ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಸತತ ಐದನೇ ವರ್ಷವೂ "ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐರೆಡಾ)"ಯ 'ಅತ್ಯುತ್ತಮ' ಒಪ್ಪಂದಗಳ ಕಾರ್ಯಕ್ಷಮತೆಯ ಕಾರ್ಯಚಟುವಟಿಕೆಗಳು ಭಾರತದ ಶುದ್ಧ ಇಂಧನ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುತ್ತದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
प्रविष्टि तिथि:
08 JAN 2026 7:25PM by PIB Bengaluru
ತಿಳುವಳಿಕೆ ಒಪ್ಪಂದ ಜ್ಞಾಪಕ ಪತ್ರಗಳ (ಎಂ.ಒ.ಯು.) ಕಾರ್ಯಕ್ಷಮತೆಯಲ್ಲಿ ಸತತ ಐದನೇ ವರ್ಷವೂ 'ಅತ್ಯುತ್ತಮ' ಶ್ರೇಯಾಂಕ ಪಡೆದಿದ್ದಕ್ಕಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐರೆಡಾ)ಯನ್ನು ಅಭಿನಂದಿಸಿದರು. ಈ ನಿರಂತರ ಶ್ರೇಷ್ಠತೆಯು "ಐರೆಡಾ" ತಂಡದ ಸಮರ್ಪಣೆ ಮತ್ತು ಅದರ ಸಾಂಸ್ಥಿಕ ಸುಧಾರಣೆಗಳ ಬಲವನ್ನು ಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಐರೆಡಾ ಈ ತೀವ್ರತೆಯನ್ನು ಮುಂದುವರಿಸುತ್ತದೆ, ಭಾರತದ ಶುದ್ಧ ಇಂಧನ ಹಣಕಾಸು ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಹಸಿರು, ಹೆಚ್ಚು ಸ್ವಾವಲಂಬಿ ಭವಿಷ್ಯದತ್ತ ರಾಷ್ಟ್ರದ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುತ್ತದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
2024–25ರ ಹಣಕಾಸು ವರ್ಷಕ್ಕೆ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ) ದೊಂದಿಗೆ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದ ಜ್ಞಾಪಕ ಪತ್ರಗಳ (ಎಂ.ಒ.ಯು.) 'ಅತ್ಯುತ್ತಮ' ಶ್ರೇಯಾಂಕವನ್ನು ಪಡೆಯುವ ಮೂಲಕ "ಐರೆಡಾ" ಸಂಸ್ಥೆಯು ಮತ್ತೊಮ್ಮೆ ತನ್ನ ಸ್ಥಿರ ಕಾರ್ಯಕ್ಷಮತೆಯ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ, ಹಾಗೂ 100 ರಲ್ಲಿ 96.42 ಅಂಕಗಳನ್ನು ಗಳಿಸುವ ಮೂಲಕ ಶ್ಲಾಘನೀಯ ಅಂಕಗಳನ್ನು ಗಳಿಸಿದೆ.
ಸತತ ಐದನೇ ವರ್ಷವೂ ಐರೆಡಾ ಸಂಸ್ಥೆಯು ಪ್ರತಿಷ್ಠಿತ 'ಅತ್ಯುತ್ತಮ' ಶ್ರೇಯಾಂಕವನ್ನು ಪಡೆದಿದೆ, ಇದು ಕಾರ್ಯಾಚರಣೆಯ ದಕ್ಷತೆ, ಆರ್ಥಿಕ ಶಿಸ್ತು ಮತ್ತು ದೃಢವಾದ ಕಾರ್ಪೊರೇಟ್ ಆಡಳಿತದ ಮೇಲೆ ಸಂಸ್ಥೆಯ ನಿರಂತರ ಗಮನವನ್ನು ಉಲ್ಲೇಖಿಸುತ್ತದೆ. ಮುಂದುವರಿದ ಹೆಚ್ಚಿನ ಕಾರ್ಯಕ್ಷಮತೆಯು ವಿಸ್ತರಿಸುತ್ತಿರುವ ಆದೇಶ ಮತ್ತು ವಿಕಸನಗೊಳ್ಳುತ್ತಿರುವ ನವೀಕರಿಸಬಹುದಾದ ಇಂಧನ ಕ್ಷೇತ್ರದ ಚೌಕಟ್ಟಿನ ಆಯಾಮಗಳಲ್ಲಿ ತೀವ್ರತೆಯನ್ನು ಕಾಯ್ದುಕೊಳ್ಳುವ ಸಂಸ್ಥೆಯ ಸಾಮರ್ಥ್ಯವನ್ನು ಈ ಗೌರವ ಬಿಂಬಿಸುತ್ತದೆ.
2019–20ರ ಹಣಕಾಸು ವರ್ಷದ ತಿಳುವಳಿಕೆ ಒಪ್ಪಂದ ಜ್ಞಾಪಕ ಪತ್ರಗಳ (ಎಂ.ಒ.ಯು.) ಮೌಲ್ಯಮಾಪನದಲ್ಲಿ 45.83 ಅಂಕಗಳೊಂದಿಗೆ ಕೇವಲ 'ನ್ಯಾಯಯುತ' ರೇಟಿಂಗ್ ಅನ್ನು ಪಡೆದ ನಂತರ, ಐರೆಡಾ ಸಂಸ್ಥೆಯು ತನ್ನ ವ್ಯವಸ್ಥೆಗಳು, ಪ್ರಕ್ರಿಯೆಗಳು ಮತ್ತು ಸಂಸ್ಕೃತಿಯನ್ನು ಬಲಪಡಿಸಲು ಸಮಗ್ರ ಸಾಂಸ್ಥಿಕ ಸುಧಾರಣೆಗಳನ್ನು ಕೈಗೊಂಡಿತು. ಈ ಪರಿವರ್ತನಾಶೀಲ ಪ್ರಯಾಣವು ಸಂಸ್ಥೆಯು ತನ್ನ ಮಾನದಂಡಗಳನ್ನು ಉನ್ನತೀಕರಿಸಲು ಅನುವು ಮಾಡಿಕೊಟ್ಟಿತು, ನಂತರ ಸತತ 'ಅತ್ಯುತ್ತಮ' ಶ್ರೇಯಾಂಕಗಳನ್ನು ಸಾಧಿಸಿತು ಮತ್ತು ಐರೆಡಾ ಸಂಸ್ಥೆಯನ್ನು ದೇಶದ ಅತಿದೊಡ್ಡ ಶುದ್ಧ- ಹಸಿರು ಹಣಕಾಸಿನ ಎನ್.ಬಿ.ಎಫ್.ಸಿ.ಯಾಗಿ ದೃಢವಾಗಿ ಸ್ಥಾಪಿಸಿತು.
ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಐರೆಡಾ( ಐ.ಆರ್.ಇ.ಡಿ.ಎ.) ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರದೀಪ್ ಕುಮಾರ್ ದಾಸ್ ಅವರು, “ಸತತ ಐದನೇ ವರ್ಷವೂ ‘ಅತ್ಯುತ್ತಮ’ ಶ್ರೇಯಾಂಕ ಪಡೆದಿರುವುದು ಐ.ಆರ್.ಇ.ಡಿ.ಎ.ಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಮನ್ನಣೆ ನಮ್ಮ ಉದ್ಯೋಗಿಗಳ ಸಮರ್ಪಣೆ, ನಮ್ಮ ಪಾಲುದಾರರ ವಿಶ್ವಾಸ ಮತ್ತು ಭಾರತ ಸರ್ಕಾರದ ಸ್ಥಿರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಸಾಕ್ಷಿಯಾಗಿದೆ. ಭಾರತದ ಶುದ್ಧ ಇಂಧನ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರಾಷ್ಟ್ರದ ಹಸಿರು ಇಂಧನ ಪರಿವರ್ತನೆಯನ್ನು ಇನ್ನೂ ತೀವ್ರವಾಗಿ ವೇಗಗೊಳಿಸಲು ನಾವು ಬದ್ಧರಾಗಿದ್ದೇವೆ.”
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಖಾತೆ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್; ಎಂ.ಎನ್.ಆರ್.ಇ. ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ, ಮತ್ತು ನಿರ್ದೇಶಕರ ಮಂಡಳಿಗಳಿಗೆ ಅವರುಗಳ ನಿರಂತರ ಪ್ರೋತ್ಸಾಹ, ಬೆಂಬಲ ಮತ್ತು ಅಮೂಲ್ಯ ಮಾರ್ಗದರ್ಶನಕ್ಕಾಗಿ ಐಆರ್‌ಇಡಿಎಯ ಸಿಎಂಡಿಯವರು ಈ ಸಂದರ್ಭದಲ್ಲಿ ತಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
*****
(रिलीज़ आईडी: 2212665)
आगंतुक पटल : 16