ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದ ನವದೆಹಲಿಯಲ್ಲಿಂದು ನಡೆದ ಪ್ರಾದೇಶಿಕ ನಿರ್ದೇಶನಾಲಯಗಳು ಮತ್ತು ರಿಜಿಸ್ಟ್ರಾರ್ ಆಫ್ ಕಂಪೆನೀಸ್ ನೊಂದಿಗೆ ಪರಾಮರ್ಶನ ಸಭೆಯ ಅಧ್ಯಕ್ಷತೆ


ವಿಕಸಿತ ಭಾರತ 2047 ರೆಡೆಗೆ ರಾಷ್ಟ್ರ ಮುನ್ನಡೆಯಲು ಪ್ರಕ್ರಿಯೆಗಳ ಸರಳೀಕರಣ ಮತ್ತು ಹೆಚ್ಚು ಬಳಕೆದಾರ ಸ್ನೇಹಿ‌ ವ್ಯವಸ್ಥೆ ಅತ್ಯಗತ್ಯ - ವಿತ್ತ ಸಚಿವೆರಾದ ಶ್ರೀಮತಿ ಸೀತಾರಾಮನ್

ಆಡಳಿತ ಸುಲಭ, ಪಾರದರ್ಶಕ ಮತ್ತು ಸುಗಮವಾಗಿರಬೇಕು; ಭವಿಷ್ಯದ ವಿಧಾನ ಅಳವಡಿಸಿಕೊಳ್ಳಲು ಆದ್ಯತೆ ನೀಡುವಂತೆ ಎಂ.ಸಿ.ಎಗೆ ಸಲಹೆ ಎಂದು ಹೇಳಿದ ಹಣಕಾಸು ಸಚಿವರು

ಐ.ಬಿ.ಸಿಯಂತಹ ಶಾಸಕಾಂಗ ಸುಧಾರಣೆಗಳು ಬದಲಾಗುತ್ತಿರುವ ಕಾಲಕ್ಕೆ ಭಾರತದ ಸ್ಪಂದಿಸುವಿಕೆಯ ಪ್ರತಿಬಿಂಬ: ಕೇಂದ್ರ ಹಣಕಾಸು ಸಚಿವರು

ಗರಿಷ್ಠ ಆಡಳಿತ ಮತ್ತು ಕನಿಷ್ಠ ಸರ್ಕಾರದ ತತ್ವವನ್ನು ಎಂ.ಸಿ.ಎ ಅನುಸರಿಸಬೇಕು: ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಹರ್ಷ್ ಮಲ್ಹೋತ್ರಾ

प्रविष्टि तिथि: 25 NOV 2025 8:48PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿಂದು ಪ್ರಾದೇಶಿಕ ನಿರ್ದೇಶನಾಲಯಗಳು ಮತ್ತು ರಿಜಿಸ್ಟ್ರಾರ್ ಆಫ್‌ ಕಂಪನೀಸ್ (ಆರ್.ಒ‌.ಸಿ) ಯ ಪರಾಮರ್ಶನ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಹರ್ಷ ಮಲ್ಹೋತ್ರಾ; ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾಲರ್ಯದರ್ಶಿ (ಎಂ.ಸಿ.ಎ); ಎಂ.ಸಿ.ಎದ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಎಂ.ಸಿ.ಎ ಅಡಿಯಲ್ಲಿರುವ ಎಲ್ಲಾ ಅಧೀನ ಕಚೇರಿಗಳ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಂಪನಿಗಳ ನೋಂದಣಿ ಸಂಸ್ಥೆ – ರಿಜಿಸ್ಟ್ರಾರ್ ಆಫ್ ಕಂಪೆನೀಸ್ (ಆರ್.ಒ‌.ಸಿ) ಮತ್ತು ಪ್ರಾದೇಶಿಕ ನಿರ್ದೇಶನಾಲಯಗಳೊಂದಿಗೆ (ಅರ್.ಡಿ) ಅರ್ಜಿಗಳ ವಿಲೇವಾರಿ, ತ್ವರಿತ ವಿಲೀನಗಳು, ಕೇಂದ್ರೀಯ ವ್ಯವಸ್ಥೆಯ ಮೂಲಕ ಕಂಪನಿಗಳು/LLP ಗಳ ಸಂಯೋಜನೆ/ಸ್ವಯಂಪ್ರೇರಿತ ನಿರ್ಗಮನದಂತಹ ಸೇವೆಗಳ ವಿತರಣೆ, ಇ-ಆಡಳಿತ, ಅರ್ಜಿ (ಫಾರ್ಮ್‌) ಗಳ ಸಮನ್ವಯ, ವಿಚಾರಣೆಗಳು, ತಪಾಸಣೆ ಮತ್ತು ತನಿಖೆ (3Is) ಗಳಿಗೆ ಸಂಬಂಧಿಸಿದ ಕೈಪಿಡಿಗಳು, ಕಾನೂನು ಕ್ರಮ, ಮೇಲ್ಮನವಿಗಳು, ಉಲ್ಲಂಘನೆಗಳ ಸಂಯೋಜನೆ ಇತ್ಯಾದಿಗಳ ಕುರಿತು ಸಭೆಯಲ್ಲಿ ವಿಸ್ತೃತ ಸಂವಾದ ಮತ್ತು ಚರ್ಚೆ ನಡೆಯಿತು.

ಎಂ.ಸಿ.ಎ ಜಾರಿ ಮತ್ತು ಇತರ ಪ್ರಕ್ರಿಯೆಗಳ ಸರಳೀಕರಣಕ್ಕೆ ಪ್ರಮಾಣಿತ ಮಾನದಂಡದ ಕೈಪಿಡಿಯನ್ನು ಎಂ.ಸಿ.ಎ ಒದಗಿಸಿದೆ ಹಾಗೂ ಪಾರದರ್ಶಕ ಮತ್ತು ಸಕಾಲಿಕ ಸೇವಾ ವಿಲೇವಾರಿಗಾಗಿ ಮುಂದಿನ ಪ್ರಕ್ರಿಯೆ ಮತ್ತು ನಿಯಮ ಸರಳೀಕರಣ ಈಗಾಗಲೇ ಪ್ರಗತಿಯಲ್ಲಿದೆ ಎಂದು ಎಂ.ಸಿ.ಎ ಕಾರ್ಯದರ್ಶಿ ಅವರು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮಾಹಿತಿ ನೀಡಿದರು.

ಎಂ.ಸಿ.ಎ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಲೈವ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರ ಹಣಕಾಸು ಸಚಿವರು ಪರಾಮರ್ಶನ ಸಭೆಯಲ್ಲಿ ಎಂ.ಸಿ.ಎಗೆ ನಿರ್ದೇಶನ ನೀಡಿದರು.

ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆಯ ಸಾಕಾರವು ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳ ಸಕಾಲಿಕ ಆಧುನೀಕರಣದಿಂದ ಮಾತ್ರ ಸಾಧ್ಯ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಆಡಳಿತದ ಯುಗವಾಗಿದ್ದು, ಆಡಳಿತವನ್ನು ಸುಲಭ, ಪಾರದರ್ಶಕ ಮತ್ತು ಸುಗಮಗೊಳಿಸುತ್ತ ಕೇಂದ್ರೀಕರಿಸುವುದು ಎಂ.ಸಿ.ಎಯನ್ನು ಮುನ್ನಡೆಸುವ ತತ್ವವಾಗಿರಬೇಕು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ಪಾಲುದಾರರಿಗೆ ಸಮಯಕ್ಕೆ ಅನುಗುಣವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ ಭವಿಷ್ಯ‌ ಕೇಂದ್ರೀಕೃತ ವಿಧಾನ ಅನುಸರಿಸಲು ಎಂ.ಸಿ.ಎ ಶ್ರಮಿಸಬೇಕು.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಎಂ.ಸಿ.ಎ ಕಾಯ್ದೆ ಮತ್ತು ನಿಯಮಗಳಲ್ಲಿ ಆಗಾಗ್ಗೆ ಅಗತ್ಯವಾದ ತಿದ್ದುಪಡಿಗಳನ್ನು ತಂದಿದೆ ಎಂದು ಹೇಳಿದ ಶ್ರೀಮತಿ ಸೀತಾರಾಮನ್ ಅವರು ದಿವಾಳಿತನ ಮಂಡಳಿಯು ಇಂತಹ ಸುಧಾರಣೆ-ಚಾಲಿತ ಕಾನೂನಿಗೆ ಒಂದು ಉದಾಹರಣೆಯಾಗಿದೆ ಎಂದರು. ಇಂದಿನ ಭಾರತದ ಅಗತ್ಯಗಳಿಗೆ ವ್ಯವಸ್ಥೆಗಳು ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಅನುಸರಿಸಲಾಗುತ್ತಿದೆ.

ಪಾರದರ್ಶಕ ಹಣಕಾಸು ಮಾಹಿತಿಯನ್ನು ಒದಗಿಸುವ ಮೂಲಕ ನಾಗರಿಕರ ವಿಶ್ವಾಸ ಗಳಿಸಿದ್ದಕ್ಕಾಗಿ ಭಾರತೀಯ ಕಾರ್ಪೊರೇಟ್ ಆಡಳಿತವನ್ನು ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್ ಶ್ಲಾಘಿಸಿದ್ದಾರೆ. ಕಂಪನಿಗಳ ಆಡಳಿತ ರಚನೆಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಂ.ಸಿ.ಎ ಪಾತ್ರದ ಮಹತ್ವವನ್ನು ಕೇಂದ್ರ ಹಣಕಾಸು ಸಚಿವರು ಒತ್ತಿ ಹೇಳಿದರು.

ಮುಂದಿನ ನಡೆಯಾಗಿ, ಕಾನೂನು ಅವಶ್ಯಕತೆಗಳನ್ನು ಪಾಲುದಾರರಿಗೆ ತಿಳಿಸಲು ಪರಿಣಾಮಕಾರಿ ಮಾರ್ಗಗಳನ್ನು ಕಂಡುಕೊಳ್ಳುವಂತೆ ಮತ್ತು ಸುಲಲಿತ ವ್ಯವಹಾರ (ಇ.ಒ.ಡಿ.ಬಿ)ಯನ್ನು ವರ್ಧಿಸುವ ಕ್ರಮಗಳನ್ನು ಸೂಚಿಸಲು ಆಗಾಗ್ಗೆ ಆಂತರಿಕ ಚರ್ಚೆಗಳನ್ನು ನಡೆಸುವಂತೆ ಎಂ.ಸಿ.ಎ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಲ್ಹೋತ್ರಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದ ಮಾರ್ಗದರ್ಶನದಲ್ಲಿ ಎಂ.ಸಿ.ಎ ಗರಿಷ್ಠ ಆಡಳಿತ ಮತ್ತು ಕನಿಷ್ಠ ಸರ್ಕಾರದ ಧ್ಯೇಯವನ್ನು ಅನುಸರಿಸಬೇಕು ಎಂದು ಹೇಳಿದರು.

ಅರ್ಜಿ ಸಲ್ಲಿಕೆ ಸೇರಿದಂತೆ ಜನರ ಮೇಲಿನ ಅನುಸರಣೆ ಹೊರೆಯನ್ನು ತಗ್ಗಿಸಲು ಮತ್ತು ತರ್ಕಬದ್ಧಗೊಳಿಸಲು ಎಂ.ಸಿ.ಎ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಮಲ್ಹೋತ್ರಾ ಹೇಳಿದರು. ಎಲ್ಲಾ ಸಂಬಂಧಿತರೊಂದಿಗೆ ಆಗಾಗ್ಗೆ ಸಂವಹನ ನಡೆಸುವುದರಿಂದ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದರು.  ಭಾಗಿದಾರರಿಗೆ ಮತ್ತಷ್ಟು ನೆರವಾಗಲು ವಿಡಿಯೊಗಳು ಮತ್ತು ಪ್ರಸ್ತುತಿಗಳ ರೂಪದಲ್ಲಿ ವಿದ್ಯುನ್ಮಾನ ಮಾರ್ಗದರ್ಶನದ ಸಾಧ್ಯತೆಯನ್ನು ಎಂ.ಸಿ.ಎ ಅನ್ವೇಷಿಸಬಹುದು ಎಂದು ಅವರು ಸಲಹೆ ನೀಡಿದರು. ಅಂತಿಮ ಬಳಕೆದಾರರು/ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಸಮಯಕ್ಕೆ ಅನುಗುಣ ಪ್ರಕ್ರಿಯೆಗಳ ಅನುಸರಣೆಗೆ ಶ್ರೀ ಮಲ್ಹೋತ್ರಾ ಅವರು ಒತ್ತು ನೀಡಿದರು.

****


(रिलीज़ आईडी: 2194467) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी