ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಕೃತಕ ಬುದ್ಧಿಮತ್ತೆ ಪ್ರಭಾವದ ಸಂಗ್ರಹ ದಾಖಲೆ (ಕೇಸ್‌ ಬುಕ್ಸ್) - ಆರೋಗ್ಯ ಮತ್ತು ಶಿಕ್ಷಣ ಬಿಡುಗಡೆ


ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಕೌಶಲ್ಯ ವ್ಯವಸ್ಥೆಗಳಲ್ಲಿ ಸಾಂಸ್ಥಿಕ ತಾಂತ್ರಿಕ ಸಂಯೋಜನೆ ವಿವರಿಸುವ ಕೇಸ್‌ ಬುಕ್‌ ಗಳು

ಎಐ ಇಂಪ್ಯಾಕ್ಟ್ ಕೇಸ್‌ ಬುಕ್‌ ಗಳಲ್ಲಿ ನೈತಿಕ ಆಡಳಿತ, ಪರಸ್ಪರ ಕಾರ್ಯಸಾಧ್ಯತೆ, ಹೊಣೆಗಾರಿಕೆ ಮತ್ತು ಸಹಯೋಗದ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆಗಳಿಗೆ ಒತ್ತು

ಪ್ರಕಟಣಾ ದಿನಾಂಕ: 17 FEB 2026 8:27PM by PIB Bengaluru

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಇಂಡಿಯಾಎಐ ಮಿಷನ್ ನೇತೃತ್ವದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ ಸೇರಿದಂತೆ ಪಾಲುದಾರರ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಆರೋಗ್ಯ ಮತ್ತು ಶಿಕ್ಷಣದ ಎಐ ಇಂಪ್ಯಾಕ್ಟ್ ಸಂಗ್ರಹ ದಾಖಲೆ (ಕೇಸ್‌ ಬುಕ್‌) ಗಳನ್ನು ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಾಯೋಗಿಕ ಹಂತಗಳನ್ನು ಮೀರಿ ಚಿಕಿತ್ಸಾಲಯಗಳು, ತರಗತಿ ಕೊಠಡಿಗಳು ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಗಳಲ್ಲಿ ಅನುಷ್ಠಾನಗೊಂಡಿರುವ ನೈಜ-ಪ್ರಪಂಚದ ಕೃತಕ ಬುದ್ಧಿಮತ್ತೆ ನಿಯೋಜನೆಗಳನ್ನು ವಿಷಯಾಧಾರಿತ ಕೇಸ್‌ ಬುಕ್‌ ಗಳು ದಾಖಲಿಸುತ್ತವೆ. ಮಾಪನ ಮಾಡಬಹುದಾದ ಫಲಿತಾಂಶಗಳು ಮತ್ತು ಬೆಳವಣಿಗೆ ಉತ್ತೇಜಿಸುವ ಚೌಕಟ್ಟಿನ ಮಾದರಿಗಳನ್ನು ಪ್ರದರ್ಶಿಸುವ ಈ ಸಂಕಲನಗಳನ್ನು, ವಿಶೇಷವಾಗಿ ಭಾರತ ಮತ್ತು ಜಾಗತಿಕ ದಕ್ಷಿಣದಲ್ಲಿ, ಸಾಂಸ್ಥಿಕ ಅಳವಡಿಕೆಗೆ ಪ್ರಾಯೋಗಿಕ ನೀಲನಕ್ಷೆಗಳಾಗಿ ಇರಿಸಲಾಗಿದ್ದು, ಇವು ನೈತಿಕ ಆಡಳಿತ, ಪರಸ್ಪರ ಕಾರ್ಯಸಾಧ್ಯತೆ, ಸಾರ್ವಜನಿಕ-ಖಾಸಗಿ ಸಹಯೋಗ ಮತ್ತು ಪುರಾವೆ ಆಧಾರಿತ ಮೌಲ್ಯಮಾಪನವನ್ನು ವಿವರಿಸಿವೆ.

ಕವಿತಾ ಭಾಟಿಯಾ, ವಿಜ್ಞಾನಿ ಜಿ ಮತ್ತು ಗುಂಪು ಸಂಯೋಜಕರು, ಎಐ ಮತ್ತು ಇಟಿ ವಿಭಾಗ, MeitY ಅವರ ನುಡಿಗಳು, "ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಕ್ಕಾಗಿ ಈ ಆರು ಸಂಕಲನಗಳನ್ನು ಸಹ-ರಚಿಸಿದ ಎಲ್ಲಾ ಪಾಲುದಾರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಆರೋಗ್ಯ ವಲಯದಲ್ಲಿ ಎಐ ನ ನೈಜ-ಪ್ರಪಂಚದ ಪ್ರಭಾವ ಕುರಿತಾದ ಸಂಗ್ರಹ ದಾಖಲೆಗಾಗಿ, ಜಾಗತಿಕ ಮಾನದಂಡಾತ್ಮಕ, ಪುರಾವೆ ಆಧಾರಿತ ಆಯ್ಕೆ ಪ್ರಕ್ರಿಯೆಯ ಮಾರ್ಗದರ್ಶನ ಒದಗಿಸಿದ್ದು ತಾಂತ್ರಿಕ ಪಾಲುದಾರರಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಿರಂತರ ಬೆಂಬಲದೊಂದಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಐಸಿಎಂಆರ್ ನ ಉಸ್ತುವಾರಿಯನ್ನು ನಾನು ಶ್ಲಾಘಿಸುತ್ತೇನೆ."  

ಶಿಖಾ ದಹಿಯಾ, ಜಂಟಿ ನಿರ್ದೇಶಕರು, MeitY ಅವರ ಅಭಿಮತ, ಈ ಕೇಸ್‌ ಬುಕ್‌ ಗಳು ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ಮಹತ್ವದ ಫಲಿತಾಂಶವಾಗಿದೆ. ಇವು ಆರೋಗ್ಯ ಮತ್ತು ಶಿಕ್ಷಣದಲ್ಲಿ ಎಐ ನ ನಿಜ ಜೀವನದ ಬಳಕೆಯ ಪ್ರಕರಣಗಳನ್ನು ವಿವರಿಸಿದ್ದು, ಅಳೆಯಬಹುದಾದ ಪರಿಣಾಮದ ಮೇಲೆ ಶೃಂಗಸಭೆ ಗಮನಹರಿಸಿದೆ. ಈ ಪ್ರಕಟಣೆಗಳು ಮಹತ್ವದ ಉಲ್ಲೇಖಗಳಾಗಲಿ ಮತ್ತು ಈ ನಿರ್ಣಾಯಕ ವಲಯಗಳಲ್ಲಿ ಭವಿಷ್ಯದ ನೀತಿಯ ಹಾದಿಯ ಮಾರ್ಗದರ್ಶನಕ್ಕೆ ಪೂರಕವಾಗಿವೆ ಎಂದು ನಾವು ಭಾವಿಸುತ್ತೇವೆ"

ಕ್ಯಾಥರಿನಾ ಬೋಹ್ಮೆ, ಉಸ್ತುವಾರಿ ಅಧಿಕಾರಿ WHO ಆಗ್ನೇಯ ಏಷ್ಯಾ ಪ್ರದೇಶ ಅವರ ನುಡಿಗಳು, "ಕೃತಕ ಬುದ್ಧಿಮತ್ತೆ ಕುರಿತಾದ ಸಂಭಾಷಣೆಯನ್ನು ಭರವಸೆಯಿಂದ ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಈ ಸಂಕಲನ ಹೊಂದಿದೆ. ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು, ಕಾರ್ಯಪಡೆಯ ಸವಾಲುಗಳು ಮತ್ತು ಸೇವಾ ವಿತರಣಾ ಸಮಸ್ಯೆಗಳನ್ನು ನಿಭಾಯಿಸಲು ಕೃತಕ ಬುದ್ಧಿಮತ್ತೆ ಒಂದು ಸಾಧನವಾಗಿ ಹೊರಹೊಮ್ಮುತ್ತಿದೆ. ಪ್ರಪಂಚದಾದ್ಯಂತ ತಾಂತ್ರಿಕ ಮತ್ತು ನೈತಿಕ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಪ್ರಪಂಚದಾದ್ಯಂತ ಪುರಾವೆ ಆಧಾರಿತ ಎಐ ಅಳವಡಿಕೆಯನ್ನು ಉತ್ತೇಜಿಸುವ ಸದೃಢ ಎಐ ಆಡಳಿತ ಚೌಕಟ್ಟನ್ನು ರೂಪಿಸುವಲ್ಲಿ ದೇಶಗಳು ಮತ್ತು ಸರ್ಕಾರಗಳಿಗೆ ಬೆಂಬಲ ನೀಡಲು ವಿಶ್ವ ಆರೋಗ್ಯ ಸಂಸ್ಥೆ (WHO) ಸಂಪೂರ್ಣವಾಗಿ ಬದ್ಧವಾಗಿದೆ."

 

*****


(ಪ್ರಕಟಣೆ ಐ.ಡಿ.: 2229492) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Telugu