ರೈಲ್ವೇ ಸಚಿವಾಲಯ
azadi ka amrit mahotsav

ವೈಕುಂಠ್ ಮತ್ತು ಉರ್ಕುರಾ ನಡುವೆ ₹426 ಕೋಟಿ ವೆಚ್ಚದಲ್ಲಿ ನಾಲ್ಕನೇ ರೈಲು ಮಾರ್ಗಕ್ಕೆ ಅನುಮೋದನೆ


ವಿಸ್ತರಣೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರ ರೈಲುಗಳ ಸಮಯಪಾಲನೆಯನ್ನು ಸುಧಾರಿಸುವುದರ ಜೊತೆಗೆ ಸರಕು ಸಾಗಣೆ ಕಾರ್ಯಾಚರಣೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ.

ಮುಂಬೈ-ಹೌರಾ ಅತಿ ಹೆಚ್ಚು ಸಂಚಾರದ ಮಾರ್ಗದಲ್ಲಿನ ಈ ಹೊಸ ರೈಲು ಮಾರ್ಗವು ವಿದ್ಯುತ್, ಕಲ್ಲಿದ್ದಲು, ಉಕ್ಕು, ಸಿಮೆಂಟ್ ಮತ್ತು ಇತರ ಪ್ರಮುಖ ಕೈಗಾರಿಕೆಗಳಿಗೆ ಬೆಂಬಲ ನೀಡಲಿದೆ.

प्रविष्टि तिथि: 29 JAN 2026 3:43PM by PIB Bengaluru

ರೈಲ್ವೈ ಸಚಿವಾಲಯವು ದಕ್ಷಿಣ ಪೂರ್ವ ಮಧ್ಯ ರೈಲ್ವೈ ಅಡಿಯಲ್ಲಿ ವೈಕುಂಠ್ ಮತ್ತು ಉರ್ಕುರಾ ನಡುವೆ 26.40 ಕಿಲೋಮೀಟರ್ ಉದ್ದದ ನಾಲ್ಕನೇ ರೈಲು ಮಾರ್ಗದ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯ ಅಂದಾಜು ವೆಚ್ಚ ₹426.01 ಕೋಟಿ ಆಗಿದೆ.

ವೈಕುಂಠ್-ಉರ್ಕುರಾ ವಿಭಾಗವು ಬಿಲಾಸಪುರ-ರಾಯ್ಪುರ-ನಾಗಪುರ ಮುಖ್ಯ ಮಾರ್ಗದ ಪ್ರಮುಖ ಭಾಗವಾಗಿದೆ. ಇದು ದೇಶದ ಅತ್ಯಂತ ಜನನಿಭಿಡ ರೈಲು ಮಾರ್ಗಗಳಲ್ಲಿ ಒಂದಾದ ಮುಂಬೈ-ಹೌರಾ ಮಾರ್ಗದಲ್ಲಿ ಬರುತ್ತದೆ. ಪ್ರಸ್ತುತ, ಈ ವಿಭಾಗವು ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮರ್ಥ್ಯ ವಿಸ್ತರಣೆಯ ತುರ್ತು ಅಗತ್ಯವಿದೆ.

ಅನುಮೋದಿತ ನಾಲ್ಕನೇ ಮಾರ್ಗವು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ರೈಲುಗಳ ಸುಗಮ ಸಂಚಾರ ಹೆಚ್ಚಿಸುತ್ತದೆ. ಈ ಯೋಜನೆಯು ಹೆಚ್ಚಿನ ಪ್ರಯಾಣಿಕ ರೈಲು ಸೇವೆಗಳಿಗೆ ಅವಕಾಶ ಕಲ್ಪಿಸುತ್ತದೆ, ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಈ ಮಾರ್ಗದಲ್ಲಿ ರೈಲುಗಳ ಸಮಯಪಾಲನೆಯನ್ನು ಸುಧಾರಿಸುತ್ತದೆ.

ಪ್ರಯಾಣಿಕರ ಪ್ರಯೋಜನಗಳ ಜೊತೆಗೆ, ಈ ಯೋಜನೆಯು ವಾರ್ಷಿಕ ಸುಮಾರು 14.25 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆಗೆ ಅನುಕೂಲ ಮಾಡಿಕೊಡುತ್ತದೆ. ಸರಕು ನಿರ್ವಹಣಾ ಸಾಮರ್ಥ್ಯದ ಈ ಹೆಚ್ಚಳದಿಂದಾಗಿ, ರೈಲ್ವೈ ಇಲಾಖೆಗೆ ಯೋಜನೆಯ ಮೊದಲ ವರ್ಷದಿಂದಲೇ ಸುಮಾರು ₹61.70 ಕೋಟಿ ಹೆಚ್ಚುವರಿ ವಾರ್ಷಿಕ ಆದಾಯ ಬರುವ ನಿರೀಕ್ಷೆಯಿದೆ. 

ಈ ಪ್ರದೇಶವು ವಿದ್ಯುತ್ ಸ್ಥಾವರಗಳು, ಕಲ್ಲಿದ್ದಲು ಗಣಿಗಳು, ಉಕ್ಕು ಮತ್ತು ಸಿಮೆಂಟ್ ಘಟಕಗಳು ಹಾಗೂ ಹೊಸ ಕೈಗಾರಿಕೆಗಳ ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಹೊಸ ಮಾರ್ಗವು ಬೃಹತ್ ಸರಕುಗಳ ವೇಗದ ಮತ್ತು ವಿಶ್ವಾಸಾರ್ಹ ಸಾಗಣೆ ಖಚಿತಪಡಿಸುತ್ತದೆ, ಇದು ಕೈಗಾರಿಕಾ ಪ್ರಗತಿಗೆ ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸಲು ಸಹಕಾರಿಯಾಗಲಿದೆ.

ಈ ಯೋಜನೆಯನ್ನು ಇಂಧನ, ಸಿಮೆಂಟ್ ಮತ್ತು ಖನಿಜ ಕಾರಿಡಾರ್ ಅಡಿಯಲ್ಲಿ ಗುರುತಿಸಲಾಗಿದ್ದು, ಇದು ಆರ್ಥಿಕವಾಗಿ ನಿರ್ಣಾಯಕ ಪ್ರದೇಶಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸುವ ಭಾರತೀಯ ರೈಲ್ವೆಯ ಗಮನವನ್ನು ಪ್ರತಿಬಿಂಬಿಸುತ್ತದೆ.

ವೈಕುಂಠ ಮತ್ತು ಉರ್ಕುರಾ ನಡುವಿನ ನಾಲ್ಕನೇ ಮಾರ್ಗವು ಪೂರ್ಣಗೊಂಡ ನಂತರ, ಪ್ರಯಾಣವನ್ನು ವೇಗವಾಗಿ ಮತ್ತು ಸುಗಮವಾಗಿ ಮಾಡುವ ಮೂಲಕ ಪ್ರಯಾಣಿಕರ ಅನುಭವವನ್ನು ಬದಲಾಯಿಸುವುದಲ್ಲದೆ, ಪ್ರಾದೇಶಿಕ ಕೈಗಾರಿಕೆಗಳು ಮತ್ತು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಸರಕು ಕಾರ್ಯಾಚರಣೆಗಳನ್ನು ಬಲಪಡಿಸುತ್ತದೆ.

 

******


(रिलीज़ आईडी: 2220275) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी