ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಇ-ಆಡಳಿತ ಸೇವಾ ವಿತರಣಾ ಮೌಲ್ಯಮಾಪನ (NeSDA)ದ 32 ನೇ ಆವೃತ್ತಿ - ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಹಾದಿ (ವೇ ಫಾರ್ವರ್ಡ್) ಮಾಸಿಕ ವರದಿ  ಬಿಡುಗಡೆ


ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಒಟ್ಟು 24,090 ಇ-ಸೇವಾ ಸೌಲಭ್ಯ

ಶೇಕಡ 80 ರಷ್ಟು ಕಡ್ಡಾಯ ಇ-ಸೇವೆ ಕಾರ್ಯರೂಪಕ್ಕೆ

प्रविष्टि तिथि: 22 JAN 2026 5:26PM by PIB Bengaluru

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಇ-ಸೇವಾ ವಿತರಣೆಯ ಸ್ಥಿತಿಯ ವಿವರವಾದ ಅವಲೋಕನವನ್ನು ಒದಗಿಸುವ ರಾಷ್ಟ್ರೀಯ ಇ-ಆಡಳಿತ ಸೇವಾ ವಿತರಣಾ ಮೌಲ್ಯಮಾಪನ (NeSDA) ದ ಡಿಸೆಂಬರ್ 2025ರ ಮಾಸಿಕ ವರದಿ – ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಹಾದಿ (ವೇ ಫಾರ್ವರ್ಡ್) ನ 32ನೇ ಆವೃತ್ತಿಯನ್ನು ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ (DARPG) ಬಿಡುಗಡೆ ಮಾಡಿದೆ.

ಡಿಸೆಂಬರ್ 2025 ರ ವರದಿಯು ಇಲ್ಲಿ ಲಭ್ಯವಿದೆ:

https://darpg.gov.in/sites/default/files/NeSDA_Way_Forward_December_2025_Report.pdf

ಈ ವರದಿಯ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:

  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 24,090 ಇ-ಸೇವೆಗಳನ್ನು ಒದಗಿಸಲಾಗಿದೆ. ಹೆಚ್ಚಿನ ಇ-ಸೇವೆಗಳು (8,656) ಸ್ಥಳೀಯ ಆಡಳಿತ ಮತ್ತು ಅಗತ್ಯ ಸೇವೆಗಳ ವಲಯಕ್ಕೆ ಸಂಬಂಧಿಸಿವೆ.
  • ನವೆಂಬರ್ 2025 ರಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 156 ಹೊಸ ಇ-ಸೇವೆಗಳನ್ನು ಸೇರ್ಪಡೆ ಮಾಡಿವೆ.
  • 21 ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಚಂಡೀಗಢ, ಛತ್ತೀಸ್‌ ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 59 ಕಡ್ಡಾಯ ಇ-ಸೇವೆಗಳ ಶೇಕಡ 90% ರಷ್ಟು ಕಾರ್ಯರೂಪ ಸಾಧಿಸಲಾಗಿದೆ.
  • ಅಸ್ಸಾಂ (ಸೇವಾ ಸೇತು), ಜಮ್ಮು ಮತ್ತು ಕಾಶ್ಮೀರ (ಇ-ಯು ಎನ್‌ ಎನ್‌ ಎ ಟಿ), ಕರ್ನಾಟಕ (ಸೇವಾ ಸಿಂಧು), ಒಡಿಶಾ (ಒಡಿಶಾ ಒನ್), ಮಧ್ಯ ಪ್ರದೇಶ (ಎಂಪಿ ಇ-ಸೇವೆ), ಉತ್ತರಾಖಂಡ (ಅಪುನಿ ಸರ್ಕಾರ್) ಮತ್ತು ಕೇರಳ (ಇ-ಸೇವನಂ) ಪೋರ್ಟಲ್‌ಗಳು ಶೇಕಡ 100 ರಷ್ಟು  ಸೇವೆಗಳನ್ನು ಒದಗಿಸುತ್ತಿವೆ.  ನಾಲ್ಕು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಮ್ಮ ಏಕೀಕೃತ ಸೇವಾ ವಿತರಣಾ ಪೋರ್ಟಲ್‌ ಗಳು ಅಂದರೆ ಇ-ಡಿಸ್ಟ್ರಿಕ್ಟ್ ಚಂಡೀಗಢ, ಇ-ಡಿಸ್ಟ್ರಿಕ್ಟ್ ದೆಹಲಿ, ಸರಳ್ ಹರಿಯಾಣ ಮತ್ತು ಇ-ಮಿತ್ರ (ರಾಜಸ್ಥಾನ) ಮೂಲಕ ಶೇಕಡ 90 ಕ್ಕಿಂತ ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿವೆ.
  • ಅತ್ಯುತ್ತಮ ಇ-ಸೇವಾ ಸೌಲಭ್ಯದಡಿ ಕೇಂದ್ರ ಸರ್ಕಾರಿ ಸಚಿವಾಲಯಗಳು/ಇಲಾಖೆಗಳ ಸಮಗ್ರ ಸೇವಾ ವಿತರಣಾ ಪೋರ್ಟಲ್‌ಗಳು, ಭಾರತೀಯ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ (NDLI) ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಗಳನ್ನು ಉದಾಹರಿಸಲಾಗಿದೆ.
  • ನಾಗರಿಕರ ಸಂವಹನಗಳು ಪುರಸಭೆಯ ಮಟ್ಟದಲ್ಲಿ ಹೆಚ್ಚಾಗಿ ನಡೆಯುವುದರಿಂದ, ನಗರ ಮಟ್ಟದ ಡಿಜಿಟಲ್ ವೇದಿಕೆಗಳು ಸೇವಾ ವಿತರಣೆಯನ್ನು ಹೇಗೆ ಪರಿವರ್ತಿಸುತ್ತಿವೆ ಎಂಬುದನ್ನು ಈ ಅಧ್ಯಾಯವು ಎತ್ತಿ ತೋರಿಸಿದೆ ಹಾಗೂ ಪುದುಚೆರಿ ಮತ್ತು ಗುವಾಹಟಿಯ ಆಯ್ದ ಪುರಸಭೆಯ ಪೋರ್ಟಲ್‌ ನಿಂದ ಕೆಲವು ಉತ್ತಮ ಅಭ್ಯಾಸಗಳನ್ನು ವಿವರಿಸಿದೆ.
  • ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಏಕೀಕೃತ ಪೋರ್ಟಲ್‌ ಗಳಿಗಾಗಿ ಐದು ಮೌಲ್ಯಮಾಪನ ಮಾನದಂಡಗಳ ಕುರಿತು ಸರ್ಕಾರಿ ಜಾಲತಾಣಗಳ ಸ್ವಯಂಚಾಲಿತ ಮೌಲ್ಯಮಾಪನಕ್ಕಾಗಿ ಮಾನದಂಡ ಸಾಧನವಾದ AAKLAN ನಿಯತಾಂಕ-ವಾರು ಪ್ರಮುಖ ಒಳನೋಟಗಳನ್ನು ಸಹ ಈ ಆವೃತ್ತಿಯು ಪ್ರಸ್ತುತಪಡಿಸಿದೆ.

ಮೇಲೆ ನಮೂದಿಸಿರುವ ಅಂಕಿಅಂಶಗಳು 2025ರ ಡಿಸೆಂಬರ್ 31ರಲ್ಲಿ NeSDA ವೇ ಫಾರ್ವರ್ಡ್ ಡ್ಯಾಶ್‌ ಬೋರ್ಡ್‌ ನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಪ್‌ ಲೋಡ್ ಮಾಡಿರುವ ದತ್ತಾಂಶವನ್ನು ಆಧರಿಸಿವೆ.

 

*****


(रिलीज़ आईडी: 2217509) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी