ರೈಲ್ವೇ ಸಚಿವಾಲಯ
ಗತಿ ಶಕ್ತಿ ಬಹು- ಮಾದರಿ ಸರಕು ಟರ್ಮಿನಲ್ ಸರಕು ಸಾಗಣೆ ಆದಾಯವು ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ, 2024-25 ರಲ್ಲಿ ₹12,608.05 ಕೋಟಿ ತಲುಪಿದೆ
ವಾರ್ಷಿಕವಾಗಿ 192 ಮಿಲಿಯನ್ ಟನ್ ಸಂಚಾರ ಸಾಮರ್ಥ್ಯದೊಂದಿಗೆ, 118 ಜಿಸಿಟಿಗಳನ್ನು ಕಾರ್ಯಾರಂಭ ಮಾಡಲಾಗಿದೆ, ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಿದೆ ಮತ್ತು ರೈಲು ಸರಕು ಹೆಚ್ಚಳವಾಗಿದೆ
प्रविष्टि तिथि:
03 DEC 2025 7:36PM by PIB Bengaluru
2021ರಲ್ಲಿ ಗತಿ ಶಕ್ತಿ ಬಹು-ಮಾದರಿ ಸರಕು ಟರ್ಮಿನಲ್ (ಮಲ್ಟಿ-ಮೋಡಲ್ ಕಾರ್ಗೋ ಟರ್ಮಿನಲ್ -GCT) ನೀತಿಯನ್ನು ಪರಿಚಯಿಸಿದ ನಂತರ, ಭಾರತೀಯ ರೈಲ್ವೆ 306 ಜಿ.ಸಿ.ಟಿ. ಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಅನುಮೋದಿಸಿದೆ. ರೈಲ್ವೆಯೇತರ ಭೂಮಿಯಲ್ಲಿ ಮತ್ತು ರೈಲ್ವೆ ಭೂಮಿಯಲ್ಲಿ (ಭಾಗಶಃ ಅಥವಾ ಸಂಪೂರ್ಣವಾಗಿ) ಸರಕು ಟರ್ಮಿನಲ್‌ಗಳ ಅಭಿವೃದ್ಧಿಯನ್ನು ಸುಗಮಗೊಳಿಸಲು ಪ್ರಾರಂಭಿಸಲಾದ ಜಿ.ಸಿ.ಟಿ. ನೀತಿಯಡಿಯಲ್ಲಿ, ನೀತಿಯನ್ನು ಅನುಷ್ಠಾನಗೊಳಿಸಿದಾಗಿನಿಂದ ಇಲ್ಲಿಯವರೆಗೆ ವಾರ್ಷಿಕ ಅಂದಾಜು 192 ಮಿಲಿಯನ್ ಟನ್‌ಗಳ ಸಂಚಾರ ಸಾಮರ್ಥ್ಯ (ಎಂ.ಟಿ.ಪಿ.ಎ.-MTPA)ದೊಂದಿಗೆ . 118 ಹೊಸ ಜಿ.ಸಿ.ಟಿ. ಗಳನ್ನು ಕಾರ್ಯಾರಂಭ ಮಾಡಲಾಗಿದೆ, ಜಿ.ಸಿ.ಟಿ. ನೀತಿಯ ಪ್ರಾರಂಭದೊಂದಿಗೆ ಈ ಖಾತೆಯಲ್ಲಿ ಸಂಗ್ರಹಿಸಲಾದ ಖಾಸಗಿ ಹೂಡಿಕೆ ಸುಮಾರು 8,600 ಕೋಟಿ ರೂ.
ಕಳೆದ 3 ಹಣಕಾಸು ವರ್ಷಗಳಲ್ಲಿ ಜಿ.ಸಿ.ಟಿ. ಗಳಲ್ಲಿ ನಿರ್ವಹಿಸಲಾದ ಸಂಚಾರದಿಂದ ಲಭಿಸಿದ ಸರಕು ಸಾಗಣೆ ಆದಾಯದ ವರ್ಷವಾರು ವಿವರಗಳು ಕೆಳಕಂಡಂತಿವೆ -
| ಹಣಕಾಸು ವರ್ಷ |
ಸರಕು ಆದಾಯ |
| 2022-23 |
2,901.86 ಕೋಟಿ. |
| 2023-24 |
7,712.36 ಕೋಟಿ. |
| 2024-25 |
12,608.05 ಕೋಟಿ. |
ಜಿಸಿಟಿಗಳು ರೈಲ್ವೆಗೆ ಹೆಚ್ಚಿನ ಸರಕುಗಳನ್ನು ತರುತ್ತವೆ. ಇದು ಸಾಗಾಟ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಆರ್ಥಿಕತೆಗೆ ಸಹಾಯ ಮಾಡುತ್ತದೆ.
ಎಂಎಂಆರ್ ಪ್ರದೇಶ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಇದುವರೆಗೆ ಒಟ್ಟು 9 ಹೊಸ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು (ಜಿಸಿಟಿಗಳು) ಕಾರ್ಯಾರಂಭ ಮಾಡಲಾಗಿದ್ದು, ಒಟ್ಟು ₹548.69 ಕೋಟಿ ಹೂಡಿಕೆ ಮಾಡಲಾಗಿದೆ. ಇದಲ್ಲದೆ, ರೈಲ್ವೆಯಿಂದ ಹೆಚ್ಚಿನ ಸರಕು ಎಂದರೆ ಕಡಿಮೆ ಹೊರಸೂಸುವಿಕೆ. ಇದಲ್ಲದೆ, ಎಂಎಂಆರ್ ಪ್ರದೇಶ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಸರಕು ಮತ್ತು ಪಾರ್ಸೆಲ್ ಟರ್ಮಿನಲ್‌ಗಳ ಅಭಿವೃದ್ಧಿಗಾಗಿ ₹932.34 ಕೋಟಿಯ 91 ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
****
(रिलीज़ आईडी: 2198562)
आगंतुक पटल : 4