ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಷ್ಟ್ರವ್ಯಾಪಿ ಜನಜಾತೀಯ ಗೌರವ ವರ್ಷ ಪಾಕ್ಷಿಕ (ಪಖ್ವಾಡಾ) ಆಚರಣೆಗಳು ಭಾರತದ ಬುಡಕಟ್ಟು ಪರಂಪರೆ, ಸಂಸ್ಕೃತಿ ಮತ್ತು ಕೊಡುಗೆಗಳನ್ನು ಗೌರವಿಸುವ ಸಂಕೇತಗಳಾಗಿವೆ


ಬುಡಕಟ್ಟು ಸಮುದಾಯದ ಗುರುತು, ವೈಶಿಷ್ಟ್ಯತೆ ಮತ್ತು ಭಾಗವಹಿಸುವಿಕೆಯಲ್ಲಿ ನವೀಕೃತ ಹೆಮ್ಮೆಯೊಂದಿಗೆ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರವು ಸ್ಮರಿಸುತ್ತದೆ

ಸಮಗ್ರ ಬುಡಕಟ್ಟು ಸಬಲೀಕರಣ ಮತ್ತು ಸೇರ್ಪಡೆಯನ್ನು ಉತ್ತೇಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ಸ್ಪರ್ಧೆಗಳು ಮತ್ತು ಕಲ್ಯಾಣ ಅಭಿಯಾನಗಳನ್ನು ವಿವಿಧ ರಾಜ್ಯಗಳು ಆಯೋಜಿಸುತ್ತಿವೆ

Posted On: 03 NOV 2025 6:12PM by PIB Bengaluru

ನಡೆಯುತ್ತಿರುವ ಜನಜಾತಿಯ ಗೌರವ ವರ್ಷ ಪಾಕ್ಷಿಕದ (ಪಖ್ವಾಡ) (ನವೆಂಬರ್ 1–15, 2025) ಭಾಗವಾಗಿ, ಭಾರತದ ಶ್ರೀಮಂತ ಬುಡಕಟ್ಟು ಪರಂಪರೆ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸಲು ದೇಶಾದ್ಯಂತ ವೈವಿದ್ಯಮಯ ಆಚರಣೆಗಳನ್ನು ನಡೆಸಲಾಗುತ್ತಿದೆ.

ಹದಿನೈದು ವಾರಗಳ ಕಾಲಾವಧಿಯಲ್ಲಿ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುತ್ತವೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ರಾಷ್ಟ್ರವು ಬುಡಕಟ್ಟು ಗುರುತಿನಲ್ಲಿ ನವೀಕೃತ ಹೆಮ್ಮೆ ಮತ್ತು ಸಾಂಸ್ಕೃತಿಕ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ಜನಜಾತಿಯ ಗೌರವ ವರ್ಷವಾಗಿ ಆಚರಿಸಲಾಗುತ್ತಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ಕಾಲೇಜಿಗೆ ಹೋಗುವ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಇದು ಬುಡಕಟ್ಟು ಯುವಕರಿಗೆ ಮಾಹಿತಿ ಮತ್ತು ವೈವಿಧ್ಯಮಯ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶಗಳನ್ನು ಅನ್ವೇಷಿಸಲು ಪ್ರೇರಣೆಯೊಂದಿಗೆ ಸಬಲೀಕರಣಗೊಳಿಸಿತು.

ಆಂಧ್ರಪ್ರದೇಶದಲ್ಲಿ, ಪ್ಲಾಂಟೇಶನ್ ಡ್ರೈವ್ ಪ್ರಕೃತಿ ಮತ್ತು ಪರಿಸರ ನಿರ್ವಹಣೆಯೊಂದಿಗೆ ಸಮುದಾಯದ ನಿಕಟ ಸಂಬಂಧವನ್ನು ಉಲ್ಲೇಖಿಸಿತು. ಐ.ಟಿ.ಡಿ.ಎ ಪಿ.ವಿ.ಪಿಯಲ್ಲಿ ನಡೆದ ಹೆರಿಟೇಜ್ ಪಥಸಂಚಲನದಲ್ಲಿ ಮತ್ತು ಜಾಗೃತಿ ಸಭೆಯು ಜನಜಾತಿಯ ಗೌರವ್ ವರ್ಷ್ ಅಡಿಯಲ್ಲಿ ಬುಡಕಟ್ಟು ಕಲ್ಯಾಣ ಉಪಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಪ್ರೋತ್ಸಾಹಿಸಿತು.

ಜಮ್ಮು ಮತ್ತು ಕಾಶ್ಮೀರವು ಪಿವಿಟಿಜಿ ಪ್ರಯೋಜನಗಳ ಶುದ್ಧೀಕರಣಕ್ಕಾಗಿ ಸಮೀಕ್ಷೆಗಳು ಮತ್ತು ಐ.ಇ.ಸಿ ಅಭಿಯಾನಗಳು, ಆರೋಗ್ಯ ಶಿಬಿರಗಳು, ಸಾಂಪ್ರದಾಯಿಕ ವೈದ್ಯರ ಕಾರ್ಯಾಗಾರಗಳು ಮತ್ತು ಮಾರ್ಗದರ್ಶನ ಮತ್ತು ಕ್ರೀಡೆಗಳಿಗಾಗಿ ಯುವ ಕ್ಲಬ್ ರಚನೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಉಪಕ್ರಮಗಳನ್ನು ಪ್ರಾರಂಭಿಸಿತು. ಬುಡಕಟ್ಟು ಯಶಸ್ಸಿನ ಕಥೆಗಳನ್ನು ದಾಖಲಿಸುವುದು, ಎಸ್‌ಟಿ ಫಲಾನುಭವಿಗಳ ಡೇಟಾವನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಮೊನೊಗ್ರಾಫ್‌ ಗಳು ಮತ್ತು ಫೋಟೋ ಕೈಪಿಡಿಗಳನ್ನು ಅಭಿವೃದ್ಧಿಪಡಿಸುವುದನ್ನು ಸಹ ಕೇಂದ್ರಾಡಳಿತ ಪ್ರದೇಶಗಳು ಪ್ರಾರಂಭಿಸಿವೆ. ಬುಡಕಟ್ಟು ಭಾಷೆಗಳು ಮತ್ತು ಲಿಪಿಗಳನ್ನು ಡಿಜಿಟಲೀಕರಣಗೊಳಿಸಲು ಹೊಸ ಚಾಲನೆಯನ್ನು ಸಹ ಪ್ರಾರಂಭಿಸಲಾಗಿದೆ. ಡರ್ಬುಕ್‌ ನ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಒಂದು ದಿನದ ಚಿತ್ರಕಲೆ ಸ್ಪರ್ಧೆಯು ಸ್ಥಳೀಯ ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರದರ್ಶಿಸಲಾಯಿತು.

ಕರ್ನಾಟಕದಲ್ಲಿ, ಜನಜಾತಿಯ ಗೌರವ್ ವರ್ಷ ಪಾಕ್ಷಿಕ (ಪಖ್ವಾಡ) 2025ರ 3ನೇ ದಿನದ ಭಾಗವಾಗಿ ಕೋಳಿಪಾಳ್ಯದ ಆಶ್ರಮ ಶಾಲೆಯಲ್ಲಿ ನೃತ್ಯ, ನಾಟಕ ಮತ್ತು ಕಥೆ ಹೇಳುವ ಸ್ಪರ್ಧೆಗಳನ್ನು ನಡೆಸಲಾಯಿತು, ಇದು ವಿದ್ಯಾರ್ಥಿಗಳ ಪ್ರದರ್ಶನಗಳ ಮೂಲಕ ಬುಡಕಟ್ಟು ಸಂಸ್ಕೃತಿಯನ್ನು ಪ್ರದರ್ಶಿಸುವ ಹಾಗೂ ಗೌರವಿಸುವುದನ್ನು ಎತ್ತಿ ತೋರಿಸುತ್ತದೆ.

A group of children wearing leaves around their headsAI-generated content may be incorrect.

ನಾಗಾಲ್ಯಾಂಡ್‌ ನಲ್ಲಿ, ಟ್ಯೂನ್‌ ಸಾಂಗ್‌ ನ ಏಕಲವ್ಯ ಮಾದರಿ ವಸತಿ ಶಾಲೆಯು ಕವಿತೆ ವಾಚನ ಸ್ಪರ್ಧೆಯನ್ನು ಆಯೋಜಿಸಿತು, ಇದು ವಿದ್ಯಾರ್ಥಿಗಳು ಕಲೆ ಮತ್ತು ಭಾಷೆಯ ಮೂಲಕ ಬುಡಕಟ್ಟು ಗುರುತಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲು ಪ್ರೋತ್ಸಾಹಿಸಿತು.

A group of people standing in front of a podiumAI-generated content may be incorrect.

ಒಡಿಶಾದಲ್ಲಿ, ಬುಡಕಟ್ಟು ಜೀವನ ಮತ್ತು ಸಂಸ್ಕೃತಿಯ ಕುರಿತಾದ ಛಾಯಾಚಿತ್ರಗಳ ಪ್ರದರ್ಶನವು ಜರುಗಿತು, ಇದು ರಾಜ್ಯದ ಬುಡಕಟ್ಟು ಸಮುದಾಯಗಳ ಚೈತನ್ಯ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುತ್ತಿದೆ.

A group of people painting on canvasAI-generated content may be incorrect.

ರಾಜಸ್ಥಾನವು ಜಿಲ್ಲಾಡಳಿತ ಮತ್ತು ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಗಳಾದ್ಯಂತ ಇ-ಮಿತ್ರ ಕೇಂದ್ರಗಳ ಮೂಲಕ ಪ್ರಯೋಜನ ಸ್ಯಾಚುರೇಶನ್ ಶಿಬಿರಗಳನ್ನು ನಡೆಸುತ್ತಿದೆ, ಇದು ಬುಡಕಟ್ಟು ಫಲಾನುಭವಿಗಳಿಗೆ ಕಲ್ಯಾಣ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದನ್ನು ಖಚಿತಪಡಿಸುತ್ತದೆ.

ಉತ್ತರ ಪ್ರದೇಶದಲ್ಲಿ, ಶಾಲೆಗಳಾದ್ಯಂತ ವಿದ್ಯಾರ್ಥಿಗಳು ಪ್ರಬಂಧ, ಭಾಷಣ, ಚಿತ್ರಕಲೆ, ಕಥೆ-ಬರವಣಿಗೆ, ಕವನ ಮತ್ತು ರಂಗೋಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು, ಈ ಮೂಲಕ ಬುಡಕಟ್ಟು ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟಗಳ ವಿಷಯಗಳೊಂದಿಗೆ ಜಾಗೃತಿ ಮತ್ತು ಸೃಜನಶೀಲ ತೊಡಗಿಸಿಕೊಳ್ಳುವಿಕೆಯನ್ನು ಬೆಳೆಸಿದರು.

A pair of boys in uniform painting on a whiteboardAI-generated content may be incorrect.

ಈ ರೀತಿಯ ವೈವಿಧ್ಯಮಯ ಉಪಕ್ರಮಗಳು ಜನಜಾತಿಯ ಗೌರವ್ ವರ್ಷ್ ಇದರ ಕುರಿತಾದ ಸಾಮೂಹಿಕ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಜುವಾಲ್ ಓರಂ ಅವರ ಮಾರ್ಗದರ್ಶನದಲ್ಲಿ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಸಮಗ್ರ ಬುಡಕಟ್ಟು ಸಬಲೀಕರಣ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಭಾರತದ ವೈವಿದ್ಯಮಯ ಬುಡಕಟ್ಟು ಪರಂಪರೆಯ ಆಚರಣೆಯ ಕಡೆಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಈ ಮೂಲಕ ಪುನರುಚ್ಚರಿಸುತ್ತವೆ.

 

*****


(Release ID: 2186113) Visitor Counter : 6