ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಎ.ಎಲ್‌.ಎಂ.ಎಂ(ALMM) ಅಡಿಯಲ್ಲಿ ಭಾರತ 100 ಗಿಗಾ ವ್ಯಾಟ್ ಸೌರ ವಿದ್ಯುತ್ ಪಿ.ವಿ(PV) ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯದ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ


ಸೌರ ಪಿ.ವಿ ಉತ್ಪಾದನಾ ಸಾಮರ್ಥ್ಯದಲ್ಲಿ 2014 ರಲ್ಲಿದ್ದ 2.3 ಗಿಗಾ ವ್ಯಾಟ್ ನಿಂದ ಎ.ಎಲ್‌.ಎಂ.ಎಂ  ಅಡಿಯಲ್ಲಿ 100 ಗಿಗಾ ವ್ಯಾಟ್ ಗೆ ಗಮನಾರ್ಹ ಏರಿಕೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ

Posted On: 13 AUG 2025 8:00PM by PIB Bengaluru

ಸೌರ ಪಿ.ವಿ ಮಾಡ್ಯೂಲ್‌ಗಳಿಗಾಗಿ ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ (ಎ.ಎಲ್‌.ಎಂ.ಎಂ) ಅಡಿಯಲ್ಲಿ ಭಾರತವು 100 ಗಿಗಾ ವ್ಯಾಟ್ ಸೌರ ಪಿ.ವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯದಲ್ಲಿ ಐತಿಹಾಸಿಕ ದಾಖಲೆ ಸಾಧಿಸಿದೆ. ಈ ಸಾಧನೆಯು ಸ್ವಾವಲಂಬಿ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ದೇಶದ ತ್ವರಿತ ಪ್ರಗತಿಯನ್ನು ಬಿಂಬಿಸುತ್ತದೆ. ಇದು ರಾಷ್ಟ್ರೀಯ ಗುರಿಯಾದ ಸ್ವಾವಲಂಬಿ ಭಾರತ ಮತ್ತು ಶುದ್ಧ ಇಂಧನ ಪರಿವರ್ತನೆಗಾಗಿ ಜಾಗತಿಕ ಕಡ್ಡಾಯಕ್ಕೆ ಅನುಗುಣವಾಗಿದೆ.

ಈ ಸಾಧನೆಗೆ ಒಟ್ಟು ನೀಡಿದ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, “ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ (ಎ.ಎಲ್‌.ಎಂ.ಎಂ) ಅಡಿಯಲ್ಲಿ ಭಾರತವು 100 ಗಿಗಾ ವ್ಯಾಟ್ ಸೌರ ಪಿ.ವಿ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯದಲ್ಲಿ ಐತಿಹಾಸಿಕ ದಾಖಲೆ ಸಾಧಿಸಿದೆ. ಇದು 2014ರಲ್ಲಿ ಕೇವಲ 2.3 ಗಿಗಾ ವ್ಯಾಟ್ ಗೆ ಹೋಲಿಸಿದಲ್ಲಿ ಗಮನಾರ್ಹ ಏರಿಕೆಯಾಗಿದೆ! ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಮತ್ತು ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳಿಗಾಗಿ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಯಂತಹ ಪರಿವರ್ತನಾ ಉಪಕ್ರಮಗಳಿಂದ ನಾವು ಸದೃಢ, ಸ್ವಾವಲಂಬಿ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಈ ಸಾಧನೆಯು ಸ್ವಾವಲಂಬಿ ಭಾರತ ಮತ್ತು 2030ರ ವೇಳೆಗೆ 500 ಗಿಗಾ ವ್ಯಾಟ್ ಪಳೆಯುಳಿಕೆ ರಹಿತ ಸಾಮರ್ಥ್ಯದ ಗುರಿಯ ನಮ್ಮ ಪಯಣಕ್ಕೆ ಬಲ ನೀಡುತ್ತದೆ” ಎಂದು ಹೇಳಿದರು.

ಸೌರ ಪಿ.ವಿ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಪ್ರಮುಖ ಸ್ಪರ್ಧಿಯನ್ನಾಗಿ ಸನ್ನದ್ಧಗೊಳಿಸುವುದು ಭಾರತ ಸರ್ಕಾರದ ಬದ್ಧತೆಯಾಗಿದೆ. ಹೆಚ್ಚಿನ ದಕ್ಷತೆಯ ಸೌರ ಪಿ.ವಿ ಮಾಡ್ಯೂಲ್‌ಗಳಿಗಾಗಿ PLI ಯೋಜನೆ ಮತ್ತು ದೇಶೀಯ ತಯಾರಕರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಕ್ರಮಗಳು ಸೇರಿದಂತೆ ಸಮಗ್ರ ಉಪಕ್ರಮಗಳ ಮೂಲಕ ಈ ಬದ್ಧತೆಗೆ ಇಂಬು ನೀಡಲಾಗುವುದು. ಈ ಉಪಕ್ರಮಗಳ ಪರಿಣಾಮ 2014ರಲ್ಲಿ ಕೇವಲ 2.3 ಗಿಗಾ ವ್ಯಾಟ್ ನಿಂದ ಇಂದು 100 ಗಿಗಾ ವ್ಯಾಟ್ ಗಿಂತ ಹೆಚ್ಚಿನ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯದ ವೃದ್ಧಿಗೆ ಕಾರಣವಾಗಿದೆ. 2030ರ ವೇಳೆಗೆ 500 ಗಿಗಾ ವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ ಮತ್ತು ಜಾಗತಿಕ ಡಿಕಾರ್ಬನೈಸೇಶನ್ ಪ್ರಯತ್ನಗಳಿಗೆ ಇದು ಅರ್ಥಪೂರ್ಣ ಕೊಡುಗೆ ನೀಡುತ್ತದೆ. 

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ 2019ರ ಜನವರಿ 02 ರಂದು (MNRE) ಎ.ಎಲ್‌.ಎಂ.ಎಂ ಆದೇಶವನ್ನು ಹೊರಡಿಸಿತು. ಸೌರ ಪಿ.ವಿ ಮಾಡ್ಯೂಲ್‌ಗಳಿಗಾಗಿ ಮೊದಲ ಎ.ಎಲ್‌.ಎಂ.ಎಂ  ಪಟ್ಟಿಯನ್ನು ಮಾರ್ಚ್ 10, 2021 ರಂದು ಸುಮಾರು 8.2 ಗಿಗಾ ವ್ಯಾಟ್ ನ ಆರಂಭಿಕ ಸೇರ್ಪಡೆ ಸಾಮರ್ಥ್ಯದೊಂದಿಗೆ ಪ್ರಕಟಿಸಲಾಯಿತು. ಕೇವಲ ನಾಲ್ಕು ವರ್ಷಗಳಲ್ಲಿ, ಈ ಸಾಮರ್ಥ್ಯವು ಹನ್ನೆರಡು ಪಟ್ಟುಗಿಂತ ಹೆಚ್ಚಾಗಿದೆ, 100 ಗಿಗಾ ವ್ಯಾಟ್ ಗುರಿಯನ್ನು ದಾಟಿದೆ. ಈ ಗಮನಾರ್ಹ ವೃದ್ಧಿಯು ಸಾಧಿಸಿದ ಸಾಮರ್ಥ್ಯದ ವಿಸ್ತಾರಕ್ಕೆ ಸೀಮಿತವಾಗಿಲ್ಲ, ಆದರೆ 2021ರಲ್ಲಿ 21 ರಿಂದ ಆರಂಭವಾಗಿ ಪ್ರಸ್ತುತ 100 ತಯಾರಕರು 123 ಉತ್ಪಾದನಾ ಘಟಕಗಳನ್ನು ಆರಂಭಿಸುತ್ತಿದ್ದು ಗಮನಾರ್ಹ ವೃದ್ಧಿಯಾಗಿದೆ.

ಈ ಅಭಿವೃದ್ಧಿಯು ಸ್ಥಾಪಿತ ಕಂಪನಿಗಳು ಮತ್ತು ಹೊಸ ಕಂಪನಿಗಳ ಕೊಡುಗೆಗಳನ್ನು ಒಳಗೊಂಡಿದೆ, ಅವರಲ್ಲಿ ಹಲವರು ಹೆಚ್ಚಿನ ದಕ್ಷತೆಯ ತಂತ್ರಜ್ಞಾನಗಳು ಮತ್ತು ದೂರದೃಷ್ಟಿಯುಳ್ಳ ಸಮಗ್ರ ಕಾರ್ಯಾಚರಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಇದರ ಪರಿಣಾಮ ಸ್ಥಳೀಯ ಅಗತ್ಯಗಳನ್ನು ಪೂರೈಸುವ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ ವೈವಿಧ್ಯಮಯ ಮತ್ತು ಸ್ಪರ್ಧಾತ್ಮಕ ಉತ್ಪಾದನಾ ಸನ್ನಿವೇಶದ ಸೃಷ್ಟಿಯಾಗಿದೆ. 100 ಸೌರ ಗಿಗಾ ವ್ಯಾಟ್ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಮೀರಿದ ಭಾರತೀಯ ಸೌರ ಪಿ.ವಿ ಉತ್ಪಾದನಾ ಗಾಥೆಯ ಯಶಸ್ಸನ್ನು ಮತ್ತು ಉದ್ಯಮ, ವಿವಿಧ ರಾಜ್ಯ ಸರ್ಕಾರಗಳು ಮತ್ತು ಭಾರತ ಸರ್ಕಾರದ ಸಾಮೂಹಿಕ ಪ್ರಯತ್ನಗಳನ್ನುಸಾರುತ್ತದೆ.

ನಿರಂತರ ನೀತಿ ಬೆಂಬಲ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾವೀನ್ಯತೆ ಮೂಲಕ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಗೆ  ಮತ್ತಷ್ಟು ಪುಷ್ಟಿ ನೀಡಲು MNRE ಬದ್ಧವಾಗಿದೆ. ಭಾರತದ ಸೌರ ಪಯಣವು ಎಲ್ಲರನ್ನೂ ಒಳಗೊಳ್ಳುವ, ಸ್ಪರ್ಧಾತ್ಮಕ ಮತ್ತು ಭವಿಷ್ಯಕ್ಕಾಗಿ  ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಪಾಲುದಾರರೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತದೆ.

 

****


(Release ID: 2156236)
Read this release in: Odia , English , Urdu , Hindi , Telugu