ಉಕ್ಕು ಸಚಿವಾಲಯ
ರೂರ್ಕೆಲಾ ಉಕ್ಕು ಸ್ಥಾವರ (ಆರ್.ಎಸ್.ಪಿ) ಮತ್ತು ಒಡಿಶಾದಲ್ಲಿ ಉಕ್ಕು ವಲಯದ ಬೆಳವಣಿಗೆ ಕುರಿತು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಒಡಿಶಾ ಮುಖ್ಯಮಂತ್ರಿ ಪ್ರಮುಖ ಸಭೆ
ಆರ್‌ಎಸ್‌ಪಿ ಕಾರ್ಯನಿರ್ವಹಣೆ, ವಿಸ್ತರಣೆ ಮತ್ತು ಒಡಿಶಾದ ಹೆಚ್ಚುತ್ತಿರುವ ಉಕ್ಕು ಮತ್ತು ಗಣಿಗಾರಿಕೆ ಉತ್ಪಾದನೆ ಕುರಿತು ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಚರ್ಚೆ
ಪ್ರಧಾನಮಂತ್ರಿ ಮೋದಿ ಅವರ 300 ಮೆಟ್ರಿಕ್ ಟನ್ ಉಕ್ಕಿನ ಸಾಮರ್ಥ್ಯದ ಮುನ್ನೋಟ ಸಾಧಿಸಲು ಒಡಿಶಾ ಮುಖ್ಯಮಂತ್ರಿಗಳಿಂದ ಸಂಪೂರ್ಣ ಬೆಂಬಲದ ಭರವಸೆ
Posted On:
19 NOV 2025 5:03PM by PIB Bengaluru
ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ಉಕ್ಕು ಸಂಬಂಧಿತ ಅಭಿವೃದ್ಧಿಗಳ ಬಗ್ಗೆ, ವಿಶೇಷವಾಗಿ ರೂರ್ಕೆಲಾ ಉಕ್ಕು ಸ್ಥಾವರದ (RSP) ಕಾರ್ಯಾಚರಣೆಗಳು ಮತ್ತು ವಿಸ್ತರಣೆಯ ಬಗ್ಗೆ ವಿಸ್ತೃತ ಪರಾಮರ್ಶೆ ನಡೆಸಿದರು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಜುಆಲ್ ಓರಾಮ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಸಂವಾದವನ್ನು "ಫಲಪ್ರದ" ಎಂದು ಬಣ್ಣಿಸುತ್ತಾ ಪ್ರಮುಖ ಉಕ್ಕು ಮತ್ತು ಗಣಿಗಾರಿಕೆ ಕೇಂದ್ರವಾಗಿ ಒಡಿಶಾದ ಸ್ಥಾನವನ್ನು ಬಲಪಡಿಸುವ ಬಗ್ಗೆ ಚರ್ಚೆ ಕೇಂದ್ರೀಕೃತವಾಗಿತ್ತು ಎಂದು ಹೇಳಿದರು. ಉಕ್ಕು ಸಚಿವಾಲಯ ಮತ್ತು ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೂರು ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಿತು ಎಂದು ತಿಳಿಸಿದ ಸಚಿವರು, "ನಾವು ರೂರ್ಕೆಲಾ ಉಕ್ಕು ಸ್ಥಾವರದ ಕಾರ್ಯನಿರ್ವಹಣೆ, ಸೌಲಭ್ಯದ ಯೋಜಿತ ವಿಸ್ತರಣೆ ಹಾಗೂ ಒಡಿಶಾದಲ್ಲಿ ಉಕ್ಕು ಮತ್ತು ಗಣಿಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದೆವು" ಎಂದು ಹೇಳಿದರು. ಒಡಿಶಾ, ತನ್ನ ಶ್ರೀಮಂತ ಖನಿಜ ಸಂಪನ್ಮೂಲಗಳು ಮತ್ತು ಸದೃಢ ಕೈಗಾರಿಕಾ ನೆಲೆಯೊಂದಿಗೆ, ಭಾರತದ ಉಕ್ಕಿನ ಬೆಳವಣಿಗೆಯ ಕಾರ್ಯತಂತ್ರಕ್ಕೆ ಅತ್ಯಗತ್ಯ ಆಧಾರಸ್ತಂಭವಾಗಿ ಉಳಿದಿದೆ ಎಂದು ಅವರು ವಿವರಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು, ಆರ್ ಎಸ್ ಪಿ ವಿಸ್ತರಣೆ ಮತ್ತು ಉಕ್ಕು ಕ್ಷೇತ್ರದ ವಿಶಾಲ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಂಪೂರ್ಣ ಸಹಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. "2030 ರ ವೇಳೆಗೆ ಉಕ್ಕಿನ ಸಾಮರ್ಥ್ಯ 300 ದಶಲಕ್ಷ ಟನ್ ತಲುಪಬೇಕೆಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸಾಕಾರಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ" ಎಂದು ಅವರು ಹೇಳಿದರು.

ಭಾರತದ ಉಕ್ಕು ಮತ್ತು ಗಣಿಗಾರಿಕೆ ಉತ್ಪಾದನೆಗೆ ಪ್ರಮುಖ ಪಾಲನ್ನು ನೀಡುವ ಒಡಿಶಾದಲ್ಲಿ ಕೈಗಾರಿಕಾ ವಿಸ್ತರಣೆಯನ್ನು ವೇಗಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕತ್ವದ ನಡುವಿನ ವರ್ಧಿಸುತ್ತಿರುವ ಒಗ್ಗೂಡಿದ ಶಕ್ತಿಯನ್ನು ಈ ಸಭೆಯು ಪ್ರತಿಬಿಂಬಿಸಿದೆ.
ಮುಂದುವರಿದ ಸಹಯೋಗಕ್ಕೆ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಉತ್ಪಾದನಾ ಸಾಮರ್ಥ್ಯಗಳನ್ನು ವರ್ಧಿಸಲು, ಮೂಲಸೌಕರ್ಯವನ್ನು ಆಧುನೀಕರಿಸಲು ಮತ್ತು ರಾಷ್ಟ್ರೀಯ ಆರ್ಥಿಕ ಗುರಿಗಳನ್ನು ಬೆಂಬಲಿಸಲು ಸಂಘಟಿತ ಪ್ರಯತ್ನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಅವರು ಪ್ರತಿಪಾದಿಸಿದರು.
ಭಾರತದ ಪ್ರಮುಖ ಉಕ್ಕು-ತಯಾರಿಕಾ ಪ್ರದೇಶಗಳಲ್ಲಿ ಒಂದಾಗಿ ಒಡಿಶಾದ ಪಾತ್ರವನ್ನು ಬಲಪಡಿಸುವಲ್ಲಿ ಮತ್ತು 300 ಮೆಟ್ರಿಕ್ ಟನ್ ಉಕ್ಕಿನ ಸಾಮರ್ಥ್ಯದ ಮೈಲಿಗಲ್ಲು ಸಾಧಿಸುವೆಡೆಗೆ ದೇಶದ ಪ್ರಗತಿಯನ್ನು ಮುನ್ನಡೆಸುವಲ್ಲಿ ಈ ಚರ್ಚೆಯು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
*****
(Release ID: 2191899)
Visitor Counter : 2