ನೀತಿ ಆಯೋಗ
azadi ka amrit mahotsav

‘ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳು: $200 ಬಿಲಿಯನ್ ಅವಕಾಶದ ಅನಾವರಣ’ ಕುರಿತ ವರದಿಯನ್ನು ಬಿಡುಗಡೆ ಮಾಡಿದ ನೀತಿ ಆಯೋಗ

Posted On: 04 AUG 2025 6:26PM by PIB Bengaluru

ನೀತಿ ಆಯೋಗ ಇಂದು 'ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು : $200 ಬಿಲಿಯನ್ ಅವಕಾಶದ ಅನಾವರಣ’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ, ಇದು ಪ್ರಸ್ತುತ ಸವಾಲುಗಳ ಸಕಾಲಿಕ ಮತ್ತು ಸಮಗ್ರ ಮೌಲ್ಯಮಾಪನವನ್ನು ಪ್ರಸ್ತುತಪಡಿಸುತ್ತದೆ ಮತ್ತು ಭಾರತದ ವಿದ್ಯುತ್ ಚಲನಶೀಲತೆಯ ಪರಿವರ್ತನೆಯನ್ನು ವೇಗಗೊಳಿಸಲು ಅಗತ್ಯವಾದ ಪ್ರಮುಖ ಅನ್‌ಲಾಕ್‌ಗಳನ್ನು ಎತ್ತಿ ತೋರಿಸುತ್ತದೆ.

ನೀತಿ ಆಯೋಗದ ಸದಸ್ಯ ಶ್ರೀ ರಾಜೀವ್ ಗೌಬಾ ಅವರು ನೀತಿ ಆಯೋಗದ ಸಿ.ಇ.ಒ ಶ್ರೀ ಬಿ. ವಿ. ಆರ್. ಸುಬ್ರಹ್ಮಣ್ಯಂ, ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಶ್ರೀ ಕಮ್ರಾನ್ ರಿಜ್ವಿ, ನೀತಿ ಆಯೋಗದ  ಫೆಲೋ ಶ್ರೀ ಒ. ಪಿ. ಅಗರ್ವಾಲ್ ಮತ್ತು ನೀತಿ ಆಯೋಗದ ಇ-ಮೊಬಿಲಿಟಿ ಕಾರ್ಯಕ್ರಮ ನಿರ್ದೇಶಕ ಶ್ರೀ ಸುಧೇಂದು ಸಿನ್ಹಾ ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ವರದಿಯನ್ನು ಬಿಡುಗಡೆ ಮಾಡಿದರು.

2030ರ ವೇಳೆಗೆ ಭಾರತವು ಮಾರಾಟವಾಗುವ ಒಟ್ಟು ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು 30% ಆಗಬೇಕೆಂದು ಬಯಸುತ್ತದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು 2016 ರಲ್ಲಿ ಇದ್ದ 50,000 ದಿಂದ 2024 ರಲ್ಲಿ 2.08 ಮಿಲಿಯನ್‌ಗೆ ಏರಿತು, ಜಾಗತಿಕ ಎಲೆಕ್ಟ್ರಿಕ್ ವಾಹನಗಳ ಮಾರಾಟವು 2016 ರಲ್ಲಿ 918,000  ಇತ್ತು, 2024 ರಲ್ಲಿ ಅದು 18.78 ಮಿಲಿಯನ್‌ಗೆ ಏರಿತು. ಹೀಗಾಗಿ, ಭಾರತದ ಎಲೆಕ್ಟ್ರಿಕ್ ವಾಹನಗಳ ಪರಿವರ್ತನೆಯು ನಿಧಾನವಾಗಿ ಪ್ರಾರಂಭವಾಯಿತು, ಆದರೆ ಅದು ಚೇತರಿಸಿಕೊಳ್ಳುತ್ತಿದೆ. ಭಾರತದ ಎಲೆಕ್ಟ್ರಿಕ್ ವಾಹನಗಳ ವ್ಯಾಪ್ತಿ ಪ್ರಸಾರ 2020ರಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನಗಳ ಪ್ರಸಾರದ ಐದನೇ ಒಂದು ಭಾಗ ಮಾತ್ರ ಇತ್ತು, ಆದರೆ 2024 ರಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನಗಳ ಪ್ರಸಾರದ ಐದನೇ ಎರಡರಷ್ಟು ಪಾಲಿಗಿಂತ ಹೆಚ್ಚು ವೃದ್ಧಿಸಿದೆ. ಇದು ತುಲನಾತ್ಮಕವಾಗಿ ನಿಧಾನವಾಗಿದ್ದರೂ ಸಹ ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಪರಿವರ್ತನೆಗೆ ಬಲವಾದ ಶಕ್ತಿಯನ್ನು ನೀಡಲು ಇದು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ನೀತಿ ಆಯೋಗದಲ್ಲಿ ನಡೆದ ಇದಕ್ಕಾಗಿಯೇ ಮೀಸಲಾದ 7 ಸಮಾವೇಶಗಳಲ್ಲಿ ವ್ಯಾಪಕವಾದ ಪಾಲುದಾರರ ಸಮಾಲೋಚನೆಗಳ ಮೂಲಕ ಅಭಿವೃದ್ಧಿಪಡಿಸಲಾದ ವರದಿಯು ಭಾರತದ ಎಲೆಕ್ಟ್ರಿಕ್ ವಾಹನಗಳ ಪರಿವರ್ತನೆಯನ್ನು ವೇಗಗೊಳಿಸಲು ಬಹು ವಿಧಾನಗಳನ್ನು ಅನಾವರಣ ಮಾಡಿದೆ. ವಿದ್ಯುತ್ ವಾಹನಗಳ ಅಳವಡಿಕೆಯನ್ನು ತ್ವರಿತಗೊಳಿಸುವ ಸಂಪೂರ್ಣ ಪ್ರಯತ್ನವನ್ನು ಪ್ರಾರಂಭಿಸಲು, ವರದಿಯಲ್ಲಿ ತಕ್ಷಣದ ಮುಂದಿನ ಹಂತಗಳಿಗೆ ಕೆಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ.

ವರದಿಯು ಭಾರತದ ವಿದ್ಯುತ್ ವಾಹನ ಪರಿವರ್ತನೆಯನ್ನು ವೇಗಗೊಳಿಸಲು ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ವಿದ್ಯುತ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಪ್ರಮುಖ ಅಡೆತಡೆಗಳು, ಕಾರ್ಯತಂತ್ರದ ಅನಾವರಣಗಳು ಮತ್ತು ಕಾರ್ಯಸಾಧ್ಯ ಶಿಫಾರಸುಗಳನ್ನು ಗುರುತಿಸುತ್ತದೆ. ಡೇಟಾ-ಚಾಲಿತ ನಿರ್ಧಾರಗಳು ಮತ್ತು ಅಂತರ-ವಲಯ ಸಹಯೋಗವನ್ನು ಸಕ್ರಿಯಗೊಳಿಸುವ ಮೂಲಕ, ಇದು ಏಕೀಕೃತ ರಾಷ್ಟ್ರೀಯ ಪ್ರಚೋದನೆಯನ್ನು ಬೆಂಬಲಿಸುತ್ತದೆ.

ವರದಿಯನ್ನು ಬಿಡುಗಡೆ ಮಾಡುತ್ತಾ, ನೀತಿ ಆಯೋಗದ ಸದಸ್ಯ ಶ್ರೀ ರಾಜೀವ್ ಗೌಬಾ, “ಭಾರತವು ಸ್ವಚ್ಛ ಚಲನಶೀಲತೆಯಲ್ಲಿ ಪರಿವರ್ತನಾತ್ಮಕ ಬದಲಾವಣೆಯ ಸಂಗಮ ಬಿಂದುವಿನಲ್ಲಿದೆ. ರಾಷ್ಟ್ರವು ತನ್ನ ವಿದ್ಯುತ್ ಚಲನಶೀಲತೆಯ ಮಹತ್ವಾಕಾಂಕ್ಷೆಯನ್ನು ಮುನ್ನಡೆಸುತ್ತಿರುವಾಗ, ಈ ವರದಿಯು ಅಸ್ತಿತ್ವದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಅನುವು  ಮಾಡಲು ಅಮೂಲ್ಯವಾದ ಒಳನೋಟಗಳು ಮತ್ತು ನೀತಿ-ಜೋಡಣೆಯ ಶಿಫಾರಸುಗಳನ್ನು ಒದಗಿಸುತ್ತದೆ ಎಂದರು.

ನೀತಿ ಆಯೋಗದ ಸಿ.ಇ.ಒ ಶ್ರೀ ಬಿ.ವಿ.ಆರ್ ಸುಬ್ರಹ್ಮಣ್ಯಂ ಅವರು, "ನೀತಿ ಆಯೋಗವು ಈಗಾಗಲೇ ನಡೆಯುತ್ತಿರುವ ವಿದ್ಯುತ್ ವಾಹನ ಕ್ರಾಂತಿಯನ್ನು ಸಕ್ರಿಯಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಈ ವರದಿಯು ಭಾರತದಲ್ಲಿ ವಿದ್ಯುತ್ ವಾಹನ ಪರಿವರ್ತನೆಯನ್ನು ತ್ವರಿತಗೊಳಿಸಲು ಕಾರ್ಯಸಾಧ್ಯ ಶಿಫಾರಸುಗಳ ಜೊತೆಗೆ ಪ್ರಸ್ತುತ ಸವಾಲುಗಳ ಸಕಾಲಿಕ ಮತ್ತು ಸಮಗ್ರ ವಿಮರ್ಶೆಯನ್ನು ನೀಡುತ್ತದೆ" ಎಂದು ಹೇಳಿದರು.

‘ಭಾರತದಲ್ಲಿ ವಿದ್ಯುತ್ ವಾಹನಗಳು’ $200 ಬಿಲಿಯನ್ ಅವಕಾಶದ ಅನಾವರಣ’  ಕುರಿತ ವರದಿಯನ್ನು ಇಲ್ಲಿ ನೋಡಬಹುದು:

https://niti.gov.in/sites/default/files/2025-08/Electric-Vehicles-WEB-LOW-Report.pdf

 

*****


(Release ID: 2152405)
Read this release in: English , Urdu , Hindi , Marathi