ರೈಲ್ವೇ ಸಚಿವಾಲಯ
2024 ಮತ್ತು 2025ರ ವಾರ್ಷಿಕ ಕ್ಯಾಲೆಂಡರ್ ಪ್ರಕಾರ 1,43,086 ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ
59,678 ಹುದ್ದೆಗಳಿಗೆ ಮೊದಲ ಹಂತದ/ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಪೂರ್ಣಗೊಂಡಿವೆ
ಟೆಕ್ನಿಷಿಯನ್ ಗಳು, ಜೂನಿಯರ್ ಇಂಜಿನಿಯರ್ ಗಳು, ಪ್ಯಾರಾಮೆಡಿಕಲ್ ವಿಭಾಗಗಳು, ಸಬ್-ಇನ್ಸ್ಪೆಕ್ಟರ್‌ಗಳು ಮತ್ತು ಅಸಿಸ್ಟೆಂಟ್ ಲೋಕೋ ಪೈಲಟ್ ಗಳು ಸೇರಿದಂತೆ ವಿವಿಧ ಹುದ್ದೆಗಳಿಗಾಗಿ 31,000ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆ ಪಟ್ಟಿಗಳನ್ನು ಅಂತಿಮಗೊಳಿಸಲಾಗಿದೆ
ಪ್ರಕಟಣಾ ದಿನಾಂಕ:
04 FEB 2026 4:58PM by PIB Bengaluru
ಪ್ರಸ್ತುತ, ವಾರ್ಷಿಕ ಕ್ಯಾಲೆಂಡರ್ 2024 ಮತ್ತು 2025ರ ಪ್ರಕಾರ ಭಾರತೀಯ ರೈಲ್ವೆಯಲ್ಲಿ 1,43,086 ಗೆಜೆಟೆಡ್ ಅಲ್ಲದ ಸಿಬ್ಬಂದಿಗಳ ನೇಮಕಾತಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಜನವರಿ 2024 ರಿಂದ ಡಿಸೆಂಬರ್ 2024 ರ ಅವಧಿಯಲ್ಲಿ, ಅಸಿಸ್ಟೆಂಟ್ ಲೋಕೋ ಪೈಲಟ್ (ALPs), ಟೆಕ್ನಿಷಿಯನ್ ಗಳು, ಸಬ್-ಇನ್ಸ್ಪೆಕ್ಟರ್ ಗಳು, ರೈಲ್ವೆ ಸಂರಕ್ಷಣಾ ದಳದ (RPF) ಕಾನ್ಸ್ಟೆಬಲ್ ಗಳು, ಜೂನಿಯರ್ ಇಂಜಿನಿಯರ್ (JEs)/ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS)/ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ (CMA), ಪ್ಯಾರಾಮೆಡಿಕಲ್ ವಿಭಾಗಗಳು, ತಾಂತ್ರಿಕೇತರ ಜನಪ್ರಿಯ ವಿಭಾಗಗಳು (ಪದವಿ), ತಾಂತ್ರಿಕೇತರ ಜನಪ್ರಿಯ ವಿಭಾಗಗಳು (ಪದವಿ ಪೂರ್ವ), ಮಿನಿಸ್ಟೀರಿಯಲ್ ಮತ್ತು ಐಸೊಲೇಟೆಡ್ ವಿಭಾಗಗಳು ಮತ್ತು ಲೆವೆಲ್-1 ವಿಭಾಗಗಳಾದ ಅಸಿಸ್ಟೆಂಟ್ಸ್, ಟ್ರ್ಯಾಕ್ ಮೆಂಟೇನರ್ಸ್ ಮತ್ತು ಪಾಯಿಂಟ್ಸ್‌ಮನ್ ಹುದ್ದೆಗಳನ್ನು ಭರ್ತಿ ಮಾಡಲು 92,116 ಹುದ್ದೆಗಳಿಗಾಗಿ (ದಕ್ಷಿಣ ರೈಲ್ವೆಯ 6,927 ಹುದ್ದೆಗಳು ಮತ್ತು ಐಸಿಎಫ್ ನ 1,395 ಹುದ್ದೆಗಳು ಸೇರಿದಂತೆ) ಹತ್ತು ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳನ್ನು (CENs) ಹೊರಡಿಸಲಾಗಿದೆ.
59,678 ಹುದ್ದೆಗಳಿಗೆ ಮೊದಲ ಹಂತದ/ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBTs) ಪೂರ್ಣಗೊಂಡಿವೆ. ವಿವರಗಳು ಈ ಕೆಳಗಿನಂತಿವೆ:-
|
ಪರೀಕ್ಷೆ
|
ಅಭ್ಯರ್ಥಿಗಳು
|
ನಗರಗಳು
|
ಭಾಷೆಗಳು
|
|
ALP ಹುದ್ದೆಗಾಗಿ ಮೊದಲ ಹಂತದ CBT (18,799 ಖಾಲಿ ಹುದ್ದೆಗಳು)
|
18,40,347
|
156
|
15
|
|
ಟೆಕ್ನಿಷಿಯನ್ ಹುದ್ದೆಗಾಗಿ CBT (14,298 ಖಾಲಿ ಹುದ್ದೆಗಳು)
|
26,99,892
|
139
|
15
|
|
JE/DMS/CMA ಹುದ್ದೆಗಾಗಿ ಮೊದಲ ಹಂತದ CBT (7,951 ಖಾಲಿ ಹುದ್ದೆಗಳು)
|
11,01,266
|
146
|
15
|
|
RPF-SI ಹುದ್ದೆಗಾಗಿ CBT (452 ಖಾಲಿ ಹುದ್ದೆಗಳು)
|
15,35,635
|
143
|
15
|
|
RPF-ಕಾನ್ಸ್ಟೇಬಲ್ ಹುದ್ದೆಗಾಗಿ CBT (4,208 ಖಾಲಿ ಹುದ್ದೆಗಳು)
|
45,30,288
|
147
|
15
|
|
ಪ್ಯಾರಾಮೆಡಿಕಲ್ ವಿಭಾಗಗಳಿಗಾಗಿ CBT (1,376 ಖಾಲಿ ಹುದ್ದೆಗಳು)
|
7,08,321
|
143
|
15
|
|
ತಾಂತ್ರಿಕೇತರ ಜನಪ್ರಿಯ ವಿಭಾಗಗಳಿಗಾಗಿ ಮೊದಲ ಹಂತದ CBT (ಪದವಿ) (8,113 ಖಾಲಿ ಹುದ್ದೆಗಳು)
|
58,41,774
|
141
|
15
|
|
ತಾಂತ್ರಿಕೇತರ ಜನಪ್ರಿಯ ವಿಭಾಗಗಳಿಗಾಗಿ ಮೊದಲ ಹಂತದ CBT (ಪದವಿಪೂರ್ವ) (3,445 ಖಾಲಿ ಹುದ್ದೆಗಳು)
|
63,27,473
|
157
|
15
|
|
ಮಿನಿಸ್ಟೀರಿಯಲ್ ಮತ್ತು ಐಸೋಲೇಟೆಡ್ ವಿಭಾಗಗಳಿಗಾಗಿ CBT (1,036 ಖಾಲಿ ಹುದ್ದೆಗಳು)
|
4,46,013
|
139
|
15
|
|
ಒಟ್ಟು ಅಭ್ಯರ್ಥಿಗಳು
|
2,50,31,009
|
|
|
ALP, JE/DMS/CMA ಮತ್ತು ತಾಂತ್ರಿಕೇತರ ಜನಪ್ರಿಯ ವಿಭಾಗಗಳ (ಪದವಿ ಮತ್ತು ಪದವಿ ಪೂರ್ವ) ಹುದ್ದೆಗಳಿಗಾಗಿ ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBTs) ಕೂಡ ಪೂರ್ಣಗೊಂಡಿವೆ. ವಿವರಗಳು ಈ ಕೆಳಗಿನಂತಿವೆ: -
|
ಪರೀಕ್ಷೆ
|
ಅಭ್ಯರ್ಥಿಗಳು
|
ನಗರಗಳು
|
ಭಾಷೆಗಳು
|
|
ALP ಹುದ್ದೆಗಾಗಿ ಎರಡನೇ ಹಂತದ CBT (18,799 ಖಾಲಿ ಹುದ್ದೆಗಳು)
|
2,66,363
|
112
|
15
|
|
JE/DMS/CMA ಹುದ್ದೆಗಾಗಿ ಎರಡನೇ ಹಂತದ CBT (7,951 ಖಾಲಿ ಹುದ್ದೆಗಳು)
|
1,17,339
|
118
|
15
|
|
ತಾಂತ್ರಿಕೇತರ ಜನಪ್ರಿಯ ವಿಭಾಗಗಳಿಗಾಗಿ ಎರಡನೇ ಹಂತದ CBT (ಪದವಿ) (8,113 ಖಾಲಿ ಹುದ್ದೆಗಳು)
|
1,21,931
|
129
|
15
|
|
ತಾಂತ್ರಿಕೇತರ ಜನಪ್ರಿಯ ವಿಭಾಗಗಳಿಗಾಗಿ ಎರಡನೇ ಹಂತದ CBT (ಪದವಿಪೂರ್ವ) (3,445 ಖಾಲಿ ಹುದ್ದೆಗಳು)
|
51,978
|
79
|
15
|
|
ಒಟ್ಟು ಅಭ್ಯರ್ಥಿಗಳು
|
5,57,611
|
|
|
ALP ಮತ್ತು ತಾಂತ್ರಿಕೇತರ ಜನಪ್ರಿಯ ವಿಭಾಗಗಳ (ಪದವಿ) ಹುದ್ದೆಗಳಿಗಾಗಿ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT) ಹಾಗೂ ತಾಂತ್ರಿಕೇತರ ಜನಪ್ರಿಯ ವಿಭಾಗಗಳ (ಪದವಿ ಮಟ್ಟದ) ಮತ್ತು ಮಿನಿಸ್ಟೀರಿಯಲ್ ಮತ್ತು ಐಸೊಲೇಟೆಡ್ ವಿಭಾಗಗಳ ಹುದ್ದೆಗಳಿಗಾಗಿ ಕಂಪ್ಯೂಟರ್ ಆಧಾರಿತ ಕೌಶಲ್ಯ ಪರೀಕ್ಷೆಗಳು ಕೂಡ ಪೂರ್ಣಗೊಂಡಿವೆ. ವಿವರಗಳು ಈ ಕೆಳಗಿನಂತಿವೆ: -
|
ಪರೀಕ್ಷೆ
|
ಅಭ್ಯರ್ಥಿಗಳು
|
ನಗರಗಳು
|
ಭಾಷೆಗಳು
|
|
ALP ಹುದ್ದೆಗಾಗಿ CBAT (18,799 ಖಾಲಿ ಹುದ್ದೆಗಳು)
|
1,32,044
|
84
|
2
|
|
ಮಿನಿಸ್ಟೀರಿಯಲ್ ಮತ್ತು ಐಸೋಲೇಟೆಡ್ ವಿಭಾಗಗಳಿಗಾಗಿ ಭಾಷಾಂತರ ಪರೀಕ್ಷೆ (Translation Test)
|
1,233
|
8
|
2
|
|
ತಾಂತ್ರಿಕೇತರ ಜನಪ್ರಿಯ ವಿಭಾಗಗಳಿಗಾಗಿ (ಪದವಿ) CBAT
|
13,616
|
38
|
2
|
|
ತಾಂತ್ರಿಕೇತರ ಜನಪ್ರಿಯ ವಿಭಾಗಗಳಿಗಾಗಿ (ಪದವಿ ಮಟ್ಟ) ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ್ಯ ಪರೀಕ್ಷೆ (CBTST)
|
30,341
|
58
|
2
|
|
ಒಟ್ಟು ಅಭ್ಯರ್ಥಿಗಳು
|
1,77,234
|
|
|
ಲೆವೆಲ್-1 ವಿಭಾಗಗಳ 32,438 ಹುದ್ದೆಗಳಿಗಾಗಿ 15 ಭಾಷೆಗಳಲ್ಲಿ, 140 ನಗರಗಳಲ್ಲಿ 27.11.2025 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಪ್ರಾರಂಭವಾಗಿದೆ. ಕಾನ್ಸ್ಟೆಬಲ್ (RPF) ನ 4,208 ಹುದ್ದೆಗಳ ದೈಹಿಕ ದಕ್ಷತಾ ಪರೀಕ್ಷೆಯು (PET) 06.12.2025 ರಂದು ಪೂರ್ಣಗೊಂಡಿದೆ.
ಟೆಕ್ನಿಷಿಯನ್‌ಗಳು, ಜೂನಿಯರ್ ಇಂಜಿನಿಯರ್ ಗಳು, ಪ್ಯಾರಾಮೆಡಿಕಲ್ ವಿಭಾಗಗಳು, ಸಬ್-ಇನ್ಸ್ಪೆಕ್ಟರ್ ಗಳು (RPF) ಮತ್ತು ಅಸಿಸ್ಟೆಂಟ್ ಲೋಕೋ ಪೈಲಟ್ ಗಳು ಸೇರಿದಂತೆ ವಿವಿಧ ಹುದ್ದೆಗಳಿಗಾಗಿ 31,000 ಕ್ಕೂ ಹೆಚ್ಚು ಅಭ್ಯರ್ಥಿಗಳ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ. ಇವುಗಳಲ್ಲಿ ಬಹುಪಾಲು ಸುರಕ್ಷತಾ ವಿಭಾಗದ ಹುದ್ದೆಗಳಾಗಿವೆ.
ಇದರ ಜೊತೆಗೆ, 2025 ರ ವಾರ್ಷಿಕ ಕ್ಯಾಲೆಂಡರ್ ಪ್ರಕಾರ, 50,970 ಹುದ್ದೆಗಳಿಗಾಗಿ (ದಕ್ಷಿಣ ರೈಲ್ವೆಯ 3,412 ಹುದ್ದೆಗಳು ಮತ್ತು ಐಸಿಎಫ್ ನ 438 ಹುದ್ದೆಗಳು ಸೇರಿದಂತೆ) ಒಂಬತ್ತು ಕೇಂದ್ರೀಕೃತ ಉದ್ಯೋಗ ಅಧಿಸೂಚನೆಗಳನ್ನು (CENs) ಸಹ ಹೊರಡಿಸಲಾಗಿದೆ.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2223496)
ವಿಸಿಟರ್ ಕೌಂಟರ್ : 7