ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ- ವರ್ಷಾಂತ್ಯದ ಪರಮಾರ್ಶೆ 2025
ಪ್ರಕಟಣಾ ದಿನಾಂಕ:
16 DEC 2025 5:58PM by PIB Bengaluru
I. ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸೂಚ್ಯಂಕಗಳಲ್ಲಿ ಭಾರತದ ಶ್ರೇಯಾಂಕ ಏರಿಕೆಯಾಗುತ್ತಲೇ ಇದೆ
ಜಾಗತಿಕ ನಾವೀನ್ಯತೆ ಸೂಚ್ಯಂಕ (ಜಿ.ಐ.ಐ.-GII) 2025 ರ ಪ್ರಕಾರ ಜಾಗತಿಕವಾಗಿ ಉನ್ನತ ನವೀನ ಆರ್ಥಿಕತೆಗಳಲ್ಲಿ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತವು 38 ನೇ ಸ್ಥಾನವನ್ನು ಪಡೆದುಕೊಂಡಿದೆ. ವಿಪ್ರೋ ವರದಿ 2023ರ ಪ್ರಕಾರ ಭಾರತವು ವಿಶ್ವದ ಬೌದ್ಧಿಕ ಆಸ್ತಿ (ಐ.ಪಿ.-IP) ಫೈಲಿಂಗ್‌ಗಳ ವಿಷಯದಲ್ಲಿ 6 ನೇ ಸ್ಥಾನದಲ್ಲಿದೆ. ನೆಟ್‌ವರ್ಕ್ ರೆಡಿನೆಸ್ ಇಂಡೆಕ್ಸ್ (NRI) 2024 ವರದಿಯ ಪ್ರಕಾರ ಭಾರತವು 79 ನೇ ಸ್ಥಾನದಿಂದ (2019) 49 ನೇ ಸ್ಥಾನಕ್ಕೆ ತನ್ನ ಶ್ರೇಯಾಂಕವನ್ನು ಸುಧಾರಿಸಿದೆ. ಪ್ರಪಂಚದಾದ್ಯಂತದ 133 ಆರ್ಥಿಕತೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐ.ಸಿ.ಟಿ.-ICT) ಅನ್ವಯ ಮತ್ತು ಪ್ರಭಾವದ ಕುರಿತು ಪ್ರಮುಖ ಜಾಗತಿಕ ಸೂಚ್ಯಂಕಗಳಲ್ಲಿ ಎನ್.ಆರ್.ಐ. ಒಂದಾಗಿದೆ. ಸಂಶೋಧನಾ ಪ್ರಕಟಣೆಗಳ ವಿಷಯದಲ್ಲಿ ಭಾರತವು ಜಾಗತಿಕವಾಗಿ 3 ನೇ ಸ್ಥಾನದಲ್ಲಿದೆ.
II. ಸಂಶೋಧನಾ ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿ
ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲುದಾರಿಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸಚಿವ ಸಂಪುಟವು ಜುಲೈ 01, 2025 ರಂದು ಆರ್‌ಡಿಐ ಯೋಜನೆಯನ್ನು ಅನುಮೋದಿಸಿದೆ, ಆರು ವರ್ಷಗಳ ಅವಧಿಗೆ ₹1.0 ಲಕ್ಷ ಕೋಟಿ ಒಟ್ಟು ವೆಚ್ಚದ ಯೋಜನೆ ಇದಾಗಿದ್ದು, ಇದರಲ್ಲಿ ₹20,000 ಕೋಟಿಗಳನ್ನು ಹಣಕಾಸು ವರ್ಷ 2025–26 ಕ್ಕೆ ನಿಗದಿಪಡಿಸಲಾಗಿದೆ. ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (ಆರ್‌ಡಿಐ) ಯೋಜನೆಯ ಮುಖ್ಯ ಉದ್ದೇಶಗಳು 1) ಸೂರ್ಯೋದಯ/ಉದಯೋನ್ಮುಖ ಕ್ಷೇತ್ರಗಳಲ್ಲಿ ಮತ್ತು ಆರ್ಥಿಕ ಭದ್ರತೆ, ಕಾರ್ಯತಂತ್ರದ ಉದ್ದೇಶ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ ಇತರ ವಲಯಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (ಆರ್‌ಡಿಐ) ಹೆಚ್ಚಿಸಲು ಖಾಸಗಿ ವಲಯವನ್ನು ಪ್ರೋತ್ಸಾಹಿಸುವುದು, 2) 4 ಮತ್ತು ಅದಕ್ಕಿಂತ ಹೆಚ್ಚಿನ ತಂತ್ರಜ್ಞಾನ ಸಿದ್ಧತೆ ಮಟ್ಟದ (ಟಿಆರ್‌ಎಲ್) ಉನ್ನತ ಮಟ್ಟದಲ್ಲಿ ಪರಿವರ್ತನಾತ್ಮಕ ಯೋಜನೆಗಳಿಗೆ ಹಣಕಾಸು ಒದಗಿಸುವುದು, 3) ನಿರ್ಣಾಯಕ ಅಥವಾ ಹೆಚ್ಚಿನ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿರುವ ತಂತ್ರಜ್ಞಾನಗಳ ಸ್ವಾಧೀನವನ್ನು ಬೆಂಬಲಿಸುವುದು, ಮತ್ತು 4) ಡೀಪ್ ಟೆಕ್ ನಿಧಿಗಳ ನಿಧಿಯನ್ನು ಸ್ಥಾಪಿಸಲು ಅನುಕೂಲತೆ ಒದಗಿಸುವುದು. ಈ ಯೋಜನೆಯು ಇಂಧನ ಭದ್ರತೆ, ಪರಿವರ್ತನೆ ಮತ್ತು ಹವಾಮಾನ ಕ್ರಮಗಳು ಸೇರಿದಂತೆ ಸೂರ್ಯೋದಯ/ಉದಯೋನ್ಮುಖಕ ವಲಯಗಳನ್ನು ಗುರಿಯಾಗಿಸುತ್ತದೆ; ಕ್ವಾಂಟಮ್ ಕಂಪ್ಯೂಟಿಂಗ್, ರೊಬೊಟಿಕ್ಸ್ ಮತ್ತು ಬಾಹ್ಯಾಕಾಶ ಸೇರಿದಂತೆ ಡೀಪ್ ಟೆಕ್ ತಂತ್ರಜ್ಞಾನ; ಕೃಷಿ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಅದರ ಆನ್ವಯಿಕತೆ; ಜೈವಿಕ ತಂತ್ರಜ್ಞಾನ, ಜೈವಿಕ ಉತ್ಪಾದನೆ, ಸಂಶ್ಲೇಷಿತ ಜೀವಶಾಸ್ತ್ರ, ಔಷಧ, ವೈದ್ಯಕೀಯ ಸಾಧನಗಳು; ಮತ್ತು ಡಿಜಿಟಲ್ ಕೃಷಿ ಮತ್ತು ಡಿಜಿಟಲ್ ಆರ್ಥಿಕತೆ ಇದರಲ್ಲಿ ಒಳಗೊಂಡಿದೆ. ಇತರ ಪ್ರಸ್ತಾವಿತ ವಲಯಗಳೆಂದರೆ ಕಾರ್ಯತಂತ್ರದ ಕಾರಣಗಳಿಗಾಗಿ ಅಥವಾ ಆರ್ಥಿಕ ಭದ್ರತೆ ಮತ್ತು ಆತ್ಮನಿರ್ಭರತೆಗಾಗಿ ದೇಶೀಕರಣವು ಅವಶ್ಯವಾದ ತಂತ್ರಜ್ಞಾನ ಕ್ಷೇತ್ರಗಳು; ಮತ್ತು; ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಗತ್ಯವೆಂದು ಪರಿಗಣಿಸಲಾದ ಯಾವುದೇ ಇತರ ವಲಯ ಅಥವಾ ತಂತ್ರಜ್ಞಾನ.
ಈ ಯೋಜನೆಯನ್ನು ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (ಎ.ಎನ್.ಆರ್.ಎಫ್.-ANRF) ವಿಶೇಷ ಉದ್ದೇಶ ನಿಧಿಯ (ಎಸ್.ಪಿ.ಎಫ್.-SPF) ಮೂಲಕ ಎರಡು ಹಂತದ ಹಣಕಾಸು ವ್ಯವಸ್ಥೆಯನ್ನು ಬಳಸಿಕೊಂಡು ಕಾರ್ಯಗತಗೊಳಿಸಲಾಗುತ್ತದೆ:
-
ಮೊದಲ ಹಂತ: ನಿಧಿಗಳ ಪಾಲಕರಾಗಿ ಎ.ಎನ್.ಆರ್.ಎಫ್.(ANRF) ನೊಳಗಿನ ಎಸ್.ಪಿ.ಎಫ್. ( SPF) .
-
ಎರಡನೇ ಹಂತ: ಯೋಜನೆಯ ಅನುಷ್ಠಾನವನ್ನು 2 ನೇ ಹಂತದ ನಿಧಿ ವ್ಯವಸ್ಥಾಪಕರು ಮಾಡುತ್ತಾರೆ. 2 ನೇ ಹಂತದ ನಿಧಿ ವ್ಯವಸ್ಥಾಪಕರು ಈ ಕೆಳಗಿನ ಸ್ವರೂಪದಲ್ಲಿರಬಹುದು: ಪರ್ಯಾಯ ಹೂಡಿಕೆ ನಿಧಿ ರಚನೆ (ಎ.ಐ.ಎಫ್.-AIF), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿ.ಎಫ್.ಐ.-DFI ಗಳು), ಬ್ಯಾಂಕೇತರ ಹಣಕಾಸು ನಿಗಮ (ಎನ್.ಬಿ.ಎಫ್.ಸಿ.-NBFC) ಮತ್ತು ಗಮನ ಕೇಂದ್ರೀಕೃತ ಸಂಶೋಧನಾ ಸಂಸ್ಥೆ (ಎಫ್.ಆರ್.ಒ.-FRO), ಉದಾ. ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿ.ಡಿ.ಬಿ-TDB), ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯ ಮಂಡಳಿ (ಬಿ.ಐ.ಆರ್.ಎ.ಸಿ-BIRAC), ಐ.ಐ.ಟಿ. ಸಂಶೋಧನಾ ಪಾರ್ಕ್ ಇತ್ಯಾದಿ.
ಕಡಿಮೆ ಅಥವಾ ಶೂನ್ಯ ಬಡ್ಡಿದರಗಳಲ್ಲಿ ಭದ್ರತೆ ರಹಿತ ದೀರ್ಘಾವಧಿ ಸಾಲಗಳ ರೂಪದಲ್ಲಿ ಹಣಕಾಸು ಲಭ್ಯವಿರುತ್ತದೆ. ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ಸ್ಟಾರ್ಟ್‌ಅಪ್‌ಗಳಿಗೆ(ನವೋದ್ಯಮಗಳಿಗೆ) ಈಕ್ವಿಟಿ ಆಧಾರಿತ ಹಣಕಾಸು ಸಹ ಪರಿಗಣಿಸಬಹುದು. ಡೀಪ್-ಟೆಕ್ ಫಂಡ್ ಆಫ್ ಫಂಡ್ಸ್ (ಎಫ್.ಒ.ಎಫ್.-FoF) ಅಥವಾ ಇತರ ಆರ್.ಡಿ.ಐ.(RDI) ಕೇಂದ್ರಿತ ಎಫ್.ಒ.ಎಫ್. ಗಳಿಗೆ ಕೊಡುಗೆಯನ್ನು ಸಹ ಪರಿಗಣಿಸಬಹುದು.
ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ವಿವರಗಳ ಪ್ರಸಾರಕ್ಕಾಗಿ, ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಸರಣಿ ಔಟ್ರೀಚ್ ಅಂದರೆ ಜನರನ್ನು ತಲುಪುವ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಈ ಕಾರ್ಯಕ್ರಮಗಳು 200 ಕ್ಕೂ ಹೆಚ್ಚು ನಿಧಿ ವ್ಯವಸ್ಥಾಪಕರು, ನವೋದ್ಯಮಗಳು ಮತ್ತು ಕಾರ್ಪೊರೇಟ್‌ಗಳನ್ನು ಒಟ್ಟುಗೂಡಿಸಿ, ಭಾರತದ ಹೊಸ ₹1 ಲಕ್ಷ ಕೋಟಿ ಆರ್.ಡಿ.ಐ.(RDI) ನಿಧಿಯ ಬಗ್ಗೆ ಬಲವಾದ ಉದ್ಯಮ ಉತ್ಸಾಹವನ್ನು ಪ್ರದರ್ಶಿಸಿದವು. ಎ.ಎನ್.ಆರ್.ಎಫ್. ಅಡಿಯಲ್ಲಿ ಈ ವಿಶೇಷ ಉದ್ದೇಶ ನಿಧಿಯು ಖಾಸಗಿ ವಲಯದ ನೇತೃತ್ವದ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಹೇಗೆ ಮುನ್ನಡೆಸುತ್ತದೆ ಮತ್ತು ಕೃತಕ ಬುದ್ಧಿ ಮತ್ತೆ, ಸೆಮಿಕಂಡಕ್ಟರ್‌ಗಳು, ಬಯೋಟೆಕ್, ಶುದ್ಧ ಇಂಧನ, ಬಾಹ್ಯಾಕಾಶ ಮತ್ತು ಇತರ ಸೂರ್ಯೋದಯ/ಉದಯೋನ್ಮುಖ ಕ್ಷೇತ್ರಗಳಲ್ಲಿ ಆಳವಾದ ತಂತ್ರಜ್ಞಾನದ ನಾವೀನ್ಯತೆಯನ್ನು ಹೇಗೆ ವೇಗಗೊಳಿಸುತ್ತದೆ ಎಂಬುದನ್ನು ಚರ್ಚೆಗಳು ಎತ್ತಿ ತೋರಿಸಿದವು. ಈ ಕಾರ್ಯಕ್ರಮವು ಭಾರತದಲ್ಲಿ ಹೆಚ್ಚಿನ ಪರಿಣಾಮ ಬೀರುವ, ಹೆಚ್ಚಿನ ಅಪಾಯದ ಕ್ಷೇತ್ರಗಳ ಸಂಶೋಧನೆಗಾಗಿ ದೊಡ್ಡ ಪ್ರಮಾಣದ ಬಂಡವಾಳವನ್ನು ಸಜ್ಜುಗೊಳಿಸುವತ್ತ ಪ್ರಮುಖ ಹೆಜ್ಜೆಯನ್ನು ದಾಖಲಿಸಿತು.
III. ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎ.ಎನ್.ಆರ್.ಎಫ್.-ANRF):
ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (ಎ.ಎನ್.ಆರ್.ಎಫ್.-ANRF) ಅನ್ನು ಎ.ಎನ್.ಆರ್.ಎಫ್.- ಕಾಯ್ದೆ, 2023 ರ ಅಡಿಯಲ್ಲಿ ಸ್ಥಾಪಿಸಲಾಯಿತು, ಇದರ ನಿಬಂಧನೆಗಳು ಫೆಬ್ರವರಿ 5, 2024 ರಿಂದ ಜಾರಿಗೆ ಬಂದಿವೆ, ಇದು ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ವೈಜ್ಞಾನಿಕ ಶ್ರೇಷ್ಠತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಆಡಳಿತ ಮಂಡಳಿಯ (ಜಿ.ಬಿ-GB) ಅಧ್ಯಕ್ಷರಾಗಿ ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 10, 2024 ರಂದು ನಡೆದ ಆಡಳಿತ ಮಂಡಳಿಯ (GB) ಮೊದಲ ಸಭೆಯೊಂದಿಗೆ ಎ.ಎನ್.ಆರ್.ಎಫ್. ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅಕ್ಟೋಬರ್ 14, 2024 ರಂದು ಆಡಳಿತ ಮಂಡಳಿ (GB) ಎರಡು ಹೊಸ ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು: ಪ್ರಧಾನ ಮಂತ್ರಿ ಆರಂಭಿಕ ವೃತ್ತಿಜೀವನ ಸಂಶೋಧನಾ ಅನುದಾನ (ಪಿ.ಎಂ.ಇ.ಸಿ.ಆರ್.ಜಿ.-PMECRG) ಆರಂಭಿಕ ವೃತ್ತಿಜೀವನದ ಸಂಶೋಧಕರನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚಿನ-ಪರಿಣಾಮದ ಕ್ಷೇತ್ರಗಳಲ್ಲಿ ಪ್ರಗತಿಗಾಗಿ ಮಿಷನ್ - ವಿದ್ಯುತ್ ವಾಹನ (ಮಹಾ-ಇವಿ-MAHA-EV) ಮಿಷನ್ ವಿದ್ಯುತ್ ವಾಹನ ಘಟಕಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಈಗ, ಎ.ಎನ್.ಆರ್.ಎಫ್. ಅಡಿಯಲ್ಲಿ ಹಲವಾರು ಉಪಕ್ರಮಗಳು/ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಕೆಲವು ಪ್ರಮುಖ ಕಾರ್ಯಕ್ರಮಗಳು; ಮಹಾ: ಮೆಡ್‌ಟೆಕ್ ಮಿಷನ್; ವಿಜ್ಞಾನ ಮತ್ತು ಎಂಜಿನಿಯರಿಂಗ್‌ಗಾಗಿ ಕೃತಕ ಬುದ್ಧಿಮತ್ತೆ.-(ಎ.ಐ.ಎಸ್.ಇ.-AI-SE); ಒಳಗೊಳ್ಳುವಿಕೆ ಸಂಶೋಧನಾ ಅನುದಾನ (ಐ.ಆರ್.ಜಿ.-IRG); ಮತ್ತು ರಾಜ್ಯ ವಿಶ್ವವಿದ್ಯಾಲಯ ಸಂಶೋಧನಾ ಶ್ರೇಷ್ಠತೆ (ಎಸ್.ಇ.ಆರ್.ಬಿ-ಎಸ್.ಯು.ಆರ್.ಇ.--SERB-SURE); ಪೇರ್ -ಪಿ.ಎ.ಐ.ಆರ್. (ಆಕ್ಸಿಲರೇಟೆಡ್ ಇನ್ನೋವೇಶನ್ ಮತ್ತು ಸಂಶೋಧನೆಗಾಗಿ ಪಾಲುದಾರಿಕೆಗಳು); ಜೆಸಿ ಬೋಸ್ ಗ್ರಾಂಟ್; ಪ್ರಧಾನ ಮಂತ್ರಿ ಪ್ರಾಧ್ಯಾಪಕತ್ವ, ಶ್ರೇಷ್ಠತೆಯ ಏಕೀಕೃತ ಸಂಶೋಧನಾ ಕೇಂದ್ರಗಳು (ಸಿ.ಒ.ಇ.- CoE), ಎ.ಆರ್.ಜಿ.-ಮ್ಯಾಟ್ರಿಕ್ಸ್ (ARG-MATRICS) , ಸುಧಾರಿತ ಸಂಶೋಧನಾ ಅನುದಾನ (ಎ.ಆರ್.ಜಿ.-ARG), ರಾಷ್ಟ್ರೀಯ ವಿಜ್ಞಾನ ಪೀಠ (ಎನ್.ಎಸ್.ಸಿ.-NSC), ರಾಷ್ಟ್ರೀಯ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ (ಎನ್.-ಪಿ.ಡಿ.ಎಫ್.-N-PDF); ರಾಮಾನುಜನ್ ಫೆಲೋಶಿಪ್.
IV. ರಾಷ್ಟ್ರೀಯ ಕ್ವಾಂಟಮ್ ಮಿಷನ್
ಕೇಂದ್ರ ಸಚಿವ ಸಂಪುಟವು ಎಂಟು ವರ್ಷಗಳ ಅವಧಿಗೆ ಒಟ್ಟು ರೂ.6003.65 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (ಎನ್.ಕ್ಯೂ.ಎಂ.-NQM)ಗೆ ಅನುಮೋದನೆ ನೀಡಿದೆ, ಇದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಿತ್ತಿ ಬೆಳೆಸುವುದಕ್ಕೆ, ಪೋಷಣೆ ಮತ್ತು ವಿಸ್ತರಿಸುವುದಕ್ಕೆ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ರೋಮಾಂಚಕ ಹಾಗು ನವೀನ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ:
• ಐ.ಐ.ಎಸ್.ಸಿ.. ಬೆಂಗಳೂರು, ಐ.ಐ.ಟಿ. ಮದ್ರಾಸ್, ಐ.ಐ.ಟಿ. ಬಾಂಬೆ, ಐ.ಐ.ಟಿ. ದಿಲ್ಲಿಯಲ್ಲಿ 4 ವಿಷಯಾಧಾರಿತ ಹಬ್‌ಗಳನ್ನು ಸ್ಥಾಪಿಸಲಾಗಿದೆ, ಇದರಲ್ಲಿ 152 ಸಂಶೋಧಕರು, 43 ಸಂಸ್ಥೆಗಳು ಮತ್ತು 17 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 17 ಯೋಜನಾ ತಂಡಗಳು ಸೇರಿವೆ.
• ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು (ನವೋದ್ಯಮಗಳನ್ನು) ಬೆಂಬಲಿಸಲು ವಿಶೇಷ ಎಂಟು ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.
(8) ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲಾಗಿದೆ —ಕ್ಯೂನು ಲ್ಯಾಬ್ಸ್, ಒ.ಪಿ.ಐ.ಎ.ಐ., ಡಿಮಿರಾ ಟೆಕ್ನಾಲಜೀಸ್, ಪ್ರೆನ್ಸಿಕ್ಯೂ, ಕ್ಯೂಪ್ರಯೋಗ್, ಪ್ರಿಸ್ಟೈನ್ ಡೈಮಂಡ್ಸ್, ಕ್ಯೂನಾಸ್ತ್ರ ಮತ್ತು ಕ್ವಾನ್ 2ಡಿ ಟೆಕ್ನಾಲಜೀಸ್.
• ಎ.ಐ.ಸಿ.ಟಿ.ಇ. (AICTE) ಸಹಯೋಗದೊಂದಿಗೆ, ಭಾರತದಾದ್ಯಂತ ಕಾಲೇಜುಗಳಲ್ಲಿ ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಕಾರ್ಯಕ್ರಮಗಳನ್ನು ಪರಿಚಯಿಸಿದೆ
• ಉದಯೋನ್ಮುಖ ಕ್ವಾಂಟಮ್ ಬೆದರಿಕೆಗಳ ವಿರುದ್ಧ ದೀರ್ಘಕಾಲೀನ ಸೈಬರ್ ಭದ್ರತಾ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರದ ಚೌಕಟ್ಟನ್ನು ರೂಪಿಸಲು ಭಾರತದಲ್ಲಿ ಕ್ವಾಂಟಮ್ ಸುರಕ್ಷಿತ ಪರಿಸರ ವ್ಯವಸ್ಥೆಗಾಗಿ ಒಂದು ಪರಿಕಲ್ಪನಾ ಪತ್ರಿಕೆಯನ್ನು ಪ್ರಾರಂಭಿಸಲಾಗಿದೆ.
ರಾಷ್ಟ್ರೀಯ ಕ್ವಾಂಟಮ್ ಮಿಷನ್ ಅಡಿಯಲ್ಲಿ, ಪ್ರಮುಖ ಸಂಸ್ಥೆಗಳಾದ ಐಐಟಿ ದಿಲ್ಲಿ, ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ ಮತ್ತು ಐಐಟಿ ಕಾನ್ಪುರದಲ್ಲಿ ಸುಮಾರು ರೂ.720 ಕೋಟಿ ಹೂಡಿಕೆಯೊಂದಿಗೆ ಮೂರು ರಾಷ್ಟ್ರೀಯ ಮಟ್ಟದ ಕೇಂದ್ರೀಯ ಫ್ಯಾಬ್ರಿಕೇಶನ್ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಈ ಸೌಲಭ್ಯಗಳು ರಾಷ್ಟ್ರೀಯ ಆಸ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ, ಶೈಕ್ಷಣಿಕ, ಉದ್ಯಮ, ಸ್ಟಾರ್ಟ್-ಅಪ್‌ಗಳು ಮತ್ತು ಕಾರ್ಯತಂತ್ರದ ವಲಯಗಳಿಗೆ ಇದು ಲಭ್ಯ ಇರುತ್ತದೆ.
ಎನ್.ಕ್ಯೂ.ಎಂ. (NQM) ಅಡಿಯಲ್ಲಿ ಈ ಕೆಳಗಿನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ:
• ಕ್ಯೂನು (QNu) ಲ್ಯಾಬ್ಸ್ ಪ್ರೈ. ಲಿಮಿಟೆಡ್ ವಿಶ್ವದ ಅತಿ ಉದ್ದದ 500 ಕಿಮೀ ಕ್ಯೂ.ಕೆ.ಡಿ.(QKD) ನೆಟ್‌ವರ್ಕ್ ಅಭಿವೃದ್ಧಿಪಡಿಸಿತು ಮತ್ತು ಎನ್.ಕ್ಯೂ.ಎಂ. ಬೆಂಬಲದೊಂದಿಗೆ ವಿಶ್ವದ ಮೊದಲ ಪೂರ್ಣ-ಸ್ಟಾಕ್ ಕ್ವಾಂಟಮ್ ಸೆಕ್ಯುರಿಟಿ-ಆಸ್-ಎ-ಸರ್ವಿಸ್ ಪ್ಲಾಟ್‌ಫಾರ್ಮ್ ಕ್ಯೂ ಶೀಲ್ಡ್ (QShield ) ಪ್ರಾರಂಭಿಸಿತು.
• ನೈಜ-ಪ್ರಪಂಚದ ಅನ್ವಯಿಕೆಗಳಲ್ಲಿ ಕ್ವಾಂಟಮ್ ಪ್ರಯೋಜನವನ್ನು ಸಾಧಿಸಲು ಕ್ಯೂಪಿ ಎ.ಐ. (QpiAI)ವತಿಯಿಂದ 64-ಕ್ಯುಬಿಟ್ ಸ್ಕೇಲೆಬಲ್, ದೋಷ-ಸಹಿಷ್ಣು ಕ್ವಾಂಟಮ್ ಪ್ರೊಸೆಸರ್ ಯೂನಿಟ್ (ಕ್ಯೂ.ಪಿ.ಐ.-QPU) ರೂಪಿಸಲಾಗಿದೆ.
• ಐ.ಐ.ಟಿ. ಬಾಂಬೆಯ ಕ್ವಾಂಟಮ್ ಸೆನ್ಸಿಂಗ್ ಮತ್ತು ಮೆಟ್ರಾಲಜಿ ಟಿ-ಹಬ್ ಅಡಿಯಲ್ಲಿ ಪಿಕ್ವೆಸ್ಟ್ (PQuest ) ಗ್ರೂಪ್ ಸುಧಾರಿತ ಕಾಂತೀಯ ಕ್ಷೇತ್ರ ಚಿತ್ರಣಕ್ಕಾಗಿ ಭಾರತದ ಮೊದಲ ಸ್ಥಳೀಯ ಕ್ವಾಂಟಮ್ ಡೈಮಂಡ್ ಮೈಕ್ರೋಸ್ಕೋಪ್ (ಕ್ಯೂ.ಡಿ.ಎಂ-QDM) ರೂಪಿಸಿತು.
ಎನ್.ಕ್ಯೂ.ಎಂ. (NQM) -ಬೆಂಬಲಿತ ಸ್ಟಾರ್ಟ್‌ಅಪ್ ಆಗಿರುವ ಪ್ರೆನಿಷ್ಕ್, ಕ್ವಾಂಟಮ್ ಸಂವಹನ ಮತ್ತು ಕಂಪ್ಯೂಟಿಂಗ್‌ಗಾಗಿ ಉತ್ತಮ ಗುಣಮಟ್ಟದ ಕಿರಣ ಸ್ತಂಭ ಮತ್ತು ಸ್ಥಿರತೆಯೊಂದಿಗೆ ಹೆಚ್ಚಿನ ನಿಖರತೆಯ ಡಯೋಡ್ ಲೇಸರ್ ಅಭಿವೃದ್ಧಿಪಡಿಸಿದೆ.
v. ಇಂಟರ್ಡಿಸಿಪ್ಲಿನರಿ (ಅಂತರ್ ಶಿಸ್ತೀಯ) ಸೈಬರ್ ಫಿಸಿಕಲ್ ಸಿಸ್ಟಮ್‌ನ ರಾಷ್ಟ್ರೀಯ ಮಿಷನ್
ಅಂತರಶಿಸ್ತೀಯ ಸೈಬರ್ ಫಿಸಿಕಲ್ ಸಿಸ್ಟಮ್‌ನ ರಾಷ್ಟ್ರೀಯ ಮಿಷನ್ (ಎನ್.ಎಂ.-ಐ.ಸಿ.ಪಿ.ಎಸ್., NM-ICPS) ಆರ್ & ಡಿ, ಅನುವಾದ ಸಂಶೋಧನೆ, ಉತ್ಪನ್ನ ಅಭಿವೃದ್ಧಿ, ಇನ್ಕ್ಯುಬೇಟಿಂಗ್ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಹಾಗೂ ವಾಣಿಜ್ಯೀಕರಣವನ್ನು ಬೆಂಬಲಿಸಲು ತಂತ್ರಜ್ಞಾನ ವೇದಿಕೆಗಳ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಕಳೆದ ವರ್ಷದಲ್ಲಿ:
ಬಾಂಬೆಯ ಐ.ಐ.ಟಿ. ಯಲ್ಲಿ ಟಿ.ಐ.ಎಚ್. ಮೂಲಕ ಜಾರಿಗೆ ತರಲಾಗುತ್ತಿರುವ ಭಾರತ್‌ಜೆನ್ (ಭಾರತೀಯ ಭಾಷೆಗಳಲ್ಲಿ ಜನರೇಟಿವ್ ಕೃತಕ ಬುದ್ಧಿ ಮತ್ತೆಮಾದರಿ) ಗೆ ಬೆಂಬಲ ನೀಡಲಾಗಿದೆ.
• ತೃತೀಯ ಪಕ್ಷದ ಮೌಲ್ಯಮಾಪನವು ಮಿಷನ್ ಅನ್ನು ಹೆಚ್ಚು ಪರಿಣಾಮಕಾರಿ ಎಂದು ರೇಟಿಂಗ್ ಮಾಡಿದೆ.
4 ತಂತ್ರಜ್ಞಾನ ಅನುವಾದ ಸಂಶೋಧನಾ ಉದ್ಯಾನವನಗಳಾಗಿ (ಟಿ.ಟಿ.ಆರ್.ಪಿ.-TTRP ಗಳು) ಮೇಲ್ದರ್ಜೆಗೆ ಏರಿಸಲ್ಪಟ್ಟ 4 ತಂತ್ರಜ್ಞಾನ ನಾವೀನ್ಯತೆ ಕೇಂದ್ರಗಳು: ಐ.ಐ.ಟಿ ಇಂದೋರ್ (ಡಿಜಿಟಲ್ ಹೆಲ್ತ್‌ಕೇರ್), ಐ.ಐ.ಎಸ್.ಸಿ. ಬೆಂಗಳೂರು (ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ), ಐ.ಐ.ಟಿ. ಕಾನ್ಪುರ (ಸೈಬರ್‌ಸೆಕ್ಯುರಿಟಿ), ಐ.ಐ.ಟಿ. (ಐ.ಎಸ್.ಎಂ.-ISM) ಧನ್‌ಬಾದ್ (ಗಣಿಗಾರಿಕೆ ನಾವೀನ್ಯತೆ).
VI. ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್.ಎಸ್.ಎಂ-NSM)
ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (ಎನ್.ಎಸ್.ಎಂ.-NSM) ಅನ್ನು ಡಿ.ಎಸ್.ಟಿ. ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಜಂಟಿಯಾಗಿ ಕಾರ್ಯಗತಗೊಳಿಸುತ್ತವೆ ಮತ್ತು ನಿರ್ವಹಿಸುತ್ತವೆ. ದೇಶಾದ್ಯಂತ ಹರಡಿರುವ ನಮ್ಮ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ವಿವಿಧ ಸಾಮರ್ಥ್ಯಗಳ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ಮೂಲಸೌಕರ್ಯಗಳನ್ನು ಸಕ್ರಿಯಗೊಳಿಸುವ ಮೂಲಕ ಸಬಲೀಕರಣಗೊಳಿಸಲು ಎನ್.ಎಸ್.ಎಂ. ಉದ್ದೇಶಿಸಿದೆ. ಇದನ್ನು ಹಂತ ಹಂತವಾಗಿ ಸಾಧಿಸಲಾಗುತ್ತಿದೆ; ದೇಶದಲ್ಲಿ ಖರೀದಿಸಿದ ವ್ಯವಸ್ಥೆಗಳನ್ನು ಬಳಸಿಕೊಂಡು ಆರಂಭಿಕ ಕಾರ್ಯಾರಂಭ ಮಾಡಲಾಗಿದೆ, ನಂತರ ವ್ಯವಸ್ಥೆಯನ್ನು ಜೋಡಿಸಲಾಗಿದೆ. ಪ್ರಸ್ತುತ, 37 ಸ್ಥಳಗಳಲ್ಲಿ 39 ಪೆಟಾಫ್ಲಾಪ್ ಸೂಪರ್‌ಕಂಪ್ಯೂಟರ್‌ಗಳನ್ನು ರಚಿಸಲಾಗಿದೆ. ಇತ್ತೀಚಿನ ಮೂಲಸೌಕರ್ಯ ನಿರ್ಮಾಣವು ರುದ್ರ ಸರ್ವರ್, ಸಾಫ್ಟ್‌ವೇರ್ ಸ್ಟ್ಯಾಕ್‌ಗಳು ಮುಂತಾದ ದೇಶೀಯ ಬೆಳವಣಿಗೆ/ಅಭಿವೃದ್ಧಿಗಳನ್ನು ಆಧರಿಸಿದೆ. ಎನ್.ಎಸ್.ಎಂ. ಮೂಲಕ, ಭಾರತ ಸರಕಾರ ದೇಶದಲ್ಲಿ ದೊಡ್ಡ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಮುದಾಯವನ್ನು ತಲುಪಲು ಮತ್ತು ಬಹು-ಶಿಸ್ತೀಯ ದೊಡ್ಡ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಎಚ್.ಪಿ.ಸಿ. ಸಾಮರ್ಥ್ಯ ಹೊಂದಿರುವ ರಾಷ್ಟ್ರವನ್ನಾಗಿ ರೂಪಿಸಲು ಉದ್ದೇಶಿಸಿದೆ.
VII. ಹವಾಮಾನ ಶಕ್ತಿ ಮತ್ತು ಸುಸ್ಥಿರ ತಂತ್ರಜ್ಞಾನಗಳು
• ಕಲ್ಲಿದ್ದಲು ಅನಿಲೀಕರಣ, ಮೆಥನಾಲ್, ಡಿ.ಎಂ.ಇ. ಗಾಗಿ ಪೈಲಟ್-ಸ್ಕೇಲ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.
• ಕೇರಳದಲ್ಲಿ ಸುಸ್ಥಿರ ಜೈವಿಕ ಶಕ್ತಿ ಆಧಾರಿತ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ (ತ್ಯಾಜ್ಯ ಸಂಸ್ಕ್ರಣಾ ಸ್ಥಾವರ-ETP) ಉದ್ಘಾಟನೆಯಾಗಿದೆ.
• ಸಿಮೆಂಟ್ ವಲಯದಲ್ಲಿ ಐದು ಕಾರ್ಬನ್ ಕ್ಯಾಪ್ಚರ್ ಮತ್ತು ಯುಟಿಲೈಸೇಶನ್ (ಕಾರ್ಬನ್ ಸೆರೆ ಹಿಡಿದು ಬಳಕೆ ಮಾಡುವ ಸಿ.ಸಿ.ಯು.-CCU) ಪರೀಕ್ಷಾ ಬೆಡ್‌ಗಳು, ಕೈಗಾರಿಕಾ ಇಂಗಾಲದ ಹೊರಸೂಸುವಿಕೆಯನ್ನು ಎದುರಿಸಲು ಇದೇ ಮೊದಲ ರೀತಿಯ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಕ್ಲಸ್ಟರ್ (ಗುಚ್ಛವನ್ನು) ರೂಪಿಸಿವೆ.
— ಸುಸ್ಥಿರ ಕೈಗಾರಿಕಾ ಅಭ್ಯಾಸಗಳು ಮತ್ತು ಭಾರೀ ಕೈಗಾರಿಕೆಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಕಡೆಗೆ ಒಂದು ಪ್ರಮುಖ ನಡೆ ಇದಾಗಿದೆ. ಸಿಮೆಂಟ್ ಉತ್ಪಾದನೆಯಲ್ಲಿ ಸಿ.ಸಿ.ಯು. ತಂತ್ರಜ್ಞಾನಗಳನ್ನು ಉತ್ತೇಜಿಸುವ ಮೂಲಕ, ಈ ಯೋಜನೆಯು ಹವಾಮಾನ ಸ್ನೇಹಿ ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸುವ ಮತ್ತು ಭಾರತವು ತನ್ನ ಇಂಗಾಲ-ಕಡಿತ ಬದ್ಧತೆಗಳನ್ನು ಪೂರೈಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
VIII. ಅಂತರರಾಷ್ಟ್ರೀಯ ಸಂಪರ್ಕಗಳು:
• ಫೇರ್ ಪ್ರಾಜೆಕ್ಟ್, ಸಿ.ಇ.ಆರ್.ಎನ್., ಎಸ್.ಕೆ.ಎ., ಎಲ್ಲೆಟ್ರ ನಂತಹ ಮೆಗಾ ಎಸ್ ಆಂಡ್ ಟಿ. ಸೌಲಭ್ಯಗಳಲ್ಲಿ ಭಾರತೀಯ ಭಾಗವಹಿಸುವಿಕೆಯ ಅಡಿಯಲ್ಲಿ ಅತ್ಯುತ್ತಮ ಜಾಗತಿಕ ವಿಜ್ಞಾನದೊಂದಿಗೆ ಸಂಪರ್ಕ ಸಾಧಿಸಲು ಹಲವಾರು ಹೊಸ ಅಂತರರಾಷ್ಟ್ರೀಯ ಎಸ್&ಟಿ ಸಹಯೋಗ ಮತ್ತು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
• ಡಿ.ಎಸ್.ಟಿ. ಮತ್ತು ಫ್ರಾನ್ಸ್‌ನ ಫ್ರೆಂಚ್ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎ.ಎನ್.ಆರ್.-ANR) ನಡುವಿನ ಇಂಡೋ-ಫ್ರೆಂಚ್ ವೈಜ್ಞಾನಿಕ ಪಾಲುದಾರಿಕೆಯ ಅಡಿಯಲ್ಲಿ "ಸುಸ್ಥಿರ ಇಂಧನ ಪರಿಹಾರಗಳಿಗಾಗಿ ಹಸಿರು ಹೈಡ್ರೋಜನ್ ನಾವೀನ್ಯತೆಗಳು" ಅಡಿಯಲ್ಲಿ ಯೋಜನೆಯ ಪ್ರಸ್ತಾವನೆಗಳನ್ನು ಸಲ್ಲಿಸಲು ಮೊದಲ ಆಹ್ವಾನ ಕರೆಯನ್ನು ಪ್ರಾರಂಭಿಸಲಾಗಿದೆ.
• 20 ಜೋಡಿ ಮಹಿಳಾ ವಿಜ್ಞಾನಿಗಳಿಗೆ (20 ಭಾರತೀಯ ಮತ್ತು 20 ಜರ್ಮನ್) ಐ.ಜಿ.ಎಸ್.ಟಿ.ಸಿ-ವೈಸರ್ (IGSTC-WISER) ಅನುದಾನವನ್ನು ನೀಡಲಾಗಿದೆ.
• ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿ, ತಂತ್ರಜ್ಞಾನಗಳ ಸಹ-ಅಭಿವೃದ್ಧಿ (ಡಿಜಿಟಲ್ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ವಿಸ್ತರಿಸುವುದು ಮತ್ತು ನವೋದ್ಯಮ ವಿನಿಮಯ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಸೇರಿದಂತೆ) ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುವ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುವ "ಎಸ್.ಟಿ.ಐ. ಸಹಕಾರಕ್ಕಾಗಿ ಮಾರ್ಗಸೂಚಿ"ಯನ್ನು ಬಲಪಡಿಸಲು ಭಾರತ ಮತ್ತು ರಷ್ಯಾ ಒಪ್ಪಿಕೊಂಡಿವೆ.
• ಡಿ.ಎಸ್.ಟಿ. ಮತ್ತು ಮಾರಿಷಸ್ ಗಣರಾಜ್ಯದ ತೃತೀಯ ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನಾ ಸಚಿವಾಲಯದ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
IX. ಎಸ್.ಟಿ.ಐ. ಡೇಟಾ ಮತ್ತು ನೀತಿ ಸಂಶೋಧನೆ
ಪುರಾವೆ ಆಧಾರಿತ ನೀತಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಇಲಾಖೆಯು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ವಹಣಾ ಮಾಹಿತಿ ವ್ಯವಸ್ಥೆ (ಎನ್.ಎಸ್.ಟಿ.ಎಂ.ಐ.ಎಸ್.-NSTMIS) ಮತ್ತು ನೀತಿ ಸಂಶೋಧನಾ ಕೋಶ (ಪಿ.ಆರ್.ಸಿ.-PRC) ಗಳನ್ನು ಅನುಷ್ಠಾನಗೊಳಿಸುತ್ತಿದೆ. ಎನ್.ಎಸ್.ಟಿ.ಎಂ.ಐ.ಎಸ್. ಕಾರ್ಯಕ್ರಮವು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯದ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಮಾನದಂಡಕ್ಕಾಗಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರ್ಯವನ್ನು ಪೂರೈಸಲು, ಇದು ರಾಷ್ಟ್ರೀಯ ಮಟ್ಟದಲ್ಲಿ ವಿಭಿನ್ನ ಸಮೀಕ್ಷೆ ಕಾರ್ಯಕ್ರಮಗಳನ್ನು ಮಾಡುತ್ತದೆ. ಪ್ರಸ್ತುತ ಎರಡು ಪ್ರಮುಖ ಸಮೀಕ್ಷೆಗಳಾದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮೀಕ್ಷೆಯು ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಾಗಿರುವ ಸಂಪನ್ಮೂಲಗಳ ಡೇಟಾವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ದೇಶಾದ್ಯಂತ ಸಂಶೋಧನಾ ಪ್ರಯೋಗಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಸೇರಿದಂತೆ 8000+ ಸಂಸ್ಥೆಗಳಿಂದ ಡೇಟಾವನ್ನು (ದತ್ತಾಂಶವನ್ನು ) ಸಂಗ್ರಹಿಸುವ ಗುರಿಯನ್ನು ಸಮೀಕ್ಷೆ ಹೊಂದಿದೆ. ದೇಶದಲ್ಲಿ ದೃಢವಾದ ಪುರಾವೆ-ಚಾಲಿತ ಎಸ್.ಟಿ.ಐ. ನೀತಿ ವ್ಯವಸ್ಥೆಗಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ನಿರ್ಮಿಸುವ ಮತ್ತು ಬಲಪಡಿಸುವ ಕಡೆಗೆ, ಪಿ.ಆರ್.ಸಿ. ದೇಶಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಡಿ.ಎಸ್.ಟಿ- ನೀತಿ ಸಂಶೋಧನಾ ಕೇಂದ್ರ (ಸಿ.ಪಿ.ಆರ್.ಗಳು)ಗಳನ್ನು ಸ್ಥಾಪಿಸಿದೆ ಮತ್ತು ಬಲಪಡಿಸಿದೆ. ಈ ಕೇಂದ್ರಗಳು ದೇಶಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಗುರಿ ಕೇಂದ್ರಿತ ಸಂಶೋಧನೆಯಲ್ಲಿ ತೊಡಗಿಕೊಂಡಿವೆ, ಎಸ್.ಟಿ.ಐ. ನೀತಿ ಕ್ಷೇತ್ರದಲ್ಲಿ ವಿದ್ವಾಂಸರಿಗೆ ತರಬೇತಿ ನೀಡುತ್ತವೆ ಮತ್ತು ಉತ್ತಮ ಎಸ್.ಟಿ.ಐ. ನೀತಿ ರಚನೆಗೆ ಕೊಡುಗೆ ನೀಡುತ್ತವೆ. ಇದರ ಜೊತೆಗೆ, ನೀತಿ ವೃತ್ತಿಪರರು/ಸಂಶೋಧಕರ ನಿರ್ಣಾಯಕ ಸಮೂಹವನ್ನು ಸೃಷ್ಟಿಸಲು, ಡಿ.ಎಸ್.ಟಿ-ಎಸ್.ಟಿ.ಐ. ಪಾಲಿಸಿ ಫೆಲೋಶಿಪ್ ಪ್ರೋಗ್ರಾಂ (ಡಿ.ಎಸ್.ಟಿ-ಎಸ್.ಟಿ.ಐ. ಪಿ.ಎಫ್.ಪಿ.-DST-STI PFP) ನ್ನು ಬೆಂಬಲಿಸುತ್ತಿದೆ. ಡಿ.ಎಸ್.ಟಿ-ಎಸ್.ಟಿ.ಐ. ಪಿ.ಎಫ್.ಪಿ.- ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ನೀತಿ ಉತ್ಸಾಹಿಗಳಿಗೆ ನೀತಿ ನಿರೂಪಣೆಯ ನಿಕಟ ಭಾಗಗಳಿಂದ ಮಾನ್ಯತೆ ಪಡೆಯಲು ಮತ್ತು ಎಸ್.ಟಿ.ಐ. ನೀತಿ ಕ್ಷೇತ್ರದಲ್ಲಿ ಅವರ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಕೌಶಲ್ಯಗಳ ಕೊಡುಗೆ ನೀಡಲು ಅವಕಾಶವನ್ನು ಒದಗಿಸುತ್ತದೆ. ಪ್ರಸ್ತುತ, ಒಟ್ಟು 9 ಸಿ.ಆರ್.ಪಿ ಗಳು ವಿವಿಧ ಎಸ್.ಟಿ.ಐ. ಡೊಮೇನ್‌ಗಳಲ್ಲಿ ನೀತಿ ಸಂಶೋಧನೆಯನ್ನು ಕೈಗೊಂಡಿವೆ.
X. ಸ್ವಾಯತ್ತ ಸಂಸ್ಥೆಗಳಿಂದ ಪ್ರಮುಖ ಸಾಧನೆಗಳು
ಇಲಾಖೆಯು 25 ಸ್ವಾಯತ್ತ ಸಂಸ್ಥೆಗಳನ್ನು (ಎ.ಐ.ಗಳು-AIs) ಪೋಷಿಸುತ್ತದೆ. ಇವುಗಳಲ್ಲಿ 16 ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, 04 ವಿಶೇಷ ಜ್ಞಾನ ಮತ್ತು ವಿಜ್ಞಾನ ಹಾಗು ತಂತ್ರಜ್ಞಾನ ಸೇವಾ ಸಂಸ್ಥೆಗಳು, 05 ವೃತ್ತಿಪರ ಸಂಸ್ಥೆಗಳು ಸೇರಿವೆ. 2025 ರ ವರ್ಷದಲ್ಲಿನ ಕೆಲವು ಪ್ರಮುಖ ಸಾಧನೆಗಳು:
ಐ.ಎನ್.ಎಸ್.ಟಿ. (ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ)
ನ್ಯಾನೋ ಔಷಧ ಮತ್ತು ಸುಸ್ಥಿರ ನ್ಯಾನೋ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಭಾವ ಬೀರುವ ಹಲವಾರು ಪ್ರಗತಿಗಳನ್ನು ಐ.ಎನ್.ಎಸ್.ಟಿ. ವರದಿ ಮಾಡಿದೆ. ಅದರ ವಿಜ್ಞಾನಿಗಳು ಪಾರ್ಕಿನ್ಸನ್ ಕಾಯಿಲೆಯನ್ನು ಗುರಿಯಾಗಿಸಿಕೊಂಡು ಹೊಸ ನ್ಯಾನೋ-ಸೂತ್ರೀಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಇದರಲ್ಲಿ ಮೆಲಟೋನಿನ್-ಆಧಾರಿತ "ಕತ್ತಲೆ ಹಾರ್ಮೋನ್" ನ್ಯಾನೋ-ವ್ಯವಸ್ಥೆ ಮತ್ತು ರೋಗಿಗಳಿಗೆ ಮತ್ತೊಂದು ಸುರಕ್ಷಿತ ಚಿಕಿತ್ಸಕ ವಿತರಣಾ ವೇದಿಕೆ ಸೇರಿವೆ. ಐ.ಎನ್.ಎಸ್.ಟಿ. ಕೈಗಾರಿಕಾ ರಾಸಾಯನಿಕ ಪ್ರಕ್ರಿಯೆಗಳ ಪರಿಸರ ಹೆಜ್ಜೆಗುರುತನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಆಧುನಿಕ ನ್ಯಾನೋ-ವೇಗವರ್ಧಕವನ್ನು ಸಹ ಪ್ರವರ್ತಿಸಿದೆ, ಇದು ದಕ್ಷತೆ ಮತ್ತು ಪರಿಸರ ಸ್ನೇಹಪರತೆಯನ್ನು ಪ್ರದರ್ಶಿಸುತ್ತದೆ. ರುಮಟಾಯ್ಡ್ ಸಂಧಿವಾತಕ್ಕೆ ಅದರ ನವೀನ ಔಷಧ-ವಿತರಣಾ ವ್ಯವಸ್ಥೆಗಳು ಕಡಿಮೆ ಅಡ್ಡಪರಿಣಾಮಗಳೊಂದಿಗೆ ಗುರಿಕೇಂದ್ರಿತ ಪರಿಹಾರದ ಭರವಸೆ ನೀಡುತ್ತವೆ, ಜೊತೆಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ನ್ಯಾನೋ-ಕಪ್‌ಗಳ ಮೇಲಿನ ಅದರ ಕೆಲಸವು ಹೆಚ್ಚು ನಿಖರ ಮತ್ತು ಪರಿಣಾಮಕಾರಿ ಶಾಖ-ಆಧಾರಿತ ಆಂಕೊಲಾಜಿಕಲ್ ಚಿಕಿತ್ಸೆಗಳಿಗೆ ಬಾಗಿಲು ತೆರೆಯುತ್ತದೆ. ಒಟ್ಟಾಗಿ, ಈ ಪ್ರಗತಿಗಳು ಆರೋಗ್ಯ ರಕ್ಷಣೆ ಮತ್ತು ಹಸಿರು ರಸಾಯನಶಾಸ್ತ್ರಕ್ಕಾಗಿ ಪರಿವರ್ತಕ ನ್ಯಾನೋವಿಜ್ಞಾನದಲ್ಲಿ ಐ.ಎನ್.ಎಸ್.ಟಿ. ಯ ನಾಯಕತ್ವವನ್ನು ಎತ್ತಿ ತೋರಿಸುತ್ತವೆ.
ಐ.ಐ.ಎ. (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್)
ಐ.ಐ.ಎ. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ, ಇದರಲ್ಲಿ ಎನ್.ಜಿ.ಸಿ. 3785 ರ ಅಸಾಮಾನ್ಯವಾಗಿ ಉದ್ದವಾದ ಉಬ್ಬರವಿಳಿತದ (ತೆರೆಯ ಮಾದರಿಯಲ್ಲಿ) ಬಾಲದ ಕೊನೆಯಲ್ಲಿ ರೂಪುಗೊಳ್ಳುವ ಹೊಸ ನಕ್ಷತ್ರಪುಂಜದ ಆವಿಷ್ಕಾರವೂ ಸೇರಿದೆ, ಇದು ಗ್ಯಾಲಕ್ಸಿಯ ವಿಕಾಸದ ಒಳನೋಟಗಳನ್ನು ನೀಡುತ್ತದೆ. ಸಂಶೋಧಕರು ಬೈನರಿ ಕಪ್ಪು ಕುಳಿ ವ್ಯವಸ್ಥೆಯಿಂದ ಎಕ್ಸ್-ಕಿರಣಗಳಲ್ಲಿ ಕಬ್ಬಿಣದ ರೇಖೆಗಳನ್ನು ಪತ್ತೆಹಚ್ಚಿದರು, ಇದು ಕಪ್ಪು ಕುಳಿ ಗುಣಲಕ್ಷಣಗಳ ಉತ್ತಮ ವಿವರಣೆಯನ್ನು ಸಕ್ರಿಯಗೊಳಿಸುತ್ತದೆ. ಕರೋನಲ್ ಮಾಸ್ ಎಜೆಕ್ಷನ್‌ಗಳ (CMEs) ರೇಡಿಯಲ್ ಆಯಾಮಗಳನ್ನು ನಿರ್ಧರಿಸಲು ಅದರ ಅಸಾಂಪ್ರದಾಯಿಕ ತಂತ್ರವು ಭೂಮಿಯ ಮೇಲಿನ ಬಾಹ್ಯಾಕಾಶ-ಹವಾಮಾನ ಪರಿಣಾಮಗಳ ಮುನ್ಸೂಚನೆಗಳನ್ನು ಸುಧಾರಿಸುತ್ತದೆ. ಐ.ಐ.ಎ. ತಂಡಗಳು ಸೌರ ಕರೋನಲ್ ರಂಧ್ರಗಳ ಉಷ್ಣ ರಚನೆ ಮತ್ತು ಕಾಂತೀಯ ಕ್ಷೇತ್ರಗಳನ್ನು ಸಹ ನಕ್ಷೆ ಮಾಡಿವೆ, ನಕ್ಷತ್ರ ರಸಾಯನಶಾಸ್ತ್ರದ ಹೊಸ ರೂಪವನ್ನು ಕಂಡುಹಿಡಿದಿವೆ ಮತ್ತು ಸೂರ್ಯನ ಮಸುಕಾದ ಸ್ಫೋಟಕ ಚಟುವಟಿಕೆಗಳನ್ನು ಬಹಿರಂಗ/ಶೋಧನೆ ಮಾಡುವ ಸಣ್ಣ ಕರೋನಲ್ ಲೂಪ್‌ಗಳನ್ನು ಗುರುತಿಸಿವೆ. ಇದಲ್ಲದೆ, ಐ.ಐ.ಎ. ವಿಜ್ಞಾನಿಗಳು ಲಡಾಖ್‌ನಲ್ಲಿ ಕಂಡುಬರುವ ಅಸಾಮಾನ್ಯ ಸೌರ-ಚಾಲಿತ ವಾತಾವರಣದ ವಿದ್ಯಮಾನಗಳನ್ನು ವ್ಯಾಖ್ಯಾನಿಸಿದ್ದಾರೆ, ಇದು ಸೌರ-ಭೂಮಂಡಲದ ಪರಸ್ಪರ ಕ್ರಿಯೆಗಳಲ್ಲಿ ಭಾರತದ ಗಡಿನಾಡಿನ ಮುಂಚೂಣಿ ಸಂಶೋಧನೆಯನ್ನು ಬಲಪಡಿಸುತ್ತದೆ.
ಎಸ್.ಎನ್. ಬೋಸ್ ರಾಷ್ಟ್ರೀಯ ಮೂಲಭೂತ ವಿಜ್ಞಾನ ಕೇಂದ್ರ
ಎಸ್.ಎನ್.ಬಿ.ಎನ್.ಸಿ.ಬಿ.ಎಸ್. (SNBNCBS) ಕ್ವಾಂಟಮ್ ವಿಜ್ಞಾನ, ವಸ್ತು ಸಂಶೋಧನೆ ಮತ್ತು ಖಗೋಳ ಭೌತಿಕ ಉಪಕರಣಗಳಲ್ಲಿ ಭಾರತದ ಸಾಮರ್ಥ್ಯವನ್ನು ವಿಸ್ತರಿಸಿದೆ. ಇದು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಹೊಸ ವೀಕ್ಷಣಾಲಯವನ್ನು ಸ್ಥಾಪಿಸಿದೆ, ಇದು ಖಗೋಳ ಭೌತಶಾಸ್ತ್ರದಲ್ಲಿ ರಾಷ್ಟ್ರೀಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಬಲಪಡಿಸುವ ನಿರೀಕ್ಷೆಯಿದೆ. ಕ್ವಾಂಟಮ್ ತಂತ್ರಜ್ಞಾನಗಳ ಭವಿಷ್ಯವನ್ನು ವರ್ಧಿಸುವ ಮೂಲಕ ಕ್ವಾಂಟಮ್ ಪ್ರಯೋಜನದ ನೈಜ-ಪ್ರಪಂಚದ ಪ್ರದರ್ಶನವನ್ನು ನೀಡುವ ಮೂಲಕ ಸಂಶೋಧಕರು ಪ್ರಮುಖ ಪ್ರಗತಿಯನ್ನು ಸಾಧಿಸಿದ್ದಾರೆ. ಸಂಯೋಜಿತ ಹೈಬ್ರಿಡ್ ವಸ್ತುಗಳ ಅಭಿವೃದ್ಧಿಯು ಮೆದುಳಿನಂತಹ ಕಾರ್ಯಗಳನ್ನು ಅನುಕರಿಸುವ ಕೃತಕ ಸಿನಾಪ್ಸ್‌ಗಳನ್ನು ಸಕ್ರಿಯಗೊಳಿಸಿದೆ, ನರ ಮಾದರಿಯ ಕಂಪ್ಯೂಟಿಂಗ್‌ಗಾಗಿ ಹೊಸ ದಿಗಂತಗಳನ್ನು ತೆರೆಯುತ್ತದೆ. ಆರೋಗ್ಯ ರಕ್ಷಣೆಯಲ್ಲಿ, ಎಸ್.ಎನ್.ಬಿ.ಎನ್.ಸಿ.ಬಿ.ಎಸ್. ವಿಜ್ಞಾನಿಗಳು ವ್ಯಕ್ತಿಗಳಿಗೆ ಅನುಗುಣವಾಗಿ ಕ್ಯಾನ್ಸರ್ ಚಿಕಿತ್ಸೆಗಳಿಗಾಗಿ ಮಾರ್ಗಗಳನ್ನು ಡಿಕೋಡ್ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಿದರು, ಇದು ನಿಖರ ಔಷಧ ಚಿಕಿತ್ಸೆಯನ್ನು ಬೆಂಬಲಿಸುತ್ತದೆ. ಈ ಕೊಡುಗೆಗಳು ಸಂಸ್ಥೆಯ ಅಂತರ-ಶಿಸ್ತೀಯ ಶ್ರೇಷ್ಠತೆಯನ್ನು ಒತ್ತಿಹೇಳುತ್ತವೆ.
ಬಿಎಸ್‌ಐಪಿ (ಬೀರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್-ಬೀರ್ಬಲ್ ಸಾಹ್ನಿ ಪ್ರಾಗ್ಜೀವ ವಿಜ್ಞಾನ ಸಂಸ್ಥೆ.) )
ಬಿಎಸ್‌ಐಪಿ ಭೂಮಿಯ ಆಳವಾದ ಭೂತಕಾಲವನ್ನು ಪ್ಯಾಲಿಯೋಬೊಟಾನಿಕಲ್ ಮತ್ತು ಭೂವೈಜ್ಞಾನಿಕ ಸಂಶೋಧನೆಗಳ ಮೂಲಕ ಬೆಳಗಿಸುವುದನ್ನು ಮುಂದುವರೆಸಿದೆ. ಡೆಕ್ಕನ್ ಜ್ವಾಲಾಮುಖಿಯ ಸಮಯದಲ್ಲಿ ಉಷ್ಣವಲಯದ ಸಸ್ಯವರ್ಗವು ಆಶ್ಚರ್ಯಕರ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಎಂಬುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ, ಇತಿಹಾಸಪೂರ್ವ ಹವಾಮಾನದ ಒತ್ತಡದ ತಿಳುವಳಿಕೆಯನ್ನು ಮರುರೂಪಿಸಿದೆ. ಸಂಶೋಧಕರು ಭಾರತದ ಪೆರ್ಮಿಯನ್ ಬೆಂಕಿಯ ದಾಖಲೆಗಳನ್ನು ಡಿಕೋಡ್ ಮಾಡಿದ್ದಾರೆ, ಇದು ಪ್ರಾಚೀನ ಕಾಡ್ಗಿಚ್ಚು ವೃತ್ತಾಂತಗಳ ಪುರಾವೆಗಳನ್ನು ಒದಗಿಸುತ್ತದೆ. ಈ ಸಂಸ್ಥೆಯು 24 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಪ್ರಾಗ್ಜೀವಶಾಸ್ತ್ರ (ಪ್ಯಾಲಿಯೊಂಟೊಲಾಜಿಕಲ್) ರಹಸ್ಯವನ್ನು ಬಹಿರಂಗಪಡಿಸಿದೆ ಮತ್ತು ಎಲೆ ಪಳೆಯುಳಿಕೆ ವಿಶ್ಲೇಷಣೆಗಳು ಸುಮಾರು 4 ಮಿಲಿಯನ್ ವರ್ಷಗಳ ಹಿಂದೆ ಹಿಮಾಲಯದ ಉದಯವು ಕಾಶ್ಮೀರದ ಹವಾಮಾನವನ್ನು ಹೇಗೆ ಪರಿವರ್ತಿಸಿತು ಎಂಬುದನ್ನು ತೋರಿಸಿವೆ. ಲಡಾಖ್‌ನ ಬಿಸಿನೀರಿನ ಬುಗ್ಗೆಗಳ ಬಗ್ಗೆ ಅದರ ಒಳನೋಟಗಳು ಭೂಮಿಯ ಮೇಲೆ ಜೀವಿಗಳು ಉದಯಿಸಿದ ಮತ್ತು ಮಂಗಳ ಗ್ರಹದಲ್ಲಿಯೂ ಸಹ ಜೀವಿಗಳ ಉಗಮದ ಬಗ್ಗೆ ಸುಳಿವುಗಳನ್ನು ನೀಡುತ್ತವೆ. ಬಿಎಸ್‌ಐಪಿ ಮಣಿಪುರದಲ್ಲಿ 37,000 ವರ್ಷಗಳಷ್ಟು ಹಳೆಯದಾದ ಬಿದಿರಿನ ಅವಶೇಷಗಳನ್ನು ಗುರುತಿಸಿದೆ, ಇದು ಏಷ್ಯಾದಲ್ಲಿ ಹಿಮಯುಗದ ಪ್ರಮುಖ ಪರಿಸರ ಇತಿಹಾಸಗಳನ್ನು ಬಹಿರಂಗ ಮಾಡಿದೆ.
ಜೆ.ಎನ್.ಸಿ.ಎ.ಎಸ್.ಆರ್. (ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್)
ಜೆ.ಎನ್.ಸಿ.ಎ.ಎಸ್.ಆರ್. (ಜವಾಹರಲಾಲ್ ನೆಹರೂ ಆಧುನಿಕ ವಿಜ್ಞಾನ ಸಂಶೋಧನಾ ಸಂಸ್ಥೆ) ವಸ್ತು ವಿಜ್ಞಾನ, ಆರೋಗ್ಯ ಸಂಶೋಧನೆ ಮತ್ತು ಕ್ವಾಂಟಮ್ ತಂತ್ರಜ್ಞಾನಗಳನ್ನು ಒಳಗೊಂಡಂತೆ ಹಲವಾರು ಪರಿವರ್ತನಾತ್ಮಕ ಸರಣಿ ಪ್ರಗತಿಗಳನ್ನು ನೀಡಿದೆ. ಧರಿಸಬಹುದಾದ ಸಾಧನಗಳ ಮೂಲಕ ಒತ್ತಡ ಪತ್ತೆಗಾಗಿ ಅದರ ಹೊಸ ವ್ಯವಸ್ಥೆಯು ವಸ್ತು ಎಂಜಿನಿಯರಿಂಗ್ ನ್ನು ಆರೋಗ್ಯ ಮೇಲ್ವಿಚಾರಣೆಯೊಂದಿಗೆ ವಿಲೀನಗೊಳಿಸುತ್ತದೆ. ಸಂಶೋಧಕರು ಸೀಮಿತ ಎಲೆಕ್ಟ್ರಾನ್ ವರ್ತನೆ/ನಡವಳಿಕೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ, ಆಪ್ಟೊಎಲೆಕ್ಟ್ರಾನಿಕ್ ವಸ್ತುಗಳು, ಸಂವೇದಕಗಳು ಮತ್ತು ನ್ಯಾನೊಕ್ಯಾಟಲಿಸ್ಟ್‌ಗಳನ್ನು ಸುಧಾರಿಸಿದ್ದಾರೆ. ಲೋಹ-ಅರೆವಾಹಕ ಸೂಪರ್‌ಲ್ಯಾಟಿಸ್‌ಗಳಿಂದ ಥರ್ಮಿಯೋನಿಕ್ ಹೊರಸೂಸುವಿಕೆಯಲ್ಲಿ ಪ್ರವರ್ತಕ ಆವಿಷ್ಕಾರವು ಮುಂದಿನ ಪೀಳಿಗೆಯ ಶಕ್ತಿ ಸಾಧನಗಳಿಗೆ ಭರವಸೆ ನೀಡುತ್ತದೆ. ಜೆ.ಎನ್.ಸಿ.ಎ.ಎಸ್.ಆರ್. ರೋಗಿಗಳ ಸ್ವಾವಲಂಬನೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹೊಸ ಆಟಿಸಂ ಚಿಕಿತ್ಸೆಯನ್ನು ಅನ್ವೇಷಿಸುತ್ತಿದೆ. ಸಂಸ್ಥೆಯು ವೇಗದ ಚಾರ್ಜಿಂಗ್, ದೀರ್ಘಾವಧಿಯ ಸೋಡಿಯಂ-ಅಯಾನ್ ಬ್ಯಾಟರಿಗಳನ್ನು ಸಹ ಅಭಿವೃದ್ಧಿಪಡಿಸಿದೆ, ಇದು ಕೈಗೆಟುಕುವ ಇಂಧನ ಸಂಗ್ರಹಣೆಯತ್ತ ಪ್ರಮುಖ ನಡೆ ಮತ್ತು ಭವಿಷ್ಯದ ಕ್ವಾಂಟಮ್ ಅನ್ವಯಿಕೆಗಳಿಗೆ ಮುಖ್ಯವಾದ ಅಪರೂಪದ- ಕಾಂತೀಯತೆಯ ವಿದ್ಯಮಾನಗಳನ್ನು ಅನಾವರಣ ಮಾಡಿದೆ. ಜೊತೆಗೆ, ಭಾರತೀಯ ಮಹಿಳೆಯರಲ್ಲಿ ಬಾಯಿಯ ಕ್ಯಾನ್ಸರ್‌ನ ಆನುವಂಶಿಕ ಕಾರಣಗಳ ಒಳನೋಟಗಳು ಗುರಿ ಕೇಂದ್ರಿತ ಮಧ್ಯಸ್ಥಿಕೆಗಳಿಗೆ ದಾರಿ ಮಾಡಿಕೊಡುತ್ತವೆ.
ಐ.ಎ.ಎಸ್.ಎಸ್.ಟಿ. (ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ)
ಐ.ಎ.ಎಸ್.ಎಸ್.ಟಿ. ಯ ಬಹುಶಿಸ್ತೀಯ ಸಂಶೋಧನೆಯು ವಿಷ ಜೀವಶಾಸ್ತ್ರ, ನ್ಯಾನೊಮೆಡಿಸಿನ್, ಪರಿಸರ ವಸ್ತುಗಳು, ಜನಾಂಗೀಯ ಸಸ್ಯಶಾಸ್ತ್ರ ಮತ್ತು ಪೌಷ್ಟಿಕಾಂಶ ವಿಜ್ಞಾನಗಳನ್ನು ವ್ಯಾಪಿಸಿದೆ. ಅದರ ವಿಜ್ಞಾನಿಗಳು ಪೋಪ್ಸ್ ಪಿಟ್ ವೈಪರ್‌ನ ವಿಷದಲ್ಲಿ ಅಡಗಿರುವ ಸಂಕೀರ್ಣತೆಗಳನ್ನು ಬಿಚ್ಚಿಟ್ಟರು, ಆಂಟಿವೆನಮ್ ಅಭಿವೃದ್ಧಿಗೆ ಸಂಬಂಧಿಸಿದ ಜ್ಞಾನವನ್ನು ವಿಸ್ತರಿಸಿದರು. ಅವರು ಸಂಭಾವ್ಯ ಕ್ಯಾನ್ಸರ್ ವಿರೋಧಿ ಅನ್ವಯಿಕೆಗಳೊಂದಿಗೆ ಕಾಂತೀಯ ನ್ಯಾನೊಪಾರ್ಟಿಕಲ್‌ಗಳನ್ನು ಅಭಿವೃದ್ಧಿಪಡಿಸಿದರು ಮತ್ತು ಸುಸ್ಥಿರ ಕೈಗಾರಿಕಾ ಅಭ್ಯಾಸಗಳನ್ನು ಬೆಂಬಲಿಸುವ ಪರಿಸರ ಸ್ನೇಹಿ, ಉನ್ನತ-ಕಾರ್ಯಕ್ಷಮತೆಯ ಲೂಬ್ರಿಕಂಟ್ ಅನ್ನು ರೂಪಿಸಿದರು. ಐ.ಎ.ಎಸ್.ಎಸ್.ಟಿ. ಈಶಾನ್ಯ ಭಾರತದ ವಿಷಕಾರಿ ಸಸ್ಯಗಳಲ್ಲಿ ಔಷಧೀಯ ಸಾಮರ್ಥ್ಯವನ್ನು ಸಹ ದಾಖಲಿಸಿದೆ, ಸಾಂಪ್ರದಾಯಿಕ "ಗುಪ್ತವಾಗಿ ರೋಗ ಗುಣಪಡಿಸುವವರನ್ನು" ಬಹಿರಂಗಕ್ಕೆ ತಂದಿತು. ಹುದುಗು/ಬುರುಗು ಬರಿಸಿದ ಆಹಾರಗಳು ಭಾರತದ ವೈವಿಧ್ಯಮಯ ಜನಸಂಖ್ಯೆಗೆ ವೈಯಕ್ತಿಕವಾದಂತಹ ಪೋಷಣೆಯನ್ನು ಹೇಗೆ ಸಕ್ರಿಯಗೊಳಿಸಬಹುದು ಎಂಬುದನ್ನು ಅವರ ಸಂಶೋಧನೆಯು ಮತ್ತಷ್ಟು ವಿಸ್ತರಿಸಿ ತೋರಿಸಿದೆ, ಅದು ಸೂಕ್ಷ್ಮಜೀವಿ ವಿಜ್ಞಾನವನ್ನು ಆಹಾರ ಸಂಸ್ಕೃತಿಯೊಂದಿಗೆ ಸಂಯೋಜಿಸುತ್ತದೆ.
ಬೋಸ್ ಸಂಸ್ಥೆ
ಬೋಸ್ ಸಂಸ್ಥೆ ಜೈವಿಕ ವಿಜ್ಞಾನ ಮತ್ತು ಧರಿಸಬಹುದಾದ ತಂತ್ರಜ್ಞಾನ ಎರಡರಲ್ಲೂ ಪ್ರಮುಖ ಸಂಶೋಧನೆಗೆ ಕೊಡುಗೆ ನೀಡಿತು. ಒಂದು ಅಧ್ಯಯನವು ಮುಂದುವರಿದ ಸಂವೇದನೆ ಮತ್ತು ಡೇಟಾ ವ್ಯಾಖ್ಯಾನದ ಮೂಲಕ ಒತ್ತಡವನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುವ ಧರಿಸಬಹುದಾದ ಸಾಧನಗಳಲ್ಲಿ ಸಂಯೋಜಿಸಲ್ಪಟ್ಟ ಹೊಸ ವ್ಯವಸ್ಥೆಯನ್ನು ಪ್ರದರ್ಶಿಸಿತು, ಇದು ಮುಂದಿನ ಪೀಳಿಗೆಯ ಆರೋಗ್ಯ ಮೇಲ್ವಿಚಾರಣೆ/ನಿಗಾ ವ್ಯವಸ್ಥೆಗೆ ಸಂಬಂಧಿಸಿ ಹೊಸ ಭರವಸೆ ಮೂಡಿಸಿದೆ. ಮತ್ತೊಂದು ಪ್ರಮುಖ ಸಾಧನೆಯಲ್ಲಿ ಭಾರತೀಯ ವಿಜ್ಞಾನಿಗಳು 50 ವರ್ಷಗಳಷ್ಟು ಹಳೆಯದಾದ ಜೈವಿಕ ನಿಯಮವನ್ನು ಪುನಃ ಬರೆಯುವ ಕೆಲಸ ಮಾಡಿದ್ದಾರೆ.ಇದುಜೀವ ವಿಜ್ಞಾನಗಳಲ್ಲಿ ಮೂಲಭೂತ ತಿಳುವಳಿಕೆಯನ್ನು ಮರುರೂಪಿಸುತ್ತದೆ ಮತ್ತು ಆಣ್ವಿಕ ಜೀವಶಾಸ್ತ್ರದಲ್ಲಿ ಭವಿಷ್ಯದ ಸಂಶೋಧನೆಯ ಮೇಲೆ ಪ್ರಭಾವ ಬೀರುತ್ತದೆ.
ಸಿಇಎನ್‌ಎಸ್ (ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ)
ಸಿಇಎನ್‌ಎಸ್ ನವೀಕರಿಸಬಹುದಾದ ಇಂಧನ ವಸ್ತುಗಳು, ಸ್ಮಾರ್ಟ್ ಮೇಲ್ಮೈಗಳು ಮತ್ತು ಸುಸ್ಥಿರ ಬ್ಯಾಟರಿಗಳಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ. ಬೆಂಗಳೂರಿನ ವಿಜ್ಞಾನಿಗಳು ದಕ್ಷ ಹಸಿರು ಹೈಡ್ರೋಜನ್ ಉತ್ಪಾದನೆಗಾಗಿ ಹೊಸ ಮಿಶ್ರಲೋಹ ಆಧಾರಿತ ವೇಗವರ್ಧಕವನ್ನು ಅಭಿವೃದ್ಧಿಪಡಿಸಿದ್ದಾರೆ.
ಆರ್.ಆರ್.ಐ. (ರಾಮನ್ ಸಂಶೋಧನಾ ಸಂಸ್ಥೆ)
ಆರ್.ಆರ್.ಐ. ಕ್ವಾಂಟಮ್ ಭೌತಶಾಸ್ತ್ರ, ಅಲ್ಟ್ರಾಕೋಲ್ಡ್ ಮ್ಯಾಟರ್ ಮತ್ತು ವಿಶ್ವವಿಜ್ಞಾನದಲ್ಲಿ ಆಧುನಿಕ ಮೂಲಭೂತ ಸಂಶೋಧನೆಯನ್ನು ಕೈಗೊಂಡಿದೆ. ಸಂಪೂರ್ಣ ಶೂನ್ಯದ ಬಳಿ ಕಣ ಸಾಗಣೆಯು ಸ್ಮಾರ್ಟ್ ಕ್ವಾಂಟಮ್ ಸಾಧನಗಳ ಸೃಷ್ಟಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಅನ್ವೇಷಿಸಿದರು. ಕ್ವಾಂಟಮ್ ಮ್ಯಾಗ್ನೆಟೋಮೆಟ್ರಿಯಲ್ಲಿನ ಪ್ರಮುಖ ಜಿಗಿತವು ನಿಖರವಾದ ಕಾಂತೀಯ-ಕ್ಷೇತ್ರ ಮಾಪನಗಳನ್ನು ಸರಳೀಕರಿಸಿತು. ಅವರ ಸಂಶೋಧನೆಯು ಕ್ವಾಂಟಮ್ ವ್ಯವಸ್ಥೆಗಳಲ್ಲಿ ಶಬ್ದದ ಆಶ್ಚರ್ಯಕರ ಪರಿಣಾಮಗಳನ್ನು ತೋರಿಸಿತು, ಶಾಸ್ತ್ರೀಯ ನಿರೀಕ್ಷೆಗಳಿಗೆ ಸವಾಲು ಹಾಕಿತು. ಚಿಕಣಿ ಕ್ವಾಂಟಮ್ ಕಂಪ್ಯೂಟರ್‌ಗಳು ಆರಂಭಿಕ-ಬ್ರಹ್ಮಾಂಡದ ಸಂಕೇತಗಳನ್ನು ಡಿಕೋಡ್ ಮಾಡಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಪರೀಕ್ಷಿಸುವ ಮೂಲಕ ಆರ್.ಆರ್.ಐ. ವಿಶ್ವವಿಜ್ಞಾನಕ್ಕೆ ಕೊಡುಗೆ ನೀಡಿತು ಮತ್ತು ಹೆಚ್ಚಿನ-ಶಕ್ತಿಯ ವಿದ್ಯಮಾನಗಳು ಪರಮಾಣು-ಮಟ್ಟದ ಸಂವಹನಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಪ್ರದರ್ಶಿಸಿತು, ಮುಂದಿನ-ಪೀಳಿಗೆಯ ಕ್ವಾಂಟಮ್ ವಸ್ತುಗಳನ್ನು ಸಕ್ರಿಯಗೊಳಿಸುವುದನ್ನೂ ಇದು ತೋರಿಸಿತು. ಜೊತೆಗೆ, ಅವರು ಕ್ವಾಂಟಮ್ ವ್ಯವಸ್ಥೆಗಳನ್ನು ಬಳಸಿಕೊಂಡು ನಿಜವಾದ ಯಾದೃಚ್ಛಿಕತೆಯನ್ನು ಪ್ರಮಾಣೀಕರಿಸಿದರು, ಸುರಕ್ಷಿತ ಡಿಜಿಟಲ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದರು. .
ಆರ್.ಆರ್.ಐ. (ರಾಮನ್ ಸಂಶೋಧನಾ ಸಂಸ್ಥೆ)
ಆರ್.ಆರ್.ಐ. ಕ್ವಾಂಟಮ್ ಭೌತಶಾಸ್ತ್ರ, ಅಲ್ಟ್ರಾಕೋಲ್ಡ್ ಮ್ಯಾಟರ್ ಮತ್ತು ವಿಶ್ವವಿಜ್ಞಾನದಲ್ಲಿ ಮುಂದುವರಿದ ಮೂಲಭೂತ ಸಂಶೋಧನೆಯನ್ನು ಕೈಗೊಂಡಿದೆ. ಸಂಪೂರ್ಣ ಶೂನ್ಯದ ಬಳಿ ಕಣ ಸಾಗಣೆಯು ಸ್ಮಾರ್ಟ್ ಕ್ವಾಂಟಮ್ ಸಾಧನಗಳ ಸೃಷ್ಟಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಅನ್ವೇಷಿಸಿದರು. ಕ್ವಾಂಟಮ್ ಮ್ಯಾಗ್ನೆಟೋಮೆಟ್ರಿಯಲ್ಲಿನ ಪ್ರಮುಖ ಜಿಗಿತವು ನಿಖರವಾದ ಕಾಂತೀಯ-ಕ್ಷೇತ್ರ ಮಾಪನಗಳನ್ನು ಸರಳೀಕರಿಸಿತು. ಅವರ ಸಂಶೋಧನೆಯು ಕ್ವಾಂಟಮ್ ವ್ಯವಸ್ಥೆಗಳಲ್ಲಿ ಶಬ್ದದ ಆಶ್ಚರ್ಯಕರ ಪರಿಣಾಮಗಳನ್ನು ತೋರಿಸಿತು, ಶಾಸ್ತ್ರೀಯ ನಿರೀಕ್ಷೆಗಳಿಗೆ ಸವಾಲು ಹಾಕಿತು. ಚಿಕಣಿ ಕ್ವಾಂಟಮ್ ಕಂಪ್ಯೂಟರ್‌ಗಳು ಆರಂಭಿಕ-ಬ್ರಹ್ಮಾಂಡದ ಸಂಕೇತಗಳನ್ನು ಡಿಕೋಡ್ ಮಾಡಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಪರೀಕ್ಷಿಸುವ ಮೂಲಕ ಆರ್.ಆರ್.ಐ. ವಿಶ್ವವಿಜ್ಞಾನಕ್ಕೆ ಕೊಡುಗೆ ನೀಡಿತು ಮತ್ತು ಹೆಚ್ಚಿನ-ಶಕ್ತಿಯ ವಿದ್ಯಮಾನಗಳು ಪರಮಾಣು-ಮಟ್ಟದ ಸಂವಹನಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಪ್ರದರ್ಶಿಸಿತು, ಮುಂದಿನ-ಪೀಳಿಗೆಯ ಕ್ವಾಂಟಮ್ ವಸ್ತುಗಳನ್ನು ಸಕ್ರಿಯಗೊಳಿಸುವುದನ್ನೂ ಇದು ತೋರಿಸಿತು. ಜೊತೆಗೆ, ಅವರು ಕ್ವಾಂಟಮ್ ವ್ಯವಸ್ಥೆಗಳನ್ನು ಬಳಸಿಕೊಂಡು ನಿಜವಾದ ಯಾದೃಚ್ಛಿಕತೆಯನ್ನು/ಗೊತ್ತುಗುರಿ ಇಲ್ಲದಿರುವಿಕೆಯನ್ನು ಪ್ರಮಾಣೀಕರಿಸಿದರು, ಸುರಕ್ಷಿತ ಡಿಜಿಟಲ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದರು. .
ಎ.ಆರ್.ಸಿ.ಐ. (ಪೌಡರ್ ಲೋಹ ಶಾಸ್ತ್ರ ಮತ್ತು ಹೊಸ ವಸ್ತುಗಳಿಗಾಗಿರುವ ಅಂತರರಾಷ್ಟ್ರೀಯ ಸುಧಾರಿತ ಸಂಶೋಧನಾ ಕೇಂದ್ರ)
ಎ.ಆರ್.ಸಿ.ಐ. ಟೆಲಿಕಾಂ ಟವರ್‌ಗಳಿಗೆ ನಿರಂತರ ಬ್ಯಾಕಪ್ ಶಕ್ತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಹೈಡ್ರೋಜನ್ ಆಧಾರಿತ ಇಂಧನ-ಕೋಶ ವಿದ್ಯುತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಆವಿಷ್ಕಾರವು ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ, ಇದು ಭಾರತದ ಶುದ್ಧ-ಶಕ್ತಿ ಮೂಲಸೌಕರ್ಯದಲ್ಲಿ ಹೈಡ್ರೋಜನ್ ಅನ್ನು ಸಂಯೋಜಿಸುವಲ್ಲಿ ಪ್ರಮುಖ ಹೆಜ್ಜೆಯನ್ನು ಸಂಕೇತಿಸುತ್ತದೆ.
ನೆಕ್ಟಾರ್ (ತಂತ್ರಜ್ಞಾನ ಅಪ್ಲಿಕೇಶನ್ ಮತ್ತು ತಲುಪುವಿಕೆಗಾಗಿ ಈಶಾನ್ಯ ಕೇಂದ್ರ)
ವರ್ಧಿತ ಕಣ್ಗಾವಲು ಮತ್ತು ವಿಪತ್ತು-ನಿರ್ವಹಣಾ ಕಾರ್ಯಾಚರಣೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ನವೀನ ಏರೋಸ್ಟಾಟಿಕ್ ಡ್ರೋನ್ ವ್ಯವಸ್ಥೆಯನ್ನು ನೆಕ್ಟಾರ್ (NECTAR ) ಪ್ರದರ್ಶಿಸಿದೆ. ಇದರ ಹೆಚ್ಚಿನ ಸ್ಥಿರತೆ ಮತ್ತು ಹೊರೆ-ತಾಳುವಿಕೆ ಸಾಮರ್ಥ್ಯಗಳು ನೈಸರ್ಗಿಕ ವಿಕೋಪಗಳು, ಭದ್ರತಾ ಕಾರ್ಯಾಚರಣೆಗಳು ಮತ್ತು ತುರ್ತು ಪ್ರತಿಕ್ರಿಯೆಯ ಸಮಯದಲ್ಲಿ ನೈಜ-ಸಮಯದ ಮೇಲ್ವಿಚಾರಣೆಗೆ ಇದನ್ನು ಮೌಲ್ಯಯುತವಾಗಿಸುತ್ತದೆ.
ಎ.ಆರ್.ಐ. (ಅಗಾರ್ಕರ್ ಸಂಶೋಧನಾ ಸಂಸ್ಥೆ)
ಎ.ಆರ್.ಐ. ವಿಜ್ಞಾನಿಗಳು ಆಸ್ಪರ್ಜಿಲಸ್ ವಿಭಾಗದ ನಿಗ್ರಿಯಲ್ಲಿ (ಇದನ್ನು ಶಿಲೀಂದ್ರದ ಸಂಕೀರ್ಣ ಗುಂಪು ಎಂದು ಹೇಳಲಾಗುತ್ತದೆ) ಹಿಂದೆ ಅಪರಿಚಿತವಾಗಿದ್ದ ಜೀವವೈವಿಧ್ಯತೆಯನ್ನು ಅನಾವರಣಗೊಳಿಸಿದ್ದಾರೆ, ಭಾರತದಿಂದ ಎರಡು ಹೊಸ ಪ್ರಭೇದಗಳನ್ನು ಗುರುತಿಸಿದ್ದಾರೆ. ಈ ಆವಿಷ್ಕಾರವು ಶಿಲೀಂಧ್ರ ನಾಮ ವರ್ಗೀಕರಣದ ಜಾಗತಿಕ ತಿಳುವಳಿಕೆಯನ್ನು ಆಳಗೊಳಿಸುತ್ತದೆ ಮತ್ತು ಕೃಷಿ, ಆಹಾರ ಸುರಕ್ಷತೆ, ಔಷಧ ಮತ್ತು ಕೈಗಾರಿಕಾ ಜೈವಿಕ ತಂತ್ರಜ್ಞಾನದ ಮೇಲೆ ಪರಿಣಾಮ ಬೀರುತ್ತದೆ.
XI. ಸಂಶೋಧನಾ ಮೂಲಸೌಕರ್ಯವನ್ನು ಬಲಪಡಿಸುವುದು
• ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಾದ್ಯಂತ 44 ವಿಭಾಗಗಳು ಮತ್ತು 22 ಸ್ನಾತಕೋತ್ತರ ಕಾಲೇಜುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಸೌಕರ್ಯ ಸುಧಾರಣೆಗಾಗಿ ನಿಧಿ (ಎಫ್.ಐ.ಎಸ್.ಟಿ.- FIST) ಕಾರ್ಯಕ್ರಮದ ಅಡಿಯಲ್ಲಿ ಬೆಂಬಲವನ್ನು ವಿಸ್ತರಿಸಲಾಗಿದೆ, ಸಂಶೋಧನಾ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ನಾವೀನ್ಯತೆಯನ್ನು ಸಕ್ರಿಯಗೊಳಿಸಲು, ಸಾಮಾಜಿಕ ಸವಾಲುಗಳನ್ನು ಪರಿಹರಿಸಲು ಮತ್ತು ತರಬೇತಿ ಹಾಗು ಕಾರ್ಯಪಡೆಯ ಅಭಿವೃದ್ಧಿಯನ್ನು ಹೆಚ್ಚಿಸಲು ಒಟ್ಟು ₹57.0 ಕೋಟಿಗಳನ್ನು ನಿಯೋಜಿಸಲಾಗಿದೆ.
• ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಾದ್ಯಂತ 285 ಎಫ್.ಐ.ಎಸ್.ಟಿ. ಬೆಂಬಲಿತ ವಿಭಾಗಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆಯನ್ನು ಐದು ಸುತ್ತಿನ ವಿಷಯ ತಜ್ಞರ ಸಮಿತಿ ಸಭೆಗಳೊಂದಿಗೆ ಪೂರ್ಣಗೊಳಿಸಲಾಗಿದೆ.
• ಅದೇ ರೀತಿ, ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಿಕೆಯಾಗುವ ಮಿಷನ್-ಆಧಾರಿತ ಸಂಶೋಧನೆಯನ್ನು ಬೆಂಬಲಿಸುವಾಗ ಮತ್ತು ಸ್ಟೆಮ್ ವಿಭಾಗಗಳಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಗುಂಪುಗಳು, ವಿಶ್ವವಿದ್ಯಾಲಯಗಳು ಮತ್ತು ಭೌಗೋಳಿಕ ಪ್ರದೇಶಗಳ ವಿಶಾಲ ಪ್ರಾತಿನಿಧ್ಯವನ್ನು ವಿಸ್ತರಿಸಲು ಚಾಲ್ತಿಯಲ್ಲಿರುವ 19 ಯೋಜನೆಗಳು ಮತ್ತು ಪರ್ಸ್(PURSE) ನ 06 ಪೂರ್ಣಗೊಂಡ ಯೋಜನೆಗಳನ್ನು ಸಹ ಪ್ರಗತಿಪರಿಶೀಲನೆಗೆ ಒಳಪಡಿಸಲಾಗಿದೆ.
-
ವಿಶ್ವವಿದ್ಯಾನಿಲಯ ಸಂಶೋಧನೆ ಮತ್ತು ವೈಜ್ಞಾನಿಕ ಶ್ರೇಷ್ಠತೆಯ ಪ್ರಚಾರ -ಪರ್ಸ್ (PURSE) ಅಡಿಯಲ್ಲಿ ಒಟ್ಟು ₹99.0 ಕೋಟಿಗಳ ನಿಯೋಜನೆಯೊಂದಿಗೆ ಒಂಬತ್ತು ಹೊಸ ವಿಶ್ವವಿದ್ಯಾಲಯಗಳಿಗೆ ಬೆಂಬಲ ನೀಡಲಾಯಿತು.
-
ಮುಂಬರುವ ವರ್ಷದಲ್ಲಿ, ಎಫ್.ಐ.ಎಸ್.ಟಿ, ಪರ್ಸ್, ೆಸ್.ಎ.ಐ.ಎಫ್., ಸುಪ್ರೀಂ, ಮತ್ತು ಎಸ್.ಟಿ.ಯು.ಟಿ.ಐ. (STUTI)ಯಂತಹ ಕಾರ್ಯಕ್ರಮಗಳು ಸ್ನಾತಕೋತ್ತರ ಕಾಲೇಜುಗಳು, ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಹೆಚ್ಚುವರಿ ~150 ವಿಭಾಗಗಳನ್ನು ಗುರುತಿಸುವ ಮತ್ತು ಬೆಂಬಲಿಸುವತ್ತ ಗಮನಹರಿಸುತ್ತವೆ, ಇದು ವರ್ಧಿತ ಸಂಶೋಧನಾ ಮೂಲಸೌಕರ್ಯದ ಮೂಲಕ ಮುಂದಿನ ಪೀಳಿಗೆಯ ವೈಜ್ಞಾನಿಕ ಪ್ರತಿಭೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ.
-
115 ವಿಭಾಗಗಳು ಮತ್ತು 22 ಪಿಜಿ ಕಾಲೇಜುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಸೌಕರ್ಯ ಸುಧಾರಣೆಗಾಗಿ ನಿಧಿ (ಫಿಸ್ಟ್-FIST) 2024 ರ ಅಡಿಯಲ್ಲಿ ₹273.89 ಕೋಟಿ ಅನುಮೋದನೆ ನೀಡಲಾಗಿದೆ.
-
ಐ.ಐ.ಟಿ. ಹೈದರಾಬಾದ್‌ನಲ್ಲಿ ಸಿಸ್ಕಾಂ (CISCoM) ಅನ್ನು ಡಿ.ಎಸ್.ಟಿ.- ಅತ್ಯಾಧುನಿಕ ವಿಶ್ಲೇಷಣಾತ್ಮಕ ಮತ್ತು ತಾಂತ್ರಿಕ ಸಹಾಯ ಸಂಸ್ಥೆ (ಸಾಥಿ-SATHI) ಅಡಿಯಲ್ಲಿ ಸ್ಥಾಪಿಸಲಾಗಿದೆ - ಭಾರತದ ಮೊದಲ ಇನ್-ಸಿಟು ಮೈಕ್ರೋಸ್ಕೋಪಿ ಕೇಂದ್ರ ಇದಾಗಿದೆ..
-
ಮುಂದಿನ ಕಾರ್ಯಗಳು: ಫಿಸ್ಟ್ ಅಡಿಯಲ್ಲಿ ಇನ್ನೂ 100 ವಿಭಾಗಗಳಿಗೆ ಬೆಂಬಲ, ಹೊಸ ಪರ್ಸ್ (PURSE) ಆಯ್ಕೆಗಳು.
XII ತಂತ್ರಜ್ಞಾನ ಅಭಿವೃದ್ಧಿ ಮತ್ತು ವರ್ಗಾವಣೆ ಹಾಗು ಸ್ಟಾರ್ಟ್-ಅಪ್ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ.-DST) ನವೋದ್ಯಮಗಳು ಮತ್ತು ವೈಯಕ್ತಿಕ ನಾವೀನ್ಯಕಾರರನ್ನು ಪೋಷಿಸುವತ್ತ ಗಮನಹರಿಸಿ, ರಾಷ್ಟ್ರೀಯ ನಾವೀನ್ಯತೆಯ ಅಭಿವೃದ್ಧಿ ಮತ್ತು ಸದ್ಬಳಕೆ ಕಾರ್ಯಕ್ರಮ (ನಿಧಿ-NIDHI)ವನ್ನು ಜಾರಿಗೊಳಿಸುತ್ತಿದೆ. ಪ್ರಮುಖ ಸಾಧನೆಗಳು:
8 ಹೊಸ ಅಂತರ್ಗತ ತಂತ್ರಜ್ಞಾನ ವ್ಯವಹಾರ ಇನ್ಕ್ಯುಬೇಟರ್‌ಗಳು (ಐ.ಟಿ.ಬಿ.ಐ ಗಳು) ಮತ್ತು 10 ಉದ್ಯಮಿ-ನಿವಾಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು (ಎ.ಎಂ.ಟಿ-AMT) ಕಾರ್ಯಕ್ರಮವು ಮೇಲ್ಮೈ ಎಂಜಿನಿಯರಿಂಗ್ ಮತ್ತು ನಿಖರ ಉತ್ಪಾದನೆಯಲ್ಲಿ 11 ಯೋಜನೆಗಳನ್ನು ಬೆಂಬಲಿಸಿದೆ.
-
ದಂತ ತಂತ್ರಜ್ಞಾನ ನಾವೀನ್ಯತೆ ಹಬ್ (ಮೈಡ್ಸ್ -MAIDS) ಉದ್ಘಾಟನೆ - ಸ್ಥಳೀಯ ಸಾಧನಗಳಿಗೆ ಉತ್ತೇಜನ - ಈ ನವೀನ ಕೇಂದ್ರದ ಉದ್ಘಾಟನೆಯೊಂದಿಗೆ, ಡಿ.ಎಸ್.ಟಿ. ಸ್ಥಳೀಯ/ದೇಶೀಯ ವೈದ್ಯಕೀಯ-ದಂತ ಸಾಧನಗಳ ಅಭಿವೃದ್ಧಿ ಮತ್ತು ತಯಾರಿಕೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ಭಾರತೀಯ ರೋಗಿಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕೈಗೆಟುಕುವ ಸಾಧನಗಳಾಗಿ ಸಂಶೋಧನೆಯ ಪ್ರಯೋಜನವನ್ನು ಹಬ್/ಕೇಂದ್ರವು ವೇಗಗೊಳಿಸಬಹುದು.
XIII. ಸಮಾಜದ ಸಮಗ್ರ ಬೆಳವಣಿಗೆಗೆ ಸಮಾನತೆ, ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ.
ಸಮಾನತೆ, ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ವಿಜ್ಞಾನ (ಎಸ್.ಇ.ಇ.ಡಿ.-ಸೀಡ್) ವಿಭಾಗವು ಸಮಾಜದ ಅಂಚಿನಲ್ಲಿರುವ ವರ್ಗಗಳು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಹಾರಗಳ ಅನುಷ್ಠಾನಕ್ಕೆ ಬೆಂಬಲ ನೀಡುತ್ತದೆ.
-
ವಿಕಲಚೇತನರಿಗೆ ಸಹಾಯಕ ಮತ್ತು ಪುನರ್ವಸತಿ ತಂತ್ರಜ್ಞಾನಗಳ ಶೀರ್ಷಿಕೆಯ ಅಡಿಯಲ್ಲಿ 21 ಹೊಸ ಯೋಜನೆಗಳನ್ನು ಬೆಂಬಲಿಸಲಾಗಿದೆ, ಇದರಲ್ಲಿ ಮಾತು ಮತ್ತು ಶ್ರವಣ ದೋಷಗಳಿಗೆ ಪರಿಹಾರಗಳು, ಕುರುಡು ಮತ್ತು ದೃಷ್ಟಿಹೀನರಿಗೆ ಡಿಜಿಟಲ್ ಸೌಲಭ್ಯ ಪ್ರವೇಶ/ಲಭ್ಯತೆ ಸಾಧನಗಳು ಮತ್ತು ಎಕ್ಸೋಸ್ಕೆಲಿಟನ್‌ಗಳು, ಪ್ರಾಸ್ಥೆಟಿಕ್ಸ್ ಮತ್ತು ಹೊಂದಾಣಿಕೆಯ ವಾಹನಗಳಂತಹ ಚಲನಶೀಲತೆಯನ್ನು ಹೆಚ್ಚಿಸುವ ಸಾಧನಗಳು ಸೇರಿವೆ.
-
ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಉತ್ತರ ಪ್ರದೇಶ, ತಮಿಳುನಾಡು, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಾಲ್ಕು ಮಹಿಳಾ ತಂತ್ರಜ್ಞಾನ ಉದ್ಯಾನವನಗಳನ್ನು (ಡಬ್ಲ್ಯು.ಟಿ.ಪಿ.ಎಸ್.-WTPs) ಸ್ಥಾಪಿಸಲಾಗಿದೆ.
-
ಮಣ್ಣಿನ ದಕ್ಷತೆ ಮತ್ತು ಒಟ್ಟಾರೆ ಸಸ್ಯ ಆರೋಗ್ಯವನ್ನು ಹೆಚ್ಚಿಸಲು ಬೆಂಗಳೂರು ಐಸಿಎಆರ್–ಐಐಎಚ್‌ಆರ್ ಅರ್ಕಾ ಮಾವು ಸ್ಪೆಷಲ್ ಎಂಬ ಸೂಕ್ಷ್ಮ ಪೋಷಕಾಂಶ ಸೂತ್ರೀಕರಣವನ್ನು ಅಭಿವೃದ್ಧಿಪಡಿಸಿದೆ. ಮಾವು ಬೆಳೆಗಾರರಿಗೆ್ ಮತ್ತಷ್ಟು ಸಹಾಯ ಮಾಡಲು ಸಂಸ್ಥೆಯು ನೀರಿನ ಸಂರಕ್ಷಣಾ ಬಲೆಗಳು ಮತ್ತು ಹಣ್ಣಿನ ನೊಣ/ಕೀಟ ಬಾಧೆ ನಿಯಂತ್ರಿಸುವ ಬಲೆಗಳಂತಹ ಪೋಷಕ ತಂತ್ರಜ್ಞಾನಗಳನ್ನು ಪರಿಚಯಿಸಿದೆ.
-
ಐಸಿಎಆರ್-ಎನ್‌ಬಿಎಜಿಆರ್ ಮತ್ತು ಎನ್‌ಡಿಆರ್‌ಐ, ಕರ್ನಾಲ್, ಡಿಆರ್‌ಡಿಒ-ಡಿಐಪಿಎಎಸ್ & ಡಿಐಎಚ್‌ಎಆರ್, ಐಐಎಸ್‌ಸಿ ಬೆಂಗಳೂರು ಮತ್ತು ಜೆಎಂಐ ದಿಲ್ಲಿಗಳ ನೆಟ್‌ವರ್ಕ್ ಯೋಜನೆಯ ಮೂಲಕ, ಲಡಾಖ್‌ನಲ್ಲಿರುವ ಸ್ಥಳೀಯ ಟ್ರಾನ್ಸ್-ಹಿಮಾಲಯನ್ ಜಾನುವಾರುಗಳ ಕೊಲೊಸ್ಟ್ರಮ್ ಮತ್ತು ಹಾಲಿನಲ್ಲಿ ಪ್ರಯೋಜನಕಾರಿ ಮೆಟಾಬಾಲೈಟ್‌ಗಳನ್ನು ಗುರುತಿಸಲಾಗಿದೆ ಮತ್ತು ನಿಖರವಾದ ಪ್ರೋಟಿಯೋಮಿಕ್ ವಿಶ್ಲೇಷಣೆಗಾಗಿ ಅಂತರ್ವರ್ಧಕ ಪೆಪ್ಟೈಡ್‌ಗಳನ್ನು ಹೀರಲು/ಹೊರತೆಗೆಯಲು ಪರಿಣಾಮಕಾರಿ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದೆ.
-
ಪುಣೆಯ ವಿಜ್ಞಾನ ಆಶ್ರಮವು ಬ್ಲ್ಯಾಕ್ ಸೋಲ್ಜರ್ ಫ್ಲೈ (ಬಿಎಸ್‌ಎಫ್) ತಂತ್ರಜ್ಞಾನವನ್ನು ಪರಿಚಯಿಸಿತು ಮತ್ತು ರಾಜಗುರುನಗರದಲ್ಲಿ ತಿಂಗಳಿಗೆ ಸುಮಾರು 60 ಮೆಟ್ರಿಕ್ ಟನ್ ನಗರ ಜೈವಿಕ ತ್ಯಾಜ್ಯವನ್ನು ಸಂಸ್ಕರಿಸಿತು.
-
ಸೋಲಾನಮ್ ನಿಗ್ರಮ್ (ಕಪ್ಪು ನೈಟ್‌ಶೇಡ್) ಎಲೆಗಳನ್ನು ಬಳಸಿಕೊಂಡು ಒಂದು ನವೀನ ಗಿಡಮೂಲಿಕೆ ಖನಿಜಯುಕ್ತ ನೀರಿನ ಸೂತ್ರೀಕರಣವನ್ನು ಕೇರಳದ ತಿರುವನಂತಪುರಂನಲ್ಲಿರುವ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರವು ಪ್ರಾಯೋಗಿಕ-ಪ್ರಮಾಣದ ಉತ್ಪನ್ನವಾಗಿ ಯಶಸ್ವಿಯಾಗಿ ಅಭಿವೃದ್ಧಿಪಡಿಸಿತು ಮತ್ತು ಮೌಲ್ಯೀಕರಿಸಿತು.
-
ಲ್ಯಾಕ್ಟೋಸ್-ಅಸಹಿಷ್ಣು ಗ್ರಾಹಕರಿಗೆ ವರ್ಧಿತ ಕರಗುವಿಕೆ, ಪೌಷ್ಟಿಕಾಂಶದ ಮೌಲ್ಯದೊಂದಿಗೆ ಲ್ಯಾಕ್ಟೋಸ್-ಮುಕ್ತ ಹಾಲಿನ ಪುಡಿ (ಎಲ್‌ಎಫ್‌ಎಂಪಿ) ಗಾಗಿ ಸಂಪೂರ್ಣ ಪ್ರಮಾಣೀಕೃತ ಪ್ರಕ್ರಿಯೆಯನ್ನು ಹರಿಯಾಣದ ಕರ್ನಾಲ್‌ನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
XIV. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ
-
ಪ್ರಮುಖ ಜೀವನೋಪಾಯ ಮತ್ತು ಜೀವನೋಪಾಯ ವ್ಯವಸ್ಥೆಯಲ್ಲಿನ ಸವಾಲುಗಳನ್ನು ಪರಿಹರಿಸಲು ಎಸ್.ಟಿ.ಐ.(STI) ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಐದು (5) ಎಸ್.ಟಿ.ಐ. ಹಬ್‌ಗಳನ್ನು ಸ್ಥಾಪಿಸಲಾಗಿದೆ.
-
ಎನ್.ಐ.ಟಿ. ಪುದುಚೇರಿ ಕೈಗೊಂಡ ಎಸ್.ಟಿ.ಐ. ಮಧ್ಯಸ್ಥಿಕೆಗಳು ಕಾರೈಕಲ್ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಮೀನುಗಾರರ ಜೀವನೋಪಾಯದ ಅಗತ್ಯಗಳನ್ನು ಕೊಯಿಲಿನ ನಂತರದ ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸುವ ಮೂಲಕ ಪರಿಹರಿಸುತ್ತಿವೆ.
-
ಎಸ್.ಟಿ.ಐ. ಮಧ್ಯಸ್ಥಿಕೆಗಳ ಮೂಲಕ ಪಶ್ಚಿಮ ರಾಜಸ್ಥಾನದ 25 ಹಳ್ಳಿಗಳಲ್ಲಿ ಜೀವನೋಪಾಯ, ಸುಸ್ಥಿರತೆ ಮತ್ತು ಸಮುದಾಯ-ಚಾಲಿತ ಸಾಮಾಜಿಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಐಐಟಿ ಜೋಧ್‌ಪುರ ಸಾಂಪ್ರದಾಯಿಕ ಜ್ಞಾನವನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತಿದೆ.
-
ಐಐಟಿ ಗುವಾಹಟಿಯು ಅಸ್ಸಾಂನ ಗ್ರಾಮೀಣ ಎಸ್ಟಿ ಸಮುದಾಯಗಳಿಗೆ ಪರಿಸರ ಸ್ನೇಹಿ ಪಾಲಿಮರ್‌ಗಳನ್ನು ಬಳಸಿಕೊಂಡು ಜೈವಿಕ ವಿಘಟನೀಯ ಆಟಿಕೆ ಉತ್ಪಾದನಾ ಘಟಕಗಳ ಸ್ಥಾಪನೆಯನ್ನು ಉತ್ತೇಜಿಸುತ್ತಿದೆ, ಜೀವನೋಪಾಯ ಮತ್ತು ಸಾಮಾಜಿಕ ಉನ್ನತಿಯನ್ನು ಬೆಳೆಸುತ್ತಿದೆ.
-
ಐಸಿಎಆರ್-ರಾಷ್ಟ್ರೀಯ ಹಂದಿ ಸಂಶೋಧನೆಯು, ಗುವಾಹಟಿಯು ಅಸ್ಸಾಂನ ಧೆಮಾಜಿ ಮತ್ತು ಲಖಿಂಪುರ ಜಿಲ್ಲೆಗಳಲ್ಲಿ ಮಿಸಿಂಗ್ ಮತ್ತು ಬೋಡೋ ಮಹಿಳೆಯರನ್ನು ಹಂದಿ ಸಾಕಣೆಗಾಗಿ ಎಸ್.ಟಿ.ಐ. ಹಬ್ ಸ್ಥಾಪಿಸುವ ಮೂಲಕ ಸಬಲೀಕರಣಗೊಳಿಸುತ್ತಿದೆ, ಇದು ಪತ್ತೆಹಚ್ಚುವಿಕೆ, ಐ.ಒ.ಟಿ.-ಆಧಾರಿತ ಮಾಂಸ ತಪಾಸಣೆ, ಸೂಕ್ಷ್ಮ ಕಸಾಯಿಖಾನೆಗಳು ಮತ್ತು ಹಂದಿಮಾಂಸ ಉತ್ಪನ್ನ ತಂತ್ರಜ್ಞಾನಗಳನ್ನು ಪರಿಚಯಿಸುತ್ತದೆ.
XV. ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯ ವೃದ್ಧಿ
"ಇನ್ನೋವೇಷನ್ ಇನ್ ಸೈನ್ಸ್ ಪರ್ಸ್ಯೂಟ್ ಫಾರ್ ಸ್ಪೈರ್ಡ್ ರಿಸರ್ಚ್ (ಇನ್ಸ್ಪೈರ್-INSPIRE)" ಎಂಬುದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನದತ್ತ ಪ್ರತಿಭೆಯನ್ನು ಆಕರ್ಷಿಸಲು ಇದನ್ನು ಬಳಸಲಾಗುತ್ತದೆ. ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಮೂಲಭೂತ ಮತ್ತು ನೈಸರ್ಗಿಕ ವಿಜ್ಞಾನಗಳನ್ನು ಅಧ್ಯಯನ ಮಾಡಲು, ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ಮತ್ತು ಪಶುವೈದ್ಯಕೀಯ ವಿಜ್ಞಾನಗಳು ಸೇರಿದಂತೆ ಮೂಲಭೂತ ಮತ್ತು ಅನ್ವಯಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನಾ ವೃತ್ತಿಯನ್ನು ಮುಂದುವರಿಸಲು ಮತ್ತು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆ ಹಾಗು ಸಂಶೋಧನೆ ಮತ್ತು ಅಭಿವೃದ್ಧಿ ನೆಲೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಅಗತ್ಯವಾದ ನಿರ್ಣಾಯಕ ಮಾನವ ಸಂಪನ್ಮೂಲವನ್ನು ನಿರ್ಮಿಸುವುದು ಇನ್ಸ್ಪೈರ್ ಕಾರ್ಯಕ್ರಮದ ಉದ್ದೇಶವಾಗಿದೆ.
ಇನ್ಸ್ಪೈರ್ ಮಾನಕ್
ಇನ್ಸ್ಪೈರ್ ಮಾನಕ್ ದೇಶಾದ್ಯಂತ ಶಾಲೆಗಳು ಮತ್ತು ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ತಲುಪಿದೆ, ಸ್ಟೆಮ್ ಶಿಕ್ಷಣವನ್ನು ಉತ್ತೇಜಿಸುತ್ತಿದೆ. 2025-26ನೇ ಸಾಲಿನಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳಿಂದ ಒಟ್ಟು 11.47 ಲಕ್ಷ ಚಿಂತನೆ/ವಿಚಾರಗಳು ಮತ್ತು ನಾವೀನ್ಯತೆಗಳನ್ನು ಸಜ್ಜುಗೊಳಿಸಲಾಗಿದೆ.
-ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
-
52% ನಾಮನಿರ್ದೇಶನಗಳು ಹುಡುಗಿಯರಿಂದ ಮತ್ತು 48% ಹುಡುಗರಿಂದ ಬಂದಿವೆ.
-
ಭಾಗವಹಿಸಿದ ಶಾಲೆಗಳಲ್ಲಿ 84% ದೇಶದ ಗ್ರಾಮೀಣ ಭಾಗಗಳಲ್ಲಿವೆ.
-
2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 50009 ಶಾಲಾ ವಿದ್ಯಾರ್ಥಿಗಳನ್ನು ಇನ್ಸ್ಪೈರ್ ಮಾನಕ್ (INSPIRE- MANAK ) ಗೆ ಆಯ್ಕೆ ಮಾಡಲಾಗಿದೆ ಮತ್ತು ತಲಾ ರೂ. 10000/- ಆರ್ಥಿಕ ಸಹಾಯವನ್ನು ನೀಡಲಾಗಿದೆ.
-
ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ 27% (13495) ಎಸ್.ಸಿ/ಎಸ್ಟಿ. ವರ್ಗಕ್ಕೆ ಸೇರಿದವರು.
-
54 ವಿದ್ಯಾರ್ಥಿಗಳು ಮತ್ತು 03 ಮೇಲ್ವಿಚಾರಕರು ಸಕುರಾ ವಿಜ್ಞಾನ ಪ್ರೌಢಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೂನ್ 15-21, 2025 ರ ಅವಧಿಯಲ್ಲಿ ಜಪಾನ್‌ಗೆ ಭೇಟಿ ನೀಡಿದರು.
-
ಮನ್ ಕಿ ಬಾತ್‌ನ 124 ನೇ ಸಂಚಿಕೆಯಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇನ್ಸ್ಪೈರ್ ಮಾನಕ್ ಉಪಕ್ರಮವನ್ನು ಪ್ರಮುಖವಾಗಿ ಉಲ್ಲೇಖಿಸಿದರು, ಮಕ್ಕಳಲ್ಲಿ ನಾವೀನ್ಯತೆಯ ಮನೋಭಾವವನ್ನು ಬೆಳೆಸುವಲ್ಲಿ ಅದರ ಮಹತ್ವದ ಪಾತ್ರದತ್ತ ಗಮನ ಸೆಳೆದರು.
ಇನ್ಸ್ಪೈರ್
• 2025 ರ ವರ್ಷದಲ್ಲಿ, 24785 ಇನ್ಸ್ಪೈರ್ ವಿದ್ವಾಂಸರು, 3277 ಇನ್ಸ್ಪೈರ್ ಫೆಲೋಗಳು ಮತ್ತು 352 ಇನ್ಸ್ಪೈರ್ ಫ್ಯಾಕಲ್ಟಿ ಫೆಲೋಗಳು ಕ್ರಮವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ, ಡಾಕ್ಟರಲ್ ಮತ್ತು ಸ್ನಾತಕೋತ್ತರ ಸಂಶೋಧನಾ ವೃತ್ತಿಜೀವನವನ್ನು ಮುಂದುವರಿಸಲು ಬೆಂಬಲ ಪಡೆದಿದ್ದಾರೆ.
• ಸ್ಪರ್ಧಾತ್ಮಕ ಆಯ್ಕೆಯಲ್ಲಿ, 14 ಇನ್ಸ್ಪೈರ್ ವಿದ್ವಾಂಸರು ಮತ್ತು 03 ಮೇಲ್ವಿಚಾರಕರು ಏಷ್ಯನ್ ವಿಜ್ಞಾನ ಶಿಬಿರ (ಎ.ಎಸ್.ಸಿ.-ASC) 2025 ರಲ್ಲಿ ಭಾಗವಹಿಸಿದರು ಮತ್ತು ಜುಲೈ 31 ರಿಂದ ಆಗಸ್ಟ್ 06, 2025 ರವರೆಗೆ ಥೈಲ್ಯಾಂಡ್‌ನ ನಖೋನ್ ರಾಟ್ಚಸಿಮಾದಲ್ಲಿರುವ ಸುರಾನರಿ ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದರು, ಗಮನಾರ್ಹ ಪ್ರಶಸ್ತಿಗಳನ್ನು ಗೆದ್ದರು: 2 ಬೆಳ್ಳಿ ಪದಕಗಳು, 3 ಕಂಚಿನ ಪದಕಗಳು, 3 ಗೌರವ ಉಲ್ಲೇಖಗಳು ಮತ್ತು ಏಕೈಕ ವಿಶೇಷ ಬಹುಮಾನ ಪಡೆದರು.
• ಸ್ಪರ್ಧಾತ್ಮಕ ಆಯ್ಕೆಯಲ್ಲಿ, 8 ಇನ್ಸ್ಪೈರ್ ಫೆಲೋಗಳಿಗೆ 2025 ರ ಮಾರ್ಚ್ 09 ರಿಂದ 13 ರವರೆಗೆ ಜಪಾನ್‌ನ ಯೊಕೊಹಾಮಾದ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಐ.ಸಿ.ಸಿ.-ICC) ನಡೆದ 16 ನೇ ಜೆ.ಎಸ್.ಪಿ.ಎಸ್.-ಹೋಪ್ (JSPS-HOPE) ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು ಮತ್ತು ಅವರು ತಾವು ನಡೆಸಿದ ಸಂಶೋಧನಾ ಕಾರ್ಯವನ್ನು ಪ್ರದರ್ಶಿಸಿದರು.
ವೈಸ್ ಕಿರಣ್ (WISE-KIRAN)
‘ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಮಹಿಳೆಯರು-ಕಿರಣ್ ((WISE-KIRAN)’- ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್&ಟಿ) ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ದಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ. WISE-KIRAN ಯೋಜನೆಯು ಮಹಿಳಾ ವಿಜ್ಞಾನಿಗಳಿಗೆ, ವಿಶೇಷವಾಗಿ ವೃತ್ತಿಜೀವನದಲ್ಲಿ ವಿರಾಮ ಪಡೆದವರಿಗೆ, ಮೂಲಭೂತ ಮತ್ತು ಅನ್ವಯಿಕ ವಿಜ್ಞಾನಗಳಲ್ಲಿ ಸಂಶೋಧನೆ ನಡೆಸಲು, ಸಾಮಾಜಿಕ ಸವಾಲುಗಳನ್ನು ಎದುರಿಸಲು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಅವಕಾಶಗಳನ್ನು ಒದಗಿಸುತ್ತದೆ.
-
ವಿಜ್ಞಾನ ಜ್ಯೋತಿ ಕಾರ್ಯಕ್ರಮದಡಿ ಸ್ಟೆಮ್ ನಲ್ಲಿ ಬೆಂಬಲಿತ ಶಾಲಾ ಹುಡುಗಿಯರ ಸಂಖ್ಯೆ 29443.
-
ಪಿಎಚ್‌ಡಿ ಪದವಿ ಪಡೆಯಲು ಬೆಂಬಲಿತ ಮಹಿಳೆಯರ ಸಂಖ್ಯೆ 108.
-
ಸಿ.ಯು.ಆರ್.ಐ.ಇ. (CURIE) ಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯಕ್ಕಾಗಿ ಬೆಂಬಲಿತ ಮಹಿಳಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸಂಖ್ಯೆ 27.
-
ಬೆಂಬಲಿತ ಹಿರಿಯ ಮಹಿಳಾ ವಿಜ್ಞಾನಿಗಳ ಸಂಖ್ಯೆ 23
-
ಯು.ಕೆ.ಐ.ಇ.ಆರ್.ಐ.(UKIERI) ಸಹಯೋಗದೊಂದಿಗೆ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮಹಿಳಾ ವಿಜ್ಞಾನಿಗಳ ಸಂಖ್ಯೆ 168.\
-
ಸಮಾಜಕ್ಕಾಗಿ ಮೂಲ ವಿಜ್ಞಾನ, ಅನ್ವಯಿಕ ವಿಜ್ಞಾನ ಮತ್ತು ಪರಿವರ್ತನ ಕಾರ್ಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಂದುವರಿಸಲು ಬೆಂಬಲಿತ ಮಹಿಳಾ ವಿಜ್ಞಾನಿಗಳ ಸಂಖ್ಯೆ 572.
XVI. ವಿಜ್ಞಾನ ಮತ್ತು ಪರಂಪರೆ ಸಂಶೋಧನಾ ಉಪಕ್ರಮ (ಶ್ರೀ-ಎಸ್.ಎಚ್.ಆರ್.ಐ.)
-
ಬನಾರಸಿ, ತುಸ್ಸಾರ್ ರೇಷ್ಮೆ ಬಲೂಚಾರಿ/ಸ್ವರ್ಣಚಾರಿ, ಫುಲ್ಕರಿ ಕಸೂತಿ, ಮಹೇಶ್ವರಿ, ಇಳ್ಕಲ್ ನೇಯ್ಗೆ, ಜೈನ್ ಪಟ ಸಂರಕ್ಷಣೆ, ಭವಾನಿ ಜಮಕ್ಕಲಂ, ಮಸ್ಲಿನ್ ನೇಯ್ಗೆ, ಮೈಸೂರು/ಮಲ್ಬೆರಿ ರೇಷ್ಮೆ, ಪಂಜಾ ದುರ್ರಿ ಕ್ರಾಫ್ಟ್, ನಾಮ್ಡಾ ಕ್ರಾಫ್ಟ್, ರಿಂಡಿಯಾ ಜವಳಿ ಮುಂತಾದ ಸಾಂಪ್ರದಾಯಿಕ ಜವಳಿಗಳನ್ನು ಪುನರುಜ್ಜೀವನಗೊಳಿಸಲು ಐಐಟಿ-ದಿಲ್ಲಿಯಲ್ಲಿ ಸುಸ್ಥಿರ ಜವಳಿ ಪರಂಪರೆ ಮತ್ತು ತಂತ್ರಜ್ಞಾನ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ಕೇಂದ್ರವು ಪರಂಪರೆಯ ಜವಳಿ ಪ್ರಕ್ರಿಯೆಗಳ ಇಂಗಾಲದ ಹೆಜ್ಜೆಗುರುತು ಪ್ರಮಾಣವನ್ನು ನಿರ್ಣಯಿಸುವುದು, ಹೊರಸೂಸುವಿಕೆ ತಾಣಗಳನ್ನು ಗುರುತಿಸುವುದು ಮತ್ತು ದೇಶದಲ್ಲಿ ಹಸಿರು ಜವಳಿಗಳಿಗೆ ನೀತಿ ಚೌಕಟ್ಟಿಗೆ ಕಾರಣವಾಗುವ ತಗ್ಗಿಸುವಿಕೆ ಮತ್ತು ಸುಸ್ಥಿರತೆಯ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತದೆ.
-
ಶಕ್ತಿ ಶೇಖರಣಾ ಸಾಧನಗಳಿಗೆ ಅಗ್ಗದ ವಿದ್ಯುದ್ವಾರಗಳಾಗಿ ಅದರ ನಂತರದ ಬಳಕೆಗಾಗಿ ಹಸುವಿನ ಸಗಣಿಯಿಂದ ಭಾರ ಲೋಹ ತೆಗೆಯುವ ನೈಸರ್ಗಿಕ ಹೈಬ್ರಿಡ್ ಹೀರಿಕೊಳ್ಳುವಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಂಶ್ಲೇಷಿತ ರಂಧ್ರಗಳನ್ನು ಒಳಗೊಂಡ ಇಂಗಾಲದ ವಸ್ತುವು 45°C ನಲ್ಲಿ 219 mg/g ಗರಿಷ್ಠ ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ 20 ನಿಮಿಷಗಳಲ್ಲಿ ನೀರಿನಿಂದ 90% Cr (VI) ಅನ್ನು ತೆಗೆದುಹಾಕುವುದನ್ನು ಪ್ರದರ್ಶಿಸಿತು. ಈ ವಿದ್ಯುದ್ವಾರಗಳನ್ನು ತರುವಾಯ ಸೂಪರ್ ಕೆಪಾಸಿಟರ್ ವಿದ್ಯುದ್ವಾರಗಳಾಗಿ ಬಳಸಲಾಯಿತು, 10,000 ಸುತ್ತುಗಳ ನಂತರ 84% ಕೆಪಾಸಿಟನ್ಸ್ ಧಾರಣವನ್ನು ಪ್ರದರ್ಶಿಸಲಾಯಿತು.
-
XVII. ವೈದ್ಯಕೀಯ ಸಾಧನಗಳು ಮತ್ತು ತಂತ್ರಜ್ಞಾನ
ಸುಧಾರಿತ ಸ್ಥಳೀಯ ಕಾಕ್ಲಿಯರ್ ಇಂಪ್ಲಾಂಟ್ ಸಿಸ್ಟಮ್ (ಶ್ರಾವಣ II) ನ ವಿನ್ಯಾಸ, ಅಭಿವೃದ್ಧಿ, ಪ್ರಮಾಣೀಕರಣ ಮತ್ತು ಕ್ಲಿನಿಕಲ್ ಪ್ರಯೋಗ ಎಂಬ ಶೀರ್ಷಿಕೆಯ ಯೋಜನೆಯನ್ನು ಸೊಸೈಟಿ ಫಾರ್ ಬಯೋಮೆಡಿಕಲ್ ಟೆಕ್ನಾಲಜಿ (SBMT) ಅನುಷ್ಠಾನಕ್ಕೆ ಅನುಮೋದಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST)ಗೆ ಯೋಜನೆಯ ನಾಲ್ಕು ವರ್ಷಗಳ ಅವಧಿಗೆ ಮೊದಲ ಕಂತಾಗಿ 2.5 ಕೋಟಿ ರೂ.ಗಳನ್ನು (ಬಂಡವಾಳ ಘಟಕದ ಅಡಿಯಲ್ಲಿ 2 ಕೋಟಿ ರೂ.ಗಳು ಮತ್ತು ಸಾಮಾನ್ಯ ಘಟಕದ ಅಡಿಯಲ್ಲಿ 50 ಲಕ್ಷ ರೂ.ಗಳು) ಆರಂಭಿಕ ಬಿಡುಗಡೆಯೊಂದಿಗೆ 1999.265 ಲಕ್ಷ ರೂ.ಗಳ ಬಜೆಟ್ ಅನ್ನು ಖಾತ್ರಿಪಡಿಸಿದೆ.,
ಆಯುಷ್ ಪರಿಕಲ್ಪನೆಗಳು, ಕಾರ್ಯವಿಧಾನಗಳು ಮತ್ತು ಉತ್ಪನ್ನಗಳನ್ನು ಬೆಂಬಲಿಸುವ ಸಂಶೋಧನೆಯನ್ನು ಉತ್ತೇಜಿಸಲು ಭಾರತ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವೆ 27.11.2025 ರಂದು ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು.
XVIII. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ
ಅರುಣಾಚಲ ಪ್ರದೇಶ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (APSCST) ಶೀತ-ಸರಪಳಿ-ಮುಕ್ತ ಜೈವಿಕ ತಂತ್ರಜ್ಞಾನದಲ್ಲಿ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುವ ತಾಪಮಾನ-ಸ್ವತಂತ್ರ, ಪುನರುಜ್ಜೀವನಗೊಳಿಸಬಹುದಾದ ಸೂಕ್ಷ್ಮಜೀವಿಯ ಸಂರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಸ್ಥಳೀಯ ವೇದಿಕೆಯು ವಿವಿಧ ಸೂಕ್ಷ್ಮಜೀವಿ ಗುಂಪುಗಳಿಗೆ ಅನುಗುಣವಾಗಿ ಹೈಡ್ರೋಜೆಲ್-ಆಧಾರಿತ ಸೂತ್ರೀಕರಣಗಳನ್ನು ಬಳಸಿಕೊಂಡು -196°C ನಿಂದ +50°C ವರೆಗಿನ ತಾಪಮಾನ ವ್ಯಾಪ್ತಿಯಲ್ಲಿ ಬ್ಯಾಕ್ಟೀರಿಯಾ, ಯೀಸ್ಟ್, ಆಮ್ಲಜನಕರಹಿತ ಮತ್ತು ಶಿಲೀಂಧ್ರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸೂಕ್ಷ್ಮಜೀವಿಗಳ ದೀರ್ಘಕಾಲೀನ ಸಂರಕ್ಷಣೆಯನ್ನು (36 ತಿಂಗಳವರೆಗೆ ಸ್ಥಿರತೆ) ಶಕ್ತಗೊಳಿಸುತ್ತದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)/ಜೀವ ಸಮೂಹ (ಕಲ್ಚರ್) ಸಂಗ್ರಹಗಳ ವಿಶ್ವ ಒಕ್ಕೂಟ (WFCC) ಜಾಗತಿಕ ಮಾನದಂಡಗಳನ್ನು ದಾಟಿ, ತಂತ್ರಜ್ಞಾನವನ್ನು ವಾಣಿಜ್ಯೀಕರಣಕ್ಕಾಗಿ ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮ (NRDC) ಗೆ ವರ್ಗಾಯಿಸಲಾಗಿದೆ, ಜೈವಿಕ ತಂತ್ರಜ್ಞಾನ, ಆರೋಗ್ಯ ರಕ್ಷಣಾ ಲಾಜಿಸ್ಟಿಕ್ಸ್, ಕೈಗಾರಿಕಾ ಹುದುಗುವಿಕೆ/ಹುಳಿ ಬರಿಸುವಿಕೆ, ಕೃಷಿ ಮತ್ತು ಸೂಕ್ಷ್ಮಜೀವಿಯ ಸಂಪನ್ಮೂಲ ವಿತರಣೆಯಲ್ಲಿ ಭಾರತದ ಸಾಮರ್ಥ್ಯಗಳನ್ನು ಇದು ಬಲಪಡಿಸುತ್ತದೆ.
XIX. ವೈಶ್ವಿಕ್ ಭಾರತೀಯ ವೈಗ್ಯಾನಿಕ್(ವೈಭವ)
ಇ.ಎಸ್.ಟಿ.ಐ.ಸಿ.-2025 ರ ಸಮಯದಲ್ಲಿ, ಯು.ಕೆ., ಯು.ಎಸ್., ಕೆನಡಾ, ಸ್ವೀಡನ್, ಜರ್ಮನಿ, ಸಿಂಗಾಪುರ್, ಫಿನ್ಲ್ಯಾಂಡ್, ಆಸ್ಟ್ರೇಲಿಯಾ ಮತ್ತು ಇನ್ನೂ ಅನೇಕ ದೇಶಗಳಿಂದ ವಿಶ್ವವಿದ್ಯಾಲಯಗಳು, ಸಂಸ್ಥೆಗಳು, ಕೈಗಾರಿಕೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಪ್ರತಿನಿಧಿಸುವ 19 ವೈಭವ್ (VAIBHAV) ಫೆಲೋಗಳು ಮತ್ತು 20 ಭಾರತೀಯ ಆತಿಥೇಯರು ನವೆಂಬರ್ 4, 2025 ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ 'ವೈಭವ್ ವಿಷನ್ ಆನ್ ವಿಕ್ಷಿತ್ ಭಾರತ್' ಕುರಿತ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ್ದರು. ಡಯಾಸ್ಪೊರಾವನ್ನು ಸಾಂಸ್ಥಿಕಗೊಳಿಸಲು ಸರ್ಕಾರದ ಪ್ರಯತ್ನಗಳನ್ನು ಅವರು ಹೆಚ್ಚು ಶ್ಲಾಘಿಸಿದರು
ವೈಭವ್ ಫೆಲೋಶಿಪ್ ಮೂಲಕ ತೊಡಗಿಸಿಕೊಳ್ಳುವಿಕೆ ಮತ್ತು ವಿದ್ಯಾರ್ಥಿಗಳು ಹಾಗು ಅಧ್ಯಾಪಕರಿಗೆ ವಿನಿಮಯ ಭೇಟಿಗಳು, ಫೆಲೋಶಿಪ್ ವರ್ಷಗಳ ಅವಧಿಯನ್ನು ಹೆಚ್ಚಿಸುವುದು, ಶೈಕ್ಷಣಿಕ ಮತ್ತು ಉದ್ಯಮದ ಸಂಪರ್ಕ ಇತ್ಯಾದಿಗಳಂತಹ ಭಾರತೀಯ ಸಂಸ್ಥೆಗಳು ಮತ್ತು ಭಾರತೀಯ ಡಯಾಸ್ಪೊರಾ ಅಧ್ಯಾಪಕರು/ವಿಜ್ಞಾನಿಗಳ ನಡುವಿನ ಸಹಯೋಗವನ್ನು ಸುಧಾರಿಸಲು ವಿಚಾರಗಳನ್ನು ಹಂಚಿಕೊಂಡರು.
ವೈಭವ್ ಫೆಲೋಶಿಪ್‌ನ 2 ನೇ ಕರೆಯ ಅಡಿಯಲ್ಲಿ, ಒಟ್ಟು 216 ಪ್ರಸ್ತಾವನೆಗಳನ್ನು ಸ್ವೀಕರಿಸಲಾಯಿತು ಮತ್ತು 17 ಅರ್ಜಿದಾರರನ್ನು ವೈಭವ್ ಫೆಲೋಶಿಪ್‌ಗಳಿಗೆ ಶಿಪ್ಗಾರಸು ಮಾಡಲಾಯಿಇತು.
ವೈಭವ್ ಫೆಲೋಶಿಪ್ ಗಳಿಗೆ 3 ನೇ ಕರೆಯನ್ನು ಘೋಷಿಸಲಾಯಿತು ಮತ್ತು ಒಟ್ಟು 227 ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಅರ್ಹತಾ ಪರಿಶೀಲನೆಯ ನಂತರ, 201 ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿದೆ ಮತ್ತು ಪ್ರಸ್ತುತ ಅವು ತಾಂತ್ರಿಕ ಮೌಲ್ಯಮಾಪನಗಳಿಗೆ ಒಳಗಾಗುತ್ತಿವೆ.
XX. ಜಿಯೋಸ್ಪೇಷಿಯಲ್ ಮಿಷನ್
2025-26ರ ಬಜೆಟ್‌ನಲ್ಲಿ ಘೋಷಿಸಲಾದ ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಮತ್ತು 2025-26ರ ಹಣಕಾಸು ವರ್ಷಕ್ಕೆ ರೂ. 100 ಕೋಟಿಗಳನ್ನು ನಿಗದಿಪಡಿಸಲಾಗಿದೆ:
ಗುರಿಗಳು: ನಗರ ಯೋಜನೆ, ಭೂ ದಾಖಲೆ ಡಿಜಿಟಲೀಕರಣ, ಮೂಲಸೌಕರ್ಯವನ್ನು ಅತ್ಯುತ್ತಮಗೊಳಿಸುವುದು.
XXI. ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್.ಸಿ.ಎಸ್.ಟಿ.ಸಿ-NCSTC)
ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (NCSTC) ವಿಭಾಗವು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ದಿಲ್ಲಿ ರಾಜ್ಯಗಳಲ್ಲಿ ಸೈನ್ಸ್ ಆನ್ ವೀಲ್ಸ್ ಅನ್ನು ಪ್ರಾರಂಭಿಸಿತು. ಮಹಾರಾಷ್ಟ್ರದಲ್ಲಿ, ಬಸ್ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ತಹಸಿಲ್‌ನ 16 ಬುಡಕಟ್ಟು ಹಳ್ಳಿಗಳ 22 ಶಾಲೆಗಳಿಗೆ ಪ್ರಯಾಣಿಸಿತು. ಇಲ್ಲಿಯವರೆಗೆ, 240 ಶಿಕ್ಷಕರು ಸೇರಿದಂತೆ 9348 ಫಲಾನುಭವಿಗಳು ವೈಜ್ಞಾನಿಕ ಕುತೂಹಲವನ್ನು ಹುಟ್ಟುಹಾಕಲು ಪ್ರಾಯೋಗಿಕ ಚಟುವಟಿಕೆಗಳು, ಸ್ಟೆಮ್ ಪ್ರದರ್ಶನಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಒಡ್ಡಿಕೊಳ್ಳುವುದನ್ನು ಬಳಸಿಕೊಂಡು ಸಂವಾದಾತ್ಮಕ ವಿಜ್ಞಾನ ಕಲಿಕೆಯ ಮೂಲಕ ಪ್ರಯೋಜನ ಪಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ, ಬಸ್ ಉತ್ತರ 24 ಪರಗಣ ಜಿಲ್ಲೆಯ 36 ಶಾಲೆಗಳಲ್ಲಿ ತೆರಳಿತು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಸಂವಾದಾತ್ಮಕ ವಿಜ್ಞಾನ ಶಿಕ್ಷಣದೊಂದಿಗೆ 8,000 ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಿತು.
ಆಂಧ್ರಪ್ರದೇಶದಲ್ಲಿ, ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ 60 ಶಾಲೆಗಳತ್ತ ಬಸ್ ಸಂಚರಿಸಿ 40,500 ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಿತು. ಈ ಮೂಲಕ ಭಾರತೀಯ ಗಣಿತ, ಖಗೋಳಶಾಸ್ತ್ರ, ಕಲೆ ಮತ್ತು ವಾಸ್ತುಶಿಲ್ಪ, ಪ್ರಾಚೀನ ಪುರಾತತ್ವ ವ್ಯವಸ್ಥೆ, ಆಹಾರ ಸಂಸ್ಕೃತಿ, ಕರಕುಶಲ ವಸ್ತುಗಳು, ನೇಯ್ಗೆ, ಕೈಮಗ್ಗ ಜವಳಿ, ಕುಂಬಾರಿಕೆ, ಲೋಹದ ಕೆಲಸ, ಆರೋಗ್ಯ ವ್ಯವಸ್ಥೆ, ಲೋಹಶಾಸ್ತ್ರ, ಜೈವಿಕ ಸಂರಕ್ಷಣೆ ಮತ್ತು ಪ್ರಾಚೀನ ಕಾಲದಲ್ಲಿ ವಿದ್ಯುತ್ ಉತ್ಪಾದನೆಯ ಕುರಿತು ಸಂವಾದಾತ್ಮಕ ಅವಧಿಗಳು ಮತ್ತು ಪ್ರದರ್ಶನಗಳ ಮೂಲಕ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ವೈಭವವನ್ನು ಪುನರುಜ್ಜೀವನಗೊಳಿಸಲಾಯಿತು. ದಿಲ್ಲಿಯಲ್ಲಿ, ಬಸ್ 4150 ವಿದ್ಯಾರ್ಥಿಗಳಲ್ಲಿ 'ಸ್ವಚ್ಛ ಮತ್ತು ಹಸಿರು ಶಕ್ತಿ' ಎಂಬ ಅತ್ಯಂತ ಪ್ರಸ್ತುತವಾದ ವಿಷಯದ ಕುರಿತು ಜಾಗೃತಿ ಮೂಡಿಸಿತು.
31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ (ಎನ್.ಸಿ.ಎಸ್.ಸಿ-NCSC) ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನವರಿ 3 ರಿಂದ 6, 2025 ರವರೆಗೆ 'ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು' ಎಂಬ ವಿಷಯದ ಮೇಲೆ ನಡೆಯಿತು, ಇದರಲ್ಲಿ ರಾಜ್ಯ ಮಟ್ಟದ ಸಿಎಸ್‌ಸಿಯಿಂದ ಆಯ್ಕೆಯಾದ 607 ಬಾಲ ವಿಜ್ಞಾನಿಗಳು ತಮ್ಮ ಯೋಜನೆಗಳನ್ನು ಮಂಡಿಸಿದರು ಮತ್ತು 20 ಅತ್ಯುತ್ತಮ ಯೋಜನೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ವಿಜ್ಞಾನ ದಿನವನ್ನು ದೇಶಾದ್ಯಂತ ಆಚರಿಸಲಾಯಿತು, ವಿಜ್ಞಾನ ಕಿಟ್/ವಿಡಿಯೋ/ಆ್ಯಪ್ ತಯಾರಿಕೆ, ಪೋಸ್ಟರ್ ಪ್ರಸ್ತುತಿ, ವಿಜ್ಞಾನೋತ್ಸವ - ರಾಷ್ಟ್ರೀಯ ವಿಜ್ಞಾನ ದಿನದ ರಸಪ್ರಶ್ನೆ 2025, ಶಾಲೆಗಳು, ಕಾಲೇಜುಗಳು, ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ರ್ಯಾಲಿ, ಸೆಮಿನಾರ್/ಕಾರ್ಯಾಗಾರಗಳಂತಹ ವಿವಿಧ ಆಕರ್ಷಕ ವೈಜ್ಞಾನಿಕ ಚಟುವಟಿಕೆಗಳ ಮೂಲಕ 6,35, 894 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು. ವಿಶೇಷವಾಗಿ ಅಂಗವಿಕಲ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ವಿಶೇಷ ಅಧಿವೇಶನಗಳನ್ನು ಸಹ ನಡೆಸಲಾಯಿತು.
*****
(ಪ್ರಕಟಣೆ ಐ.ಡಿ.: 2208980)
ವಿಸಿಟರ್ ಕೌಂಟರ್ : 46