ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಜುಲೈ, 2025ರಲ್ಲಿ ʻಇಎಸ್ಐʼ ಯೋಜನೆಯಡಿ 20.36 ಲಕ್ಷ ಹೊಸ ಉದ್ಯೋಗಿಗಳ ನೋಂದಣಿ


ಹೊಸ ನೋಂದಣಿಗಳಲ್ಲಿ ಶೇಕಡಾ 48ಕ್ಕಿಂತ ಹೆಚ್ಚು ಮಂದಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು

ʻಇಎಸ್ಐʼ ಯೋಜನೆಯಲ್ಲಿ 4.33 ಲಕ್ಷ ಮಹಿಳಾ ಉದ್ಯೋಗಿಗಳು ನೋಂದಾಯಿಸಿಕೊಂಡಿದ್ದಾರೆ

ಜುಲೈ, 2025ರಲ್ಲಿ ʻಇಎಸ್ಐʼ ಯೋಜನೆಯಡಿ 31,146 ಹೊಸ ಸಂಸ್ಥೆಗಳು ನೋಂದಾಯಿಸಿಕೊಂಡಿವೆ

Posted On: 26 SEP 2025 1:35PM by PIB Bengaluru

2025ರ ಜುಲೈ ತಿಂಗಳಲ್ಲಿ 20.36 ಲಕ್ಷ ಹೊಸ ಉದ್ಯೋಗಿಗಳು ಸೇರ್ಪಡೆಗೊಂಡಿರುವುದನ್ನು ʻನೌಕರರ ರಾಜ್ಯ ವಿಮಾ ನಿಗಮʼದ (ಇಎಸ್ಐಸಿ) ತಾತ್ಕಾಲಿಕ ವೇತನದಾರರ ದತ್ತಾಂಶವು  ಬಹಿರಂಗಪಡಿಸಿದೆ.

2025ರ ಜುಲೈನಲ್ಲಿ 31,146 ಹೊಸ ಸಂಸ್ಥೆಗಳನ್ನು ʻಇಎಸ್ಐʼ ಯೋಜನೆಯ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರಲಾಗಿದೆ, ಇದರಿಂದಾಗಿ ಹೆಚ್ಚಿನ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ.

ಸಂಖ್ಯೆ

ಜೂನ್ 2025

ಜುಲೈ 2025

ಬೆಳವಣಿಗೆ

ತಿಂಗಳಲ್ಲಿ ಹೊಸದಾಗಿ ನೋಂದಾಯಿತ ಉದ್ಯೋಗಿಗಳ ಸಂಖ್ಯೆ

19,37,314

20,36,008

98,694

 

ದತ್ತಾಂಶದ ಪ್ರಕಾರ, ಒಂದು ತಿಂಗಳಲ್ಲಿ ಸೇರ್ಪಡೆಯಾಗಿರುವ ಒಟ್ಟು 20.36 ಲಕ್ಷ ಉದ್ಯೋಗಿಗಳಲ್ಲಿ, 9.85 ಲಕ್ಷ ಉದ್ಯೋಗಿಗಳು ಅಂದರೆ ಒಟ್ಟು ನೋಂದಣಿಗಳಲ್ಲಿ ಸುಮಾರು ಶೇ.48.37 ರಷ್ಟು 25 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ ಎಂಬುದು ಗಮನಾರ್ಹ.

ಅಲ್ಲದೆ, ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯು ಜುಲೈ, 2025ರಲ್ಲಿ ಸೇರ್ಪಡೆಯಾಗಿರುವ ಒಟ್ಟು 20,36,008 ಉದ್ಯೋಗಿಗಳಲ್ಲಿ ಮಹಿಳಾ ಸದಸ್ಯರ ನಿವ್ವಳ ದಾಖಲಾತಿ 4.33 ಲಕ್ಷ ಎಂದು ಸೂಚಿಸುತ್ತದೆ. ಇದಲ್ಲದೆ, ಜುಲೈ, 2025ರಲ್ಲಿ ಒಟ್ಟು 88 ತೃತೀಯ ಲಿಂಗಿ ಉದ್ಯೋಗಿಗಳು ʻಇಎಸ್ಐʼ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ, ಇದು ಸಮಾಜದ ಪ್ರತಿಯೊಂದು ವರ್ಗಕ್ಕೂ ತನ್ನ ಪ್ರಯೋಜನಗಳನ್ನು ತಲುಪಿಸುವ ʻಇಎಸ್ಐಸಿʼಯ ಬದ್ಧತೆಯನ್ನು ದೃಢೀಕರಿಸುತ್ತದೆ.

ದತ್ತಾಂಶ ಸೃಷ್ಟಿಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ವೇತನಪಟ್ಟಿ ದತ್ತಾಂಶದ ಸ್ವರೂಪವು ತಾತ್ಕಾಲಿಕವಾಗಿರುತ್ತದೆ.

 

*****


(Release ID: 2171668) Visitor Counter : 10
Read this release in: English , Urdu , Hindi , Gujarati