ಹಣಕಾಸು ಸಚಿವಾಲಯ
ರಾಷ್ಟ್ರವ್ಯಾಪಿ ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನವು ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ
2025ರ ಜುಲೈ 1 ರಿಂದ 2025 ರ ಸೆಪ್ಟೆಂಬರ್ 15ರವರೆಗೆ ದೇಶದ ವಿವಿಧ ಜಿಲ್ಲೆಗಳಲ್ಲಿ 2.3 ಲಕ್ಷಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಲಾಗಿದೆ
प्रविष्टि तिथि:
16 SEP 2025 7:43PM by PIB Bengaluru
61 ಲಕ್ಷಕ್ಕೂ ಹೆಚ್ಚು ಹೊಸ `ಪಿಎಂ ಜನ್ ಧನ್ ಯೋಜನೆʼ ಖಾತೆಗಳನ್ನು ತೆರೆಯಲಾಗಿದೆ; ಕಳೆದ 2.5 ತಿಂಗಳಲ್ಲಿ ಮೂರು `ಜನ ಸುರಕ್ಷಾ’ ಯೋಜನೆಗಳ ಅಡಿಯಲ್ಲಿ 2.6 ಕೋಟಿಗೂ ಹೆಚ್ಚು ಹೊಸ ನೋಂದಣಿಗಳು ನಡೆದಿವೆ
ಜುಲೈ 1, 2025ರಂದು ಪ್ರಾರಂಭಿಸಲಾದ 3 ತಿಂಗಳ ರಾಷ್ಟ್ರವ್ಯಾಪಿ ಆರ್ಥಿಕ ಸೇರ್ಪಡೆ ಪರಿಪೂರ್ಣತೆಯ ಅಭಿಯಾನವು ತನ್ನ ಮೊದಲ 2.5 ತಿಂಗಳಲ್ಲಿ ಗಮನಾರ್ಹ ಪ್ರಗತಿಯನ್ನು ದಾಖಲಿಸಿದೆ. ಅಭಿಯಾನದ ಭಾಗವಾಗಿ, ಹಣಕಾಸು ಸೇವೆಗಳ ವ್ಯಾಪ್ತಿಯನ್ನು ವಿಸ್ತರಿಸಲು ದೇಶದ ಜಿಲ್ಲೆಗಳಲ್ಲಿ 2.3 ಲಕ್ಷಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಲಾಗಿದೆ. ಇದು 61 ಲಕ್ಷಕ್ಕೂ ಹೆಚ್ಚು ಹೊಸ ʻಪ್ರಧಾನ ಮಂತ್ರಿ ಜನ್ ಧನ್ʼ ಯೋಜನೆ (ಪಿಎಂಜೆಡಿವೈ) ಖಾತೆಗಳ ತೆರೆಯುವಿಕೆ ಮತ್ತು ಮೂರು ʻಜನ ಸುರಕ್ಷಾʼ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ 2.6 ಕೋಟಿಗೂ ಹೆಚ್ಚು ಹೊಸ ದಾಖಲಾತಿಗಳಿಗೆ ಸಾಕ್ಷಿಯಾಗಿದೆ. ಇದು ಸಾರ್ವತ್ರಿಕ ಹಣಕಾಸು ಸೇರ್ಪಡೆಯತ್ತ ಭಾರಿ ವೇಗವನ್ನು ಸೂಚಿಸುತ್ತದೆ. ಡಿಜಿಟಲ್ ವಂಚನೆಗಳು, ಕ್ಲೈಮ್ ಮಾಡದ ಠೇವಣಿಗಳಿಗೆ ಪ್ರವೇಶ ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಹಣಕಾಸು ಸೇರ್ಪಡೆ ಯೋಜನೆಗಳ ಅಡಿಯಲ್ಲಿ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಸೇರಿಸುವ ಉದ್ದೇಶದಿಂದ ಹಣಕಾಸು ಸೇವೆಗಳ ಇಲಾಖೆಯು 2025ರ ಜುಲೈ 1 ರಿಂದ 2025ರ ಸೆಪ್ಟೆಂಬರ್ 30 ರವರೆಗೆ 3 ತಿಂಗಳ ರಾಷ್ಟ್ರವ್ಯಾಪಿ ಹಣಕಾಸು ಸೇರ್ಪಡೆ ಪರಿಪೂರ್ಣತೆಯ ಅಭಿಯಾನವನ್ನು ಪ್ರಾರಂಭಿಸಿತು. ಹಣಕಾಸು ಸೇರ್ಪಡೆ ಮಾನದಂಡಗಳಲ್ಲಿ ಕಂಡುಬಂದ ಗಣನೀಯ ಪ್ರಗತಿ ಸೂಚಿಸುವಂತೆ ಈ ಅಭಿಯಾನವು ಉತ್ತಮ ಯಶಸ್ಸನ್ನು ಸಾಧಿಸಿದೆ.
ಪ್ರಧಾನ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಸೇರಿದಂತೆ ಪ್ರಮುಖ ಯೋಜನೆಗಳ ವ್ಯಾಪ್ತಿಯನ್ನು ದೇಶಾದ್ಯಂತ ಎಲ್ಲಾ ಅರ್ಹ ವ್ಯಕ್ತಿಗಳಿಗೆ ವಿಸ್ತರಿಸುವುದು ಅಭಿಯಾನದ ಪ್ರಾಥಮಿಕ ಉದ್ದೇಶವಾಗಿದೆ. ಈ ಉದ್ದೇಶವನ್ನು ಸಾಧಿಸಲು, ಎಲ್ಲಾ 2.70 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಶಿಬಿರಗಳು ಮರು-ಕೆವೈಸಿ, ಬ್ಯಾಂಕ್ ಖಾತೆಗಳಿಗೆ ನಾಮನಿರ್ದೇಶನ ನವೀಕರಣ ಮತ್ತು ಠೇವಣಿಗಳ ಮೇಲೆ ಹಕ್ಕು ಪ್ರತಿಪಾದನೆ ಹಾಗೂ ಡಿಜಿಟಲ್ ವಂಚನೆಗಳ ಬಗ್ಗೆ ಜಾಗೃತಿಯನ್ನೂ ಮೂಡಿಸಿವೆ.
ಜುಲೈ 1 ಮತ್ತು ಸೆಪ್ಟೆಂಬರ್ 14, 2025 ರ ನಡುವೆ, ಅಭಿಯಾನವು ಅರ್ಥಪೂರ್ಣ ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸಿದೆ. ಮುಂಬರುವ ಶಿಬಿರಗಳ ಬಗ್ಗೆ ಕಾರ್ಯತಂತ್ರದ ಜನಜಾಗೃತಿ ಹಾಗೂ ಪ್ರಚಾರದ ಮೂಲಕ, ನಾಗರಿಕರನ್ನು ಶಿಬಿರಗಳಿಗೆ ಭೇಟಿ ನೀಡಲು ಮತ್ತು ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಕ್ರಿಯವಾಗಿ ಪ್ರೋತ್ಸಾಹಿಸಲಾಗುತ್ತಿದೆ.
ದೇಶದ ವಿವಿಧ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಒಟ್ಟು 2,30,895 ಶಿಬಿರಗಳನ್ನು ಆಯೋಜಿಸಲಾಗಿದೆ ಮತ್ತು ಅವುಗಳ ಪ್ರಗತಿ (15.09.2025 ರಂದು ಇದ್ದಂತೆ) ಈ ಕೆಳಗಿನಂತಿದೆ:
|
ವಿಭಾಗ
|
ವಿವರ
|
|
ತೆರೆಯಲಾದ ಪಿಎಂಜೆಡಿವೈ ಖಾತೆಗಳು
|
61.69 ಲಕ್ಷ
|
|
ನಿಷ್ಕ್ರಿಯ ಖಾತೆಗಳಿಗಾಗಿ ʻನಿಮ್ಮ ಗ್ರಾಹಕರನ್ನು ತಿಳಿಯಿರಿʼ (ಕೆವೈಸಿ) ವಿವರಗಳ ಮರು-ಪರಿಶೀಲನೆ:
|
2.32 ಕೋಟಿ
|
|
ನಾಮನಿರ್ದೇಶನ ನವೀಕರಣಗಳು
|
56.86 ಲಕ್ಷ
|
|
ಸಾಮಾಜಿಕ ಭದ್ರತಾ ಯೋಜನೆ ದಾಖಲಾತಿಗಳು
|
ಪಿಎಂಜೆಜೆಬಿವೈ: 72.56 ಲಕ್ಷ
|
|
ಪಿಎಂಎಸ್‌ಬಿವೈ: 1.56 ಕೋಟಿ
|
|
ಎಪಿವೈ: 31.32 ಲಕ್ಷ
|
|
ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಅಡಿಯಲ್ಲಿ ಪಾವತಿಸಿದ ಕ್ಲೈಮ್‌ಗಳು
|
44,455
|
|
ಈ ಕೆಳಗಿನವುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು
|
ಡಿಜಿಟಲ್ ವಂಚನೆಗಳು
|
|
ಕ್ಲೈಮ್ ಮಾಡದ ಠೇವಣಿಗಳನ್ನು ಪ್ರವೇಶಿಸುವ ಬಗ್ಗೆ
|
|
ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳು
|
ಅಭಿಯಾನವು ಮುಂದುವರೆದಂತೆ, ಸಮಗ್ರ ಹಣಕಾಸು ಸೇರ್ಪಡೆಯ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲಾಗುವುದು. ಆ ಮೂಲಕ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಹಣಕಾಸು ಸೇರ್ಪಡೆಯನ್ನು ಪರಿಪೂರ್ಣಗೊಳಿಸುವತ್ತ ಕೇಂದ್ರೀಕೃತ ಪ್ರಯತ್ನಗಳು ಮುಂದುವರಿಯುತ್ತವೆ.
ಸಮಾಜದ ಪ್ರತಿಯೊಂದು ಹಂತದಲ್ಲೂ ಮಧ್ಯಸ್ಥಗಾರರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕೊನೆಯ ಮೈಲಿ ವಿತರಣೆಯನ್ನು ಸಾಧಿಸಲು ಭಾರತ ಸರ್ಕಾರ ಬದ್ಧವಾಗಿದೆ.
*****
(रिलीज़ आईडी: 2167563)
आगंतुक पटल : 33