್ಮಿಸುವುದು.

ಎಐ ಯುಗದಲ್ಲಿ ಸಮಗ್ರ ಬೆಳವಣಿಗೆಯು ಈ ಉದ್ದೇಶಪೂರಿತ ಆಯ್ಕೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಧಿವೇಶನದಲ್ಲಿ ತೀರ್ಮಾನಕ್ಕೆ ಬರಲಾಯಿತು: ಸಾರ್ವಜನಿಕ ಹಿತಾಸಕ್ತಿಗಳಲ್ಲಿ ಹೂಡಿಕೆ ಮಾಡುವುದು, ಮುಕ್ತ ಜ್ಞಾನದ ಹರಿವನ್ನು ನಿರ್ವಹಿಸುವುದು, ಬಳಕೆಯ ಮಟ್ಟದಲ್ಲಿ ಉದ್ಯಮಶೀಲತೆಯನ್ನು ಸಕ್ರಿಯಗೊಳಿಸುವುದು ಮತ್ತು ನಾವೀನ್ಯತೆ ಮತ್ತು ಸಮಾನತೆ ಎರಡನ್ನೂ ಬೆಂಬಲಿಸುವ ನಿಯಂತ್ರಕ ಚೌಕಟ್ಟುಗಳನ್ನು ನಿರ್ಮಿಸುವುದು.

 

*****


(ಪ್ರಕಟಣೆ ಐ.ಡಿ.: 2231123) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी