ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ  ‘ಎಂ.ಎಸ್.ಎಂ.ಇ. ಸೇವಾ ಪರ್ವ್-2025: ವಿರಾಸತ್ ಸೆ ವಿಕಾಸ್’ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರು ವಹಿಸಿದರು


ಎಂ.ಎಸ್.ಎಂ.ಇ. ಯೋಜನೆಗಳ 1,500 ಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು; ಸ್ಥಳೀಯ ಕರ್ಮಿಗಳು ಮತ್ತು ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಸೆಪ್ಟೆಂಬರ್ 28 ರಿಂದ 30, 2025 ರವರೆಗೆ ಆಯೋಜಿಸಲಾಗಿದೆ

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ರಾಷ್ಟ್ರೀಯ ಸಣ್ಣ ಕೈಗಾರಿಕೆ ನಿಗಮ (ಎನ್‌ಎಸ್‌ಐಸಿ) ನೊಂದಿಗೆ ಮಾರುಕಟ್ಟೆ ಕುರಿತು ಒಪ್ಪಂದಗಳಿಗೆ ಸಹಿ ಹಾಕಿದೆ

ನಮೋ ಘಾಟ್‌ ನಲ್ಲಿನ ಸ್ವಚ್ಛತಾ ಕಾರ್ಯಕ್ರಮವು ಸಮುದಾಯ ಸೇವೆ ಮತ್ತು ಸ್ವಚ್ಛತೆಯನ್ನು ಪ್ರೋತ್ಸಾಹಿಸಿದ ಪ್ರತೀಕವಾಗಿದೆ

Posted On: 28 SEP 2025 5:04PM by PIB Bengaluru

ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್‌ಎಂಇ) ಸೆಪ್ಟೆಂಬರ್ 28 ರಿಂದ 30, 2025 ರವರೆಗೆ ಎಂಎಸ್‌ಎಂಇ ಸೇವಾ ಪರ್ವ್-2025: ವಿರಾಸತ್ ಸೆ ವಿಕಾಸ್ ಪ್ರದರ್ಶನವನ್ನು ಆಚರಿಸುತ್ತಿದೆ. ಕೇಂದ್ರ ಎಂಎಸ್‌ಎಂಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು ಮತ್ತು ಕೇಂದ್ರ ಎಂಎಸ್‌ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯ ರುದ್ರಾಕ್ಷ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೇವೆ, ಸಾಂಸ್ಕೃತಿಕ ಹೆಮ್ಮೆ ಮತ್ತು ನಮ್ಮ ಪರಂಪರೆಯ ಅರಿವು ಹೆಚ್ಚಿಸುವ ಸಾಮೂಹಿಕ ಆಂದೋಲನದಲ್ಲಿ ಸಮುದಾಯಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಒಟ್ಟುಗೂಡಿಸಲು ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಭಾರತ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆ.ವಿ.ಐ.ಸಿ.) ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್, ಉತ್ತರ ಪ್ರದೇಶ ಸರ್ಕಾರದ ಎಂ.ಎಸ್.ಎಂ.ಇ. ಸಚಿವಾಲಯ, ಅಭಿವೃದ್ಧಿ ಆಯುಕ್ತರ ಕಚೇರಿ ಮತ್ತು ಖಾದಿ ಗ್ರಾಮೋದ್ಯೋಗ ಆಯೋಗದ (ಕೆ.ವಿ.ಐ.ಸಿ.) ಹಿರಿಯ ಅಧಿಕಾರಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಕರ್ಮಿಗಳು ಮತ್ತು ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡುವ 130 ಮಳಿಗೆಗಳನ್ನು ಹೊಂದಿರುವ 3 ದಿನಗಳ ಪ್ರದರ್ಶನವನ್ನು ಕೇಂದ್ರ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಎಂ.ಎಸ್.ಎಂ.ಇ. ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರು, ಈ ಸಂದರ್ಭವನ್ನು ನಿಜವಾಗಿಯೂ ಗಮನಾರ್ಹವಾಗಿಸಿದ್ದಕ್ಕಾಗಿ ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

"ಭಾರತದಲ್ಲಿ ಎನ್‌ಎಸ್‌ಐಸಿ ವಲಯವು ಹೆಚ್ಚಿನ ಮಹತ್ವವನ್ನು ಹೊಂದಿದೆ, ಏಕೆಂದರೆ ಇದು ಉದ್ಯೋಗ ಸೃಷ್ಟಿಗೆ ಅತಿದೊಡ್ಡ ಕೊಡುಗೆ ನೀಡುವ ದೇಶಗಳಲ್ಲಿ ಒಂದಾಗಿದೆ. ಎಂ.ಎಸ್.ಎಂ.ಇ. ವಲಯವನ್ನು ಬಲಪಡಿಸುವುದು ಅತ್ಯಗತ್ಯ, ಏಕೆಂದರೆ ಇದು ಉದ್ಯೋಗ ಸೃಷ್ಟಿಸಲು ಮತ್ತು ನಮ್ಮ ಜನರನ್ನು ಸಬಲೀಕರಣಗೊಳಿಸಲು ಪ್ರಮುಖ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, ನಮ್ಮ ಭವಿಷ್ಯವು ಉಜ್ವಲವಾಗಿ ಕಾಣುತ್ತದೆ." ಎಂದು ಸಚಿವರು ಹೇಳಿದರು 

ಉದ್ಯಮ ನೋಂದಣಿ, ಪಿ.ಎಂ.ಇ.ಜಿ.ಪಿ., ಸಿ.ಜಿ.ಟಿ.ಎಂ.ಎಸ್.ಇ. ಮತ್ತು  ಎನ್.ಎಸ್.ಎಸ್.ಹೆಚ್. ಹಿಂದಿ.ಟಿ ನಂತಹ ಪ್ರಮುಖ ಉಪಕ್ರಮಗಳನ್ನು ಶ್ರೀ ಮಾಂಝಿ ಅವರು ತಮ್ಮ ಭಾಷಣದಲ್ಲಿ ಎತ್ತಿ ತೋರಿಸಿದರು ಮತ್ತು ತರಬೇತಿ ನೀಡುವ ಮೂಲಕ, ಉಪಕರಣಗಳು ಟೂಲ್‌ಕಿಟ್‌ಗಳ ವಿತರಣೆ ಮತ್ತು ಬ್ಯಾಂಕ್‌ಗಳ ಮೂಲಕ ಸಾಲಗಳನ್ನು ಸುಗಮಗೊಳಿಸುವ ಮೂಲಕ ಸಚಿವಾಲಯವು ಫಲಾನುಭವಿಗಳಿಗೆ ಹೇಗೆ ಬೆಂಬಲ ನೀಡುತ್ತಿದೆ ಎಂಬ ವಿಷಯವನ್ನು ಒತ್ತಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಎಂ.ಎಸ್.ಎಂ.ಇ. ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು, "ನಮ್ಮ ಪ್ರಧಾನಮಂತ್ರಿಯವರು ಕಲ್ಪಿಸಿಕೊಂಡಂತೆ, ನಮಗೆ ಉನ್ನತ ಸ್ಥಾನವನ್ನು ತಲುಪುವ ಗುರಿ ಇದೆ, ಅದನ್ನು ಸಾಧಿಸಲು ನಾವು ಎಲ್ಲರೂ ಬದ್ಧರಾಗಿರಬೇಕು. ಸ್ವದೇಶಿ ಪ್ರಚಾರದ ಮಹಾತ್ಮ ಗಾಂಧಿಯವರ ಕನಸನ್ನು ನನಸಾಗಿಸುವುದು ಪ್ರಧಾನಮಂತ್ರಿಯವರ ದೃಷ್ಟಿಕೋನವಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಎಂ.ಎಸ್.ಎಂ.ಇ. ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಉದ್ಯಮ ನೋಂದಣಿಯ ಪ್ರಾಮುಖ್ಯತೆ, ಜಿಡಿಪಿ ಮತ್ತು ರಫ್ತಿಗೆ ಎಂ.ಎಸ್.ಎಂ.ಇ. ಗಳ ಕೊಡುಗೆ ಮತ್ತು ತಂತ್ರಜ್ಞಾನ, ಟೂಲ್‌ಕಿಟ್‌ ಗಳು, ಸಾಲಗಳು ಮತ್ತು ಕೌಶಲ್ಯ ತರಬೇತಿಯ ಮೂಲಕ ಉದ್ಯಮಿಗಳನ್ನು ಸಬಲೀಕರಣಗೊಳಿಸುವಲ್ಲಿ ಅವರ ಪಾತ್ರವು ಇಂದಿನ ಜಗತ್ತಿನಲ್ಲಿ ಬಹಳ ಮಹತ್ವದ್ದಾಗಿದೆ." ಎಂದು ಹೇಳಿದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪಿ.ಎಂ.ಇ.ಜಿ.ಪಿ. ಯೋಜನೆ ಮತ್ತು ಉದ್ಯಮ ನೋಂದಣಿ ಸೇರಿದಂತೆ ಕೇಂದ್ರ ಎಂ.ಎಸ್.ಎಂ.ಇ. ಸಚಿವಾಲಯದ ಉಪಕ್ರಮಗಳನ್ನು ಅವರು ಎತ್ತಿ ತೋರಿಸಿದರು ಮತ್ತು ಉದ್ಯಮಿಗಳು ವಿಕಸಿತ ಭಾರತವನ್ನು ನಿರ್ಮಿಸಲು ಹೇಗೆ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಖಾದಿ ಮತ್ತು ಗ್ರಾಮೋದ್ಯೋಗ ಯೋಜನೆ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಯೋಜನೆ (ಪಿ.ಎಂ.ಇ.ಜಿ.ಪಿ.), ರಾಷ್ಟ್ರೀಯ ಎಸ್.ಸಿ/ ಎಸ್.ಟಿ. ಹಬ್ ಯೋಜನೆ ಸೇರಿದಂತೆ ಎಂ.ಎಸ್.ಎಂ.ಇ. ಯೋಜನೆಗಳ 1500 ಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ, ಭಾರತ ಸರ್ಕಾರದ ಎಂ.ಎಸ್.ಎಂ.ಇ. ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿಪುಲ್ ಗೋಯೆಲ್ ಸ್ವಾಗತ ಭಾಷಣ ಮಾಡಿದರು, ನಂತರ ಭಾರತ ಸರ್ಕಾರದ ಎಂ.ಎಸ್.ಎಂ.ಇ. ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್.ಸಿ.ಎಲ್. ದಾಸ್ ವಿಶೇಷ ಭಾಷಣ ಮಾಡಿದರು. ಉತ್ತರ ಪ್ರದೇಶದ ವಾರಣಾಸಿಯ ವಿಭಾಗೀಯ ಆಯುಕ್ತರಾದ ಶ್ರೀ ಎಸ್. ರಾಜಲಿಂಗಂ ಅವರು ಗಣ್ಯರು ಮತ್ತು ಭಾಗವಹಿಸಿದವರನ್ನು ಸ್ವಾಗತಿಸಿದರು.

ಸೇವಾ ಪರ್ವ್ 2025ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆ.ವಿಐ.ಸಿ.) ಮತ್ತು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನಡುವೆ ಮಾರ್ಕೆಟಿಂಗ್ ಕುರಿತು ತಿಳುವಳಿಕೆ ಪತ್ರ ವಿನಿಮಯ ಮಾಡಿಕೊಳ್ಳಲಾಯಿತು, ಜೊತೆಗೆ ಪಿಎಂವಿ ಫಲಾನುಭವಿಗಳಿಗೆ ಸಾಲ ಪ್ರಮಾಣಪತ್ರಗಳ ವಿತರಣೆ, ಪಿ.ಎಂ.ಇ.ಜಿ.ಪಿ. ಫಲಾನುಭವಿಗಳಿಗೆ ಮಾರ್ಜಿನ್ ಮನಿ ಸಬ್ಸಿಡಿ ವಿತರಣೆ ಮತ್ತು ಜಿವಿವೈ ಫಲಾನುಭವಿಗಳಿಗೆ ಟೂಲ್‌ಕಿಟ್‌ ಗಳ ವಿತರಣೆಯೂ ಈ ಸಂದರ್ಭದಲ್ಲಿ ನಡೆಯಿತು.

ಕಾರ್ಯಕ್ರಮದ ಭಾಗವಾಗಿ, ಸಮುದಾಯ ಸೇವೆ ಮತ್ತು ಸ್ವಚ್ಛತೆಯನ್ನು ಪ್ರೋತ್ಸಾಹಿಸಲು ಇಂದು ಬೆಳಗ್ಗೆ ನಮೋಘಾಟ್‌ ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೂಡ ನಡೆಸಲಾಯಿತು.

 

*****
 


(Release ID: 2172599) Visitor Counter : 3
Read this release in: English , Urdu , Hindi