ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪತಿ ಭವನದಲ್ಲಿ 24 ಖ್ಯಾತ ವಿಜ್ಞಾನಿಗಳಿಗೆ ‘ರಾಷ್ಟ್ರೀಯ ವಿಜ್ಞಾನ ಪುರಸ್ಕಾರ 2025 ಪ್ರದಾನ


ಭಾರತ ವೈಜ್ಞಾನಿಕ ಶ್ರೇಷ್ಠತೆಗೆ ಮಹತ್ವದ ಕೊಡುಗೆ ನೀಡಿದ್ದಕ್ಕಾಗಿ ನೀಡುವ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ "ವಿಜ್ಞಾನ ರತ್ನ ಪುರಸ್ಕಾರ"ವನ್ನು ಖ್ಯಾತ ಖಗೋಳ ಭೌತಶಾಸ್ತ್ರಜ್ಞ ಜಯಂತ್ ನಾರ್ಲಿಕರ್ ಗೆ ಮರಣೋತ್ತರವಾಗಿ ಗೌರವ ಅರ್ಪಣೆ

"ರಾಷ್ಟ್ರೀಯ ವಿಜ್ಞಾನ ತಂಡ ಪುರಸ್ಕಾರ 2025" ಅಥವಾ ವಿಜ್ಞಾನ ತಂಡ ಪ್ರಶಸ್ತಿಯಲ್ಲಿ ಭಾರತದ ಬಹು ಚರ್ಚಿತ "ಪರ್ಪಲ್ ರೆವಲ್ಯೂಷನ್" ಮತ್ತು ಲ್ಯಾವೆಂಡರ್ ಉದ್ಯಮಶೀಲತೆಗೆ ಶಕ್ತಿ ತುಂಬಿದ ಸಿಎಸ್ಐಆರ್-ಅರೋಮಾ ಮಿಷನ್ ತಂಡಕ್ಕೆ ಮನ್ನಣೆ

प्रविष्टि तिथि: 23 DEC 2025 7:25PM by PIB Bengaluru

ರಾಷ್ಟ್ರಪತಿ ಭವನದಲ್ಲಿಂದು ಎರಡನೇ “ರಾಷ್ಟ್ರೀಯ ವಿಜ್ಞಾನ ಪುರಸ್ಕಾರ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ "ರಾಷ್ಟ್ರೀಯ ವಿಜ್ಞಾನ ರತ್ನ ಪುರಸ್ಕಾರ 2025" ಅನ್ನು ಖ್ಯಾತ ಖಗೋಳ ಭೌತಶಾಸ್ತ್ರಜ್ಞ ಪ್ರೊ. ಜಯಂತ್ ವಿಷ್ಣು ನಾರ್ಲಿಕರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು, ಆದರೆ ಭಾರತದ ಬಹು ಚರ್ಚಿತ "ಪರ್ಪಲ್ ರೆವಲ್ಯೂಷನ್" ಮತ್ತು ಲ್ಯಾವೆಂಡರ್ ಉದ್ಯಮಶೀಲತೆಗೆ ಶಕ್ತಿ ತುಂಬಿದ ಉದ್ಯಮಶೀಲ ವಿಜ್ಞಾನ ತಂಡವು "ರಾಷ್ಟ್ರೀಯ ವಿಜ್ಞಾನ ತಂಡ ಪುರಸ್ಕಾರ 2025" ಅಥವಾ ವಿಜ್ಞಾನ ತಂಡ ಪ್ರಶಸ್ತಿಯಲ್ಲಿ ರಾಷ್ಟ್ರೀಯ ಮನ್ನಣೆಯನ್ನು ಪಡೆಯಿತು, ಅದನ್ನು ಸಿಎಸ್ ಐಆರ್  ನೇತೃತ್ವದ ಅರೋಮಾ ಮಿಷನ್ ಪಡೆದುಕೊಂಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನಾನಾ ವಿಭಾಗಗಳ 24 ವಿಜ್ಞಾನಿಗಳು ಮತ್ತು ನಾವಿನ್ಯಕಾರರಿಗೆ ಪ್ರಶಸ್ತಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರಗಳನ್ನು ಪ್ರಧಾನಮಂತ್ರಿ ಶ್ರೀ ಮೋದಿ ನೇತೃತ್ವದ ಸರ್ಕಾರ ಸ್ಥಾಪಿಸಿದೆ.

ಡಾ. ಜಿತೇಂದ್ರ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ “ರಾಷ್ಟ್ರೀಯ ವಿಜ್ಞಾನ ಪುರಸ್ಕಾರ 2025ಗೆ ಭಾಜನವಾದ “ಟೀಮ್ ಆರೋಮಾಕ್ಕೆ” ಅಭಿನಂದನೆ ಸಲ್ಲಿಸಿದ್ದಾರೆ. ತಂಡ ವಿಶ್ವಕ್ಕೆ ಪರ್ಪಲ್  ಕ್ರಾಂತಿಯ ಪರಿಕಲ್ಪನೆಯ ಕೊಡುಗೆಯನ್ನು ನೀಡಿದೆ ಮತ್ತು ಕೃಷಿ ಉದ್ಯಮಶೀಲತೆಗೆ ಲ್ಯಾವೆಂಡರ್ ಎಂಬ ಹೊಸ ಮಾರ್ಗವನ್ನು ತೋರಿಸಿಕೊಟ್ಟಿದೆ. ಆ ಮೂಲಕ ಹಿಮಾಲಯದ ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಆಕರ್ಷಕ ಜೀವನೋಪಾಯದ ಸಂಭವನೀಯತೆಯನ್ನು ತೋರಿಸಿಕೊಟ್ಟಿದೆ” ಎಂದು ಹೇಳಿದ್ದಾರೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೋಮಾ ಮಿಷನ್ ತಂಡವು, ಹಿಮಾಲಯನ್ ಪ್ರದೇಶದಲ್ಲಿ ಸುಗಂಧಭರಿತ ಬೆಳೆಗಳ, ವಿಶೇಷವಾಗಿ ಲ್ಯಾವೆಂಡರ್‌ನ ಕೃಷಿ ಮತ್ತು ಸಂಸ್ಕರಣೆಯನ್ನು ಉತ್ತೇಜಿಸುವ ಮೂಲಕ ಪ್ರಯೋಗಾಲಯ ಸಂಶೋಧನೆಯನ್ನು ಕ್ಷೇತ್ರಮಟ್ಟದ ಫಲಿತಾಂಶಗಳಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರವಾಗಿದೆ. ಈ ಕಾರ್ಯವು ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಹೊಸ ಜೀವನೋಪಾಯದ ಮಾರ್ಗಗಳನ್ನು ತೆರೆಯಲು ಸಹಾಯ ಮಾಡಿತು, ಅಗತ್ಯ ತೈಲಗಳ ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಿತು ಮತ್ತು ಸಂಘಟಿತ ವೈಜ್ಞಾನಿಕ ಹಸ್ತಕ್ಷೇಪವು ಆಕರ್ಷಕ ಸಾಮಾಜಿಕ-ಆರ್ಥಿಕ ಪರಿಣಾಮಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಪ್ರದರ್ಶಿಸಿತು.

ಈ ಮಾನ್ಯತೆಯು ರಾಷ್ಟ್ರೀಯ ಪ್ರಶಸ್ತಿ ಚೌಕಟ್ಟಿನ ಕೇಂದ್ರದಲ್ಲಿ ಸಹಯೋಗಿ, ಅನ್ವಯಿಕ-ಆಧಾರಿತ ವಿಜ್ಞಾನವನ್ನು ಇರಿಸುತ್ತದೆ. ಜೆ & ಕೆ ಯ ಭದೇರ್ವಾ ಮತ್ತು ಗುಲ್ಮಾರ್ಗ್ ಪಟ್ಟಣಗಳಿಂದ ಪ್ರಾರಂಭವಾದ ಲ್ಯಾವೆಂಡರ್ ಕೃಷಿ ಮತ್ತು ಉದ್ಯಮಶೀಲತೆ ಈಗ ಯುಟಿಯ ಇತರ ಭಾಗಗಳಿಗೂ ಹರಡಿದೆ ಮತ್ತು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂತಹ ಇತರ ರಾಜ್ಯಗಳು ಸಹ ಅದನ್ನು ಅಳವಡಿಸಿಕೊಳ್ಳುತ್ತಿವೆ.

ಹೊಸ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ಚೌಕಟ್ಟಿನ ಭಾಗವಾಗಿ ಕಳೆದ ವರ್ಷ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಇವುಗಳನ್ನು ವೃತ್ತಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಜೀವಮಾನ ಸಾದಕರಿಗೆ ಮತ್ತು ತಂಡ ಆಧಾರಿತ ನಾವೀನ್ಯತೆಗೆ ಒಳಗೊಂಡಂತೆ ವಿಜ್ಞಾನದ ಎಲ್ಲಾ ಆಯಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ, ಪ್ರಶಸ್ತಿ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಸಮಾರಂಭ ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನವಾಗಿದ್ದು, ಇದು ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಗೌರವಿಸುವುದು, ವ್ಯವಸ್ಥಿತ ಸಮಕಾಲೀನ ವಿಧಾನಕ್ಕೆ ಹೊಂದಿಕೊಂಡತೆ ಇರುವ ಜಾಗತಿಕ ಉತ್ತಮ ಪದ್ಧತಿಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ.

ಘೋಷಿಸಲಾದ ಪ್ರಶಸ್ತಿಗಳಲ್ಲಿ, ಜೀವಮಾನದ ಸಾಧನೆಗಾಗಿ ವಿಜ್ಞಾನ ರತ್ನವನ್ನು ಮರಣೋತ್ತರವಾಗಿ ಖ್ಯಾತ ಖಗೋಳ ಭೌತಶಾಸ್ತ್ರಜ್ಞ ಪ್ರೊ. ಜಯಂತ್ ವಿಷ್ಣು ನಾರ್ಲಿಕರ್ ಅವರಿಗೆ ನೀಡಲಾಯಿತು. ಆದರೆ ಹಲವಾರು ವಿಜ್ಞಾನ ಶ್ರೀ ಮತ್ತು ವಿಜ್ಞಾನ ಯುವ ಪ್ರಶಸ್ತಿಗಳು ಭೌತಶಾಸ್ತ್ರ, ಕೃಷಿ, ಜೈವಿಕ ವಿಜ್ಞಾನ, ರಸಾಯನಶಾಸ್ತ್ರ, ಎಂಜಿನಿಯರಿಂಗ್, ಔಷಧ, ಬಾಹ್ಯಾಕಾಶ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದಲ್ಲಿ ವೈಯಕ್ತಿಕ ಕೊಡುಗೆಗಳನ್ನು ಗುರುತಿಸಿವೆ. ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿಯು ಹಿರಿಯ ವಿಜ್ಞಾನಿಗಳು ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಂಶೋಧಕರನ್ನು ಒಳಗೊಂಡಿದೆ, ಇದು ಅನುಭವ ಮತ್ತು ಉದಯೋನ್ಮುಖ ಪ್ರತಿಭೆ ಎರಡಕ್ಕೂ ಪ್ರಶಸ್ತಿಯ ಮಹತ್ವ ನೀಡುವುದನ್ನು ಪ್ರತಿಬಿಂಬಿಸುತ್ತದೆ

ವಿಜ್ಞಾನ ಶ್ರೀ ವಿಭಾಗದಲ್ಲಿ ವಿಶೇಷ ವಲಯಗಳಲ್ಲಿ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಲಾಗಿದ್ದು, ಅದರಲ್ಲಿ ಡಾ. ಜ್ಞಾನೇಂದ್ರ ಪ್ರತಾಪ್ ಸಿಂಗ್ (ಕೃಷಿ ವಿಜ್ಞಾನ), ಡಾ. ಯೂಸುಫ್ ಮೊಹಮ್ಮದ್ ಶೇಖ್(ಅಣು ಇಂಧನ), ಡಾ. ಕೆ. ತಂಗರಾಜ(ಜೀವ ವಿಜ್ಞಾನ), ಪ್ರೊ. ಪ್ರದೀಪ್ ಥಲಪ್ಪಿಲ್(ರಸಾಯನಶಾಸ್ತ್ರ), ಪ್ರೊ. ಅನಿರುದ್ಧ ಬಾಲ್ ಚಂದ್ರ ಪಂಡಿತ್(ಇಂಜಿನಿಯರಿಂಗ್ ವಿಜ್ಞಾನ), ಡಾ. ಎಸ್. ವೆಂಕಟ ಮೋಹನ್(ಪರಿಸರ ವಿಜ್ಞಾನ), ಪ್ರೊ. ಮಹಾನ್ ಎಂ.ಜೆ.(ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ) ಮತ್ತು ಶ್ರೀ ಜಯನ್ ಎನ್.(ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ) ಪ್ರದಾನ ಮಾಡಲಾಗಿದ್ದು, ಅವರು ನಾನಾ ವಿಭಾಗಗಳಲ್ಲಿ ಹಾಗೂ ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾಡಿರುವ ಸುಸ್ಥಿರ ಕೆಲಸವನ್ನು ಗುರುತಿಸಲಾಗಿದೆ.

ನವೀನ ಕೊಡುಗೆಗಳನ್ನು ನೀಡಿರುವ 45 ವರ್ಷದೊಳಗಿನ ಉದಯೋನ್ಮುಖ ಸಂಶೋಧಕರನ್ನು ಗುರುತಿಸಿ, ಅವರಿಗೆ ವಿಜ್ಞಾನ ಯುವ-ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿ ಪುರಸ್ಕೃತರಲ್ಲಿ ಭೌತಶಾಸ್ತ್ರದಲ್ಲಿ ಪ್ರೊ. ಅಮಿತ್ ಕುಮಾರ್ ಅಗರ್ ವಾಲ್ ಮತ್ತು ಪ್ರೊ. ಸುರ್ಹುದ್ ಶ್ರೀಕಾಂತ್ ಮೋರೆ, ಕೃಷಿ ವಿಜ್ಞಾನದಲ್ಲಿ ಡಾ. ಜಗದೀಶ್ ಗುಪ್ತಾ ಕಪುಗಂಟಿ ಮತ್ತು ಡಾ. ಸತೇಂದ್ರ ಕುಮಾರ್ ಮಂಗ್ರೌಥಿಯಾ, ಜೈವಿಕ ವಿಜ್ಞಾನದಲ್ಲಿ ಡಾ. ದೀಪಾ ಅಗಾಶೆ ಮತ್ತು ಶ್ರೀ ದೇಬಾರ್ಕಾ ಸೇನ್‌ಗುಪ್ತಾ, ರಸಾಯನಶಾಸ್ತ್ರದಲ್ಲಿ ಡಾ. ದಿಬ್ಯೇಂದು ದಾಸ್, ಭೂ ವಿಜ್ಞಾನದಲ್ಲಿ ಡಾ. ವಲಿಯೂರ್ ರೆಹಮಾನ್, ಇಂಜಿನಿಯರಿಂಗ್ ವಿಜ್ಞಾನದಲ್ಲಿ ಪ್ರೊ. ಅರ್ಕಪ್ರವಾ ಬಸು, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರೊ. ಸಬ್ಯಸಾಚಿ ಮುಖರ್ಜಿ ಮತ್ತು ಪ್ರೊ. ಶ್ವೇತಾ ಪ್ರೇಮ್ ಅಗರ್ ವಾಲ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸುರೇಶ್ ಕುಮಾರ್, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಶ್ರೀ ಅಂಕುರ್ ಗರ್ಗ್ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಪ್ರೊ. ಮೋಹನಶಂಕರ್ ಶಿವಪ್ರಕಾಶಂ ಪುರಸ್ಕೃತರಲ್ಲಿ ಇವರು ಸೇರಿದ್ದಾರೆ.

ಈ ವರ್ಷದ ಪ್ರಶಸ್ತಿ ಪುರಸ್ಕೃತರಲ್ಲಿ ಪ್ರಮುಖವಾಗಿ ಮಹಿಳಾ ವಿಜ್ಞಾನಿಗಳನ್ನು ನಾನಾ ವಿಭಾಗಗಳಲ್ಲಿ ಹಾಗೂ ವಲಯಗಳಲ್ಲಿ ಗುರುತಿಸಲಾಗಿದೆ. ಸಂಶೋಧಕರಾದ ಡಾ. ದೀಪಾ ಅಗಾಶೆ ಮತ್ತು ಪ್ರೊ. ಶ್ವೇತಾ ಪ್ರೇಮ್ ಅಗರ್ ವಾಲ್ ಅವರ ಕಾರ್ಯಕ್ಕಾಗಿ ಗೌರವಿಸಲಾಗಿದ್ದು, ಇದು ಭಾರತದ ವೈಜ್ಞಾನಿಕ ಪೂರಕ ವ್ಯವಸ್ಥೆಯಲ್ಲಿ ಮಹಿಳೆಯರ ನಾಯಕತ್ವ ಮತ್ತು ಒಳಗೊಳ್ಳುವಿಕೆ ವೃದ್ಧಿಸುತ್ತಿರುವುದು ಪ್ರತಿಬಿಂಬಿಸುತ್ತದೆ.

ಡಾ. ಜಿತೇಂದ್ರ ಸಿಂಗ್ ಅವರು ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದರು ಮತ್ತು ಅವರ ಕಾರ್ಯ ಭಾರತದ ವೈಜ್ಞಾನಿಕ ಪ್ರತಿಭೆಗಳ ವೈವಿಧ್ಯತೆ ಹಾಗೂ ಆಳವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಅವರು, ಜನಸಾಮಾನ್ಯರ ಜೀವನಗುಣಮಟ್ಟ ಸುಧಾರಣೆಗೆ ಮತ್ತು ರಾಷ್ಟ್ರೀಯ ಆದ್ಯತೆಗಳನ್ನು ನಿರ್ವಹಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವನ್ನು ಪ್ರಮುಖವಾಗಿ ಪ್ರತಿಪಾದಿಸಿದರು.

ರಾಷ್ಟ್ರಪತಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರ ಉಪಸ್ಥಿತಿ, ವೈಜ್ಞಾನಿಕ ಸಂಶೋಧನೆ, ನಾವೀನ್ಯತೆ ಮತ್ತು ಅದನ್ನು ಸಾರ್ವಜನಿಕ ಮೌಲ್ಯಗಳಿಗೆ ಪರಿವರ್ತಿಸಲು ರಾಷ್ಟ್ರೀಯ ಆದ್ಯತೆ ನೀಡಿರುವುದನ್ನು ಪುನರ್ ಪ್ರತಿಪಾದಿಸುತ್ತದೆ. ಪ್ರಶಸ್ತಿಯ ಚೌಕಟ್ಟು ವಿವಿಧ ವಿಭಾಗಗಳಲ್ಲಿ ಸ್ಪಷ್ಟತೆಯನ್ನು ತಂದುಕೊಟ್ಟಿದೆ. ವಿಶೇಷವಾಗಿ ಯುವ ವಿಜ್ಞಾನಿ ವಲಯದಲ್ಲಿ ವಯಸ್ಸು ಮತ್ತು ಸಾಧನೆಯ ಮಾನದಂಡವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.

ಅರೋಮಾ ಮಿಷನ್ ಅನ್ನು ಗುರುತಿಸಿರುವುದು ಹೇಗೆ ಸರ್ಕಾರ ವೈಜ್ಞಾನಿಕ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿದೆ ಎಂಬುದನ್ನು ಪ್ರಮುಖವಾಗಿ ಉಲ್ಲೇಖಿಸುತ್ತದೆ ಹಾಗೂ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ತಂಡದ ಕೆಲಸಗಳನ್ನು ಅನುಷ್ಠಾನಗೊಳಿಸಿದಾಗ ಪ್ರಯೋಗಾಲಯಗಳು ಮತ್ತು ಜರ್ನಲ್ ಗಳಿಗೆ ಹೊರತಾದ ಫಲಿತಾಂಶಗಳನ್ನು ಕಾಣಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಭಾರತ ತನ್ನ ವಿಜ್ಞಾನ ನೇತೃತ್ವದ ಅಭಿವೃದ್ಧಿ ಮಾದರಿಯನ್ನು ಬಲವರ್ಧನೆಗೊಳಿಸಲು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ಪುರಸ್ಕಾರಗಳು ರಾಷ್ಟ್ರೀಯ ಆದ್ಯತೆಗಳಲ್ಲಿ ಸಂಶೋಧನಾ ಶ್ರೇಷ್ಠತೆ ಹಾಗೂ ತಳಮಟ್ಟದಲ್ಲಿ ಪರಿಣಾಮಗಳನ್ನು ಮೂಡಿಸುವಂತಹ ಕಾರ್ಯಗಳಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಡಲಿದೆ.

ರಾಷ್ಟ್ರೀಯ ವಿಜ್ಞಾನ ಪುರಸ್ಕಾರ 2025ಕ್ಕೆ ಪಾತ್ರರಾಗಿರುವವರ ಪಟ್ಟಿ ಇಲ್ಲಿದೆ

 

*****


(रिलीज़ आईडी: 2207958) आगंतुक पटल : 36
इस विज्ञप्ति को इन भाषाओं में पढ़ें: English , Urdu , हिन्दी , Marathi