ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಬೃಹತ್ ಕೈಗಾರಿಕೆಗಳನ್ನು ಆಧುನೀಕರಿಸಲು; ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ಎಂ.ಎಸ್.ಎಂ.ಇ ವಲಯದಲ್ಲಿ ಮಹಿಳೆಯರು ಮತ್ತು ದುರ್ಬಲ ಗುಂಪುಗಳ ಹೆಚ್ಚಿನ ಭಾಗವಹಿಸುವಿಕೆ ಸುಗಮಗೊಳಿಸಲು ಸರ್ಕಾರದಿಂದ ಹಲವು ಉಪಕ್ರಮ
ಹಾಲಿ ಅಸ್ತಿತ್ವದಲ್ಲಿರುವ ಮತ್ತು ಮಹಿಳಾ ಉದ್ಯಮಿಗಳಾಗುವ ಆಕಾಂಕ್ಷೆ ಹೊಂದಿರುವರರಿಗೆ ಎಂ.ಎಸ್.ಎಂ.ಇ ಸಚಿವಾಲಯದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಯಶಸ್ವಿನಿ ಅಭಿಯಾನ ಆರಂಭ
प्रविष्टि तिथि:
04 DEC 2025 3:23PM by PIB Bengaluru
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂ.ಎಸ್.ಎಂ.ಇ) ವಲಯವು ಆರ್ಥಿಕತೆಯ ಒಂದು ಚೈತನ್ಯಶೀಲ ವಲಯವಾಗಿದೆ. ದೇಶದಲ್ಲಿ ಎಂ.ಎಸ್.ಎಂ.ಇ ಗಳ ಉತ್ತೇಜನ, ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನೀತಿ ಉಪಕ್ರಮಗಳ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಭಾರತ ಸರ್ಕಾರವು ಪೂರಕವಾಗಿದೆ. ಈ ಯೋಜನೆಗಳು/ಕಾರ್ಯಕ್ರಮಗಳಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಪಿಎಂ ವಿಶ್ವಕರ್ಮ ಯೋಜನೆ, ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತರಿ ಯೋಜನೆ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಯೋಜನೆ, ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು - ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ, ಎಂಎಸ್ ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು, ಎಂ.ಎಸ್.ಎಂ.ಇ ಚಾಂಪಿಯನ್ಸ್ ಯೋಜನೆ, ಇತ್ಯಾದಿ ಸೇರಿವೆ. ಈ ಯೋಜನೆಗಳು ಉತ್ಪಾದನೆ, ಸೇವೆಗಳು, ವ್ಯಾಪಾರ ಮತ್ತು ಮಹಿಳಾ ಒಡೆತನದ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.
ಬೃಹತ್ ಕೈಗಾರಿಕೆಗಳನ್ನು ಆಧುನೀಕರಿಸಲು, ಹೊಸ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚಿಸಲು ಮತ್ತು ದೇಶದಲ್ಲಿ ಮಹಿಳೆಯರು ಮತ್ತು ಅಂಚಿನಲ್ಲಿರುವ ಗುಂಪುಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಸರ್ಕಾರವು ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ, ಅವುಗಳೆಂದರೆ:
- ದೇಶದಲ್ಲಿ ಸರ್ಕಾರವು ತಂತ್ರಜ್ಞಾನ ಕೇಂದ್ರಗಳು/ಯಂತ್ರಾಗಾರ ಜಾಲವನ್ನು ಸ್ಥಾಪಿಸಿದೆ, ಇದು ಎಂ.ಎಸ್.ಎಂ.ಇ ಗಳನ್ನು ಬೆಂಬಲಿಸಲು ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು, ತರಬೇತಿ ಮತ್ತು ಕೌಶಲ್ಯಗಳಿಗೆ ಲಭ್ಯತೆಯನ್ನು ಒದಗಿಸುತ್ತದೆ ಹಾಗೂ ಅವುಗಳನ್ನು ಸ್ಪರ್ಧಾತ್ಮಕವಾಗಿಸಲು ಸಹಾಯ ಮಾಡುತ್ತದೆ.
- ಉದ್ಯಮ ನೋಂದಣಿ (ಯುಆರ್) ಮತ್ತು ಉದ್ಯಮ ಸಹಾಯ ಪೋರ್ಟಲ್‌ಗಳಲ್ಲಿ (ಯುಎಪಿ) ಮಹಿಳಾ ಒಡೆತನದ ಎಂಎಸ್ ಎಂಇ ಗಳ ನೋಂದಣಿಗೆ ವಿಶೇಷ ಅಬಿಯಾನಗಳು.
- ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು, ಸಾರ್ವಜನಿಕ ಖರೀದಿ ನೀತಿಯು ಸಿಪಿಎಸ್ ಇ ಗಳು/ ಸಚಿವಾಲಯಗಳು/ ಇಲಾಖೆಗಳು ವಾರ್ಷಿಕ ಖರೀದಿಯ ಶೇ.3ರಷ್ಟನ್ನು ಮಹಿಳಾ ಒಡೆತನದ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಂದ ಮಾಡಬೇಕೆಂದು ಆದೇಶಿಸುತ್ತದೆ.
- ಎಂಎಸ್ ಎಂಇ ಸಚಿವಾಲಯವು ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮವನ್ನು (ಪಿಎಂಇಜಿಪಿ) ಜಾರಿಗೊಳಿಸುತ್ತಿದೆ, ಇದು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಗ್ರಾಮೀಣ/ನಗರ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುವ ಮೂಲಕ ಕೃಷಿಯೇತರ ವಲಯದಲ್ಲಿ ಸೂಕ್ಷ್ಮ ಉದ್ಯಮಗಳ ಸ್ಥಾಪನೆಯ ಮೂಲಕ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಸಾಲ-ಸಂಬಂಧಿತ ಸಬ್ಸಿಡಿ ಕಾರ್ಯಕ್ರಮವಾಗಿದೆ. ಒಟ್ಟು ಪಿಎಂಇಜಿಪಿ ಫಲಾನುಭವಿಗಳಲ್ಲಿ ಶೇ.39ರಷ್ಟು ಮಹಿಳೆಯರು ಮತ್ತು ಅವರಿಗೆ ವಿಶೇಷೇತರ ವರ್ಗಕ್ಕೆ ಹೋಲಿಸಿದರೆ (ಶೇ.25 ವರೆಗೆ) ಹೆಚ್ಚಿನ ಸಬ್ಸಿಡಿ (ಶೇ.35ರಷ್ಟನ್ನು) ನೀಡಲಾಗುತ್ತದೆ.
- ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಎಂ.ಎಸ್.ಎಂ.ಇ ಸಚಿವಾಲಯವು ಕಾಯಿರ್ ವಿಕಾಸ್ ಯೋಜನೆಯಡಿಯಲ್ಲಿ 'ಕೌಶಲ್ಯ ಉನ್ನತೀಕರಣ ಮತ್ತು ಮಹಿಳಾ (ತೆಂಗಿನ ನಾರು) ಕಾಯಿರ್ ಯೋಜನೆ'ಯನ್ನು ಜಾರಿಗೊಳಿಸುತ್ತಿದೆ, ಇದು ನಾರು ವಲಯದಲ್ಲಿ ತೊಡಗಿರುವ ಮಹಿಳಾ ಕುಶಲಕರ್ಮಿಗಳ ಕೌಶಲ್ಯ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡ ವಿಶೇಷ ತರಬೇತಿ ಕಾರ್ಯಕ್ರಮವಾಗಿದೆ.
- 18 ಸಾಂಪ್ರದಾಯಿಕ ವ್ಯಾಪಾರಗಳಲ್ಲಿ ತೊಡಗಿರುವ ಮಹಿಳೆಯರು ಸೇರಿದಂತೆ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕಸುಬುದಾರರಿಗೆ ಹಲವು ಪ್ರಯೋಜನಗಳನ್ನು ಒದಗಿಸಲು ಎಂಎಸ್ ಎಂಇ ಸಚಿವಾಲಯವು 17.09.2023 ರಂದು ‘ಪಿಎಂ ವಿಶ್ವಕರ್ಮ' ಯೋಜನೆಯನ್ನು ಆರಂಭಿಸಿದೆ.
- ಹಾಲಿ ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಮಹಿಳಾ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಅವರಿಗೆ ನೆರವು, ಮಾರ್ಗದರ್ಶನ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ನಿರಂತರ ಬೆಂಬಲ ಒದಗಿಸಲು ಸಚಿವಾಲಯವು 'ಯಶಸ್ವಿನಿ' ಜಾಗೃತಿ ಅಭಿಯಾನವನ್ನು ಆರಂಭಿಸಿದೆ.
ಸರ್ಕಾರವು ದೇಶಾದ್ಯಂತ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ (ಎಂ ಎಸ್ ಇ-ಸಿ ಡಿ ಪಿ) ವನ್ನು ಜಾರಿಗೆ ತರುತ್ತಿದೆ. ಈ ಯೋಜನೆಯ ಉದ್ದೇಶವೆಂದರೆ ಎಂ.ಎಸ್.ಎಂ.ಇ ಗಳನ್ನು ಸ್ಥಳೀಯ ಮತ್ತು ಜಾಗತಿಕ ಮೌಲ್ಯ ಸರಣಿಯಲ್ಲಿ ಅವುಗಳ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಸಂಯೋಜಿಸುವುದು. ಅಸ್ತಿತ್ವದಲ್ಲಿರುವ ಕ್ಲಸ್ಟರ್‌ಗಳಲ್ಲಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು (ಸಿ ಎಫ್ ಸಿ) ಸ್ಥಾಪಿಸಲು ಮತ್ತು ಹೊಸ/ಅಸ್ತಿತ್ವದಲ್ಲಿರುವ ಕೈಗಾರಿಕಾ ಎಸ್ಟೇಟ್‌ಗಳು/ ಪ್ರದೇಶಗಳು/ಫ್ಲಾಟ್ ಮಾಡಿದ ಕಾರ್ಖಾನೆ ಸಂಕೀರ್ಣಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸಲು/ಮೇಲ್ದರ್ಜೆಯ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸಲು ಭಾರತ ಸರ್ಕಾರದ ಅನುದಾನದ ರೂಪದಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ದೇಶಾದ್ಯಂತ ಈವರೆಗೆ 113 ಸಾಮಾನ್ಯ ಸೌಲಭ್ಯ ಕೇಂದ್ರಗಳು (ಸಿ ಎಫ್ ಸಿ ಗಳು) ಮತ್ತು 251 ಮೂಲಸೌಕರ್ಯ ಅಭಿವೃದ್ಧಿ (ಐ ಡಿ ಗಳು) ಕೇಂದ್ರಗಳ ನಿರ್ಮಾಣ ಪೂರ್ಣಗೊಂಡಿವೆ.
ಈ ಮಾಹಿತಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ (ಸುಶ್ರೀ ಶೋಭಾ ಕರಂದ್ಲಾಜೆ) ಅವರು ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(रिलीज़ आईडी: 2198792)
आगंतुक पटल : 4